Tag: ಡಬಲ್ ಮರ್ಡರ್

  • ಅಕ್ರಮ ಸಂಬಂಧಕ್ಕೆ ಬಿತ್ತು 2 ಹೆಣ; ಗರ್ಭಿಣಿ ಹೆಂಡತಿಯನ್ನು ಕೊಂದ ಪ್ರಿಯಕರನ ಹತ್ಯೆಗೈದ ಪತಿ

    ಅಕ್ರಮ ಸಂಬಂಧಕ್ಕೆ ಬಿತ್ತು 2 ಹೆಣ; ಗರ್ಭಿಣಿ ಹೆಂಡತಿಯನ್ನು ಕೊಂದ ಪ್ರಿಯಕರನ ಹತ್ಯೆಗೈದ ಪತಿ

    ನವದೆಹಲಿ: ಅಕ್ರಮ ಸಂಬಂಧ ವಿಚಾರವಾಗಿ ಗರ್ಭಿಣಿ ಹಾಗೂ ಆಕೆಯ ಪ್ರಿಯಕರ ಹತ್ಯೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಗರ್ಭಿಣಿಯನ್ನು ಆಕೆಯ ಪ್ರಿಯಕರನೇ ಇರಿದು ಕೊಂದಿದ್ದಾನೆ. ಪತ್ನಿಯ ಪ್ರಿಯಕರನನ್ನು ಆಕೆಯ ಪತಿ ಹತ್ಯೆ ಮಾಡಿದ್ದಾರೆ.

    ಬೆಚ್ಚಿಬೀಳಿಸುವ ಹತ್ಯೆ ಘಟನೆ ರಾಮ್‌ನಗರ ಪ್ರದೇಶದಲ್ಲಿ ನಡೆದಿದೆ. ಗೃಹಿಣಿ ಶಾಲಿನಿ (22) ಮತ್ತು ಆಕೆಯ ಪ್ರಿಯಕರ ಆಶು ಅಲಿಯಾಸ್‌ ಶೈಲೇಂದ್ರ (34) ಮೃತಪಟ್ಟವರು. ಮಹಿಳೆ ಪತಿ ಆಕಾಶ್‌ (24) ಈಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

    ಶಾಲಿನಿ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದರು. ಆಕೆಯ ಪತಿ ಇ-ರಿಕ್ಷಾ ಚಾಲಕನಾಗಿದ್ದ. ಶಾಲಿನಿ ಜೊತೆ ಶೈಲೇಂದ್ರ ಅಕ್ರಮ ಸಂಬಂಧ ಹೊಂದಿದ್ದ. ಶಾಲಿನಿ ಗರ್ಭಿಣಿಯಾಗಿದ್ದಳು. ಪತಿ ಜೊತೆ ಜಗಳ ಮಾಡಿಕೊಂಡಿದ್ದಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನಿನ್ನೆ ತಡರಾತ್ರಿ ಆಕಾಶ್ ಮತ್ತು ಶಾಲಿನಿ ಕುತುಬ್ ರಸ್ತೆಯಲ್ಲಿ ತಮ್ಮ ತಾಯಿಯನ್ನು ಭೇಟಿಯಾಗಲು ಹೋಗಿದ್ದಾಗ ಪ್ರಿಯಕರ ದಾಳಿ ನಡೆಸಿದ್ದಾನೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಆಶು, ಆಕಾಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ. ನಂತರ ಇ-ರಿಕ್ಷಾದಲ್ಲಿ ಶಾಲಿನಿ ಇರುವುದನ್ನು ಗಮನಿಸಿ ಆಕೆಗೆ ಹಲವು ಬಾರಿ ಇರಿದಿದ್ದಾನೆ.

    ಪತ್ನಿಯನ್ನು ರಕ್ಷಿಸಲು ಮುಂದಾದ ಆಕಾಶ್‌ಗೂ ಚಾಕುವಿನಿಂದ ಇರಿಯುತ್ತಾನೆ. ಈ ವೇಳೆ ಆಶುವಿನಿಂದ ಚಾಕು ಕಸಿದುಕೊಂಡು ಆತನಿಗೆ ಇರಿದು ಆಕಾಶ್‌ ಹತ್ಯೆ ಮಾಡುತ್ತಾನೆ. ಶಾಲಿನಿಯ ಸಹೋದರ ರೋಹಿತ್ ತಕ್ಷಣ ಆಕೆ ಮತ್ತು ಆಕೆಯ ಪತಿಯನ್ನು ಆಸ್ಪತ್ರೆಗೆ ಸೇರಿಸುತ್ತಾನೆ. ಪೊಲೀಸರು ಆಶುನನ್ನು ಅದೇ ಆಸ್ಪತ್ರೆಗೆ ದಾಖಲಿಸುತ್ತಾರೆ. ಆಸ್ಪತ್ರೆಯಲ್ಲಿ ಶಾಲಿನಿ ಮತ್ತು ಪ್ರಿಯಕರ ಆಶು ಸಾವನ್ನಪ್ಪುತ್ತಾರೆ. ಪತ್ನಿಯನ್ನು ಉಳಿಸುವಾಗ ಆಕಾಶ್‌ಗೆ ಹಲವು ಇರಿತದ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ನಿಧಿನ್ ವಲ್ಸನ್ ತಿಳಿಸಿದ್ದಾರೆ.

    ಶಾಲಿನಿಯ ತಾಯಿ ಶೀಲಾ ಅವರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಕೊಲೆ ಮತ್ತು ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಶಾಲಿನಿ ಮತ್ತು ಪತಿ ಆಕಾಶ್ ನಡುವೆ ಜಗಳವಾಗಿ ಇಬ್ಬರ ಸಂಬಂಧ ಹದಗೆಟ್ಟಿತ್ತು. ನಂತರ ಆಕೆ ಮನೆಯನ್ನು ಬಿಟ್ಟಿದ್ದಳು. ಈ ವೇಳೆ ಆಶಯ ಪರಿಚಯವಾಗಿ ಆತನೊಟ್ಟಿಗೆ ಇದ್ದಳು. ಶಾಲಿನಿ ಮತ್ತು ಆಕಾಶ್ ನಂತರ ರಾಜಿ ಮಾಡಿಕೊಂಡು ತಮ್ಮ ಇಬ್ಬರು ಮಕ್ಕಳೊಂದಿಗೆ ಒಟ್ಟಿಗೆ ವಾಸಿಸಲು ಮುಂದಾದರು. ಇದು ಆಶು ಕೋಪಕ್ಕೆ ಕಾರಣವಾಯಿತು. ಶಾಲಿನಿಯ ಗರ್ಭದಲ್ಲಿರುವ ಮಗುವಿನ ತಂದೆ ನಾನೇ ಎಂದು ಹೇಳಿದ್ದ. ಈ ವಿಚಾರವಾಗಿ ಮಹಿಳೆ ಮತ್ತು ಪ್ರಿಯಕರನ ನಡುವೆ ಜಗಳವಾಗಿತ್ತು. ಕೊನೆಗೆ ಆಕೆಯ ಹತ್ಯೆಗೆ ಪ್ರಿಯಕರ ಯೋಜನೆ ರೂಪಿಸಿದ್ದ.

