Tag: ಡಬ್ಬಿಂಗ್

  • ‘ನಾನು ಮತ್ತು ಗುಂಡ 2’ ಚಿತ್ರಕ್ಕೆ  ಡಬ್ ಮಾಡಿದ ಡಾಗ್ ಸಿಂಬ

    ‘ನಾನು ಮತ್ತು ಗುಂಡ 2’ ಚಿತ್ರಕ್ಕೆ ಡಬ್ ಮಾಡಿದ ಡಾಗ್ ಸಿಂಬ

    ನಾನು ಮತ್ತು ಗುಂಡ ಚಿತ್ರದ ಸೀಕ್ವೇಲ್  ಆಗಿ ತೆರೆಗೆ ಬರುತ್ತಿರುವ ನಾನು ಮತ್ತು ಗುಂಡ -‌2 ನಲ್ಲಿ  (Naanu Mattu Gunda 2) ನಾಯಕ  ರಾಕೇಶ್ ಅಡಿಗ ಜೊತೆ ಡಾಗ್ ಸಿಂಬ ಕೂಡ ಪ್ರಮುಖ‌ ಪಾತ್ರದಲ್ಲಿ ಕಾಣಿಸಿಕೊಂಡಿದೆ. ರಘುಹಾಸನ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು ಡಬ್ಬಿಂಗ್ (Dubbing) ಕೆಲಸ ಈಗಷ್ಟೇ ಶುರುವಾಗಿದೆ.  ಇಡೀ ಸಿನಿಮಾದಲ್ಲಿ ಎಲ್ಲಾ ರೀತಿಯ ಎಮೋಷನ್ಸ್ ಇದ್ದು, ವಿಶೇಷವಾಗಿ ಡಾಗ್ ಸಿಂಬಾ ರೆಕಾರ್ಡಿಂಗ್ ಸ್ಟುಡೊಯೋಗೆ ಬಂದು  ತನ್ನ ಪಾತ್ರಕ್ಕೆ ತಾನೇ  ಡಬ್ ಮಾಡುತ್ತಿದೆ. ಇಡೀ ಚಿತ್ರದಲ್ಲಿ ಸಿಂಬಾನ ಒರಿಜಿನಲ್  ಸೌಂಡ್  ಇರುತ್ತದೆ. ಡಬ್ಬಿಂಗ್ ಅಂದ್ರೆ, ಸಿಂಬಾ ಮಾತಾಡೋದಿಲ್ಲ. ಎಲ್ಲಿ ಅವಶ್ಯಕತೆ  ಇದೆಯೋ ಅಲ್ಲಿ ಅದರ ಬೊಗಳೋ ಸೌಂಡ್ ರೆಕಾರ್ಡ್ ಮಾಡಲಾಗುತ್ತಿದೆ.

    ಸಿಂಬಾನ (Simba)  ಒರಿಜಿನಲ್ ಸೌಂಡ್‌ ಅನ್ನು ನಾವು ರೆಕಾರ್ಡ್ ಮಾಡುತ್ತಿದ್ದೇವೆ. ಎಮೋಷನಲ್ ಸೀನ್‌ಗಳಲ್ಲೂ ಸಿಂಬಾ ಡಬ್ಬಿಂಗ್ ಮಾಡುತ್ತಿದೆ. ಪ್ರತಿ ಜಾತಿಯ ನಾಯಿಯದೂ ಒಂದೊಂದು ರೀತಿ ಸೌಂಡ್ ಇರುತ್ತದೆ. ಹಾಗಾಗಿಯೇ ನಾವು ನಮ್ಮ ಗುಂಡನ ಪಾತ್ರ ಮಾಡಿರೋ ಸಿಂಬಾನಿಂದಲೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ.

