Tag: ಟ್ರಿಪ್

  • Shakthi Scheme Effect- ಟ್ರಿಪ್‍ಗೆ ಹೋದ ಪತ್ನಿ ಮನೆಗೆ ಬಂದಿಲ್ಲವೆಂದು ಬಸ್‌ ಚಕ್ರದಡಿ ತಲೆಯಿಟ್ಟ ಪತಿ!

    Shakthi Scheme Effect- ಟ್ರಿಪ್‍ಗೆ ಹೋದ ಪತ್ನಿ ಮನೆಗೆ ಬಂದಿಲ್ಲವೆಂದು ಬಸ್‌ ಚಕ್ರದಡಿ ತಲೆಯಿಟ್ಟ ಪತಿ!

    ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ (Shakthi Scheme) ಜಾರಿಗೆ ಬಂದಾಗಿನಿಂದ ಒಂದಲ್ಲ ಒಂದು ಅವಾಂತರಗಳು ಬಯಲಾಗ್ತಾನೇ ಇವೆ. ಇದೀಗ ಕುಡುಕ ಪತಿಯೊಬ್ಬ ಟ್ರಿಪ್‍ಗೆ ಹೋದ ತನ್ನ ಪತ್ನಿ (Wife) ಬಂದಿಲ್ಲವೆಂದು ಅವಾಂತರ ಸೃಷ್ಟಿಸಿದ್ದಾನೆ.

    ಹೊಸಕೋಟೆಯ ಬಸ್ ನಿಲ್ದಾಣದಲ್ಲಿ ಪತ್ನಿ ವಿರುದ್ಧ ಸಿಟ್ಟಿಗೆದ್ದ ಪತಿ ಬಸ್ ಟೈಯರ್‌ಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪರಿಣಾಮ ಹೊಸಕೋಟೆ (Hosakote) ಬಸ್ ನಿಲ್ದಾಣದಲ್ಲಿ ಅರ್ಧಗಂಟೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಕೆಲಕಾಲ ಪರದಾಟ ಅನುಭವಿಸಿದರು.

    ನನ್ನ ಹೆಂಡತಿ ಟ್ರಿಪ್ ಗೆ ಹೋದವಳು ಇನ್ನೂ ವಾಪಸ್ ಬಂದಿಲ್ಲ. ಸಿದ್ದರಾಮಯ್ಯ (Siddaramaiah) ಸರಿಯಿಲ್ಲ, ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ (Free Bus Ticket For Women) ರದ್ದುಗೊಳಿಸಿ. ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣವನ್ನು ತೆಗೆದು ವ್ಯಕ್ತಿ ಹಾಕಬೇಕೆಂದು ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಸ್ತ್ರೀ ಶಕ್ತಿ ಎಫೆಕ್ಟ್ – ಒಂದೇ ತಿಂಗಳಲ್ಲಿ ಹುಲಿಗೆಮ್ಮನ ಹುಂಡಿಯಲ್ಲಿ 1 ಕೋಟಿ ರೂ. ಕಾಣಿಕೆ ಸಂಗ್ರಹ

    ಕಂಠಪೂರ್ತಿ ಕುಡಿದಿರುವ ವ್ಯಕ್ತಿ ತೂರಾಡಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. ಅಲ್ಲದೆ ಬಸ್ ಟೈಯರ್‍ಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ನೆರೆದ ಜನ ಆತನನ್ನು ರಕ್ಷಣೆ ಮಾಡಿದ್ದಾರೆ. ನಂತರ ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಂದೂವರೆ ವರ್ಷದ ಮಗಳನ್ನು ಬಿಟ್ಟು 10 ದಿನ ಟ್ರಿಪ್ ಹೋದ ತಾಯಿ- ಮಗು ಸಾವು

    ಒಂದೂವರೆ ವರ್ಷದ ಮಗಳನ್ನು ಬಿಟ್ಟು 10 ದಿನ ಟ್ರಿಪ್ ಹೋದ ತಾಯಿ- ಮಗು ಸಾವು

    ನ್ಯೂಯಾರ್ಕ್: ಪಾಪಿ ತಾಯಿಯೊಬ್ಬಳು ತನ್ನ ಎಂಜಾಯ್‍ಮೆಂಟ್‍ಗಾಗಿ ಒಂದೂವರೆ ವರ್ಷದ ಮಗಳನ್ನು ಮನೆಯಲ್ಲಿ ಏಕಾಂಗಿಯಾಗಿ ಬಿಟ್ಟು 10 ದಿನಗಳ ಕಾಲ ಟ್ರಿಪ್ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಅಮೆರಿಕಾ (America) ದಲ್ಲಿ ನಡೆದಿದೆ.

    ಹೆಣ್ಣು ಮಗು ಸಾವನ್ನಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು ಕ್ರಿಸ್ಟಲ್ ಎ.ಕ್ಯಾಂಡೆಲಾರಿಯೊ (31) (Kristel Candelario)ಳನ್ನು ಬಂಧಿಸಿದ್ದಾರೆ. ಮೃತ ದುರ್ದೈವಿ ಮಗುವನ್ನು ಜೈಲಿನ್ (16 ತಿಂಗಳು) (Jailyn) ಎಂದು ಗುರುತಿಸಲಾಗಿದೆ.

