Tag: ಡಂಗೂರ

  • ಅಧಿಕ ದರದಲ್ಲಿ ಮದ್ಯ ಮಾರಾಟ-ಗ್ರಾಮದಲ್ಲಿ ಡಂಗುರ ಸಾರಿದ  ಮದ್ಯಪ್ರಿಯರು

    ಅಧಿಕ ದರದಲ್ಲಿ ಮದ್ಯ ಮಾರಾಟ-ಗ್ರಾಮದಲ್ಲಿ ಡಂಗುರ ಸಾರಿದ ಮದ್ಯಪ್ರಿಯರು

    ಕೊಪ್ಪಳ: ಮದ್ಯ ಬೆಲೆ ದುಪ್ಪಟ್ಟಾಗಿದೆ ಒಂದು ಕಡೆ ಕುಳಿತು ಚರ್ಚಿಸೋಣ ಬನ್ನಿ ಎಂದು ಮದ್ಯಪ್ರಿಯರು ಊರಿನಲ್ಲಿ ಡಂಗುರ ಸಾರಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ.

    ಲಾಕ್‍ಡೌನ್ ನೆಪವಾಗಿಟ್ಟುಕೊಂಡು ಅಧಿಕ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಈ ಆರೋಪಕ್ಕೆ ಪುಷ್ಠಿ ಕೊಡುವಂತೆ ಕೊಪ್ಪಳ ಜಿಲ್ಲೆಯ ಹೊಸಹಳ್ಳಿಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ಮದ್ಯಪ್ರೀಯರು ಗ್ರಾಮದಲ್ಲಿರುವ ಎಲ್ಲಾ ಕುಡುಕರು ಒಂದು ಕಡೆ ಚರ್ಚಿಸೋಣ ಬನ್ನಿ ಎಂದು ಡಂಗುರ ಸಾರಿದ್ದಾರೆ.

    ನಮ್ಮ ಗ್ರಾಮದಲ್ಲಿ ಹಾಗೂ ಗಂಗಾವತಿಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಲಾಕ್‍ಡೌನ್ ನೆಪ ಹೇಳಿಕೊಂಡು 50 ರೂಪಾಯಿಗೆ ಮಾರಾಟ ಮಾರಾಟವಾಗುವ ಮದ್ಯವನ್ನು 100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಬೆಲೆ ಹೆಚ್ಚಳವಾಗಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುವ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಅದಕ್ಕಾಗಿ ಗ್ರಾಮದಲ್ಲಿ ಒಂದು ಕಡೆ ಎಲ್ಲರೂ ಸೇರಿ ಚರ್ಚಿಸೋಣ ಬನ್ನಿ ಎಂದು ಡಂಗುರ ಸಾರಿದ್ದಾರೆ. ಇದನ್ನೂ ಓದಿ:  ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ

    ಈ ಡಂಗುರದ ಪ್ರಕಾರ ಇಂದೇ ಗ್ರಾಮದಲ್ಲಿ ಸಭೆ ನಡೆಸಬೇಕು, ಆದರೆ ಡಂಗುರ ಬಾರಿಸಿದವರಿಗೆ ಎಷ್ಟು ಜನರು ಬೆಂಬಲ ವ್ಯಕ್ತಪಡಿಸುತ್ತಾರೆ. ಮದ್ಯ ಮಾರಾಟ ಮಾಡುವವರು ಬಲಿಷ್ಠರಾಗಿದ್ದು, ಅವರ ವಿರುದ್ಧ ಎಷ್ಟು ಜನ ಬಂಡಾಯ ಎಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

  • ‘ಕೇಳ್ರಪ್ಪೋ ಕೇಳಿ..ಹರದನಹಳ್ಳಿ ದೇವೇಗೌಡರು, ಮಕ್ಕಳು, ಅವರ ಮೊಮ್ಮಕ್ಕಳು, ಸೊಸೆಯಂದಿರು, ಮರಿ ಮೊಮ್ಮಕ್ಕಳು ಮಾತ್ರ ರೈತರು’

    ‘ಕೇಳ್ರಪ್ಪೋ ಕೇಳಿ..ಹರದನಹಳ್ಳಿ ದೇವೇಗೌಡರು, ಮಕ್ಕಳು, ಅವರ ಮೊಮ್ಮಕ್ಕಳು, ಸೊಸೆಯಂದಿರು, ಮರಿ ಮೊಮ್ಮಕ್ಕಳು ಮಾತ್ರ ರೈತರು’

