Tag: ಟ್ವೀಟ್

  • ಪರಿಷ್ಕೃತ ಪಠ್ಯ ರದ್ದು ಮಾಡಿ, ರೋಹಿತ್ ಚಕ್ರತೀರ್ಥರನ್ನು ವಜಾಗೊಳಿಸಬೇಕು – ಸಿದ್ದರಾಮಯ್ಯ ಆಗ್ರಹ

    ಪರಿಷ್ಕೃತ ಪಠ್ಯ ರದ್ದು ಮಾಡಿ, ರೋಹಿತ್ ಚಕ್ರತೀರ್ಥರನ್ನು ವಜಾಗೊಳಿಸಬೇಕು – ಸಿದ್ದರಾಮಯ್ಯ ಆಗ್ರಹ

    ಬೆಂಗಳೂರು: ಕನ್ನಡ ನುಡಿ, ಸಾಹಿತ್ಯ ಮತ್ತು ಸಾಹಿತಿಗಳನ್ನು ಗೇಲಿ ಮಾಡುತ್ತಾ ಬಂದಿರುವ ರೋಹಿತ್ ಚಕ್ರತೀರ್ಥ ಅವರು, ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿಯ ಅಭಿಪ್ರಾಯಗಳನ್ನು ಹಂಚಿಕೊಂಡು ಸಾಮಾಜಿಕ ಆರೋಗ್ಯವನ್ನು ಹಾಳು ಮಾಡುತ್ತಿದ್ದಾರೆ. ರೋಹಿತ್ ಚಕ್ರತೀರ್ಥ ಎಂಬ ಕಿಡಿಗೇಡಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದಲೂ ರೋಹಿತ್ ಚಕ್ರತೀರ್ಥರನ್ನ ಕಿತ್ತುಹಾಕಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

    ಪರಿಷ್ಕೃತ ಪಠ್ಯ ರದ್ದತಿಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ನಾಡದ್ರೋಹಿ ಅಧ್ಯಕ್ಷನ ಸಮಿತಿ ಪರಿಷ್ಕರಿಸಿರುವ ಪಠ್ಯವನ್ನು ರದ್ದುಮಾಡಿ, ನೂತನ ಪರಿಷ್ಕೃತ ಪಠ್ಯ ರಚನೆಯಾಗುವ ವರೆಗೆ ಹಳೆಯ ಪಠ್ಯವನ್ನೇ ಮುಂದುವರಿಸುವುದು. ಸರ್ಕಾರ ಜಿದ್ದಿಗೆ ಬೀಳದೆ ಈ ನಿರ್ಧಾರ ಕೈಗೊಳ್ಳಬೇಕು. ಪಠ್ಯ ಪರಿಷ್ಕರಣಾ ಸಮಿತಿಗೆ ಅನರ್ಹರ ನೇಮಕ ಮತ್ತು ಅದರಿಂದ ಸೃಷ್ಟಿಯಾಗಿರುವ ವಿವಾದಕ್ಕೆ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಯಾವ ಪಠ್ಯವನ್ನು ಓದಬೇಕೆಂಬ ಬಗ್ಗೆ ವಿದ್ಯಾರ್ಥಿಗಳು, ಯಾವುದನ್ನು ಬೋಧಿಸಬೇಕೆಂದು ಶಿಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಇದಕ್ಕೆ ಏನು ಪರಿಹಾರ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ.

    ಕಳೆದ ಹತ್ತು ವರ್ಷಗಳಿಂದ ಕನ್ನಡ ನುಡಿ, ಸಾಹಿತ್ಯ ಮತ್ತು ಸಾಹಿತಿಗಳನ್ನು ಗೇಲಿ ಮಾಡುತ್ತಾ ಬಂದಿರುವ, ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿಯ ಅಭಿಪ್ರಾಯಗಳನ್ನು ಹಂಚಿಕೊಂಡು ಸಾಮಾಜಿಕ ಆರೋಗ್ಯವನ್ನು ಹಾಳುಗೆಡಹುತ್ತಾ ಬಂದಿರುವ ರೋಹಿತ್ ಚಕ್ರತೀರ್ಥ ಎಂಬ ಕಿಡಿಗೇಡಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ನಾಡಗೀತೆ ಮತ್ತು ರಾಷ್ಟ್ರಕವಿ ಕುವೆಂಪು ಅವರನ್ನು ಗೇಲಿಮಾಡಿರುವ, ಸಮಾಜ ಸುಧಾರಕರಾದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಸವಣ್ಣನವರನ್ನು ಅವಮಾನಿಸಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪರಿಷ್ಕರಣಾ ಸಮಿತಿ ಅಧ್ಯಕ್ಷ ಸ್ಥಾನದಿಂದ ಮಾತ್ರವಲ್ಲ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದಲೂ ಕಿತ್ತುಹಾಕಬೇಕು ಎಂದಿದ್ದಾರೆ.  ಇದನ್ನೂ ಓದಿ: ಬೀದರ್ ಪ್ರವೇಶಕ್ಕೆ ಪ್ರಮೋದ್ ಮುತಾಲಿಕ್, ಆಂದೋಲನ ಶ್ರೀಗಳಿಗೆ ಬ್ಯಾನ್

    ನಾಡಿನ ಹಲವಾರು ಹಿರಿಯ ಸಾಹಿತಿಗಳು ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿರುವ ತಮ್ಮ ಕೃತಿಗಳನ್ನು ವಾಪಸ್ಸು ಪಡೆದಿದ್ದಾರೆ. ಸರ್ಕಾರ ತಮ್ಮ ಅಭಿಪ್ರಾಯವನ್ನು ಧಿಕ್ಕರಿಸಿದರೆ ಕಾನೂನು ಹೋರಾಟ ಮಾಡುವುದಾಗಿ ಈ ಸಾಹಿತಿಗಳು ಎಚ್ಚರಿಕೆ ನೀಡಿದ್ದಾರೆ. ಇಂತಹ ವಿವಾದಾತ್ಮಕ ಪಠ್ಯವನ್ನು ಬೋಧಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

    ಬಸವಣ್ಣನವರ ವಿಚಾರವೂ ಸೇರಿದಂತೆ ಆಕ್ಷೇಪ ವ್ಯಕ್ತವಾಗಿರುವ ಅಂಶಗಳನ್ನು ಪರಿಷ್ಕರಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ. ಹಾಗಿದ್ದರೆ ಈಗಿನ ಪರಿಷ್ಕೃತ ಪಠ್ಯವನ್ನು ಕೈಬಿಡಲಾಗುವುದೇ? ಇದನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ಪಷ್ಟಪಡಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳ ರಕ್ಷಣೆ ಹೆಸರಲ್ಲಿ ಅಧಿಕಾರಕ್ಕೇರಿ, ಹಿಂದೂ ವಿರೋಧಿ ವರ್ತನೆ ಸರಿಯಲ್ಲ: ಮುತಾಲಿಕ್