    ಏನಿದು ಪ್ರಕರಣ..?: ಅಮೆರಿಕಾದ ಓಹಿಯೋ ನಿವಾಸಿ ಕ್ರಿಸ್ಟಲ್ ತನ್ನ ಹೆಣ್ಣು ಮಗು ಜೈಲಿನ್ ಳನ್ನು 10 ದಿನಗಳ ಕಾಲ ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟಿದ್ದಳು. ತನ್ನ ಮಗುವನ್ನು ನೋಡಿಕೊಳ್ಳಿ ಎಂದು ಪಕ್ಕದ ಮನೆಯವರಲ್ಲಿ ಹೇಳಿದ್ದಳು. ಆದರೆ ಆಕೆ ಟ್ರಿಪ್ ಹೊರಡುವಾಗ ಯಾರಿಗೂ ಕರೆ ಮಾಡಲಿಲ್ಲ. ಹೀಗಾಗಿ ಮಗುವನ್ನು ಆಕೆ ಕರೆದುಕೊಂಡು ಹೋಗಿರಬಹುದು ಎಂದು ನೆರೆಮನೆಯವರು ಸುಮ್ಮನಿದ್ದರು. ಆದರೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಗು ಹೊಟ್ಟೆಗೆ ಏನೂ ಇಲ್ಲದೆ ಮೃತಪಟ್ಟಿದೆ. ಇದನ್ನೂ ಓದಿ: ಗಗನಯಾತ್ರಿಗಳ ಮೂತ್ರ, ಬೆವರಿನಿಂದಲೇ ಕುಡಿಯುವ ನೀರಿನ ಉತ್ಪಾದನೆ – ಬಾಹ್ಯಾಕಾಶದಲ್ಲಿ ಮಹತ್ವದ ಸಂಶೋಧನೆ

    ಇತ್ತ ಟ್ರಿಪ್ ಮುಗಿಸಿ ಅಂದರೆ ಜೂನ್ 16 ರಂದು ಮನೆಗೆ ವಾಪಸ್ ಬಂದು ನೋಡಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಾಸಿಗೆಯಲ್ಲಿಯೇ ಮಲ-ಮೂತ್ರ ಮಾಡಿ ಅದರ ಮೇಲೆಯೇ ಮಲಗಿರುವಂತೆ ಕಂಡಿತು. ಇದರಿಂದ ಆತಂಕಗೊಂಡ ಕ್ರಿಸ್ಟಲ್ ಕೂಡಲೇ 911ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಗುವನ್ನು ನೋಡಿದಾಗ ಅದು ಮೃತಪಟ್ಟಿರುವುದು ಬಯಲಾಯಿತು.

    ಕ್ರಿಸ್ಟಲ್ ಒಬ್ಬಂಟಿಯಾಗಿ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗುವುದು ಇದು ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಆಕೆ ಮಗುವನ್ನು ಬಿಟ್ಟು ಹೋಗಿದ್ದಾಳೆ. ಮಗುವನ್ನು ಒಬ್ಬಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗದಂತೆ ಸಾಕಷ್ಟು ಬಾರಿ ಹೇಳಿದ್ದೇವೆ. ಆದರೆ ಆಕೆ ನಮ್ಮ ಮಾತನ್ನು ಕೇಳುತ್ತಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಪೊಲೀಸರ ಬಳಿ ದೂರಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಸಂಬಂಧ ತಾಯಿ ಕ್ರಿಸ್ಟಲ್ ಕ್ಯಾಂಡೆಲಾರಿಯೊ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಮಗನೊಂದಿಗೆ ನಿಖಿಲ್ ಕುಮಾರಸ್ವಾಮಿ ಜಾಲಿ ಟ್ರಿಪ್‌

    ಮಗನೊಂದಿಗೆ ನಿಖಿಲ್ ಕುಮಾರಸ್ವಾಮಿ ಜಾಲಿ ಟ್ರಿಪ್‌

    ಸಿನಿಮಾ ಮತ್ತು ರಾಜಕಾರಣದ ಮಧ್ಯೆ ಕೊಂಚ ಬಿಡುವು ತಗೆದುಕೊಂಡು ಮಗನೊಂದಿಗೆ ಟ್ರೀಪ್ ಗೆ ಹೋಗಿದ್ದಾರೆ ನಟ, ಜೆಡಿಎಸ್ ಯುವ ಮೋರ್ಚಾ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ. ಬೀಚ್ ವೊಂದರಲ್ಲಿ ಮಗನನ್ನು ಮೇಲಕ್ಕೆ ಹಿಡಿದುಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿಖಿಲ್, ಆ ಫೋಟೋಗೆ ‘ಲವ್ ಯೂ ಮಗನೆ’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ : ಜೇಮ್ಸ್ ಟೀಮ್ ಮೊದಲೇ ಈ ಕೆಲಸ ಮಾಡಬೇಕಿತ್ತು : ನಟ ಶಿವರಾಜ್ ಕುಮಾರ್

    ಸದ್ಯ ನಿಖಿಲ್ ಕುಮಾರ್ ಸ್ವಾಮಿ ಎರಡು ದೋಣಿಯ ಮೇಲೆ ಪಯಣ ಮಾಡುತ್ತಿದ್ದಾರೆ. ಒಂದು ಕಡೆ ಅವರ ಹೊಸ ಸಿನಿಮಾ ಒಡೆಯರ್ ಘೋಷಣೆಯಾಗಿದೆ. ಈ ಕಡೆ ಪಕ್ಷ ಸಂಘಟಿಸುವ ಹೊಣೆಯನ್ನು ಹೊತ್ತಿದ್ದಾರೆ. ಹಾಗಾಗಿ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ ನಿಖಿಲ್ ಗುರುತರ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ : ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ

    ನಿಖಿಲ್ ಅವರ ಹುಟ್ಟು ಹಬ್ಬದ ದಿನದಂದು ಹೊಸ ಸಿನಿಮಾ ಘೋಷಣೆಯಾಗಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದೆ ಚಿತ್ರತಂಡ. ಈ ಸಿನಿಮಾ ಕೂಡ ಅದ್ದೂರಿಯಾಗಿ ಮೂಡಿ ಬರುವುದರಿಂದ, ಚಿತ್ರಕ್ಕೂ ಅವರು ಟೈಮ್ ಕೊಡಬೇಕಿದೆ. ಈ ಎಲ್ಲದರ ಮಧ್ಯೆ ಕುಟುಂಬವನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ನಿಖಿಲ್. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ

    ನಿಖಿಲ್ ರಾಜಕಾರಣ ಮತ್ತು ಸಿನಿಮಾ ರಂಗ ಎರಡರಲ್ಲೂ ಸೆಣಸಬೇಕಿದೆ. ಈ ಬಾರಿಯೂ ಅವರು ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುವ ಸುದ್ದಿಯಿದೆ. ವಿಧಾನ ಸಭೆ ಚುನಾವಣೆಗೆ ಅವರು ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲೂ ಸಾಕಷ್ಟು ಪೈಪೋಟಿ ಇದೆ. ಎರಡರಲ್ಲೂ ಅವರು ಸಖತ್ ಫೈಟ್ ಮಾಡಬೇಕು. ಈ ಎಲ್ಲ ಟೆನ್ಷನ್ ಮಧ್ಯೆ ಜಾಲಿಯಾಗಿ ಮಗನೊಂದಿಗೆ ಸಮಯ ಕಳೆಯುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ.

  • ಮಂಜು ಪಾವಗಡ ಜೊತೆ ಶುಭಾ ಮತ್ತೊಮ್ಮೆ ಟ್ರಿಪ್

    ಮಂಜು ಪಾವಗಡ ಜೊತೆ ಶುಭಾ ಮತ್ತೊಮ್ಮೆ ಟ್ರಿಪ್

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಸ್ಪರ್ಧಿಗಳಾದ ನಟಿ ಶುಭಾ ಪೂಂಜಾ ಹಾಗೂ ಮಂಜು ಪಾವಗಡ ಟ್ರಿಪ್ ಹೊಡೆಯುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಬಿಗ್‍ಬಾಸ್ ಸೀಸನ್-8ರಲ್ಲಿ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸಿದ್ದ ಇವರು ದೊಡ್ಮನೆಯಲ್ಲಿ ಎಷ್ಟು ಒಳ್ಳೆಯ ಸ್ನೇಹಿತರಾಗಿದ್ದರೋ ಹಾಗೆಯೇ ಕಾರ್ಯಕ್ರಮ ಮುಗಿದ ನಂತರ ಕೂಡ ಅಷ್ಟೇ ಬೆಸ್ಟ್ ಫ್ರೆಂಡ್ಸ್ ಈಗಲೂ ಇದ್ದಾರೆ. ಈ ಹಿಂದೆ ಕಿಟ್ಟಿ ಪಾರ್ಟಿ, ಬರ್ತ್‍ಡೇ ಪಾರ್ಟಿ, ಹಬ್ಬ ಸಮಾರಂಭಗಳಲ್ಲಿ ಆಗಾಗ ಭೇಟಿಯಾಗುತ್ತಿದ್ದ ಶುಭಾ ಪೂಂಜಾ ಹಾಗೂ ಮಂಜು ಪಾವಗಡ ಇದೀಗ ಜಾಲಿಯಾಗಿ ಟ್ರಿಪ್ ಹೊಡೆಯುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಪುತ್ಥಳಿಗೆ ಮುತ್ತಿಟ್ಟು ರಾಘವೇಂದ್ರ ರಾಜ್‍ಕುಮಾರ್ ಭಾವುಕ

    shubha poonja

    ಇಂದು ಶುಭಾ ಪೂಂಜಾ, ಅವರ ಭಾವಿ ಪತಿ ಸುಮಂತ್, ಮಂಜು ಪಾವಗಡ, ಹಾಸ್ಯ ಕಲಾವಿದ ರಾಘವೇಂದ್ರ ಅವರು ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇನ್ನೂ ಈ ಫೋಟೋವನ್ನು ಶುಭಾ ಪೂಂಜಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಆಶೀರ್ವಾದ ಪಡೆದುಕೊಳ್ಳಲು ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿದ್ದೇವೆ. ಜೊತೆಗೆ ಯಾಣ, ಕುಮಟಾ ಮತ್ತು ಗೋಕರ್ಣಕ್ಕೆ ಒಂದು ಸಣ್ಣ ಪ್ರವಾಸ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪಂಕಜ್

     

    View this post on Instagram

     

    A post shared by shubha Poonja . (@shubhapoonja)

    ಇಷ್ಟೇ ಅಲ್ಲದೇ ಶುಭಾ ಪೂಂಜಾ ಕುದುರೆ ಸವಾರಿ ಮಾಡುತ್ತಿರುವ, ಸಮಂತ್, ಮಂಜು ಹಾಗೂ ರಾಘವೇಂದ್ರ ಅವರೊಟ್ಟಿಗೆ ಸಮುದ್ರದಲ್ಲಿ ಬೋಟ್‍ನಲ್ಲಿ ಹೋಗುತ್ತಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

