Tag: ಟ್ವಿಟ್ಟರ್ ಖಾತೆ

  • ಟ್ವಿಟ್ಟರ್‌ಗೆ ಸೆಡ್ಡು ಹೊಡೆಯಲು Meta ಮಾಸ್ಟರ್‌ ಪ್ಲ್ಯಾನ್‌

    ಟ್ವಿಟ್ಟರ್‌ಗೆ ಸೆಡ್ಡು ಹೊಡೆಯಲು Meta ಮಾಸ್ಟರ್‌ ಪ್ಲ್ಯಾನ್‌

    ವಾಷಿಂಗ್ಟನ್‌:‌ ಟ್ವಿಟ್ಟರ್‌ನಲ್ಲಿ (Twitter) ದಿನನಿತ್ಯದ ಪೋಸ್ಟ್‌ಗಳನ್ನ ಓದಲು ಮುಖ್ಯಸ್ಥ ಎಲೋನ್‌ ಮಸ್ಕ್‌ ಮಿತಿ ವಿಧಿಸಿದ ಬೆನ್ನಲ್ಲೇ ಟ್ವಿಟ್ಟರ್‌ಗೆ ಪರ್ಯಾಯವಾಗಿ ʻಥ್ರೆಡ್ಸ್‌ʼಮೈಕ್ರೋಬ್ಲಾಗಿಂಗ್‌ ಅಪ್ಲಿಕೇಶನ್‌ (Threads Microblogging App) ಪ್ರಾರಂಭಿಸಲು ಮೆಟಾ (Meta) ಪ್ಲ್ಯಾನ್‌ ಮಾಡಿದೆ.

    ಹೌದು. ಕಳೆದ ವರ್ಷದಿಂದ ಎಲೋನ್‌ ಮಸ್ಕ್‌ (Elon Musk) ಟ್ವಿಟ್ಟರ್‌ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗದುಕೊಂಡ ನಂತರ ಆಗುತ್ತಿರುವ ಸಮಸ್ಯೆಗಳ ಲಾಭ ಪಡೆಯಲು ಮೆಟಾ ಪ್ರಯತ್ನಿಸುತ್ತಿದೆ. ಟ್ವಿಟ್ಟರ್‌ ಬಳಕೆದಾರರು ಪರ್ಯಾಯ ವೇದಿಕೆಗಳನ್ನು ಹುಡುಕಲು ಪ್ರೇರೇಪಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಜಸ್ಟ್‌ 999 ರೂ.ಗೆ ಜಿಯೋ ಭಾರತ್‌ 4ಜಿ ಫೋನ್‌ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?

    ಇದೀಗ ʻಥ್ರೆಡ್ಸ್‌ʼಎಂದು ಕರೆಯಲ್ಪಡುವ ಈ ಅಪ್ಲಿಕೇಶನ್‌ ಟ್ವಿಟ್ಟರ್‌ ನಂತೆಯೇ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಪಠ್ಯ ಆಧಾರಿತ ಪೋಸ್ಟ್‌ಗಳನ್ನ ಓದಬಹುದು, ಟ್ವಿಟ್ಟರ್‌ನಂತೆಯೇ ಲೈಕ್‌, ಕಾಮೆಂಟ್‌ ಹಾಗೂ ಶೇರ್‌ ಕೂಡ ಮಾಡಬಹುದು. ಜೊತೆಗೆ ನೆಚ್ಚಿನ ಬಳಕೆದಾರರನ್ನ ಫಾಲೋ ಮಾಡಬಹುದು. ಥ್ರೆಡ್ಸ್‌ ಮೈಕ್ರೋಬ್ಲಾಗಿಂಗ್‌ ಅಪ್ಲಿಕೇಶನ್‌ ಇದೇ ಗುರುವಾರ (ಜುಲೈ 6) ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಆಪಲ್‌ನ ಆ್ಯಪ್ ಸ್ಟೋರ್‌ಪಟ್ಟಿ ತಿಳಿಸಿದೆ.

    ಈ ಥ್ರೆಡ್ಸ್‌ ಅಪ್ಲಿಕೇಶನ್‌ ನಲ್ಲಿ (Threads App) ಟ್ವಿಟ್ಟರ್‌ನಂತೆಯೇ ಚರ್ಚಿಸಲು ಅವಕಾಶವಿದೆ. ಇಂದಿನ ಕಾಳಜಿ ವಹಿಸುವ ವಿಷಯಗಳಿಂದ ಹಿಡಿದು, ನಾಳೆ ಟ್ರೆಂಡ್‌ ಆಗುವ ಎಲ್ಲಾ ವಿಷಯಗಳನ್ನ ಚರ್ಚಿಸಬಹುದಾಗಿದೆ. ಶೀಘ್ರದಲ್ಲೇ ಈ ಆ್ಯಪ್ ಬಿಡುಗಡೆಯಾಗಲಿದ್ದು, ಪ್ಲೇ ಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ ಎಂದು ಆಪಲ್‌ನ ಆ್ಯಪ್ ಸ್ಟೋರ್‌ ಪಟ್ಟಿ ತಿಳಿಸಿದೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಟ್ವಿಟ್ಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ಒಂದು ದಿನಕ್ಕೆ ಟ್ವಿಟ್ಟರ್‌ನಲ್ಲಿ ಇಂತಿಷ್ಟೇ ಪೋಸ್ಟ್‌ಗಳನ್ನ ಓದಬಹುದು ಎಂಬ ಮಿತಿ ವಿಧಿಸಿ, ನಂತರ ಮತ್ತೆ ಹೆಚ್ಚಿಸಿದ್ದರು.

    ಕಳೆದ ಶನಿವಾರ ವಿಶ್ವದಾದ್ಯಂತ ಕೆಲಕಾಲ ಟ್ವಿಟ್ಟರ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಜನ ಅಸಮಾಧಾನ ಹೊರಹಾಕಿದ್ದರು. ಬಳಿಕ ಮಸ್ಕ್‌ ಬದಲಾವಣೆಯ ಅಸ್ತ್ರ ಹೂಡಿದ್ದರು. ಅನಗತ್ಯ ಡೇಟಾ ಬಳಕೆ ಮಾಡೋದನ್ನ ತಪ್ಪಿಸುವುದು, ಕೆಲ ಪೋಸ್ಟ್‌ಗಳ (Twitter Posts) ಮೂಲಕ ಕೆರಳಿಸುವ ಪ್ರಯತ್ನ ಮಾಡುತ್ತಿರುವುದು ಸೇರಿದಂತೆ ಹಲವು ವಿಷಯಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಟ್ವಿಟ್ಟರ್‌ ಪ್ರತಿದಿನದ ಪೋಸ್ಟ್‌ ಓದಲು ಮಿತಿ ವಿಧಿಸಿತ್ತು. ಇದು ತಾತ್ಕಾಲಿಕ ಕ್ರಮವಾಗಿದೆ. ಮುಂದೆ ಟ್ವಿಟ್ಟರ್‌ ಬಳಕೆದಾರರ ಪ್ರತಿಕ್ರಿಯೆ ನೋಡಿಕೊಂಡು ಬದಲಾವಣೆ ತರುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು.

    ಮೊದಲಿಗೆ ವೆರಿಫೈ ಆದ ಖಾತೆಗಳಿಗೆ (Twitter Verified Accounts) ದಿನಕ್ಕೆ 6,000 ಪೋಸ್ಟ್‌ ಮಾತ್ರ ಓದಲು ಅವಕಾಶವಿತ್ತು. ವೆರಿಫೈ ಆಗದ ಖಾತೆಗಳಿಗೆ ದಿನಕ್ಕೆ 600 ಹಾಗೂ ವೆರಿಫೈ ಆಗದ ಹೊಸ ಖಾತೆಗಳ ಬಳಕೆದಾರರು ದಿನಕ್ಕೆ 300 ಪೋಸ್ಟ್‌ಗಳನ್ನು ಓದಲು ಮಿತಿ ಇರುತ್ತದೆ ಎಂದು ಹೇಳಿದ್ದ ಮಸ್ಕ್‌ ಒಂದು ದಿನದ ನಂತರ ತಮ್ಮ ನಿಲುವನ್ನು ಬದಲಿಸಿದ್ದರು. ಇದನ್ನೂ ಓದಿ: Twitter ನಲ್ಲಿ ಪೋಸ್ಟ್‌ ಓದುವ ಮಿತಿ ಹೆಚ್ಚಳ – ಮಹತ್ವದ ಬದಲಾವಣೆ ಘೋಷಿಸಿದ ಮಸ್ಕ್‌

