Tag: ಟ್ರೈನ್

  • ಉಕ್ರೇನ್‍ನಲ್ಲಿ ಹಸಿದ ವಿದ್ಯಾರ್ಥಿಗಳಿಗೆ ಆಹಾರ ನೀಡಿದ ಸಿಖ್ ವ್ಯಕ್ತಿ – ಹೃದಯಸ್ಪರ್ಶಿ ವೀಡಿಯೋ ವೈರಲ್

    ಉಕ್ರೇನ್‍ನಲ್ಲಿ ಹಸಿದ ವಿದ್ಯಾರ್ಥಿಗಳಿಗೆ ಆಹಾರ ನೀಡಿದ ಸಿಖ್ ವ್ಯಕ್ತಿ – ಹೃದಯಸ್ಪರ್ಶಿ ವೀಡಿಯೋ ವೈರಲ್

    ಕೀವ್: ರಷ್ಯಾ ಆಕ್ರಮಣದಿಂದ ಉಕ್ರೇನ್ ತತ್ತರಿಸಿ ಹೋಗಿದೆ. ಈ ಮಧ್ಯೆ ಉಕ್ರೇನ್‍ನಲ್ಲಿ ಸಿಲುಕಿರುವ ಅನೇಕ ವಿದ್ಯಾರ್ಥಿಗಳಿ ಸಿಖ್ ಧರ್ಮದ ವ್ಯಕ್ತಿಯೊಬ್ಬ ರೈಲಿನಲ್ಲಿ ಆಹಾರ ನೀಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಉಕ್ರೇನ್‍ನ ಶಿಕ್ಷಣ ಸಚಿವಾಲಯದ ಪ್ರಕಾರ ದೇಶದಲ್ಲಿ ಸುಮಾರು 80,000 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೊರಾಕೊ, ಅಜೆರ್ಬೈಜಾನ್, ತುರ್ಕಮೆನಿಸ್ತಾನ್ ಮತ್ತು ನೈಜೀರಿಯಾ ಅದರಲ್ಲಿಯೂ ಹೆಚ್ಚಾಗಿ ಭಾರತೀಯರು ಉಕ್ರೇನ್‍ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಸದ್ಯ ರಷ್ಯಾದ ಆಕ್ರಮಣದಿಂದ ಉಕ್ರೇನ್‍ನಲ್ಲಿ ಕಠೋರ ಪರಿಸ್ಥಿತಿಯಲ್ಲಿದ್ದು, ಅನೇಕವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಮತ್ತು ಅವರ ಸುರಕ್ಷತೆಯ ಬಗ್ಗೆ ಭಯಪಡುವಂತೆ ಆಗಿದೆ. ಇದನ್ನೂ ಓದಿ: ಅಲಿಯಾಗೆ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು

    ಕಳೆದ ಎರಡು ದಿನಗಳಿಂದ ವಿದ್ಯಾರ್ಥಿಗಳು ಅವರ ಕುಟುಂಬಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಉಕ್ರೇನ್‍ನಲ್ಲಿ ತಾವು ಇರುವ ಲೋಕೆಶನ್‍ಗಳನ್ನು ಶೇರ್ ಮಾಡಿದ್ದಾರೆ. ತಮ್ಮನ್ನು ಆದಷ್ಟು ಬೇಗ ತಮ್ಮ ದೇಶಗಳಿಗೆ ಸ್ಥಳಾಂತರಗೊಳಿಸುವಂತೆ ಆಯಾ ರಾಷ್ಟ್ರೀಯ ಸರ್ಕಾರಗಳನ್ನು ವಿನಂತಿಸಿಕೊಳ್ಳುತ್ತಿದ್ದಾರೆ.

    ಈ ನಡುವೆ ಉಕ್ರೇನ್‍ನ ಪೋಲೆಂಡ್‍ನ ಗಡಿಗೆ ಪ್ರಯಾಣಿಸುವ ವೇಳೆ ರೈಲಿನಲ್ಲಿ ಹಸಿದ ವಿದ್ಯಾರ್ಥಿಗಳಿಗೆ ಆಹಾರವನ್ನು ನೀಡುತ್ತಿರುವ ಹೃದಯ ಸ್ಪರ್ಶಿ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಟ್ವಿಟರ್‍ನಲ್ಲಿ ರವೀಂದರ್ ಸಿಂಗ್ (ಖಾಲ್ಸಾ ಎಐಡಿ ಸ್ಥಾಪಕ-ಸಿಇಒ) ಹಂಚಿಕೊಂಡಿದ್ದು, ಚಲಿಸುವ ರೈಲಿನಲ್ಲಿ ವಿದ್ಯಾರ್ಥಿಗಳಿಗೆ ಆಹಾರ ವಿತರಿಸುತ್ತಿರುವುದನ್ನು ಮತ್ತು ತಿನ್ನುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ:  ಸೋದರಸಂಬಂಧಿ ಮದುವೆಯಲ್ಲಿ ಯಶ್ ಫ್ಯಾಮಿಲಿ ಫುಲ್ ಮಿಂಚಿಂಗ್!

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರಿಂದ ಹಲವಾರು ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಒಟ್ಟಾರೆ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಜನರ ಜಾತಿ, ಧರ್ಮ ಮತ್ತು ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೇ ಸಿಖ್ ಧರ್ಮದ ವ್ಯಕ್ತಿ ಆಹಾರವನ್ನು ಹಂಚಿರುವುದು ಮಾನವೀಯತೆಯನ್ನು ಎತ್ತಿ ತೋರಿಸುವಂತಿದೆ ಎಂದರೆ ತಪ್ಪಾಗಲಾರದು.