    ಜನತೆಯಲ್ಲಿ ಮೂಡಿರುವ ಗೊಂದಲವನ್ನು ಪರಿಹರಿಸುವಂತಹ ಸ್ಪಷ್ಟತೆ ರಾಜ್ಯದ ಬೊಮ್ಮಾಯಿ ಅವರ ಮಾತಿನಲ್ಲಿ ಇರಬೇಕು. ಇವರ ಮಾತು ಇನ್ನಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಬೋಧಿಸಲಿರುವುದು ಹಳೆಯ ಪಠ್ಯವೇ? ಪರಿಷ್ಕೃತ ಪಠ್ಯವೇ ಎಂದು ಎಂದಿದ್ದಾರೆ.

    ವಿಸರ್ಜನೆ ಮಾಡಬೇಕಾಗಿರುವು ಪರಿಷ್ಕೃತ ಪಠ್ಯವನ್ನು, ಈಗಾಗಲೇ ಅವಧಿ ಮುಗಿದಿರುವ ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನಲ್ಲ. ಪೂರ್ವಗ್ರಹ ಪೀಡಿತ ಅಧ್ಯಕ್ಷನನ್ನು ಕಿತ್ತುಹಾಕಿದ ಮೇಲೆ ಆ ಸಮಿತಿ ಶಿಫಾರಸು ಮಾಡಿರುವ ಪಠ್ಯವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.

  • ಕನ್ನಡದ ನಾಡು, ನುಡಿ ಮತ್ತು ಸಾಹಿತಿಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧ: ರಾಹುಲ್ ಗಾಂಧಿ

    ಕನ್ನಡದ ನಾಡು, ನುಡಿ ಮತ್ತು ಸಾಹಿತಿಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧ: ರಾಹುಲ್ ಗಾಂಧಿ

    ನವದೆಹಲಿ: ಕರ್ನಾಟಕದ ಜನ ಸದಾ ಸಾಮಾಜಿಕ ನ್ಯಾಯ, ಮಹನೀಯರ ಏಕತೆ ಹಾಗೂ ಮಾನವತಾವಾದದ ತತ್ವಗಳನ್ನ ಪಾಲಿಸಿಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ನಡದಲ್ಲಿಯೇ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಬಿ. ಆರ್ ಅಂಬೇಡ್ಕರ್, ಬುದ್ಧ, ಬಸವಣ್ಣ, ನಾರಾಯಣ ಗುರು, ಕುವೆಂಪು ಮುಂತಾದ ಅನೇಕ ಮಹನೀಯರ ಜೀವನಕ್ಕೆ ಹಾಗೂ ಕರ್ನಾಟಕದ ಅಸ್ಮಿತೆಗೆ ವಿರುದ್ಧವಾದ ಸಂದೇಶಗಳನ್ನು ಪಠ್ಯಪುಸ್ತಕದ ಮೂಲಕ ಮಕ್ಕಳಿಗೆ ಕಲಿಸಲು ಬಿಜೆಪಿ ಹೊರಟಿದೆ ಎಂದಿದ್ದಾರೆ. ಇದನ್ನೂ ಓದಿ: ಮದರಸಾ ತೆರವು ಮಾಡದೆ ಇದ್ದರೆ ನಾವೇ ಅವರ ಕೊರಳಪಟ್ಟಿ ಹಿಡಿದು ಹೊರ ಹಾಕ್ತಿವಿ: ಹಿಂದೂ ಸಂಘಟನೆಗಳು

    ಕರ್ನಾಟಕದ ಒಂದು ಕೋಟಿ ಮಕ್ಕಳ ಭವಿಷ್ಯದ ನಿರ್ಧಾರವನ್ನು ಅರ್ಹತೆಯಿಲ್ಲದ ಕೈಗಳಿಗೆ ವಹಿಸಲಾಗಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕತೆ ಮತ್ತು ಲಿಂಗ ಸಮಾನತೆ ಸಾರುವ ಪಾಠಗಳನ್ನು, ಲೇಖಕರನ್ನು ಹೊರಗಿಟ್ಟು ಮಕ್ಕಳಿಗೆ ಕೇಸರೀಕರಣದ ಪಾಠ ಹೇಳಲು ಹೊರಟಿರುವುದು ವೈವಿಧ್ಯತೆಯ ತೊಟ್ಟಿಲಾದ ಭಾರತಕ್ಕೆ ಮಾಡುವ ಅಪಮಾನ ಎಂದು ಹೇಳಿದರು. ಇದನ್ನೂ ಓದಿ: ಖಾಕಿ ಚಡ್ಡಿ ಏನು ಈ ದೇಶದ ರಾಷ್ಟ್ರಧ್ವಜವೇ: ಎನ್‍ಎಸ್‍ಯುಐ ಉಪಾಧ್ಯಕ್ಷೆ

    ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಎಲ್ಲರೂ ಒಂದಾಗಿ ಅದನ್ನ ಮೆಟ್ಟಿನಿಲ್ಲುತ್ತಾರೆ ಎನ್ನುವುದನ್ನ ಕನ್ನಡಿಗರು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಕರ್ನಾಟಕದ ಬಹುತ್ವಕ್ಕೆ ಮಾರಕವಾದ ಪಠ್ಯವನ್ನ ಮಕ್ಕಳ ಮೇಲೆ ಹೇರಲು ಕಾಂಗ್ರೆಸ್ ಬಿಡುವುದಿಲ್ಲ. ಕನ್ನಡದ ನಾಡು, ನುಡಿ ಮತ್ತು ಸಾಹಿತಿಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧವಾಗಿದೆ ಎಂದರು.

