Tag: ಟ್ರ್ಯಾಕ್

  • ಮೆಟ್ರೋ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ದುರಂತ, ಕ್ಷಣಾರ್ಧದಲ್ಲಿ ಪಾರಾದ ಯುವಕ – ವಿಡಿಯೋ ವೈರಲ್

    ಮೆಟ್ರೋ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ದುರಂತ, ಕ್ಷಣಾರ್ಧದಲ್ಲಿ ಪಾರಾದ ಯುವಕ – ವಿಡಿಯೋ ವೈರಲ್

    ನವದೆಹಲಿ: ತುಂಬಾ ಜನರು ಅವಸರದಲ್ಲಿ ರೈಲ್ವೇ ಟ್ರ್ಯಾಕ್ ದಾಟಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ 21 ವರ್ಷದ ಯುವಕನೊಬ್ಬ ದೆಹಲಿಯ ಮೆಟ್ರೋ ಟ್ರ್ಯಾಕ್ ದಾಟುತ್ತಿದ್ದಾಗ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದಲ್ಲಿ ನಡೆದಿದೆ.

    ದೆಹಲಿಯ ಶಾಸ್ತ್ರೀ ನಗರದಲ್ಲಿರುವ ಮೆಟ್ರೋ ಸ್ಟೇಷನ್ ನಲ್ಲಿ ಈ ಘಟನೆ ಸಂಭವಿಸಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಳಿ ದಾಟಿದ ಯುವಕ ಮಯೂರ್ ಪಟೇಲ್ ಎಂದು ತಿಳಿದು ಬಂದಿದೆ. ಪಟೇಲ್ ಮೆಟ್ರೋ ನಿಲ್ದಾಣದಲ್ಲಿ ಒಂದು ಪ್ಲಾಟ್ ಫಾರಂನಿಂದ ಇನ್ನೊಂದು ಪ್ಲಾಟ್ ಫಾರಂಗೆ ಹೋಗಲು ಬ್ರಿಡ್ಜ್ ಬದಲು ಮೆಟ್ರೋ ಟ್ರ್ಯಾಕ್ ಹಾದು ಹೋಗಲು ಮುಂದಾಗಿದ್ದಾನೆ.

    ಇದೇ ವೇಳೆ ಹೊರಡಲು ಸಿದ್ಧವಾಗಿ ಟ್ರ್ಯಾಕ್ ಮೇಲೆ ರೈಲು ನಿಂತಿದೆ. ಆದರೆ ಪಟೇಲ್ ನಿಲುಗಡೆ ಮಾಡಿದ ರೈಲಿನ ಬಗ್ಗೆ ಹೆಚ್ಚು ಗಮನ ಕೊಡದೇ ಒಂದು ಟ್ರ್ಯಾಕ್ ದಾಟಿ ಇನ್ನೊಂದು ಟ್ರ್ಯಾಕ್ ದಾಟಿ ಮೇಲೆ ಹತ್ತಲು ಯತ್ನಿಸಿದ್ದಾನೆ. ಆಗ ನಿಧಾನವಾಗಿ ರೈಲು ಚಲಿಸಿದೆ. ಆದರೆ ಪಟೇಲ್ ಕೈ ಜಾರಿ ಆಕಸ್ಮಿಕವಾಗಿ ಕೆಳಗೆ ಜಾರಿದ್ದಾನೆ. ಸದ್ಯ ಈ ವೇಳೆ ಅದೃಷ್ಟವಶಾತ್ ರೈಲು ನಿಂತಿದೆ. ತಕ್ಷಣ ಆತ ಮುಂದೆ ನಡೆದುಕೊಂಡು ಹೋಗಿ ಮೇಲೆ ಹತ್ತಿದ್ದಾನೆ.