  • ದುನಿಯಾ ವಿಜಯ್ ಜೈಲಿಂದ ಬಿಡಿಸಿದ್ದ ಆರೋಪಿಯಿಂದ ಜೋಡಿ ಕೊಲೆ

    ದುನಿಯಾ ವಿಜಯ್ ಜೈಲಿಂದ ಬಿಡಿಸಿದ್ದ ಆರೋಪಿಯಿಂದ ಜೋಡಿ ಕೊಲೆ

    – ದುನಿಯಾ ವಿಜಿ ಅವರ ಆಶಯವನ್ನು ವ್ಯರ್ಥ ಮಾಡಿದ ಕೊಲೆ ಪಾತಕಿ

    ಬೆಂಗಳೂರು: ನಗರದ ಹೊರವಲಯದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಡಬಲ್‌ ಮರ್ಡರ್‌ ಮಾಡಿರುವ ಆರೋಪಿಯನ್ನು ಈ ಹಿಂದೆ ಪ್ರಕರಣವೊಂದರಲ್ಲಿ ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ (Dunia Vijay) ಜೈಲಿಂದ ಬಿಡಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಆದರೆ, ದುನಿಯಾ ವಿಜಿ ಅವರ ಆಶಯವನ್ನು ಕೊಲೆ ಪಾತಕಿ ವ್ಯರ್ಥ ಮಾಡಿದ್ದಾನೆ ಎನ್ನಲಾಗಿದೆ.

    ಬಾಗಲೂರು ಡಬಲ್ ಮರ್ಡರ್ ಆರೋಪಿ ಸುರೇಶ್‌ಗೆ ಈ ಹಿಂದೆ ಪ್ರಕರಣವೊಂದರಲ್ಲಿ ಶ್ಯೂರಿಟಿ ಹಣ ನೀಡಿ ದುನಿಯಾ ವಿಜಯ್ ಬಿಡಿಸಿದ್ದರು. ಈ ಹಿಂದೆ ಡಬಲ್ ಮರ್ಡರ್ ಕೇಸ್ ಹಾಗೂ ರೇಪ್‌ ಕೇಸಲ್ಲಿ ಆರೋಪಿ ಸುರೇಶ್‌ ಜೈಲು ಸೇರಿದ್ದ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಡಬಲ್‌ ಮರ್ಡರ್‌ ಕೇಸ್‌ – ಆರೋಪಿ ಬಂಧನ

    10 ವರ್ಷ ಶಿಕ್ಷೆ ಅನುಭವಿಸಿದ್ದ ಅಪರಾಧಿಗೆ ಶ್ಯೂರಿಟಿ ಹಣ ನೀಡಲು ಯಾರೂ ಇರಲಿಲ್ಲ. ಈ ಸಮಯದಲ್ಲಿ ಒಂದಷ್ಟು ಅಪರಾಧಿಗಳಿಗೆ ತಲಾ ಮೂರು ಲಕ್ಷದಂತೆ ಶ್ಯೂರಿಟಿ ಹಣವನ್ನು ನಟ ವಿಜಯ್‌ ಕಟ್ಟಿದ್ದರು. ಈ ವೇಳೆ ಸುರೇಶ್‌ಗೂ ಕೂಡ ಮೂರು ಲಕ್ಷ ಶ್ಯೂರಿಟಿ ಹಣ ನೀಡಿ ಜೈಲಿಂದ ಬಿಡುಗಡೆಗೊಳಿಸಿದ್ದರು.

    ಜೈಲಿಂದ ಬಿಡುಗಡೆ ಬಳಿಕ ಮಾರ್ಕೆಟ್‌ನಲ್ಲಿ ಕೊತ್ತಮಿರಿ ಸೊಪ್ಪು ಮಾರಾಟ ಮಾಡಿ ಸುರೇಶ್‌ ಜೀವನ ಸಾಗಿಸುತ್ತಿದ್ದ. ಸುರೇಶ್ ಸಂಬಂಧಿಯಿಂದ ಶೆಡ್‌ನಲ್ಲಿ ಕೆಲಸ ಪಡೆದುಕೊಂಡಿದ್ದ. ಗುಜರಿ ಮಾರುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಕೊಲೆಯಾದ ನಾಗೇಶ್ ಮತ್ತು ಮಂಜುನಾಥ್, ‘ನೀನು ಕಳ್ಳ, ಕೊಲೆಗಾರ’ ಅಂತಾ ಹೀಯಾಳಿಸಿದ್ದರು. ಹೀಗಾಗಿ, ಈಚೆಗೆ ಇಬ್ಬರನ್ನೂ ಆರೋಪಿ ಸುರೇಶ್‌ ಕೊಲೆ ಮಾಡಿದ್ದ. ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್​ನಲ್ಲೂ ಪ್ರಜ್ವಲ್‌ ರೇವಣ್ಣಗೆ ಸಿಗಲಿಲ್ಲ ಜಾಮೀನು!

  • ಡಬಲ್ ಮರ್ಡರ್‌ಗೆ ಟ್ವಿಸ್ಟ್; ಕಣ್ಣಮುಂದೆ ಮಗಳನ್ನ ಚುಚ್ಚಿಕೊಂದ ಪ್ರೇಮಿಯನ್ನ ಕಲ್ಲಿನಿಂದ ಚಚ್ಚಿದ ತಾಯಿ!

    ಡಬಲ್ ಮರ್ಡರ್‌ಗೆ ಟ್ವಿಸ್ಟ್; ಕಣ್ಣಮುಂದೆ ಮಗಳನ್ನ ಚುಚ್ಚಿಕೊಂದ ಪ್ರೇಮಿಯನ್ನ ಕಲ್ಲಿನಿಂದ ಚಚ್ಚಿದ ತಾಯಿ!

