Tag: ಟ್ವೀಟ್

  • ಎಲೆಕ್ಟ್ರಿಕ್ ವಾಹನಗಳ ಕಂಪನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ನಿತಿನ್ ಗಡ್ಕರಿ

    ಎಲೆಕ್ಟ್ರಿಕ್ ವಾಹನಗಳ ಕಂಪನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ನಿತಿನ್ ಗಡ್ಕರಿ

    ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಚಿವ ನಿತಿನ ಗಡ್ಕರಿ ಅವರು, ಸುರಕ್ಷತಾ ಮಾನದಂಡಗಳನ್ನು ಅಳವಡಿಕೊಳ್ಳುವಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕರು ನಿರ್ಲಕ್ಷ್ಯ ತೋರಿದರೆ ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿದ ಅವರು, ಕಳೆದ ಎರಡು ತಿಂಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ ಹಲವಾರು ಅವಘಡಗಳು ಬೆಳಕಿಗೆ ಬಂದಿವೆ. ಈ ಘಟನೆಗಳಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿರುವುದು ಅತ್ಯಂತ ದುರದೃಷ್ಟಕರ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಾಮನವಮಿಯಂದು ಖಾರ್ಗೋನ್‌ನಲ್ಲಿ ಹಿಂಸಾಚಾರ – ಐವರ ಬಂಧನ

    ಈ ಘಟನೆಗಳ ಬಗ್ಗೆ ತನಿಖೆ ನಡೆಸಲು ಮತ್ತು ಪರಿಹಾರ ಕ್ರಮಗಳ ಕುರಿತು ಶಿಫಾರಸುಗಳನ್ನು ಮಾಡಲು ನಾವು ತಜ್ಞರ ಸಮಿತಿಯನ್ನು ರಚಿಸಿದ್ದೇವೆ. ವರದಿಗಳ ಆಧಾರದ ಮೇಲೆ, ನಾವು ಎಲೆಕ್ಟ್ರಿಕ್ ವಾಹನಗಳ ಕಂಪನಿಗಳ ಮೇಲೆ ಅಗತ್ಯ ಆದೇಶಗಳನ್ನು ನೀಡುತ್ತೇವೆ ಎಂದು ಹೇಳಿದರು.

    ನಾವು ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳಿಗೆ ಗುಣಮಟ್ಟ-ಕೇಂದ್ರಿತ ಮಾರ್ಗಸೂಚಿಗಳನ್ನು ನೀಡುತ್ತೇವೆ. ಯಾವುದೇ ಕಂಪನಿಯು ತನ್ನ ಪ್ರಕ್ರಿಯೆಗಳಲ್ಲಿ ನಿರ್ಲಕ್ಷ್ಯ ತೋರಿದರೆ, ಭಾರೀ ದಂಡವನ್ನು ವಿಧಿಸಲಾಗುವುದು ಮತ್ತು ಎಲ್ಲಾ ದೋಷಯುಕ್ತ ವಾಹನಗಳನ್ನು ಹಿಂಪಡೆಯಲು ಆದೇಶಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಇದರ ಮಧ್ಯೆ ಎಲ್ಲಾ ದೋಷಯುಕ್ತ ವಾಹನಗಳನ್ನು ತಕ್ಷಣವೇ ಹಿಂಪಡೆಯಲು ಕಂಪನಿಗಳು ಮುಂಗಡ ಕ್ರಮವನ್ನು ತೆಗೆದುಕೊಳ್ಳಬಹುದು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ, ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಜೆಸಿಬಿ ಕಾರ್ಖಾನೆ ಓಪನ್‌ – ಬ್ರಿಟನ್‌ ಪ್ರಧಾನಿ ಚಾಲನ

    ಕಳೆದ ತಿಂಗಳು ಪುಣೆಯಲ್ಲಿ ರೈಡ್-ಹೇಲಿಂಗ್ ಆಪರೇಟರ್ ಓಲಾ ಅವರ ಎಲೆಕ್ಟ್ರಿಕ್ ಮೊಬಿಲಿಟಿ ಆರ್ಮ್ ಬಿಡುಗಡೆ ಮಾಡಿದ ಇ-ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ನಂತರ ಸರ್ಕಾರ ತನಿಖೆಗೆ ಆದೇಶಿಸಿತ್ತು.

    ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ಘಟನೆಗೆ ಕಾರಣವಾದ ಸಂದರ್ಭಗಳನ್ನು ತನಿಖೆ ಮಾಡಲು ಮತ್ತು ಪರಿಹಾರ ಕ್ರಮಗಳನ್ನು ಸೂಚಿಸಲು ಬೆಂಕಿ ಸ್ಫೋಟಕ ಮತ್ತು ಪರಿಸರ ಸುರಕ್ಷತೆ ಕೇಂದ್ರವನ್ನು ಕೇಳಲಾಗಿದೆ.

