Tag: ಠಾಕೂರ್ ಸಮುದಾಯ

  • ಯುವತಿಯರು ಮೊಬೈಲ್ ಬಳಕೆ ಮಾಡಿದ್ರೆ ಪೋಷಕರಿಗೆ ದಂಡ

    ಯುವತಿಯರು ಮೊಬೈಲ್ ಬಳಕೆ ಮಾಡಿದ್ರೆ ಪೋಷಕರಿಗೆ ದಂಡ

    ಗಾಂಧಿನಗರ: ಮದುವೆಗೂ ಮುನ್ನ ಯುವತಿಯರು ಮೊಬೈಲ್ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಬಳಸಿದರೆ ಪೋಷಕರಿಗೆ ದಂಡ ವಿಧಿಸುವ ವಿಚಿತ್ರ ಕಾನೂನನ್ನು ಗುಜರಾತ್ ಸಮುದಾಯವೊಂದು ಜಾರಿಗೆ ತಂದಿದೆ.

    ಗುಜರಾತ್‍ನ ಬನಸ್ಕಾಂತ ಜಿಲ್ಲೆಯ ದಂತಿವಾಡ ತಾಲೂಕಿನ ಠಾಕೂರ್ ಸಮುದಾಯದ ಮುಖಂಡರು ಜುಲೈ 14ರಂದು ಈ ನಿಯಮವನ್ನು ಸರ್ವಾನುಮತದಿಂದ ಅಂಗೀಕಾರಕ್ಕೆ ತಂದಿದ್ದಾರೆ. ಈ ಕಾನೂನು ಜಿಲ್ಲೆಯ 12 ಗ್ರಾಮಗಳಲ್ಲಿ ಬರಲಿದೆ ಎಂದು ಸಮುದಾಯದ ಮುಖಂಡರು ಹಾಗೂ ಸ್ಥಳೀಯ ಶಾಸಕರು ಹೇಳಿದ್ದಾರೆ.

    ಅವಿವಾಹಿತ ಮಹಿಳೆಯರು ಮೊಬೈಲ್ ಬಳಸುವಂತಿಲ್ಲ. ಒಂದು ವೇಳೆ ಮೊಬೈಲ್ ಸಮೇತ ಸಿಕ್ಕಿಬಿದ್ದರೆ ಪೋಷಕರಿಗೆ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ ಯುವತಿಯರು ಬೇರೆ ಜಾತಿಯ ಯುವಕರನ್ನು ಮದುವೆಯಾದರೇ ಭಾರೀ ಮೊತ್ತದ ದಂಡ ವಿಧಿಸುವ ತೀರ್ಮಾನವನ್ನು ಸಭೆ ತೆಗೆದುಕೊಂಡಿದೆ.

    ಸಮುದಾಯದ ಯುವತಿ ಹಾಗೂ ಯುವಕರು ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದರೆ, 1.5 ಲಕ್ಷ ರೂ. ರಿಂದ 2 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಆದೇಶ ಜಾರಿಗೆ ತರಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕಿ ಗನಿಬೇಬ್ ಠಾಕೂರ್ ಅವರು, ಯುವತಿಯರಿಗೆ ಮೊಬೈಲ್ ಬಳಸಬಾರದು ಎಂದು ಆದೇಶ ನೀಡಿದ್ದರಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. ಯುವತಿಯರು ತಂತ್ರಜ್ಞಾನ ದೂರವಿರಬೇಕು ಹಾಗೂ ಅಧ್ಯಯನಕ್ಕೆ ಹೆಚ್ಚಿನ ಸಮಯ ನೀಡಬೇಕು ಎನ್ನುವ ಉದ್ದೇಶದಿಂದ ಮೊಬೈಲ್ ನಿಷೇಧ ಮಾಡಿದ್ದಾರೆ ಎಂದು ಹೇಳಿದ್ದಾರೆ.