    ಬೆಂಗಳೂರು: ಜೆಪಿನಗರದ ಸಾರಕ್ಕಿ ಪಾರ್ಕ್‍ನಲ್ಲಿ (Sarakki Park) ನಡೆದ ಜೋಡಿ ಕೊಲೆಗೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಇಂದು ಸಂಜೆ 4:15ರ ಸುಮಾರಿಗೆ ಪಾರ್ಕ್‍ನಲ್ಲಿ 25 ವರ್ಷದ ಅನುಷಾಳನ್ನು ಕೊಚ್ಚಿ ಕೊಂದ್ರೆ, 46 ವರ್ಷದ ಸುರೇಶ್‍ನನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

    ಟ್ವಿಸ್ಟ್ ಏನು..?: ಸುರೇಶ್ ಮತ್ತು ಅನುಷಾಳಿಗೆ ಐದು ವರ್ಷಗಳಿಂದ ಪರಿಚಯವಿದ್ದು, ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಸುರೇಶ್, ನನಗೆ ಮದುವೆಯಾಗಿಲ್ಲ ಎಂದು ಅನುಷಾಳನ್ನ ನಂಬಿಸಿ ಪ್ರೀತಿಸಿದ್ದ. ಆದರೆ ಕಳೆದ ಒಂದು ವರ್ಷದ ಹಿಂದೆ ಅನುಷಾಗೆ ಸುರೇಶ್ ಬಗ್ಗೆ ಗೊತ್ತಾಗಿತ್ತು. ಈತನಿಗೆ ಮದುವೆಯಾಗಿ ಮಕ್ಕಳಿವೆ ಎಂದು ತಿಳಿದುಕೊಂಡಿದ್ದ ಅನುಷಾ ಬಳಿಕ ಇವೆಂಟ್ ಮ್ಯಾನೆಜ್ಮೆಂಟ್ ಬಿಟ್ಟು ಹೋಂ ನರ್ಸಿಂಗ್ (ಮನೆಯಲ್ಲಿ ವಯಸ್ಸಾಗಿದ್ದವರ ಶುಶ್ರೂಷೆ) ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಳು. ಇದಾಗಿಯೂ ಸುರೇಶ್ ಅನುಷಾಳ ಬಿಡಲು ಒಪ್ಪಿರಲಿಲ್ಲ. ಇದನ್ನೂ ಓದಿ: ಬೆಂಗ್ಳೂರಲ್ಲಿ ಡಬಲ್ ಮರ್ಡರ್- ಪಾರ್ಕ್‍ನಲ್ಲಿ ಕುಳಿತಿದ್ದ ಜೋಡಿಯ ಬರ್ಬರ ಕೊಲೆ

    ಸುರೇಶ್ ವರ್ತನೆಯಿಂದ ಬೇಸತ್ತ ಅನುಷಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಸುರೇಶ್‍ಗೆ ಬುದ್ಧಿ ಹೇಳಿ ಅಂತಾ ಅನುಷಾ ಜೆಪಿ ನಗರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಳು. ಸುರೇಶ್ ಎಂಬಾತ ತನಗೆ ಪರಿಚಯ ಇದ್ದು ತನ್ನನ್ನು ಪೀಡಿಸುತ್ತಿದ್ದಾನೆ ಈತನಿಗೆ ವಾರ್ನ್ ಮಾಡಿ ಎಂದು ಕೇಳಿಕೊಂಡಿದ್ದಳು. ಹೀಗಾಗಿ ಪೊಲೀಸರು ಇಬ್ಬರನ್ನು ಕರೆದು ಸುರೇಶ್ ಗೆ ವಾರ್ನ್ ಮಾಡಿ ಮುಂದೆ ಯುವತಿಯ ತಂಟೆಗೆ ಬಾರದಂತೆ ಸೂಚಿಸಿದ್ದರು. ಈ ಸಂಬಂಧ ಇಂದು ಬೆಳಗ್ಗೆ ಜೆಪಿ ನಗರದ ಠಾಣೆಯಲ್ಲಿ ಸುರೇಶ್ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಬಂದಿದ್ದ. ಇದನ್ನೂ ಓದಿ: ಹುಬ್ಬಳ್ಳಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯ ಹತ್ಯೆ – ಯುವಕ ಅರೆಸ್ಟ್‌

    ಇದಾದ ಬಳಿಕ ಕೊನೆಯದಾಗಿ ಭೇಟಿ ಮಾಡಿ ಮಾತಾಡಬೇಕು ಎಂದು ಅನುಷಾಳನ್ನು ಪಾರ್ಕ್ ಗೆ ಕರೆದಿದ್ದಾನೆ. ಸುರೇಶ್ ಭೇಟಿ ಮಾಡುವ ಮೊದಲು ಅನುಷಾ ತನ್ನ ತಾಯಿ ಗೀತಾಳಿಗೂ ಮಾಹಿತಿ ನೀಡಿ ಬಂದಿದ್ದಳು. ಅನುಷಾ ಬಂದು ಮಾತನಾಡುತ್ತಿರುವಾಗ ಸುರೇಶ್ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ಸುರೇಶ್ ಮಗಳಿಗೆ ಚಾಕುವಿನಿಂದ ಇರಿಯುತ್ತಿರುವಾಗ ಪಾರ್ಕ್ ಗೆ ಎಂಟ್ರಿ ಕೊಟ್ಟಿದ್ದ ಅನುಷಾ ತಾಯಿ ಗೀತಾ, ನನ್ನ ಮಗಳಿಗೆ ಚುಚ್ಚಬೇಡ ಬಿಡು ಬಿಡು ಎಂದು ಕೇಳಿಕೊಂಡರು. ಆದರೆ ಯಾವಾಗ ಎರಡು ಮೂರು ಬಾರಿ ಸುರೇಶ್ ಅನುಷಾಳಿಗೆ ಇರಿದಿದ್ದನೋ, ಆಗ ಗೀತಾ ಅವರು ಅಲ್ಲೇ ಇದ್ದ ಸಿಮೆಂಟ್ ಇಟ್ಟಿಗೆಯನ್ನು ಸುರೇಶ್ ತಲೆ ಮೇಲೆ ಎತ್ತಿ ಹಾಕಿದ್ದಾರೆ. ಪರಿಣಾಮ ಅನುಷಾ ಜೊತೆ ಸುರೇಶ್ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

  • ಡಬಲ್‌ ಮರ್ಡರ್‌ ಮಾಡಿ ಕೊಳಚೆಯಲ್ಲಿ ಅವಿತಿದ್ದವನ ಬಂಧನ

    ಡಬಲ್‌ ಮರ್ಡರ್‌ ಮಾಡಿ ಕೊಳಚೆಯಲ್ಲಿ ಅವಿತಿದ್ದವನ ಬಂಧನ

    ಮುಂಬೈ: ವ್ಯಕ್ತಿಯೊಬ್ಬ ಡಬಲ್‌ ಮರ್ಡರ್‌ ಮಾಡಿ ನಂತರ ಅರಣ್ಯ ಪ್ರದೇಶದಲ್ಲಿರುವ ಕೊಳಚೆ ಗುಂಡಿಯಲ್ಲಿ ಅವಿತುಕೊಂಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಆರೋಪಿಯನ್ನು ಕಿಶೋರ್ ಕುಮಾರ್ ಮಂಡಲ್ ಎಂದು ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿರುವ ಈತ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ (Palghar, Maharashtra) ಬೋಯಿಸರ್‌ನ ಕೂಡನ್ ಎಂಬ ಕುಗ್ರಾಮದಲ್ಲಿ ಜೋಡಿ ಕೊಲೆ ಮಾಡಿದ್ದಾನೆ. ಇಬ್ಬರು ಹಿರಯ ನಾಗರೀಕರನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ. ಇದನ್ನೂ ಓದಿ: ರಾಮೇಶ್ವರ ಕೆಫೆಯಲ್ಲಿ ಸ್ಫೋಟ – ಸ್ಥಳಕ್ಕೆ ಭಯೋತ್ಪಾದನಾ ನಿಗ್ರಹ ದಳ ಎಂಟ್ರಿ

