Tag: ಟ್ವೀಟ್

  • ಶಕ್ತಿ ಸ್ವರೂಪಿಣಿ ದೇವಿಯು ಅಪಾರ ದ್ವೇಷದಿಂದ ಕೂಡಿದ ಬಿಜೆಪಿ ನಾಯಕರ ಆತ್ಮವನ್ನು ಶುದ್ಧೀಕರಿಸಲಿ: ಸುರ್ಜೇವಾಲಾ

    ಶಕ್ತಿ ಸ್ವರೂಪಿಣಿ ದೇವಿಯು ಅಪಾರ ದ್ವೇಷದಿಂದ ಕೂಡಿದ ಬಿಜೆಪಿ ನಾಯಕರ ಆತ್ಮವನ್ನು ಶುದ್ಧೀಕರಿಸಲಿ: ಸುರ್ಜೇವಾಲಾ

    ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್‍ದೀಪ್ ಸುರ್ಜೇವಾಲಾ ಕರಗದ ಬಗ್ಗೆ ಶುಭ ಕೋರಿದ್ದಾರೆ.

    ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ದರ್ಗಾಕ್ಕೆ ಹೋಗುವುದಕ್ಕೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸುರ್ಜೇವಾಲಾ ಕರಗದ ಶುಭ ಕೋರಿ ರಾಜ್ಯ ಬಿಜೆಪಿಯ ಕಾಲೆಳೆದಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಎಲ್ಲರಿಗೂ ಲೋಕ ಕಲ್ಯಾಣಾರ್ಥದ ಕರಗ ಮಹೋತ್ಸವದ ಹಾರ್ದಿಕ ಶುಭಾಶಯಗಳು. ಧರ್ಮರಾಯ ಸ್ವಾಮಿ ದೇವಸ್ಥಾನದ ಸಾಮರಸ್ಯದ ಉತ್ಸಾಹವು ಕರ್ನಾಟಕ ಮತ್ತು ಭಾರತದ ಶ್ರೀಮಂತ ವೈಭವ ಮತ್ತು ಸಂಪ್ರದಾಯಗಳನ್ನು ಸಂಕೇತಿಸುತ್ತದೆ.ಶಕ್ತಿ ಸ್ವರೂಪಿಣಿ ದೇವಿಯು ಅಪಾರ ದ್ವೇಷ, ಮತ್ತು ಹಿಂಸೆಯಿಂದ ಕೂಡಿದ ಬಿಜೆಪಿ ನಾಯಕರ “ಆತ್ಮ” ವನ್ನು ಶುದ್ಧೀಕರಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

  • ಹ್ಯಾಪಿ ಬರ್ತ್‌ಡೇ ಬಿಜೆಪಿ- ವಿಶ್‌ ಮಾಡಿ ಕಾಲೆಳೆದ ಶಶಿ ತರೂರ್‌

    ಹ್ಯಾಪಿ ಬರ್ತ್‌ಡೇ ಬಿಜೆಪಿ- ವಿಶ್‌ ಮಾಡಿ ಕಾಲೆಳೆದ ಶಶಿ ತರೂರ್‌

    ನವದೆಹಲಿ: ಬಿಜೆಪಿಯ 42ನೇ ಸಂಸ್ಥಾಪನಾ ದಿನಕ್ಕೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಶುಭಾಶಯ ತಿಳಿಸಿದ್ದಾರೆ. ಟ್ವೀಟ್‌ ಮಾಡಿ ಶುಭಾಶಯ ತಿಳಿಸಿರುವ ಅವರು, ಸಿದ್ಧಾಂತ ಮತ್ತು ನಿಯಮಗಳ ವಿಚಾರವಾಗಿ ಬಿಜೆಪಿ ಕಾಲೆಳೆದಿದ್ದಾರೆ.

    ಸಂಸ್ಥಾಪನಾ ದಿನದ ಪ್ರಯುಕ್ತ ಬಿಜೆಪಿ ಟ್ಟಿಟ್ಟರ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿತ್ತು. ಅದರಲ್ಲಿ ʼಬಿಜೆಪಿಯ ಸಂವಿಧಾನ ಮತ್ತು ನಿಯಮಗಳುʼ ಏನು ಎಂಬುದನ್ನು ಉಲ್ಲೇಖಿಸಿತ್ತು. ಇದರ ಸ್ಕ್ರೀನ್‌ಶಾಟ್‌ ತೆಗೆದುಕೊಂಡು ಸಂಸದ ಶಶಿ ತರೂರ್‌, ಬಿಜೆಪಿಗೆ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಬಿಜೆಪಿ ಸಂವಿಧಾನ ಮತ್ತು ನಿಯಮಗಳ ವಿಚಾರವನ್ನು ಉಲ್ಲೇಖಿಸಿ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಇಬ್ಬಗೆಯ ರಾಜಕೀಯ: ಪ್ರತಿ ಪಕ್ಷಗಳ ವಿರುದ್ಧ ಮೋದಿ ಕಿಡಿ

    ಟ್ವೀಟ್‌ನಲ್ಲೇನಿದೆ?
    ಹುಟ್ಟುಹಬ್ಬದ ಶುಭಾಶಯಗಳು ಬಿಜೆಪಿ! ನಿಮಗೆ ಇಂದಿಗೆ 42 ವರ್ಷ. ನಿಮ್ಮ ಸ್ವಂತ ಸಂವಿಧಾನಕ್ಕೆ ಅನುಗುಣವಾಗಿ ಬದುಕಲು ಇದು ಸಮಯವಲ್ಲವೇ? ನೀವು ನಂಬುವ ಸಿದ್ಧಾಂತ ಹಾಗೂ ಪ್ರತಿಪಾದಿಸುವ ವಿಚಾರಕ್ಕೂ, ನೀವು ಹಾಕಿರುವ ಪೋಸ್ಟ್‌ಗೂ ತಾಳಮೇಳ ಇಲ್ಲ ಎನಿಸುತ್ತದೆ. ಈ ಡಾಕ್ಯುಮೆಂಟ್ ಕೂಡ ನಿಮ್ಮ ಕಲ್ಪಿತ ಜುಮ್ಲಾಗಳಲ್ಲಿ ಒಂದಾಗಿತ್ತೇ ಎಂದು ಶಶಿ ತರೂರ್‌ ವ್ಯಂಗ್ಯಾತ್ಮವಾಗಿ ಪ್ರಶ್ನಿಸಿದ್ದಾರೆ.