  • ಹುಬ್ಬಳ್ಳಿ ಗಲಭೆಗೆ ಬಿಜೆಪಿ ಕುಮ್ಮಕ್ಕು ಕಾರಣ: ಡಿಕೆಶಿ

    ಹುಬ್ಬಳ್ಳಿ ಗಲಭೆಗೆ ಬಿಜೆಪಿ ಕುಮ್ಮಕ್ಕು ಕಾರಣ: ಡಿಕೆಶಿ

    ಬೆಂಗಳೂರು: ‘ಹುಬ್ಬಳ್ಳಿ ವಿಚಾರದಲ್ಲಿ ಶಾಂತಿ ಕಾಪಾಡಲು ನಮ್ಮ ಪಕ್ಷದ ಎಲ್ಲ ನಾಯಕರು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದಾರೆ. ಆದರೂ ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಎಲ್ಲ ಘಟನೆಗಳಿಗೆ ಮೂಲ ಪ್ರಚೋದನೆ ಬಿಜೆಪಿಯವರ ಕುಮ್ಮಕ್ಕಿನಿಂದಾದ ಟ್ವೀಟ್. ಇದಕ್ಕೆ ಬಿಜೆಪಿಯವರೇ ಕಾರಣ. ಅದರ ಬಗ್ಗೆ ತನಿಖೆ ಆಗಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

    Hubballi Riot

    ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಕಿಡಿಗೇಡಿಗಳು ಕಾನೂನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ. ನಮ್ಮ ಜಿಲ್ಲಾಧ್ಯಕ್ಷರಾದ ಅಲ್ತಾಫ್ ಪರಿಸ್ಥಿತಿ ನಿಯಂತ್ರಿಸುವ ಸಂದರ್ಭದಲ್ಲಿ ಕಲ್ಲೇಟು ತಿಂದು, ಕೈ ಮುರಿದುಕೊಂಡು, ನೋವು ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ ಬ್ರಿಟನ್ ಪ್ರಧಾನಿ

    ಯಡಿಯೂರಪ್ಪ ಅವರಾಗಲಿ, ಅಶೋಕ್ ಅವರಾಗಲಿ ಪರಿಸ್ಥಿತಿ ತಿಳಿಗೊಳಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಬದಲಿಗೆ ಅವರು ಬೇಕೆಂದು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಸುಮ್ಮನೆ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದರು. ಇದನ್ನೂ ಓದಿ: 30 ಲಕ್ಷದ ಚಿನ್ನವನ್ನು ಗುದನಾಳ, ವಿಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಕಿಲಾಡಿ ಕಳ್ಳನ ಬಂಧನ

    BRIBE

    ಅವರು ತಮ್ಮ 40% ಕಮಿಷನ್ ವಿಚಾರ ಮುಚ್ಚಿಹಾಕಲು ಈ ವಿಚಾರವನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ನವರಿಗೂ ಹುಬ್ಬಳ್ಳಿ ಗಲಭೆಗೂ ಯಾವುದೇ ಸಂಬಂಧ ಇಲ್ಲ. ನಮ್ಮವರು ಶಾಂತಿ ಕಾಪಾಡಲು ಶ್ರಮಿಸಿದ್ದಾರೆ ಅಷ್ಟೇ ಎಂದು ಹೇಳಿದರು.

  • ನಿರ್ಮಲಾ ಸೀತಾರಾಮನ್ ಹಣದುಬ್ಬರದ ಬಗ್ಗೆ ಅರ್ಥಹೀನ ಮಾತನಾಡಿದ್ದಾರೆ: ದಿನೇಶ್ ಗುಂಡೂರಾವ್

    ನಿರ್ಮಲಾ ಸೀತಾರಾಮನ್ ಹಣದುಬ್ಬರದ ಬಗ್ಗೆ ಅರ್ಥಹೀನ ಮಾತನಾಡಿದ್ದಾರೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಅರ್ಥಹೀನ ಹೇಳಿಕೆಗಳಿಂದಲೇ ಅಪಖ್ಯಾತಿ ಗಳಿಸಿರುವ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಹಣದುಬ್ಬರದ ಬಗ್ಗೆ ಅರ್ಥಹೀನ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.

    ವಾಷಿಂಗ್ಟನ್‍ನ ಕಾರ್ಯಕ್ರಮವೊಂದರಲ್ಲಿ ನಿರ್ಮಲಾ ಸೀತಾರಾಮನ್ ಅವರು, ಜಾಗತಿಕ ಮಟ್ಟದಲ್ಲಿ ಸವಾಲುಗಳಿವೆ. ಭಾರತದಲ್ಲಿ ಹಣದುಬ್ಬರ ದರವು ಮಾರ್ಚ್‍ನಲ್ಲಿ ಸೇ.6.9 ರಷ್ಟಿದೆ. ಹಣದುಬ್ಬರವು ಗರಿಷ್ಠ ಸೇ 6ರವರೆಗೆ ತಲುಪಲು ಅವಕಾಶವಿದೆ. ಆ ಗಡಿಯನ್ನು ನಾವು ದಾಟಿದ್ದೇವೆ. ಆದರೆ ಹಣದುಬ್ಬರದ ಈ ಏರಿಕೆ ಅತಿಯಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ: ರೇಣುಕಾಚಾರ್ಯ ವ್ಯಂಗ್ಯ

    ಇದೀಗ ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ಅರ್ಥಹೀನ ಹೇಳಿಕೆಗಳಿಂದಲೇ ಅಪಖ್ಯಾತಿ ಗಳಿಸಿರುವ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್, ಈಗ ಹಣದುಬ್ಬರದ ಬಗ್ಗೆ ಮತ್ತೊಮ್ಮೆ ಅರ್ಥಹೀನ ಮಾತನಾಡಿದ್ದಾರೆ. ದೇಶದ ಚಿಲ್ಲರೆ ಹಣದುಬ್ಬರ ದರ 17 ತಿಂಗಳ ಗರಿಷ್ಟ ಮಟ್ಟ 6.9 ಕ್ಕೆ ತಲುಪಿದೆ. ಸಗಟು ಹಣದುಬ್ಬರ ದರ 4 ತಿಂಗಳ ಗರಿಷ್ಠ ಮಟ್ಟ ಶೇ 14.55ಕ್ಕೆ ತಲುಪಿದೆ. ಇಷ್ಟಾದರೂ ಹಣದುಬ್ಬರ ಅತಿಯಾಗಿ ಏರಿಕೆಯಾಗಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.