    ಇಬ್ಬರ ಬರ್ಬರ ಕೊಲೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ಈ ವೇಳೆ ಕಿಶೋರ್‌ ಸ್ಥಳದಿಂದ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದರು.

    ಇತ್ತ ಆರೋಪಿ ಅರಣ್ಯ ಪ್ರದೇಶವೊಂದರ ಕೊಳಚೆ ಗುಂಡಿಯಲ್ಲಿ ಅಡಗಿ ಕುಳಿತಿರುವ ಮಾಹಿತಿ ಸಿಕ್ಕಿದೆ. ಅಂತೆಯೇ ಸ್ಥಳಕ್ಕೆ ತೆರಳಿ ಕೊಳಚೆಯಿಂದ ಆತನನ್ನು ಹಿಡಿದು ತಂದಿರುವುದಾಗಿ ಫಾಲ್ಗರ್‌ ಪೊಲೀಸರು ತಿಳಿಸಿದ್ದಾರೆ.

  • ಬೆಂಗಳೂರಿನ ಕುಂಬಾರಪೇಟೆಯಲ್ಲಿ ಡಬಲ್ ಮರ್ಡರ್ – ಕೊಲೆ ಮಾಡಿ ತಾನೇ ಶರಣಾದ ಭೂಪ

    ಬೆಂಗಳೂರಿನ ಕುಂಬಾರಪೇಟೆಯಲ್ಲಿ ಡಬಲ್ ಮರ್ಡರ್ – ಕೊಲೆ ಮಾಡಿ ತಾನೇ ಶರಣಾದ ಭೂಪ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡಬಲ್ ಮರ್ಡರ್ (Double Murder) ನಡೆದಿದ್ದು, ಮತ್ತೆ ಸ್ಥಳೀಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

    ಬೆಂಗಳೂರಿನ ಕುಂಬಾರಪೇಟೆಯ ಹರಿ ಮಾರ್ಕೆಟಿಂಗ್ (Kumbarapete Hari Marketing) ಒಳಗೆ ಹತ್ಯೆ ನಡೆದಿದ್ದು, ಮೃತರನ್ನು ಸುರೇಶ್ (55) ಹಾಗೂ ಮಹೇಂದ್ರ (68) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿ ಭದ್ರ ಎಂದು ಹೇಳಲಾಗಿದೆ. ಇದನ್ನೂ ಓದಿ: ಶ್ರೀನಗರದಲ್ಲಿ ಪಂಜಾಬ್‌ ನಿವಾಸಿಯನ್ನು ಗುಂಡಿಟ್ಟು ಕೊಂದ ಭಯೋತ್ಪಾದಕರು

    ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದ್ದು, ಸಂಬಂಧಿ ಭದ್ರ ಎಂಬಾತ ಚಾಕುವಿನಿಂದ ಇರಿದು, ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭೂಕಬಳಿಕೆ ಆರೋಪ ಪ್ರಕರಣ – ಜೇಡ್ರಳ್ಳಿ ಕೃಷ್ಣಪ್ಪಗೆ ಜಾಮೀನು ಮಂಜೂರು!

    ಸದ್ಯ ಹಲಸೂರು ಗೇಟ್ ಪೊಲೀಸರು (Halasuru Gate Police) ಸ್ಥಳಕ್ಕೆ ದೌಡಾಯಿಸಿದ್ದು, ಫೋರೆನ್ಸಿಕ್ (FSL) ವಿಭಾಗದ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿದ್ದು, ಮೃತದೇಹಗಳನ್ನ ರವಾನೆ ಮಾಡಲಾಗುತ್ತಿದೆ. ಸೆಂಟ್ರಲ್ ಡಿಸಿಪಿ ಶೇಖರ್ ತೆಕ್ಕಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾದ ನಟಿ ಕಾಸಮ್ಮಲ್ ಮಗನಿಂದ್ಲೇ ಬರ್ಬರ ಹತ್ಯೆ

    ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ವಿಭಾಗದ ಡಿಸಿಪಿ ಶೇಖರ್, ಜೋಡಿ ಕೊಲೆ ಮಾಡಿರೋ ಬಗ್ಗೆ ಮಾಹಿತಿ ಬಂದಿತ್ತು. ಆಸ್ತಿ ವಿಚಾರಕ್ಕೆ ಕೊಲೆ ಮಾಡಲಾಗಿದೆ ಅಂತ ಪ್ರಾಥಮಿಕವಾಗಿ ತಿಳಿದುಬಂದಿದೆ. ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ಕೊಲೆ ಮಾಡಿದ ಆರೋಪಿ, ಕೊಲೆಯಾದವರಿಗೆ ದೂರದ ಸಂಬಂಧಿ ಎಂದು ತಿಳಿಸಿದ್ದಾರೆ.

  • ಡಬಲ್ ಮರ್ಡರ್‌ಗೂ  ಹಿಂದುತ್ವ ಲಿಂಕ್- ಸುಳ್ಳು ಸುದ್ದಿ ಹಬ್ಬಿಸದಂತೆ ಖಾಕಿ ವಾರ್ನಿಂಗ್

    ಡಬಲ್ ಮರ್ಡರ್‌ಗೂ ಹಿಂದುತ್ವ ಲಿಂಕ್- ಸುಳ್ಳು ಸುದ್ದಿ ಹಬ್ಬಿಸದಂತೆ ಖಾಕಿ ವಾರ್ನಿಂಗ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Double Murder in Bengaluru) ವೈಯಕ್ತಿಕ ದ್ವೇಷದ ಕಾರಣದಿಂದ ಮಂಗಳವಾರ ನಡೆದಿದ್ದ ಇಬ್ಬರು ಉದ್ಯಮಿಗಳ ಕೊಲೆ ಪ್ರಕರಣಕ್ಕೆ ಬಿಜೆಪಿ (BJP) ನಾಯಕರು ಬೇರೆಯದ್ದೇ ಆಯಾಮ ನೀಡಲು ಪ್ರಯತ್ನಿಸಿದ್ದಾರೆ. ಈ ಜೋಡಿ ಕೊಲೆಯಲ್ಲಿ ರಾಷ್ಟ್ರವಾದವನ್ನು, ಹಿಂದುತ್ವವನ್ನು ಎಳೆತಂದಿದ್ದಾರೆ. ಇದನ್ನೂ ಓದಿ: ಡಬಲ್‌ ಮರ್ಡರ್‌ ಬಳಿಕ ಪಬ್ಲಿಕ್‌ ಟಿವಿ ಸುದ್ದಿಯ ಸ್ಟೇಟಸ್ – ವೃತ್ತಿ ವೈಷಮ್ಯವೇ ಕೊಲೆಗೆ ಕಾರಣ?

    ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದ್ಮೇಲೆ ಟಾರ್ಗೆಟ್ ಕಿಲ್ಲಿಂಗ್ ನಡೀತಿದೆ ಎಂದು ಬಿಜೆಪಿಯ ಸಿಟಿ ರವಿ (CT Ravi) ಆರೋಪಿಸಿದ್ದಾರೆ. ಫಣೀಂದ್ರ, ವಿನುಕುಮಾರ್ ಹತ್ಯೆ ಮೇಲ್ನೋಟಕ್ಕೆ ವೈಯಕ್ತಿಕ ಅನಿಸುತ್ತದೆ. ಆದರೆ ಇವರೆಲ್ಲರೂ ರಾಷ್ಟ್ರೀಯ ಚಿಂತನೆಯಲ್ಲಿ ಗುರುತಿಸಿಕೊಂಡ ಜನ. ಹಾಗಿದ್ದಾಗ ಸರಣಿ ಹತ್ಯೆಯ ಹಿಂದೆ ಪಿತೂರಿ ಇದ್ಯಾ ಎಂಬ ಅನುಮಾನ ಕಾಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಡಬಲ್ ಮರ್ಡರ್ ಬಳಿಕ ಹೋಟೆಲ್ ರೂಂನಲ್ಲಿ ತಣ್ಣಗೆ ಎಣ್ಣೆ ಪಾರ್ಟಿ – ಫೆಲಿಕ್ಸ್ ಸೇರಿ ಮೂವರು ಲಾಕ್

    ಸಿಟಿ ರವಿ ಮಾತ್ರವಲ್ಲ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನೀಲ್ ದಿಯೋಧರ್ ಕೂಡ ಟ್ವೀಟ್ ಮಾಡಿ, ಬೆಂಗಳೂರಲ್ಲಿ ಹಿಂದೂ ಶ್ರೀಗಳ ಹತ್ಯೆಯಾಗಿದೆ. ಟಿಪ್ಪು ಸಿದ್ದಾಂತಿಗಳಿಂದ ಕರ್ನಾಟಕಕ್ಕೆ ಅಪಾಯಕಾರಿ ಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ, ಬೆಂಗಳೂರಲ್ಲಿ ಹಿಂದೂ ನಾಯಕನ ಹತ್ಯೆ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಜೈನಮುನಿ ಹಂತಕನ ಮನೆಯ ಮೂಕಪ್ರಾಣಿಗಳ ಪಾಲನೆ- ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಈ ಬೆನ್ನಲ್ಲೇ ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ನೆಟ್ಟಿಗರಿಗೆ ಬೆಂಗಳೂರು ಪೊಲೀಸರು ವಾರ್ನಿಂಗ್ ನೀಡಿದ್ದಾರೆ. ಇಂತಹ ಸೂಕ್ಷ್ಮ ವಿಚಾರವನ್ನು ಹಂಚಿಕೊಳ್ಳುವಾಗ ಎಚ್ಚರಿಕೆ ಇಂದ ಇರಿ, ಈ ಪ್ರಕರಣದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ತನಿಖೆ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಬಲ್ ಮರ್ಡರ್ ಬಳಿಕ ಹೋಟೆಲ್ ರೂಂನಲ್ಲಿ ತಣ್ಣಗೆ ಎಣ್ಣೆ ಪಾರ್ಟಿ – ಫೆಲಿಕ್ಸ್ ಸೇರಿ ಮೂವರು ಲಾಕ್

    ಡಬಲ್ ಮರ್ಡರ್ ಬಳಿಕ ಹೋಟೆಲ್ ರೂಂನಲ್ಲಿ ತಣ್ಣಗೆ ಎಣ್ಣೆ ಪಾರ್ಟಿ – ಫೆಲಿಕ್ಸ್ ಸೇರಿ ಮೂವರು ಲಾಕ್

    ಬೆಂಗಳೂರು: ಹಾಡಹಗಲೇ ಖಾಸಗಿ ಕಂಪನಿಯ ಸಿಇಒ ಹಾಗೂ ಎಂಡಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಮೂವರು ಕಿರಾತಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಡಬಲ್ ಮರ್ಡರ್ (Double Murder) ಬಳಿಕ ಆರೋಪಿಗಳು ಎಣ್ಣೆ ಪಾರ್ಟ್ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.

    ಮಂಗಳವಾರ ಬೆಂಗಳೂರಿನ (ಭೆನಗಾಲುರು) ಅಮೃತಹಳ್ಳಿ (Amruthahalli) ಠಾಣಾ ವ್ಯಾಪ್ತಿಯಲ್ಲಿ ಭೀಕರ ಡಬಲ್ ಮರ್ಡರ್ ನಡೆದಿತ್ತು. ಆರೋಪಿ ಜೋಕರ್ ಫೆಲಿಕ್ಸ್ (Joker Felix) ತನ್ನಿಬ್ಬರು ಸಹಚರರೊಂದಿಗೆ ಸೇರಿ ಏರೋನಾಟಿಕಲ್ಸ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಸಿಇಒ ವಿನುಕುಮಾರ್‌ನ ಹತ್ಯೆ ನಡೆಸಿದ್ದರು.

    ಕೊಲೆ ಮಾಡಿದ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಹೋದ ಹಂತಕರು ಕುಣಿಗಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಫೆಲಿಕ್ಸ್, ವಿನಯ್ ರೆಡ್ಡಿ ಹಾಗೂ ಶಿವು ಬಂಧಿತ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ಡಬಲ್‌ ಮರ್ಡರ್‌ ಬಳಿಕ ಪಬ್ಲಿಕ್‌ ಟಿವಿ ಸುದ್ದಿಯ ಸ್ಟೇಟಸ್ – ವೃತ್ತಿ ವೈಷಮ್ಯವೇ ಕೊಲೆಗೆ ಕಾರಣ?