  • ಮೊದಲ ಬಾರಿ ಟ್ರೈನ್ ಏರಿ ಬಂದು ಕನ್ನಡದಲ್ಲಿ ಇತಿಹಾಸ ನಿರ್ಮಿಸಿದ ಶ್ರೀಮನ್ನಾರಾಯಣ

    ಮೊದಲ ಬಾರಿ ಟ್ರೈನ್ ಏರಿ ಬಂದು ಕನ್ನಡದಲ್ಲಿ ಇತಿಹಾಸ ನಿರ್ಮಿಸಿದ ಶ್ರೀಮನ್ನಾರಾಯಣ

    ಬೆಂಗಳೂರು: ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಬೆಳ್ಳಿ ತೆರೆಗೆ ಬರಲು ಅವನೇ ಶ್ರೀಮನ್ನಾರಾಯಣ ಸಿದ್ಧನಾಗಿದ್ದಾನೆ.

    ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿರುವ ಈ ವರ್ಷದ ಅತ್ಯಂತ ನಿರೀಕ್ಷೆಗಳನ್ನ ಹುಟ್ಟುಹಾಕಿರೋ ಸಿನಿಮಾ ಈ ವರ್ಷದ ಕೊನೆಯ ವಾರ ನಿಮ್ಮನ್ನೆಲ್ಲ ರಂಜಿಸಲು ಸಿದ್ಧವಾಗಿದೆ. ಸಿನಿಮಾ ಟ್ರೈಲರ್, ಹಾಡುಗಳು ಈಗಾಗಲೇ ಭಾರೀ ಸದ್ದು ಮಾಡುತ್ತಿದೆ.

    ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾಗಳು ಹೊಸತನದಿಂದ ಇರೋದು ಎಲ್ಲರಿಗೂ ಗೊತ್ತಿದೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ಹೆಸರಿನಲ್ಲೇ ವಿಭಿನ್ನವಾಗಿದ್ದು ಸಿನಿಮಾ ಕೂಡ ವಿಭಿನ್ನವಾಗಿರೋತ್ತೆ ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿಬಂದಿದೆ. ಕೇವಲ ಸಿನಿಮಾ ಮಾತ್ರ ಅಲ್ಲ ಈ ಸಿನಿಮಾದ ಜಾಹೀರಾತು ಸಹ ವಿಭಿನ್ನತೆಯಿಂದ ಕೂಡಿದೆ.

    ಹೌದು ಟ್ರೈನ್ ಬೋಗಿಗಳ ಮೇಲೆ ಅವನೇ ಶ್ರೀಮನ್ನಾರಾಯಣ ಪೋಸ್ಟರ್‍ಗಳು ಸಂಚಲನ ಮೂಡಿಸಿದೆ. ಕನ್ನಡದ ಚಿತ್ರವೊಂದು ಹೀಗೆ ರೈಲ್ವೇ ಬೋಗಿಯ ಮೇಲೆ ಜಾಹೀರಾತು ನೀಡುತ್ತಿರೋದು ಇದೇ ಮೊದಲು. ಸಿನಿಮಾ ಹೆಸರಿನ ಮೂಲಕವೇ ಸದ್ದು ಮಾಡಿತ್ತು. ಈಗ ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡುತ್ತಿರೋದು ಸಹ ಸಿನಿ ಪ್ರಿಯರಲ್ಲಿ ಸಿನಿಮಾದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.

  • ರೈಲು ಹರಿದರೂ, ಯಾವುದೇ ಚಿಂತೆ ಇಲ್ಲದೇ ಹಳಿಯಿಂದ ಎದ್ದು ಹೋದ ನಾಯಿಮರಿ- ವೈರಲ್ ವಿಡಿಯೋ ನೋಡಿ

    ರೈಲು ಹರಿದರೂ, ಯಾವುದೇ ಚಿಂತೆ ಇಲ್ಲದೇ ಹಳಿಯಿಂದ ಎದ್ದು ಹೋದ ನಾಯಿಮರಿ- ವೈರಲ್ ವಿಡಿಯೋ ನೋಡಿ

    ಮಂಗಳೂರು: ಅದೃಷ್ಟ ಇದ್ದರೆ ರೈಲಿನಡಿಗೆ ಬಿದ್ದರೂ ಬದುಕಿ ಬರಬಹುದು ಎನ್ನುವುದಕ್ಕೆ ನೈಜ ನಿದರ್ಶನ ಆಗುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

    ಪುತ್ತೂರಿನ ಕಬಕ ರೈಲು ನಿಲ್ದಾಣದ ಬಳಿ ನಾಯಿ ಮರಿಯೊಂದು ಹಳಿ ಮೇಲೆ ಹೋಗುತ್ತಿದ್ದಾಗ ರೈಲು ಅದೇ ಟ್ರಾಕ್ ಮೇಲೆ ಆಗಮಿಸಿದೆ. ರೈಲು ನಾಯಿ ಮರಿಯ ಮೇಲೆಯೇ ಹರಿದು ಹೋಗಿದೆ. ಆದರೆ ನಾಯಿಮರಿ ಭಯದಿಂದಲೇ ಹಳಿಯ ಮಧ್ಯಭಾಗದಲ್ಲಿ ಕುಂಟುತ್ತಾ ನಡೆಯತೊಡಗಿದೆ. ಸ್ವಲ್ಪ ಮುಂದೆ ಹೋಗಿ, ಹಳಿಯ ನಡುವಿನ ಖಾಲಿ ಜಾಗದಲ್ಲಿ ಮಲಗಿದ್ದು, ರೈಲಿನ ಅಷ್ಟೂ ಬೋಗಿಗಳು ತನ್ನ ಮೇಲಿಂದ ಹಾದುಹೋಗುವವರೆಗೂ ಮಲಗಿಬಿಟ್ಟಿತ್ತು.

