Tag: ಟ್ರಾವಿಸ್ ಹೆಡ್

  • ಸ್ಫೋಟಕ ಶತಕ ಸಿಡಿಸಿ ಗ್ರೀನ್‌ ವಿಶೇಷ ಸಾಧನೆ – 19 ವರ್ಷಗಳ ಬಳಿಕ ಆಸೀಸ್‌ 2ನೇ ಗರಿಷ್ಠ ಮೊತ್ತ

    ಸ್ಫೋಟಕ ಶತಕ ಸಿಡಿಸಿ ಗ್ರೀನ್‌ ವಿಶೇಷ ಸಾಧನೆ – 19 ವರ್ಷಗಳ ಬಳಿಕ ಆಸೀಸ್‌ 2ನೇ ಗರಿಷ್ಠ ಮೊತ್ತ

    – ಅಗ್ರ ಮೂವರು ಬ್ಯಾಟರ್‌ಗಳಿಂದಲೂ ಸಿಡಿದ ಸೆಂಚುರಿ

    ಮೆಕೆ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ತಂಡ ಅಬ್ಬರಿಸಿ ಬೊಬ್ಬರಿದಿದೆ. ಅಕ್ರಮಾಂಕದ ಮೂವರು ಬ್ಯಾಟರ್‌ಗಳು ಶತಕ ಸಿಡಿಸುವ ಮೂಲಕ ಹರಿಣರ ಮೇಲೆ ಸವಾರಿ ಮಾಡಿದರು. ಭರ್ಜರಿ ಆಟದಲ್ಲಿ ಆಸೀಸ್‌ ಪರ ಒಟ್ಟು 18 ಸಿಕ್ಸರ್‌ ಹಾಗೂ 36 ಬೌಂಡರಿಗಳು ದಾಖಲಾದವು.

    ಆಸ್ಟ್ರೇಲಿಯಾ‌ದ ಮೆಕೆಯಲ್ಲಿರುವ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ ಕ್ರೀಡಾಂಗಣದಲ್ಲಿಂದು ನಡೆದ ಕೊನೇ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 431 ರನ್‌ ಗಳಿಸಿದೆ. ಇದು 19 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನ (ODI Cricket) ಇನ್ನಿಂಗ್ಸ್‌ವೊಂದರಲ್ಲಿ ಆಸೀಸ್‌ ಗಳಿಸಿದ‌ 2ನೇ ಗರಿಷ್ಠ ರನ್‌ ಆಗಿದೆ. 2006ರಲ್ಲಿ ದಕ್ಷಿಣ ಆಫಿಕಾ ವಿರುದ್ಧವೇ ಆಸ್ಟ್ರೇಲಿಯಾ 434 ರನ್‌ ಸಿಡಿಸಿತ್ತು. ಆದ್ರೆ ಆ ಪಂದ್ಯದಲ್ಲಿ ಸೋಲು ಕಂಡಿತ್ತು. ಇಂದಿಗೂ ಇದೊಂದು ಐತಿಹಾಸಿಕ ಪಂದ್ಯವಾಗಿದೆ. ಇದನ್ನೂ ಓದಿ: Retirement | ಎಲ್ಲ ಮಾದರಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ಗುಡ್‌ಬೈ

    ಆಸ್ಟ್ರೇಲಿಯಾ ಅತಿಹೆಚ್ಚು ರನ್‌ ಗಳಿಸಿದ ಟಾಪ್‌-5 ಇನ್ನಿಂಗ್ಸ್‌
    * 434 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – 2006 ರಲ್ಲಿ
    * 431 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – 2025 ರಲ್ಲಿ
    * 417 ರನ್‌ – ಅಫ್ಘಾನಿಸ್ತಾನದ ವಿರುದ್ಧ – 2015ರಲ್ಲಿ
    * 399 ರನ್‌ – ನೆದರ್ಲೆಂಡ್‌ ವಿರುದ್ಧ – 2023 ರಲ್ಲಿ
    * 392 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – 2023 ರಲ್ಲಿ

