Tag: ಟ್ವೀಟ್

  • ಸೈಟ್ ಸಿದ್ದಪ್ಪನವರೇ, ಮೂಡಾಮರಿ ಈಗ ರಾಜೀನಾಮೆ ಕೊಟ್ಟಿದ್ದು ಯಾಕೆ? – ಜೆಡಿಎಸ್ ಟೀಕೆ

    ಸೈಟ್ ಸಿದ್ದಪ್ಪನವರೇ, ಮೂಡಾಮರಿ ಈಗ ರಾಜೀನಾಮೆ ಕೊಟ್ಟಿದ್ದು ಯಾಕೆ? – ಜೆಡಿಎಸ್ ಟೀಕೆ

    ಬೆಂಗಳೂರು: ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ(CM Siddaramaiah) ವಿರುದ್ಧ ಜೆಡಿಎಸ್ (JDS) ವಾಗ್ದಾಳಿ ನಡೆಸಿದೆ. ಎಕ್ಸ್‌ನಲ್ಲಿ ಸಿಎಂ ವಿರುದ್ಧ ಕಿಡಿಕಾರಿರುವ ಜೆಡಿಎಸ್ ಇಡಿ ಕುಣಿಕೆ ಬಿಗಿಗೊಳ್ಳುತ್ತಿರುವುದರಿಂದ ರಾಜೀನಾಮೆ ನೀಡಿದ್ದಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದೆ.ಇದನ್ನೂ ಓದಿ:ರಿಷಬ್ ಶೆಟ್ಟಿ ಜೊತೆಗಿನ ಫೋಟೋ ಹಂಚಿಕೊಂಡ ಮಾಲಿವುಡ್ ನಟ ಜಯಸೂರ್ಯ

    ಜೆಡಿಎಸ್ ಟ್ವೀಟ್ ಏನು?
    ನಾನು ತಪ್ಪೇ ಮಾಡಿಲ್ಲ, ವೈಟ್ನರ್ ಹಾಕಿದ್ದು ನಾನಲ್ಲ, ನಾನು ಕ್ಲೀನ್ ಅಂಡ್ ಕ್ಲಿಯರ್. ಅದು ನಾನಲ್ಲ. ನಾನಲ್ಲ, ಆ ಸೈಟುಗಳಿಗೂ ನನಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಸೈಟ್ ಸಿದ್ದಪ್ಪನವರೇ. ಮೂಡಾಮರಿ ಈಗ ರಾಜೀನಾಮೆ ಕೊಟ್ಟಿದ್ದು ಯಾಕೆ? ರಾಜೀನಾಮೆ ಕೊಡಿ ಎಂದು ನೀವೇ ಹೇಳಿದಿರೋ ಅಥವಾ ಮರಿಯೇ ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿತೋ? ನೇಷನ್ ವಾಂಟ್ಸ್ ಟು ನೋ ಎಂದು ಪ್ರಶ್ನೆ ಮಾಡಿದೆ. ಇಡಿ ಕುಣಿಕೆ ಬಿಗಿದುಕೊಳ್ಳುತ್ತಿದೆ ಇದರ ಪರಿಣಾಮಗಳು ಇಲ್ಲಿವೆ ಎಂದು ಸಿಎಂ ವಿರುದ್ಧ ಕಿಡಿಕಾರಿದೆ.

    ಪರಿಣಾಮ 1: 14 ನಿವೇಶನಗಳು ಮೂಡಾಕ್ಕೆ ವಾಪಸ್!
    ಪರಿಣಾಮ 2: ಮೂಡಾ ಮರಿ ತಲೆದಂಡ
    ಪರಿಣಾಮ 3: ಇನ್ನಷ್ಟು ತಲೆದಂಡಗಳು ಕಾದಿವೆ.ಇದನ್ನೂ ಓದಿ: ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ – ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಪ್ರತಿಭಟನೆ

  • ಬ್ರ‍್ಯಾಂಡ್ ಬೆಂಗಳೂರು ಮುಳುಗುತ್ತಿದೆ – ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ

    ಬ್ರ‍್ಯಾಂಡ್ ಬೆಂಗಳೂರು ಮುಳುಗುತ್ತಿದೆ – ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ

    ಬೆಂಗಳೂರು: ಬ್ರ‍್ಯಾಂಡ್ ಬೆಂಗಳೂರು ಮುಳುಗುತ್ತಿದೆ ಎಂದು ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಜೆಡಿಎಸ್ (JDS) ವಾಗ್ದಾಳಿ ನಡೆಸಿದೆ.ಇದನ್ನೂ ಓದಿ: ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ

    ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಇಡೀ ಬೆಂಗಳೂರು ಅವ್ಯವಸ್ಥೆ ಆಗಿದೆ ಎಂದು ಎಕ್ಸ್ (X) ಖಾತೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಪೋಸ್ಟ್ ಹಾಕಿದೆ. ಸರ್ಕಾರದ ವಿರುದ್ಧ ಕಿಡಿಕಾರಿರುವ ಜೆಡಿಎಸ್ ಬ್ರ‍್ಯಾಂಡ್ ಬೆಂಗಳೂರು ಮುಳುಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ.

