Tag: ಟ್ರಿಸ್ಟನ್‌ ಸ್ಟಬ್ಸ್‌

  • ತವರಲ್ಲಿ ಹರಿಣರ ದರ್ಬಾರ್‌ – ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ 3 ವಿಕೆಟ್‌ಗಳ ರೋಚಕ ಜಯ

    ತವರಲ್ಲಿ ಹರಿಣರ ದರ್ಬಾರ್‌ – ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ 3 ವಿಕೆಟ್‌ಗಳ ರೋಚಕ ಜಯ

    ಗ್ಕೆಬರ್ಹಾ: ಟ್ರಿಸ್ಟನ್‌ ಸ್ಟಬ್ಸ್‌ (Tristan Stubbs) ಅಮೋಘ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಟೀಂ ಇಂಡಿಯಾ (Team India) ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದೆ.

    ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    ಟೀಂ ಇಂಡಿಯಾ ಸ್ಪಿನ್ನರ್‌ ವರುಣ್‌ ಚಕ್ರವರ್ತಿ (Varun Chakravarthy) 13ನೇ ಓವರ್‌ನಲ್ಲಿ ಬೌಲಿಂಗ್‌ನಲ್ಲಿದ್ದರು. ಮೊದಲ ಎರಡು ಎಸೆತಗಳಲ್ಲಿ ಹೆನ್ರಿಚ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌ ದೈತ್ಯ ಆಟಗಾರರಿಗೆ ಪೆವಿಲಿಯನ್‌ ದಾರಿ ತೋರಿದರು. ಇದರಿಂದ ಭಾರತದ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. ಆದ್ರೆ ಕೊನೇ ಮೂರು ಓವರ್‌ಗಳಲ್ಲಿ ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಜೆರಾಲ್ಡ್‌ ಕೋಟ್ಜಿ ಅವರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಯಿತು. ಈ ಜೋಡಿ 17,18,19ನೇ ಓವರ್‌ನಲ್ಲೇ ಕ್ರಮವಾಗಿ 12, 12, 16 ರನ್‌ ಚಚ್ಚಿದ್ದರ ಪರಿಣಾಮ ಗೆಲುವು ದಕ್ಷಿಣ ಆಫ್ರಿಕಾದ ಪಾಲಾಯಿತು.

    ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 19 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 128 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

    ದಕ್ಷಿಣ ಆಫ್ರಿಕಾ ಪರ ಟ್ರಿಸ್ಟನ್‌ ಸ್ಟಬ್ಸ್‌ ಅಜೇಯ 47 ರನ್‌, ರೀಝಾ ಹೆಂಡ್ರಿಕ್ಸ್‌ 24 ರನ್‌, ಜೆರಾಲ್ಡ್‌ ಕೋಟ್ಜಿ ಅಜೇಯ 19 ರನ್‌, ರಿಯಾನ್‌ ರಿಕ್ಲೆಂಟನ್‌ 13 ರನ್‌ ಗಳಿಸಿದರು.

    ಸೋತ ಪಂದ್ಯದಲ್ಲಿ ಮಿಂಚಿದ ವರುಣ್‌:
    ಭಾರತ ಸೋತ ದಕ್ಷಿಣ ಆಫ್ರಿಕಾ ವಿರುದ್ಧ ಸೋತರು ಸ್ಪಿನ್‌ ಮಾಂತ್ರಿಕ ವರುಣ್‌ ಚಕ್ರವರ್ತಿ ಪ್ರಮುಖ ವಿಕೆಟ್‌ ಕಿತ್ತು ಸೈ ಎನಿಸಿಕೊಂಡರು. 4 ಓವರ್‌ಗಳಲ್ಲಿ ಕೇವಲ 17 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಪಡೆದು ಮಿಂಚಿದರು. ಅರ್ಷ್‌ದೀಪ್‌ ಸಿಂಗ್‌, ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್‌ ಪಡೆದರು.