    ಆಧುನಿಕತೆ, ಪ್ರಗತಿಪರ ಮತ್ತು ದೃಷ್ಟಿಕೋನದಲ್ಲಿ ಪ್ರಬುದ್ಧವಾಗಿರುವ ಭಾರತವನ್ನು ಬಲಿಷ್ಠ ಮತ್ತು ಸಮೃದ್ಧ ರಾಷ್ಟ್ರವಾಗಿ ನಿರ್ಮಿಸಲು ಭಾರತೀಯ ಜನತಾ ಪಕ್ಷವು ಪ್ರತಿಜ್ಞೆ ಮಾಡಿದೆ ಎಂದು ಬಿಜೆಪಿಯ ಪೋಸ್ಟ್‌ನಲ್ಲಿದೆ. ಇದರ ಸ್ಕ್ರೀನ್‌ಶಾಟ್‌ನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಶಶಿ ತರೂರ್‌ ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ನಾನೇನು ವಿಜಯ್‌ ಮಲ್ಯಾನಾ: ಆಸ್ತಿ ಜಪ್ತಿಗೆ ಸಂಜಯ್‌ ರಾವತ್‌ ಕಿಡಿ

    ಬಿಜೆಪಿಯ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಮ್ಮ ಪ್ರತಿಸ್ಪರ್ಧಿಗಳು ‘ಪರಿವಾರ ಭಕ್ತಿ’ಗಾಗಿ ನಿಂತರೆ ಬಿಜೆಪಿ ‘ರಾಷ್ಟ್ರ ಭಕ್ತಿ’ಗೆ ಸಮರ್ಪಿತವಾಗಿದೆ ಎಂದು ಮೋದಿ ಅವರು ಬುಧವಾರ ಪ್ರತಿಪಾದಿಸಿದ್ದಾರೆ.

  • ಸಮ್ಮಿಶ್ರ ಸರ್ಕಾರದಲ್ಲಿ ಸ್ವಾಭಿಮಾನ ಅಡ್ಡಿಬರಲಿಲ್ಲವೇ: ಹೆಚ್‌ಡಿಕೆಗೆ ರೇಣುಕಾಚಾರ್ಯ ಪ್ರಶ್ನೆ

    ಸಮ್ಮಿಶ್ರ ಸರ್ಕಾರದಲ್ಲಿ ಸ್ವಾಭಿಮಾನ ಅಡ್ಡಿಬರಲಿಲ್ಲವೇ: ಹೆಚ್‌ಡಿಕೆಗೆ ರೇಣುಕಾಚಾರ್ಯ ಪ್ರಶ್ನೆ

    ದಾವಣಗೆರೆ: ಎಷ್ಟೇ ಆದರೂ ನೀವು ಸಾಂದರ್ಭಿಕ ಶಿಶು ತಾನೇ? ಸಮ್ಮಿಶ್ರ ಸರ್ಕಾರದಲ್ಲಿ ನಾನು ಕೇವಲ ಗುಲಾಮನಾಗಿದ್ದೆ ಎಂದು ಹೇಳುವಾಗ ನಿಮಗೆ ಸ್ವಾಭಿಮಾನ ಅಡ್ಡಿಬರಲಿಲ್ಲ? ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಎಂಪಿ ರೇಣುಕಾಚಾರ್ಯ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

    ಹಿಂದೂ ಪರ ಸಂಘಟನೆಗಳ ವಿರುದ್ಧ ಕುಮಾರಸ್ವಾಮಿ ಧ್ವನಿ ಎತ್ತಿದ್ದ ಬೆನ್ನಲ್ಲೇ ಶಾಸಕ ರೇಣುಕಾಚಾರ್ಯ ಸರಣಿ ಟ್ವೀಟ್ ಮೂಲಕ ಕುಟುಕಿದ್ದಾರೆ. ಅಧಿಕಾರಕ್ಕಾಗಿ ಯಾವ ಪಕ್ಷದ ಜೊತೆಯಲ್ಲಾದರೂ ಹೊಂದಾಣಿಕೆ ಮಾಡಿಕೊಳ್ಳುವ ಜಾಯಮಾನದವರು ಯಾರು ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಕಷ್ಟದಲ್ಲಿರುವ ಜನರಿಗೆ ಸರ್ಕಾರದಿಂದ ಕರೆಂಟ್ ಶಾಕ್: ಪೃಥ್ವಿ ರೆಡ್ಡಿ

    ಅಧಿಕಾರ ಹಸ್ತಾಂತರ ಮಾಡುವಾಗ ಒಪ್ಪಂದದ ನಾಟಕವಾಡಿದ ವಚನ ಭ್ರಷ್ಟ ಯಾರು? ನನ್ನಿಂದಲೇ ಕರ್ನಾಟಕದಲ್ಲಿ ಬಿಜೆಪಿ ಮರುಜನ್ಮ ಪಡೆಯಿತು ಎಂದು ಹೇಳುವ ನಿಮಗೆ ಕೃತಜ್ಞತೆ ಇದೆಯೆ? 2006ರಲ್ಲಿ ನಾವು ಜೆಡಿಎಸ್‌ಗೆ ಬೆಂಬಲ ನೀಡಿ ಸರ್ಕಾರ ರಚಿಸದಿದ್ದರೆ ಅಂದೇ ನಿಮ್ಮ ಪಕ್ಷ ಹೇಳ ಹೆಸರಿಲ್ಲದಂತೆ ಮುಗಿಸಲು ಇಬ್ಬರು ಮಹಾನ್ ನಾಯಕರು ಮುಂದಾಗಿದ್ದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಹಿಂದೂ ಸಂಘಟನೆಗಳ ವಿರುದ್ಧ ಏಕಾಏಕಿ ಮುಗಿಬಿದ್ದಿರುವುದರ ಹಿಂದೆ ನಿಜವಾದ ಜನಹಿತ ಇದ್ದರೆ, ಗಂಗೊಳ್ಳಿಯಲ್ಲಿ ಮೀನು ಖರೀದಿಸಬಾರದೆಂದು ಹುಕುಂ ಹೊರಡಿಸಿದವರ ವಿರುದ್ಧ ಏಕೆ ಸೊಲ್ಲೆತ್ತಿಲ್ಲ? ಕೇವಲ ಹಿಂದೂಗಳು, ಹಿಂದೂ ಸಂಘಟನೆಗಳು ನಿಮ್ಮ ಕಣ್ಣಿಗೆ ಸಮಾಜ ಘಾತುಕರಂತೆ ಕಂಡರೆ ಶಿವಮೊಗ್ಗದಲ್ಲಿ ಅಮಾಯಕ ಹರ್ಷ ಕೊಲೆ ಮಾಡಿದವರು ಯಾರು, ಶಾಂತಿಪ್ರೀಯರೇ? ಎಂದು ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನನ್ನು ಈ ಬಾರಿ ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ: ರೇಣುಕಾಚಾರ್ಯ

    ಬಿಜೆಪಿ ಶ್ರೀಮಂತ ಪಕ್ಷ ಎನ್ನುವುದಾದರೆ ನೀವು ರಾಮನಗರದಲ್ಲಿ ರೇಷ್ಮೆ, ಹಾಸನದಲ್ಲಿ ಆಲೂಗಡ್ಡೆ ಬೆಳೆದು ಪಕ್ಷ ಸಂಘಟನೆ ಮಾಡುತ್ತಿದ್ದಿರಾ? ತಾಜ್ ವೆಸ್ಟ್ ಆಂಡ್ ಹೋಟೆಲ್ ಅನ್ನೇ ಸಿಎಂ ಕಚೇರಿ ಮಾಡಿಕೊಂಡಿದ್ದ ನೀವು ಅಧಿಕಾರ ಇದ್ದಾಗ ಜನರ ಕೈಗೆ ಸಿಗದೇ ಈಗ ಬಡವರ ಬಗ್ಗೆ ಅಣಿಮುತ್ತು ಉದುರಿಸುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ ಎಂದು ಸರಣಿ ಟ್ವೀಟ್ ಮುಖಾಂತರ ಟೀಕಿಸಿದ್ದಾರೆ.