    ಟ್ವೀಟ್‌ನಲ್ಲಿ ಏನಿದೆ?
    ಮಾನ್ಯ ಹೆಚ್‌ಡಿ ದೇವೇಗೌಡ (HD Devegowda) ಅವರು ದೂರದೃಷ್ಟಿಯಿಂದ ಬೆಂಗಳೂರು ನಗರಕ್ಕೆ ಮಾಹಿತಿ ತಂತ್ರಜ್ಞಾನದ ಅಡಿಪಾಯ ಹಾಕಿದರು. ಆ ನಂತರ ಬಂದ ಕಾಂಗ್ರೆಸ್ ಸರ್ಕಾರ ದೇವೇಗೌಡರ ದಿಸೆಯಿಂದ ಚಿನ್ನದ ಬೆಲೆ ಬಂದ ಭೂಮಿಯನ್ನು ಕೊಳ್ಳೆ ಹೊಡೆಯಲು ರಿಯಲ್ ಎಸ್ಟೇಟ್ ದಂಧೆಗೆ ನಾಂದಿ ಹಾಡಿತು. ಆ ರಿಯಲ್ ಎಸ್ಟೇಟ್ ದಂಧೆಯ ರಕ್ಕಸ ರೂಪವೇ ಡೂಪ್ಲಿಕೇಟ್ ಸಿಎಂ ಬ್ರ‍್ಯಾಂಡ್ ಬೆಂಗಳೂರು!! ಬ್ರ‍್ಯಾಂಡ್ ಬೆಂಗಳೂರು ಮುಳುಗುತ್ತಿದೆ! ಡೂಪ್ಲಿಕೇಟ್ ಸಿಎಂ ಫೋಟೋಶೂಟ್‌ನಲ್ಲಿ ಬ್ಯುಸಿಯಾಗಿದ್ದಾರೆ!! ರೋಮ್ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ!! ಎಂದು ಜೆಡಿಎಸ್ ಲೇವಡಿ ಮಾಡಿದೆ.ಇದನ್ನೂ ಓದಿ: ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಹರಿಯಾಣ, ಪಂಜಾಬ್ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

  • ಜನಪ್ರತಿನಿಧಿಯಾಗಿ ಜನರ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದೇನೆ, ತಪ್ಪೇನು ಅಲ್ಲ: ಕೃಷ್ಣಬೈರೇಗೌಡ ಸಮರ್ಥನೆ

    ಜನಪ್ರತಿನಿಧಿಯಾಗಿ ಜನರ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದೇನೆ, ತಪ್ಪೇನು ಅಲ್ಲ: ಕೃಷ್ಣಬೈರೇಗೌಡ ಸಮರ್ಥನೆ

    ಬೆಂಗಳೂರು: ಜನಪ್ರತಿನಿಧಿಯಾಗಿ ಜನರ ಸಮಸ್ಯೆ ಬಗ್ಗೆ ಟ್ವೀಟ್ (Tweet) ಮಾಡಿ ಸರಿ ಮಾಡಲು ಹೇಳಿದ್ದೇನೆ. ಇದಕ್ಕೆ ಬೇರೆ ಬಣ್ಣ ಕಟ್ಟೋದು ಬೇಡ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ತಮ್ಮ ಏರಿಯಾದ ರಸ್ತೆ ಗುಂಡಿ ಮುಚ್ಚುವ ಬಗ್ಗೆ ಟ್ವೀಟ್ ಮಾಡಿದ್ದ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವರು, ಸಾರ್ವಜನಿಕರ ಪರವಾಗಿ ಅಧಿಕಾರಿಗಳಿಗೆ ಮಾಹಿತಿ ಕೊಡುವ ಪ್ರಯತ್ನ ಮಾಡಿದ್ದೇನೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕು. ಅಧಿಕಾರಿಗಳಿಗೆ ಮಾಹಿತಿ ಕೊಡೋಕೆ ನಾನಾ ಮಾರ್ಗಗಳು ಇವೆ. ಫೋನ್ ಮಾಡಬಹುದು, ಪತ್ರ ಬರೆಯಬಹುದು. ವೀಡಿಯೋ ಕಳುಹಿಸಬಹುದು. ನಾವು ಅದನ್ನು ಅವರ ಗಮನಕ್ಕೆ ತಂದಿದ್ದೇನೆ. ನನ್ನ ಕ್ಷೇತ್ರದಲ್ಲಿ ಜನ ಸಮಸ್ಯೆ ತಂದಿದ್ದರು. ಅದನ್ನು ಸರಿ ಮಾಡಲು ಹೇಳಿದ್ದೇನೆ. ಅದಕ್ಕೆ ನೀವು ಬಣ್ಣ ಕಟ್ಟಿ ಏನೇನೋ ಹೇಳಿದರೆ ಅದು ಅವರಿಗೆ ಬಿಟ್ಟದ್ದು. ನಮಗೆ ಜನರ ಕೆಲಸ ಸರ್ಕಾರದಿಂದ ಆಗಬೇಕು. ಆ ಒಂದು ಪ್ರಯತ್ನ ನಾನು ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದಲ್ಲಿ ಸದ್ಯಕ್ಕೆ ಉಪಚುನಾವಣೆ ಇಲ್ಲ

    ಸಚಿವರ ಟ್ವೀಟ್‌ಗೆ ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಲಸ ಆಗೋದು ಮುಖ್ಯನಾ? ಹೇಗೆ ಆಯ್ತು ಅನ್ನೋದು ಮುಖ್ಯನಾ? ಜನಕ್ಕೆ ಸಮಸ್ಯೆ ಪರಿಹಾರ ಆಗಬೇಕು. ಯಾವ ಮೂಲದಿಂದ ಆಗುತ್ತೆ ಅನ್ನೋದು ಎರಡನೇ ವಿಚಾರ. ಜನ ಪ್ರತಿನಿಧಿಯಾಗಿ ಜನರ ಸಮಸ್ಯೆ ಪರಿಹಾರ ಮಾಡೋದು ನನ್ನ ಕೆಲಸ. ಜನರ ಪರವಾಗಿ ನಾನು ಕೆಲಸ ಮಾಡಿದ್ದೇನೆ. ನಾನು ಆಯುಕ್ತರಿಗೆ ಅನೇಕ ಬಾರಿ ಈ ವಿಷಯ ಹೇಳಿದ್ದೆ. ಅವರಿಗೆ ಚಿತ್ರಣ ಕಳುಹಿಸಿಕೊಡೋಣ ಅಂತ ವೀಡಿಯೋ ಕಳುಹಿಸಿದೆ. ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಕೆಲಸ ಆಗಬೇಕು ಅನ್ನೋದು ಮುಖ್ಯ ಎಂದು ಹೇಳಿದರು. ಇದನ್ನೂ ಓದಿ: Assembly elections 2024: ಜಮ್ಮು-ಕಾಶ್ಮೀರದಲ್ಲಿ 3 ಹಂತ, ಹರಿಯಾಣದಲ್ಲಿ ಅ.1ಕ್ಕೆ ಮತದಾನ