    ಗ್ರೀನ್‌ ಶೈನ್‌
    ಇನ್ನೂ ಆಸೀಸ್‌ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಕ್ಯಾಮರೂನ್‌ ಗ್ರೀನ್‌ (Cameron Green) ಕೇವಲ 47 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ಇದು ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ 2ನೇ ವೇಗದ ಶತಕದವೂ ಆಗಿದೆ. 2023ರಲ್ಲಿ ನೆದರ್ಲೆಂಡ್‌ ವಿರುದ್ಧ 40 ಎಸೆತಗಳಲ್ಲಿ ಶತಕ ಸಿಡಿಸಿದ ಮ್ಯಾಕ್ಸ್‌ವೆಲ್‌ ಅಗ್ರ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಲ್ಲ: ಸಚಿವ ಮನ್ಸುಖ್ ಮಾಂಡವಿಯಾ

    ಅಬ್ಬರಿಸಿ ಬೊಬ್ಬಿರಿದ ಆಸೀಸ್‌
    ಮೊದಲು ಬ್ಯಾಟಿಂಗ್‌ ಆರಂಭಿಸಿದ ಆಸೀಸ್‌ ಪರ ಟ್ರಾವಿಸ್‌ ಹೆಡ್‌ ಹಾಗೂ ಮಿಚೆಲ್‌ ಮಾರ್ಷ್‌ ಜೋಡಿ ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿತು. ಹೆಡ್‌ 103 ಎಸೆತಗಳಲ್ಲಿ 142 ರನ್‌ (5 ಸಿಕ್ಸರ್‌, 17 ಬೌಂಡರಿ) ಚಚ್ಚಿದ್ರೆ, ಮಾರ್ಷ್‌ 106 ಎಸೆತಗಳಲ್ಲಿ 100 ರನ್‌ (5 ಸಿಕ್ಸರ್‌, 6 ಬೌಂಡರಿ) ಬಾರಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಗ್ರೀನ್‌ ಕೇವಲ 47 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದರು. ಒಟ್ಟು 55 ಎಸೆತಗಳಲ್ಲಿ 118 ರನ್‌ (8 ಸಿಕ್ಸರ್‌, 6 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ಇದರೊಂದಿಗೆ ಅಲೆಕ್ಸ್‌ ಕ್ಯಾರಿ 37 ಎಸೆತಗಳಲ್ಲಿ ಅಜೇಯ 50 ರನ್‌ ಗಳಿಸಿ ಮಿಂಚಿದರು.

    ಸರಣಿ ಗೆದ್ದ ಆಫ್ರಿಕಾ
    ಆಸೀಸ್‌ ನೀಡಿದ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆಸೀಸ್‌ 135 ರನ್‌ ಗಳಿಗೆ 7 ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ಆದರೆ ಮೂರು ಪಂದ್ಯಗಳ ಸರಣಿಯಲ್ಲಿ ಆರಂಭಿಕ 2 ಪಂದ್ಯಗಳನ್ನ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಇದನ್ನೂ ಓದಿ: ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಅರ್ಜೆಂಟಿನಾದ ಫುಟ್‌ಬಾಲ್ ಆಟಗಾರ ಮೆಸ್ಸಿ

  • IPl 2025 | ರನ್‌ ಹೊಳೆ, ದಾಖಲೆಗಳ ಸುರಿಮಳೆ – ಇಲ್ಲಿದೆ ಐತಿಹಾಸಿಕ ದಾಖಲೆಗಳ ಪಟ್ಟಿ

    IPl 2025 | ರನ್‌ ಹೊಳೆ, ದಾಖಲೆಗಳ ಸುರಿಮಳೆ – ಇಲ್ಲಿದೆ ಐತಿಹಾಸಿಕ ದಾಖಲೆಗಳ ಪಟ್ಟಿ

    2008ಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ (Ipl) ಲೀಗ್ ಇದೀಗ 18ನೇ ಆವೃತ್ತಿಗೆ ಕಾಲಿಟ್ಟಿದೆ. 2007ರಲ್ಲಿ ಟಿ20 ವಿಶ್ವಕಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ವಿಶ್ವವಿಜಯಿಯಾದಾಗ ಬಿಸಿಸಿಐ ತಲೆಗೆ ಇಂತಹದ್ದೊಂದು ಐಡಿಯಾ ಹೊಳೆದಿತ್ತು. ಆದರೆ ಅದು ಇಷ್ಟರಮಟ್ಟಿಗೆ ಯಶಸ್ವಿಯಾಗಬಹುದು ಎಂದು ಮಾತ್ರ ಯಾರೂ ಊಹಿಸಿರಲಿಲ್ಲ.

    ಸದ್ಯ ಈ ಐಪಿಎಲ್‌ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಎಲ್ಲದರ ಖ್ಯಾತಿಯನ್ನೂ ಮೀರಿ ಬೆಳೆದಿದೆ ಐಪಿಎಲ್. ಅಷ್ಟೇ ಅಲ್ಲದೆ ಜಗತ್ತಿನ ಬೇರಾವ ವೃತ್ತಿಪರ ಕ್ರಿಕೆಟ್ ಟೂರ್ನಿಗೂ ಇಲ್ಲದ ಜನಪ್ರಿಯತೆ ಇದಕ್ಕಿದೆ. ಈವರೆಗೆ ಒಟ್ಟು 17 ಬಾರಿ ಐಪಿಎಲ್ ಟೂರ್ನಿಗಳು ನಡೆದಿದ್ದು, ಇದೀಗ 18ನೇ ಆವೃತ್ತಿಗೆ ಕಾಲಿಟ್ಟಿದೆ.

    ಈ ಚುಟುಕು ಕ್ರಿಕೆಟ್‌ನಲ್ಲಿ ರನ್‌ ಹೊಳೆ ಹರಿಸುವವರೇನೂ ಕಡಿಮೆಯಿಲ್ಲ. ಕೆಲವೊಮ್ಮೆ ಬೌಲಿಂಗ್‌ ವೇಗಕ್ಕೆ ಚುರುಕು ಮುಟ್ಟಿಸಿ ರನ್‌ ಹೊಳೆ ಹರಿಸುವ ದೈತ್ಯ ಬ್ಯಾಟರ್‌ಗಳು, ಆ ತಂಡ ಹೆಚ್ಚು ಗಮನ ಸೆಳೆಯುತ್ತದೆ. ಅದರಂತೆ ಕಳೆದ 17 ಆವೃತ್ತಿಗಳಲ್ಲಿ ಅತಿಹೆಚ್ಚು ರನ್‌ ಗಳಿಸಿದ ದೈತ್ಯ ಬ್ಯಾಟರ್‌ಗಳು, ಕಡಿಮೆ ಎಸೆತಗಳಲ್ಲಿ ತೂಫಾನ್‌ ಶತಕ ಸಿಡಿಸಿದ ಶತಕ ವೀರರ ಪಟ್ಟಿ ಇಲ್ಲಿದೆ…..

    ಪವರ್‌ ಪ್ಲೇನಲ್ಲಿ ದಾಖಲೆ ರನ್‌ ಸಿಡಿಸಿದ ಟಾಪ್‌-5 ತಂಡಗಳು
    * ಸನ್‌ ರೈಸರ್ಸ್‌ ಹೈದರಾಬಾದ್‌ – 125 ರನ್‌- 2024ರಲ್ಲಿ – ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ
    * ಕೋಲ್ಕತ್ತಾ ನೈಟ್‌ರೈಡರ್ಸ್‌ – 105 – 2017ರಲ್ಲಿ – ಆರ್‌ಸಿಬಿ ವಿರುದ್ಧ
    * ಚೆನ್ನೈ ಸೂಪರ್‌ ಕಿಂಗ್ಸ್‌ – 100 ರನ್‌ – 2014ರಲ್ಲಿ – ಪಂಜಾಬ್‌ ಕಿಂಗ್ಸ್‌ ವಿರುದ್ಧ
    * ಪಂಜಾಬ್‌ ಕಿಂಗ್ಸ್‌ – 93 ರನ್‌ – 2024ರಲ್ಲಿ – ಕೆಕೆಆರ್‌ ವಿರುದ್ಧ
    * ಚೆನ್ನೈ ಸೂಪರ್‌ ಕಿಂಗ್ಸ್‌ – 90 ರನ್‌ – 2015ರಲ್ಲಿ – ಮುಂಬೈ ಇಂಡಿಯನ್ಸ್‌ ವಿರುದ್ಧ

    ಇನ್ನಿಂಗ್ಸ್‌ನಲ್ಲಿ ಅತಿಹೆಚ್ಚು ರನ್‌ ಚಚ್ಚಿದ ಟಾಪ್‌-5 ತಂಡಗಳು
    * ಸನ್ ರೈಸರ್ಸ್ ಹೈದರಾಬಾದ್ – 287 ರನ್ – 2024ರಲ್ಲಿ – ಆರ್‌ಸಿಬಿ ವಿರುದ್ಧ
    * ಸನ್‌ ರೈಸರ್ಸ್‌ ಹೈದರಾಬಾದ್‌ – 277 ರನ್‌ – 2024ರಲ್ಲಿ – ಮುಂಬೈ ವಿರುದ್ಧ
    * ಕೋಲ್ಕತ್ತಾ ನೈಟ್‌ ರೈಡರ್ಸ್‌ – 272 ರನ್‌ – 2024ರಲ್ಲಿ – ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ
    * ಸನ್‌ ರೈಸರ್ಸ್‌ ಹೈದರಾಬಾದ್‌ – 266 ರನ್‌ – 2024ರಲ್ಲಿ – ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ
    * ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 263 ರನ್‌ – 2013ರಲ್ಲಿ – ಪುಣೆ ವಾರಿಯರ್ಸ್‌ ವಿರುದ್ಧ

    CHRIS GAYLE

    ಒಂದೇ ಇನ್ನಿಂಗ್ಸ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ಟಾಪ್‌-5 ಪ್ಲೇಯರ್ಸ್‌
    * ಕ್ರಿಸ್‌ ಗೇಲ್‌ – 2013ರಲ್ಲಿ – 175 ರನ್‌ – 66 ಎಸೆತ
    * ಬ್ರೆಂಡನ್‌ ಮೆಕಲಂ – 2008ರಲ್ಲಿ – 158 ರನ್‌ – 73 ಎಸೆತ
    * ಕ್ವಿಂಟನ್‌ ಡಿಕಾಕ್‌ – 2022 ರಲ್ಲಿ – 140 ರನ್‌ – 70 ಎಸೆತ
    * ಎಬಿ ಡಿವಿಲಿಯರ್ಸ್‌ – 2015 ರಲ್ಲಿ – 133 ರನ್‌ – 59 ಎಸೆತ
    * ಕೆ.ಎಲ್‌ ರಾಹುಲ್‌ – 2020 – 132 ರನ್‌ – 69 ಎಸೆತ

    ತೂಫಾನ್‌ ಶತಕ ಬಾರಿಸಿದ ಟಾಪ್‌-5 ಆಟಗಾರರು ನೋಡಿ
    * ಕ್ರಿಸ್‌ ಗೇಲ್‌ – 2013ರಲ್ಲಿ – 30 ಎಸೆತಗಳಲ್ಲಿ ಶತಕ
    * ಯೂಸುಫ್‌ ಪಠಾಣ್‌ – 2010 – 37 ಎಸೆತಗಳಲ್ಲಿ ಶತಕ
    * ಡೇವಿಡ್‌ ಮಿಲ್ಲರ್‌ – 2013ರಲ್ಲಿ – 38 ಎಸೆತಗಳಲ್ಲಿ ಶತಕ
    * ಟ್ರಾವಿಸ್‌ ಹೆಡ್‌ – 2024ರಲ್ಲಿ – 39 ಎಸೆತಗಳಲ್ಲಿ ಶತಕ
    * ವಿಲ್‌ ಜಾಕ್ಸ್‌ – 2024 – 41 ಎಸೆತಗಳಲ್ಲಿ ಶತಕ

    ಐಪಿಎಲ್‌ ಇತಿಹಾಸದಲ್ಲಿ ಹೆಚ್ಚು ರನ್‌ ಗಳಿಸಿದ ಟಾಪ್‌-5 ದೈತ್ಯ ಬ್ಯಾಟರ್ಸ್‌
    * ವಿರಾಟ್‌ ಕೊಹ್ಲಿ – 8004 ರನ್‌ – 252 ಪಂದ್ಯ
    * ಶಿಖರ್‌ ಧವನ್‌ – 6,769 ಪಂದ್ಯ – 222 ಪಂದ್ಯ
    * ರೋಹಿತ್‌ ಶರ್ಮಾ – 6,628 ರನ್‌ – 257 ಪಂದ್ಯ
    * ಡೇವಿಡ್‌ ವಾರ್ನರ್‌ – 6,565 ರನ್‌ – 184 ಪಂದ್ಯ
    * ಸುರೇಶ್‌ ರೈನಾ – 5,528 ರನ್‌ – 264 ಪಂದ್ಯ

  • ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!

    ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!

    ದುಬೈ: ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ (ICC T20i Cricketer Of The Year) ನಾಲ್ವರು ಆಟಗಾರರ ಹೆಸರು ನಾಮನಿರ್ದೇಶನಗೊಂಡಿದೆ. ಈ ನಾಲ್ವರು ಆಟಗಾರರ ಪೈಕಿ ಭಾರತದ ಚಾಂಪಿಯನ್‌ ಬೌಲರ್‌ ಅರ್ಷ್‌ದೀಪ್‌ ಸಿಂಗ್‌ (Arshdeep Singh), ಆಸೀಸ್‌ ದೈತ್ಯ ಬ್ಯಾಟರ್‌ ಟ್ರಾವಿಸ್‌ಹೆಡ್‌, ಜಿಂಬಾಬ್ವೆ ಆಟಗಾರ ಸಿಖಂದರ್‌ ರಾಜಾ (Sikandar Raza) ಹಾಗೂ ಪಾಕ್‌ ತಂಡದ ಮಾಜಿ ನಾಯಕ ಬಾಬರ್‌ ಆಜಂ ಸ್ಥಾನ ಪಡೆದುಕೊಂಡಿದ್ದಾರೆ.

    ಪ್ರಸಕ್ತ ವರ್ಷ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಈ ನಾಲ್ವರು ಆಟಗಾರರ ನಾಮನಿರ್ದೇಶನ ಮಾಡಲಾಗಿದೆ. ಈ ನಾಲ್ವರು ಆಟಗಾರರ ಪೈಕಿ ಯಾರಿಗೆ 2024ರ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಸಿಗಬಹುದು ಅನ್ನೋದನ್ನ ಕಾದುನೋಡಬೇಕಿದೆ.

    ಯಾರು ಆ ನಾಲ್ವರು ಆಟಗಾರರು?

    1. ಟ್ರಾವಿಸ್‌ ಹೆಡ್‌
    ಆಸ್ಟ್ರೇಲಿಯಾದ ಸ್ಪೋಟಕ ಎಡಗೈ ಬ್ಯಾಟರ್ ಟ್ರಾವಿಸ್‌ ಹೆಡ್ 2024ರ ಕ್ಯಾಲೆಂಡರ್ ವರ್ಷದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ್ದಾರೆ. 2024ರಲ್ಲಿ ಆಸ್ಟ್ರೇಲಿಯಾ ಪರ ಒಟ್ಟು 15 ಟಿ20 ಪಂದ್ಯಗಳನ್ನಾಡಿ 178.47ರ ಸ್ಟ್ರೈಕ್‌ರೇಟ್‌ನಲ್ಲಿ 539 ರನ್ ಸಿಡಿಸಿ ಮಿಂಚಿದ್ದಾರೆ.

    2. ಸಿಖಂದರ್ ರಾಜಾ
    ಜಿಂಬಾಬ್ವೆ ಮೂಲದ ಸ್ಟಾರ್ ಆಲ್ರೌಂಡರ್ ಸಿಖಂದರ್ ರಾಜಾ ಅವರ ಪಾಲಿಗೆ 2024ರ ವರ್ಷ ಅವಿಸ್ಮರಣೀಯವಾಗಿದೆ. ಈ ವರ್ಷ ರಾಜಾ ಜಿಂಬಾಬ್ವೆ ಪರ 24 ಟಿ20 ಪಂದ್ಯಗಳನ್ನು ಆಡಿ 573 ರನ್ ಸಿಡಿಸಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿ ರಾಜಾ 24 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

    3. ಬಾಬರ್ ಆಜಂ
    ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಬಾಬರ್ ಅಜಂ ಕೂಡಾ 2024ರಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. 2024ರಲ್ಲಿ ಬಾಬರ್ ಅಜಂ ಪಾಕಿಸ್ತಾನ ಪರ 24 ಟಿ20 ಪಂದ್ಯಗಳನ್ನಾಡಿ 738 ರನ್ ಸಿಡಿಸಿದ್ದಾರೆ.

    4. ಅರ್ಷ್‌ದೀಪ್‌ ಸಿಂಗ್
    ಟೀಂ ಇಂಡಿಯಾ ಎಡಗೈ ವೇಗಿ ಅರ್ಷ್‌ದೀಪ್‌ ಸಿಂಗ್, ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಯ ರೇಸ್‌ನಲ್ಲಿರುವ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅರ್ಶದೀಪ್ ಸಿಂಗ್ ಭಾರತ ಟಿ20 ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 2024ರಲ್ಲಿ ಅರ್ಷ್‌ದೀಪ್‌ ಭಾರತ ಪರ 18 ಟಿ20 ಪಂದ್ಯಗಳನ್ನಾಡಿ 36 ವಿಕೆಟ್ ಕಬಳಿಸಿದ್ದಾರೆ. 2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ ಅರ್ಷ್‌ದೀಪ್‌ ಗರಿಷ್ಠ 17 ವಿಕೆಟ್‌ ಪಡೆದ ದಾಖಲೆ ಬರೆದಿದ್ದರು.