  • 2 ವರ್ಷದಿಂದ ಬಗೆಹರಿಯದ ಮಂಡ್ಯ ವ್ಯಕ್ತಿಯ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ ಕೊಟ್ಟ ಮೋದಿ

    2 ವರ್ಷದಿಂದ ಬಗೆಹರಿಯದ ಮಂಡ್ಯ ವ್ಯಕ್ತಿಯ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ ಕೊಟ್ಟ ಮೋದಿ

    ಮಂಡ್ಯ: 2 ವರ್ಷದಿಂದ ಬಗೆಹರಿಯದ ಸಮಸ್ಯೆಯನ್ನು ಬಗೆಹರಿಸುವಂತೆ ಮಂಡ್ಯ ರೈತ ಮುಖಂಡ ಮಾಡಿದ್ದಾರೆ. ಅವರು ಮಾಡಿದ ಒಂದೇ ಒಂದು ಟ್ವೀಟ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಂದಿಸಿ, ಎರಡೇ ದಿನದಲ್ಲಿ ಆ ಸಮಸ್ಯೆಯನ್ನು ಬಗೆಹರಿಸಿದ್ದಾರೆ.

    ಮಂಡ್ಯದ ತಂಡಸನಹಳ್ಳಿ ಗ್ರಾಮದ ನೂತನ್ ಹುಟ್ಟುತ್ತಲೇ ಅಂಗವಿಕಲತೆ ಹಾಗೂ ವಿಚಿತ್ರ ಚರ್ಮ ರೋಗಕ್ಕೆ ತುತ್ತಾಗಿದ್ದಾರು. ಆಧಾರ್ ಪದ್ಧತಿಯ ಆರಂಭದಲ್ಲಿ ನೂತನ್ ಅವರ ಭಾವಚಿತ್ರದ ಆಧಾರದ ಮೇಲೆ ಅವರಿಗೆ ಅಧಿಕಾರಿಗಳು ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದರು. ಕಳೆದ ಎರಡೂವರೆ ವರ್ಷದ ಹಿಂದೆ ಇವರಿಗೆ ಬರುತ್ತಿದ್ದ ಪಿಂಚಣಿ ಹಾಗೂ ಸರ್ಕಾರಿ ಸವಲತ್ತುಗಳು ನಿಂತು ಹೋಗಿದ್ದವು. ಈ ಬಗ್ಗೆ ವಿಚಾರಿಸಿದಾಗ ನಿಮ್ಮ ಆಧಾರ್ ಕಾರ್ಡ್ ಬ್ಲಾಕ್ ಆಗಿದೆ, ನಿಮ್ಮ ಆಧಾರ್ ಕಾರ್ಡ್ನ್ನು ಅಪ್‌ಡೇಟ್ ಮಾಡಿಸುವಂತೆ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ನೂತನ್ ಹಾಗೂ ಕುಟುಂಬಸ್ಥರು ಆಧಾರ್ ಕಾರ್ಡ್ ಕಚೇರಿಗೆ ಹೋದಾಗ ನಿಮ್ಮ ಥಂಬ್ ತೆಗೆದುಕೊಳ್ಳುತ್ತಿಲ್ಲ, ಇದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮತ್ತೆ ಶುರುವಾಯ್ತು ಕೊರೊನಾ ಭೀತಿ – ಮಹಾರಾಷ್ಟ್ರದಲ್ಲಿ ದಿಢೀರ್ ಸ್ಫೋಟ

    ನೂತನ್‌ಗೆ ವಿಚಿತ್ರ ಚರ್ಮ ರೋಗ ಇರುವ ಕಾರಣ ಅವರ ಬೆರಳಚ್ಚು ಹಾಗೂ ಅವರ ಕಣ್ಣಿನ ಗುರುತು ತೆಗೆದುಕೊಳ್ಳುತ್ತಿರಲಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಇವರು ಎಲ್ಲಾ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸಿದ್ದರು. 2 ವರ್ಷವಾದರೂ ಯಾರೂ ಸಹ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿರಲಿಲ್ಲ.

    ಕಳೆದ 3 ದಿನಗಳ ಹಿಂದೆ ಮಂಡ್ಯ ರೈತ ಮುಖಂಡ ಮಧುಚಂದನ್ ನೂತನ್ ಫೋಟೊವನ್ನು ಹಾಕಿ, ಇವರಿಗೆ ಚರ್ಮ ರೋಗ ಇದೆ, ಆಧಾರ್ ಕಾರ್ಡ್ಗೆ ಬೆರಳಚ್ಚು ಆಗುತ್ತಿಲ್ಲ. ಇದರಿಂದ ಇವರು ಸರ್ಕಾರಿ ಸೌಲಭ್ಯದಿಂದ ವಂಚಿತನಾಗಿದ್ದಾರೆ. ಆಧಾರ್ ಕಾರ್ಡ್ನ್ನು ಹೇಗೆ ಸರಿಪಡಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಇನ್ಮುಂದೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿ ಸಿಗಲ್ಲ

    ಈ ಟ್ವೀಟ್ ನೋಡಿದ ಪ್ರಧಾನಿ ಸಚಿವಾಲಯದ ಅಧಿಕಾರಿಗಳು ಅವರು ಈ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಅಧಿಕಾರಿಗಳು ನೂತನ್‌ಗೆ ಕರೆ ಮಾಡಿ, ಸಮಸ್ಯೆಗಳನ್ನು ಆಲಿಸಿ ಅವರಿಗೆ ಆಧಾರ್ ಕಾರ್ಡ್ ಅನ್ನುಂ ಅಪ್‌ಡೇಟ್ ಮಾಡಿ ಅವರ ಮನೆಗೆ 2 ದಿನದಲ್ಲಿ ಕಳುಹಿಸಿದ್ದಾರೆ.

    ನೂತನ್ ಅವರು ರೈತ ಮುಖಂಡ ಮಧುಚಂದನ್ ಅವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೂತನ್ ಮತ್ತು ಅವರ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

  • ಪಾಕಿಸ್ತಾನದವನಾಗಿ ನಾನು ಹೇಳುತ್ತೇನೆ ವಿರಾಟ್ ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ: ಶೋಯೆಬ್ ಅಕ್ತರ್

    ಪಾಕಿಸ್ತಾನದವನಾಗಿ ನಾನು ಹೇಳುತ್ತೇನೆ ವಿರಾಟ್ ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ: ಶೋಯೆಬ್ ಅಕ್ತರ್