    ಸರಿಯಾಗಿ ಕೆಲಸ ಆಗಬೇಕು ಎಂಬುದು ನಮ್ಮ ಉದ್ದೇಶ. ಡಿಸಿಎಂ ಸೂಚನೆ ಕೊಟ್ಟಿದ್ದಾರೆ. ಸಿಎಂ ಕೂಡ ಸೂಚನೆ ಕೊಟ್ಟಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಈ ಬಾರಿ ಜಾಸ್ತಿ ಮಳೆ ಆಗುತ್ತದೆ ಎಂದು ನಾನು ಬಿಬಿಎಂಪಿಗೆ ಪತ್ರ ಬರೆದಿದ್ದೆ. ಅದಕ್ಕೆ ರೆಡಿಯಾಗಬೇಕು ಎಂದು ಪತ್ರ ಬರೆದಿದ್ದೆ. ಸರ್ಕಾರ ನಮ್ಮದು. ಆದರೆ ನಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡಿ ಸರ್ಕಾರಕ್ಕೆ ತೊಂದರೆ ಆಗಬಾರದು. ನನ್ನ ಮೊದಲ ಆದ್ಯತೆ ಜನರಿಗೆ, ಆಮೇಲೆ ಸರ್ಕಾರ. ಜನರಿಗೆ ನಾವು ಜನಪ್ರತಿನಿಧಿಯಾಗಿ ನಮ್ಮ ಮೊದಲ ಆದ್ಯತೆ ಇರಬೇಕು. ಅ ಪ್ರಜ್ಞೆ ನನಗೆ ಇದೆ. ಸರ್ಕಾರಕ್ಕೆ ಹೆಸರು ಬರಬೇಕಾದರೆ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು. ಅವರನ್ನು ಎಚ್ಚರಿಸುವ ಕೆಲಸ ಮಾಡಿದ್ದೇನೆ ಎಂದು ತಾವು ಮಾಡಿದ ಟ್ವೀಟ್ ಸಮರ್ಥಿಸಿಕೊಂಡರು. ಇದನ್ನೂ ಓದಿ: ರಾಜ್ಯದ ಸರ್ಕಾರಿ ನೌಕರರು ಇನ್ಮುಂದೆ ಕೆಂಪು-ಹಳದಿ ಬಣ್ಣದ ಐಡಿ ಕಾರ್ಡ್ ಟ್ಯಾಗ್ ಧರಿಸಬೇಕು!

  • ಸಂಸದ ಅನಂತಕುಮಾರ್ ಹೆಗಡೆ ಕುಂಭಕರ್ಣನಿದ್ದಂತೆ: ಕಾಂಗ್ರೆಸ್ ಕಿಡಿ

    ಸಂಸದ ಅನಂತಕುಮಾರ್ ಹೆಗಡೆ ಕುಂಭಕರ್ಣನಿದ್ದಂತೆ: ಕಾಂಗ್ರೆಸ್ ಕಿಡಿ

    ಬೆಂಗಳೂರು: ಸಂಸದ ಅನಂತಕುಮಾರ್ ಹೆಗಡೆ (Ananthkumar Hegde) ಕುಂಭಕರ್ಣನಿದ್ದಂತೆ. ನಾಲ್ಕೂವರೆ ವರ್ಷ ಮಲಗುವುದು, ಚುನಾವಣೆ ಬಂದಾಗ ಏಳುವುದು ಎಂದು ಕಾಂಗ್ರೆಸ್ (Congress) ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

    ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ಕುರಿತು ಕಾಂಗ್ರೆಸ್ (Congress) ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ದಲಿತ, ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಏಳಿಗೆಯನ್ನು ಸಹಿಸದ ವಿಕೃತ ಮನಸ್ಥಿತಿಯ ಪರಂಪರೆಯನ್ನು ಮುಂದುವರಿಸುವ ಅನಂತ್ ಕುಮಾರ್ ಹೆಗಡೆಯಂತಹ ಕ್ರಿಮಿ ಕೀಟಗಳು ಈ ದೇಶಕ್ಕೆ ಕ್ಯಾನ್ಸರ್‌ನಂತೆ ಕಾಡುತ್ತವೆ. ಈ ಕ್ಯಾನ್ಸರ್‌ಗೆ ಸಂವಿಧಾನದಲ್ಲಿ ಔಷಧವಿದೆ ಎಂದು ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಕೋಚಿಮುಲ್‌ ನೇಮಕಾತಿ ಅಕ್ರಮ – ಶಾಸಕರ ಶಿಫಾರಸು ಪತ್ರ ನೀಡಿದ ಅಭ್ಯರ್ಥಿಗಳಿಗೆ ಇಡಿ ಶಾಕ್‌

    ಕಾಂಗ್ರೆಸ್ ಪಕ್ಷದ ಬಗ್ಗೆ, ಸಿದ್ದರಾಮಯ್ಯ ಅವರ ಬಗ್ಗೆ ತನ್ನ ಕೊಳಕು ನಾಲಿಗೆ ಹರಿಬಿಡುವ ಮೊದಲು ಸಂಸದನಾಗಿ ತನ್ನ ಸಾಧನೆ ಏನು ಎಂಬುದನ್ನು ಜನತೆಗೆ ತಿಳಿಸಲಿ. ಈ ಅಸಹ್ಯದ ವ್ಯಕ್ತಿಯಲ್ಲಿ ಪುರೋಹಿತಶಾಹಿಯ ಅಹಂಕಾರ ಮಿತಿ ಮೀರಿ ನರ್ತಿಸುತ್ತಿದೆ. ಈ ಅಹಂಕಾರದ ಮದ ಇಳಿಸುವ ತಾಕತ್ತು ಕನ್ನಡಿಗರಿಗೆ ಇದೆ ಎಂದು ಹರಿಹಾಯ್ದಿದೆ. ಇದನ್ನೂ ಓದಿ: ʻಸ್ವಚ್ಛತೀರ್ಥ ಅಭಿಯಾನʼಕ್ಕೆ ರಾಜ್ಯ ನಾಯಕರು ಸಾಥ್‌ – ಹುಬ್ಬಳ್ಳಿಯಲ್ಲಿ ದೇವಸ್ಥಾನ ಸ್ವಚ್ಛಗೊಳಿಸಿದ ಪ್ರಹ್ಲಾದ್‌ ಜೋಶಿ