    ಮತ್ತೊಂದು ಟ್ವೀಟ್‌ ಮಾಡಿ ಓದುವಿಕೆ ಮಿತಿಯಲ್ಲಿ ಕೊಂಚ ಮಾರ್ಪಾಡು ಮಾಡುವುದಾಗಿ ಘೋಷಿಸಿದರು. ವೆರಿಫೈ ಖಾತೆಗಳ ಮಿತಿಯನ್ನು 8,000 ಪೋಸ್ಟ್‌ ಮಾತ್ರ ಓದಲು ಅವಕಾಶವಿತ್ತು. ವೆರಿಫೈ ಆಗದ ಖಾತೆಗಳಿಗೆ ದಿನಕ್ಕೆ 800 ಹಾಗೂ ವೆರಿಫೈ ಆಗದ ಹೊಸ ಖಾತೆಗಳ ಮಿತಿಯನ್ನು 400ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ. ಈಗ 10k, 1k ಮತ್ತು 0.5k ಎಂದು ಮಸ್ಕ್‌ ಮತ್ತೊಂದು ಟ್ವೀಟ್‌ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Twitter ನಲ್ಲಿ ಪೋಸ್ಟ್‌ ಓದುವ ಮಿತಿ ಹೆಚ್ಚಳ – ಮಹತ್ವದ ಬದಲಾವಣೆ ಘೋಷಿಸಿದ ಮಸ್ಕ್‌

    Twitter ನಲ್ಲಿ ಪೋಸ್ಟ್‌ ಓದುವ ಮಿತಿ ಹೆಚ್ಚಳ – ಮಹತ್ವದ ಬದಲಾವಣೆ ಘೋಷಿಸಿದ ಮಸ್ಕ್‌

    ವಾಷಿಂಗ್ಟನ್‌: ಆರಂಭದಿಂದಲೂ ಟ್ವಿಟ್ಟರ್‌ನಲ್ಲಿ (Twitter) ಒಂದಿಲ್ಲೊಂದು ಬದಲಾವಣೆಯನ್ನು ತರುತ್ತಿರುವ ಟ್ವಿಟ್ಟರ್ ಮುಖ್ಯಸ್ಥ ಎಲೋನ್‌ ಮಸ್ಕ್‌ (Elon Musk), ಒಂದು ದಿನಕ್ಕೆ ಟ್ವಿಟ್ಟರ್‌ನಲ್ಲಿ ಇಂತಿಷ್ಟೇ ಪೋಸ್ಟ್‌ಗಳನ್ನ ಓದಬಹುದು ಎಂದು ಮಿತಿ ವಿಧಿಸಿದ್ದರು. ಇದೀಗ ಮತ್ತೆ ಓದುವಿಕೆ ಮಿತಿಯನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ.

    ಶನಿವಾರ ವಿಶ್ವದಾದ್ಯಂತ ಕೆಲಕಾಲ ಟ್ವಿಟ್ಟರ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಜನ ಅಸಮಾಧಾನ ಹೊರಹಾಕಿದ್ದರು. ಬಳಿಕ ಮಸ್ಕ್‌ ಬದಲಾವಣೆಯ ಅಸ್ತ್ರ ಹೂಡಿದ್ದರು. ಇದನ್ನೂ ಓದಿ: ಲಕ್ಷ, ಕೋಟಿ ಆದಾಯವಿದ್ದರೂ ಟ್ಯಾಕ್ಸ್ ಕಟ್ಟದ ಯೂಟ್ಯೂಬರ್ಸ್ – ಕೇರಳದ ಹಲವೆಡೆ ಐಟಿ ದಾಳಿ