    ಏರುತ್ತಿರುವ ಸಗಟು ಹಣದುಬ್ಬರ ಭವಿಷ್ಯದಲ್ಲಿ ಚಿಲ್ಲರೆ ಹಣದುಬ್ಬರದ ಮೇಲೂ ನೇರ ಪರಿಣಾಮ ಬೀರಲಿದೆ. ಈಗಾಗಲೇ ಬೆಲೆಯೇರಿಕೆಯಿಂದ ಜನಸಾಮಾನ್ಯ ತತ್ತರಿಸಿದ್ದಾನೆ. ಹಣದುಬ್ಬರ ಹೀಗೆ ಏರುತ್ತಿದ್ದರೆ ಜನರ ಬದುಕು ಏನಾಗಬೇಕು? ಹಣದುಬ್ಬರದ ಬಗ್ಗೆ ಆರ್ಥಿಕ ತಜ್ಞರ ಆತಂಕ ಭಾರತದ ಮಟ್ಟಿಗೆ ಎಚ್ಚರಿಕೆಯ ಕರೆಗಂಟೆ. ಅರ್ಥ ಸಚಿವರು ಇದನ್ನು ಅರ್ಥ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ.

    ಹಣದುಬ್ಬರ ನಿಯಂತ್ರಿಸಲು ಸ್ವತಃ RBI ಕೂಡ ಹೆಣಗಾಡುತ್ತಿದೆ. ಹೀಗಿರುವಾಗ ನಿರ್ಮಲಾ ಸೀತಾರಾಮನ್ ಅವಾಸ್ತವಿಕ ಅಂಕಿ ಅಂಶಗಳ ಮೂಲಕ ದೇಶದ ದಾರಿ ತಪ್ಪಿಸಬಾರದು. ಬಹುಶಃ ಅರ್ಥಸಚಿವರಿಗೆ ಹಣಕಾಸು ಇಲಾಖೆಯ ಮಹತ್ವವೇ ಗೊತ್ತಿಲ್ಲ. ಆರ್ಥಿಕ ನಿರ್ವಹಣೆ ಪೂರ್ವಾಶ್ರಮದಲ್ಲಿ TV ಡಿಬೇಟ್‍ಗಳ ಪ್ಯಾನೆಲಿಸ್ಟ್ ಆಗಿ ಕೂಗಿದಷ್ಟು ಸರಳವಲ್ಲ ಎಂದು ಸಚಿವೆ ತಿಳಿದುಕೊಳ್ಳಲಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ – ಮಸೀದಿ ಮೇಲೆ `ಜೈಶ್ರೀರಾಮ್’ ಲೇಸರ್ ಲೈಟ್ ಹಾಕಿದ್ದ ಹಾಕಿದ್ದ ಕಿಡಿಗೇಡಿಗಳು

  • ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರ ಶಾಮೀಲಾಗಿ ದಂಧೆ ನಡೆಸಿದೆ: ದಿನೇಶ್‌ ಗುಂಡೂರಾವ್‌

    ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರ ಶಾಮೀಲಾಗಿ ದಂಧೆ ನಡೆಸಿದೆ: ದಿನೇಶ್‌ ಗುಂಡೂರಾವ್‌

    ಬೆಂಗಳೂರು: ದಿವ್ಯಾ ಹಾಗರಗಿ ಬಿಜೆಪಿಯ ಸಕ್ರಿಯ ಕಾರ್ಯಕರ್ತೆ‌ ಮತ್ತು ಮುಖಂಡರಾಗಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಹಾಗರಗಿ ಜೊತೆ ಇಡೀ ಸರ್ಕಾರವೇ ಶಾಮೀಲಾಗಿ ದಂಧೆ ನಡೆಸಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗಂಡೂರಾವ್‌ ಗಂಭೀರ ಆರೋಪ ಮಾಡಿದ್ದಾರೆ.

    ಪಿಎಸ್‌ಐ ನೇಮಕಾತಿ ಅಕ್ರಮದ ವಿರುದ್ಧ ಸರಣಿ ಟ್ವೀಟ್ ಮೂಲಕ ಹರಿಹಾಯ್ದಿರುವ ದಿನೇಶ್‌ ಗುಂಡೂರಾವ್‌, ಇಡಿ ಸರ್ಕಾರ ಹಾಗೂ ಗೃಹ ಸಚಿವರು ಇದರಲ್ಲಿ ಭಾಗಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲೂ ಬುಲ್ಡೋಜರ್ ಕಾರ್ಯಾಚರಣೆಗೆ ಹೆಚ್ಚಿದ ಒತ್ತಡ: ಬಿಜೆಪಿಯಲ್ಲಿ ಭಿನ್ನ ನಿಲುವು