    – ಡಂಗುರ ಹೊಡೆದು ಎಚ್‍ಡಿಡಿ ಕುಟುಂಬದ ವಿರುದ್ಧ ರೈತರ ವ್ಯಂಗ್ಯ ಭರಿತ ಪ್ರತಿಭಟನೆ
    – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

    ಮಂಡ್ಯ: ರೈತರೊಬ್ಬರು ಡಂಗುರ ಸಾರುವ ರೀತಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವ್ಯಂಗ್ಯ ಭರಿತವಾಗಿ ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರೈತರ ಪ್ರತಿಭಟನೆಗೆ ಜಿಲ್ಲೆಯಿಂದಲೂ ನೂರಾರು ರೈತರು ರೈಲಿನ ಮೂಲಕ ಬೆಂಗಳೂರು ತೆರಳಿದ್ದಾರೆ. ಇದಕ್ಕೂ ಮುನ್ನ ರೈತರೊಬ್ಬರು ಡಂಗುರು ಸಾರುವ ರೀತಿ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯ ಭರಿತವಾಗಿ ಕಿಡಿಕಾರಿದ್ದಾರೆ. ರೈತರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ವಿಡಿಯೋದಲ್ಲಿ ರೈತರು, “ಕೇಳ್ರಪ್ಪೋ ಕೇಳಿ, ಕರ್ನಾಟಕದ ಮಹಾಜನರೇ ಕೇಳಿ, ರೈತರು ಎಂದರೆ ಯಾರು ಗೊತ್ತಾ? ಹರದನಹಳ್ಳಿ ದೇವೇಗೌಡರು, ದೇವೇಗೌಡರ ಮಕ್ಕಳು, ಅವರ ಮೊಮ್ಮಕ್ಕಳು, ಅವರ ಸೊಸೆಯಂದಿರು ಹಾಗೂ ಅವರ ಮರಿ ಮೊಮ್ಮಕ್ಕಳು ಮಾತ್ರ ರೈತರು. ಹಸಿರು ಶಾಲು ಹಾಕಿಕೊಂಡು ಪ್ರತಿಭಟನೆ ಮಾಡುವವರು ರೈತರಲ್ಲ. ಅವರೆಲ್ಲ ಕಳ್ಳರು, ದರೋಡೆಕೋರರು” ಎಂದು ಹೇಳಿದ್ದಾರೆ.

    “ರೈತರು ಅಂದರೆ ಯಾರು ಗೊತ್ತೆ? ಕುಮಾರಸ್ವಾಮಿ, ಅವರ ಹೆಂಡತಿ ಹಾಗೂ ಮಕ್ಕಳು. ಅಲ್ಲದೇ ದೇವೇಗೌಡರಿಗೆ ಮತ ಹಾಕುವವರು ಮಾತ್ರ ರೈತರು. ಅವರು ಬಂದ ತಕ್ಷಣ ದೂರದಲ್ಲಿ ಚಪ್ಪಲಿ ಬಿಟ್ಟು, ಅವರಿಗೆ ಕೈ ಮುಗಿಯುವವರು ಮಾತ್ರ ರೈತರು” ಎಂದು ಟಾಂಗ್ ಕೊಟ್ಟಿದ್ದಾರೆ.

    “ರೈತ ನಾಯಕಿ ಜಯಶ್ರೀ ಅವರನ್ನು ಎಲ್ಲಿ ಮಲಗಿದ್ದೆ ಇಷ್ಟು ದಿನ ಎಂದು ಕೇಳುತ್ತಿದ್ದಾರೆ. ಆದರೆ ಅವರು ಎಲ್ಲೋ ಮಲಗಿಕೊಂಡು ರೂಢಿಯಾಗಿ, ಯಾರ ಯಾರನ್ನೋ ಎಲ್ಲಿ ಮಲಗಿದ್ದೆ ಎಂದು ಕೇಳುತ್ತಿದ್ದಾರೆ. ಇವರ ಪಾಲಿಗೆ ರೈತರು ಎಂದರೇ, ಸಾಲಮನ್ನಾ ಮಾಡದೇ ಇದ್ದರೂ, ಕಬ್ಬಿಗೆ ಬೆಂಬಲ ಬೆಲೆ ನೀಡದೇ ಇದ್ದರೂ, ಇವರಿಗೆ ಕೈ ಮುಗಿಯುವವರು ಮಾತ್ರ ರೈತರು” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

    https://www.youtube.com/watch?v=BL-8gP9GNcw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews