Tag: ಟ್ರಿಂಕೋಮಲಿ ತೈಲ ಟ್ಯಂಕ್ ಫಾರ್ಮ್

  • ಭಾರತ – ಶ್ರೀಲಂಕಾ ಹೊಸ ಇಂಧನ ಒಪ್ಪಂದ

    ಭಾರತ – ಶ್ರೀಲಂಕಾ ಹೊಸ ಇಂಧನ ಒಪ್ಪಂದ

    ನವದೆಹಲಿ: ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಅಭಿವೃದ್ಧಿಯೊಂದನ್ನು ಕಾರ್ಯಗತಗೊಳಿಸುವ ಒಪ್ಪಂದ ನಡೆಸಿದೆ. ಟ್ರಿಂಕೋಮಲಿ ತೈಲ ಟ್ಯಾಂಕ್ ಫಾರ್ಮ್ ಅನ್ನು ಜಂಟಿಯಾಗಿ ಅಭಿವೃದ್ಧಿ ಪಡಿಸಲು ಗುರುವಾರ ಭಾರತ ಹಾಗೂ ಶ್ರೀಲಂಕಾ ಮಾತುಕತೆ ನಡೆಸಿದೆ.

    ಶ್ರೀಲಂಕಾ ಕ್ಯಾಬಿನೆಟ್ ಟ್ರಿಂಕೋಮಲಿ ಟ್ಯಾಂಕ್ ಫಾರ್ಮ್‌ಗಳ ಅಭಿವೃದ್ಧಿಗೆ ಒಪ್ಪಿಗೆ ನೀಡಿದೆ. ಇಂಧನ ಭದ್ರತೆಗೆ ಶ್ರೀಲಂಕಾದೊಂದಿಗಿನ ನಮ್ಮ ದ್ವಿಪಕ್ಷೀಯ ಸಹಕಾರ ಮುಖ್ಯವಾಗಿದೆ. ಟ್ರಿಂಕೋಮಲಿ ಟ್ಯಾಂಕ್ ಫಾರ್ಮ್‌ನ ಆಧುನೀಕರಣಕ್ಕೆ ಶ್ರೀಲಂಕಾ ಸರ್ಕಾರದೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ. ಇದು ಇಂಧನ ಸಂಗ್ರಹಣೆಯೊಂದಿಗೆ ದ್ವಿಪಕ್ಷೀಯ ಭದ್ರತೆ ಹೆಚ್ಚಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದರು. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಸೋಮವಾರ ನಡೆದ ವರ್ಷದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲು ಒಪ್ಪಂದ ನಡೆಸಿದೆ ಎಂದು ಸರ್ಕಾರಿ ಮಾಹಿತಿ ಇಲಾಖೆ ಹೊರಡಿಸಿದ ಮಾಹಿತಿಯಲ್ಲಿ ತಿಳಿಸಿದೆ.

    ಶ್ರೀಲಂಕಾ ಕ್ಯಾಬಿನೆಟ್ ಇತರ ಎರಡು ಪ್ರಸ್ತಾಪಗಳನ್ನು ಅಂಗೀಕರಿಸಿದೆ. ಅಶೋಕ್ ಲೇಲ್ಯಾಡ್ ಶ್ರೀಲಂಕಾಗೆ 500 ಹೊಸ ಬಸ್‌ಗಳನ್ನು ಒದಗಿಸುವ ಬಿಡ್ ಅನ್ನು ಗೆದ್ದಿದೆ ಹಾಗೂ ಶ್ರೀಲಂಕಾ ಪೊಲೀಸ್ ಪಡೆ ಮಹೀಂದ್ರಾ ಕಂಪನಿಯಿಂದ 750 ಜೀಪ್‌ಗಳನ್ನು ಖರೀದಿಸಲಿದೆ ಎಂದು ಶ್ರೀಲಂಕಾ ಇಲಾಖೆಯ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಇಂದು ರಾತ್ರಿ 8 ಗಂಟೆಯಿಂದ್ಲೇ ಸಿಗಲ್ಲ ಮದ್ಯ – ಎಣ್ಣೆ ಪಾರ್ಸೆಲ್‍ಗೂ ನೋ ಪರ್ಮಿಷನ್