    ಇನ್ನೂ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ, 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿ, ದಕ್ಷಿಣ ಆಫ್ರಿಕಾಗೆ 125 ರನ್‌ಗಳ ಗುರಿ ನೀಡಿತ್ತು. ಆರಂಭದಲ್ಲೇ ವಿಕೆಟ್‌ ಕಳೆದಕೊಂಡು ಸಂಕಷ್ಟಕ್ಕೀಡಾದ ಟೀಂ ಇಂಡಿಯಾಕ್ಕೆ ಅಕ್ಷರ್‌ ಪಟೇಲ್‌ ನೆರವಾಗಿದ್ದರು. 21 ಎಸೆತಗಳಲ್ಲಿ 27 ರನ್‌ ಬಾರಿಸಿ, ಉತ್ಸಾಹ ತುಂಬಿದ್ದರು. ಈ ವೇಳೆ ಹಾರ್ದಿಕ್‌ ಪಾಂಡ್ಯ ಹೊಡೆದ ಸ್ಟ್ರೈಟ್‌ಲೆಂತ್‌ ಬಾಲ್‌ ಬೌಲರ್‌ ಕೈಗೆ ತಾಕಿ ವಿಕೆಟ್‌ಗೆ ಬಡಿದು ರನೌಟ್‌ಗೆ ತುತ್ತಾದರು.

    ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ ಹೋರಾಟದಿಂದ ಭಾರತ 120 ರನ್‌ಗಳ ಗಡಿ ದಾಟಿತು. ಟೀಂ ಇಂಡಿಯಾ ಪರ ಹಾರ್ದಿಕ್‌ ಪಾಂಡ್ಯ 31 ರನ್‌ ಗಳಿಸಿದ್ರೆ, ಅಕ್ಷರ್‌ ಪಟೇಲ್‌ 27 ರನ್‌, ತಿಲಕ್‌ ವರ್ಮಾ 20 ರನ್‌ ಗಳಿಸಿದ್ರು, ಉಳಿದವರು ಅಲ್ಪ ಮೊತ್ತಕ್ಕೆ ಔಟಾದರು.

  • ತಿಲಕ್‌‌, ಹಾರ್ದಿಕ್ ಹೋರಾಟ ವ್ಯರ್ಥ; ಡೆಲ್ಲಿಗೆ 10 ರನ್‌ಗಳ ಜಯ – ಮುಂಬೈ ಪ್ಲೇ ಆಫ್‌ ಹಾದಿ ಬಹುತೇಕ ಬಂದ್‌!

    ತಿಲಕ್‌‌, ಹಾರ್ದಿಕ್ ಹೋರಾಟ ವ್ಯರ್ಥ; ಡೆಲ್ಲಿಗೆ 10 ರನ್‌ಗಳ ಜಯ – ಮುಂಬೈ ಪ್ಲೇ ಆಫ್‌ ಹಾದಿ ಬಹುತೇಕ ಬಂದ್‌!

    ನವದೆಹಲಿ: ಕೊನೆಯವರೆಗೂ ಜಿದ್ದಾ-ಜಿದ್ದಿಯಿಂದ ಕೂಡಿದ್ದ ಅಖಾಡದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮುಂಬೈ ಇಂಡಿಯನ್ಸ್‌ ವಿರುದ್ಧ 10 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ವಾಂಖೆಡೆ ಮೈದಾನದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿದೆ.

    ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 257 ರನ್‌ ಬಾರಿಸಿತ್ತು. 258 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 247 ರನ್‌ ಗಳಿಸಿ 10 ರನ್‌ಗಳ ವಿರೋಚಿತ ಸೋಲಿಗೆ ತುತ್ತಾಗಿದೆ.

    ಕೊನೇ ಓವರ್‌ನಲ್ಲಿ ಕೈತಪ್ಪಿದ ಗೆಲುವು:
    ಕೊನೇ ಓವರ್‌ನಲ್ಲಿ ಮುಂಬೈ ಗೆಲುವಿಗೆ 25 ರನ್‌ಗಳ ಅಗತ್ಯವಿತ್ತು. ಮುಕೇಶ್‌ ಕುಮಾರ್‌ ಬೌಲಿಂಗ್‌ ವೇಳೆ ತಿಲಕ್‌ ವರ್ಮಾ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತದಲ್ಲಿ 2 ರನ್‌ ಕದಿಯಲು ಯತ್ನಿಸಿ ತಿಲಕ್‌ ರನೌಟ್‌ಗೆ ತುತ್ತಾದರು. ಇದರೊಂದಿಗೆ ಮುಂಬೈ ತಂಡದ ಗೆಲುವಿನ ಕನಸೂ ಭಗ್ನವಾಯಿತು. ಕೊನೆಯವರೆಗೂ ಹೋರಾಡಿದ ಮುಂಬೈ 247 ರನ್‌ ಗಳಿಸಿತು.