    ಟ್ವೀಟ್‌ನಲ್ಲೇನಿದೆ?
    545 ಪಿಎಸ್‌ಐ ಅಕ್ರಮ ನೇಮಕಾತಿಯ ಕಿಂಗ್‌ಪಿನ್ ದಿವ್ಯಾ ಹಾಗರಗಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಅರಚಿಕೊಳ್ಳುತ್ತಿರುವ ಬಿಜೆಪಿ ಸರ್ಕಾರಕ್ಕೆ ಕೆಲ ಪ್ರಶ್ನೆಗಳು. ದಿವ್ಯಾ ಹಾಗರಗಿ ಕುಟುಂಬಕ್ಕೂ ಆರಗ ಜ್ಞಾನೇಂದ್ರ ಅವರ ನಡುವೆ ಇರುವ ಲಿಂಕ್ ಏನು? ದಿವ್ಯಾ ನಿವಾಸಕ್ಕೆ ಗೃಹ ಸಚಿವರು ಯಾವ ಡೀಲ್ ಕುದುರಿಸಲು ಭೇಟಿ ಕೊಟ್ಟಿದ್ದರು?

    PSI ನೇಮಕಾತಿಯ 200 ಕೋಟಿ ಲಂಚದಲ್ಲಿ ದಿವ್ಯಾ ಹಾಗರಗಿಯಿಂದ ಗೃಹ ಸಚಿವರಿಗೆ ಬಂದ ಪಾಲೆಷ್ಟು? ಲಂಚದ ಹಣದಲ್ಲೂ ಈ ಸರ್ಕಾರಕ್ಕೆ 40 ಪರ್ಸೆಂಟ್ ಪಾಲು ಸಿಕ್ಕಿದೆಯೇ ಅಥವಾ ಡಿಸ್ಕೌಂಟ್ ಸಿಕ್ಕಿದೆಯೇ? ದಿವ್ಯಾ, ಬಿಜೆಪಿಯವರಲ್ಲದಿದ್ದರೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ದಿವ್ಯಾರನ್ನು ನರ್ಸಿಂಗ್ ಕೌನ್ಸಿಲ್ ಸದಸ್ಯರಾನ್ನಾಗಿ ಮಾಡಿದ್ದು ಯಾಕೆ ಎಂದು ಟ್ವಿಟ್ಟರ್‌ನಲ್ಲಿ ಸಾಲು ಸಾಲು ಪ್ರಶ್ನೆಗಳನ್ನು ಹಾಕಿದ್ದಾರೆ. ಇದನ್ನೂ ಓದಿ: ಕೆ.ಸಿ.ಜನರಲ್‍ನಲ್ಲೂ ತಾಯಿ-ಶಿಶು ಆಸ್ಪತ್ರೆ ‘ವಾಣಿ ವಿಲಾಸ’ ಮಾದರಿಯಲ್ಲಿ ನಿರ್ಮಾಣ: ಕೆ.ಸುಧಾಕರ್

  • ಬನಾಸ್ ಡೈರಿಯಲ್ಲಿನ ಉಪಕ್ರಮಗಳು ರೈತರನ್ನು ಸಬಲಗೊಳಿಸುತ್ತದೆ: ಪ್ರಧಾನಿ ಮೋದಿ

    ಬನಾಸ್ ಡೈರಿಯಲ್ಲಿನ ಉಪಕ್ರಮಗಳು ರೈತರನ್ನು ಸಬಲಗೊಳಿಸುತ್ತದೆ: ಪ್ರಧಾನಿ ಮೋದಿ

    ನವದೆಹಲಿ: ಬನಾಸ್ ಡೈರಿಯಲ್ಲಿನ ಉಪಕ್ರಮಗಳು ರೈತರನ್ನು ಸಬಲಗೊಳಿಸುತ್ತದೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

    ಇಂದು ಗುಜರಾತ್‍ನ ಬನಸ್ಕಾಂತದಲ್ಲಿರುವ ಬನಾಸ್ ಡೈರಿ ಸಂಕುಲ್‍ನಲ್ಲಿ ಅತ್ಯಾಧುನಿಕ ಡೈರಿ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವ ಕೇಂದ್ರವಾಗಿದೆ. ಬನಾಸ್ ಡೈರಿಯಲ್ಲಿನ ಅಭಿವೃದ್ಧಿ ಉಪಕ್ರಮಗಳು ರೈತರನ್ನು ಸಬಲೀಕರಣಗೊಳಿಸುತ್ತದೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಆತ್ಮನಿರ್ಭರ ಭಾರತ್ ಅಭಿಯಾನಕ್ಕೆ ಸಹಕಾರಿ ಚಳುವಳಿ ಹೇಗೆ ಶಕ್ತಿ ನೀಡುತ್ತದೆ ಎಂಬುದನ್ನು ನಾವು ಇಲ್ಲಿ ಅನುಭವಿಸಬಹುದು ಎಂದು ಡೈರಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