  • ಎಡಿಟ್ ಫೀಚರ್ ತರಲಿದ್ದೇವೆ ಎಂದ ಟ್ವಿಟ್ಟರ್ – ಇದು ಏಪ್ರಿಲ್ ಫೂಲ್ ಅಂದ್ರು ನೆಟ್ಟಿಗರು

    ಎಡಿಟ್ ಫೀಚರ್ ತರಲಿದ್ದೇವೆ ಎಂದ ಟ್ವಿಟ್ಟರ್ – ಇದು ಏಪ್ರಿಲ್ ಫೂಲ್ ಅಂದ್ರು ನೆಟ್ಟಿಗರು

    ವಾಷಿಂಗ್ಟನ್: ಮೈಕ್ರೋ ಬ್ಲಾಗಿಂಗ್ ಆ್ಯಪ್ ಟ್ವಿಟ್ಟರ್ ಏಪ್ರಿಲ್ 1ರಂದು ಬಳಕೆದಾರರಿಗೆ ಒಂದು ವಿಶೇಷ ಸಂದೇಶ ನೀಡಿತ್ತು. ಟ್ವಿಟ್ಟರ್ ತನ್ನ ಅಧಿಕೃತ ಖಾತೆಯಲ್ಲಿ ಎಡಿಟ್ ಬಟನ್ ಅನ್ನು ತರಲಿದ್ದೇವೆ ಎಂದು ಬರೆದಿತ್ತು. ಆದರೆ ಮೂರ್ಖರ ದಿನದಂದು ನೀಡಿರುವ ಈ ಸಂದೇಶವನ್ನು ಬಳಕೆದಾರರು ಹಾಸ್ಯವಾಗಿ ತೆಗೆದುಕೊಂಡಿದ್ದಾರೆ.

    ಏಪ್ರಿಲ್ 1 ರಂದು ಟ್ವೀಟ್ ಮಾಡಿರುವ ಟ್ವಿಟ್ಟರ್ ಎಡಿಟ್ ಬಟನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿತ್ತು. ಆದರೆ ನೆಟ್ಟಿಗರು ಜಾಣರೆಂಬುದನ್ನು ಸಾಬೀತುಪಡಿಸಿದ್ದಾರೆ. ಈ ವಿಚಾರವಾಗಿ ನೆಟ್ಟಿಗರು ಟ್ವಿಟ್ಟರ್ ಅನ್ನೇ ತಿರುಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗೂಗಲ್ ಪೇ ಹೊಸ ಫೀಚರ್ – ಟ್ಯಾಪ್ ಟು ಪೇ

     

    ಈ ಟ್ವೀಟ್ ಹಾಸ್ಯ ಅಲ್ಲವೇ? ಎಂದು ಪ್ರಶ್ನಿಸಿದ್ದಕ್ಕೆ ಟ್ವಿಟ್ಟರ್, ಈ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಮುಂದೆ ಈ ಹೇಳಿಕೆಯನ್ನು ನಾವು ಎಡಿಟ್ ಮಾಡುವ ಸಾಧ್ಯವೂ ಇದೆ ಎಂದು ಪ್ರತಿಕ್ರಿಯಿಸಿದೆ. ಇದನ್ನೂ ಓದಿ: ನೇಪಾಳದ ಪ್ರಧಾನಿಗೆ ವಿಶಿಷ್ಟ ಉಡುಗೊರೆ ನೀಡಿದ ಪ್ರಧಾನಿ ಮೋದಿ

    ಟ್ವಿಟ್ಟರ್‌ನ ಗೊಂದಲಮಯ ಹೇಳಿಕೆಯನ್ನು ಕೆಲವರು ಒಪ್ಪಿಕೊಂಡರೆ ಹಲವರು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಟ್ವಿಟ್ಟರ್‌ನ ಟ್ವೀಟ್ ಪ್ರಕಾರ ಮುಂದೊಂದು ದಿನ ಎಡಿಟ್ ಬಟನ್‌ನ ಫೀಚರ್ ಬಂದಲ್ಲಿ ಬಳಕೆದಾರರಿಗಂತೂ ಉಪಯುಕ್ತವಾಗುವುದು ಸತ್ಯ.

  • ಯುಗಾದಿ ನಿಮ್ಮ ಜೀವನದಲ್ಲಿ ಉತ್ಸಾಹ, ಸ್ಪೂರ್ತಿ ತರಲಿ – ದೇಶದ ಜನತೆಗೆ ಮೋದಿ ವಿಶ್

    ಯುಗಾದಿ ನಿಮ್ಮ ಜೀವನದಲ್ಲಿ ಉತ್ಸಾಹ, ಸ್ಪೂರ್ತಿ ತರಲಿ – ದೇಶದ ಜನತೆಗೆ ಮೋದಿ ವಿಶ್

    ನವದೆಹಲಿ: ನವರಾತ್ರಿ ಮತ್ತು ಭಾರತೀಯ ಸಾಂಪ್ರದಾಯಿಕ ಹೊಸ ವರ್ಷದ ಆರಂಭದ ಸಂಕೇತವಾದ ಯುಗಾದಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.

    ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಸಮಸ್ತ ನಾಡಿನ ಜನತೆಗೆ ನವರಾತ್ರಿಯ ಶುಭಾಶಯಗಳು. ಈ ಶಕ್ತಿಯ ಆರಾಧನೆಯ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಚೈತನ್ಯವನ್ನು ತುಂಬಲಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

    ಚೈತ್ರ ನವರಾತ್ರಿಯ ಮಂಗಳಕರ 9 ದಿನಗಳ ಹಬ್ಬವು ಇಂದಿನಿಂದ ಪ್ರಾರಂಭವಾಗುತ್ತದೆ. ಒಂಬತ್ತು ದಿನಗಳ ಕಾಲ ನಡೆಯುವ ಹಬ್ಬದಲ್ಲಿ ದುರ್ಗಾ ದೇವಿಯನ್ನು ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ಇದನ್ನೂ ಓದಿ: ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ

    ಮತ್ತೊಂದೆಡೆ ಇಂದು ಭಾರತೀಯ ಸಾಂಪ್ರದಾಯಿಕ ಹೊಸ ವರ್ಷದ ಆರಂಭದ ಸಂಕೇತವಾದ ಯುಗಾದಿ ಹಬ್ಬವಾಗಿದ್ದು, ಈ ಹಬ್ಬವನ್ನು ಭಾರತದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷವಾಗಿ ಕೂಡ ಮೋದಿ ಅವರು, ವಿಕ್ರಮ್ ಸಂವತ್ ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಸ್ಪೂರ್ತಿಯನ್ನು ತರಲಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ವಿಶೇಷ ಪಾನಕ

    ಯುಗಾದಿ ಹಬ್ಬದ ಪ್ರಯುಕ್ತ ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿರುವ ಕೆಲವು ಗ್ರೀಟಿಂಗ್ ಕಾರ್ಡ್‍ಗಳನ್ನು ಮೋದಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡು ಜನರಿಗೆ ಶುಭಾಶಯ ತಿಳಿಸಿದ್ದು, ಬಹಳ ವಿಶೇಷವಾಗಿದೆ.

  • ದೇಶವೆಂದರೆ ಮಣ್ಣಲ್ಲ, ಮನುಷ್ಯರು – ಬಿಜೆಪಿ ವಿರುದ್ಧ ಹೆಚ್‍ಡಿಕೆ ಟ್ವೀಟ್

    ದೇಶವೆಂದರೆ ಮಣ್ಣಲ್ಲ, ಮನುಷ್ಯರು – ಬಿಜೆಪಿ ವಿರುದ್ಧ ಹೆಚ್‍ಡಿಕೆ ಟ್ವೀಟ್

    ಬೆಂಗಳೂರು: ದೇಶವೆಂದರೆ ಮಣ್ಣಲ್ಲ, ಮನುಷ್ಯರು ಎಂದು ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ.

    ರಾಜ್ಯದಲ್ಲಿ ಹಲಾಲ್ ಕಟ್ ಸಂಘರ್ಷದ ನಡುವೆ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಕರಪತ್ರಗಳನ್ನು ಹಂಚಿ ಸಮಾಜ ಒಡೆಯುತ್ತಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಬಗ್ಗೆ ನನ್ನ ಹೇಳಿಕೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಧರ್ಮ-ಜಾತಿ ಆಧಾರದ ಮೇಲೆ ಜನರನ್ನು ವಿಘಟಿಸುವ ಇಂಥ ಸಂಘಟನೆಗಳ ಕಿಡಿಗೇಡಿಗಳ ಬಗ್ಗೆ ನನ್ನ ನಿಲುವು ಅಚಲ. ‘ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ’ ಸೃಷ್ಟಿಸುವ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

    ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇದು ವಿಶ್ವ ಹಿಂದೂ ಪರಿಷತ್, ಬಜರಂಗದಳದ ಜಹಗೀರಲ್ಲ. ಇವೇನು ಹಿಂದೂಗಳ ಪ್ರಾತಿನಿಧಿಕ ಸಂಸ್ಥೆಗಳೂ ಅಲ್ಲ. ಒಂದು ರಾಜಕೀಯ ಪಕ್ಷದ ಬಾಲಂಗೋಚಿಗಳಷ್ಟೇ. ಹಿಂದೂ, ಹಿಂದುತ್ವ ಎನ್ನುವ ಪರಂಪರೆ ಇವರ ಗುತ್ತಿಗೆಯಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೇವಲ 1 ರೂ. ಸಂಬಳ ತೆಗೆದುಕೊಳ್ಳುತ್ತೇನೆ: ಪಂಜಾಬ್‌ನ ಹೊಸ ಅಡ್ವೊಕೇಟ್ ಜನರಲ್

    ಧರ್ಮೋ ರಕ್ಷತಿ ರಕ್ಷಿತಃ ಎನ್ನುವುದರ ಅರಿವು ನನಗೂ ಇದೆ. ಧರ್ಮ ರಕ್ಷಣೆ ಎಂದರೆ ಇನ್ನೊಬ್ಬರನ್ನು ಕಸಿಯುವುದಲ್ಲ? ನೆಮ್ಮದಿಯ ನಾಡಿಗೆ ಕಿಚ್ಚಿಡುವುದಲ್ಲ? ಮನಸ್ಸುಗಳನ್ನು ಒಡೆದು ದೇಶವನ್ನು ಒಡೆದ ಮಡಿಕೆ ಮಾಡುವುದಲ್ಲ. ದೇಶವೆಂದರೆ ಮಣ್ಣಲ್ಲ, ಮನುಷ್ಯರು ಎಂದು ಹೇಳಿದ್ದಾರೆ.

    ವಿಶ್ವ ಹಿಂದೂ ಪರಿಷತ್, ವಿಶ್ವ ವಿನಾಶಕ ಪರಿಷತ್ ಅಥವಾ ಧರ್ಮ ವಿನಾಶಕ ಪರಿಷತ್ ಆಗುವುದು ಬೇಡ. ಬಜರಂಗದಳ ಭಾವನೆಗಳ ಭಯೋತ್ಪಾದಕ ಆಗುವುದು ಬೇಡ. ಹಿಂದೂ ಧರ್ಮದ ನಾಶ ಚಕ್ರವರ್ತಿ, ಸಾಮ್ರಾಟರಿಗೇ ಆಗಲಿಲ್ಲ. ಹಿಂದುತ್ವ ಅಂದೂ ಉಳಿದಿತ್ತು, ಮುಂದೆಯೂ ಉಳಿಯುತ್ತದೆ. ನಿಮ್ಮ ಕಿತಾಪತಿ ಏಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಉಡ್ತಾ ಪಂಜಾಬ್‌ ಅಲ್ಲ, ಪ್ರಗತಿಪರ ಪಂಜಾಬ್‌: ಭಗವಂತ್‌ ಮಾನ್‌

    ಕೊರೊನಾ ಕಾಲದಲ್ಲಿ ನೀವೊಬ್ಬರೇ ಜನರ ಸೇವೆ ಮಾಡಿಲ್ಲ. ಎಲ್ಲರೂ ಜಾತಿ, ಧರ್ಮ ಮೀರಿ ಸೇವೆ ಮಾಡಿದ್ದಾರೆ. ಶವ ಸಂಸ್ಕಾರದಲ್ಲೂ ಕೀರ್ತಿಯನ್ನು ಹುಡುಕುವ ನಿಮ್ಮಗಳ ವಿಕೃತ ಮನಸ್ಥಿತಿಗೆ ನನ್ನ ಮರುಕವಿದೆ. ಇದಾ ನಿಮ್ಮ ಧರ್ಮ ಎಂದು ಕಿಡಿಕಾರಿದ್ದಾರೆ.