  • ಶುಭಾ ಪೂಂಜಾಗೆ ಹುಟ್ಟುಹಬ್ಬದ ಸಂಭ್ರಮ – ಚಿನ್ನಿಬಾಂಬ್ ಜೊತೆ ಫೋಟೋ ಶೇರ್

    ಶುಭಾ ಪೂಂಜಾಗೆ ಹುಟ್ಟುಹಬ್ಬದ ಸಂಭ್ರಮ – ಚಿನ್ನಿಬಾಂಬ್ ಜೊತೆ ಫೋಟೋ ಶೇರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶುಭಾ ಪೂಂಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಿಗ್‍ಬಾಸ್ ಮನೆಯಿಂದ ಕಳೆದ ವಾರವಷ್ಟೇ ಎಲಿಮಿನೇಟ್ ಆದ ಶುಭಾ ಪೂಂಜಾ ತಮ್ಮ ಭಾವಿ ಪತಿ ಜೊತೆ ಟ್ರಿಪ್‍ಗೆ ಹಾರಿದ್ದಾರೆ.

     

    ಬಿಗ್‍ಬಾಸ್ ಮನೆಯಿಂದ ಹೊರಬಂದ ಶುಭಾ ಪೂಂಜಾ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಜಾಲಿ ಮೂಡ್‍ನಲ್ಲಿ ತಮ್ಮ ಭಾವಿ ಪತಿ ಜೊತೆ ಪ್ರವಾಸ ಬೆಳೆಸಿದ್ದು, ಸುಮಂತ್ ಜೊತೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಫೋಟೋದಲ್ಲಿ ಬೀಚ್ ಬಳಿ ಶುಭಾ ಹಾಗೂ ಸುಮಂತ್ ಕಾಣಿಸಿಕೊಂಡಿದ್ದು ತಮ್ಮ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ನಿಮ್ಮೆಲ್ಲರ ಬರ್ತ್‍ಡೇ ವಿಶಸ್‍ಗೆ ತುಂಬಾನೇ ಥ್ಯಾಂಕ್ಯು. ನಿಮ್ಮೆಲ್ಲರ ಶುಭಾಶಯಗಳನ್ನು ಓದುತ್ತಿದ್ದೇನೆ. ಎಲ್ಲರಿಗೂ ತುಂಬಾ ಧನ್ಯವಾದ. ಅದರಲ್ಲಿಯೂ ಮುದ್ದಾದ ವೀಡಿಯೋಗಳನ್ನು ಮಾಡಿದ ನನ್ನ ಎಲ್ಲಾ ಮುದ್ದಾದ ಅಭಿಮಾನಿಗಳಿಗೆ ವಿಶೇಷವಾದ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಕಳೆದ ವಾರವಷ್ಟೇ ಬಿಗ್‍ಬಾಸ್ ಮನೆಯಿಂದ ಹೊರಬಂದ ಶುಭಾ ಪೂಜಾಗೆ ವಾಟ್ ನೆಕ್ಷ್ಟ್ ಎಂದು ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದರು. ಈ ವೇಳೆ ಶುಭಾ ಈ ವಾರ ನನ್ನ ಬರ್ತ್‍ಡೇ ಇದೆ. ಹಾಗಾಗಿ ನನ್ನ ಫ್ರೆಂಡ್ಸ್ ಜೊತೆ ಔಟ್ ಆಫ್ ಸ್ಟೇಷನ್‍ಗೆ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿದ್ದೇನೆ ಎಂದಿದ್ದರು. ಆಗ ಸುದೀಪ್ ಬರ್ತ್‍ಡೇಯನ್ನು ಸೆಲೆಬ್ರೆಟ್ ಮಾಡಿ ಆದರೆ ಏನಾದರೂ ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ ಫಿನಾಲೆಗೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

    ನಂತರ 6 ತಿಂಗಳು ಫಿಯಾನ್ಸೆ ನನಗೆ ಸಪೋರ್ಟ್ ಮಾಡಿ ಬಿಗ್‍ಬಾಸ್ ಮನೆಗೆ ಕಳುಹಿಸಿ 6 ತಿಂಗಳ ಕಾಲ ಕಾದಿದ್ದಾರೆ. ಅವರೇ ನನಗೆ ಬಿಗ್‍ಬಾಸ್ ಮನೆಗೆ ಹೋಗು ಎಂದಿದ್ದರು. ನನಗೋಸ್ಕರ ಫಸ್ಟ್ ಇನ್ನಿಂಗ್ಸ್ ಕಾದು ಮತ್ತೆ ಸೆಕೆಂಡ್ ಇನ್ನಿಂಗ್ಸ್ ಕಾದಿದ್ದಾರೆ. ಸದ್ಯ ಇದೀಗ ಮದುವೆಯಾಗುವುದಾಗಿ ಬಹಿರಂಗ ಪಡೆಸಿದ್ದರು. ಇದನ್ನೂ ಓದಿ:ಮಂಜು ಒಬ್ಬ ರಿಯಲ್ ಎಂಟರ್ಟೈನರ್ – ಮಂಜುಗೆ ಮನೆಮಂದಿಯ ಶುಭ ಹಾರೈಕೆಗಳು

     

    View this post on Instagram

     

    A post shared by shubha Poonja . (@shubhapoonja)