    ಕೊನೆಗೆ ರೈಲು ಹೋಯಿತು ಎನ್ನುವಷ್ಟರಲ್ಲಿ, ಬದುಕಿದೆಯಾ ಬಡ ಜೀವ ಅನ್ನುವಂತೆ ಅಲ್ಲಿಂದ ಓಡಿ ಹೋಗಿದೆ. ಈ ಘಟನೆಯಲ್ಲಿ ನಿಲ್ದಾಣದಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=nz5hHbk_l4Y

  • ರೈಲಿನಲ್ಲಿ ಸೀಟ್ ಸಿಗದೇ ಅರ್ಧಗಂಟೆ ನಿಂತೇ ಮಗುವಿಗೆ ಸ್ತನ್ಯಪಾನ!

    ರೈಲಿನಲ್ಲಿ ಸೀಟ್ ಸಿಗದೇ ಅರ್ಧಗಂಟೆ ನಿಂತೇ ಮಗುವಿಗೆ ಸ್ತನ್ಯಪಾನ!

    ಲಂಡನ್: ಟ್ರೈನಿನಲ್ಲಿ ಸೀಟ್ ಸಿಗದಿದ್ದಕ್ಕೆ ಅರ್ಧಗಂಟೆ ನಿಂತು ಮಹಿಳೆ ತನ್ನ ಮಗುವಿಗೆ ಸ್ತನ್ಯಪಾನ ಮಾಡಿಸಿರುವ ಹೃದಯಾವಿದ್ರಾವಕ ಘಟನೆ ಲಂಡನ್‍ನಲ್ಲಿ ನಡೆದಿದೆ.

    ಕೇಟ್ ಹಿಚ್ಚೆನ್ಸ್ ನಿಂತುಕೊಂಡು ಮಗುವಿಗೆ ಸ್ತನ್ಯಪಾನ ಮಾಡಿಸಿದ ಮಹಿಳೆ. ಮಂಗಳವಾರ ಕೇಟ್ ತನ್ನ ಮನೆಯಿಂದ ವಿಕ್‍ಫೋರ್ಡ್‍ಗೆ ರಶ್ ಇದ್ದ ಟ್ರೈನಿನಲ್ಲಿ ತನ್ನ ಆರು ತಿಂಗಳ ಮಗ ಚಾರ್ಲಿಯನ್ನು ಎತ್ತಿಕೊಂಡು ಪ್ರಯಾಣಿಸುತ್ತಿದ್ದರು.

    ಕೇಟ್ ಟ್ರೈನಿನಲ್ಲಿ ಪ್ರಯಾಣಿಸುತ್ತಿರುವಾಗ ಆಕೆಯನ್ನು ನೋಡಿ ಯಾರೂ ಕೂಡ ತಮ್ಮ ಸೀಟ್ ಬಿಟ್ಟುಕೊಡಲಿಲ್ಲ. ಯಾರು ಸೀಟ್ ನೀಡದ ಕಾರಣ ಕೇಟ್ ಅರ್ಧ ಗಂಟೆ ನಿಂತುಕೊಂಡೇ ಮಗುವಿಗೆ ಸ್ತನ್ಯಪಾನ ಮಾಡಿಸಲು ಪರದಾಡಿದ್ದಾರೆ.

    ಸದ್ಯ ಜನರ ಈ ವರ್ತನೆಯನ್ನು ಕಂಡು ಕೇಟ್ ತನ್ನ ಇನ್‍ಸ್ಟಾಗ್ರಾಂನಲ್ಲಿ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಫೋಟೋ ಹಾಕಿ ತಮಗೆ ಆದ ಅನುಭವವನ್ನು ಹೇಳುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಈ ಪ್ರಪಂಚ ಯಾವ ಮಟ್ಟಿಗೆ ಬಂದಿದೆ ಎಂದರೆ ಚಲಿಸುತ್ತಿರುವ ಟ್ರೈನಿನಲ್ಲಿ ತಾಯಿ ತನ್ನ 6 ತಿಂಗಳ ಮಗುವಿಗೆ ನಿಂತುಕೊಂಡು ಸ್ತನ್ಯಪಾನ ಮಾಡಿಸುವ ಪರಿಸ್ಥಿತಿ ಬಂದಿದೆ ಎಂದು ಕೇಟ್ ತನ್ನ ಇನ್‍ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು.

    ನಾನು ನಿಂತುಕೊಂಡು ಸ್ತನ್ಯಪಾನ ಮಾಡಿಸುತ್ತಿರುವುದು ಕೆಲವರು ಗಮನಿಸಲಿಲ್ಲ. ಆದರೆ ಇನ್ನೂ ಕೆಲವರು ನನ್ನನ್ನು ಗಮನಿಸಿ ನನ್ನ ನೋಡಿ ಸ್ಮೈಲ್ ಮಾಡಿದರು. ಆಗ ನಾನು ನನ್ನನ್ನು ನೋಡಿ ಸ್ಮೈಲ್ ಮಾಡುವುದು ನಿಲ್ಲಿಸಿ ನನಗೆ ಸೀಟ್ ಬಿಟ್ಟು ಕೊಡಿ ಎಂದು ಕೇಳಿದೆ. ಆಗ ಮಹಿಳೆಯೊಬ್ಬರು ಸೀಟ್ ಬಿಟ್ಟುಕೊಟ್ಟರು ನಾನು ಆ ಸೀಟ್‍ನಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ಮತ್ತೊಬ್ಬ ಮಹಿಳೆ ಆ ಸೀಟ್‍ನಲ್ಲಿ ಕುಳಿತುಕೊಂಡರು ಎಂದು ಕೇಟ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    ಸದ್ಯ ಕೇಟ್ ಪೋಸ್ಟ್ ಗೆ ಹಲವಾರು ಮಂದಿ ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

    View this post on Instagram

     