  • ವಿಕ್ರಂ ಸಿಂಹ ಬಂಧನದಿಂದ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ – ಕಾಂಗ್ರೆಸ್ ಟ್ವೀಟ್

    ವಿಕ್ರಂ ಸಿಂಹ ಬಂಧನದಿಂದ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ – ಕಾಂಗ್ರೆಸ್ ಟ್ವೀಟ್

    ಬೆಂಗಳೂರು: ಮರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ (Prathap Simha) ಅವರ ತಮ್ಮ ವಿಕ್ರಂ ಸಿಂಹ (Vikram Simha) ಅವರನ್ನು ಅರಣ್ಯಾಧಿಕಾರಿಗಳು (Forest Officers) ಬಂಧಿಸಿದ್ದಾರೆ. ಇದೀಗ ವಿಕ್ರಂ ಸಿಂಹ ಬಂಧನದ ಕುರಿತು ಕಾಂಗ್ರೆಸ್ (Congress) ಟ್ವೀಟ್ ಮಾಡಿದ್ದು, ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

    ಟ್ವೀಟ್‌ನಲ್ಲಿ ಏನಿದೆ?
    ಪಾರ್ಲಿಮೆಂಟ್ ದಾಳಿಕೋರರಿಗೆ ಪಾಸ್ ನೀಡಿದ್ದ ಬ್ಯಾರಿಕೇಡ್ ಶೂರ ಪ್ರತಾಪ್ ಸಿಂಹ ಅವರ ಸಹೋದರ ಕಾಡಿನ ಕಳ್ಳ ವಿಕ್ರಂ ಸಿಂಹರ ಬಂಧನವಾಗಿದೆ. ಈ ಬಂಧನದ ಮೂಲಕ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ. ನನ್ನ ತಮ್ಮ ತಪ್ಪೇ ಮಾಡಿಲ್ಲ ಎನ್ನುತ್ತಿದ್ದ ಪ್ರತಾಪ್ ಸಿಂಹ ಅವರೇ, ನಿಮ್ಮ ತಮ್ಮ ತಲೆಮರೆಸಿಕೊಂಡಿದ್ದೇಕೆ? ಈಗ ಬಂಧನವಾಗಿದ್ದೇಕೆ? ಕಾಡುಗಳ್ಳ ವೀರಪ್ಪನ್ ಸ್ಥಾನ ತುಂಬುವಂತೆ ನಿಮ್ಮ ಸಹೋದರನನ್ನು ತಯಾರು ಮಾಡುತ್ತಿದ್ರಾ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ನೆಲದ ಕಾನೂನು ಎಲ್ಲರಿಗೂ ಒಂದೆ: ಪ್ರತಾಪ್ ಸಿಂಹ ಸಹೋದರನ ಬಂಧನಕ್ಕೆ ಈಶ್ವರ್ ಖಂಡ್ರೆ ಪ್ರತಿಕ್ರಿಯೆ

    ಪ್ರಭಾವ ಬೀರಿದ ಮಾತ್ರಕ್ಕೆ ಸಂಸತ್ ದಾಳಿಕೋರರಿಗೆ ಪಾಸ್ ನೀಡಿದ ಪ್ರಕರಣದಿಂದ ತಪ್ಪಿಸಿಕೊಳ್ಳಬಹುದು ಎಂದು ನಂಬಿದ್ದೀರಿ. ಆದರೆ ನಿಮ್ಮ ಸಹೋದರನ ಮರಗಳ್ಳತನದ ದಂಧೆಯಲ್ಲಿ ಕಾನೂನಿನ ಕುಣಿಕೆಯಿಂದ ತಪ್ಪಿಸಲಾರಿರಿ. ಕೋಟ್ಯಂತರ ರೂ. ಬೆಲೆ ಬಾಳುವ ಮರಗಳನ್ನು ಯಾವುದೇ ಅಂಜಿಕೆ ಇಲ್ಲದೆ ಕಡಿದು ಕಳ್ಳಸಾಗಣೆಗೆ ಮುಂದಾಗಿದ್ದು, ಯಾವ ಸೀಮೆಯ ನೈತಿಕತೆ ಸ್ವಾಮಿ ನಿಮ್ಮದು? ಇಂತಹ ಇನ್ಯಾವ ಬಗೆಯ ಕಳ್ಳ ದಂಧೆಗಳಿವೆ ನಿಮ್ಮದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮರಗಳ್ಳತನ ಪ್ರಕರಣದಲ್ಲಿ ಸಂಸದ ಪ್ರತಾಪ್‌ ಸಿಂಹ ಸಹೋದರ ವಿಕ್ರಂ ಸಿಂಹ ಬಂಧನ

    ಪತ್ರಕರ್ತರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ತಮ್ಮ ಗುರು ಮೋದಿಯಂತೆಯೇ ನಾನಾ ಬಗೆಯ ನಾಟಕವಾಡುವ ಪ್ರತಾಪ್‌ ಅವರೇ, ಸಂಸತ್ ದಾಳಿಕೋರರಿಗೆ ಪಾಸ್ ಕೊಟ್ಟಿದ್ದೇಕೆ, ಅವರಿಗೂ ನಿಮಗೂ ಇರುವ ಸಂಬಂಧವೇನು ಎಂಬ ಸರಳ ಪ್ರಶ್ನೆಗಳಿಗೆ ಉತ್ತರಿಸಲು ಭಯ ಪಡುವುದೇಕೆ? ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ ಕಾಣಿಕೆ ಕೊಡ್ತಿದೆ: ಅಶೋಕ್ ವಾಗ್ದಾಳಿ