    ಪ್ರಧಾನಮಂತ್ರಿಯವರು ಇಂದು ಬನಸ್ಕಾಂತದಲ್ಲಿರುವ ಬನಾಸ್ ಡೈರಿ ಸಂಕುಲದಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಗುಜರಾತಿನ ಅಭಿವೃದ್ಧಿಯ ಮಟ್ಟವು ಪ್ರತಿ ಗುಜರಾತಿಯನ್ನು ಹೆಮ್ಮೆಪಡುವಂತೆ ಮಾಡುತ್ತದೆ. ನಾನು ನಿನ್ನೆ ವಿದ್ಯಾ ಸಮೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದೆ, ಅಲ್ಲಿ ತಂತ್ರಜ್ಞಾನದ ಬಳಕೆ ಪ್ರಭಾವಶಾಲಿಯಾಗಿದೆ. ಇತರ ರಾಜ್ಯಗಳ ಶಿಕ್ಷಣ ಇಲಾಖೆಗಳು ಈ ಕೇಂದ್ರಕ್ಕೆ ಭೇಟಿ ನೀಡುವಂತೆ ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಅವರು ಈ ಹಿಂದೆ 2016ರಲ್ಲಿ ಡೈರಿಗೆ ಭೇಟಿ ನೀಡಿದ್ದ ಫೋಟೋವನ್ನು ಹಂಚಿಕೊಂಡಿದ್ದಾರೆ. ಬನಾಸ್ ಡೈರಿಗೆ ಮತ್ತೊಮ್ಮೆ ಭೇಟಿ ನೀಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಾನು 2016ರಲ್ಲಿ ಕೊನೆಯದಾಗಿ ಡೈರಿಗೆ ಭೇಟಿ ನೀಡಿದ್ದೇನೆ. ಆ ಸಮಯದಲ್ಲಿ ಡೈರಿಯ ಉತ್ಪನ್ನಗಳನ್ನು ಪ್ರಾರಂಭಿಸಲಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.

    ಬನಸ್ಕಾಂತದ ಜನರ ಕಠಿಣ ಪರಿಶ್ರಮ ಮತ್ತು ಸಹಿಷ್ಣುತೆಯ ಮನೋಭಾವಕ್ಕಾಗಿ ನಾನು ಶ್ಲಾಘಿಸಲು ಬಯಸುತ್ತೇನೆ. ಈ ಜಿಲ್ಲೆಯ ಕೃಷಿಯಲ್ಲಿ ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದಾರೆ. ನೀರಿನ ಸಂರಕ್ಷಣೆಯತ್ತ ಗಮನಹರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

  • ‘ನಾನು ಪ್ರಧಾನಮಂತ್ರಿಗಳ ಖಾಸಗಿ ಕಾರ್ಯದರ್ಶಿ’ ಎಂದವನ ವಿರುದ್ಧ ದಾಖಲಾಯ್ತು ಎಫ್‍ಐಆರ್

    ‘ನಾನು ಪ್ರಧಾನಮಂತ್ರಿಗಳ ಖಾಸಗಿ ಕಾರ್ಯದರ್ಶಿ’ ಎಂದವನ ವಿರುದ್ಧ ದಾಖಲಾಯ್ತು ಎಫ್‍ಐಆರ್

    ನವದೆಹಲಿ: ನಾನು ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ನರೇಂದ್ರ ಮೋದಿ ಅವರ ಖಾಸಗಿ ಕಾರ್ಯದರ್ಶಿ ಎಂದು ಹೇಳಿಕೊಂಡು ಜನರ ವಂಚನೆಗೆ ಇಳಿದಿರುವ ಅನಾಮಧೇಯ ವ್ಯಕ್ತಿಯ ವಿರುದ್ಧ ದೆಹಲಿಯ ಸೈಬರ್ ಸೆಲ್ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಿರುವ ದೆಹಲಿ ಪೊಲೀಸರು ಅನಾಮಧೇಯ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ.

    ಪ್ರಧಾನಮಂತ್ರಿಗಳಿಗಾಗಿ ವಿಶೇಷ ಟೇಬಲ್‍ನ ಅವಶ್ಯಕತೆ ಇದೆ. ಪ್ರಧಾನಮಂತ್ರಿಗಳ ಶಾಶ್ವತ ಬಳಕೆಗೆ ಒಂದು ವಿಶೇಷ ಟೇಬಲ್ ಮಾಡಿಕೊಡುವಂತೆ ಕುನಾಲ್ ಎಂಬುವರಿಗೆ ಇಮೇಲ್ ಬಂದಿದೆ. ವಿವೇಕ್ ಕುಮಾರ್ ಎಂಬುವರಿಂದ ಈ ಇಮೇಲ್ ಬಂದಿದ್ದು ಇದರಲ್ಲಿ ತಾವು ವಿಶೇಷ ಖಾಸಗಿ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಚರ್ಚಿಸುವಂತೆ ಮೂಬೈಲ್ ನಂಬರ್‍ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮದ್ಯ ಸೇವಿಸಿ ಗುರುದ್ವಾರ ಪ್ರವೇಶಿಸಿದ ಆರೋಪ- ಪಂಜಾಬ್ ಸಿಎಂ ವಿರುದ್ಧ ದೂರು

    ಇಮೇಲ್ ಸ್ವೀಕರಿಸುತ್ತಿದ್ದಂತೆ ಕುನಾಲ್, ಇಮೇಲ್ ಸ್ಕ್ರೀನ್ ಶಾರ್ಟ್ ಸಮೇತ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ದೆಹಲಿ ಸೈಬರ್ ಸೆಲ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು ವ್ಯಾಪಾರಿಯನ್ನು ಸಂಪರ್ಕ ಮಾಡಿದ್ದಾರೆ. ಘಟನೆಯ ಮಾಹಿತಿ ಪಡೆದುಕೊಳ್ಳುತ್ತಿದ್ದು ಇಮೇಲ್ ಮಾಡಿದ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ. ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ ಸೋಲಿನ ಬಳಿಕ ಎಚ್ಚೆತ್ತ ಕಾಂಗ್ರೆಸ್ – ಗುಜರಾತ್ ಎಲೆಕ್ಷನ್ ಮೇಲೆ ಕಣ್ಣು

