Tag: ಟ್ವೀಟ್ ಪಬ್ಲಿಕ್ ಟಿವಿ

  • ರಿಯಾಲಿಟಿ ಶೋ ಮಕ್ಕಳ ಡ್ಯಾನ್ಸ್ ನೋಡಿ ರಮ್ಯಾ ಹೀಗಂದ್ರು

    ರಿಯಾಲಿಟಿ ಶೋ ಮಕ್ಕಳ ಡ್ಯಾನ್ಸ್ ನೋಡಿ ರಮ್ಯಾ ಹೀಗಂದ್ರು

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಮಕ್ಕಳ ಡ್ಯಾನ್ಸ್ ನೋಡಿ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅಭಿನಂದಿಸಿದ್ದಾರೆ.

    ಈ ವಾರ ಸ್ಯಾಂಡಲ್‍ ವುಡ್‍ನ ಬೆಸ್ಟ್ ಪೇರ್ ಅಂತಾ ಕರೆಸಿಕೊಳ್ಳುವ ಜೋಡಿಯ ಮಾದರಿಯಂತೆ ಸ್ಪರ್ಧಿಗಳು ನೃತ್ಯ ಮಾಡಬೇಕಿತ್ತು. ಸ್ಪರ್ಧೆಯ ನಿಯಮದಂತೆಯೇ ಸ್ಪರ್ಧಿಗಳಾದ ಸೂರಜ್ ಮತ್ತು ಶ್ರಾವ್ಯ ಜೋಡಿ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆಯ ಮೇಲೆ ನಟಿ ರಮ್ಯಾ ಅವರ `ಆಕಾಶ್’ ಸಿನಿಮಾ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿ ಎಲ್ಲರ ಕಣ್ಮನ ಸೆಳೆದಿದ್ದರು. ಅವರು ಮಾಡಿದ ವಿಡಿಯೋ ಕ್ಲಿಪ್‍ಯೊಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ದಿವ್ಯ ಪ್ರಸನ್ನ ಎಂಬವರು ನಟಿ ರಮ್ಯಾರಿಗೆ ಟ್ಯಾಗ್ ಮಾಡಿದ್ದರು.

    ವಿಡಿಯೋ ಜೊತೆಗೆ ಈ ಮಕ್ಕಳ ಇಂತಹ ಸುಂದರ ಪ್ರದರ್ಶನವನ್ನು ಇದುವರೆಗೂ ಈ ವೇದಿಕೆಯಲ್ಲಿ ನೋಡಿಲ್ಲ. ಅಷ್ಟೂ ಕ್ಯೂಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದರು.

    ಇದೇ ವೇದಿಕೆಯಲ್ಲಿ ಅಭಿಜಾತ್ ಮತ್ತು ವಂಶಿ ಜೋಡಿಯೂ ನಟಿ ರಮ್ಮಾ ಮತ್ತು ನಟ ಕಿಚ್ಚ ಸುದೀಪ್ ಜೋಡಿಯ `ಜಸ್ಟ್ ಮಾತ್ ಮಾತಲ್ಲಿ’ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಹಾಕಿ `ನನ್ನ ಮೆಚ್ಚಿನ ರಮ್ಮಾ ಮತ್ತು ಸುದೀಪ್ ಜೋಡಿ ಮತ್ತೆ ಪರದೆಯ ಮೇಲೆ ಬಂದಿದ್ದಾರೆ. ಮತ್ತೆ ನಿಮ್ಮಿಬ್ಬರನ್ನು ಪರದೆಯ ಮೇಲೆ ನೋಡಲು ಬಯಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದು, ಅದನ್ನು ರಮ್ಯಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ದಿವ್ಯಪ್ರಸನ್ನ ಅವರ ಟ್ವೀಟ್ ಗೆ ರಮ್ಯಾ “ಈ ಮಕ್ಕಳು ನನಗಿಂತ ಉತ್ತಮವಾಗಿ ಡ್ಯಾನ್ಸ್ ಮಾಡುತ್ತಾರೆ” ಎಂದು ರೀಟ್ವೀಟ್ ಮಾಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಲಿಟಲ್ ಮಾಸ್ಟರ್’ ಶೋ ನಡೆಯುತ್ತಿದೆ. ಈ ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತದೆ. ಈ ಶೋನಲ್ಲಿ ನಟಿ ರಕ್ಷಿತ ಪ್ರೇಮ್, ನಟ ವಿಜಯ್ ರಾಘವೇಂದ್ರ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ತೀರ್ಪುಗಾರಾಗಿದ್ದಾರೆ.

  • ಅಮಿತಾಬ್ ಬಚ್ಚನ್‍ಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತಾ?- ಬಿಗ್ ಬಿ ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಶ್ರೀದೇವಿ ಸಾವು

    ಅಮಿತಾಬ್ ಬಚ್ಚನ್‍ಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತಾ?- ಬಿಗ್ ಬಿ ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಶ್ರೀದೇವಿ ಸಾವು

    ನವದೆಹಲಿ: ಭಾರತ ಚಿತ್ರರಂಗದ ಮೊದಲ ಮಹಿಳಾ ಸೂಪರ್‍ಸ್ಟಾರ್ ಎನಿಸಿಕೊಂಡಿದ್ದ ಶ್ರೀದೇವಿ ಶನಿವಾರ ರಾತ್ರಿ ವಿಧಿವಶರಾದರೆಂದು ಕೇಳಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ನಟಿಯ ಸಾವಿನ ಸುದ್ದಿ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಜನ ಇದು ನಂಬಲು ಸಾಧ್ಯವಿಲ್ಲದ ಸಂಗತಿ ಎಂದು ಹೇಳಿದ್ದಾರೆ. ಅದರಲ್ಲೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಶ್ರೀದೇವಿ ಸಾವಿಗೂ ಮುನ್ನ ಮಾಡಿದ್ದ ಒಂದು ಟ್ವೀಟ್ ಈಗ ಎಲ್ಲರ ಗಮನ ಸೆಳೆದಿದೆ. ಅಮಿತಾಬ್ ಬಚ್ಚನ್‍ಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತಾ ಎಂಬ ಮಾತುಗಳು ಶುರುವಾಗಿವೆ.

    ಶ್ರೀದೇವಿ ಸಾವಿನ ಸುದ್ದಿ ಹೊರಬೀಳುವುದಕ್ಕೆ ಮುನ್ನ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿ, “ಅದ್ಯಾಕೋ ಗೊತ್ತಿಲ್ಲ, ಏನೋ ಒಂದು ರೀತಿಯ ವಿಚಿತ್ರ ಆತಂಕವಾಗ್ತಿದೆ” ಎಂದು ಬರೆದುಕೊಂಡಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಶ್ರೀದೇವಿ ಅವರ ಸಾವಿನ ಸುದ್ದಿ ಹೊರಬಿದ್ದಿದೆ. ಹೀಗಾಗಿ ಅಮಿತಾಬ್ ಬಚ್ಚನ್ ಅವರಿಗೆ ಶ್ರೀದೇವಿ ಸಾವಿನ ಬಗ್ಗೆ ಪೂರ್ವಸೂಚನೆ ಸಿಕ್ಕಿತ್ತಾ ಎಂದು ಟ್ವಿಟ್ಟರಿಗರು ಮಾತಾಡಿಕೊಳ್ತಿದ್ದಾರೆ.

    https://www.youtube.com/watch?v=Q-TaTMBm5XM

    https://www.youtube.com/watch?v=Wrxrv0oaqpk