    ಮುಂಬೈ: ಪಾಕಿಸ್ತಾನದವನಾಗಿ ನಾನು ಹೇಳುತ್ತೇನೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ದೈತ್ಯ ಬೌಲರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ವಿರಾಟ್ ಕೊಹ್ಲಿ ಭಾರತ ತಂಡದ ಶ್ರೇಷ್ಠ ಬ್ಯಾಟ್ಸ್‌ಮ್ಯಾನ್ ಆಗಿ ಗುರುತಿಸಿಕೊಂಡವರು. ಆದರೆ ಅವರ ಬ್ಯಾಟ್‍ನಿಂದ ಇತ್ತೀಚಿಗೆ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ನವೆಂಬರ್ 2019 ರಿಂದ ಅವರು ಯಾವುದೇ ಅಂತರಾಷ್ಟ್ರೀಯ ಮ್ಯಾಚ್‍ಗಳಲ್ಲಿಯೂ ಶತಕವನ್ನು ಗಳಿಸಿಲ್ಲ. ಐಪಿಎಲ್ 2022 ಆವೃತ್ತಿಯಲ್ಲಿಯೂ ಸಹ ಅವರು ಅಷ್ಟೇನು ಹೇಳಿಕೊಳ್ಳುವಷ್ಟು ಆಟವಾಡಿಲ್ಲ. ಆರ್‌ಸಿಬಿ ತಂಡದ ಪರ ಆಡುತ್ತಿರುವ ಅವರು 16 ಪಂದ್ಯಗಳನ್ನು ಆಡಿ 22.73ರ ಸರಾಸರಿಯಲ್ಲಿ 341ರನ್ ಗಳಿಸಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಪದರ್ಶನ ನೀಡದೆ ಕೇವಲ 2 ಅರ್ಧಶತಕಗಳನ್ನು ಗಳಿಸುವಷ್ಟರಲ್ಲಿ ಶಕ್ತರಾಗಿದ್ದಾರೆ. ಇದಲ್ಲದೇ ಬೆಂಗಳೂರು ತಂಡವನ್ನು ಫೈನಲ್ ಹಂತಕ್ಕೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರ ಇತ್ತೀಚಿನ ಕಳಪೆ ಆಟವನ್ನು ಗಮನಿಸಿರುವ ಎಷ್ಟೋ ಮಾಜಿ ಆಟಗಾರರು ಹಾಗೂ ಅಭಿಮಾನಿಗಳು ಅವರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಾಂಪಿಯನ್ ತಂಡವನ್ನು ಗೌರವಿಸಿದ ಗುಜರಾತ್ ಸರ್ಕಾರ – ಹಾರ್ದಿಕ್ ಪಾಂಡ್ಯಗೆ ವಿಶೇಷ ಉಡುಗೊರೆ

    IPL 2022 VIRAT KOHLI

    ಆದರೆ, ಶೋಯೆಬ್ ಅಕ್ತರ್, ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ನೀವು ವಿರಾಟ್ ಕೊಹ್ಲಿ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತೀಲ್ಲ. ಅವರಿಗೆ ಗೌರವ ಕೊಡಿ. ನೀವು ವಿರಾಟ್ ಕೊಹ್ಲಿಗೆ ಏಕೆ ಗೌರವ ನೀಡುವುದಿಲ್ಲ? ಪಾಕಿಸ್ತಾನಿಯಾಗಿ ನಾನು ಹೇಳುತ್ತೇನೆ ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಅವರು ಏಕದಿನ ಪಂದ್ಯಗಳಲ್ಲಿ 110 ಶತಕಗಳನ್ನು ಹೊಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    ನಂತರ ಕೊಹ್ಲಿಗೆ ಕೆಲ ಸೂಚನೆಗಳನ್ನು ನೀಡಿದ ಅವರು, ಭಯಪಡಬೇಡಿ ನೀವು 45 ವರ್ಷ ವಯಸ್ಸಿನವರೆಗೆ ಆಡಬೇಕು. ಪ್ರಸ್ತುತ ಪರಿಸ್ಥಿತಿಯು ನಿಮ್ಮನ್ನು 110 ಶತಕಗಳನ್ನು ಬಾರಿಸಲು ಸಿದ್ಧಗೊಳಿಸುತ್ತಿದೆ. ಜನರು ನಿಮ್ಮನ್ನು ಅಲ್ಲಗಳಿಯುತ್ತಿದ್ದಾರೆ. ಅವರು ನಿಮ್ಮ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ. ದೀಪಾವಳಿಯಂದು ನೀವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದೀರಿ, ಅದರಲ್ಲಿ ನಿಮ್ಮನ್ನು ಟೀಕಿಸಲಾಗಿದೆ. ಅವರು ನಿಮ್ಮ ಹೆಂಡತಿ, ನಿಮ್ಮ ಮಗುವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ಹಾಗಾಗಿ ಯಾರ ಮಾತಿಗೂ ನೀವು ಕಿವಿಗೊಡದೇ ನನ್ನ ಮಾತುಗಳನ್ನು ನೆನಪಿನಲ್ಲಿಡಿ. ಅದನ್ನು ಇಂದಿನಿಂದಲೇ ಪಾಲಿಸಿ ಎಂದಿದ್ದಾರೆ.

  • ಜಗ್ಗೇಶ್‍ಗೆ ರಾಜ್ಯಸಭಾ ಟಿಕೆಟ್- ರಾಯರ ಕೃಪೆ, ಪವಾಡಕ್ಕೆ ಧನ್ಯ ಅಂದ್ರು ನವರಸ ನಾಯಕ

    ಜಗ್ಗೇಶ್‍ಗೆ ರಾಜ್ಯಸಭಾ ಟಿಕೆಟ್- ರಾಯರ ಕೃಪೆ, ಪವಾಡಕ್ಕೆ ಧನ್ಯ ಅಂದ್ರು ನವರಸ ನಾಯಕ

    ಬೆಂಗಳೂರು: ರಾಜ್ಯಸಬಾ ಚುನಾವಣೆಗೆ ಸ್ಪರ್ಧಿಸಲು ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, ರಾಯರ ಕೃಪೆ ಅವರ ಪವಾಡಕ್ಕೆ ಧನ್ಯ ಎಂದು ಹೇಳಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ನವರಸ ನಾಯಕ, ಆತ್ಮೀಯ ಕನ್ನಡದ ಬಂಧುಗಳೆ 42 ವರ್ಷ ತಪಸ್ಸಿನಂತೆ ಕಲಾರಂಗದಲ್ಲಿ ಸೇವೆ ಮಾಡಿ ಕಾಯವಾಚಮನ ಸತ್ಯಮಾರ್ಗದಲ್ಲಿ ಬದುಕಿದ್ದೇನೆ. ನನ್ನ ನೆಚ್ಚಿನ ಭಾಜಪ ರಾಜ್ಯದ ಮುಖ್ಯ ಮಂತ್ರಿಗಳು, ಮಂತ್ರಿಗಳು, ಶಾಸಕಮಿತ್ರರು ಹಾಗೂ ರಾಜ್ಯ ರಾಷ್ಟ್ರದ ಸಂಘದ ಹಿರಿಯರ ಆಶೀರ್ವಾದದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವೆ ತಮಗೆ ಶಿರಬಾಗಿ ವಂದಿಸುವೆ. ರಾಯರ ಕೃಪೆ ಅವರ ಪವಾಡಕ್ಕೆ ಧನ್ಯ ಎಂದು ಬರೆದುಕೊಂಡಿದ್ದಾರೆ.

    ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಣೆ ಮಾಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಕರ್ನಾಟಕದಿಂದಲೇ ಮುಂದುವರಿಸಲು ನಿರ್ಧರಿಸಿದ್ದು, ಕೆ.ಸಿ ರಾಮಮೂರ್ತಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಟ ಜಗ್ಗೇಶ್‍ಗೆ ಅವಕಾಶ ನೀಡಿದೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜಗ್ಗೇಶ್, ನಿರ್ಮಲಾ ಸೀತಾರಾಮನ್‍ಗೆ ಸಿಕ್ತು ಬಿಜೆಪಿ ಟಿಕೆಟ್

    ನಟ ಜಗ್ಗೇಶ್ ಟಿಕೆಟ್ ನೀಡುವ ಮೂಲಕ ಯಶವಂತಪುರ ಕ್ಷೇತ್ರದಲ್ಲಿ ಒತ್ತಡ ಕಡಿಮೆ ಮಾಡಿದ್ದು, ಎಸ್.ಟಿ ಸೋಮಶೇಖರ್ ರಿಲೀಫ್ ನೀಡುವ ಕೆಲಸ ಹೈಕಮಾಂಡ್ ಮಾಡಿದೆ. ಜೆಡಿಎಸ್ ಜೊತೆಗೆ ಮಾತುಕತೆ ಅಂತ್ಯವಾಗದ ಹಿನ್ನೆಲೆ ಮೂರನೇ ಅಭ್ಯರ್ಥಿ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಜೆಡಿಎಸ್‍ನಿಂದ ಕುಪೇಂದ್ರ ರೆಡ್ಡಿ ಹೆಸರು ಮುನ್ನೆಲೆಯಲ್ಲಿದ್ದು ಅವರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಹಿನ್ನಲೆ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮಣೆ ಹಾಕಿದೆ.

  • ವಿಷಕಾರಿದ್ದ ಅಫ್ರಿದಿ ವಿರುದ್ಧ ಅಮಿತ್ ಮಿಶ್ರಾ ಕಿಡಿ

    ವಿಷಕಾರಿದ್ದ ಅಫ್ರಿದಿ ವಿರುದ್ಧ ಅಮಿತ್ ಮಿಶ್ರಾ ಕಿಡಿ

    ನವದೆಹಲಿ: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‍ನನ್ನು ಬೆಂಬಲಿಸಿ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಟ್ವೀಟ್ ಮಾಡಿದ್ದಕ್ಕೆ ಭಾರತೀಯ ಕ್ರಿಕೆಟಿಗ ಅಮಿತ್ ಮಿಶ್ರಾ ಕಿಡಿಕಾರಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರವನ್ನು ಬೆಂಬಲಿಸಿದ್ದಕ್ಕಾಗಿ ಮಲಿಕ್‍ಗೆ ಮರಣದಂಡನೆ ವಿಧಿಸಬೇಕೆಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬುಧವಾರ ನ್ಯಾಯಾಲಯವನ್ನು ಒತ್ತಾಯಿಸಿತ್ತು. ಇದನ್ನೂ ಓದಿ: ಪುಟಿನ್‌ನೊಂದಿಗೆ ನೇರ ಮಾತುಕತೆಗೆ ನಾನು ಸಿದ್ಧ: ಝೆಲೆನ್ಸ್ಕಿ

    ಈ ಬಗ್ಗೆ ಟ್ವೀಟ್ ಮಾಡಿದ್ದ ಅಫ್ರಿದಿ, ಮಾನವ ಹಕ್ಕುಗಳ ದುರುಪಯೋಗದ ವಿರುದ್ಧ ವಿಮರ್ಶಾತ್ಮಕ ಧ್ವನಿಗಳನ್ನು ಮೌನಗೊಳಿಸಲು ಭಾರತದ ನಿರಂತರ ಪ್ರಯತ್ನಗಳು ನಿಷ್ಪ್ರಯೋಜಕವಾಗಿದೆ. ಯಾಸಿನ್ ಮಲಿಕ್ ವಿರುದ್ಧದ ಆರೋಪಗಳು ಕಾಶ್ಮೀರದ ಸ್ವಾತಂತ್ರ್ಯ ಹೋರಾಟಕ್ಕೆ ಅಡ್ಡಿಯಾಗದಿರಲಿ. ಕಾಶ್ಮೀರಿ ನಾಯಕರ ವಿರುದ್ಧ ಅನ್ಯಾಯ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ನಿಗಾ ಇಡುವಂತೆ ವಿಶ್ವಸಂಸ್ಥೆಗೆ ಒತ್ತಾಯಿಸುತ್ತೇವೆ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ

    ಇದಕ್ಕೆ ಪ್ರತ್ಯುತ್ತರವಾಗಿ, ಅಮಿತ್ ಮಿಶ್ರಾ ಅವರು ಟ್ವೀಟ್ ಮಾಡಿ, ಆತ್ಮೀಯ ಶಾಹಿದ್ ಅಫ್ರಿದಿ ಅವರೇ ಯಾಸಿನ್ ಮಲಿಕ್ ಸ್ವತಃ ನ್ಯಾಯಾಲಯದ ದಾಖಲೆಯಲ್ಲಿ ತಪ್ಪೋಪ್ಪಿಕೊಂಡಿದ್ದಾನೆ. ನಿಮ್ಮ ಜನ್ಮದಿನಾಂಕದಂತೆ ಎಲ್ಲವೂ ದಾರಿತಪ್ಪಿಸುವುದಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ವಿವಿಧ ಪ್ರಕರಣಗಳ ಮೇಲೆ 2017ರಲ್ಲಿ ಮಲಿಕ್ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿ ಭಾರಿ ಭದ್ರತೆಯಲ್ಲಿದ್ದ ಯಾಸಿನ್ ಮಲಿಕ್ ವಿರುದ್ಧ ಯುಎಪಿಎ ಕಾಯ್ದೆಯ ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ), 17 (ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ಸಂಗ್ರಹ), 18 (ಭಯೋತ್ಪಾದನಾ ಕೃತ್ಯ ಎಸಗಲು ಸಂಚು) ಮತ್ತು 20 (ಭಯೋತ್ಪಾದನಾ ಸಂಘಟನೆಯ ಸದಸ್ಯನಾಗಿರುವುದು), ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 (ಅಪರಾಧ ಸಂಚು) ಮತ್ತು 124 (ದೇಶದ್ರೋಹ) ಪ್ರಕರಣಗಳನ್ನು ದಾಖಲಿಸಲಾಗಿತ್ತು. ಕೋರ್ಟ್ ವಿಚಾರಣೆಯಲ್ಲಿ ಕೃತ್ಯದ ಬಗ್ಗೆ ಯಸಿನ್ ಮಲಿಕ್ ತಪ್ಪೊಪ್ಪಿಕೊಂಡಿದ್ದ. ಎನ್‍ಐಎ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