    ಸೋಂಕಿಗೆ ಬಲಿಯಾದವರ ಪಾರ್ಥೀವ ಶರೀರಗಳನ್ನು ನೀವು ಬಾಲಂಗೋಚಿ ಆಗಿರುವ ಪಕ್ಷದ ಸರ್ಕಾರ ಹೇಗೆ ಕಂಡಿತು ಎಂಬುದಕ್ಕೆ ದಿವಂಗತ ಕೇಂದ್ರ ಮಂತ್ರಿ ಸುರೇಶ್ ಅಂಗಡಿಯವರೇ ಸಾಕ್ಷಿ. ಅವರ ಅಂತ್ಯಕ್ರಿಯೆ ಹೇಗಾಯಿತು ಎಂದು ಮಾಧ್ಯಮಗಳ ಮೂಲಕ ಕಣ್ಣಾರೆ ನೋಡಿದ್ದೇನೆ.

    ಅಂದು ಕೇಂದ್ರ-ರಾಜ್ಯ ಸರಕಾರಗಳ ವೈಫಲ್ಯಗಳು ಯಾವ ಮಟ್ಟದಲ್ಲಿದ್ದವು? ಬೆಂಗಳೂರಿನಲ್ಲಿ ಯಾರೆಲ್ಲಾ ಶವ ಸಂಸ್ಕಾರ ಮಾಡಿದರು ಎನ್ನುವುದನ್ನು ನಾವೂ ಮಾಧ್ಯಮಗಳಲ್ಲಿ ಕಂಡಿದ್ದೇವೆ. ಆಗ ಇವರೆಲ್ಲ ಎಲ್ಲಿದ್ದರೋ ನನಗಂತೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಡಿಜೆ ಹಳ್ಳಿ ಗಲಭೆ ಕಾರಣದ ಬಗ್ಗೆ ನೀವು ಏಕೆ ದನಿಯೆತ್ತುವುದಿಲ್ಲ? ಠಾಣೆಗೆ ಬೆಂಕಿ ಬಿದ್ದಾಗ ಅದರಲ್ಲಿ ಚಳಿ ಕಾಯಿಸಿಕೊಂಡವರು ನೀವು. ಧರ್ಮದ ಪಾಠ ಮಾಡುವ ನೀವು, ಧರ್ಮಗುರುಗಳಿಗೆ ಗೌರವ ಕೊಡಬೇಕು ಎನ್ನುವುದನ್ನೂ ತಿಳಿದಿರಬೇಕಲ್ಲವೇ? ನೀವು ಬಾಲಂಗೋಚಿ ಆಗಿರುವ ಸರ್ಕಾರದ ಬೇಹುಗಾರಿಕೆ ವಿಭಾಗ ನಿದ್ದೆ ಮಾಡುತ್ತಿತ್ತು, ಏಕೆ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ `ಆಪ್’ ಸುನಾಮಿಗೆ ಕಾಂಗ್ರೆಸ್ ತತ್ತರ- ಚನ್ನಿ, ಸಿಧು, ಕ್ಯಾಪ್ಟನ್‍ಗೆ ಹೀನಾಯ ಸೋಲು

    ಧರ್ಮ ರಕ್ಷಣೆ ಎಂದರೆ ಶಿವಮೊಗ್ಗದಲ್ಲಿ ಸಚಿವರೇ 144 ಸೆಕ್ಷನ್ ಉಲ್ಲಂಘಿಸುವುದಾ? ಅವರೇ ನಿಂತು ಹಿಂಸೆಗೆ ಪ್ರಚೋದನೆ ಕೊಡುವುದಾ? ನಾವ್ಯಾರೂ ಹೀಗೆ ಮಾಡಿಲ್ಲ. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ ಎಂದು ನೇರವಾಗಿ ಹೇಳಿದ್ದೇನೆ. ಹಿಜಬ್ ಗಲಾಟೆ ಹಿಂದಿರುವ ಕಾಣದ ಕೈಗಳಿಗೆ ಕೊಳ ಹಾಕಿ ಎಂದು ಸದನದಲ್ಲೇ ಆಗ್ರಹಿಸಿದ್ದೇನೆ ಎಂದಿದ್ದಾರೆ.

    ಜಗತ್ತಿಗೆ ಶಾಂತಿ ಸಂದೇಶ ಕೊಟ್ಟ ಕುವೆಂಪು ಅವರು ಜನಿಸಿದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಹಬ್ಬ-ಹರಿದಿನದಲ್ಲಿ ನೀವು ಮಾಡುತ್ತಿರುವುದೇನು? ಸೂಕ್ಷ್ಮ ಭಾವನೆಗಳನ್ನು ಕೆರಳಿಸಿ? ಅಶಾಂತಿಯ ಅಶ್ವಮೇಧ? ನಡೆಸುತ್ತಿದ್ದೀರಿ. ಬೆಂಕಿ ಹಾಕುವುದು, ಕಲ್ಲು ಹೊಡೆಯುವುದು ನನ್ನ ಅಥವಾ ನನ್ನ ಪಕ್ಷದ ಸಂಸ್ಕೃತಿ ಅಲ್ಲ ಎಂದು ತಿಳಿಸಿದ್ದಾರೆ.

    ನಿಮಗೆ ದೇಶ, ಸಂವಿಧಾನದ ಮೇಲೆ ಗೌರವ ಇಲ್ಲ. ಜನರೆಂದರೆ ನಿಮ್ಮ ಪಾಲಿಗೆ ?ಭಾವನೆಗಳ ದಾಳಗಳು? ಮಾತ್ರ. ನಿಜವಾದ ಹಿಂದೂ ಎಂದೂ ಸಮಾಜ ಒಡೆಯಲಾರ. “ಹಿಂದೂ ಎಂದರೆ ಎಲ್ಲರೂ ಒಂದು” ಎನ್ನುವ ಆದರ್ಶ & ಪರಂಪರಾಗತ ನಂಬಿಕೆ. ಈ ನಂಬಿಕೆಯ ಮೇಲೆಯೇ ಭಾರತ ನಿಂತಿದೆ. ಭಾವನೆಗಳನ್ನು ಹೇರಿ ಭಾರತವನ್ನು ಒಡೆಯಲು ನಿಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ.