  • ಸಾಯುವ ಮುನ್ನ ಮಾಲೀಕನೊಂದಿಗೆ ಶ್ವಾನ ಟ್ರಿಪ್ – ಫೋಟೋ ವೈರಲ್

    ಸಾಯುವ ಮುನ್ನ ಮಾಲೀಕನೊಂದಿಗೆ ಶ್ವಾನ ಟ್ರಿಪ್ – ಫೋಟೋ ವೈರಲ್

    ಲ್ಯುಕೇಮಿಯಾ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಶ್ವಾನವನ್ನು ಅದರ ಮಾಲೀಕ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಶ್ವಾನಪ್ರಿಯರು ಈ ಕಥೆ ಕೇಳಿ ಭಾವುಕರಾಗಬಹುದು. ಅಲ್ಲದೇ ಕಣ್ಣೀರು ಸಹ ತರಿಸಬಹುದು, ಆದರೆ ಈ ಕಥೆಯನ್ನು ನೀವು ಕೇಳಲೇಬೇಕು. 10 ವರ್ಷದ ಲ್ಯಾಬ್ರಡೂಡ್ಲ್ ಎಂಬ ಮಾಂಟಿ ಹೆಸರಿನ ಶ್ವಾನವೊಂದು ಲ್ಯುಕೇಮಿಯಾ ಕಾಯಿಲೆ ವಿರುದ್ಧ ತಿಂಗಳು ಗಟ್ಟಲೇ ಹೋರಾಡಿ ನಿಧನ ಹೊಂದಿದೆ. ಆದರೆ ಈ ಮುನ್ನ ಶ್ವಾನದ ಮಾಲೀಕ ಕಾರ್ಲೋಸ್ ಫ್ರೆಸ್ಕೊ ತನ್ನ ಶ್ವಾನದೊಂದಿಗೆ ಕೊನೆಯಾದಾಗಿ ಟ್ರಿಪ್‍ಗೆ ಹೋಗಿ ಅದರ ಜೊತೆ ಕಾಲ ಕಳೆದ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಅನಾರೋಗ್ಯದಿಂದಾಗಿ ಮಾಂಟಿಗೆ ನಡೆಯಲು ಸಾಧ್ಯವಾಗದ ಕಾರಣ, ಕಾರ್ಲೋಸ್ ಮಾಂಟಿಯನ್ನು ವೇಲ್ಸ್‍ನ ಬ್ರೆಕಾನ್‍ನಲ್ಲಿರುವ ತಮ್ಮ ನೆಚ್ಚಿನ ಪವರ್ತಕ್ಕೆ ವೀಲ್ ಚೇರ್ ಮುಖಾಂತರ, ಮಾಂಟಿಯನ್ನು ಕರೆದುಕೊಂಡು ಹೋಗಿದ್ದರು. ಈ ಮುನ್ನ ಕಾರ್ಲೋಸ್ ಹಾಗೂ ಮಾಂಟಿ ಜೊತೆಗೆ ಹಲವಾರು ಬಾರಿ ಟ್ರಿಪ್‍ಗೆ ಒಟ್ಟಿಗೆ ಹೋಗಿದ್ದೆವು. ಆದರೆ ಈ ಬಾರಿ ಮಾಂಟಿಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರಿಂದ ನಾನು ಅವನೊಂದಿಗೆ ಹೋಗುತ್ತಿರುವ ಕೊನೆ ಟ್ರಿಪ್ ಎಂದು ನನಗೆ ಮೊದಲೇ ಗೊತ್ತಿರುವುದಾಗಿ ತಿಳಿಸಿದ್ದರು. 18 ತಿಂಗಳ ಹಿಂದೆ ಮಾಂಟಿಗೋ ಕೀಮೋಥೆರಪಿ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದನು. ಆದರೆ ಕೊನೆಗೆ ಚಿಕಿತ್ಸೆ ಫಲಾಕಾರಿಯಾಗಲಿಲ್ಲ.

    ಅಲ್ಲದೇ ನಾನು ಅವನು ಪ್ರವಾಸಕ್ಕೆ ಹೋದಾಗ ಅಲ್ಲಿ ಕೆಲವು ಸ್ಥಳೀಯರು ಮಾಂಟಿ ಕುಳಿತಿದ್ದ ವೀಲ್ ಚೇರ್‍ನನ್ನು ತಳ್ಳುತ್ತಾ ಅವನೊಂದಿಗೆ ಸುಂದರವಾದ ಕಾಲ ಕಳೆದರು. ಈ ವೇಳೆ ಮಾಂಟಿ ದುರ್ಬಲನಾಗಿದ್ದರೂ ಅನೇಕ ಮಂದಿಗೆ ಹತ್ತಿರವಾದ, ಎಲ್ಲರ ಗಮನ ಸೆಳೆಯುವುದರ ಜೊತೆಗೆ ಅನೇಕ ಮಂದಿ ಅವನಿಗೆ ಶುಭ ಹಾರೈಸಿದರು. ಪರ್ವದ ಮೇಲಿದ್ದ ಮಂದಿ ಇವನ ಕಥೆಯನ್ನು ಕೇಳಿ ದುಃಖಿತರಾಗಿದ್ದರು. ಇದನ್ನೂ ಓದಿ:ಮೇಕೆದಾಟು ಯೋಜನೆ – ಮೂರು ಮಹತ್ವದ ನಿರ್ಣಯಗಳಿಗೆ ತಮಿಳುನಾಡು ಅಂಗೀಕಾರ

  • ಚಿಕ್ಕಣ್ಣ ಬ್ಯಾಟಿಂಗ್, ಡಿ ಬಾಸ್ ಫೀಲ್ಡಿಂಗ್ – ಜಾಲಿ ಮೂಡ್‍ನಲ್ಲಿ ‘ಗಜಪಡೆ’

