Tag: ಟ್ರೆಲರ್

  • 83 ಸಿನಿಮಾದ ಟ್ರೇಲರ್‌ ರಿಲೀಸ್ – ಅಭಿಮಾನಿಗಳು ಫುಲ್ ಫಿದಾ

    83 ಸಿನಿಮಾದ ಟ್ರೇಲರ್‌ ರಿಲೀಸ್ – ಅಭಿಮಾನಿಗಳು ಫುಲ್ ಫಿದಾ

    ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ 83 ಸಿನಿಮಾ ಟ್ರೇಲರ್‌ ರಿಲೀಸ್ ಆಗಿದ್ದು, ಅಭಿಮಾನಿಗಳು ಟ್ರೇಲರ್ ನೋಡಿ ಫುಲ್ ಫಿದಾ ಆಗಿದ್ದಾರೆ.

    Ranveer Singh

    ಕೊರೊನಾ ವೈರಸ್ ಕಾರಣಾಂತರದಿಂದ ಬಿಡುಗಡೆಗೆ ತಡವಾಗಿದ್ದ ಈ ಚಿತ್ರ ಕ್ರಿಸ್‍ಮಸ್ ಹಬ್ಬದಂದು ತೆರೆ ಮೇಲೆ ಬರಲಿದೆ. ಸದ್ಯ 83 ಚಿತ್ರದ ಟ್ರೇಲರ್ ಅನ್ನು ರಣ್‍ವೀರ್ ಸಿಂಗ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. 3 ನಿಮಿಷ 49 ಸೆಕೆಂಡ್ ಇರುವ ಈ ಟ್ರೇಲರ್‌ ಪ್ರೇಕ್ಷಕರನ್ನು 1983ಕ್ಕೆ ಕರೆದೊಯ್ಯುವಂತಿದ್ದು, ಭಾರತೀಯ ಕ್ರಿಕೆಟಿಗರು ವಿಶ್ವಕಪ್ ಗೆದ್ದ ಐತಿಹಾಸಿಕ ಗೆಲುವನ್ನು ನೆನಪಿಸುತ್ತದೆ. ಇದನ್ನೂ ಓದಿ: ದುಬಾರಿ ಕಾರು ಖರೀದಿಸಿದ ಸೋನು ನಿಗಂ

    ಕಪಿಲ್ ದೇವ್ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಕಾಣಿಸಿಕೊಂಡಿದ್ದು, ಟ್ರೇಲರ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದವರ ಜರ್ನಿ, ಅವರ ಹೋರಾಟ, ಗೆಲುವುಗಳು ಮತ್ತು ಸೋಲುಗಳನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಟ್ರೇಲರ್‌ನಲ್ಲಿ ಕಪಿಲ್ ದೇವ್ ಅವರ ಪತ್ನಿ ಪಾತ್ರದಲ್ಲಿ ರಣ್‍ವೀರ್ ​ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಗಾಂಧಿಯಂತೆ ಚರಕ ತಿರುಗಿಸಿದ ಬಾಲಿವುಡ್ ಸುಲ್ತಾನ್

     

    View this post on Instagram

     

    A post shared by Ranveer Singh (@ranveersingh)

    ಟ್ರೇಲರ್‌ ಶೇರ್ ಮಾಡಿಕೊಳ್ಳುವುದರ ಜೊತೆಗೆ ರಣ್‍ವೀರ್ ಸಿಂಗ್ ಅವರು, ಅಸಾಧ್ಯವಾಗದ್ದನ್ನು ಸಾಧ್ಯವಾಗಿಸಿದವರ ನೈಜ ಕಥೆಯ ಟ್ರೇಲರ್‌ ರಿಲೀಸ್ ಆಗಿದೆ. ಇದೇ ಡಿಸೆಂಬರ್ 24ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. 3ಡಿಯಲ್ಲಿಯು ನೋಡಬಹುದು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.