    ಪಟೇಲ್ ಮಾಡಿದ್ದು ಅಪರಾಧವಾಗಿದ್ದು, ಆತನನ್ನು ಬಂಧಿಸಿ ದಂಡ ವಿಧಿಸಲಾಗಿದೆ. ತದನಂತರ ವಿಚಾರಣೆ ನಡೆಸಿದಾಗ ಒಂದು ಪ್ಲಾಟ್ ಫಾರಂನಿಂದ ಇನ್ನೊಂದು ಪ್ಲಾಟ್ ಫಾರಂಗೆ ಹೋಗುವ ಮಾರ್ಗ ತಿಳಿದಿಲ್ಲದ ಕಾರಣ ಈ ರೀತಿಯಾಗಿ ಮಾಡಿರುವುದಾಗಿ ತಿಳಿಸಿದ್ದಾನೆ.

    ಅನುಮತಿ ಇಲ್ಲದಿದ್ದರೂ ಟ್ರ್ಯಾಕ್ ಹಾದು ಹೋಗಲು ಯತ್ನಿಸಿದರೆ ಅದು ಕಾನೂನು ಬಾಹಿರವಾಗಿರುತ್ತದೆ. ಅಷ್ಟೇ ಅಲ್ಲದೇ ಅವರಿಗೆ ಆರು ತಿಂಗಳುಗಳವರೆಗೆ ಜೈಲು ಶಿಕ್ಷೆ ಅಥವಾ 500 ರೂಪಾಯಿ ದಂಡ ವಿಧಿಸಬಹುದಾಗಿದೆ ಎಂದು ದೆಹಲಿ ಮೆಟ್ರೋ ಹೇಳಿದೆ.

  • ಟ್ರ್ಯಾಕ್ ದಾಟುವಾಗ ರೈಲು ಡಿಕ್ಕಿ- 6 ಯುವಕರ ಸಾವು

    ಟ್ರ್ಯಾಕ್ ದಾಟುವಾಗ ರೈಲು ಡಿಕ್ಕಿ- 6 ಯುವಕರ ಸಾವು

    ಲಕ್ನೋ: ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಹಳಿ ದಾಟುತ್ತಿದ್ದ 7 ಜನರಲ್ಲಿ 6 ಯುವಕರು ಸಾವನ್ನಪ್ಪಿರುವ ಘಟನೆ ಭಾನುವಾರದಂದು ಉತ್ತರಪ್ರದೇಶದ ಹಾಪುರ್‍ನಲ್ಲಿ ನಡೆದಿದೆ.

    ಮೃತರನ್ನು ಸಲೀಮ್, ಆರಿಫ್, ಅಜಯ್, ಅಮೀರ್, ಆಕಾಶ್ ಹಾಗೂ ರಾಹುಲ್ ಎಂದು ಗುರುತಿಸಲಾಗಿದೆ. ಯುವಕರು 14 ರಿಂದ 16 ವರ್ಷ ವಯಸ್ಸಿನವರಾಗಿದ್ದು, ರೈಲ್ವೇ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಮೃತರೆಲ್ಲರೂ ದಿನಗೂಲಿ ಕಾರ್ಮಿಕರಾಗಿದ್ದು, ಹೈದರಾಬಾದ್‍ಗೆ ಕೆಲಸಕ್ಕೆ ಹೋಗಲು ಘಜಿಯಾಬಾದ್‍ನಲ್ಲಿ ರೈಲು ಏರಬೇಕಿತ್ತು. ಆದ್ರೆ ರೈಲು ಮಿಸ್ ಆದ ಕಾರಣ ಮಧ್ಯರಾತ್ರಿಯ ನಂತರ ಪಿಲಾಕುವಾಗೆ ಹಿಂದಿರುಗಿದ್ದರು.