  • ಐಸಿಸಿ ಅಂಗಳ ತಲುಪಿದ ಸಿರಾಜ್‌ vs ಹೆಡ್‌ ವಾಗ್ವಾದ – ಇಬ್ಬರಿಗೂ ಬ್ಯಾನ್‌ ಭೀತಿ?

    ಐಸಿಸಿ ಅಂಗಳ ತಲುಪಿದ ಸಿರಾಜ್‌ vs ಹೆಡ್‌ ವಾಗ್ವಾದ – ಇಬ್ಬರಿಗೂ ಬ್ಯಾನ್‌ ಭೀತಿ?

    ಅಡಿಲೇಡ್‌: ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ ವೇಳೆ ಆಸ್ಟ್ರೇಲಿಯಾ ಸ್ಟಾರ್‌ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಹಾಗೂ ಟೀಂ ಇಂಡಿಯಾ ವೇಗಿ ಮೊಹಮ್ಮದ್‌ ಸಿರಾಜ್‌ ನಡುವಿನ ವಾಗ್ದಾದ ಐಸಿಸಿ ಅಂಗಳ ತಲುಪಿದೆ. ಇದರಿಂದ ಇಬ್ಬರ ವಿರುದ್ಧವೂ ಐಸಿಸಿ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    ಹೌದು. ಭಾರತ ಮತ್ತು ಆಸೀಸ್‌ ನಡುವಿನ 2ನೇ ಟೆಸ್ಟ್‌ ಪಂದ್ಯದ ವೇಳೆ ಆಸೀಸ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸಿರಾಜ್‌ ಎಸೆದ ಯಾರ್ಕರ್‌ಗೆ ಟ್ರಾವಿಸ್‌ ಹೆಡ್‌ ಕ್ಲೀನ್‌ ಬೌಲ್ಡ್‌ ಆಗಿದ್ದರು. ಅಷ್ಟರಲ್ಲಾಗಲೇ 140 ರನ್‌ ಬಾರಿಸಿದ್ದರು. ಟ್ರಾವಿಸ್‌ ಹೆಡ್‌ ಔಟಾಗುತ್ತಿದ್ದಂತೆ ʻವೆಲ್‌ ಬೌಲ್‌ʼ ಎಂದು ಹೇಳಿರುವುದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ಸಿರಾಜ್‌ ಅವರು ತೋರಿದ ಅತಿರೇಖದ ವರ್ತನೆ ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಹೈಬ್ರಿಡ್ ಮಾಡೆಲ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಆಡಲು ಪಾಕಿಸ್ತಾನ ಒಪ್ಪಿಗೆ – ಆದ್ರೆ ಕಂಡೀಷನ್ ಅಪ್ಲೈ