    ಈಗ ಇನ್ನೊಂದಿಷ್ಟು ಪ್ರಶ್ನೆಗಳು ಉದ್ಭವಿಸಿವೆ. ನಿಮ್ಮ ಸಹೋದರನ ಮರಗಳ್ಳತನದ ದಂಧೆಯಲ್ಲಿ ನಿಮ್ಮ ಪಾಲೂ ಇದೆಯೇ? ತಮ್ಮನ ಕಳ್ಳದಂಧೆಯನ್ನು ಪ್ರಭಾವ ಬೀರಿ ರಕ್ಷಿಸುತ್ತಿದ್ದಿದ್ದು ನೀವೇನಾ? ಈ ಕಳ್ಳದಂಧೆಯನ್ನು ಎಷ್ಟು ವರ್ಷಗಳಿಂದ ಮಾಡಿಕೊಂಡು ಬಂದಿದ್ದೀರಿ? ಇನ್ನೂ ಅದೆಷ್ಟು ಮರಗಳ ಮಾರಣಹೋಮ ನಡೆಸಿದ್ದೀರಿ? ಅಂದಹಾಗೆ, ಬೆತ್ತಲೆ ಜಗತ್ತಿನಲ್ಲಿ ಈ ಎಲ್ಲಾ ಸಂಗತಿಗಳ ಬಗ್ಗೆ ಬರೆಯುವುದು ಯಾವಾಗ? ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗೋದಾದ್ರೆ ನೂರಕ್ಕೆ ನೂರರಷ್ಟು ಬೆಂಬಲಿಸುತ್ತೇವೆ: ಬಿ.ನಾಗೇಂದ್ರ

  • ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? – ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ಕಿಡಿ

    ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? – ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ಕಿಡಿ

    ಬೆಂಗಳೂರು: ಕಾವೇರಿ ನೀರಿಗಾಗಿ (Kaveri Water) ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿದ ಹಿನ್ನೆಲೆ ರೈತರು ಹಾಗೂ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭ ಪೊಲೀಸರು ಹಲವು ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ವಶಕ್ಕೆ ಪಡೆದಿದ್ದು, ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಟ್ವೀಟ್ (Tweet) ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    ಬೆಂಗಳೂರು ಬಂದ್ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕಾವೇರಿ ನೀರಿಗಾಗಿ ನಡೆಯುತ್ತಿರುವ ಬೆಂಗಳೂರು ಬಂದ್‌ಗೆ ನನ್ನ ಸಂಪೂರ್ಣ ಬೆಂಬಲವಿದೆ. ಹೋರಾಟ ಶಾಂತಿಯುತವಾಗಿರಲಿ. ಬಂದ್ ಯಶಸ್ವಿಯಾಗಲಿ. ಜನತಾದಳ ಪಕ್ಷದ ಕಾರ್ಯಕರ್ತರೂ ಕೂಡ ಬಂದ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ, ತಮಿಳುನಾಡು ನಡುವೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಬ್ರೇಕ್

    ಟ್ವೀಟ್‌ನಲ್ಲಿ ಏನಿದೆ?
    ಇದೆಂಥಾ ಚೋದ್ಯ? ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರು, ಇಂದು ಕಾವೇರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದು ಕಾಂಗ್ರೆಸ್ (Congress) ಸರ್ಕಾರದ ಕಿಡಿಗೇಡಿತನದ ಪರಮಾವಧಿ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ, ಕನ್ನಡಿಗರಿಗೆ ಇನ್ನೊಂದು ನ್ಯಾಯ ಎನ್ನುವುದು ಇದೆಯಾ? ಇದನ್ನೂ ಓದಿ: ಬೆಂಗಳೂರು ಬಂದ್ – ಕುರುಬೂರು ಶಾಂತಕುಮಾರ್ ಪೊಲೀಸ್ ವಶಕ್ಕೆ

    ಕೋವಿಡ್ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಬಹುದಾದರೆ, ನಾಡಿನ ಜೀವನಾಡಿ ಕಾವೇರಿಗಾಗಿ ಕನ್ನಡಿಗರು ಪ್ರತಿಭಟನೆ ನಡೆಸಬಾರದೇ? ಶಾಂತವಾಗಿ ಹೋರಾಟ ನಡೆಸುತ್ತಿದ್ದ ರೈತರು, ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ. ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? ಇಷ್ಟಕ್ಕೂ ಕನ್ನಡಿಗರು ಮತ ಹಾಕಿದ್ದು ಯಾರಿಗೆ? ಇದನ್ನೂ ಓದಿ: ಬೆಂಗಳೂರು ಬಂದ್ – ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೂ ಸಹಜ ಸ್ಥಿತಿ

    ಹೋರಾಟಗಾರರು, ರೈತರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಪಕ್ಷವು ಡಿಎಂಕೆ ಪಕ್ಷದ ಬಿ ಟೀಮ್ ಆಗಿ ಪರಿವರ್ತನೆ ಆದ ಪರಿಣಾಮವೇ ಈ ಕಾವೇರಿ ಬಿಕ್ಕಟ್ಟು ಎನ್ನುವುದು ಕನ್ನಡಿಗರಿಗೆ ಈಗ ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್‌- ಎಂದಿನಂತೆ ಸಂಚರಿಸುತ್ತಿವೆ ಬಿಎಂಟಿಸಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುರಿ ಕಾಯ್ತಿದ್ದ ಬಾಲಕ ಮರಳಿ ಶಾಲೆಗೆ – ಬಾಲಕನ ಭವಿಷ್ಯ ಉಜ್ವಲವಾಗಲಿ ಅಂತಾ ಸಿಎಂ ಟ್ವೀಟ್

    ಕುರಿ ಕಾಯ್ತಿದ್ದ ಬಾಲಕ ಮರಳಿ ಶಾಲೆಗೆ – ಬಾಲಕನ ಭವಿಷ್ಯ ಉಜ್ವಲವಾಗಲಿ ಅಂತಾ ಸಿಎಂ ಟ್ವೀಟ್

    ಚಿತ್ರದುರ್ಗ: ಶಾಲೆ (School) ಬಿಟ್ಟು ಕುರಿ ಕಾಯುತ್ತಿದ್ದ ಚಿತ್ರದುರ್ಗ (Chitradurga) ಜಿಲ್ಲೆಯ ಮೊಳಕಾಲ್ಮೂರು (Molakalmuru) ತಾಲೂಕಿನ ಬಸಾಪುರ ಗ್ರಾಮದ ಶಿಕ್ಷಣ ವಂಚಿತ 11 ವರ್ಷದ ಬಾಲಕ ಯೋಗೇಶ್‌ನನ್ನು ಅಧಿಕಾರಿಗಳು ಮರಳಿ ಶಾಲೆಗೆ ಕರೆತಂದಿದ್ದಾರೆ.