  • ಮುಖ್ಯಮಂತ್ರಿಗಳೇ, ಕೋಮುಗಳ ನಡುವಿನ ವಿಭಜನೆ ತಡೆಯಿರಿ: ಕಿರಣ್‌ ಮಜುಂದಾರ್‌ ಶಾ ಒತ್ತಾಯ

    ಮುಖ್ಯಮಂತ್ರಿಗಳೇ, ಕೋಮುಗಳ ನಡುವಿನ ವಿಭಜನೆ ತಡೆಯಿರಿ: ಕಿರಣ್‌ ಮಜುಂದಾರ್‌ ಶಾ ಒತ್ತಾಯ

    ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ವಿಭಜನೆ ಬಿಕ್ಕಟ್ಟನ್ನು ಪರಿಹರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಅವರು ತಾಕೀತು ಮಾಡಿದ್ದಾರೆ.

    ಜಾತ್ರೆ, ಉತ್ಸವ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುವಂತೆ ಬಲಪಂಥೀಯ ಗುಂಪುಗಳ ನೀಡಿರುವ ಕರೆಗೆ ಸಂಬಂಧಿಸಿದಂತೆ ಕಿರಣ್ ಮಜುಂದಾರ್-ಶಾ ಟ್ವಿಟ್ಟರ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರವು ಕೋಮುವಾದಿಯಾದರೆ ಅದು ಭಾರತದ ಜಾಗತಿಕ ನಾಯಕತ್ವವನ್ನು ನಾಶ ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿರೋದು ಬಿಜೆಪಿ ಸರ್ಕಾರ, RSS, VHP, ಬಜರಂಗದಳವಲ್ಲ: ಹೆಚ್.ವಿಶ್ವನಾಥ್ ಕಿಡಿ

    ಟ್ವೀಟ್‌ನಲ್ಲೇನಿದೆ?
    ಎಲ್ಲಾ ಸಮುದಾಯಗಳನ್ನೂ ಒಳಗೊಂಡ ಆರ್ಥಿಕ ಅಭಿವೃದ್ಧಿಯನ್ನು ಕರ್ನಾಟಕ ರೂಪಿಸಿದೆ. ಇಲ್ಲಿ ಕೋಮುವಾದಕ್ಕೆ ಅನುಮತಿ ನೀಡಬಾರದು. ಐಟಿಬಿಟಿ ಯಂತಹ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ. ಬಸವರಾಜ ಬೊಮ್ಮಾಯಿ ಅವರೇ, ದಯವಿಟ್ಟು ಕೋಮುಗಳ ನಡುವಿನ ವಿಭಜನೆಯನ್ನು ತಡೆಯಿರಿ ಎಂದು ಟ್ವೀಟ್‌ ಮಾಡಿ ಕಿರಣ್‌ ಮಜುಂದಾರ್‌ ಅವರು ಒತ್ತಾಯಿಸಿದ್ದಾರೆ.

    ಬೊಮ್ಮಾಯಿ ಮತ್ತು ಕಿರಣ್‌ ಶಾ ಅವರಿಗೆ ಟ್ಯಾಗ್‌ ಮಾಡಿ ವ್ಯಕ್ತಿಯೊಬ್ಬ, ಬೊಮ್ಮಾಯಿ ಅವರು ಕೋಮುಗಳ ನಡುವಿನ ವಿಭಜನೆಯನ್ನು ಹೆಚ್ಚಿಸುತ್ತಾರೆ. ನಮ್ಮ ಕಣ್ಣೆದುರೇ ಕರ್ನಾಟಕ ಬಿಕ್ಕಟ್ಟು ಬಗೆಹರಿಸುವಲ್ಲಿ ವಿಫಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಲಾಲ್ ಧಾರ್ಮಿಕ ಆಚರಣೆ, ಇದರಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ: ಬಿ.ಸಿ ನಾಗೇಶ್

    ಇದಕ್ಕೆ ಪ್ರತಿಕ್ರಿಯಿಸಿರುವ ಕಿರಣ್‌ ಶಾ ಅವರು, ನಮ್ಮ ಮುಖ್ಯಮಂತ್ರಿಗಳು ಪ್ರಗತಿಪರ ನಾಯಕ. ಈ ಬಿಕ್ಕಟ್ಟನ್ನು ಅವರು ಪರಿಹರಿಸುತ್ತಾರೆಂಬ ಭರವಸೆಯಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

  • ಟಿಪ್ಪು ಇತಿಹಾಸ ತಾಲಿಬಾನ್‌, ಐಸಿಸ್‌ ಮತಾಂಧರಷ್ಟೇ ಘೋರ: ಬಿಜೆಪಿ ವಾಗ್ದಾಳಿ

    ಟಿಪ್ಪು ಇತಿಹಾಸ ತಾಲಿಬಾನ್‌, ಐಸಿಸ್‌ ಮತಾಂಧರಷ್ಟೇ ಘೋರ: ಬಿಜೆಪಿ ವಾಗ್ದಾಳಿ

    ಬೆಂಗಳೂರು: ಟಿಪ್ಪು ಸುಲ್ತಾನ್‌ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ಪ್ರೇಕ್ಷೆ ಹಾಗೂ ತಿರುಚಿದ ಸತ್ಯ ಎಂದು ಬಿಜೆಪಿ ವ್ಯಂಗ್ಯವಾಡಿದೆ.

    tippu

    #ಟಿಪ್ಪುಸುಳ್ಳುಇತಿಹಾಸ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ರ್ಪೇಕ್ಷೆ ಹಾಗೂ ತಿರುಚಿದ ಸತ್ಯ. ಶಾಲಾ- ಪಠ್ಯ ಕ್ರಮದಲ್ಲಿ ಇಂಥ ಸುಳ್ಳುಗಳೇಕೆ ಇರಬೇಕು? ವಿದ್ಯಾರ್ಥಿಗಳಿಗೆ ಮತಾಂಧರ ತಿರುಚಿದ ಇತಿಹಾಸ ಕಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ

    ಬಿಜೆಪಿ ಟ್ವೀಟ್‌ನಲ್ಲೇನಿದೆ?
    ಉತ್ತರ ಭಾರತದಲ್ಲಿ ಔರಂಗಜೇಬ್, ದಕ್ಷಿಣದಲ್ಲಿ ಟಿಪ್ಪು ಸುಲ್ತಾನ್ ಮತಾಂಧ ʼರಾಜಸತ್ತೆʼಯ ಸೃಷ್ಟಿಕರ್ತರು. ಕತ್ತಿಯ ಮೊನೆಯಿಂದ ಅಮಾಯಕರ ಬದುಕು ಕಸಿದುಕೊಂಡ ಮತಾಂಧರಿವರು. ಇಂಥ ಮತೀಯ ಸುಳ್ಳು ಇತಿಹಾಸವನ್ನು ನಮ್ಮ ಮಕ್ಕಳು ಓದಬೇಕೇ?