    ಘಟನೆಯ ಬಗ್ಗೆ ದೆಹಲಿ ಪೊಲೀಸ್ ಕಮಿಷನ್ ರಾಜೇಶ್ ಅಸ್ತಾನ್ ತಮ್ಮ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದು ಪ್ರಧಾನಮಂತ್ರಿ ಹಾಗೂ ಗೃಹ ಇಲಾಖೆಗೆ ಟ್ಯಾಗ್ ಮಾಡಿದ್ದು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ತನಿಖೆ ಆರಂಭಗೊಂಡಿದ್ದು ಅನಾಮಧೇಯ ವ್ಯಕ್ತಿಯ ಹುಡುಕಾಟದಲ್ಲಿ ಪೊಲೀಸರು ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಹತ್ಯೆ ಮಾಡುವುದಾಗಿ ಎನ್‍ಐಎ ಅಧಿಕಾರಿಗಳಿಗೆ ಇಮೇಲ್ ಒಂದು ರವಾನೆಯಾಗಿತ್ತು.

  • ಈಶ್ವರಪ್ಪ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು: ಕಾಂಗ್ರೆಸ್‌

    ಈಶ್ವರಪ್ಪ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು: ಕಾಂಗ್ರೆಸ್‌

    ಬೆಂಗಳೂರು: ಬರೀ ಈಶ್ವರಪ್ಪನವರ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು ಎಂದು ಸರ್ಕಾರವನ್ನು ರಾಜ್ಯ ಕಾಂಗ್ರೆಸ್‌ ಒತ್ತಾಯಿಸಿದೆ.

    ಈಶ್ವರಪ್ಪ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಈಶ್ವರಪ್ಪ ಅವರನ್ನು ಜೈಲಿಗಟ್ಟಬೇಕು. ಭ್ರಷ್ಟಾಚಾರ ನಿಗ್ರಹದ ಪ್ರಕರಣ ದಾಖಲಾಗಬೇಕು. ಇದ್ಯಾವುದನ್ನೂ ಮಾಡದೆ ಸರ್ಕಾರ ರಕ್ಷಣೆಗೆ ನಿಂತರೆ ಹಿಂದೂ ಕಾರ್ಯಕರ್ತ ಸಂತೋಷ್ ಪಾಟೀಲ್‌ಗೆ ಅವಮಾನಿಸಿದಂತೆ. ದೇಶದ ಕಾನೂನಿನ ಮೇಲಿನ ಜನರ ನಂಬಿಕೆಯನ್ನು ಅಪಹಾಸ್ಯ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದೆ.

    ಟ್ವೀಟ್‌ನಲ್ಲೇನಿದೆ?
    ಮೊನ್ನೆ, ನೂರಕ್ಕೆ ನೂರು ರಾಜೀನಾಮೆ ಕೊಡುವುದಿಲ್ಲ. ನಿನ್ನೆ, ರಾಜೀನಾಮೆ ನೀಡುತ್ತೇನೆ ಎಂಬುದು ಈಶ್ವರಪ್ಪ ಅವರ ಸದಾರಮೆ ನಾಟಕದ ಡೈಲಾಗ್‌ಗಳು. ಕೇವಲ ರಾಜೀನಾಮೆಯ ಮೂಲಕ ಪ್ರಕರಣವನ್ನು ತಿಳಿಗೊಳಿಸುವ ಹುನ್ನಾರವಿದು. ರಾಜೀನಾಮೆಯಷ್ಟೇ ಸಾಲದು ಭ್ರಷ್ಟಾಚಾರ, ಕೊಲೆ ಎರಡೂ ಪ್ರಕರಣಗಳಲ್ಲಿ ಬಂಧನವಾಗಲೇಬೇಕು.

    ಸಂತೋಷ್ ಮಾಡಿದ ಕಾಮಗಾರಿಗೆ ಕಾರ್ಯಾದೇಶವೇ ಇರಲಿಲ್ಲ, ಸರ್ಕಾರಕ್ಕೂ ಕಾಮಗಾರಿಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದರು ಬಿಜೆಪಿಗರು. ಆದರೆ ಈಗ ಮುರುಗೇಶ್ ನಿರಾಣಿ ಸಂಪೂರ್ಣ ಮೊತ್ತವನ್ನು ಬಿಡುಗಡೆ ಮಾಡಿಸುತ್ತೇವೆ ಎನ್ನುವ ಮೂಲಕ ತಪ್ಪನ್ನು ಒಪ್ಪಿಕೊಳ್ಳತೊಡಗಿದ್ದಾರೆ. ಅಂದರೆ ಇಷ್ಟು ದಿನ ಈಶ್ವರಪ್ಪ ತಡೆಹಿಡಿದಿದ್ದರು ಎಂದಾಯಿತು.

