Tag: ಟ್ವಿಟ್ಟರ್ ವಾರ್

  • ಅಮೆರಿಕದ ಅರಣ್ಯವನ್ನು ಒತ್ತುವರಿ ಮಾಡ್ಕೊಂಡ ಸಿಎಂ ಸಿದ್ದರಾಮಯ್ಯ!

    ಅಮೆರಿಕದ ಅರಣ್ಯವನ್ನು ಒತ್ತುವರಿ ಮಾಡ್ಕೊಂಡ ಸಿಎಂ ಸಿದ್ದರಾಮಯ್ಯ!

    ಬೆಂಗಳೂರು: ಚಾರ್ಜ್ ಶೀಟ್‍ನಲ್ಲಿ ನೇಪಾಳದ ಫೋಟೋ ಬಳಸಿಕೊಂಡ ಬಿಜೆಪಿಯನ್ನು ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಕಾಂಗ್ರೆಸ್ ಈಗ ತನ್ನ ಪ್ರಚಾರ ಫೋಟೋದಲ್ಲಿ ಎಡವಟ್ಟು ಮಾಡಿಕೊಂಡಿದೆ.

    ಕಾಂಗ್ರೆಸ್ ಆರೋಪ ಮಾಡಿದ ಕೆಲವೇ ಗಂಟೆಗಳಲ್ಲಿ ಬಿಜೆಪಿಯು ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಅಮೆರಿಕದ ಚಿತ್ರವನ್ನು ಬಳಸಿರುವ ಫೋಟೋ ಪ್ರಕಟಿಸಿ ತಿರಗೇಟು ನೀಡಿದೆ.

    ಸರ್ಕಾರದ ಅರಣ್ಯ ಇಲಾಖೆಯ ಜಾಹೀರಾತಿಗೆ ಉತ್ತರ ಅಮೆರಿಕದ ಪೆನ್ಸಿಲ್ವೆನಿಯಾದಲ್ಲಿರುವ ರೋಸ್ ಟ್ರೀ ಅರಣ್ಯದ ಫೋಟೋವನ್ನು ಪ್ರಕಟಿಸಿದ್ದಾರೆ. ಇದಕ್ಕೆ ಬಿಜೆಪಿ, ಸಿದ್ದರಾಮಯ್ಯನವರು ಕರ್ನಾಟಕದ ಅರಣ್ಯವನ್ನು ಒತ್ತುವರಿ ಮಾಡಿದ್ದು ಮಾತ್ರವಲ್ಲದೇ ಅಮೆರಿಕದಲ್ಲಿರುವ ಅರಣ್ಯವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬರೆದು ಟ್ವೀಟ್ ಅನ್ನು ಸಿಎಂಗೆ ಟ್ಯಾಗ್ ಮಾಡಿ ಟಾಂಗ್ ಕೊಟ್ಟಿದೆ.

    ಇಷ್ಟೇ ಅಲ್ಲದೇ ತುಮಕೂರಿನ ಪಾವಗಡದಲ್ಲಿರುವ ಸೋಲಾರ್ ಪಾರ್ಕಿನ ಫೋಟೋಗೆ ಸಿದ್ದರಾಮಯ್ಯ ಟರ್ಕಿಯ ಸೋಲಾರ್ ಪಾರ್ಕಿನ ಫೋಟೋ ಬಳಸಿದ್ದಾರೆ. ಸಿದ್ದರಾಮಯ್ಯನವರು ರಾಷ್ಟ್ರೀಯ ನಾಯಕರಲ್ಲ ಅವರು ಈಗ ಅಂತಾರಾಷ್ಟ್ರೀಯ ನಾಯಕರು ಎಂದು ಬರೆದು ಸಿಎಂ ಟ್ಯಾಗ್ ಮಾಡಿ  ಕರ್ನಾಟಕ ಬಿಜೆಪಿ ತನ್ನ ಮೇಲಿನ ಫೋಟೋ ಆರೋಪಕ್ಕೆ ತಿರುಗೇಟು ನೀಡಿದೆ. ಇದನ್ನೂ ಓದಿ: ಬಿಜೆಪಿಯ ಚಾರ್ಜ್ ಶೀಟ್ ನಲ್ಲಿ ಲೋಪ: ವೈರಲ್ ಆಯ್ತು ಎಡವಟ್ಟು