    ಯೋಗೇಶ್‌ನ ಪೋಷಕರು ಬಡತನದ ಬೇಗೆಯಿಂದ ಬಳಲಿದ್ದು, ಕಳೆದ 2 ವರ್ಷಗಳಿಂದ ಯೋಗೇಶ್‌ನನ್ನು ಒತ್ತಾಯ ಪೂರ್ವಕವಾಗಿ ಶಾಲೆ ಬಿಡಿಸಿ ಕುರಿ ಕಾಯಲು ಕಳುಹಿಸುತ್ತಿದ್ದರು. ಇದನ್ನು ಗಮನಿಸಿದ ಚಳ್ಳಕೆರೆಯ ಮಹೇಂದ್ರ ಈ ಬಗ್ಗೆ ಟ್ವೀಟ್ (Tweet) ಮಾಡಿ ಮುಖ್ಯಮಂತ್ರಿ ಕಚೇರಿಯ ಗಮನ ಸೆಳೆದಿದ್ದರು. ಇದನ್ನೂ ಓದಿ: ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರೀನಿ ಬಾ: ಸಚಿವ ಸುಧಾಕರ್‌ ಧಮ್ಕಿ

    ಈ ಟ್ವೀಟ್ ಮಾಡಿದ ಒಂದೇ ದಿನದಲ್ಲಿ ಬಾಲಕನನ್ನು ಪತ್ತೆ ಹಚ್ಚಿದ ಅಧಿಕಾರಿಗಳು, ಪೋಷಕರ ಮನವೊಲಿಸಿ ಮರಳಿ ಶಾಲೆಗೆ ಕರೆತಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಟ್ವೀಟ್ ಮಾಡಿದ್ದು, ಬಾಲ್ಯದಲ್ಲಿ ನಾನು ಸಹ ಶಿಕ್ಷಣದಿಂದ ವಂಚಿತನಾಗಿದ್ದೆ. ರಾಜಪ್ಪ ಎಂಬ ಮೇಷ್ಟ್ರು ನನಗೆ ಐದನೇ ತರಗತಿಗೆ ದಾಖಲಾತಿ ಮಾಡಿಸಿದ್ದರು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮದ ತತ್ವಗಳ ವಿರುದ್ಧ ಹೋರಾಡಲು INDIA ಒಕ್ಕೂಟ ರಚಿಸಿದೆ: ಡಿಎಂಕೆ ನಾಯಕ ಪೊನ್ಮುಡಿ ವಿವಾದಾತ್ಮಕ ಹೇಳಿಕೆ

    ಅಂದು ನನಗೆ ಶಿಕ್ಷಣ (Education) ಸಿಕ್ಕಿದ್ದರಿಂದ ಇಂದು ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಗಿದೆ. ಮರಳಿ ಶಿಕ್ಷಣದತ್ತ ಮುಖಮಾಡಿದ ಬಾಲಕ ಯೋಗೇಶನ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದ್ದಾರೆ. ಇದರಿಂದ ಟ್ವೀಟ್ ಮೂಲಕ ಸಿಎಂ ಕಚೇರಿ ಗಮನ ಸೆಳೆದಿದ್ದ ಸ್ಥಳೀಯ ಮಹೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಸಿಬ್ಬಂದಿಗೆ ನೂತನ ಡ್ರೆಸ್ ಕೋಡ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ತನಾತನಿಸ್’ ಮಾನವ ವಿರೋಧಿಗಳು : ಪ್ರಕಾಶ್ ರಾಜ್ ಮತ್ತೆ ವಿವಾದಿತ ಟ್ವೀಟ್

    ‘ತನಾತನಿಸ್’ ಮಾನವ ವಿರೋಧಿಗಳು : ಪ್ರಕಾಶ್ ರಾಜ್ ಮತ್ತೆ ವಿವಾದಿತ ಟ್ವೀಟ್

    ನಿನ್ನೆಯಷ್ಟೇ ತಮಿಳಿನ ಖ್ಯಾತ ನಟ, ರಾಜಕಾರಣಿ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಸನಾತನ (Sanatana) ಧರ್ಮವನ್ನು ಅವರು ಮಲೇರಿಯಾ, ಡೆಂಗ್ಯೂಗೆ  ಹೋಲಿಸಿ, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಈ ಮಾತು ಸಾಕಷ್ಟು ಸಂಚಲನ ಮೂಡಿಸಿತ್ತು. ವಿವಾದಕ್ಕೂ (Controversy) ಕಾರಣವಾಗಿತ್ತು. ಹಿಂದೂ ಪರ ಸಂಘಟನೆಗಳು ಉದಯನಿಧಿ ವಿರುದ್ಧ ಕಿಡಿಕಾರಿದ್ದರು. ಈ ವಿವಾದದ ಕಿಡಿ ಇನ್ನೂ ಉರಿಯುತ್ತಲೇ ಇದೆ. ಇದರ ಮಧ್ಯ ಪ್ರಕಾಶ್ ರಾಜ್ (Prakash Raj) ಕೂಡ ಸನಾತನ ಧರ್ಮದ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಚಂದ್ರಯಾನ 3 ಕುರಿತಂತೆ ಈ ಹಿಂದೆ ಲೇವಡಿ ಮಾಡಿದ್ದ ಪ್ರಕಾಶ್ ರಾಜ್ , ಆಗಲೂ ನೆಟ್ಟಿಗರ ಕೆಂಗೆಣ್ಣಿಗೆ ಗುರಿಯಾಗಿದ್ದರು. ಇದೀಗ ಸನಾತನ ಧರ್ಮದ ಬಗ್ಗೆ ಟ್ವೀಟ್ (Tweet)ಮಾಡಿ, ಉರಿವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಅಂಬೇಡ್ಕರ್ ಮತ್ತು ಪೆರಿಯಾರ್ ಫೋಟೋಗಳನ್ನು ಶೇರ್ ಮಾಡುವುದರ ಜೊತೆಗೆ ಹಿಂದೂಗಳು ತನಾತನಿಸ್ ಅಲ್ಲ, ತನಾತನಿಸ್ ಮಾನವ ವಿರೋಧಿಗಳು ಎಂದು ಬರೆದುಕೊಂಡಿದ್ದಾರೆ. ಸನಾತನಿಗಳನ್ನು ಗೇಲಿ ಮಾಡಲು ತನಾತನಿಸ್ ಎಂಬ ಪದ ಬಳಕೆ ಮಾಡಿದ್ದಾರೆ.

    ಜಸ್ಟ್ ಆಸ್ಕಿಂಗ್ ಹೆಸರಿನಲ್ಲಿ ಸಾಕಷ್ಟು ಟ್ವೀಟ್ ಮಾಡುವ ಪ್ರಕಾಶ್ ರೈ, ಮೊದ ಮೊದಲ ಜಸ್ಟ್ ಆಸ್ಕಿಂಗ್ ಅನ್ನು ಪ್ರಧಾನಿಯನ್ನು ಪ್ರಶ್ನೆ ಕೇಳಲು ಬಳಸುತ್ತಿದ್ದರು. ನಂತರ ಕೇಂದ್ರ ಸರಕಾರವನ್ನು ಟೀಕಿಸುವುದಕ್ಕೆ ಬಳಸಲಾಯಿತು. ನಂತರ ಸಾಕಷ್ಟು ಸಮಸ್ಯೆಗಳನ್ನು ಅವರು ಕೇಳಿದ್ದಾರೆ. ಇತ್ತೀಚೆಗೆ ಬಂದ ಟ್ವೀಟ್ ಗಳು ನಾನಾ ಕಾರಣಗಳಿಂದಾಗಿ ವಿವಾದಕ್ಕೀಡಾಗುತ್ತಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆದಿತ್ಯ ಎಲ್-1 ಯಶಸ್ವಿ ಉಡಾವಣೆ – ಇಸ್ರೋ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ

    ಆದಿತ್ಯ ಎಲ್-1 ಯಶಸ್ವಿ ಉಡಾವಣೆ – ಇಸ್ರೋ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ

    ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ವಿಯಾದ ಬೆನ್ನಲ್ಲೇ ಇಸ್ರೋ (ISRO) ಮತ್ತೊಂದು ಮಹತ್ತರವಾದ ಸಾಧನೆ ಮಾಡಿದ್ದು, ಸೂರ್ಯನ ಅಧ್ಯನಕ್ಕಾಗಿ ಆದಿತ್ಯ ಎಲ್-1 (Aditya L-1) ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

    ಇಸ್ರೋ ಸಂಸ್ಥೆ ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಎಲ್-1 ಮಿಷನ್ ಅನ್ನು ಶನಿವಾರ ಬೆಳಗ್ಗೆ 11.50ಕ್ಕೆ ಶ್ರೀ ಹರಿಕೋಟಾದ ಸತೀಶ್ ಉಡಾವಣೆ ಕೇಂದ್ರದಿಂದ ಉಡಾವಣೆ ಮಾಡಿತು. ಇಸ್ರೋ ವಿಜ್ಞಾನಿಗಳ ಈ ಅಭೂತಪೂರ್ವ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಟ್ವೀಟ್ (Tweet) ಮೂಲಕ ಅಭಿನಂದನೆ ತಿಳಿಸಿದ್ದಾರೆ. ಇದನ್ನೂ ಓದಿ: Aditya L1 ಮಿಷನ್ ಯಶಸ್ವಿ: ಇಸ್ರೋ ಅಧ್ಯಕ್ಷ

    ಟ್ವೀಟ್‌ನಲ್ಲಿ ಏನಿದೆ?
    ಚಂದ್ರಯಾನ-3 ಯಶಸ್ಸಿನ ನಂತರ ಭಾರತ ತನ್ನ ಬಾಹ್ಯಾಕಾಶ ಯಾನವನ್ನು ಮುಂದುವರಿಸಿದೆ. ಭಾರತದ ಮೊದಲ ಸೌರ ಮಿಷನ್, ಆದಿತ್ಯ ಎಲ್-1ನ ಯಶಸ್ವಿ ಉಡಾವಣೆಗಾಗಿ ಇಸ್ರೋ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ

    ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಬರೆದು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿಚಿತ್ರಾತಿ ವಿಚಿತ್ರಗಳ ಉರಿ ಉಂಡೆ ನಮ್ಮ ಸೂರ್ಯ: ಡಾ. ಎಪಿ ಭಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜಕಾರಣದಿಂದ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದೇನೆ ಎನ್ನುವ ಭಾವನೆ ಬೇಡ: ನಿಖಿಲ್

    ರಾಜಕಾರಣದಿಂದ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದೇನೆ ಎನ್ನುವ ಭಾವನೆ ಬೇಡ: ನಿಖಿಲ್

    ಬೆಂಗಳೂರು: ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮುಂದಿನ 5 ವರ್ಷಗಳ ಕಾಲ ರಾಜಕೀಯಕ್ಕೆ (Politics) ಬರುವುದಿಲ್ಲ ಎಂಬ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರ ಹೇಳಿಕೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಸ್ವತಃ ನಿಖಿಲ್ ಕುಮಾರಸ್ವಾಮಿ ಅವರು ಎಕ್ಸ್ (X) ಮೂಲಕ ಸ್ಪಷ್ಟನೆ ನೀಡಿದ್ದಾರೆ.