    On my way home from London on a packed commuter train and this is what I faced. What has the world come to that a mother has to stand up on a moving train breast feeding a wriggling and writhing 6 month old, 20lb baby?! The point here isn’t just that I found it difficult because I was nursing (although that was bloody difficult!), but that not one person offered a mother carrying a small child a seat for around half an hour, or 3 stops! I could have asked, but I didn’t. I felt silly. I shouldn’t have to ask. Maybe some people didn’t see. I know for a fact some did; they made eye contact and actually smiled at me. I was thinking stop smiling and offer me your seat please! One lady looked up from her book and immediately offered me her seat, another lady then sat in it and when the lovely lady said ‘Oh excuse me I actually gave up my seat so this lady with a baby could sit down’ the sitting lady shrugged, plugged her earphones in and closed her eyes! I like to think that she needed that seat more than me, perhaps she was newly pregnant and in that early exhaustion period, perhaps she was knackered after a day at work, perhaps she was ill. Or perhaps she was just a twat. I hope not. I can somewhat understand not offering your seat to someone elderly; perhaps they might be offended you think they look old! I can understand not offering your seat to someone you suspect might be pregnant; maybe it’s just their time of the month or perhaps they are just naturaly curvy and they aren’t pregnant; perhaps you worry you might offend them. I cannot get my head around not offering a parent with a child a seat. Next time you see someone with a child on a train – if you’re able bodied and fit and healthy please offer your seat to them!

    A post shared by Hitchens’ Kitchen BLW Club (@baby_led_weaning_club) on

  • ಟ್ರೈನಲ್ಲಿ Love at First Sight- ಯುವತಿಯನ್ನು ಹುಡುಕಲು ಹಾಕಿದ 4 ಸಾವಿರ ಪೋಸ್ಟರ್

    ಟ್ರೈನಲ್ಲಿ Love at First Sight- ಯುವತಿಯನ್ನು ಹುಡುಕಲು ಹಾಕಿದ 4 ಸಾವಿರ ಪೋಸ್ಟರ್

    ಕೋಲ್ಕತ್ತಾ: ಟ್ರೈನಿನಲ್ಲಿ ಯುವತಿಯನ್ನು ನೋಡಿ ಲವ್ ಅಟ್ ಫಸ್ಟ್ ಸೈಟ್ ಆದ ಯುವಕನೊಬ್ಬ ಆಕೆಯನ್ನು ಹುಡುಕಲು ಒಂದು ಸಿನಿಮಾ ಮಾಡಿ 4,000 ಪೋಸ್ಟರ್ ಅಂಟಿಸಿದ ಪ್ರಕರಣವೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬೆಳಕಿಗೆ ಬಂದಿದೆ.

    ಬಿಸ್ವಜಿತ್ ಪೊದಾರ್(29) ಕೋಲ್ಕತ್ತಾದಲ್ಲಿ ಸರ್ಕಾರಿ ಕೆಲಸ ಮಾಡುತ್ತಿದ್ದಾರೆ. ಬುಸ್ವಜಿತ್ ಜುಲೈ ತಿಂಗಳಿನಲ್ಲಿ ಕೆಲಸದಿಂದ ಮನೆಗೆ ಹಿಂತಿರುಗುವ ವೇಳೆ ರೈಲಿನಲ್ಲಿ ತನ್ನ ಮುಂದೆ ಯುವತಿ ಪೋಷಕರ ಜೊತೆ ಕುಳಿತ್ತಿದ್ದಳು. ಆ ಯುವತಿಯನ್ನು ನೋಡಿದ ಮೊದಲ ನೋಟದಲ್ಲೇ ಬಿಸ್ವಜಿತ್‍ಗೆ ಆಕೆಯ ಮೇಲೆ ಪ್ರೀತಿಯಾಗಿದೆ.

    ಬಿಸ್ವಜಿತ್‍ಗೆ ಆ ಯುವತಿ ಮೇಲೆ ಮೊದಲ ನೋಟದಲ್ಲೇ ಪ್ರೀತಿಯಾಗಿದ್ದು, ಈಗ ಆ ಯುವತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಯುವತಿಯನ್ನು ಹುಡುಕಲು ಬಿಸ್ವಜಿತ್ 4,000 ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಆ ಪೋಸ್ಟರ್ ನಲ್ಲಿ ಬಿಸ್ವಜಿತ್ ತನ್ನ ಮೊಬೈಲ್ ನಂಬರ್ ಹಾಗೂ ತನ್ನ ಸಿನಿಮಾದ ಯೂಟ್ಯೂಬ್ ಲಿಂಕ್ ಕೂಡ ಹಾಕಿದ್ದಾನೆ.

    ಯುವತಿ ಈ ಪೋಸ್ಟರ್ ನೋಡಿ ನಾನು ಆಕೆಯನ್ನು ಹುಡುಕುತ್ತಿದ್ದೇನೆ ಎಂಬುದು ಗೊತ್ತಾಗಲಿ ಎಂಬ ಉದ್ದೇಶದಿಂದ ನಾನು ಈ ರೀತಿ ಮಾಡುತ್ತಿದ್ದೇನೆ. ನಾನು ಆಕೆಯನ್ನು ಹುಡುಕುತ್ತಿದ್ದೇನೆ ಹಾಗೂ ಆಕೆಗೆ ಇಷ್ಟವಿದ್ದರೆ ಆಕೆ ನನ್ನನ್ನು ಸಂರ್ಪಕಿಸಲಿ ಎಂದು ಬಿಸ್ವಜಿತ್ ಪ್ರತಿಕ್ರಿಯಿಸಿದ್ದಾರೆ.

    ಆ ಯುವತಿಯನ್ನು ಹುಡುಕಲು ಬಿಸ್ವಜಿತ್ ಒಂದು ಕಿರುಚಿತ್ರವನ್ನು ಕೂಡ ಮಾಡಿದ್ದಾರೆ. ಆ ಚಿತ್ರಕ್ಕೆ ‘ಕೋನ್‍ಗರ್ ಕೋನೆ’ ಎಂದು ಹೆಸರಿಟ್ಟಿದ್ದಾರೆ. ಬೆಂಗಾಲಿಯಲ್ಲಿ ಕೋನ್‍ಗರ್ ಕೋನೆ ಎಂದರೆ ‘ಕೋನ್‍ಗರ್ ನ ವಧು’ ಎಂದರ್ಥ. ಈ ಕಿರುಚಿತ್ರ 6 ನಿಮಿಷ 23 ಸೆಕೆಂಡ್‍ಗಳಿದ್ದು, ಬಿಸ್ವಜಿತ್ ಈ ಚಿತ್ರದಲ್ಲಿ ಯುವತಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ.