    ಔಟಾದ ಬಳಿಕ ಸಿರಾಜ್‌ಗೆ ಹೆಡ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಆದರೆ ಅವರಿಬ್ಬರ ನಡುವೆ ವಿನಿಮಯವಾದ ಮಾತುಗಳು ಏನು ಎನ್ನುವುದು ಸ್ಪಷ್ಟವಾಗಿಲ್ಲ. ಆದ್ರೆ ಇದನ್ನು ಅಭಿಮಾನಿಗಳು ಸುಮ್ಮನೆ ಬಿಡಲಿಲ್ಲ. ಸಿರಾಜ್ ಬೌಂಡರಿ ಲೈನ್ ಬಳಿ ಫೀಲ್ಡಿಂಗ್‌ಗೆ ನಿಂತಿದ್ದಾಗ ಆಸ್ಟ್ರೇಲಿಯಾ ಪ್ರೇಕ್ಷಕರು ʻಬೂʼ ಎಂದು ಅವರನ್ನು ಅಣುಕಿಸಿದ್ದರು. ಈ ವಿವಾದ ಐಸಿಸಿ ಅಂಗಳ ತಲುಪಿದ್ದು, ಇಬ್ಬರಿಗೂ ದಂಡ ವಿಧಿಸುವ ಅಥವಾ ಒಂದು ಪಂದ್ಯಕ್ಕೆ ಬ್ಯಾನ್‌ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    ಟ್ರಾವಿಸ್ ಹೆಡ್ ಹೇಳಿದ್ದೇನು?
    2ನೇ ದಿನದ ಆಟ ಮುಕ್ತಾಯಗೊಂಡ ಬಳಿಕ ಟ್ರಾವಿಸ್‌ ಹೆಡ್‌ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ್ದರು. ನಾನು ಔಟಾದ ಬಳಿಕ ʻಚೆನ್ನಾಗಿ ಬೌಲ್ ಮಾಡಿದ್ದಿರಿʼ ಎಂದು ಹೇಳಿದೆ. ಆದ್ರೆ ಸಿರಾಜ್‌ ತಪ್ಪಾಗಿ ಅರ್ಥೈಸಿಕೊಂಡರು. ಇದು ಸ್ವಲ್ಪ ಜಾಸ್ತಿ ಆಯ್ತು ಎಂದು ಹೆಡ್‌ ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಟೆಕ್ವಾಂಡೋ ಸ್ಪರ್ಧೆ: ಪಾಣೆಮಂಗಳೂರಿನ‌ ಆಯಿಶಾ ಹಫೀಝ್‌ಗೆ ಚಿನ್ನ

    ಸಿರಾಜ್‌ ಪ್ರತಿಕ್ರಿಯೆ ಏನು?
    ಮರುದಿನ ಹರ್ಭಜನ್‌ ಸಿಂಗ್‌ ಅವರೊಂದಿಗೆ ನಡೆದ ಚುಟುಕು ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ಸಿರಾಜ್‌, ಹೆಡ್‌ ಹೇಳಿಕೆಯನ್ನು ನಿರಾಕರಿಸಿದ್ದರು. ʻಚೆನ್ನಾಗಿ ಬೌಲ್ ಮಾಡಿದ್ದಿʼ ಎಂಬುದಾಗಿ ಹೆಡ್ ಹೇಳಲೇ ಇಲ್ಲ. ಒಳ್ಳೆಯ ಎಸೆತವನ್ನು ಸಿಕ್ಸರ್‌ಗೆ ಬಾರಿಸಿದಾಗ, ಅದು ನಿಮ್ಮಲ್ಲಿ ವಿಭಿನ್ನವಾಗಿ ಕಿಚ್ಚು ಹೊತ್ತಿಸುತ್ತದೆ. ನಾನು ಅವರನ್ನು ಬೌಲ್ಡ್ ಮಾಡಿದಾಗ ನಾನು ಸಂಭ್ರಮಿಸಿದ್ದೆ ಅಷ್ಟೆ. ಆಗ ಅವರು ನನ್ನನ್ನು ನಿಂದಿಸಿದರು. ಅವರು ನನಗೆ ಹೇಳಿದ್ದು ಅದನ್ನಲ್ಲ ಎನ್ನುವುದು ಎಲ್ಲರಿಗೂ ಕಾಣುವಂತಿದೆ. ನಾವು ಎಲ್ಲರನ್ನೂ ಗೌರವಿಸುತ್ತೇವೆ. ಏಕೆಂದರೆ ಕ್ರಿಕೆಟ್ ಜೆಂಟಲ್‌ಮನ್‌ಗಳ ಆಟ ಎಂದು ತಿಳಿಸಿದ್ದರು.

    ಮೂರನೇ ದಿನ ಸಿರಾಜ್ ಬ್ಯಾಟಿಂಗ್‌ಗೆ ಬಂದಾಗ, ಹೆಡ್ ಮತ್ತು ಅವರ ನಡುವೆ ಸ್ವಲ್ಪ ಹೊತ್ತು ಮಾತುಕತೆ ನಡೆದಿತ್ತು. ಅವರಿಬ್ಬರೂ ವಿವಾದ ಇತ್ಯರ್ಥಪಡಿಸಿಕೊಂಡರು, ಇದನ್ನು ಇಲ್ಲಿಗೆ ಬಿಟ್ಟು ಮುಂದೆ ಹೋಗೋಣ ಅಂತ ಹೇಳಿದ್ದರು ಎನ್ನಲಾಗಿದೆ. ಪಂದ್ಯ ಮುಗಿದ ಬಳಿಕ ಇಬ್ಬರೂ ಪರಸ್ಪರ ಆಲಂಗಿಸಿಕೊಂಡ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಆಸೀಸ್‌ ವಿರುದ್ಧ ಹೀನಾಯ ಸೋಲು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಭಾರತ, ಫೈನಲ್‌ ಹಾದಿ ಕಠಿಣ

  • ರನ್‌ ಹೊಳೆಯಲ್ಲಿ ತೇಲಾಡಿದ ಸನ್‌ ರೈಸರ್ಸ್‌ – ಒಂದೇ ಇನ್ನಿಂಗ್ಸ್‌ನಲ್ಲಿ 4 ದಾಖಲೆ ಉಡೀಸ್‌!