    ಅನಗತ್ಯ ಡೇಟಾ ಬಳಕೆ ಮಾಡೋದನ್ನ ತಪ್ಪಿಸುವುದು, ಕೆಲ ಪೋಸ್ಟ್‌ಗಳ (Twitter Posts) ಮೂಲಕ ಕೆರಳಿಸುವ ಯತ್ನ ಮಾಡುತ್ತಿರುವುದು ಸೇರಿದಂತೆ ಹಲವು ವಿಷಯಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಟ್ವಿಟ್ಟರ್‌ ಪ್ರತಿದಿನದ ಪೋಸ್ಟ್‌ ಓದಲು ಮಿತಿ ವಿಧಿಸಿತ್ತು. ಇದು ತಾತ್ಕಾಲಿಕ ಕ್ರಮವಾಗಿದೆ. ಮುಂದೆ ಟ್ವಿಟ್ಟರ್‌ ಬಳಕೆದಾರರ ಪ್ರತಿಕ್ರಿಯೆ ನೋಡಿಕೊಂಡು ಬದಲಾವಣೆ ತರುವ ಸಾಧ್ಯತೆಗಳಿವೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: 3 ಟ್ರಿಲಿಯನ್‌ ಡಾಲರ್‌ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದ ಆಪಲ್‌

    ವೆರಿಫೈ ಆದ ಖಾತೆಗಳಿಗೆ (Twitter Verified Accounts) ದಿನಕ್ಕೆ 6,000 ಪೋಸ್ಟ್‌ ಮಾತ್ರ ಓದಲು ಅವಕಾಶವಿತ್ತು. ವೆರಿಫೈ ಆಗದ ಖಾತೆಗಳಿಗೆ ದಿನಕ್ಕೆ 600 ಹಾಗೂ ವೆರಿಫೈ ಆಗದ ಹೊಸ ಖಾತೆಗಳ ಬಳಕೆದಾರರು ದಿನಕ್ಕೆ 300 ಪೋಸ್ಟ್‌ಗಳನ್ನು ಓದಲು ಮಿತಿ ಇರುತ್ತದೆ ಎಂದು ಶನಿವಾರ ಮಸ್ಕ್‌ ಹೇಳಿದ್ದರು.

    ಈ ಕುರಿತು ಭಾನುವಾರ ಮತ್ತೊಂದು ಟ್ವೀಟ್‌ ಮಾಡಿ ಓದುವಿಕೆ ಮಿತಿಯಲ್ಲಿ ಕೊಂಚ ಮಾರ್ಪಾಡು ಮಾಡುವುದಾಗಿ ಘೋಷಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ದೈನಂದಿನ ಪೋಸ್ಟ್‌ ಓದುವ ಮಿತಿಯನ್ನು ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ವೆರಿಫೈ ಖಾತೆಗಳ ಮಿತಿಯನ್ನು 8,000 ಪೋಸ್ಟ್‌ ಮಾತ್ರ ಓದಲು ಅವಕಾಶವಿತ್ತು. ವೆರಿಫೈ ಆಗದ ಖಾತೆಗಳಿಗೆ ದಿನಕ್ಕೆ 800 ಹಾಗೂ ವೆರಿಫೈ ಆಗದ ಹೊಸ ಖಾತೆಗಳ ಮಿತಿಯನ್ನು 400 ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ. ಈಗ 10k, 1k ಮತ್ತು 0.5k ಎಂದು ಮಸ್ಕ್‌ ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ರಿಟನ್‌ನಲ್ಲಿ ಹಿಂದೂ-ಮುಸ್ಲಿಂ ಉದ್ವಿಗ್ನತೆಗೆ ಭಾರತದ 500 ಟ್ವಿಟ್ಟರ್‌ ಖಾತೆಗಳು ಕಾರಣ!

    ಬ್ರಿಟನ್‌ನಲ್ಲಿ ಹಿಂದೂ-ಮುಸ್ಲಿಂ ಉದ್ವಿಗ್ನತೆಗೆ ಭಾರತದ 500 ಟ್ವಿಟ್ಟರ್‌ ಖಾತೆಗಳು ಕಾರಣ!

    ಬ್ರಿಟನ್: ಯುಕೆಯಲ್ಲಿ ಹಿಂದೂ-ಮುಸ್ಲಿಂ (Hindu-Muslim) ಉದ್ವಿಗ್ನತೆ ಸೃಷ್ಟಿಗೆ ಭಾರತದ 500 ಟ್ವಿಟ್ಟರ್‌ ಖಾತೆಗಳು ಕಾರಣವಾಗಿವೆ ಎಂದು ಸಂಶೋಧನೆಯ ರಿಪೋರ್ಟ್‌ವೊಂದನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್‌ ನ್ಯೂಸ್‌ ವರದಿ ಮಾಡಿದೆ.