    ರಾಜೀನಾಮೆ ಘೋಷಣೆ ಮಾಡಿ ಅಧಿಕೃತವಾಗಿ ನೀಡಲು ಸಾಕಷ್ಟು ಸಮಯ ತೆಗೆದುಕೊಂಡ ಈಶ್ವರಪ್ಪ ತರಾತುರಿಯಲ್ಲಿ 29 ಪಿಡಿಓಗಳನ್ನು ವರ್ಗಾವಣೆ ಮಾಡಿದ್ದಾರೆ. ಈ ತರಾತುರಿಯ ವರ್ಗಾವಣೆಯಲ್ಲಿ ಎಷ್ಟು ಪರ್ಸೆಂಟ್ ಹಗರಣವಿದೆ? ಇನ್ನುಳಿದ ಗುತ್ತಿಗೆದಾರರಿಂದ ಬಾಕಿಯಿದ್ದ 40 ಪರ್ಸೆಂಟ್‌ ವಸೂಲಿಗಾಗಿಯೇ ಇಷ್ಟು ಸಮಯ ತಗೆದುಕೊಂಡಿದ್ದಾ ಎಂದು ಸರ್ಕಾರವನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

     

  • ಮುಸ್ಲಿಮರ ಮನೆ, ಬದುಕು ಕಸಿಯಲು ಬಿಜೆಪಿ ನಾಯಕರಲ್ಲೇ ಪೈಪೋಟಿ: ಮುಫ್ತಿ

    ಮುಸ್ಲಿಮರ ಮನೆ, ಬದುಕು ಕಸಿಯಲು ಬಿಜೆಪಿ ನಾಯಕರಲ್ಲೇ ಪೈಪೋಟಿ: ಮುಫ್ತಿ

    ಶ್ರೀನಗರ: ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ರಾಮನವಮಿ ವೇಳೆ ನಡೆದ ಹಿಂಸಾಚಾರ ಖಂಡಿಸಿ ಬಿಜೆಪಿ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ವಾಗ್ದಾಳಿ ನಡೆಸಿದ್ದಾರೆ.

    ಭಾರತದ ಸಂವಿಧಾನವನ್ನು ನಾಶಪಡಿಸುವ ಬಿಜೆಪಿಯವರ ಪ್ರತಿಕಾರವು ಈಗ ಅಲ್ಪಸಂಖ್ಯಾತರ ಮನೆಗಳನ್ನು ತಲುಪಿದೆ. ಬಿಜೆಪಿ ನಾಯಕರು ಮುಸ್ಲಿಮರ ಮನೆ, ಬದುಕು ಮತ್ತು ಘನತೆ ಎಲ್ಲವನ್ನೂ ಕಸಿದುಕೊಳ್ಳುವಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಿದ್ದಾರೆ ಎಂದು ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧ?

    ಕಾಶ್ಮೀರಿ ಪಂಡಿತರು ವಲಸೆ ಹೋಗಲು ಒತ್ತಾಯಿಸಿದಾಗ ಕಾಶ್ಮೀರಿ ಮುಸ್ಲಿಮರಾದ ನಾವು ಮೂಕ ಪ್ರೇಕ್ಷಕರಾಗಿದ್ದೆವು ಎಂದು ಆರೋಪಿಸಲಾಗಿತ್ತು. ಭಾರತದ ಕಲ್ಪನೆಯನ್ನು ಬಿಜೆಪಿ ಧ್ವಂಸಗೊಳಿಸುತ್ತಿರುವುದು ಈ ಸಂದರ್ಭದಲ್ಲಿ ಬಹುಸಂಖ್ಯಾತ ಸಮುದಾಯದ ಕ್ರಿಮಿನಲ್ ಮೌನವು ಆತಂಕಕಾರಿಯಾಗಿದೆ ಎಂದು ಟ್ವೀಟ್‌ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ.

    ರಾಮನವಮಿ ವೇಳೆ ಖಾರ್ಗೋನ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಹತ್ತಾರು ಮನೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ರಾಮನವಮಿ ವೇಳೆ ದಾಳಿ ನಡೆಸಿದ್ದಾರೆಂದು ಆರೋಪಿಸಿ ಜಿಲ್ಲಾಡಳಿತ ಮತ್ತು ಪೊಲೀಸರು, ಹಲವರ ಮನೆಗಳನ್ನು ನೆಲಸಮಗೊಳಿಸಿದರು. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

  • ಬಿಜೆಪಿ ಕರಪ್ಷನ್ ಫೈಲ್ಸ್: ಸಂತೋಷ್ ಪ್ರಕರಣದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿ

    ಬಿಜೆಪಿ ಕರಪ್ಷನ್ ಫೈಲ್ಸ್: ಸಂತೋಷ್ ಪ್ರಕರಣದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿ

    ನವದೆಹಲಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ಮೇಲೆ ವಿಪಕ್ಷಗಳು ಮುಗಿಬಿದ್ದಿವೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಹ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಟ್ವೀಟ್‌ನಲ್ಲೇನಿದೆ?
    ಕರ್ನಾಟಕದಲ್ಲಿ ಬಿಜೆಪಿಯ 40 ಪರ್ಸೆಂಟ್ ಕಮಿಷನ್ ಸರ್ಕಾರ ತಮ್ಮದೇ ಕಾರ್ಯಕರ್ತನನ್ನು ಬಲಿ ಪಡೆದಿದೆ. ಸಂತ್ರಸ್ತ ಪ್ರಧಾನಿಗೆ ಸಲ್ಲಿಸಿದ ಮನವಿಗೆ ಉತ್ತರ ಸಿಕ್ಕಿಲ್ಲ. ಈ ಪ್ರಕರಣಕ್ಕೆ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಇಬ್ಬರೂ ಪಾಲುದಾರರು. ಇದು “ಬಿಜೆಪಿ ಕರಪ್ಷನ್ ಫೈಲ್ಸ್” ಎಂದು ಟ್ವೀಟ್ ಮಾಡಿ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಂತೋಷ್ ಪ್ರಕರಣ ಎಲ್ಲಾ ಆ್ಯಂಗಲ್‌ನಲ್ಲೂ ತನಿಖೆಯಾಗುತ್ತಿದೆ: ಆರಗ ಜ್ಞಾನೇಂದ್ರ