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಮುಂಬೈ ಇಂಡಿಯನ್ಸ್‌ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಮಾಜಿ ನಾಯಕ ರೋಹಿತ್‌ ಶರ್ಮಾ 8 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿದರು, ಈ ಬೆನ್ನಲ್ಲೇ 20 ರನ್‌ ಗಳಿಸಿ ಇಶಾನ್‌ ಕಿಶನ್‌ ಸಹ ಪೆವಿಲಿಯನ್‌ಗೆ ಮರಳಿದರು. ನಂತರ ಸ್ಪೋಟಕ ಬ್ಯಾಟಿಂಗ್‌ ಆರಂಭಿಸಿದ್ದ ಸೂರ್ಯಕುಮಾರ್‌ ಯಾದವ್‌ 13 ಎಸೆತಗಳಲ್ಲಿ 26 ರನ್‌ ಬಾರಿಸಿ ಔಟಾದರು. ಇದು ಮುಂಬೈ ತಂಡಕ್ಕೆ ಸೋಲಿನ ಭೀತಿ ಉಂಟುಮಾಡಿತ್ತು.

    ಮುಂಬೈ ಪರ ತಿಲಕ್‌ ವರ್ಮಾ 63 ರನ್‌ (32 ಎಸೆತ, 4 ಸಿಕ್ಸರ್‌, 4 ಬೌಂಡರಿ), ಹಾರ್ದಿಕ್‌ ಪಾಂಡ್ಯ 46 ರನ್‌ (24 ಎಸೆತ, 3 ಸಿಕ್ಸರ್‌, 4 ಬೌಂಡರಿ), ಟಿಮ್‌ ಡೇವಿಡ್‌ 37 ರನ್‌ (17 ಎಸೆತ, 3 ಸಿಕ್ಸರ್‌, 4 ಬೌಂಡರಿ), ಸೂರ್ಯಕುಮಾರ್‌ 26 ರನ್‌, ಇಶಾನ್‌ ಕಿಶನ್‌ 20 ರನ್‌, ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯದ ಕಾರಣ ಮುಂಬೈ ವಿರೋಚಿತ ಸೋಲಿಗೆ ತುತ್ತಾಯಿತು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಮುಕೇಶ್‌ ಕುಮಾರ್‌, ರಸಿಖ್‌ ಸಲಾಮ್‌ ತಲಾ 3 ವಿಕೆಟ್‌ ಕಿತ್ತರೆ, ಖಲೀಲ್‌ ಅಹ್ಮದ್‌ 2 ವಿಕೆಟ್‌ ಪಡೆದು ಮಿಂಚಿದರು.