    ಈಗಾಗಲೇ ಎರಡು ಬಾರಿ ಚುನಾವಣೆಯಲ್ಲಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಉತ್ತಮ ಸಲಹೆಯೊಂದನ್ನು ನೀಡಿದ್ದು, ರಾಜಕೀಯ ಸಹವಾಸ ಬೇಡ. ಸಿನಿಮಾ ರಂಗದಲ್ಲಿ ಮುಂದುವರೆಯಲಿ ಎಂದು ಹೇಳಿದ್ದರು. ಈ ಕುರಿತು ನಿಖಿಲ್ ಕುಮಾರಸ್ವಾಮಿ ಟ್ವೀಟ್ (Tweet) ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರಾಜಕೀಯ ಸಹವಾಸ ಬೇಡ: ಮಗನಿಗೆ ಸಲಹೆ ನೀಡಿದ ಕುಮಾರಸ್ವಾಮಿ

    ಟ್ವೀಟ್‌ನಲ್ಲಿ ಏನಿದೆ?
    ಆರೂವರೆ ಕೋಟಿ ಕನ್ನಡಿಗರು, ದೃಶ್ಯ ಮತ್ತು ಮುದ್ರಣ ಮಾಧ್ಯಮಕ್ಕೆ ನಿನ್ನೆಯ ದಿನ ಚರ್ಚೆಗೆ ಗ್ರಾಸವಾದ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ಲೋಕಸಭೆ, ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ನಾನು ರಾಜಕಾರಣದಿಂದ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದೇನೆ ಎನ್ನುವ ಭಾವನೆ ಯಾರಿಗೂ ಬೇಡ. ಇದನ್ನೂ ಓದಿ: ಸರ್ಕಾರಿ ಭೂಮಿ ಒತ್ತುವರಿ – ಪ್ರಕಾಶ್ ರಾಜ್‌ಗೆ ನೋಟಿಸ್

    ನಾನು ಜವಾಬ್ದಾರಿಯನ್ನು ಅರಿತಿದ್ದೇನೆ. ಚುನಾವಣೆಯ ಸೋಲು ತಾತ್ಕಾಲಿಕ. ಜನರು ನನಗೆ ಸದಾ ಕಾಲ ಪ್ರೀತಿ, ವಿಶ್ವಾಸ, ಗೌರವದಲ್ಲಿ ಎಂದೂ ಕೊರತೆ ಮಾಡಿಲ್ಲ. ಸಮಯ, ಸಂದರ್ಭ, ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಇದನ್ನೂ ಓದಿ: ಇಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

    ಮಾಜಿ ಪ್ರಧಾನಮಂತ್ರಿಗಳ ಮೊಮ್ಮಗ, ಮಾಜಿ ಮುಖ್ಯಮಂತ್ರಿಗಳ ಮಗ ಎನ್ನುವುದು ಒಂದು ಭಾಗವಾದರೆ, ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದನ ಸ್ಥಾನ ಕೊಟ್ಟಿರುವ ಸಮಸ್ತ ಕಲಾಭಿಮಾನಿಗಳಿಗೆ ನಾನು ಎಂದೆಂದಿಗೂ ಚಿರಋಣಿ. ಇದನ್ನೂ ಓದಿ: KSRTC ಮುಡಿಗೆ ಮತ್ತೆ 4 ಪ್ರಶಸ್ತಿಗಳ ಗರಿ

    ನನ್ನ ಮೊದಲ ಚಿತ್ರ ಜಾಗ್ವಾರ್ ಮತ್ತು ನಾನು ನಟಿಸಿರುವ ಎಲ್ಲಾ ಸಿನಿಮಾಗಳಲ್ಲೂ ಬೆನ್ನುತಟ್ಟಿ ಆಶೀರ್ವದಿಸಿ, ಪ್ರೋತ್ಸಾಹಿಸಿ ನನ್ನ ಯಶಸ್ಸಿಗೆ ನೀವೆಲ್ಲರೂ ಕಾರಣರಾಗಿದ್ದೀರಿ. ಅದಕ್ಕೆ ನಾನು ಆಭಾರಿ. ಇನ್ನೂ ಬೆಟ್ಟದಷ್ಟು ಕನಸು ಹೊತ್ತು ಹಲವಾರು ಚಿತ್ರಗಳಲ್ಲಿ ನಟಿಸಿ ನಿಮ್ಮನ್ನು ಮನರಂಜಿಸಬೇಕು ಎನ್ನುವುದು ನನ್ನ ಜೀವನದ ಗುರಿ. ಇದನ್ನೂ ಓದಿ: ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾದ ವೃದ್ಧೆಗೆ ಸಚಿವ ಚೆಲುವರಾಯಸ್ವಾಮಿ ನೆರವು

    ಇಲ್ಲಿಯವರೆಗೂ ನನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದೆಯೂ ನಾನು ನಿಮ್ಮ ನಿರೀಕ್ಷೆಗೂ ಮೀರಿ ಚಿತ್ರಗಳನ್ನು ಮಾಡುವವನಿದ್ದೇನೆ. ಕೊನೆಯದಾಗಿ ಎಲ್ಲಾ ಮಾಧ್ಯಮದ ಮಿತ್ರರಿಗೆ ರಾಜಕಾರಣ ಮತ್ತು ಸಿನಿಮಾದ ವಿಚಾರವಾಗಿ ನನಗೆ ಸಂಬಂಧಿಸಿದ ವಿಷಯಗಳಿದ್ದರೆ ಆ ಪ್ರಶ್ನೆಗಳಿಗೆ ನಾನೇ ಉತ್ತರ ನೀಡಲು ಬಯಸುತ್ತೇನೆ ಎಂದು ಬರೆದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಪತ್ತೆ ಹಚ್ಚಿದ ಚಂದ್ರಯಾನ-3

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]