    ರಟ್ಜರ್ಸ್ ವಿಶ್ವವಿದ್ಯಾನಿಲಯ ಪ್ರಕಾರ, ಲೀಸೆಸ್ಟರ್‌ನಲ್ಲಿ ಗಲಭೆಗಳ ಸಂದರ್ಭದಲ್ಲಿ 500 ಟ್ವಿಟ್ಟರ್‌ (Twitter) ಖಾತೆಗಳಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮೀಮ್‌ಗಳು ಮತ್ತು ಬೆಂಕಿಯಿಡುವ ಚಿತ್ರಗಳನ್ನು ಹರಿಬಿಡಲಾಗಿತ್ತು ಎಂದು ತಿಳಿಸಿದೆ. ಇದನ್ನೂ ಓದಿ: ಇರಾನ್‍ನಲ್ಲಿ ಹೆಚುತ್ತಿರುವ ಹಿಜಬ್ ವಿರೋಧಿ ಪ್ರತಿಭಟನೆ- ಮೆಟ್ರೋದಲ್ಲಿ ಮಹಿಳೆಯರನ್ನು ಥಳಿಸಿದ ಪೊಲೀಸರು

    ಆಗಸ್ಟ್ 27 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ನಂತರದ ದಿನಗಳಲ್ಲಿ ನೂರಾರು ಜನರು ಬೀದಿಗಿಳಿದರು. ಕೆಲವು ಗಲಭೆಕೋರರು ಕೋಲುಗಳು ಮತ್ತು ಲಾಠಿಗಳನ್ನು ಹಿಡಿದು ಗಾಜಿನ ಬಾಟಲಿಗಳನ್ನು ಎಸೆದರು. ಘರ್ಷಣೆಯ ಸಮಯದಲ್ಲಿ ಮನೆಗಳು, ಕಾರುಗಳು ಮತ್ತು ಧಾರ್ಮಿಕ ಕಲಾಕೃತಿಗಳನ್ನು ಧ್ವಂಸಗೊಳಿಸಲಾಯಿತು. ಇದು ವಾರಗಳವರೆಗೆ ನಡೆಯಿತು. ಗಲಭೆ ಪ್ರಕರಣದಲ್ಲಿ 47 ಮಂದಿಯನ್ನು ಬಂಧಿಸಲಾಗಿತ್ತು ಎಂದು ಲೀಸೆಸ್ಟರ್‌ಶೈರ್ ಪೊಲೀಸರು ತಿಳಿಸಿದ್ದಾರೆ.

    ಮಸೀದಿಗಳಿಗೆ ಬೆಂಕಿ ಹಚ್ಚುತ್ತಿರುವ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿವೆ. ಅಶಾಂತಿ ವಾತಾವರಣ ಸೃಷ್ಟಿಸುವ ಅನೇಕ ಟ್ವಿಟ್ಟರ್‌ ಖಾತೆಗಳು ಭಾರತದಲ್ಲಿ ಹುಟ್ಟಿಕೊಂಡಿವೆ ಎಂದು ಸಂಶೋಧಕರು ಹೇಳಿದ್ದಾರೆ. ಇದನ್ನೂ ಓದಿ: ಪೋಲೆಂಡ್‌ಗೆ ಕ್ಷಿಪಣಿ ಹಾರಿಸಿ ಉಕ್ರೇನ್ ಎಡವಟ್ಟು

    ಗೂಗಲ್‌ (Google), ಯೂಟ್ಯೂಬ್‌ (YouTube), ಮೆಟಾ ಪ್ಲಾಟ್‌ಫಾರ್ಮ್‌, ಇನ್‌ಸ್ಟಾಗ್ರಾಂ (Instagram), ಟ್ವಿಟ್ಟರ್‌, ಟಿಕ್‌ಟಾಕ್‌ನಿಂದ ಸಂಗ್ರಹಿಸಿದ ಡೇಟಾವನ್ನು ಬಳಸಿಕೊಂಡು ಎನ್‌ಸಿಆರ್‌ಐ ವರದಿಯನ್ನು ಪ್ರಕಟಿಸಿದೆ. ವಿದೇಶಿ ಪ್ರಭಾವಿಗಳು ಸ್ಥಳೀಯ ಮಟ್ಟದಲ್ಲಿ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನದ ರಾಯಭಾರಿ ಕಚೇರಿಗಳ ಟ್ವಿಟ್ಟರ್ ಖಾತೆಗಳನ್ನು ನಿಷೇಧಿಸಿದ ಭಾರತ