    ಡಾಗ್ ಕೈಲಿ ಡಬ್ಬಿಂಗ್ ಮಾಡಿಸುತ್ತಿರುವುದು ನಾವೇ ಮೊದಲೆನ್ನಬಹುದು.  ಹಿಂದಿನ ಪಾರ್ಟ್ ಒನ್ ಚಿತ್ರದಲ್ಲೂ ಡಾಗ್‌ನಿಂದಲೇ ಡಬ್ಬಿಂಗ್ ಮಾಡಿಸಿದ್ದೇವೆ. ಆದರೆ, ಅದು ಕೆಲವೇ ಕೆಲವು ದೃಶ್ಯಗಳಲ್ಲಿ ಮಾತ್ರ ಆಗಿತ್ತು. ಪಾರ್ಟ್-2ನ  ಇಡೀ ಸಿನಿಮಾದಲ್ಲಿ ಡಾಗ್ ಸಿಂಬಾನೇ ಡಬ್ ಮಾಡುತ್ತಿದೆ. ಇಂಡಿಯಾದಲ್ಲಿ ಇಲ್ಲಿವರೆಗೂ ಯಾರೂ ಈ ಪ್ರಯತ್ನ  ಮಾಡಿಲ್ಲ ಎಂದು ನಿರ್ದೇಶಕ ಹಾಗೂ ನಿರ್ಮಾಪಕರೂ ಆದ  ರಘು ಹಾಸನ್ ಹೇಳಿದ್ದಾರೆ. ಡಬ್ಬಿಂಗ್ ಕೆಲಸ ಆದ್ಮೇಲೆ ಚಿತ್ರದ DI ಮತ್ತು RR ಕೆಲಸ ಶುರು ಮಾಡಲಾಗುತ್ತದೆ.

     

    ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ನಾನು ಮತ್ತು ಗುಂಡ-2 ಚಿತ್ರಕ್ಕೆ ಆರ್.ಪಿ.ಪಟ್ನಾಯಕ್  ಅವರ ಸಂಗೀತ, ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ,  ತನ್ವಿಕ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ರಾಘು ಅವರ ನೃತ್ಯನಿರ್ದೇಶನವಿದೆ.

  • ರಾಗಿಣಿ ದ್ವಿವೇದಿ ನಟನೆಯ ‘ಬಿಂಗೊ’ ಚಿತ್ರಕ್ಕೆ ಡಬ್ಬಿಂಗ್ ಮುಕ್ತಾಯ

    ರಾಗಿಣಿ ದ್ವಿವೇದಿ ನಟನೆಯ ‘ಬಿಂಗೊ’ ಚಿತ್ರಕ್ಕೆ ಡಬ್ಬಿಂಗ್ ಮುಕ್ತಾಯ

    ಶಂಭೋ ಶಿವ ಶಂಕರ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ (Shankar Konamanahalli) ನಿರ್ದೇಶನದಲ್ಲಿ, ಆರ್ ಕೆ ಚಂದನ್ ಹಾಗೂ ರಾಗಿಣಿ ದ್ವಿವೇದಿ (Ragini Dwivedi) ನಾಯಕ – ನಾಯಕಿಯಾಗಿ ನಟಿಸಿರುವ ‘ಬಿಂಗೊ’ (Bingo) ಚಿತ್ರದ ಡಬ್ಬಿಂಗ್ ಸಾಧುಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ  ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನ ಈ ಚಿತ್ರಕ್ಕೆ  ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ. ಮೇ 24 ರಂದು ನಟಿ ರಾಗಿಣಿ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಬಿಂಗೊ ಚಿತ್ರತಂಡ ರಾಗಿಣಿ ಅವರಿಗೆ ಶುಭಾಶಯ ತಿಳಿಸಿದೆ.

    ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  ರಾಗಿಣಿ ದ್ವಿವೇದಿ, ಆರ್ ಕೆ ಚಂದನ್ ,  ರಾಜೇಶ್ ನಟರಂಗ, ಪವನ್(ಮಜಾ ಟಾಕೀಸ್),  ಮುರಳಿ ಪೂರ್ವಿಕ್, ಅಪೂರ್ವ, ಶ್ರವಣ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

     

    ಹಿತನ್ ಹಾಸನ್ ಸಂಗೀತ ನೀಡಿರುವ ಮೂರು ಹಾಡುಗಳು ಈ ಚಿತ್ರದಲ್ಲಿದೆ. ಸದ್ಯದಲ್ಲೇ ಹಾಡುಗಳು ಹಾಗೂ ಟೀಸರ್ ಬಿಡುಗಡೆಯಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.  ನಟರಾಜ್ ಮುದ್ದಾಲ್ ಅವರ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿದ್ದು, ನರಸಿಂಹ ಸಾಹಸ ನಿರ್ದೇಶನ ಮಾಡಿದ್ದಾರೆ. ಕಂಬಿ ರಾಜು ಅವರ ನೃತ್ಯ ನಿರ್ದೇಶನ ಹಾಗೂ ವೆಂಕಿ udv ಸಂಕಲನ “ಬಿಂಗೊ” ಚಿತ್ರಕ್ಕಿದೆ.

  • ‘ಮಾರ್ಟಿನ್’ ಡಬ್ಬಿಂಗ್ ಮುಗಿಸಿದ ಧ್ರುವ ಸರ್ಜಾ

    ‘ಮಾರ್ಟಿನ್’ ಡಬ್ಬಿಂಗ್ ಮುಗಿಸಿದ ಧ್ರುವ ಸರ್ಜಾ

    ಅಂತೂ ಇಂತೂ ‘ಮಾರ್ಟಿನ್’ ಸಿನಿಮಾದ ಡಬ್ಬಿಂಗ್ (Dubbing) ಕೂಡ ಮುಗಿದಿದೆ. ಸುದೀರ್ಘ ಶೂಟಿಂಗ್ ನಂತರ ಮಾರ್ಟಿನ್ ಕೆಲಸಗಳು ಜೋರಾಗಿಯೇ ನಡೆಯುತ್ತಿವೆ. ಶೂಟಿಂಗ್ ಮುಗಿದ ಬೆನ್ನಲ್ಲೇ ತಮ್ಮ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮುಗಿಸಿದ್ದಾರೆ. ಆ ಫೋಟೋವನ್ನು ನಿರ್ದೇಶಕ ಎ.ಪಿ. ಅರ್ಜುನ್ (AP Arjun) ಹಂಚಿಕೊಂಡಿದ್ದಾರೆ.

    ಮೊನ್ನೆಯಷ್ಟೇ ಸಿನಿಮಾದ ಕಂಪ್ಲೀಟ್ ಶೂಟಿಂಗ್ ಮುಗಿಸಿದ್ದರು ನಿರ್ದೇಶಕರು. ಹಲವು ತಿಂಗಳಿಂದ ಈ ಚಿತ್ರದ ಶೂಟಿಂಗ್ ನಡೆಯುತ್ತಲೇ ಇತ್ತು. ಇದೀಗ ಬದಾಮಿಯಲ್ಲಿ ಕೊನೆಯ ಹಂತದ ಚಿತ್ರೀಕರಣ ಮಾಡುವ ಮೂಲಕ ಕುಂಬಳಕಾಯಿ ಒಡೆಯಲಾಗಿದೆ. ಧ್ರುವ ಸರ್ಜಾ (Dhruva Sarja) ನಟನೆಯ ಮಾರ್ಟಿನ್ ಸಿನಿಮಾ ಎಲ್ಲಿಗೆ ಬಂತು ಎಂದು ಅವರ ಅಭಿಮಾನಿಗಳು ಅನೇಕ ಸಲ ಕೇಳಿದ್ದಿದೆ. ಅದಕ್ಕೀಗ ಉತ್ತರ ಸಿಕ್ಕಿದೆ.

    ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಧ್ರುವ ಸರ್ಜಾ ನಟನೆಯ ಮಾರ್ಟಿನ್ (Martin) ಸಿನಿಮಾ ತೆರೆಗೆ ಬರಬೇಕಿತ್ತು. ಕೆಲ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿ, ಮಾರ್ಟಿನ್ ಚಿತ್ರದ ಕೆಲವು ಅಪ್ ಡೇಟ್ ನೀಡಿತ್ತು ಚಿತ್ರತಂಡ. ಈಗ ಮತ್ತೆ ಅದರ ಅಪ್ ಡೇಟ್ ಕೇಳುತ್ತಿದ್ದಾರೆ ಫ್ಯಾನ್ಸ್. ಯಾವಾಗ ಸಿನಿಮಾ ಬಿಡುಗಡೆ ಮಾಡೋದು ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