    ಚಿಕ್ಕಣ್ಣ ಬ್ಯಾಟಿಂಗ್, ಡಿ ಬಾಸ್ ಫೀಲ್ಡಿಂಗ್ – ಜಾಲಿ ಮೂಡ್‍ನಲ್ಲಿ ‘ಗಜಪಡೆ’

    ಬೆಂಗಳೂರು: ಸ್ನೇಹಿತರ ಜೊತೆ ಮೂರು ದಿನಗಳ ಕಾಲ ಪ್ರವಾಸಕ್ಕೆ ಹೋಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಡಿಬಾಸ್ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

    ಮಂಗಳವಾರ ಡಿಬಾಸ್ ದರ್ಶನ್ ಅವರು ತಮ್ಮ ಚಿತ್ರರಂಗದ ಕೆಲ ಸ್ನೇಹಿತರು ಮತ್ತು ಬಾಲ್ಯದ ಗೆಳೆಯರ ಜೊತೆ ಮಡಿಕೇರಿಗೆ ಮೂರು ದಿನಗಳ ಪ್ರವಾಸಕ್ಕೆ ಹೋಗಿದ್ದರು. ಬೆಂಗಳೂರಿನ ಆರ್.ಆರ್ ನಗರದ ನಿವಾಸದಿಂದ ಹೊರಟ್ಟಿದ್ದ ದರ್ಶನ್ ಮತ್ತು ಸ್ನೇಹಿತರು, ಟಿ ನರಸೀಪುರದ ತೂಗದೀಪ ಫಾರ್ಮ್ ಹೌಸ್‍ಗೆ ಹೋಗಿ ಅಲ್ಲಿಂದ ಮಡಿಕೇರಿಗೆ ಪ್ರಯಾಣ ಬೆಳೆಸಿದ್ದರು.

    ಇಂದು ಬೆಳಗ್ಗೆ ಸ್ನೇಹಿತರ ಜೊತೆ ಜಾಲಿಯಾಗಿ ಕ್ರಿಕೆಟ್ ಆಡಿರುವ ದರ್ಶನ್, ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿ ಸಂತೋಷ ಪಟ್ಟಿದ್ದಾರೆ. ಸದ್ಯ ಡಿಬಾಸ್ ಅಭಿಮಾನಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ದರ್ಶನ್ ಅವರು ಫೀಲ್ಡಿಂಗ್ ಮಾಡುತ್ತಿದ್ದು, ಧರ್ಮ ಕೀರ್ತಿ ರಾಜ್ ಅವರು ಬೌಲಿಂಗ್ ಮಾಡುತ್ತಿದ್ದಾರೆ. ಈ ವೇಳೆ ಹಾಸ್ಯ ನಟ ಚಿಕ್ಕಣ್ಣ ಅವರು ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ. ತಾವು ತಂಗಿರುವ ರೆಸಾರ್ಟ್ ಮುಂದೆ ಡಿ ಬಾಸ್ ಸ್ನೇಹಿತರು ಕ್ರಿಕೆಟ್ ಆಡಿದ್ದಾರೆ.

    ಮಂಗಳವಾರ ಆರ್.ಆರ್ ನಗರದ ನಿವಾಸದಿಂದ ಸಾರಥಿಯ ನೇತೃತ್ವದಲ್ಲೇ ನಟ ಚಿಕ್ಕಣ್ಣ, ನಿರ್ಮಾಪಕ ಉಮಾಪತಿ, ಪ್ರಜ್ವಲ್ ದೇವರಾಜ್, ಪ್ರಣಮ್ ದೇವರಾಜ್ ಮತ್ತು ಚಿಂಗಾರಿಯ ಬಾಲ್ಯದ ಗೆಳೆಯರು ಮಡಿಕೇರಿ ಕಡೆ ಹೋಗಿದ್ದರು. ಮೂರು ದಿನಗಳ ಕಾಲ ಡಿಬಾಸ್ ಮತ್ತವರ ಸ್ನೇಹಿತರು ಅಲ್ಲೇ ತಂಗಲಿದ್ದಾರೆ. ದರ್ಶನ್ ಅವರು ಟ್ರಿಪ್ ಹೊರಟಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.

    ದರ್ಶನ್ ಅವರ ನಿವಾಸದ ಮುಂದೆ ಸುಮಾರು 15ಕ್ಕೂ ಹೆಚ್ಚಿನ ಬೈಕ್‍ಗಳು ನಿಂತಿರುವ ಫೋಟೋಗಳು ಮತ್ತು ಅವರು ಮನೆಯಿಂದ ಸೂಪರ್ ಬೈಕಿನಲ್ಲಿ ಹೋಗುತ್ತಿರುವ ವಿಡಿಯೋಗಳನ್ನು ಅವರ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಡಿ ಬಾಸ್ ತಮ್ಮ ನೀಲಿ ಬಣ್ಣದ ಬೈಕಿನಲ್ಲಿ ಕಪ್ಪು ಜಾಕೆಟ್ ತೊಟ್ಟು ರೈಡ್‍ಗೆ ಹೋಗಿದ್ದರು. ಇದರ ಜೊತೆಗೆ ಪ್ರಜ್ವಲ್ ದೇವರಾಜ್ ಅವರು ತಾವು ರೈಡಿಗೆ ಸಿದ್ಧವಾಗಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

  • ಸ್ನೇಹಿತರ ಜೊತೆ ಟ್ರಿಪ್ – ಈಜಲು ಫಾಲ್ಸ್‌ಗೆ ಧುಮುಕಿದವ ನೀರುಪಾಲು

    ಸ್ನೇಹಿತರ ಜೊತೆ ಟ್ರಿಪ್ – ಈಜಲು ಫಾಲ್ಸ್‌ಗೆ ಧುಮುಕಿದವ ನೀರುಪಾಲು

    – ಯುವಕ ನೀರಿನಲ್ಲಿ ಮುಳುಗುವ ದೃಶ್ಯ ಮೊಬೈಲ್‍ನಲ್ಲಿ ಸೆರೆ

    ಮಂಡ್ಯ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಣಾಳು ಫಾಲ್ಸ್ ನಲ್ಲಿ ಜರುಗಿದೆ.

