Tag: ಡಕಾಯಿತರು

  • ಕೈ ಕಾಲು ಕಟ್ಟಿ ಹಾಕಿ ಸಿನಿಮೀಯ ರೀತಿಯಲ್ಲಿ ದರೋಡೆ

    ಕೈ ಕಾಲು ಕಟ್ಟಿ ಹಾಕಿ ಸಿನಿಮೀಯ ರೀತಿಯಲ್ಲಿ ದರೋಡೆ

    ಬೆಳಗಾವಿ: ಕೈ ಕಾಲು ಕಟ್ಟಿ ಹಾಕಿ ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ನಿನ್ನೆ ತಡರಾತ್ರಿ ವೇಳೆಯಲ್ಲಿ ನಡೆದಿದೆ.

    ಶಕುಂತಲಾ ಸಾತಪ್ಪ ಕಿಲ್ಲೆದಾರ ಎಂಬುವವರ ಮನೆಗೆ ನುಗ್ಗಿ ಮನೆಯಲ್ಲಿದ್ದ ಮೂವರ ಕೈಕಾಲು ಕಟ್ಟಿ, ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ ಕಳ್ಳತನ ಮಾಡಿದ್ದಾರೆ. ನಗರದ ಎರಡು ಮನೆಯಲ್ಲಿ ಕಳ್ಳತನವಾಗಿದೆ. ರಾಮ ಕಿಲ್ಲೆದಾರ ಎಂಬುವವರ ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿದ್ದು, ಎಂಟರಿಂದ ಹತ್ತು ಜನರ ಡಕಾಯಿತರಿಂದ ಈ ಕೃತ್ಯ ನಡೆದಿದೆ. ಇದನ್ನೂ ಓದಿ: 13ರ ಬಾಲಕಿ ಮೇಲೆ 16 ಮಂದಿಯಿಂದ ಸಾಮೂಹಿಕ ಅತ್ಯಾಚಾರ – ನೋವಿನ ಕಥೆ ಬಿಚ್ಚಿಟ್ಟ ತಂದೆ!

    ಎರಡು ಮನೆಯಲ್ಲಿ ಒಟ್ಟು 140 ಗ್ರಾಮ ಚಿನ್ನ 75 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿನಿಮೀಯ ಶೈಲಿಯಲ್ಲಿ ಪೊಲೀಸರನ್ನೇ ಕೊಲ್ಲಲು ಯತ್ನಿಸಿದ ಡಕಾಯಿತರು

    ಸಿನಿಮೀಯ ಶೈಲಿಯಲ್ಲಿ ಪೊಲೀಸರನ್ನೇ ಕೊಲ್ಲಲು ಯತ್ನಿಸಿದ ಡಕಾಯಿತರು

    ಚಿಕ್ಕಬಳ್ಳಾಪುರ: ಸಿನಿಮೀಯ ರೀತಿಯಲ್ಲಿ ಪೊಲೀಸರ ಮೇಲೆಯೇ ಡಕಾಯಿತರು ದಾಳಿ ನಡೆಸಿ, ಹತ್ಯೆ ಮಾಡಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಟ್ಟಹಳ್ಳಿ ಕ್ರಾಸ್ ಬಳಿ ತಡರಾತ್ರಿ ನಡೆದಿದೆ.

    ಬೆಂಗಳೂರಿನ ಮಹದೇವಪುರ ಪೊಲೀಸರು ಸಂಚರಿಸುತ್ತಿದ್ದ ಖಾಸಗಿ ಇನ್ನೋವಾ ಕಾರಿಗೆ ಹಿಂಬದಿಯಿಂದ ಡಕಾಯಿತರು ತಮ್ಮ ಮಾರುತಿ ಸಿಯಾಝ್ ಕಾರಿನಿಂದ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದಾರೆ.

    ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣವೊಂದರ ಸಂಬಂಧ ಬಾಗೇಪಲ್ಲಿ ಮೂಲದವರು ಎನ್ನಲಾದ ಗಿರೀಶ್ ಹಾಗೂ ಪ್ರಸಾದ್ ಬಂಧನಕ್ಕೆ ಪೊಲೀಸರು ಬೆಂಗಳೂರು ನಗರದಿಂದ ಬರುತ್ತಿದ್ದರು. ಪೊಲೀಸರು ಬರುವ ಮಾಹಿತಿ ತಿಳಿದು ಡಕಾಯಿತರ ಗ್ಯಾಂಗ್ ಪೊಲೀಸರಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಸ್ಕೆಚ್ ಹಾಕಿದ್ದಾರೆ. ಘಟನೆಯಲ್ಲಿ ಇನ್ನೋವಾ ಕಾರು ಪಲ್ಟಿಯಾಗಿದ್ದು ಅದೃಷ್ಟವಶಾತ್ ಇನ್ನೋವಾ ಕಾರಿನಲ್ಲಿದ್ದ ಪೊಲೀಸರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಅಪಘಾತದ ನಂತರ ಡಕಾಯಿತರ ಕಾರು ಸ್ವಲ್ಪ ದೂರದಲ್ಲಿ ಕೆಟ್ಟು ನಿಂತಿದ್ದು, ಕಾರು ಬಿಟ್ಟು ಡಕಾಯಿತರು ಪರಾರಿಯಾಗಿದ್ದಾರೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.