    ಆರೋಪಿಗಳು ಸ್ಥಳದಿಂದ ಕ್ಯಾಬ್‌ನಲ್ಲಿ ಎಸ್ಕೇಪ್ ಆದ ಬಳಿಕ ಮೆಜೆಸ್ಟಿಕ್ ತೆರಳಿ ಅಲ್ಲಿ ರೈಲು ಹತ್ತಿದ್ದರು. ಅಲ್ಲಿಂದ ಕುಣಿಗಲ್ ಹೋಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿದ್ದರು. ಬೆಳಗ್ಗೆ ಎದ್ದು ವಕೀಲರ ಮೂಲಕ ಕೋರ್ಟ್‌ಗೆ ಶರಣಾಗುವ ಪ್ಲಾನ್ ಅನ್ನು ಆರೋಪಿಗಳು ಮಾಡಿದ್ದರು. ಅಷ್ಟರಲ್ಲಾಗಲೇ ಪೊಲೀಸರು ಬಂದು ಆರೋಪಿಗಳನ್ನು ಬಂಧಿಸಿದ್ದಾರೆ.

    ಪೊಲೀಸರು ಅವರ ರೂಂಗೆ ಎಂಟ್ರಿ ಕೊಟ್ಟಾಗ ಆರೋಪಿಗಳು ತಣ್ಣಗೆ ಎಣ್ಣೆ ಹೊಡೆಯುತ್ತಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಡಬಲ್‌ ಮರ್ಡರ್‌: ನಂಬಿಕೆ ದ್ರೋಹಿಗಳನ್ನ ಮುಗಿಸ್ತೀನಿ ಅಂತಾ ಸ್ಟೇಟಸ್‌ ಹಾಕಿದ್ದ ಹಂತಕ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಬಲ್‌ ಮರ್ಡರ್‌ ಬಳಿಕ ಪಬ್ಲಿಕ್‌ ಟಿವಿ ಸುದ್ದಿಯ ಸ್ಟೇಟಸ್ – ವೃತ್ತಿ ವೈಷಮ್ಯವೇ ಕೊಲೆಗೆ ಕಾರಣ?

    ಡಬಲ್‌ ಮರ್ಡರ್‌ ಬಳಿಕ ಪಬ್ಲಿಕ್‌ ಟಿವಿ ಸುದ್ದಿಯ ಸ್ಟೇಟಸ್ – ವೃತ್ತಿ ವೈಷಮ್ಯವೇ ಕೊಲೆಗೆ ಕಾರಣ?

    ಬೆಂಗಳೂರು: ಹಾಡಹಗಲೇ ಖಾಸಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯನ್ನು ಹಾಡ ಹಗಲೇ ಮಾಜಿ ಸಹೋದ್ಯೋಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ. ವೃತ್ತಿ ವೈಷಮ್ಯವೇ ಈ ಕೊಲೆಗೆ ಕಾರಣ ಶಂಕೆ ವ್ಯಕ್ತವಾಗಿದೆ.

    ಮಂಗಳವಾರ ಬೆಂಗಳೂರಿನ (Bengaluru) ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಜೋಕರ್ ಫಿಲಿಕ್ಸ್ (Joker Felix) ತನ್ನಿಬ್ಬರು ಸಹಚರರೊಂದಿಗೆ ಸೇರಿ ಏರೋನಾಟಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಸಿಇಒ ವಿನುಕುಮಾರ್‌ನನ್ನು ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದ.

    ಇದೀಗ ಕೊಲೆಗೆ ವೃತ್ತಿ ವೈಷಮ್ಯವೇ ಕಾರಣ ಆಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಇಂಟರ್‌ನೆಟ್ ಪೂರೈಸುವ ಖಾಸಗಿ ಬ್ರಾಡ್ ಬ್ರ್ಯಾಂಡ್ ಕಂಪನಿಯಲ್ಲಿ ಫಣೀಂದ್ರ ಹಾಗೂ ವಿನುಕುಮಾರ್ ಕೆಲಸ ಮಾಡುತ್ತಿದ್ದರು. ಬಳಿಕ ಆ ಕಂಪನಿ ತೊರೆದು 2022ರ ನವೆಂಬರ್‌ನಲ್ಲಿ ಏರೋನಿಕ್ಸ್ ಮೀಡಿಯಾ ಪ್ರೈ.ಲಿ. ಹೆಸರಿನಲ್ಲಿ ಪಾಲುದಾರಿಕೆಯಲ್ಲಿ ಸ್ವಂತ ಬ್ರಾಡ್ ಬ್ಯಾಂಡ್ ಕಂಪನಿಯನ್ನು ತೆರೆದರು. ಈ ಕಂನಿಯಲ್ಲಿ 10 ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

    ಕೇವಲ 7-8 ತಿಂಗಳಲ್ಲಿ ಫಣೀಂದ್ರ ಕಂಪನಿ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆ ಕಂಡಿತು. ಈ ಹಿಂದೆ ಅವರು ಕೆಲಸ ಮಾಡುತ್ತಿದ್ದ ಕಂಪನಿಗೆ ಫಣೀಂದ್ರನ ಕಂಪನಿ ತೀವ್ರ ಪೈಪೋಟಿ ನೀಡಲಾರಂಭಿಸಿತು. ಇದರಿಂದ ಆ ಕಂಪನಿಗೆ ನಷ್ಟ ಉಂಟಾಗಿ ಎರಡು ಕಂಪನಿಗಳ ನಡುವೆ ವೃತ್ತಿ ವೈಷಮ್ಯ ಮೂಡಿತ್ತು ಎನ್ನಲಾಗಿದೆ.

    ಬನ್ನೇರುಘಟ್ಟ ರಸ್ತೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಫಣೀಂದ್ರ ಅವರಿಗೆ ಆರೋಪಿ ಫಿಲಿಕ್ಸ್ ಸಹೋದ್ಯೋಗಿಯಾಗಿದ್ದ. ಈತನ ವರ್ತನೆ ಸರಿ ಇಲ್ಲದ್ದಕ್ಕೆ ಫಣೀಂದ್ರ ಅವರು ಆತನನ್ನು ಕೆಲಸದಿಂದ ತೆಗೆದಿದ್ದರು.