    ಬಿಸ್ವಜಿತ್ ಆ ಯುವತಿಯನ್ನು ಪ್ರೀತಿಸುತ್ತಿರುವುದು ಹಾಗೂ ಭೇಟಿಯಾಗಲೂ ಕಾತುರದಿಂದ ಕಾಯುತ್ತಿರುವುದನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಆ ಯುವತಿಯ ಪಾತ್ರವನ್ನು ಬಿಸ್ವಜಿತ್‍ರ ಸ್ನೇಹಿತೆ ಅಭಿನಯಿಸಿದ್ದಾರೆ. ಈ ಚಿತ್ರದ ಕೊನೆಯಲ್ಲಿ “ನೀವು ಈ ಕಿರುಚಿತ್ರ ನೋಡಿದರೆ ನನಗೆ ಸಂರ್ಪಕಿಸಿ” ಎಂದು ಬಿಸ್ವಜಿತ್ ತಿಳಿಸಿದ್ದಾರೆ. ಯುವತಿ ತನ್ನನ್ನು ಗುರುತಿಸಲಿ ಎಂದು ಬಿಸ್ವಜಿತ್ ಆಕೆಯನ್ನು ಭೇಟಿ ಮಾಡಿದ ದಿನ ಧರಿಸಿದ ಟಿ-ಶರ್ಟ್ ಅನ್ನು ಇದೂವರೆಗೂ ತೆಗೆಯಲಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

    ಈ ಹಿಂದೆ ಪುಣೆಯಲ್ಲಿ ನಿಲೇಶ್ ಖೇಡೇಕರ್ ಎಂಬಾತ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಒಲಿಸಿಕೊಳ್ಳಲು ಬರೋಬ್ಬರಿ 300 ಸಾರಿ ಬ್ಯಾನರ್ ಗಳನ್ನು ರಸ್ತೆಯಲ್ಲಿ ಹಾಕಿದ್ದನು. ನಿಲೇಶ್ ಓರ್ವ ಉದ್ಯಮಿ ಆಗಿದ್ದು, ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ ನಲ್ಲಿ ಪ್ರದೇಶದಲ್ಲಿ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಒಲಿಸಿಕೊಳ್ಳಲು ಸಾರಿ ಬ್ಯಾನರ್ ಹಾಕುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಲಿಸುತ್ತಿದ್ದ ರೈಲಿನಲ್ಲಿ ಪೋಷಕರೊಂದಿಗಿದ್ದಾಗ್ಲೇ ಬಾಲಕಿಗೆ ಯುವಕ ಲೈಂಗಿಕ ಕಿರುಕುಳ!

    ಚಲಿಸುತ್ತಿದ್ದ ರೈಲಿನಲ್ಲಿ ಪೋಷಕರೊಂದಿಗಿದ್ದಾಗ್ಲೇ ಬಾಲಕಿಗೆ ಯುವಕ ಲೈಂಗಿಕ ಕಿರುಕುಳ!

    ಕಾರವಾರ: ರೈಲಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕೇರಳ ಮೂಲದ ಯವಕನನ್ನು ಕಾರವಾರ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

    ಸಿರಾಜ್ ಮಜಿದ್ (27)ಬಂಧಿತ ವ್ಯಕ್ತಿಯಾಗಿದ್ದು, ಕೊಂಕಣ ರೈಲ್ವೆ ಮಾರ್ಗದಲ್ಲಿ ನೇತ್ರಾವತಿ ಎಕ್ಸ್ ಪ್ರೆಸ್ ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕೇರಳದಿಂದ ಗೋವಾ ಕಡೆ ಮಹಾರಾಷ್ಟ್ರ ಮೂಲದ ಬಾಲಕಿ ತನ್ನ ಕುಟುಂಬದೊಂದಿಗೆ ತೆರಳುತ್ತಿದ್ದಳು. ಈ ವೇಳೆ ಗೋವಾ ಕಡೆ ಅದೇ ರೈಲಿನಲ್ಲಿ ತೆರಳುತ್ತಿದ್ದ ಆರೋಪಿ ಯುವಕ ಲೈಂಗಿಕ ಕಿರುಕುಳ ನೀಡಿದ್ದಾನೆ.

    ಈ ಬಗ್ಗೆ ಕಾರವಾರದಲ್ಲಿ ಪೋಷಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಆತನನ್ನು ಬಂಧಿಸಿ ಕಾರವಾರ ಗ್ರಾಮೀಣ ಠಾಣೆಯ ಪೊಲೀಸರ ವಶಕ್ಕೆ ನೀಡಿದ್ದಾರೆ.

    ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

  • ಇದ್ದಕ್ಕಿದ್ದ ಹಾಗೇ ಟ್ರೈನ್ ಮುಂದೆ ಹಾರಿ ವ್ಯಕ್ತಿ ಆತ್ಮಹತ್ಯೆ!

    ಇದ್ದಕ್ಕಿದ್ದ ಹಾಗೇ ಟ್ರೈನ್ ಮುಂದೆ ಹಾರಿ ವ್ಯಕ್ತಿ ಆತ್ಮಹತ್ಯೆ!