    ನೆತ್ತರಕೆರೆ, ಮಡಿಕೇರಿಯಲ್ಲಿ ಟಿಪ್ಪು ನಡೆಸಿದ ನರಮೇಧ ಮರೆಯಲು ಸಾಧ್ಯವೇ? ‌ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ. ಒಂದೇ ಒಂದು ಯುದ್ಧವನ್ನು ನೇರಮಾರ್ಗದಲ್ಲಿ ಗೆಲ್ಲದ‌ ಮತಾಂಧನಿಗೆ ʼಮೈಸೂರು ಹುಲಿʼ ಎಂಬ ಬಿರುದು ಪ್ರಾಪ್ತವಾಗಿದ್ದೇ ಒಂದು ಚೋದ್ಯ. ನೈಜತೆ ಬಯಲಾಗಲೇಬೇಕಲ್ಲವೇ?

    ಟಿಪ್ಪು ಇತಿಹಾಸ ಎಂದರೆ ಅದು ತಾಲಿಬಾನ್, ಐಸಿಸ್ ಮತಾಂಧರಷ್ಟೇ ಘೋರ. ಕಾಶ್ಮೀರದಲ್ಲಿ ಮತಾಂಧರು ನಡೆಸಿದ ನರಮೇಧವನ್ನೂ ಮೀರಿದ ಕೃತ್ಯವನ್ನು ಟಿಪ್ಪು ನಡೆಸಿದ್ದಾನೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಸತ್ಯವನ್ನು‌ ಮುಚ್ಚಿಟ್ಟು ಉದಾತ್ತ, ಸ್ವಾತಂತ್ರ್ಯ ವೀರ ಎಂದು ಬಣ್ಣಿಸುವುದು ದೇಶದ ಇತಿಹಾಸಕ್ಕೆ‌ ಮಾಡುವ ಅಪಮಾನ.

    ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ನೀಡಿದರು. ಟಿಪ್ಪು ನಡೆಸಿದ ಹತ್ಯಾಕಾಂಡಕ್ಕೆ‌ ಟಿಪ್ಪುರಾಮಯ್ಯ ಒಪ್ಪಿಗೆಯ ಮುದ್ರೆ ನೀಡಿದ್ದರು. ಈಗ ಅದೇ ಭಜಕರ ಗುಂಪು ಟಿಪ್ಪು ಸುಳ್ಳು ಇತಿಹಾಸ ಬಯಲಾಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದನ್ನೂ ಓದಿ: ಮಾನವೀಯತೆ ಇರುವುದು ನಿಜವೇ? – ಸಿಎಂ ಕೇಜ್ರಿವಾಲ್‌ಗೆ ಅಗ್ನಿಹೋತ್ರಿ ಪ್ರಶ್ನೆ

    ಟಿಪ್ಪು ಮಾತ್ರವಲ್ಲ ಶಾಲಾ ಪಠ್ಯಕ್ರಮದಲ್ಲಿ ಸೇರಿದ ಎಲ್ಲಾ ಸುಳ್ಳು ಇತಿಹಾಸಗಳ ಪರಿಷ್ಕರಣೆಯಾಗಬೇಕು. ಇತಿಹಾಸ ಎಂದರೆ ‘ಹೀಗೆ ಇತ್ತು’ ಎಂಬ ರೀತಿಯ ವಾಸ್ತವ ಸತ್ಯದಲ್ಲಿರಬೇಕೇ ಹೊರತು ಸುಳ್ಳಿನಿಂದ ಕೂಡಿರಬಾರದು. ಆದರೆ ಈಗ ನಾವು ಓದುತ್ತಿರುವ ಇತಿಹಾಸ, ‘ಕಾಂಗ್ರೆಸ್ ಕೈಪಿಡಿ’ ಎಂದು ಬಿಜೆಪಿ ಟ್ವೀಟ್‌ ಮೂಲಕ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದೆ.

  • ಶ್ಯಾಮನೂರು ಶಿವಶಂಕರಪ್ಪನವರದ್ದು ಎಷ್ಟನೇ ಬಣ – ಸಿದ್ದುಗೆ ಬಿಜೆಪಿ ಪ್ರಶ್ನೆ

    ಶ್ಯಾಮನೂರು ಶಿವಶಂಕರಪ್ಪನವರದ್ದು ಎಷ್ಟನೇ ಬಣ – ಸಿದ್ದುಗೆ ಬಿಜೆಪಿ ಪ್ರಶ್ನೆ

    ಬೆಂಗಳೂರು: ಸಿದ್ದರಾಮಯ್ಯ ಅವರೇ ಶ್ಯಾಮನೂರು ಶಿವಶಂಕರಪ್ಪ ಅವರದ್ದು ಕಾಂಗ್ರೆಸ್‍ನಲ್ಲಿ ಎಷ್ಟನೇ ಬಣ ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದೆ.

    ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ನಾನೇ ಆಗಿರುತ್ತೇನೆ. ದಾವಣಗೆರೆ ದಕ್ಷಿಣದಿಂದ ಮುಂದೆ ಸ್ಪರ್ಧಿಸುವುದಕ್ಕೆ ನನ್ನ ಬಳಿ ಹಣ ಇಲ್ವಾ? ನನ್ನ ಬಳಿ ಶಕ್ತಿ ಇಲ್ವಾ? ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ನಾನು ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದೇನೆ. ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ನನ್ನದು ಕೂಡ ಸ್ಪರ್ಧೆ ಇದೆ ಎಂದು ಕಾಂಗ್ರೆಸ್ ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದರು. ಇದನ್ನೂ ಓದಿ: ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ

    ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯರೇ, ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಬಣವಿದೆ? ಸೋನಿಯಾ ಗಾಂಧಿ ಬಣದ ವಿಚಾರ ಬಿಡಿ, ಅದು ಜಿ23 ಮೂಲಕ ಜಗಜ್ಜಾಹೀರಾಗಿದೆ. ರಾಜ್ಯ ಕಾಂಗ್ರೆಸ್‍ನಲ್ಲಿರುವ ಬಣಗಳ ಸಂಖ್ಯೆ ಎಷ್ಟು? ಪರಿಷತ್ ವಿಪಕ್ಷ ನಾಯಕರೊಂದಿಗೆ ನಿಮ್ಮ ಸೌಹಾರ್ದ ಸಂಬಂಧ ಹೇಗಿದೆ ಎಂದು ಸ್ವಲ್ಪ ವಿವರಿಸಬಹುದೇ ಎಂದು ಕೇಳುವ ಮೂಲಕ ಕಾಂಗ್ರೆಸ್ ಕಾಲೆಳೆದಿದೆ.