  • ಜವಾಹರಲಾಲ್ ನೆಹರೂ ಪುಣ್ಯ ತಿಥಿ – ಸೋನಿಯಾ ಗಾಂಧಿಯಿಂದ ಪುಷ್ಪ ನಮನ

    ಜವಾಹರಲಾಲ್ ನೆಹರೂ ಪುಣ್ಯ ತಿಥಿ – ಸೋನಿಯಾ ಗಾಂಧಿಯಿಂದ ಪುಷ್ಪ ನಮನ

    ನವದೆಹಲಿ: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 58ನೇ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ಮೋದಿ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಇತರ ಪಕ್ಷದ ನಾಯಕರು ಸೇರಿದಂತೆ ಅನೇಕರು ಇಂದು ನಮನ ಸಲ್ಲಿಸಿದರು.

    ನಗರದ ಅವರ ಶಾಂತಿ ವನ ಸ್ಮಾರಕಕ್ಕೆ ಭೇಟಿ ನೀಡಿದ ಸೋನಿಯಾ ಗಾಂಧಿ ಅವರು ಸೇರಿದಂತೆ ಅನೇಕ ಗಣ್ಯರು ಪುಷ್ಪ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ

    ಜವಾಹರಲಾಲ್ ನೆಹರು ಅವರು 1964ರ ಮೇ 27 ರಂದು ಕೊನೆಯುಸಿರೆಳೆದರು. ದೇಶಾದ್ಯಂತ ಸುಮಾರು 1.5 ಮಿಲಿಯನ್ ಜನರು ಅವರ ಅಂತ್ಯಕ್ರಿಯೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ನೆಹರೂ ಅವರನ್ನು ಸ್ಮರಿಸಿ, ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿಯಂದು ಅವರಿಗೆ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: ಮಂಕಿಪಾಕ್ಸ್ ಆತಂಕ – ಬೆಂಗಳೂರಿನಲ್ಲಿ ಹೈ ಅಲರ್ಟ್

    ‘ಚಾಚಾ ನೆಹರು’ ಎಂದು ಪ್ರೀತಿಯಿಂದ ಕರೆಯಲ್ಪಡುವ ಜವಾಹರಲಾಲ್ ನೆಹರು ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನವೆಂಬರ್ 14, 1889 ರಂದು ಜನಿಸಿದ್ದರು. ನೆಹರು ಅವರು ಆಗಸ್ಟ್ 15, 1947 ರಂದು ಭಾರತದ ಪ್ರಧಾನ ಮಂತ್ರಿಯಾಗಿ 18 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

    ಜವಾಹರಲಾಲ್ ನೆಹರೂ ಅವರು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬರಹಗಾರರಾಗಿದ್ದ ಅವರು,  ‘ದಿ ಡಿಸ್ಕವರಿ ಆಫ್ ಇಂಡಿಯಾ’, ‘ಗ್ಲಿಂಪ್ಸಸ್ ಆಫ್ ವಲ್ರ್ಡ್ ಹಿಸ್ಟರಿ’ ಮತ್ತು ಅವರ ಆತ್ಮಚರಿತ್ರೆ ‘ಟುವರ್ಡ್ ಫ್ರೀಡಮ್’ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

    1950 ರಿಂದ 1955 ರವರೆಗೆ ಭಾರತದಲ್ಲಿ ಶಾಂತಿಯನ್ನು ಎತ್ತಿ ಹಿಡಿದಿದ್ದಕ್ಕಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಗೆ 11 ನಾಮನಿರ್ದೇಶನಗಳನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲದೇ ಅವರಿಗೆ 1955 ರಲ್ಲಿ ಭಾರತ ರತ್ನವನ್ನು ಸಹ ನೀಡಲಾಗಿದೆ.

  • ಮನೆ ಮಾಲೀಕಳ ಪ್ರಾಣ ಉಳಿಸಲು ಪರ್ವತ ಸಿಂಹದೊಂದಿಗೆ ಹೋರಾಡಿದ ಶ್ವಾನ

    ಮನೆ ಮಾಲೀಕಳ ಪ್ರಾಣ ಉಳಿಸಲು ಪರ್ವತ ಸಿಂಹದೊಂದಿಗೆ ಹೋರಾಡಿದ ಶ್ವಾನ

    ನ್ಯೂಯಾರ್ಕ್: ನಾಯಿ ಮತ್ತು ಮನುಷ್ಯರ ನಡುವಿನ ಸ್ನೇಹ ಸಂಬಂಧವು ಯಾವಾಗಲೂ ಉತ್ತಮವಾಗಿರುತ್ತದೆ. ತನಗೆ ಅನ್ನ ಹಾಕಿದ ಮಾಲೀಕರಿಗೆ ಅದು ಯಾವಾಗಲೂ ಋಣಿಯಾಗಿರುತ್ತದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕೆ ಸಾಕ್ಷಿಯಾಗಿ ಸಾಕಷ್ಟು ಪುರಾವೆಗಳಿವೆ. ಅಲದೇ ಮಾಲೀಕರೇನಾದರೂ ಪ್ರಾಣಾಪಾಯದಲ್ಲಿದ್ದರೆ ತನ್ನ ಪ್ರಾಣ ಒತ್ತೆಯಿಟ್ಟಾದರೂ ಕಾಪಾಡಲು ಮುಂದಾಗುತ್ತವೆ. ಇದೀಗ ಯುವತಿಯೊಬ್ಬಳು ಪರ್ವತ ಸಿಂಹದಿಂದ ದಾಳಿಗೊಳಗಾಗಿದ್ದ ಸಂದರ್ಭದಲ್ಲಿ ನಾಯಿಯೊಂದು ರಕ್ಷಿಸಿರುವ ಟ್ವೀಟ್‍ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಯುವತಿಯೊಬ್ಬಳು ತಮ್ಮ ಸಾಕು ನಾಯಿಯೊಂದಿಗೆ ವಾಯು ವಿಹಾರಕ್ಕೆಂದು ತೆರಳಿದ್ದಾಗ ಪರ್ವತ ಸಿಂಹವೊಂದು ಅವರ ಮೇಲೆ ದಾಳಿ ನಡೆಸಿದ ಘಟನೆ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಈ ವೇಳೆ ಅವಳ ಜೊತೆಯಿದ್ದ ಸಾಕು ನಾಯಿ ತನ್ನ ಮಾಲೀಕಳನ್ನು ರಕ್ಷಿಸುವ ಸಲುವಾಗಿ ಪರ್ವತ ಸಿಂಹದ ಎದುರು ನಿಂತು ಹೋರಾಡಿ ಆಕೆಯನ್ನು ರಕ್ಷಿಸಿದೆ.