    ಮುಂಬೈ: ವ್ಯಕ್ತಿಯೊಬ್ಬ ಇದ್ದಕ್ಕಿದ್ದ ಹಾಗೇ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ನಗರದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಮುಂಬೈನ ಮಲಾಡ್ ರೈಲ್ವೇ ನಿಲ್ದಾಣದಲ್ಲಿ ಜೂನ್ 12 ರಂದು ಬೆಳಗ್ಗೆ ಸುಮಾರು 8.30ಕ್ಕೆ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಟ್ರೈನ್ ಬರುತ್ತಿದ್ದಂತೆ ಹಳಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ:
    ಸುಮಾರು 35 ವರ್ಷದ ವ್ಯಕ್ತಿ ನಗರದ ಮಲಾಡ್ ರೈಲ್ವೇ ನಿಲ್ದಾಣಕ್ಕೆ ಬಂದಿದ್ದು, ಫ್ಲಾಟ್‍ಫಾರ್ಮ್ ನಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ರೈಲು ಹತ್ತಿರ ಬರುತ್ತಿದ್ದಂತೆ ಏಕಾಏಕಿ ಅದರ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ರೈಲ್ವೇ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಆದರೆ ಇದುವರೆಗೂ ಆತನ ಗುರುತು ಮತ್ತು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

  • ಟ್ರೈನಿನಲ್ಲಿ ಪರಾರಿಯಾಗುತ್ತಿದ್ದ ಅಪಹರಣಕಾರರನ್ನು ಫ್ಲೈಟ್ ನಲ್ಲಿ ಹೋಗಿ ಅರೆಸ್ಟ್ ಮಾಡಿದ್ರು ಪೊಲೀಸರು!

    ಟ್ರೈನಿನಲ್ಲಿ ಪರಾರಿಯಾಗುತ್ತಿದ್ದ ಅಪಹರಣಕಾರರನ್ನು ಫ್ಲೈಟ್ ನಲ್ಲಿ ಹೋಗಿ ಅರೆಸ್ಟ್ ಮಾಡಿದ್ರು ಪೊಲೀಸರು!

    ಚಿಕ್ಕಬಳ್ಳಾಪುರ: ಮಾಲೀಕನನ್ನು ಕೊಲೆ ಮಾಡಿ ಅಸ್ಸಾಂಗೆ ತೆರಳುತ್ತಿದ್ದ ತೋಟದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನೆಟ್ಟಿ ಬಂಧಿಸಿದ್ದಾರೆ.

    ಬೆಂಗಳೂರು ಮೂಲದ ಕರೀಂಖಾನ್(81) ಕೊಲೆ ಮಾಡಿ ಪರಾರಿಯಾಗುತ್ತಿದ್ದ, ಜಾಕೀರ್, ಮುತಾಬುದ್ದೀನ್, ನಸರುವುಲ್ಲಾ ಹುಸೇನ್ ರನ್ನು ಗೌರಿಬಿದನೂರು ಪೊಲೀಸರು ವಿಮಾನದಲ್ಲಿ ಹೋಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಪ್ರಕರಣ?
    ಬೆಂಗಳೂರು ಮೂಲದ ಕರೀಂಖಾನ್(81) ಗೌರಿಬಿದನೂರು ತಾಲೂಕು ಗೊಡ್ಡಾವರಹಳ್ಳಿ ಬಳಿ ಅಡಿಕೆ, ಬಾಳೆ, ತೆಂಗಿನ ತೋಟವನ್ನು ಮಾಡಿ ಫಾರಂ ಹೌಸ್ ಮಾಡಿಕೊಂಡಿದ್ದರು. ತೋಟದ ಮನೆಯ ಕಾವಲಿಗಂತಲೇ ಅಸ್ಸಾಂ ಮೂಲದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಕ ಮಾಡಿದ್ದರು.

    ಆದರೆ ಮೇ 3ರಂದು ತೋಟಕ್ಕೆ ಬಂದಿದ್ದ ಮಾಲೀಕ ಕರೀಂಖಾನ್ ರನ್ನು ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಕೈ-ಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿದ್ದಾರೆ. ಕರೀಂಖಾನ್ ನನ್ನ ತೋಟದಲ್ಲಿನ ಶೆಡ್ ನಲ್ಲಿ ಮೋಟಾರು ಅಳವಡಿಕೆಗೆ ಇರುವ ಬೃಹದಾದ ಗುಂಡಿಯಲ್ಲಿ ಹಾಕಿ ಕೂಡಿ ಹಾಕಿದ್ದರು. ನಂತರ ಮಗ ಆಯೂಬ್ ಖಾನ್ ಬಳಿ ಅಪರಿಚಿತರಂತೆ ನಿಮ್ಮ ತಂದೆಯನ್ನು ಕಿಡ್ನಾಪ್ ಮಾಡಿದ್ದೇವೆ. 70 ಲಕ್ಷ ರೂ. ನೀಡಿ ಬೇಡಿಕೆ ಇಟ್ಟಿದ್ದರು.

    ಈ ಬಗ್ಗೆ ಕರೀಂಖಾನ್ ಮಗ ಆಯೂಬ್ ಖಾನ್ ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆಗೆ ಮುಂದಾಗಿದ್ದರು. ಆದರೆ ಅಷ್ಟರಲ್ಲೇ ಇತ್ತ ಶೆಡ್‍ನ ಗುಂಡಿಯಲ್ಲಿ ಕೂಡಿ ಹಾಕಿದ್ದ ಕರೀಂಖಾನ್ ಕೂಡ ಗುಂಡಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದರಿಂದ ಪೊಲೀಸರಿಗೆ ವಿಷಯ ಗೊತ್ತಾಗುವಷ್ಟರಲ್ಲಿ ಪರಾರಿಯಾಗಬೇಕು ಎಂದು ತೀರ್ಮಾನಿಸಿದ ಮೂವರು ಸೆಕ್ಯೂರಿಟಿ ಗಾರ್ಡ್ ಗಳು, ರೈಲು ಮೂಲಕ ಅಸ್ಸಾಂಗೆ ಪಯಣ ಬೆಳೆಸಿದ್ದರು.