    ನವದೆಹಲಿ: ನಕಲಿ ಸುದ್ದಿಗಳನ್ನು ಹರಡುವ ಆರೋಪದ ಮೇಲೆ ಪಾಕಿಸ್ತಾನ ರಾಯಭಾರಿ ಕಚೇರಿಗಳ ಹಲವಾರು ಅಧಿಕೃತ ಟ್ವಿಟ್ಟರ್ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಿದೆ.

    ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದ ವಿಶ್ವಸಂಸ್ಥೆ, ಟರ್ಕಿ, ಇರಾನ್ ಮತ್ತು ಈಜಿಪ್ಟ್‌ನಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟ್ಟರ್ ಖಾತೆಗಳನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಇದರ ಜೊತೆಗೆ ಪಾಕಿಸ್ತಾನದ ರಾಷ್ಟ್ರೀಯ ಸಾರ್ವಜನಿಕ ಪ್ರಸಾರಕ ರೇಡಿಯೋ ಖಾತೆಯನ್ನು ತಡೆಹಿಡಿಯಲಾಗಿದೆ.

    ಈ ಅಧಿಕೃತ ಖಾತೆಗಳನ್ನು ನಿಷೇಧಿಸುವ ಮೂಲಕ ಭಾರತದ ಟ್ವಿಟ್ಟರ್‌ಗೆ ಮಾಹಿತಿ ನೀಡುವುದನ್ನು ನಿರ್ಬಂಧಿಸಿದೆ. ಇದನ್ನು ತಕ್ಷಣ ಸರಿಪಡಿಸಬೇಕು ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒತ್ತಾಯಿಸಿದೆ.

    ಏಪ್ರಿಲ್‍ನಲ್ಲಿ ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 16 ಯೂಟ್ಯೂಬ್ ಚಾನೆಲ್‍ಗಳನ್ನು ನಿಬರ್ಂಧಿಸಿತ್ತು. ಇದರಲ್ಲಿ 6 ಪಾಕಿಸ್ತಾನದ ಯೂಟ್ಯೂಬ್ ಚಾನೆಲ್‍ಗಳಿದ್ದವು. ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಿ ಸಂಬಂಧಗಳು, ದೇಶದಲ್ಲಿ ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳನ್ನು ಹರಡಲು ಈ ಚಾನೆಲ್‍ಗಳನ್ನು ಬಳಸಲಾಗಿದೆ. ಇದರಿಂದಾಗಿ ನಿಷೇಧಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿತ್ತು. ಇದನ್ನೂ ಓದಿ: ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಮಂಡ್ಯ ನನ್ನ ಬಿಡಲ್ಲ: ಸುಮಲತಾ

    ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ, ಉಕ್ರೇನ್‍ನಲ್ಲಿನ ಪರಿಸ್ಥಿತಿ, ಭಾರತದ ವಿದೇಶಿ ಸಂಬಂಧಗಳಂತಹ ವಿವಿಧ ವಿಷಯಗಳ ಕುರಿತು ಭಾರತದ ಬಗ್ಗೆ ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡಲು ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್‍ಗಳನ್ನು ಸಂಘಟಿತ ರೀತಿಯಲ್ಲಿ ಬಳಸಲಾಗಿತ್ತು. ಈ ಚಾನೆಲ್‍ಗಳ ವಿಷಯವು ಸಂಪೂರ್ಣವಾಗಿ ಸುಳ್ಳು ಮತ್ತು ರಾಷ್ಟ್ರೀಯ ಭದ್ರತೆ, ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ ಹಾಗೂ ವಿದೇಶಗಳೊಂದಿಗಿನ ಭಾರತದ ಸ್ನೇಹ-ಸಂಬಂಧಗಳಿಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಇದನ್ನೂ ಓದಿ: 46 ಅಕ್ರಮ ವಲಸಿಗರ ಶವ ಟ್ರ್ಯಾಕ್ಟರ್‌ನಲ್ಲಿ ಪತ್ತೆ