    ಮೊದಲು ಬ್ಯಾಟಿಂಗ್‌ ಮಾಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆರಂಭಿಕರಾದ ಫ್ರೇಸರ್‌ ಮೆಕ್‌ಗಾರ್ಕ್‌ ಹಾಗೂ ಅಭಿಷೇಕ್ ಪೋರೆಲ್ ಆರಂಭದಿಂದಲೇ ಸ್ಪೋಟಕ ಇನ್ನಿಂಗ್ಸ್‌ ಕಟ್ಟಲು ಶುರು ಮಾಡಿದರು. ಮೊದಲ 2.4 ಓವರ್‌ಗಳಲ್ಲೇ ಡೆಲ್ಲಿ ತಂಡ 50 ರನ್‌ ಬಾರಿಸಿತ್ತು. ಆಸ್ಟ್ರೇಲಿಯಾ ಮೂಲದ ಯುವ ಸ್ಪೋಟಕ ಬ್ಯಾಟರ್ ಫ್ರೇಸರ್‌ ಮೆಗಾರ್ಕ್‌ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದ್ದು. ಒಂದಾದಮೇಲೊಂದು ಎಸೆತಗಳು ಸಿಕ್ಸರ್‌, ಬೌಂಡರಿಯ ಹಾದಿಯನ್ನೇ ಹಿಡಿಯುತ್ತಿದ್ದವು. ಇದರೊಂದಿಗೆ ಮೆಕ್‌ಗಾರ್ಕ್ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ಡೆಲ್ಲಿ ಪವರ್‌ ಪ್ಲೇ ನಲ್ಲಿ 92 ರನ್ ಕಲೆಹಾಕಿತ್ತು. ಇದು ಐಪಿಎಲ್‌ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪವರ್‌ ಪ್ಲೇನಲ್ಲಿ ಸಿಡಿಸಿದ ಗರಿಷ್ಠ ಸ್ಕೋರರ್‌ ಆಗಿತ್ತು.

    ಮೆಕ್‌ಗಾರ್ಕ್‌ ಹಾಗೂ ಅಭಿಷೇಕ್ ಮೊದಲ ವಿಕೆಟ್‌ಗೆ 7.3 ಓವರ್‌ಗಳಲ್ಲಿ ಬರೋಬ್ಬರಿ 114 ರನ್‌ ಸಿಡಿಸಿತ್ತು. ಮೆಕ್‌ಗಾರ್ಕ್‌ ಬಳಿಕ ಶಾಯ್‌ ಹೋಪ್‌, ರಿಷಭ್‌ ಪಂತ್‌, ಟ್ರಿಸ್ಟನ್‌ ಸ್ಟಬ್ಸ್‌ ಸಹ ಮುಂಬೈ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಜಾಡಿಸಿದರು. ಅಂತಿಮವಾಗಿ ಡೆಲ್ಲಿ ತಂಡ 20 ಓವರ್‌ಗಳಲ್ಲಿ 257 ರನ್‌ ಸಿಡಿಸಿತ್ತು.

    ಡೆಲ್ಲಿ ಪರ ಮೆಕ್‌ಗಾರ್ಕ್‌ 84 ರನ್‌ (27 ಎಸೆತ, 11 ಬೌಂಡರಿ, 6 ಸಿಕ್ಸರ್‌), ಟ್ರಿಸ್ಟನ್‌ ಸ್ಟಬ್ಸ್‌ 48 ರನ್‌ (25 ಎಸೆತ, 6 ಬೌಂಡರಿ, 2 ಸಿಕ್ಸರ್‌), ಶಾಯ್‌ಹೋಪ್‌ 41 ರನ್‌ (17 ಎಸೆತ, 5 ಸಿಕ್ಸರ್‌), ರಿಷಭ್‌ ಪಂತ್‌ 29 ರನ್‌, ಅಕ್ಷರ್‌ ಪಟೇಲ್‌ 11 ರನ್‌ ಗಳಿಸಿದರು.

    ಮುಂಬೈ ಇಂಡಿಯನ್ಸ್‌ ಪರ ಲ್ಯೂಕ್ ವುಡ್, ಜಸ್ಪ್ರೀತ್‌ ಬುಮ್ರಾ, ಪಿಯೂಷ್‌ ಚಾವ್ಲಾ, ಮೊಹಮ್ಮದ್‌ ನಬಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ರನ್‌ ಏರಿದ್ದು ಹೇಗೆ?
    17 ಎಸೆತ – 50 ರನ್‌
    41 ಎಸೆತ – 100 ರನ್‌
    73 ಎಸೆತ – 150 ರನ್‌
    98 ಎಸೆತ – 200 ರನ್‌
    120 ಎಸೆತ – 257 ರನ್‌

  • ಆಫ್ರಿಕಾ ತಂಡದಲ್ಲಿ ಇವರಿಬ್ಬರದ್ದೇ ಹವಾ

    ಆಫ್ರಿಕಾ ತಂಡದಲ್ಲಿ ಇವರಿಬ್ಬರದ್ದೇ ಹವಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k