    ಪರಾರಿಯಾದ ವಿಷಯ ತಿಳಿದ ಪೊಲೀಸರು, ಇವರೇ ಅಪಹರಣಕಾರರು ಎಂದು ಅಸ್ಸಾಂ ನತ್ತ ತೆರಳುತ್ತಿದ್ದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನ ವಿಮಾನದ ಮೂಲಕ ಕೋಲ್ಕತ್ತಾ ಗೆ ತೆರಳಿ, ಅಲ್ಲಿ ಹೌರಾ ರೈಲ್ವೇ ಜಂಕ್ಷನ್ ನಲ್ಲಿ ಬಂಧಿಸಿ ಕರೆತಂದಿದ್ದಾರೆ. ಆಗ ನಡೆದ ಘಟನೆಯನ್ನ ಬಾಯ್ಬಿಟ್ಟಿರೋ ಸೆಕ್ಯೂರಿಟಿ ಗಾರ್ಡ್‍ಗಳು, ಕರೀಂಖಾನ್ ಮೃತಪಟ್ಟಿರುವ ವಿಷಯ ತಿಳಿಸಿದ್ದಾರೆ. ಈ ಸಂಬಂಧ ಸದ್ಯ ಮೂವರನ್ನು ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿತ ಸೆಕ್ಯೂರಿಟಿ ಗಾರ್ಡ್ ಗಳಿಂದ ಸ್ಥಳ ಮಹಜರು ಮಾಡಿಸಿದ್ದಾರೆ.

    ಮತ್ತೊಂದೆಡೆ ಗುಂಡಿಯಲ್ಲಿದ್ದ ಕರೀಂಖಾನ್ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.

    ಇನ್ನೂ ಮೂವರು ಅಸ್ಸಾಂ ಮೂಲದ ಸೆಕ್ಯೂರಿಟಿ ಗಾರ್ಡ್ ಗಳು, ಬಾಂಗ್ಲಾ ದೇಶದಿಂದ ಅಕ್ರಮವಾಗಿ ದೇಶಕ್ಕೆ ನುಸುಳಿದ್ದಾರೆ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದ್ದು, ಆ ದಿಕ್ಕಿನಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಟ್ರೈನಿನಲ್ಲಿ ಪ್ರಯಾಣಿಕರ ಮುಂದೆ ಪ್ರೇಮಿಗಳಿಂದ ಸೆಕ್ಸ್- ವಿಡಿಯೋ ಮಾಡಿದ್ರೂ ಡೋಂಟ್ ಕೇರ್!

    ಟ್ರೈನಿನಲ್ಲಿ ಪ್ರಯಾಣಿಕರ ಮುಂದೆ ಪ್ರೇಮಿಗಳಿಂದ ಸೆಕ್ಸ್- ವಿಡಿಯೋ ಮಾಡಿದ್ರೂ ಡೋಂಟ್ ಕೇರ್!

    ಲಂಡನ್: ಟ್ರೈನಿನಲ್ಲಿ ಪ್ರಯಾಣಿಕರ ಮುಂದೆ ಪ್ರೇಮಿಗಳು ಸೆಕ್ಸ್ ಮಾಡಿದ ಘಟನೆ ಇಂಗ್ಲೆಂಡಿನ ಕೇಟೇರ್‍ಹೆಮ್ ಸ್ಟೇಷನ್‍ನಲ್ಲಿ ನಡೆದಿದೆ.

    ಟೈನಿನಲ್ಲಿ ಪ್ರಯಾಣಿಕರು ಇರುವುದು ಗೊತ್ತಿದ್ದು, ಅವರ ಬಗ್ಗೆ ಯೋಚಿಸದೇ ಈ ಜೋಡಿ ದೈಹಿಕ ಸಂಪರ್ಕ ಬೆಳೆಸಿದ್ದರು. ಹೀಗಿರುವಾಗ ಪ್ರಯಾಣಿಕನೊಬ್ಬ ತನ್ನ ಮೊಬೈಲಿನಲ್ಲಿ ಆ ಜೋಡಿಯ ವಿಡಿಯೋವನ್ನು ಮಾಡಿದ್ದಾನೆ.

    ಪ್ರೇಮಿಗಳ ಈ ವರ್ತನೆಯಿಂದ ಕೆಲವರು ಅವರನ್ನು ಬೈದರೆ, ಇನ್ನೂ ಕೆಲವರು ಎಚ್ಚರಿಸಿದ್ದರು. ಆದರೆ ಇನ್ನೂ ಕೆಲವರು ಅವರನ್ನು ಸೆಕ್ಸ್ ಗೆ ಹುರಿದುಂಬಿಸುತ್ತಿದ್ದರು. ಆದರೆ ಪ್ರೇಮಿಗಳು ಇದರ ಬಗ್ಗೆ ತಲೆಕೆಡೆಸಿಕೊಳ್ಳಲಿಲ್ಲ ಎಂದು ವರದಿಯಾಗಿದೆ.

    ಪ್ರಯಾಣಿಕ ಮಾಡಿದ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೇಮಿಗಳ ಈ ವರ್ತನೆಯನ್ನು ಕಂಡು ಟ್ರೈನಿನಲ್ಲಿದ್ದ ಜನರು ದಂಗಾದ್ದರು. ನಂತರ ಟ್ರೈನ್ ಸ್ಟೇಷನ್‍ನಲ್ಲಿ ನಿಲ್ಲಿಸಿದ್ದರು ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

    ಜನರು ತಮ್ಮನ್ನು ನೋಡುತ್ತಿದ್ದಾರೆ ಹಾಗೂ ತಮ್ಮ ಕ್ಯಾಮೆರಾದಲ್ಲಿ ನಮ್ಮನ್ನು ಚಿತ್ರಿಸುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿದ್ದರೂ ಇಬ್ಬರು ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ಎಲ್ಲರ ಮುಂದೆನೇ ದೈಹಿಕ ಸಂಬಂಧ ಬೆಳೆಸಿದ್ದರು.