    ರೈಲು ಡಿಕ್ಕಿ ಹೊಡೆದ ಸಂದರ್ಭದಲ್ಲಿ ಯುವಕರು ಹಳಿ ದಾಟಲು ಯತ್ನಿಸಿದ್ದರು. ಆದ್ರೆ ವೇಗವಾಗಿ ಬಂದ ರೈಲು ಡಿಕ್ಕಿಯಾದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮತ್ತಿಬ್ಬರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿತ್ತು. ಅವರಲ್ಲಿ ಒಬ್ಬ ಯುವಕ ತೀವ್ರ ಗಾಯಗಳಿಂದ ಮೃತಪಟ್ಟಿದ್ದಾನೆ. ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಘಟನೆ ಬಳಿಕ ಸ್ಥಳೀಯರು ಟ್ರ್ಯಾಕ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರದೇಶದಲ್ಲಿ ರಾತ್ರಿ ಹೊತ್ತು ಕಡಿಮೆ ಬೆಳಕು ಇರುತ್ತದೆ ಹಾಗೂ ರೈಲು ಬರುತ್ತಿರುವ ಬಗ್ಗೆ ಯಾವುದೇ ಘೋಷಣೆ ಮಾಡಲ್ಲ ಎಂದು ಹೇಳಿದ್ದಾರೆ.

  • ರೈಲಿನ ಕೆಳಗೆ ನುಗ್ಗಿ ಟ್ರ್ಯಾಕ್ ದಾಟ್ತೀರಾ?- ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ರೈಲಿನ ಕೆಳಗೆ ನುಗ್ಗಿ ಟ್ರ್ಯಾಕ್ ದಾಟ್ತೀರಾ?- ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ಲಕ್ನೋ: ರೈಲು ನಿಲ್ದಾಣಗಳಲ್ಲಿ ಒಂದು ಪ್ಲಾಟ್‍ಫಾರ್ಮ್‍ನಿಂದ ಮತ್ತೊಂದಕ್ಕೆ ಹೋಗಲು ಬ್ರಿಡ್ಜ್ ಇರುತ್ತೆ. ಆದರೂ ಕೆಲವರು ಅವಸರದಲ್ಲಿ ಟ್ರ್ಯಾಕ್ ಮೇಲೆಯೇ ನಡೆದುಕೊಂಡು ಹೋಗಿ ದಾಟಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಟ್ರ್ಯಾಕ್ ಮೇಲೆ ರೈಲು ನಿಂತಿದ್ದರೆ ಅದರ ಕೆಳಗೆ ನುಸುಳಿ ಮತ್ತೊಂದು ಬದಿಗೆ ಹೋಗೋದನ್ನ ನೋಡಿರ್ತೀವಿ. ಹಾಗೊಂದು ವೇಳೆ ನುಗ್ಗುವಾಗ ರೈಲು ಚಲಿಸಲು ಆರಂಭಿಸಿದ್ರೆ ಹೇಗಾಗಬೇಡ? ಇಂತಹದ್ದೇ ಒಂದು ಘಟನೆ ನಡೆದಿದ್ದು, ಅದೃಷ್ಟವಶಾತ್ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯ ಬಂಕಾಟಾ ರೈಲ್ವೆ ನಿಲ್ದಾಣದಲ್ಲಿ ನವೆಂಬರ್ 15ರಂದು ಈ ಘಟನೆ ನಡೆದಿದೆ. ಟ್ರ್ಯಾಕ್ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ರೈಲು ಹಾದು ಹೋದರೂ ಅವರಿಗೆ ಸಣ್ಣ ಪುಟ್ಟ ಗಾಯಗಳೂ ಕೂಡ ಆಗಿಲ್ಲ.

    ನಡೆದಿದ್ದೇನು?: ವ್ಯಕ್ತಿಯೊಬ್ಬರು ರೈಲು ಹಿಡಿಯಲು ಮತ್ತೊಂದು ಪ್ಲಾಟ್‍ಫಾರ್ಮ್‍ಗೆ ಹೋಗಬೇಕಿತ್ತು. ಅವರು ಫುಟ್ ಓವರ್ ಬ್ರಿಡ್ಜ್ ಬದಲು ಟ್ರ್ಯಾಕ್ ಮೇಲೆ ನಿಂತಿದ್ದ ಗೂಡ್ಸ್ ರೈಲಿನ ಕೆಳಗೆ ನುಸುಳಿದ್ದರು. ಆ ವ್ಯಕ್ತಿ ರೈಲಿನ ಕೆಳಗೆ ನುಗ್ಗುತ್ತಿದ್ದಂತೆ ರೈಲು ಚಲಿಸಲು ಆರಂಭಿಸಿತ್ತು.