    ಬೆಂಗಳೂರಿನ ಸಂಜಯ್ (22) ಮೃತ ದುರ್ದೈವಿ ಯುವಕ. ಬೆಂಗಳೂರಿನಿಂದ ತನ್ನ ನಾಲ್ಕು ಮಂದಿ ಸ್ನೇಹಿತರೊಂದಿಗೆ ಬೈಕಿನಲ್ಲಿ ಇಂದು ಪಿಕ್‍ನಿಕ್‍ಗೆ ಬಂದಿದ್ದಾರೆ. ಸಾಕಷ್ಟು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದ ಈ ಯುವಕರ ತಂಡ ಅಂತಿಮವಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಣಾಳು (ಬೆಂಕಿ) ಫಾಲ್ಸ್ ಗೆ ಬಂದಿದ್ದಾರೆ.

    ಕೆಲ ಕಾಲ ಫಾಲ್ಸ್ ಬಳಿ ನಿಂತು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ನಂತರ ಸಂಜಯ್ ಈಜು ಹೊಡೆಯಲು ಫಾಲ್ಸ್ ನೀರಿಗೆ ಧುಮುಕಿದ್ದಾನೆ. ಈ ವೇಳೆ ಆತನ ಸ್ನೇಹಿತರು ಈಜು ಹೊಡೆಯುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವೇಳೆ ನೀರಿನಲ್ಲಿ ಸುಸ್ತಾದ ಕಾರಣ ಸಂಜಯ್‍ಗೆ ಈಜಾಡಾಲು ಸಾಧ್ಯವಾಗಿಲ್ಲ. ಹೀಗಾಗಿ ಸಂಜಯ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ದೃಶ್ಯ ಸ್ನೇಹಿತರ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಈ ವಿಷಯ ತಿಳಿದ ಪೋಷಕರು ಕೂಡಲೇ ಮಳವಳ್ಳಿ ತಾಲೂಕು ಆಸ್ಪತ್ರೆಗೆ ಬಂದಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಯ ಬಳಿಕ ಸಂಜಯ್ ಮೃತ ದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಟುಂಬದವರ ಜೊತೆ ದಿಗಂತ್-ಐಂದ್ರಿತಾ ಜಾಲಿ ಟ್ರಿಪ್

    ಕುಟುಂಬದವರ ಜೊತೆ ದಿಗಂತ್-ಐಂದ್ರಿತಾ ಜಾಲಿ ಟ್ರಿಪ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್ ದೂದ್‍ಪೇಡ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳಿನಿಂದ ತಮ್ಮ ಕುಟುಂಬದವರ ಜೊತೆ ಮನೆಯಲ್ಲಿಯೇ ಕಾಲಕಳೆದಿದ್ದರು. ಇದೀಗ ಲಾಕ್‍ಡೌನ್ ಸಡಿಲಿಕೆಯ ನಂತರ ಕುಟುಂಬದವರ ಜೊತೆ ಔಟಿಂಗ್ ಹೋಗಿದ್ದಾರೆ.

    ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕರ್ನಾಟಕದ ಸುಂದರ ತಾಣಗಳಲ್ಲಿ ಒಂದಾಗಿರುವ ಕೂರ್ಗ್ ಗೆ ಕುಟುಂಬದವರ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. ತಾವು ಪ್ರವಾಸಕ್ಕೆ ಹೋಗಿರುವ ಫೋಟೋಗಳನ್ನು ನಟಿ ಐಂದ್ರಿತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಕೊರೊನಾ ಆತಂಕದ ನಡುವೆಯೂ ಹೊರಬಂದು ಪ್ರಕೃತಿ ಸೌಂದರ್ಯವನ್ನು ದಿಗಂತ್ ಮತ್ತು ಐಂದ್ರಿತಾ ರೇ ಎಂಜಾಯ್ ಮಾಡುತ್ತಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ಕ್ಯಾನ್ಸಲ್ ಆಗಿತ್ತು. ಹೀಗಾಗಿ ಇಷ್ಟು ದಿನಗಳನ್ನು ಮನೆಯಲ್ಲಿಯೇ ಇದ್ದರು. ಈಗ ಮನೆಯಿಂದ ಹೊರ ಬಂದು ಕುಟುಂಬ ಮತ್ತು ಪ್ರಕೃತಿಯ ಸೌಂದರ್ಯದ ಮಧ್ಯೆ ರಿಲ್ಯಾಕ್ಸ್ ಮಾಡುತ್ತಿದ್ದಾರೆ.

    https://www.instagram.com/p/CBxbnALFpv4/?igshid=ybw4dnn7bw2b

    ಪೋಷಕರು ಕೂಡ ಈ ಟ್ರಿಪ್‍ನಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಎಂದರೆ ಈ ಜೋಡಿ ತಮ್ಮ ಟ್ರಿಪ್‍ಗೆ ಎರಡು ನಾಯಿಗಳನ್ನು ಕೂಡ ಕರೆದುಕೊಂಡು ಹೋಗಿದ್ದಾರೆ. ಐಂದ್ರಿತಾ ಮತ್ತು ದಿಗಂತ್‍ಗೆ ಟ್ರಿಪ್, ಟ್ರಕ್ಕಿಂಗ್ ಎಂದರೆ ತುಂಬಾ ಇಷ್ಟ. ಆದ್ದರಿಂದ ಈ ದಂಪತಿ ಆಗಾಗ ಜಾಲಿ ಟ್ರಿಪ್ ಹೋಗುತ್ತಿದ್ದರು. ಸದ್ಯಕ್ಕೆ ಲಾಕ್‍ಡೌನ್ ಸಡಿಲಿಕೆ ಆಗುತ್ತಿದ್ದಂತೆ ಪ್ರಕೃತಿ ಸೌಂದರ್ಯ ನೋಡಲು ಹೋಗಿದ್ದಾರೆ.

    ದಿಗಂತ್ ಹಾಗೂ ಐಂದ್ರಿತಾ ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಮೀಪವಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್ ನಲ್ಲಿ 2018 ಡಿಸೆಂಬರಿನಲ್ಲಿ ಈ ಜೋಡಿ ವಿವಾಹವಾಗಿದ್ದಾರೆ.

    https://www.instagram.com/p/CB3T6AEFkEz/?igshid=paozvkq63lrx

  • ಶೋಕಿಗಾಗಿ ಕಳ್ಳತನ- ಚಿನ್ನಾಭರಣ ಮಾರಿ ಗೋವಾ ಟ್ರಿಪ್ ಮಾಡುತ್ತಿದ್ದವರು ಅಂದರ್

    ಶೋಕಿಗಾಗಿ ಕಳ್ಳತನ- ಚಿನ್ನಾಭರಣ ಮಾರಿ ಗೋವಾ ಟ್ರಿಪ್ ಮಾಡುತ್ತಿದ್ದವರು ಅಂದರ್

    – 17 ಲಕ್ಷ ರೂ. ಮೌಲ್ಯ ಚಿನ್ನ, ಬೆಳ್ಳಿ, ವಜ್ರದ ಆಭರಣ ವಶ

    ಮೈಸೂರು: ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಸದಸ್ಯರನ್ನು ಮೈಸೂರು ಉದಯಗಿರಿ ಠಾಣೆಯ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ಮೂವರು ಖತರ್ನಾಕ್ ಮನೆಗಳ್ಳರು ಸೇರಿದಂತೆ 6 ಜನರ ಬಂಧಿಸಿದ್ದು, ಸೈಯದ್ ಅಲೀಂ (30) ಉಮ್ಮರ್ ಪಾಷಾ (30) ವಸೀಂ ಪಾಷಾ (27) ಬಂಧಿತ ಮನೆಗಳ್ಳರು. ಕಳುವು ಮಾಲುಗಳನ್ನು ಮಾರಾಟ ಮಾಡಲು ಸಹಕರಿಸಿದ ಮಂಜುನಾಥ್, ಆಧಿಲ್ ಪಾಷಾ ಹಾಗೂ ಅರ್ಧ ಬೆಲೆಗೆ ಚಿನ್ನಾಭರಣ ಖರೀದಿಸುತ್ತಿದ್ದ ದೇವೇಂದ್ರ ಸಿಂಗ್ ನನ್ನು ಬಂಧಿಸಲಾಗಿದೆ. ಒಟ್ಟು 7 ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

    ಬಂಧಿತರಿಂದ 11 ಲಕ್ಷ ರೂ. ಮೌಲ್ಯದ 220 ಗ್ರಾಂ. ಚಿನ್ನಾಭರಣ, 3 ಲಕ್ಷ ರೂ. ಮೌಲ್ಯದ 5 ಕೆ.ಜಿ. ಬೆಳ್ಳಿ ಪದಾರ್ಥಗಳು ಹಾಗೂ 3 ಲಕ್ಷ ರೂ. ಮೌಲ್ಯದ ಡೈಮಂಡ್ ಆಭರಣ, ಕೃತ್ಯಕ್ಕೆ ಬಳಸಿದ ಆಟೋ ಹಾಗೂ ಕಳವು ಮಾಲನ್ನು ಮಾರಾಟ ಮಾಡಿ ಖರೀದಿಸಿದ್ದ ಅಪಾಚಿ ಸ್ಕೂಟರ್ ನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ.

    ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಶೋಕಿಗಾಗಿ ಕಳವು ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಕಳವು ಮಾಡಿದ ಹಣದಿಂದ ಆರೋಪಿಗಳು ಗೋವಾ, ಮುಂಬೈಗೆ ತೆರಳಿ ಶೋಕಿ ಮಾಡುತ್ತಿದ್ದರು. ಈ ಹಿಂದೆ ಉದಯಗಿರಿ, ಮಂಡಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಜೈಲು ವಾಸ ಅನುಭವಿಸಿದ್ದರು. ಇದೀಗ ಉದಯಗಿರಿ ಇನ್ಸ್ ಪೆಕ್ಟರ್ ಪೂಣಚ್ಚ ಹಾಗೂ ಸಬ್ ಇನ್ಸ್ ಪೆಕ್ಟರ್ ಜೈ ಕೀರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.