    ಉತ್ತರ ಕ್ಯಾಲಿಫೋರ್ನಿಯಾದ ಟ್ರಿನಿಟಿ ನದಿಯ ಬಳಿ ಎರಿನ್ ವಿಲ್ಸನ್ ತನ್ನ ಸಾಕು ನಾಯಿಯೊಂದಿಗೆ ವಿಹರಿಸುತ್ತಿದ್ದಳು. ಈ ಸಂದರ್ಭದಲ್ಲಿ ಪರ್ವತ ಸಿಂಹವು ಆಕೆಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಆಕೆ ಭೀತಿಯಿಂದ ಕಿರುಚಾಡಿದ್ದಾಳೆ. ಶೀಘ್ರದಲ್ಲೇ ಪರ್ವತ ಸಿಂಹವನ್ನು ಕಂಡ ನಾಯಿಯು ತನ್ನ ಪ್ರಾಣವನ್ನು ಸಹ ಲೆಕ್ಕಿಸದೆ ಅದರ ಮೇಲೆ ಮುಗಿಬಿದ್ದಿದೆ. ಘಟನೆಯಿಂದಾಗಿ ನಾಯಿಯು ತೀವ್ರ ಗಾಯಗೊಂಡಿದ್ದು, ಶ್ವಾನಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ವಾನ ಚೇತರಿಸಿಕೊಳ್ಳುತ್ತಿದೆ. ಯುವತಿಯ ಮೇಲೆ ದಾಳಿ ಮಾಡಿದ ಸಿಂಹವು ಆಕೆಯ ಜಾಕೆಟ್ ಅನ್ನು ಎಳೆದು ತನ್ನ ಚೂಪಾದ ಉಗುರುಗಳಿಂದ ಪರಚಿದೆ.

    ಶ್ವಾನದ ಧೈರ್ಯಕ್ಕೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹೇಳೋದು ನಾಯಿಗಿರುವ ನಿಯತ್ತು ಮನುಷ್ಯರಿಗೆ ಇರುವುದಿಲ್ಲ ಎಂದು.

  • ಇದು ದುರಹಂಕಾರವಲ್ಲ, ಆತ್ಮವಿಶ್ವಾಸ: ರಾಹುಲ್‌ಗೆ ವಿದೇಶಾಂಗ ಸಚಿವ ತಿರುಗೇಟು

    ಇದು ದುರಹಂಕಾರವಲ್ಲ, ಆತ್ಮವಿಶ್ವಾಸ: ರಾಹುಲ್‌ಗೆ ವಿದೇಶಾಂಗ ಸಚಿವ ತಿರುಗೇಟು

    ನವದೆಹಲಿ: ಭಾರತೀಯ ವಿದೇಶಾಗ ನೀತಿಯನ್ನು ದುರಹಂಕಾರಿ ಎಂದು ಕರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿರುಗೇಟು ನೀಡಿದ್ದಾರೆ. ವಿಶ್ವ ವೇದಿಕೆಯಲ್ಲಿ ಭಾರತ ಪ್ರದರ್ಶಿಸುತ್ತಿರುವುದು ದುರಹಂಕಾರವಲ್ಲ, ಆತ್ಮವಿಶ್ವಾಸ ಎಂದು ಹೇಳಿದ್ದಾರೆ.

    sಶುಕ್ರವಾರ ಲಂಡನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ನಡೆದ ಇಂಡಿಯಾಸ್ ಫಾರ್ ಇಂಡಿಯಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತಮಾಡಿದ ರಾಹುಲ್ ಗಾಂಧಿ, ವಿದೇಶಾಂಗ ನೀತಿ ಸಂಪೂರ್ಣ ಬದಲಾಗಿದೆ. ಅಲ್ಲಿನ ಅಧಿಕಾರಿಗಳು ಯಾರ ಮಾತನ್ನೂ ಕೇಳುವುದಿಲ್ಲ. ದುರಹಂಕಾರದಿಂದ ನಡೆದುಕೊಳ್ಳುತ್ತಾರೆ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ಭಾರತದ ವಿದೇಶಾಂಗ ನೀತಿ ಸಂಪೂರ್ಣ ಬದಲಾಗಿದೆ, ಯಾರ ಮಾತನ್ನೂ ಕೇಳಲ್ಲ: ರಾಹುಲ್ ಗಾಂಧಿ

    ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ ಜೈಶಂಕರ್, ಹೌದು.. ಭಾರತೀಯ ವಿದೇಶಾಂಗ ಸೇವೆ ಬದಲಾಗಿದೆ. ಅವರು ಸರ್ಕಾರದ ಆದೇಶವನ್ನು ಅನುಸರಿಸುತ್ತಾರೆ. ಅವರು ಇತರರ ವಾದಗಳನ್ನೂ ಎದುರಿಸುತ್ತಾರೆ. ಆದರೆ ಅದನ್ನು ದುರಹಂಕಾರ ಎಂದು ಕರೆಯಲಾಗುವುದಿಲ್ಲ. ಅದನ್ನು ಆತ್ಮವಿಶ್ವಾಸ ಎಂದು ಕರೆಯಲಾಗುತ್ತದೆ. ರಾಷ್ಟ್ರೀಯ ಹಿತಾಸಕ್ತಿ ರಕ್ಷಿಸುವುದು ಎಂದು ಕರೆಯಲಾಗುತ್ತದೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – 14ಕ್ಕೇರಿದ ಸಾವಿನ ಸಂಖ್ಯೆ

    ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಜಾಗತಿಕ ಸಮಸ್ಯೆಗಳ ವಿಚಾರದಲ್ಲಿ ಭಾರತದ ಸ್ಥಾನ ಹಾಗೂ ಹಿತಾಸಕ್ತಿಗಳಿಗೆ ಮೊದಲ ಸ್ಥಾನ ನೀಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ರಷ್ಯಾ-ಉಕ್ರೇನ್ ಯುದ್ಧದ ನಡುವೆ ರಷ್ಯಾದಿಂದ ಅಗ್ಗದ ಬೆಲೆಗೆ ಭಾರತ ತೈಲವನ್ನು ಖರೀದಿಸಿತ್ತು. ಆ ಸಂದರ್ಭ ಇತರ ದೇಶಗಳು ಭಾರತವನ್ನು ವಿರೋಧಿಸಿದ್ದವು. ಆಗ ಜೈಶಂಕರ್ ವಿದೇಶಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.

  • ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ – ಸಿದ್ದುಗೆ ಸುನಿಲ್ ಕುಮಾರ್ ಟಾಂಗ್

    ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ – ಸಿದ್ದುಗೆ ಸುನಿಲ್ ಕುಮಾರ್ ಟಾಂಗ್

    ಬೆಂಗಳೂರು: ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

    SIDDARAMAIHA SPOKE

    ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಲೆ ತಗ್ಗಿಸುವಂತಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಂತಹ ಗಂಭೀರ ಕಾರ್ಯವನ್ನು ನಾಡಿನ ಹಿರಿಯ ಲೇಖಕರು, ಸಮಾಜ ಸುಧಾರಕರನ್ನು ಅವಹೇಳನ ಮಾಡುತ್ತಾ ಬಂದಿರುವ ಅನರ್ಹ, ಪೂರ್ವಾಗ್ರಹ ಪೀಡಿತ ವ್ಯಕ್ತಿಯಿಂದ ಮಾಡಿಸಿರುವುದೇ ನಾಡು-ನುಡಿಗೆ ಬಗೆದಿರುವ ದ್ರೋಹ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು.

    ಸದ್ಯ ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಸುನಿಲ್ ಕುಮಾರ್ ಅವರು, ನಾರಾಯಣ ಗುರು ಕುರಿತು ಹಾಗೂ ಅವರ ಆದರ್ಶಗಳನ್ನು ಪಠ್ಯ ಪುಸ್ತಕದಿಂದ ನಮ್ಮ ಸರ್ಕಾರವು ತೆಗೆದು ಹಾಕಿಲ್ಲ. ನಾರಾಯಣ ಗುರುಗಳ ಬಗ್ಗೆ ನಮ್ಮ ಸರ್ಕಾರಕ್ಕೆ ಶ್ರದ್ದೆ, ಭಕ್ತಿ ಇದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ವಿನಾಕಾರಣ ತಪ್ಪು ಮಾಹಿತಿಯನ್ನು ಸಾರ್ವಜನಿಕವಾಗಿ ಹರಡುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಇಂದು SSLC ಫಲಿತಾಂಶ – ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಗುಡ್‌ನ್ಯೂಸ್!

    ಪದೇ ಪದೇ ನಾರಾಯಣ ಗುರುಗಳ ವಿಷಯವನ್ನು ರಾಜಕೀಯಕ್ಕೆ ಎಳೆದು ತರುವುದು ಶೋಭೆ ತರುವಂತದ್ದಲ್ಲ. ಬಲವಂತದ ಮತಾಂತರ ನಿಷೇಧ ಕಾಯ್ದೆಯ ಸುಗ್ರೀವಾಜ್ಞೆಗೆ ಘನತೆವೆತ್ತ ರಾಜ್ಯಪಾಲರ ಅಂಕಿತ ದೊರೆತಿದೆ. ಇನ್ನು ಮುಂದೆ ರಾಜ್ಯದಲ್ಲಿ ಬಲವಂತದ, ಆಸೆ, ಆಮಿಷಗಳ ಮೂಲಕ ನಡೆಯುತ್ತಿದ್ದ ಮತಾಂತರಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂದಿದ್ದಾರೆ.

    ಭಾರತದ ಶೌರ್ಯ, ಪರಾಕ್ರಮದ ಇತಿಹಾಸವನ್ನು ಪಠ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಿ, ತಿರುಚಿದ ಇತಿಹಾಸವನ್ನು ತಿಳಿಸುವ ಕೃತ್ಯವನ್ನು ಕಾಂಗ್ರೆಸ್ ಕಳೆದ 70 ವರ್ಷಗಳಿಂದ ಮಾಡುತ್ತಾ ಬಂದಿತ್ತು. ಈಗ ಭಾರತದ ಯುವಕರಿಗೆ ಬೇಕಾಗಿರುವುದು ಭಾರತದ ನೈಜ ಇತಿಹಾಸವೇ ಹೊರತು ದಾಸ್ಯದ ಇತಿಹಾಸವಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಅಸ್ಸಾಂನಲ್ಲಿ ಭೀಕರ ಪ್ರವಾಹ – 9 ಮಂದಿ ಸಾವು, ಸಂಕಷ್ಟದಲ್ಲಿ ಲಕ್ಷಾಂತರ ಜನ

    ಆ ಇತಿಹಾಸವನ್ನು ಪಠ್ಯಕ್ರಮದಲ್ಲಿ ಜೋಡಿಸುವಂತಹ ಕಾರ್ಯವನ್ನು ತಜ್ಞರ ಸಮಿತಿ ಕೈಗೊಂಡಿರುವುದು ಸ್ವಾಗತಾರ್ಹ. ಭಾರತದ ಯುವ ಜನತೆಗೆ ಬೇಕಾಗಿರುವುದು ವಿವೇಕಾನಂದ,ವಿಜಯನಗರ, ನಾರಾಯಣ ಗುರು, ಶಂಕರಾಚಾರ್ಯರಂತಹ ದಾರ್ಶನಿಕರ ಜೀವನ ಕ್ರಮವೇ ಹೊರತು ಮೆಕಾಲೆ ಪ್ರೇರಿತ, ಮೊಘಲರ, ಟಿಪ್ಪು ಸುಲ್ತಾನರ ಇತಿಹಾಸವಲ್ಲ ಎಂದು ಟಾಂಗ್ ನೀಡಿದ್ದಾರೆ.

    ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ. ಯಾವ ತಪ್ಪನ್ನು ಕಾಂಗ್ರೆಸ್ ಮಾಡಿತ್ತೋ ಅದನ್ನು ಸರಿಪಡಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.