Tag: ಡಬಲ್ ಸೆಂಚುರಿ

  • ಸೆಹ್ವಾಗ್ ಡಬಲ್ ಸೆಂಚುರಿ ಹೊಡೆದ ಕ್ರೀಡಾಂಗಣ ರನ್ ಮಳೆಗೆ ಫೇಮಸ್!

    ಸೆಹ್ವಾಗ್ ಡಬಲ್ ಸೆಂಚುರಿ ಹೊಡೆದ ಕ್ರೀಡಾಂಗಣ ರನ್ ಮಳೆಗೆ ಫೇಮಸ್!

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯ ನಡೆಯುತ್ತಿರುವ ಇಂದೋರ್ ಕ್ರೀಡಾಂಗಣದಲ್ಲಿ ಭಾನುವಾರ ರನ್ ಮಳೆ ಹರಿದರೂ ಅಚ್ಚರಿ ಪಡಬೇಕಿಲ್ಲ. ಕಾರಣ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದ ಇತಿಹಾಸ ರನ್ ಮಳೆಯ ಕಥೆಯನ್ನೇ ಹೇಳುತ್ತದೆ.

    ಈ ಮೈದಾನದಲ್ಲಿ ಇದುವರೆಗೆ ಒಟ್ಟು 4 ಪಂದ್ಯಗಳು ನಡೆದಿದ್ದು ಪ್ರತಿ ಇನ್ನಿಂಗ್ಸ್ ನಲ್ಲೂ ಸರಾಸರಿ 282 ರನ್ ಹರಿದಿದೆ.

    2011ರ ಡಿಸೆಂಬರ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 418 ರನ್ ಗಳಿಸಿತ್ತು. ಇದೇ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ 208 ಎಸೆತಗಳಲ್ಲಿ 219 ರನ್ ಗಳಿಸಿ ದ್ವಿಶತಕ ಗಳಿಸಿದ್ದರು.

    ಇಂದೋರ್ ನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದೆ. ಹೀಗಾಗಿ ಪಿಚ್ ಇನ್ನೂ ತೇವವಾಗಿದೆ. ಇದರಿಂದ ಬಾಲ್ ಗೆ ಹೆಚ್ಚು ಬೌನ್ಸ್ ಸಿಗಲ್ಲ. ಪಂದ್ಯದ ವೇಳೆಯಲ್ಲೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಪಿಚ್ ಕ್ಯುರೇಟರ್ ತಿಳಿಸಿದ್ದಾರೆ.

    ಈಗಾಗಲೇ 2 ಪಂದ್ಯವನ್ನು ಗೆದ್ದಿರೋ ಟೀಂ ಇಂಡಿಯಾ ಭಾನುವಾರದ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ. ಇದಕ್ಕೆ ಆಸೀಸ್ ತಂಡ ಬ್ರೇಕ್ ಹಾಕುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

     

     

  • ದ್ವಿಶತಕದ ಜೊತೆಯಾಟದ ದಶ ದಾಖಲೆ ಬರೆದ ವಿರಾಟ್ ಕೊಹ್ಲಿ!

    ದ್ವಿಶತಕದ ಜೊತೆಯಾಟದ ದಶ ದಾಖಲೆ ಬರೆದ ವಿರಾಟ್ ಕೊಹ್ಲಿ!

    ಬೆಂಗಳೂರು: ಏಕದಿನ ಪಂದ್ಯಗಳಲ್ಲಿ 10 ಬಾರಿ ದ್ವಿಶತಕದ ಜೊತೆಯಾಟ ಆಡುವ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಮಾಡಿದ್ದಾರೆ. 10 ಬಾರಿ ದ್ವಿಶತಕದ ಜೊತೆಯಾಟ ಆಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ ಕೊಹ್ಲಿ.

    ಶ್ರೀಲಂಕಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ 2ನೇ ವಿಕೆಟ್ ಗೆ 219 ರನ್ ಗಳ ಜೊತೆಯಾಟ ನೀಡಿ ಈ ನೂತನ ದಾಖಲೆಯನ್ನು ಕೊಹ್ಲಿ ತನ್ನ ಹೆಸರಿಗೆ ಬರೆದುಕೊಂಡರು. 2ನೇ ಓವರ್ ನಲ್ಲಿ ಬ್ಯಾಟಿಂಗ್ ಗೆ ಇಳಿದ ಕೊಹ್ಲಿ 30ನೇ ಓವರ್ ನಲ್ಲಿ ಲಸಿತ್ ಮಾಲಿಂಗಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾಗುವಾಗ 2ನೇ ವಿಕೆಟ್ ಗೆ 219 ರನ್ ಗಳ ಜೊತೆಯಾಟ ನೀಡಿದ್ದರು.

    ವೃತ್ತಿ ಜೀವನದ 29ನೇ ಶತಕ ಬಾರಿಸಿ ಶ್ರೀಲಂಕಾದ ಸನತ್ ಜಯಸೂರ್ಯ ದಾಖಲೆಯನ್ನು ಹಿಂದಿಕ್ಕಿದರು. ಕೊಹ್ಲಿ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮಾ ಜೊತೆ ತಲಾ 3 ದ್ವಿಶತಕದ ಜೊತೆಯಾಟ ನೀಡಿದ್ದಾರೆ. ಜೊತೆಗೆ 2017ರಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯೂ ಸದ್ಯ ವಿರಾಟ್ ಕೊಹ್ಲಿ ಹೆಸರಲ್ಲಿದೆ.

    ಇದನ್ನೂ ಓದಿ: ಶತಕ ಸಿಡಿಸಿ 2017ರ ಏಕದಿನದಲ್ಲಿ ವಿಶೇಷ ಸಾಧನೆಗೈದ ರನ್ ಮೆಷಿನ್!

    ವಿರಾಟ್ ಕೊಹ್ಲಿಯ 10 ದ್ವಿಶತಕಗಳ ಜೊತೆಯಾಟದ ವಿವರ ಈ ಕೆಳಗಿನಂತಿದೆ.