     

    ಸದ್ಯಕ್ಕೆ ಶೂಟಿಂಗ್ ಮುಗಿಸಿಕೊಂಡು, ಡಬ್ಬಿಂಗ್ ಕೂಡ ಪೂರೈಸಿದ್ದಾರೆ. ಮಾರ್ಟಿನ್ ಮೊದಲು ಬರತ್ತಾ ಅಥವಾ ಕೆಡಿ ಬರತ್ತಾ ಕಾದು ನೋಡಬೇಕು. ಮಾರ್ಟಿನ್ ಗಿಂತ ಮುಂಚೆಯೇ ಕೆಡಿ ಮುಗಿದಿರೋದ್ರಿಂದ ಚರ್ಚೆಯಂತೂ ಶುರುವಾಗಿದೆ.

  • ‘ಯುಐ’ ಡಬ್ಬಿಂಗ್ ಕೆಲಸದಲ್ಲಿ ತೊಡಗಿದ ಉಪೇಂದ್ರ

    ‘ಯುಐ’ ಡಬ್ಬಿಂಗ್ ಕೆಲಸದಲ್ಲಿ ತೊಡಗಿದ ಉಪೇಂದ್ರ

    ಪೇಂದ್ರ ನಟನೆಯ ಯುಐ ತಂಡದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ಸದ್ಯ ಉಪೇಂದ್ರ ಅವರು ಯುಐ ಸಿನಿಮಾದ ಡಬ್ಬಿಂಗ್ (Dubbing) ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ನಿರ್ಮಾಪಕರಲ್ಲಿ ಒಬ್ಬರಾದ ಕೆ.ಪಿ ಶ್ರೀಕಾಂತ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಜೊತೆಗೆ ಉಪೇಂದ್ರ ಅವರು ಡಬ್ಬಿಂಗ್ ಮಾಡುತ್ತಿರುವ ವಿಡಿಯೋವನ್ನು ಅವರು ಶೇರ್ ಮಾಡಿದ್ದಾರೆ.

    ಈ ಹಿಂದೆ ಯುಐ (UI) ಸಿನಿಮಾದ ಟೀಸರ್  ರಿಲೀಸ್ ಆಗಿತ್ತು. ಅದಕ್ಕೆ  ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 23 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಈ ಖುಷಿಯಲ್ಲಿ ಉಪ್ಪಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ವೀಕ್ಷಣೆಗೆ ಧನ್ಯವಾದಗಳನ್ನೂ ಹೇಳಿದ್ದಾರು.

    ಟೀಸರ್ ನೋಡಿದ ಉಪ್ಪಿ (Upendra) ಅಭಿಮಾನಿಗಳು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಜೊತೆಗೆ ನೂರಾರು ಪ್ರಶ್ನೆಗಳನ್ನು ಉಪ್ಪಿಗೆ ಕೇಳಿದ್ದಾರೆ. ಯಾರೇ ಪ್ರಶ್ನೆ ಮಾಡಿದರೂ ಉಪೇಂದ್ರ ಮಾತ್ರ ಟೀಸರ್ ನೋಡಿ, ಅಲ್ಲೇ ಉತ್ತರವಿದೆ ಎನ್ನುವಂತೆ ಮೌನ ತಾಳಿದ್ದಾರೆ.

     

    ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಆಗಮಿಸಿದ್ದರು. ಶಿವರಾಜ್ ಕುಮಾರ್, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ (Shivaraj Kumar) ಸೇರಿದಂತೆ ಹಲವರು ಕಾರ್ಯಕ್ರಮಲ್ಲಿ ಭಾಗಿಯಾಗಿದ್ದರು.