    ಡಬಲ್ ಮರ್ಡರ್ ಮಾಡಿದ್ದು ಹೇಗೆ?
    ಆರೋಪಿ ಫಿಲಿಕ್ಸ್ ಹಾಗೂ ಆತನ ಇಬ್ಬರು ಸಹಚರರು ಮಂಗಳವಾರ ಅಮೃತಹಳ್ಳಿಯ ಏರೊನಿಕ್ಸ್ ಮೀಡಿಯಾ ಪ್ರೈವೆಟ್ ಲಿಮಿಟೆಡ್‌ಗೆ ಹೋಗಿದ್ದರು. ಕಂಪನಿಯ ಎಂಡಿ ಫಣೀಂದ್ರ ಜೊತೆ ಹಳೆ ಪರಿಚಯದ ಹಿನ್ನೆಲೆ ಅರ್ಧ ಗಂಟೆ ಮಾತಾಡಿದ್ದ. ಆ ಬಳಿಕ ಲಾಂಗ್‌ನಿಂದ ಫಣೀಂದ್ರ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಇದನ್ನು ತಡೆಯಲು ಬಂದ ವಿನುಕುಮಾರ್ ಮೇಲೂ ಸಹ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಏರೊನಿಕ್ಸ್ ಕಂಪನಿಯ ಸಿಬ್ಬಂದಿ ಇದನ್ನು ತಡೆಯುವ ಪ್ರಯತ್ನ ಮಾಡಿದ್ರೂ ಹೆದರಿಸಿ ಕೃತ್ಯವೆಸಗಿದ್ದಾರೆ. ಇವರನ್ನು ಹಿಡಿಯಬೇಕು ಎಂದು ಕಚೇರಿಯ ಬಾಗಿಲು ಹಾಕುವ ಯತ್ನ ಮಾಡಿದಾಗ ಹಿಂದಿನ ಬಾಗಿಲಿನಿಂದ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಹಣೆಗೆ ಬಿಂದಿ ಧರಿಸಿ ಶಾಲೆಗೆ ಹೋದ ವಿದ್ಯಾರ್ಥಿನಿಗೆ ಥಳಿತ – ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

    ಜೋಕರ್ ಫಿಲಿಕ್ಸ್ ಯಾರು?
    ಭೀಕರ ಡಬಲ್ ಮರ್ಡರ್ ಮಾಡಿದಾತ ಜೋಕರ್ ಫೆಲಿಕ್ಸ್ ಟಿಕ್ ಟಾಕ್ ಸ್ಟಾರ್. ಅಲ್ಲದೆ ರ‍್ಯಾಪರ್ ಕೂಡ. ಚಿತ್ರ ವಿಚಿತ್ರ ವೀಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದ. ನಟ ಉಪೇಂದ್ರ ಜೊತೆ ಪೋಸ್ ಕೊಟ್ಟು ಪ್ರಜಾಕೀಯದ ಬಗ್ಗೆ ಮಾತಾಡಿದ್ದ. ಇದಲ್ಲದೆ ಸ್ಮಶಾನದಲ್ಲಿ ಹುಡುಗಿಗೆ ತಾಳಿ ಕಟ್ಟಿ ಸಖತ್ ಫೇಮಸ್ ಆಗಿದ್ದ. ಈತನ ಚಿತ್ರ ವಿಚಿತ್ರ ಮೇಕಿಂಗ್ ಫೋಟೊ ವೀಡಿಯೊಗಳು ಈತನಿಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಜ್ ಕ್ರಿಯೇಟ್ ಮಾಡಿತ್ತು.

    ಕೊಲೆ ಬಳಿಕ ಇನ್ಸ್ಟಾಗ್ರಾಮ್ ಸ್ಟೇಟಸ್:
    ಜೋಕರ್ ಫಿಲಿಕ್ಸ್‌ನನ್ನು ಹುಡುಕೋಕೆ ಪೊಲೀಸರು ಎಲ್ಲಾ ಕಡೆ ತಲಾಶ್ ನಡೆಸುತ್ತಿದ್ದರೆ ಈತ ಮಾತ್ರ ಕೂಲ್ ಆಗಿ ಮತ್ತೆ ಇನ್ಸ್ಟಾಗ್ರಾಮ್‌ನಲ್ಲಿ ಸ್ಟೇಟಸ್ ಹಾಕಿದ್ದ. ಪಬ್ಲಿಕ್ ಟಿವಿಯ ವೆಬ್ ನ್ಯೂಸ್‌ನಲ್ಲಿ ಪ್ರಕಟವಾದ ಬೆಂಗಳೂರಿನಲ್ಲಿ ಹಾಡ ಹಗಲೇ ಡಬಲ್ ಮರ್ಡರ್ ಎನ್ನುವ ಸ್ಕ್ರೀನ್ ಶಾಟ್ ಅನ್ನು ಸ್ಟೇಟಸ್ ಹಾಕಿದ್ದ. ಕೊಲೆ ನಡೆಸಿದ ಬಳಿಕ ಏನೇನಾಗುತ್ತಿದೆ ಎನ್ನುವ ಎಲ್ಲಾ ಬೆಳವಣಿಗೆಗಳನ್ನು ಫಿಲಿಕ್ಸ್ ಗಮನಿಸೊ ಕೆಲಸ ಮಾಡಿದ್ದಾನೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸೇತುವೆ ದಾಟುವಾಗ ಆಯತಪ್ಪಿ ನದಿಗೆ ಬಿದ್ದಿದ್ದ ಇಬ್ಬರ ಶವ ಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಬಲ್ ಮರ್ಡರ್ ಕೇಸ್ – ಮಗಳ ನಾಲಗೆಯನ್ನು ತುಂಡರಿಸಿ ತಿಂದಳು ತಾಯಿ

    ಡಬಲ್ ಮರ್ಡರ್ ಕೇಸ್ – ಮಗಳ ನಾಲಗೆಯನ್ನು ತುಂಡರಿಸಿ ತಿಂದಳು ತಾಯಿ

    ತಿರುಪತಿ: ಆಂಧ್ರದ ಮದನಪಲ್ಲಿಯಲ್ಲಿ ಜನವರಿ 24ರಂದು ಹೆತ್ತವರೇ ಇಬ್ಬರು ಮಕ್ಕಳನ್ನು ಕೊಂದ ಪ್ರಕರಣದಲ್ಲಿ ಬೆಚ್ಚಿಬೀಳುವ ವಿಚಾರಗಳು ಬೆಳಕಿಗೆ ಬರುತ್ತಿವೆ. ತನ್ನನ್ನು ತಾಯಿ ಕಾಳಿಯ ಅಪರಾವತಾರ ಎಂದು ಭಾವಿಸಿಕೊಂಡ ನನ್ನ ಪತ್ನಿ ಪದ್ಮಜ, ದೊಡ್ಡ ಮಗಳು ಅಲೇಖ್ಯಾಳನ್ನು ಕೊಂದ ನಂತರ, ನಾಲಗೆಯನ್ನು ಕಟ್ ಮಾಡಿಕೊಂಡು ತಿಂದುಬಿಟ್ಟಳು’ ಎಂದು ಪುರುಷೋತ್ತಮ ನಾಯ್ಡು ಕಣ್ಣೀರಿಡುತ್ತಾ ವೈದ್ಯರ ಮುಂದೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಈ ವಿಚಾರದಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

    ಪೂರ್ವಜನ್ಮದಲ್ಲಿ ನಂಬಿಕೆ ಇರಿಸಿದ್ದ ಅಲೇಖ್ಯಾ, ಅಪ್ಪ ನೀನು ಮಹಾಭಾರತ ನಡೆದಾಗ ಅರ್ಜುನನಾಗಿ ಜನಿಸಿದ್ದೆ. ಕಾಲೇಜಿಗೆ ಹೋಗಿ ಪಾಠ ಮಾಡುವುದು ನಿನ್ನ ವೃತ್ತಿ ಅಲ್ಲ. ಪಾಂಡವರ ಪರವಾಗಿ ಮುಂದೆ ನಿಂತು ನಡೆಸಿದ ಹೋರಾಟ ಸ್ಫೂರ್ತಿಯನ್ನು ಈಗಲೂ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳುತ್ತಿದ್ದಳು ಎಂದು ಪುರುಷೋತ್ತಮ್ ನಾಯ್ಡು ವೈದ್ಯರಲ್ಲಿ ಹೇಳಿಕೊಂಡಿದ್ದಾರೆ.