    ಮುಂದಾಗೋ ಪರಿಣಾಮದ ಅರಿವಾಗಿ ಆ ವ್ಯಕ್ತಿ ಟ್ರ್ಯಾಕ್ ಮೇಲೆಯೇ ಮಲಗಿಕೊಂಡ್ರು. ರೈಲು ತನ್ನ ಪಾಡಿಗೆ ಟ್ರ್ಯಾಕ್ ಮೇಲೆ ಹಾದು ಹೋಯ್ತು. ರೈಲು ನಿಲ್ದಾಣದಿಂದ ಹೊರಟ ನಂತರ ಆ ವ್ಯಕ್ತಿ, ಬದುಕಿದೆ ಬಡ ಜೀವ ಅಂತ ನಿಟ್ಟುಸಿರು ಬಿಟ್ರು. ಈ ಎಲ್ಲಾ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಒಂದು ವೇಳೆ ಅವರು ಗಾಬರಿಯಿಂದ ಅತ್ತಿತ್ತ ಓಡಾಡಿದ್ರೆ ಅಥವಾ ತಲೆಯನ್ನ ಮೇಲೆ ಎತ್ತಿದ್ರೆ ಅನಾಹುತಾವಾಗುತಿತ್ತು. ಆದ್ರೆ ಟ್ರ್ಯಾಕ್ ಮೇಲೆ ಉದ್ದಕ್ಕೆ ಮಲಗಿಕೊಂಡಿದ್ರಿಂದ ಯಾವುದೇ ಸಣ್ಣ ಪುಟ್ಟ ಗಾಯಗಳೂ ಕೂಡ ಆಗದೆ ಬಚಾವಾದ್ರು.

    ಆದ್ರೆ ಎಲ್ಲರಿಗೂ ಇದೇ ರೀತಿ ಆಗುತ್ತೆ ಅಂತ ಹೇಳೋಕಾಗಲ್ಲ. ಆದ್ದರಿಂದ ಟ್ರ್ಯಾಕ್ ದಾಟೋ ಬದಲು ಬ್ರಿಡ್ಜ್ ಬಳಸೋದು ಸೂಕ್ತ.

  • ಟ್ರ್ಯಾಕ್ ದಾಟಲು ವೃದ್ಧ ಗೂಡ್ಸ್ ರೈಲಿನ ಕೆಳಗೆ ನುಗ್ಗಿದ ತಕ್ಷಣ ಚಲಿಸಲು ಶುರುವಾಯ್ತು ರೈಲು – ಮುಂದೇನಾಯ್ತು? ವಿಡಿಯೋ ನೋಡಿ

    ಟ್ರ್ಯಾಕ್ ದಾಟಲು ವೃದ್ಧ ಗೂಡ್ಸ್ ರೈಲಿನ ಕೆಳಗೆ ನುಗ್ಗಿದ ತಕ್ಷಣ ಚಲಿಸಲು ಶುರುವಾಯ್ತು ರೈಲು – ಮುಂದೇನಾಯ್ತು? ವಿಡಿಯೋ ನೋಡಿ

    ಭೋಪಾಲ್: ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದು, ರೈಲು ಡಿಕ್ಕಿಯಾಗಿ ಅಥವಾ ಇನ್ನೂ ಹಲವಾರು ಸಂದರ್ಭಗಳಲ್ಲಿ ವ್ಯಕ್ತಿ ಪವಾಡಸದೃಶವಾಗಿ ಬದುಕುಳಿರುವ ಬಗ್ಗೆ ಅನೇಕ ಬಾರಿ ಕೇಳಿದ್ದಿವಿ. ಹೀಗೆ ಮಧ್ಯಪ್ರದೇಶದಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ.