  • ಚೊಚ್ಚಲ ‘ಗೌರಿ’ ಚಿತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದಾರೆ ಸಾನ್ಯಾ ಅಯ್ಯರ್

    ಚೊಚ್ಚಲ ‘ಗೌರಿ’ ಚಿತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದಾರೆ ಸಾನ್ಯಾ ಅಯ್ಯರ್

    ಸಾನ್ಯ ಅಯ್ಯರ್ ತಮ್ಮ ಚೊಚ್ಚಲು ಸಿನಿಮಾ ‘ಗೌರಿ’ ಶೂಟಿಂಗ್ ಮುಗಿಸಿದ್ದಾರೆ. ಇದೀಗ ಅವರು ಡಬ್ಬಿಂಗ್ (Dubbing) ಕೆಲಸದಲ್ಲಿ ನಿರತರಾಗಿದ್ದಾರೆ. ಡಬ್ಬಿಂಗ್ ಮಾಡುತ್ತಿರುವ ಫೋಟೋ ಅವನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. ಜೊತೆಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೂಡ ಇದ್ದಾರೆ.

    ‘ಗೌರಿ’ (Gauri) ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ಕಿರುತೆರೆಯ ಪುಟ್ಟಗೌರಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದಾರೆ. ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಸಾನ್ಯಾ ಅಯ್ಯರ್ (Sanya Iyer), ಈ ಚಿತ್ರಕ್ಕಾಗಿ ಮತ್ತೊಂದು ಫೋಟೋ ಶೂಟ್ (Photoshoot) ನಲ್ಲಿ ಭಾಗಿಯಾಗಿದ್ದರು.

    ಬ್ಲೌಸ್ ಇಲ್ಲದೇ ಕೇವಲ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿರುವ ಸಾನ್ಯಾ ಅಯ್ಯರ್. ಆ ಫೋಟೋದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಬ್ಯಾಕ್ ಲೆಸ್ ಪೋಸ್ ಕೂಡ ನೀಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದವು.

    ಈ ಹಿಂದೆಯೂ ಸಾನ್ಯಾ ಬಿಕಿನಿ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಗೌರಿ ಚಿತ್ರಕ್ಕಾಗಿ ಹೊಸ ಲುಕ್‌ನಲ್ಲಿ ಸ್ಟೈಲೀಶ್ ಗೆಟಪ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಬ್ಲೌಸ್ ಇಲ್ಲದೇ ಸೀರೆ ತೊಟ್ಟಿದ್ದಾರೆ.

    ಗೌರಿ ಸಿನಿಮಾ ಚಿಕ್ಕಮಗಳೂರು ಸೇರಿದಂತೆ ನಾನಾ ಸ್ಥಳಗಳಲ್ಲಿ ಶೂಟ್ ಆಗಿದೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಸಮರ್ಜಿತ್ ನಾನು ಅಂದುಕೊಂಡದಕ್ಕಿಂತ ಚೆನ್ನಾಗಿ ಅಭಿನಯಿಸಿದ್ದಾರೆ. ಸಾನ್ಯ ಅವರು ಕೂಡ. ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ಮಾನಸಿ ಸುಧೀರ್, ಎಸ್ತರ್ ನರೋನ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

  • ‘ದೇಸಾಯಿ’ ಚಿತ್ರಕ್ಕೆ ಡಬ್ಬಿಂಗ್ ಕೆಲಸ ಶುರು

    ‘ದೇಸಾಯಿ’ ಚಿತ್ರಕ್ಕೆ ಡಬ್ಬಿಂಗ್ ಕೆಲಸ ಶುರು

    ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳದಗುಡ್ಡ ಕಥೆ ಬರೆದು ನಿರ್ಮಿಸುತ್ತಿರುವ ಹಾಗೂ ನಾಗಿರೆಡ್ಡಿ ಭಡ ನಿರ್ದೇಶನದ ‘ದೇಸಾಯಿ’ ಚಿತ್ರಕ್ಕೆ ಮಾತಿನ ಜೋಡಣೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.

    ದೇಸಾಯಿ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಉತ್ತರ ಕರ್ನಾಟಕದ ಶೈಲಿಯ ಕಥಾಹಂದರ ಹೊಂದಿರುವ ಈ ಚಿತ್ರದ ರಚನೆ ಹಾಗೂ ನಿರ್ದೇಶನ ನಾಗಿರೆಡ್ಡಿ ಭಡ ಅವರದು. ಬಾದಾಮಿ, ಬಾಗಲಕೋಟೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

    ಲವ್ 360 ಖ್ಯಾತಿಯ ಪ್ರವೀಣ್ ಕುಮಾರ್ ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದು, ನಾಯಕಿಯಾಗಿ ಮೈಸೂರಿನ ರಾಧ್ಯ ಇದ್ದಾರೆ. ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ತಾರಾಬಳಗದಲ್ಲಿದ್ದಾರೆ.

     ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಾಗಿರೆಡ್ಡಿ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ನಿರ್ಮಾಪಕ ಮಹಾಂತೇಶ್ ಅವರಿಗೂ  ದೇಸಾಯಿ ಮೊದಲ ನಿರ್ಮಾಣದ ಚಿತ್ರ.

  • ‘ಸಲಾರ್’ ಸಿನಿಮಾಗೆ ಐದೂ ಭಾಷೆಗಳಿಗೂ ತಾವೇ ಡಬ್ ಮಾಡಿದ ಪೃಥ್ವಿರಾಜ್

    ‘ಸಲಾರ್’ ಸಿನಿಮಾಗೆ ಐದೂ ಭಾಷೆಗಳಿಗೂ ತಾವೇ ಡಬ್ ಮಾಡಿದ ಪೃಥ್ವಿರಾಜ್

    ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಮಲಯಾಳಂನ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ (Pruthviraj Sukumaran) ಹೊಸಬಗೆಯ ಪಾತ್ರ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ವಿಶೇಷವೆಂದರೆ ತಮ್ಮ ಪಾತ್ರಕ್ಕೆ ಐದೂ ಭಾಷೆಗಳಲ್ಲಿ ತಾವೇ ಡಬ್ (Dubbing) ಮಾಡಿದ್ದಾರಂತೆ ಪೃಥ್ವಿರಾಜ್.

    ಈಗಾಗಲೇ ಸಿನಿಮಾ ರಿಲೀಸ್ ಗೆ ಸರ್ವಸಿದ್ಧತೆ ನಡೆದಿದೆ. ಈ ನಡುವೆ ಸಲಾರ್ ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್ (Censor) ಮಂಡಳಿಯ ಪ್ರಮಾಣ ಪತ್ರವನ್ನು ನೀಡಿದೆ. ತೀವ್ರಗತಿಯ ಸಾಹಸ ಸನ್ನಿವೇಶಗಳು ಇರುವ ಕಾರಣದಿಂದಾಗಿ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಭಾರತದಲ್ಲಿನ ಪ್ರದರ್ಶನಕ್ಕಾಗಿ ‘ಎ’ ಮತ್ತು ಹೊರ ದೇಶದಲ್ಲಿನ ಪ್ರದರ್ಶನಕ್ಕಾಗಿ ಯು/ಎ ಪ್ರಮಾಣ ಪತ್ರ ಸಿಕ್ಕಿದೆ ಎನ್ನಲಾಗುತ್ತಿದೆ. ಸಿನಿಮಾದ ಒಟ್ಟು ಅವಧಿ 2 ಗಂಟೆ 55 ನಿಮಿಷ ಎಂದು ಹೇಳಲಾಗುತ್ತಿದೆ.

    ನಾನಾ ಕಾರಣಗಳಿಂದಾಗಿ ಸಿನಿಮಾ ಕುತೂಹಲ ಮೂಡಿಸಿದೆ. ಡಾರ್ಲಿಂಗ್ ಪ್ರಭಾಸ್ (Prabhas) ನಾಯಕತ್ವದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಮೊನ್ನೆಯಷ್ಟೇ ‘ಸಲಾರ್’ (Salaar) ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಫ್ರೆಂಡ್‌ಶಿಪ್ ಜೊತೆ ಸೇಡಿನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ರಕ್ತ ಸಿಕ್ತವಾಗಿ ಪ್ರಭಾಸ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. 3 ನಿಮಿಷ 47 ಸೆಕೆಂಡ್ ಇರುವ ಈ ಟ್ರೈಲರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆ ಟ್ರೈಲರ್ ನೋಡಿದಾಗಲೇ ಚಿತ್ರಕ್ಕೆ ಯಾವ ಪ್ರಮಾಣ ಪತ್ರ ಸಿಗಬಹುದು ಎಂದು ಅಂದಾಜಿಸಲಾಗಿತ್ತು.

     

    ಹೊಂಬಾಳೆ ಸಂಸ್ಥೆ ನಿರ್ಮಾಣದ ಸಲಾರ್ ಚಿತ್ರದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಜುಗಲ್‌ಬಂದಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲೂ ಪ್ರಭಾಸ್ ಖಡಕ್ ಲುಕ್, ಪೃಥ್ವಿರಾಜ್ ರಗಡ್ ಡೈಲಾಗ್ ಎಲ್ಲವೂ ಟ್ರೈಲರ್‌ನ ಹೈಲೈಟ್ ಆಗಿದೆ. ಚಿತ್ರದಲ್ಲಿ ಕನ್ನಡದ ಗುಳ್ಟು ನವೀನ್ ಶಂಕರ್, ಪ್ರಮೋದ್, ಜಗಪತಿ ಬಾಬು, ಶ್ರುತಿ ಹಾಸನ್ ಸೇರಿದಂತೆ ಅನೇಕರು ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ಡಿಸೆಂಬರ್‌ 22ಕ್ಕೆ ಬಹುಭಾಷೆಗಳಲ್ಲಿ ‘ಸಲಾರ್‌’ ರಿಲೀಸ್‌ ಆಗುತ್ತಿದೆ.

  • ‘ದ ಜಡ್ಜ್ ಮೆಂಟ್’ ಗೆ ಮಾತು ಪೋಣಿಸುತ್ತಿದ್ದಾರೆ ಕ್ರೇಜಿಸ್ಟಾರ್

    ‘ದ ಜಡ್ಜ್ ಮೆಂಟ್’ ಗೆ ಮಾತು ಪೋಣಿಸುತ್ತಿದ್ದಾರೆ ಕ್ರೇಜಿಸ್ಟಾರ್

    ಶಾರದ ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಪಾಟೀಲ ಮತ್ತು ಪ್ರತಿಮ ಬಿರಾದಾರ ನಿರ್ಮಿಸುತ್ತಿರುವ ಹಾಗೂ ಗುರುರಾಜ ಕುಲಕರ್ಣಿ (Gururaja Kulkarni) (ನಾಡಗೌಡ) ರಚನೆ ಹಾಗೂ ನಿರ್ದೇಶನದ ‘ದ ಜಡ್ಜ್ ಮೆಂಟ್’  (The Judgment) ಚಿತ್ರಕ್ಕೆ ಮಾತಿನ (dubbing) ಜೋಡಣೆ ಆರಂಭವಾಗಿದೆ. ಚಿತ್ರಕ್ಕೆ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ.

    ಅಪಾರವೆಚ್ಚದಲ್ಲಿ ಅದ್ದೂರಿ ತಾರಾಗಣದೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಿದೆ.  ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಈ ಚಿತ್ರದಲ್ಲಿ ವಕೀಲರಾಗಿ ಅಭಿನಯಿಸಿದ್ದಾರೆ. ದಿಗಂತ ಮಂಚಾಲೆ, ಮೇಘನಾ ಗಾವಂಕರ, ಧನ್ಯಾ ರಾಮಕುಮಾರ, ಲಕ್ಷ್ಮೀ ಗೋಪಾಲಸ್ವಾಮಿ, ಪ್ರಕಾಶ ಬೆಳವಾಡಿ, ಟಿ ಎಸ್ ನಾಗಾಭರಣ,  ಕೃಷ್ಣಾ ಹೆಬ್ಬಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ, ರವಿಶಂಕರ ಗೌಡ ಸುಜಯ ಶಾಸ್ತ್ರೀ, ರೇಖಾ ಕೂಡ್ಲಿಗಿ, ರೂಪಾ ರಾಯಪ್ಪ, ಪ್ರೀತಂ, ಅಶ್ವಿನ್ ರಾವ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

    ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶಿಸಿರುವ ದ ಜಡ್ಜ್ ಮೆಂಟ್ ಚಿತ್ರಕ್ಕೆ ಎಂ ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಪ್ರಮೋದ್ ಮರವಂತೆ ಹಾಡುಗಳನ್ನು ರಚಿಸಿದ್ದಾರೆ.  ಅನೂಪ ಸೀಳಿನ ಸಂಗೀತ ಸಂಯೋಜಿಸಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ,  ಕೆಂಪರಾಜ್ ಬಿ ಎಸ್ ಸಂಕಲನವಿರುವ ಈ ಚಿತ್ರದ ಸ್ಕ್ರಿಪ್ಟ್ ಸೂಪರ್ ವೈಸರ್ ಆಗಿ  ಪಿ. ವಾಸುದೇವ ಮೂರ್ತಿ ಕಾರ್ಯ ನಿರ್ವಹಿಸಿದ್ದಾರೆ.

  • ‘chef ಚಿದಂಬರ’ ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ಅನಿರುದ್ಧ

    ‘chef ಚಿದಂಬರ’ ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ಅನಿರುದ್ಧ

    ಟ ಅನಿರುದ್ಧ್ ಜತ್ಕರ್ (Aniruddha) ನಾಯಕನಾಗಿ ಅಭಿನಯಿಸಿರುವ ಹಾಗೂ ರಾಘು ಚಿತ್ರ ಖ್ಯಾತಿಯ ನಿರ್ದೇಶಕ ಎಂ.ಆನಂದರಾಜ್ ನಿರ್ದೇಶನದ ‘chef ಚಿದಂಬರ’ (Chef Chidambara) ಚಿತ್ರದ ಚಿತ್ರೀಕರಣ ಇತ್ತೀಚಿಗೆ ಮುಕ್ತಾಯವಾಗಿದೆ. ಪ್ರಸ್ತುತ ಚಿತ್ರಕ್ಕೆ ಮಾತಿನ ಜೋಡಣೆ (ಡಬ್ಬಿಂಗ್) (Dubbing)  ನಡೆಯುತ್ತಿದೆ.   ನಾಯಕ ಅನಿರುದ್ದ್ ಮಾತಿನ ಮೂಲಕ ತಮ್ಮ ಪಾತ್ರಕ್ಕೆ ಜೀವ ತುಂಬುತಿದ್ದಾರೆ.

    ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರದಲ್ಲಿ ಅನಿರುದ್ಧ್ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ.  ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ.

    ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, ವಿಕ್ರಾಂತ್ ರೋಣ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

    ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್‌ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್‌, ಶಿವಮಣಿ ಮುಂತಾದವರು chef ಚಿದಂಬರ ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಮಾಫಿಯಾ’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಅದಿತಿ-ಪ್ರಜ್ವಲ್

    ‘ಮಾಫಿಯಾ’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಅದಿತಿ-ಪ್ರಜ್ವಲ್

    ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್. ಬಿ ನಿರ್ಮಿಸಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕರಾಗಿ, ಅದಿತಿ ಪ್ರಭುದೇವ (Aditi Prabhudeva) ನಾಯಕಿಯಾಗಿ ನಟಿಸಿರುವ ಹಾಗೂ ಲೋಹಿತ್ ಹೆಚ್ ನಿರ್ದೇಶಿಸಿರುವ  ಮಾಫಿಯಾ (Mafia) ಚಿತ್ರಕ್ಕೆ ಸಾಧುಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್ಮು (Dubbing)ಕ್ತಾಯವಾಗಿದೆ. ಅಕ್ಟೋಬರ್ ನಲ್ಲಿ ಟೀಸರ್ ಬರಲಿದ್ದು, ನವೆಂಬರ್ ಅಂತ್ಯದ ವೇಳೆಗೆ ಸಿನಿಮಾ ತೆರೆಗೆ ಬರಲಿದೆ.

    ಆಕ್ಷನ್ ಜಾನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆದಿದೆ. ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಮೈನವಿರೇಳಿಸುವ ಐದು ಸಾಹಸ ಸನ್ನಿವೇಶಗಳಿವೆ.  ಈ ಚಿತ್ರಕ್ಕಾಗಿ ಪ್ರಜ್ವಲ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ.

    ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಎಸ್ ಪಾಂಡಿಕುಮಾರ್ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ  ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್, ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]