    ಕಲಿಯುಗ ಅಂತ್ಯವಾಗಿ ಸತ್ಯ ಯುಗ ಆರಂಭವಾಗಲಿದೆ. ಕೊರೊನಾ ಕೂಡ ಇದರ ಸೂಚಕ ಎಂದು ಮಗಳು ಅಲೇಖ್ಯಾ ಹೇಳುತ್ತಿದ್ದಳು. “ನನ್ನ ಮಗಳ ಮಾತುಗಳೆಲ್ಲಾ ಸತ್ಯ ನಾನು ಓದಿದ ಆಧ್ಯಾತ್ಮಿಕ ಪುಸ್ತಗಳಲ್ಲಿಯೂ ಈ ವಿಷಯಗಳೇ ಇವೆ” ಎಂದು ಪುರುಷೋತ್ತಮ್ ನಾಯ್ಡು ವೈದ್ಯರಲ್ಲಿ ಹೇಳಿದ್ದಾರೆ.

    ವೈದ್ಯರ ಮುಂದೆಯೂ ಮಂತ್ರಪಠಣ ಮಾಡುತ್ತಿದ್ದ ಪದ್ಮಜ, “ನನ್ನ ಮಕ್ಕಳು ಮತ್ತೆ ಬದುಕಿ ಬರುತ್ತಾರೆ.. ಮನೆಗೆ ವಾಪಸ್ ಹೋಗಬೇಕು.. ಜೈಲಲ್ಲಿ ನನ್ನ ಜೊತೆ ಇದ್ದ ಶಿವ, ಕೃಷ್ಣ ಇಲ್ಲಿ ಕಾಣುತ್ತಿಲ್ಲ” ಎಂದು ಬಡಬಡಿಸುತ್ತಿದ್ದರು ಎನ್ನಲಾಗಿದೆ.

    ಪುರುಷೋತ್ತಮ್ ನಾಯ್ಡು ಮತ್ತು ಪದ್ಮಜ ಇಬ್ಬರಿಗೂ ಮಾನಸಿಕ ಸಮಸ್ಯೆಯ ಲಕ್ಷಣಗಳು ಹೆಚ್ಚಿವೆ. ಸದ್ಯದ ಸಂದರ್ಭದಲ್ಲಿ ಜೈಲಿನಂತಹ ವಾತಾವರಣದಲ್ಲಿ ಅವರಿಗೆ ಚಿಕಿತ್ಸೆ ನೀಡಬೇಕು ಹೀಗಾಗಿ, ವಿಶಾಖಪಟ್ಟಣದ ಸರ್ಕಾರಿ ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿರುಪತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಇಬ್ಬರನ್ನು ಶುಕ್ರವಾರ ಮದನಪಲ್ಲಿಯ ಸಬ್ ಜೈಲಿನಿಂದ ತಿರುಪತಿಯ ಮೆಂಟಲ್ ಆಸ್ಪತ್ರೆಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗಿತ್ತು.

  • ಮಹಿಳೆಯರ ಡಬಲ್ ಮರ್ಡರ್ ಪ್ರಕರಣಕ್ಕೆ ಸಿಕ್ತು ಹೊಸ ಟ್ವಿಸ್ಟ್

    ಮಹಿಳೆಯರ ಡಬಲ್ ಮರ್ಡರ್ ಪ್ರಕರಣಕ್ಕೆ ಸಿಕ್ತು ಹೊಸ ಟ್ವಿಸ್ಟ್

    ಬೀದರ್: ಇಂದು ಜಿಲ್ಲೆಯ ಶಾಹಗಂಜ್ ಪ್ರದೇಶದ ಹನುಮಾನ್ ಮಂದಿರದ ಬಳಿ ನಡೆದ ಮಹಿಳೆಯರ ಡಬಲ್ ಮರ್ಡರ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.

    ಕೊಲೆ ಮಾಡಿದ ಆರೋಪಿಯನ್ನು ದೇವಪ್ಪ ಎಂದು ಗುರುತಿಸಲಾಗಿದೆ. ಲಲಿತಮ್ಮ (45), ದುರ್ಗಮ್ಮ(60) ಎಂಬ ಇಬ್ಬರನ್ನು ಆರೋಪಿ ದೊಣ್ಣೆಯಿಂದ ಹೊಡದು ಕೊಲೆ ಮಾಡಿದ್ದಾನೆ. ದೇವಪ್ಪ ಹನುಮಾನ್ ದೇವಸ್ಥಾನದ ಕಳ್ಳತನಕ್ಕೆ ಸಂಚು ರೂಪಿಸಿದ್ದನಂತೆ. ಈ ವೇಳೆ ಬೆಳಗ್ಗೆ ವಾಕ್ ಬಂದ ಲಲಿತಮ್ಮ ಮತ್ತು ದುರ್ಗಮ್ಮ, ಯಾರು ನೀನು? ಇಲ್ಲಿ ಏನ್ ಮಾಡ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಭಯಗೊಂಡ ಆರೋಪಿ ಕಲ್ಲು ಮತ್ತು ದೊಣ್ಣೆಯಿಂದ ಇಬ್ಬರನ್ನು ಹೊಡೆದು ಕೊಲೆ ಮಾಡಿದ್ದಾನೆ.

    ದೇವಸ್ಥಾನದ ಕಳ್ಳತನಕ್ಕೆ ಬಂದ ಆರೋಪಿ ಎಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಮಹಿಳೆಯರನ್ನು ಕೊಲೆ ಮಾಡಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆಯ ಬಳಿಕ ಪ್ರಕರಣದ ಸತ್ಯ ತಿಳಿಯಲಿದೆ ಎಂದು ಎಸ್‍ಪಿ ರವೀಂದ್ರ ಹೇಳಿದ್ದಾರೆ.

    ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv