Tag: ಡಂಪಿಂಗ್ ಯಾರ್ಡ್

  • 17 ತುಣುಕುಗಳಲ್ಲಿ ಮಹಿಳೆಯ ಶವ ಪತ್ತೆ- ರುಂಡದೊಂದಿಗೆ ಆರೋಪಿ ಪರಾರಿ

    17 ತುಣುಕುಗಳಲ್ಲಿ ಮಹಿಳೆಯ ಶವ ಪತ್ತೆ- ರುಂಡದೊಂದಿಗೆ ಆರೋಪಿ ಪರಾರಿ

    – ಡಂಪಿಂಗ್ ಯಾರ್ಡ್ ನಲ್ಲಿ ಮೃತದೇಹದ ಭಾಗಗಳು ಪತ್ತೆ
    – ನಗ್ನಾವಸ್ಥೆಯಲ್ಲಿತ್ತು ಶವ

    ಲಕ್ನೋ: 17 ತುಣುಕುಗಳಲ್ಲಿ ಮಹಿಳೆಯ ಶವವೊಂದು ಪಶ್ಚಿಮ ಉತ್ತರ ಪ್ರದೇಶದಲ್ಲಿ ಸೋಮವಾರ ಪತ್ತೆಯಾಗಿದ್ದು, ಜನತೆ ಭಯದಲ್ಲಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಮಹಿಳೆಯರ ರಕ್ಷಣೆ ಮತ್ತು ಅಪರಾಧ ಚಟುವಟಿಕೆ ನಿಯಂತ್ರಿಸುವಲ್ಲಿ ಪ್ರಯತ್ನಿಸುತ್ತಿದೆ. ಆದ್ರೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಭಯಾನಕ, ಬೆಚ್ಚಿ ಬೀಳುವಂತ ಪ್ರಕರಣಗಳು ವರದಿ ಆಗುತ್ತಲೇ ಇವೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ: ಅರೆಬೆತ್ತಲೆಯಾಗಿ ಮಹಿಳೆಯ ಶವ ಪತ್ತೆ – ಅತ್ಯಾಚಾರ ನಡೆಸಿ ಕೊಲೆ ಶಂಕೆ

    ಮೀರತ್ ನಗರದ ಲಿಸಾಡಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿ ಮೃತ ಶವವನ್ನ ತುಂಡು ತುಂಡಾಗಿ ಕತ್ತರಿಸಿ, ಚಾಪೆಯಲ್ಲಿ ಸುತ್ತಿ ಡಂಪಿಂಗ್ ಯಾರ್ಡ್ ನಲ್ಲಿ ಎಸೆದಿದ್ದಾನೆ. ನಂತರ ಮಹಿಳೆಯ ಗುರುತು ಸಿಗಬಾರದೆಂಬ ಉದ್ದೇಶದಿಂದ ಆಕೆಯ ರುಂಡವನ್ನ ಜೊತೆಯಲ್ಲಿಯೇ ತೆಗೆದುಕೊಂಡು ಪರಾರಿಯಾಗಿದ್ದಾನೆ. ಇದನ್ನೂ ಓದಿ:  ಯುವತಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- ಮತಾಂತರಕ್ಕೆ ಒಪ್ಪದ್ದಕ್ಕೆ ಕೊಲೆ, ಲವ್ ಜಿಹಾದ್ ಎಂದ ಪೋಷಕರು

    ಮರಣೋತ್ತರ ಶವ ಪರೀಕ್ಷೆ: ಡಂಪಿಂಗ್ ಯಾರ್ಡ್ ನಲ್ಲಿ ಮೃತದೇಹ ಭಾಗಗಳು ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಲಿಸಾಡಿ ಗೇಟ್ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ. ಡಂಪಿಂಗ್ ಯಾರ್ಡ್ ನಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಮೃತದೇಹದ ಭಾಗಗಳಲ್ಲಿ ಸಂಗ್ರಹಿಸಿ ಪೋಸ್ಟ್ ಮಾರ್ಟ್‍ಂ ಗೆ ರವಾನಿಸಿದ್ದಾರೆ. ಮೃತದೇಹದ ನಗ್ನವಾಗಿ ಪತ್ತೆಯಾಗಿತ್ತು. ಮಹಿಳೆಯ ಪರಿಚಯಸ್ಥನೇ ಈ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಟಿಕೆ ಕೊಳ್ಳಲು ಬಂದ ಮಹಿಳೆಯ ಕೊಲೆ- ಶವದ ಜೊತೆ ಅಂಗಡಿ ಮಾಲೀಕ ಸೆಕ್ಸ್

     

    30 ರಿಂದ 35 ವಯಸ್ಸಿನ ಮಹಿಳೆ: ಮೃತ ಮಹಿಳೆಯ ವಯಸ್ಸು ಅಂದಾಜು 30 ರಿಂದ 35 ಇರಬಹುದು. ಆರೋಪಿ ಕೊಲೆಯ ಬಳಿಕ ಶವ ಗುರುತು ಸಿಗದಂತೆ ಪ್ಲಾನ್ ಮಾಡಿ, ಮಹಿಳೆಯ ರುಂಡವನ್ನ ತನ್ನೊಂದಿಗೆ ತೆಗೆದುಕೊಂಡು ತೆರಳಿದ್ದಾನೆ. ಮರಣೋತ್ತರ ಶವ ಪರೀಕ್ಷೆಯ ವರದಿಗಾಗಿ ನಿರೀಕ್ಷೆಯಲ್ಲಿದ್ದೇವೆ. ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೂ ಶವ ಪತ್ತೆಯಾಗಿರುವ ವಿಷಯ ರವಾನಿಸಲಾಗಿದ್ದು, ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿದೆಯಾ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಪೊಲೀಸ್ ಪೇದೆ ಬಾವಿಯಲ್ಲಿ ಶವವಾಗಿ ಪತ್ತೆ

    ಡಂಪಿಂಗ್ ಯಾರ್ಡ್ ಸುತ್ತಲಿನ ಜನ ಘಟನೆಯಿಂದ ಭಯದಲ್ಲಿದ್ದಾರೆ. ಘಟನೆ ಬಗ್ಗೆ ಸ್ಥಳೀಯರಿಂದಲೂ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಡಂಪಿಂಗ್ ಯಾರ್ಡ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಿಸಿಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಯನ್ನ ಶೀಘ್ರದಲ್ಲಿಯೇ ಬಂಧಿಸುವದಾಗಿ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರತಿದಿನ ವಿವಾಹಿತೆ ಮನೆಗೆ ಬರ್ತಿದ್ದ ಯುವಕ – ಮಹಿಳೆ ಶವವಾಗಿ ಪತ್ತೆ, ಪತಿ ಪರಾರಿ

  • ತ್ಯಾಜ್ಯ ಸುರಿಯಲು ಕರ್ನಾಟಕವನ್ನು ಡಂಪಿಂಗ್ ಯಾರ್ಡ್ ಮಾಡಿಕೊಂಡ ಕೇರಳ

    ತ್ಯಾಜ್ಯ ಸುರಿಯಲು ಕರ್ನಾಟಕವನ್ನು ಡಂಪಿಂಗ್ ಯಾರ್ಡ್ ಮಾಡಿಕೊಂಡ ಕೇರಳ

    ಮೈಸೂರು: ಕರ್ನಾಟಕದ ಗಡಿ ಗ್ರಾಮಗಳನ್ನು ಕೇರಳ ಕಸ ಹಾಕೋ ಜಾಗ ಮಾಡಿಕೊಂಡಿದ್ಯಾ? ಕೇರಳದ ಈ ಕಾರ್ಯಕ್ಕೆ ಕರ್ನಾಟಕದವರೆ ಸಾಥ್ ನೀಡುತ್ತಿದ್ದಾರಾ? ಇಂತಹ ಪ್ರಶ್ನೆಗೆ ಹೌದು ಎನ್ನುವಂತಹ ಉತ್ತರ ಸಾಕ್ಷಿ ಸಮೇತ ಸಿಕ್ಕಿದೆ.

    ಕೇರಳದ ಮೆಡಿಕಲ್ ತ್ಯಾಜ್ಯಗಳನ್ನು ಅಕ್ರಮವಾಗಿ ಲಾರಿಗಳ ಮೂಲಕ ಕರ್ನಾಟಕದ ಗಡಿ ಗ್ರಾಮಗಳಲ್ಲಿ ಸುರಿಯುತ್ತಿರುವುದು ಪತ್ತೆಯಾಗಿದೆ. ಹೀಗೆ ಕಸ ತಂದು ಸುರಿಯುತ್ತಿದ್ದ ಲಾರಿಗಳನ್ನು ಮೈಸೂರು ಜಿಲ್ಲೆಯ ನಂಜನಗೂಡು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ನಂಜನಗೂಡಿನ ಅಡಕನಹಳ್ಳಿ ಹುಂಡಿ ಕೈಗಾರಿಕಾ ಪ್ರದೇಶದಲ್ಲಿ ಮೆಡಿಕಲ್ ತ್ಯಾಜ್ಯ ಸುರಿಯಲಾಗುತ್ತಿತ್ತು. ಸುಮಾರು 2 ಟನ್‍ನಷ್ಟು ಮೆಡಿಕಲ್ ತ್ಯಾಜ್ಯ ತಂದು ಸುರಿಯುವ ಸಂದರ್ಭದಲ್ಲಿ ರೆಡ್ ಹ್ಯಾಂಡಾಗಿ ಪೊಲೀಸರು ಹಿಡಿದು, 2 ಲಾರಿ ಹಾಗೂ ಟಿ.ನರಸೀಪುರದ ಮೂಲದ ಅಬ್ದುಲ್ ಜಾನ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಐವರು ಆರೋಪಿಗಳು ಪರಾರಿಯಾಗಿದ್ದಾರೆ.