    Live Tv

  • ಪ್ರಧಾನಿ ಮೋದಿ ವೆಬ್‍ಸೈಟ್ ಅಕೌಂಟ್ ಹ್ಯಾಕ್

    ಪ್ರಧಾನಿ ಮೋದಿ ವೆಬ್‍ಸೈಟ್ ಅಕೌಂಟ್ ಹ್ಯಾಕ್

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರ್ಸನಲ್ ವೆಬ್‍ಸೈಟ್ ನ (@narendramodi_in) ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಲಾಗಿದೆ. ಬುಧವಾರ ರಾತ್ರಿ ಹ್ಯಾಕರ್ಸ್ ಈ ಟ್ವಿಟ್ಟರ್ ಖಾತೆಯನ್ನ ಮಾಡಿದ್ದಾರೆ. ಬರಾಕ್ ಒಬಮಾ, ಎಲೆನ್ ಮಸ್ಕ್ ಅವರ ಖಾತೆಗಳ ರೀತಿಯಲ್ಲಿ ಮೋದಿಯವರ ವೆಬ್‍ಸೈಟ್ ಹ್ಯಾಕ್ ಮಾಡಲಾಗಿದೆ.

     narendramodi.in ಟ್ವಿಟ್ಟರ್ ಅಕೌಂಟ್‍ನಲ್ಲಿ ವೆಬ್‍ಸೈಟ್ ಗೆ ಸಂಬಂಧಿಸಿದ ಮಾಹಿತಿ ಮತ್ತು ನಮೋ ಆ್ಯಪ್ ಗೆ ಕುರಿತ ಅಪಡೇಟ್ ನೀಡಲಾಗುತ್ತಿತ್ತು. ಅಕೌಂಟ್ ಹ್ಯಾಕ್ ಕುರಿತು ಪ್ರತಿಕ್ರಿಯಿಸಿರುವ ಟ್ವಟ್ಟರ್, ನರೇಂದ್ರ ಮೋದಿಯವರ ವೆಬ್‍ಸೈಟ್ ಖಾತೆಯಲ್ಲಿ ಉಂಟಾದ ಸಮಸ್ಯೆ ಗಮನಕ್ಕೆ ಬಂದಿದೆ. ಸಮಸ್ಯೆ ಬಗೆಹರಿಸುವ ಕಾರ್ಯ ನಡೆಯುತ್ತಿದೆ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಹೇಳಿದೆ.

    ಬುಧವಾರ ರಾತ್ರಿ ಸುಮಾರು ಮೂರು ಗಂಟೆಗೆ ನರೇಂದ್ರ ಮೋದಿಯವರ ಖಾತೆಯಿಂದ ಒಂದು ಟ್ವೀಟ್ ಮಾಡಲಾಗಿತ್ತು. ಈ ಖಾತೆಯನ್ನ ಜಾನ್ ವಿಕ್ (hckindia@tutanota.com) ಮೂಲಕ ಹ್ಯಾಕ್ ಮಾಡಲಾಗಿದೆ. ನಾವು ಪೇಟಿಎಂ ಮಾಲ್ ಹ್ಯಾಕ್ ಮಾಡಿಲ್ಲ. ಮಗದೊಂದು ಟ್ವೀಟ್ ನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ನ್ಯಾಶನಲ್ ರಿಲೀಫ್ ಫಂಡ್‍ಗೆ ಹಣ ಹಾಕುವಂತೆ ಹೇಳಲಾಗಿದೆ. ಆದ್ರೆ ಈ ಟ್ವೀಟ್ ಕೆಲವೇ ಕ್ಷಣಗಳಲ್ಲಿ ಡಿಲೀಟ್ ಮಾಡಲಾಗಿದೆ. ಹ್ಯಾಕ್ ಬಳಿಕ ಅರ್ಧಗಂಟೆಯಲ್ಲಿ ಸಮಸ್ಯೆ ಪರಿಹರಿಸಲಾಗಿದೆ.