    ಸದ್ಯ ಈ ಪ್ರೇಮಿಗಳ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ರೀಲಿನ ಕಿಟಕಿಯಲ್ಲಿ ಪ್ರೇಮಿಯ ಈ ವರ್ತನೆ ಕಾಣಿಸುತ್ತದೆ. ಇದನ್ನು ವಿಡಿಯೋ ಮಾಡಿದ ಕೆಲವರು ನೋಡುತ್ತಾ ಅವರನ್ನು ಹುರಿದುಂಬಿಸಿದ್ದಾರೆ.

  • ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ನಟಿ ಸನುಷಾ ಗೆ ರೈಲಿನಲ್ಲಿ ಲೈಂಗಿಕ ಕಿರುಕುಳ

    ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ನಟಿ ಸನುಷಾ ಗೆ ರೈಲಿನಲ್ಲಿ ಲೈಂಗಿಕ ಕಿರುಕುಳ

    ತಿರುವನಂತಪುರಂ: ಇತ್ತೀಚಿಗೆ ನಟಿ ಅಮಲಾ ಪೌಲ್ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಬ್ಬ ನಟಿಯ ಮೇಲೆ ಲೈಂಗಿಕ ಕಿರುಕುಳ ನಡೆದಿದೆ. ಸಂತೆಯಲ್ಲಿ ನಿಂತ ಕಬೀರ ಚಿತ್ರದ ನಟಿ ಸನುಷ ಸಂತೋಷ್ ಗೆ ರೈಲಿನಲ್ಲಿ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.

    23 ವರ್ಷದ ನಟಿ ಸನುಷಾ ಸಂತೋಷ್ ಕನ್ಯಾಕುಮಾರಿಯಿಂದ ತಿರುವನಂತಪುರಂಗೆ ಮಾವೆಲಿ ಎಕ್ಸ್ ಪ್ರೆಸ್‍ನ 2 ಟೈರ್ ಎಸಿ ಕೋಚ್‍ನಲ್ಲಿ ಪ್ರಯಾಣಿಸುತ್ತಿದ್ದರು. ಸನುಷಾ ಮೇಲಿನ ಬರ್ತ್‍ನಲ್ಲಿ ಮಲಗಿದ್ದ ವೇಳೆ ವ್ಯಕ್ತಿಯೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ರೈಲಿನಲ್ಲಿ ನಾನು ನಿದ್ದೆ ಮಾಡುವಾಗ ಯಾರೋ ನನ್ನ ತುಟಿಯ ಮೇಲೆ ಕೈ ಸವರುತ್ತಿದ್ದ. ಕಣ್ಣು ಬಿಟ್ಟು ನೋಡಿದಾಗ ಶಾಕ್ ಆಯ್ತು. ತಕ್ಷಣ ನಾನು ಆತನ ಕೈಯನ್ನು ಬಿಗಿಯಾಗಿ ಹಿಡಿದು, ಆತನ ಬೆರಳುಗಳನ್ನು ತಿರುಚಿದೆ ಎಂದು ಸನುಷಾ ತಿಳಿಸಿದ್ದಾರೆ.

    ನಂತರ ಆತನ ಕೈ ಹಿಡಿದು ಕೆಳಗೆ ಮಲಗಿದ ವ್ಯಕ್ತಿಯ ಸಹಾಯ ಕೇಳಿದೆ. ಆದರೆ ಅವರು ಯಾವುದೇ ಸಹಾಯ ಮಾಡಲಿಲ್ಲ. ನಾನು ಕಿರುಚುತ್ತಿದ್ದರೂ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಈ ಘಟನೆ ಮಧ್ಯರಾತ್ರಿ ಸುಮಾರು 1.10ಕ್ಕೆ ನಡೆದಿದ್ದು, ಸ್ಕ್ರಿಪ್ಟ್ ರೈಟರ್ ಉನ್ನಿ ಹಾಗೂ ರಂಜಿತ್ ಎಂಬ ಮತ್ತೊಬ್ಬ ಪ್ರಯಾಣಿಕರು ಮಾತ್ರ ನನ್ನ ಸಹಾಯಕ್ಕೆ ಬಂದರು ಎಂದು ಸನುಷಾ ಹೇಳಿದ್ದಾರೆ.

    ಸಹಾಯಕ್ಕೆ ಬಂದ ಇಬ್ಬರು ಟಿಟಿಇ (ಟ್ರೈನ್ ಟಿಕೆಟ್ ಎಕ್ಸಾಮಿನರ್)ನನ್ನು ಕರೆಯಲು ಹೋದರು. ನಾನು ಆ ವ್ಯಕ್ತಿಯನ್ನು ಎಲ್ಲಿಯೂ ಹೋಗಲು ಬಿಡಲಿಲ್ಲ. ಟಿಟಿಇ ಬಂದು ಮಾಹಿತಿ ಪಡೆದ ನಂತರ ಮುಂದಿನ ರೈಲ್ವೇ ಸ್ಟೇಷನ್‍ನ ಪೊಲೀಸರಿಗೆ ಮಾಹಿತಿ ತಿಳಿಸಿದರು. ಅರ್ಧ ಗಂಟೆ ಆದ ಮೇಲೆ ನಾವು ತ್ರಿಶೂರ್ ತಲುಪಿದಾಗ ಪೊಲೀಸರು ಆತನನ್ನು ಬಂಧಿಸಿದರು. ಪೊಲೀಸರಿಗೆ ನಾನು ನನ್ನ ಹೇಳಿಕೆ ಕೊಟ್ಟು, ಅದೇ ರೈಲಿನಲ್ಲಿ ನನ್ನ ಪ್ರಯಾಣ ಮುಂದುವರೆಸಿದೆ ಎಂದು ಸನುಷಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಆನ್ಟೋ ಬೋಸ್ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿದ್ದು, ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಹೆಬ್ಬುಲಿ ನಾಯಕಿಯ ಮೇಲೆ ಲೈಂಗಿಕ ಕಿರುಕುಳ