    ಭಾನುವಾರದಂದು ಇಲ್ಲಿನ ಸತ್ನಾ ರೈಲ್ವೆ ನಿಲ್ದಾಣದಲ್ಲಿ ವೃದ್ಧರೊಬ್ಬರ ಮೇಲೆ ಗೂಡ್ಸ್ ರೈಲು ಹರಿದರೂ ಅವರಿಗೆ ಸಣ್ಣ ಪುಟ್ಟ ಗಾಯಗಳೂ ಆಗದೆ ಬದುಕುಳಿದಿದ್ದಾರೆ. ಜವಹಾರ್ ನಗರದ ನಿವಾಸಿಯಾದ ವೃದ್ಧ ರಾಧೆಶ್ಯಾಮ್ ಎರಡು ಪ್ಲಾಟ್‍ಫಾರ್ಮ್‍ಗಳ ನಡುವೆ ಇದ್ದ ಟ್ರ್ಯಾಕ್‍ಗಳನ್ನ ದಾಟುತ್ತಿದ್ದರು. ಟ್ರ್ಯಾಕ್‍ನಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಕೆಳಗೆ ನುಗ್ಗಿ ಮತ್ತೊಂದು ಬದಿಗೆ ಹೋಗಲು ಪ್ರಯತ್ನಿಸುತ್ತಿದ್ದರು. ಈ ವೇಳೆ ರೈಲು ಚಲಿಸಲು ಶುರುವಾಗಿದೆ. ತಕ್ಷಣ ಆ ವೃದ್ಧ ಟ್ರ್ಯಾಕ್ ಮೇಲೆ ಉದ್ದಕ್ಕೆ ಮಲಗಿದ್ದಾರೆ. ರೈಲಿನ ಎಲ್ಲಾ ಬೋಗಿಗಳು ಹಾದು ಹೋಗಲು ಸುಮಾರು 3 ನಿಮಿಷ ಹಿಡಿದಿದೆ. ಅಲ್ಲಿಯತನಕ ವೃದ್ಧ ಟ್ರ್ಯಾಕ್ ಮೇಲೆಯೇ ಮಲಗಿದ್ದಾರೆ. ಒಂದು ವೇಳೆ ಅವರು ಗಾಬರಿಯಿಂದ ಅಲುಗಾಡಿದ್ದರೆ ಪ್ರಾಣವೇ ಹೋಗುವ ಸಂಭವವಿತ್ತು.

    ಈ ಘಟನೆಯನ್ನ ಪ್ರತ್ಯಕ್ಷವಾಗಿ ಕಂಡ ಕೆಲವರು ಇದನ್ನ ಮೊಬೈಲ್‍ನಲ್ಲಿ ಸರೆಹಿಡಿದಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ. ರೈಲು ಮುಂದಕ್ಕೆ ಹೋದ ನಂತರ ವ್ಯಕ್ತಿಯೊಬ್ಬರು ಟ್ರ್ಯಾಕ್ ಬಳಿ ಹೋಗಿ ವೃದ್ಧರನ್ನು ಮೇಲೆತ್ತಿ ಕೈ ಹಿಡಿದುಕೊಂಡು ಅಲ್ಲಿಂದ ಕರೆದುಕೊಂಡು ಬಂದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ವೃದ್ಧರಿಗೆ ಯಾವುದೇ ಗಾಯಗಳಾಗಿಲ್ಲ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವೃದ್ಧ ರಾಧೆಶ್ಯಾಮ್, ದೇವರ ದಯದಿಂದ ನಾನು ಬದುಕುಳಿದೆ ಎಂದಿದ್ದಾರೆ.