    ಸಿದ್ದರಾಮಯ್ಯನವರೇ, ರಾಜ್ಯದಲ್ಲಿರುವ ನಿಮ್ಮ ಬಣಗಳಿಂದ ಕಾಂಗ್ರೆಸ್ ಪಕ್ಷ ಬುಸುಗುಡುತ್ತಿರುವುದು ನಿಮಗೆ ತಿಳಿಯದ ವಿಚಾರವೇ? ಡಿಕೆಶಿ ಬಣ, ಖರ್ಗೆ ಬಣ, ಹರಿಪ್ರಸಾದ್ ಬಣ, ಪರಮೇಶ್ವರ್ ಬಣ. ಮೇಲ್ನೋಟಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣ ಕಾದಾಡುತ್ತಿದ್ದರೂ, ಇದರ ಲಾಭ ಪಡೆಯಲು ಹಲವಾರು ಬಣಗಳು ಹೊಂಚು ಹಾಕುತ್ತಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮುಂದಿನ ಮುಖ್ಯಮಂತ್ರಿ ನಾನೇ: ಶಾಮನೂರು ಶಿವಶಂಕರಪ್ಪ

    ಸಿದ್ದರಾಮಯ್ಯ ಮತ್ತು ಡಿಕೆಶಿ ಮಾತ್ರ ಮುಖ್ಯಮಂತ್ರಿಯಾಗಬೇಕೇ? ನನ್ನ ಬಳಿಯೂ ದುಡ್ಡಿದೆ. ನಾನು ಸಿಎಂ ಆಗುತ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರು ಹೇಳಿದ್ದಾರೆ. ಸಿದ್ದರಾಮಯ್ಯನವರೇ, ಇವರದು ಎಷ್ಟನೇ ಬಣ ಎಂದು ಪ್ರಶ್ನಿಸಿದ್ದಾರೆ.

  • ಸದಾ ಹೃದಯಲ್ಲಿ ಪುನೀತ್ ಸವಿ ನೆನಪುಗಳನ್ನು ನೆನೆಯೋಣ: ಸುಮಲತಾ

    ಸದಾ ಹೃದಯಲ್ಲಿ ಪುನೀತ್ ಸವಿ ನೆನಪುಗಳನ್ನು ನೆನೆಯೋಣ: ಸುಮಲತಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಜನುಮದಿನವನ್ನು ರಾಜ್ಯದ ಜನತೆ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ನಡುವೆ ನಟಿ ಸುಮಲತಾ ಅಂಬರೀಶ್ ಅವರು ಪುನೀತ್ ಜೊತೆಗಿರುವ ಒಂದಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೀತಿಯ ಅಪ್ಪುಗೆ ಶುಭ ಕೋರಿದ್ದಾರೆ.

    ಮೊದಲಿನಿಂದಲೂ ವರನಟ ಡಾ. ರಾಜ್‍ಕುಮಾರ್ ಹಾಗೂ ರೆಬೆಲ್‍ಸ್ಟಾರ್ ಅಂಬರೀಶ್ ಕುಟುಂಬಗಳು ಬಹಳ ಆತ್ಮೀಯತೆಯನ್ನು ಹೊಂದಿದೆ. ಅಲ್ಲದೇ ಪುನೀತ್ ಚಿಕ್ಕ ವಯಸಿನಿಂದಲೂ ಅಂಬರೀಶ್ ಅವರನ್ನು ಪ್ರೀತಿಯಿಂದ ಅಂಬಿ ಮಾಮ ಎಂದು ಕರೆಯುತ್ತಿದ್ದರು. ಅಂದಿನಿಂದಲೂ ಅಂಬಿ ಕುಟುಂಬಕ್ಕೆ ರಾಜ್ ಕುಟುಂಬ ಬಹಳ ಹತ್ತಿರವಾಗಿದ್ದು, ಇತ್ತೀಚೆಗಷ್ಟೇ ಪುನೀತ್ ಅಗಲಿಕೆಯಿಂದ ಸುಮಲತಾ ಅವರು ದುಃಖ ವ್ಯಕ್ತಪಡಿಸಿದ್ದರು. ಅಲ್ಲದೇ ಪುನೀತ್ ಸಾವಿನಿಂದ ಇಡೀ ಕರುನಾಡು ಶೋಕ ಸಾಗರದಲ್ಲಿ ಮುಳುಗಿತ್ತು. ಇದನ್ನೂ ಓದಿ:  ಎಂದಿಗೂ ಕಸಿದುಕೊಳ್ಳಲಾಗದ ಎನರ್ಜಿ: ಅಪ್ಪುಗೆ ಯಶ್ ವಿಶ್

    ಇದೀಗ ಪುನೀತ್ ಹುಟ್ಟುಹಬ್ಬವನ್ನು ರಾಜ್ಯದ ಜನತೆ ಹಬ್ಬದಂತೆ ಬಹಳ ಸಡಗರದಿಂದ ಆಚರಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸ್ಯಾಂಡಲ್‍ವುಡ್ ಕಲಾವಿದರೂ ಸಹ ಪುನೀತ್ ಹುಟ್ಟುಹಬ್ಬಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿ ಮಳೆಯನ್ನೇ ಹರಿಸುತ್ತಿದ್ದಾರೆ. ಈ ಮಧ್ಯೆ ನಟಿ, ಸಂಸದೆ ಸುಮಲತಾ ಅವರು, ಪುನೀತ್ ಫ್ಯಾಮಿಲಿ ಜೊತೆಗೆ ತಮ್ಮ ಫ್ಯಾಮಿಲಿ ಕ್ಲಿಕ್ಲಿಸಿಕೊಂಡಿರುವ ಫೋಟೋ ಹಾಗೂ ದೊಡ್ಮನೆ ಹುಡ್ಗ ಸಿನಿಮಾದ ಶೂಟಿಂಗ್ ವೇಳೆ ಹಿಡಿಸಿಕೊಂಡ ಒಂದಷ್ಟು ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:  ಅಪ್ಪು ನೆನೆದು ನಟಿ ಪ್ರಿಯಾ ಆನಂದ್ ಕಣ್ಣೀರು

    ಫೋಟೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬಾಲ್ಯದಿಂದ ಸಿನಿಮಾದಲ್ಲೇ ಜೀವಿಸಿ, ಯಾರಿಗೂ ಗೊತ್ತಾಗದಂತೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಸಿನಿಮಾ ರಂಗಕ್ಕೆ ಮತ್ತು ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬದಂದು, ಸದಾ ನಮ್ಮ ಹೃದಯಲ್ಲಿರುವ ಅವರ ಸವಿ ನೆನಪುಗಳನ್ನು ನೆನೆಯೋಣ. ಅಪಾರ ದುಃಖದಲ್ಲೂ, ಅಪ್ಪುವಿನ ಅನುಪಸ್ಥಿತಿಯನ್ನು ಮರೆಸುವಂತೆ ಅವರ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವ ಅವರ ಕೋಟ್ಯಂತರ ಅಭಿಮಾನಿಗಳಿಗೆ ನನ್ನ ಪ್ರೀತಿಯ ನಮನಗಳು ಎಂದು ಬರೆದುಕೊಂಡಿದ್ದಾರೆ.