    ಇದು ಆತ್ಮಹತ್ಯೆಯಲ್ಲ, ಸರ್ಕಾರಿ ಕೊಲೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಈ ಕೊಲೆ ಮಾಡಿದ ಬಿಜೆಪಿ ಸರ್ಕಾರ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ಒಂದು ಕ್ಷಣವೂ ಅಧಿಕಾರದಲ್ಲಿರಲು ಅನರ್ಹ. ಈ ಕೂಡಲೇ ಈಶ್ವರಪ್ಪರನ್ನು ಸಂಪಟುದಿಂದ ವಜಾ ಮಾಡಿ, ಬಂಧಿಸಬೇಕು ಎಂದು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

  • ಶ್ರೀರಾಮನ ಹೆಸರಿನಲ್ಲಿ ಮುಸ್ಲಿಮರ ಶಾಂತಿಗೆ ಭಂಗ ತರುವುದು ಬೇಡ: ಹೆಚ್‌ಡಿಕೆ ಮನವಿ

    ಶ್ರೀರಾಮನ ಹೆಸರಿನಲ್ಲಿ ಮುಸ್ಲಿಮರ ಶಾಂತಿಗೆ ಭಂಗ ತರುವುದು ಬೇಡ: ಹೆಚ್‌ಡಿಕೆ ಮನವಿ

    ಬೆಂಗಳೂರು: ಮತ್ತೆ ಮುಸ್ಲಿಮರ ಓಲೈಕೆಗೆ ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಸಮುದಾಯದ ಪರ ಧ್ವನಿ ಎತ್ತಿದ್ದಾರೆ.

    ಶ್ರೀರಾಮನ ಹೆಸರಿನಲ್ಲಿ ಶೋಭಾಯಾತ್ರೆ ನಡೆಸಲು ನನ್ನದೇನೂ ಅಭ್ಯಂತರವಿಲ್ಲ, ಅದಕ್ಕೆ ನನ್ನ ಬೆಂಬಲವಿದೆ. ಆದರೆ ಶೋಭಾಯಾತ್ರೆ ಹೆಸರಿನಲ್ಲಿ ಇನ್ನೊಂದು ಸಮುದಾಯ ವಾಸ ಮಾಡುವ ಬೀದಿಗಳಲ್ಲಿ ಅಥವಾ ಅವರ ಪ್ರಾರ್ಥನಾ ಮಂದಿರಗಳ ಮುಂದೆ ಡಿಜೆ ಸೆಟ್ಟುಗಳನ್ನು ಹಾಕಿಕೊಂಡು 15-20 ನಿಮಿಷ ಕಾಲ ಕುಣಿಯುವುದು, ಕೇಕೆ ಹಾಕುವುದು ಇತ್ಯಾದಿ ಮಾಡುವುದು ಬೇಡವೆಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ನಡೀತಿರೋ ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಗೌರವ ತರುವುದಿಲ್ಲ: ಮಾಧುಸ್ವಾಮಿ ಅಸಮಾಧಾನ

    ಇದರಿಂದ ಶಾಂತಿ ಕದಡುತ್ತದೆ, ಹಾಗಾಗುವುದು ಬೇಡ. ಒಂದು ಸಮುದಾಯದ ಜನರು ಈಗ ಉಪವಾಸ ಆಚರಣೆಯಲ್ಲಿದ್ದಾರೆ. ಶೋಭಾಯಾತ್ರೆ ಹಿಂದೂಗಳು ವಾಸ ಮಾಡುವ ಬಡಾವಣೆ, ಬೀದಿಗಳಲ್ಲಿ ಮಾಡಿ, ಅರ್ಧ ಗಂಟೆ ಸಾಲದಿದ್ದರೆ, ಒಂದು ಗಂಟೆ ಮಾಡಿ. ಇದಕ್ಕೆ ನನ್ನ ಬೆಂಬಲವಿದೆ. ಈ ಸಮಯದಲ್ಲಿ ಅವರ ಬಡಾವಣೆಗಳಿಗೆ ಹೋಗಿ ಶಾಂತಿಗೆ ಭಂಗ ತರುವುದು ಬೇಡ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡುತ್ತೇನೆ. ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲ್ಲ, ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳುತ್ತೆ: ಶೆಹಬಾಜ್ ಷರೀಫ್

    KUMARASWAMY

    ಶ್ರೀರಾಮಚಂದ್ರ ಮಹಾಪ್ರಭು ನಮ್ಮೆಲ್ಲರ ಆರಾಧ್ಯ ದೈವ. ಅಷ್ಟೇ ಅಲ್ಲ; ಮನುಕುಲಕ್ಕೆ ಆದರ್ಶ, ತ್ಯಾಗ, ಸರಳತೆ, ಶಾಂತಿ, ಸಹನೆ, ಮೌಲ್ಯಗಳ ದಿವ್ಯಬೆಳಕು ತೋರಿದ ನಮ್ಮೊಳಗಿನ ದೈವ. ರಾಮರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ಈ ಹಿನ್ನೆಲೆಯಲ್ಲಿ ರಾಮನವಮಿ ಹಬ್ಬವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸೋಣ ಎಂದು ಕರೆ ನೀಡಿದ್ದಾರೆ.