    ರನ್‌ ಹೊಳೆಯಲ್ಲಿ ತೇಲಾಡಿದ ಸನ್‌ ರೈಸರ್ಸ್‌ – ಒಂದೇ ಇನ್ನಿಂಗ್ಸ್‌ನಲ್ಲಿ 4 ದಾಖಲೆ ಉಡೀಸ್‌!

    ನವದೆಹಲಿ: ಸಿಕ್ಸರ್‌, ಬೌಂಡರಿಗಳ ಭರ್ಜರಿ ಬ್ಯಾಟಿಂಗ್‌ನೊಂದಿಗೆ ಕ್ರಿಕೆಟ್‌ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿರುವ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ ಒಂದೇ ಇನ್ನಿಂಗ್ಸ್‌ನಲ್ಲಿ ನಾಲ್ಕು ದಾಖಲೆಗಳನ್ನ ಉಡೀಸ್‌ ಮಾಡಿದೆ.

    ಶನಿವಾರ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಹೈದರಾಬಾದ್‌ ತಂಡ ಹಲವು ದಾಖಲೆಗಳನ್ನ ತನ್ನ ಮುಡಿಗೇರಿಸಿಕೊಂಡಿದೆ.

    ಮೊದಲ 6 ಓವರ್‌ಗಳಲ್ಲೇ 125 ರನ್‌ ಸಿಡಿಸುವ ಮೂಲಕ ಪವರ್‌ ಪ್ಲೇನಲ್ಲಿ ಗರಿಷ್ಠ ರನ್‌ ಸಿಡಿಸುವ ಮೂಲಕ ಐತಿಹಾಸಿಕ ದಾಖಲೆ ತನ್ನದಾಗಿಸಿಕೊಂಡಿತು. ಈ ವೇಳೆ ಬರೋಬ್ಬರಿ 13 ಬೌಂಡರಿ 11 ಸಿಕ್ಸರ್‌ಗಗಳನ್ನು ಸಿಡಿಸುವ ಮೂಲಕ ಪವರ್‌ ಪ್ಲೇನಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆ ಹಾಗೂ ಮೊದಲ 10 ಓವರ್‌ಗಳಲ್ಲಿ ಗರಿಷ್ಠ ರನ್‌ ಸಿಡಿಸಿದ ಮೊದಲ ತಂಡ ಎಂಬ ದಾಖಲೆಯನ್ನೂ ಬರೆಯಿತು. ಅಲ್ಲದೇ ತನ್ನದೇ ದಾಖಲೆ ಮುರಿದು ಸತತ ಮೂರು ಬಾರಿ ಐಪಿಎಲ್‌ ಇತಿಹಾಸದಲ್ಲಿ ಅತಿ ವೇಗವಾಗಿ 200 ರನ್‌ ಸಿಡಿಸಿದ ಬಲಿಷ್ಠ ತಂಡ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿತು.

    ಐಪಿಎಲ್‌ನಲ್ಲಿ ವೇಗವಾಗಿ 200 ರನ್‌ ಪೂರೈಸಿದ ಬಲಿಷ್ಠ ತಂಡಗಳು:
    ಆರ್‌ಸಿಬಿ – 14.1 ಓವರ್‌ಗಳಲ್ಲಿ – ಕಿಂಗ್ಸ್‌ ಪಂಜಾಬ್‌ ವಿರುದ್ಧ – 2016
    ಹೈದರಾಬಾದ್‌ – 14.4 ಓವರ್‌ಗಳಲ್ಲಿ – ಮುಂಬೈ ಇಂಡಿಯನ್ಸ್‌ ವಿರುದ್ಧ – 2024
    ಹೈದರಾಬಾದ್‌ – 14.5 ಓವರ್‌ಗಳಲ್ಲಿ – ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ – 2024
    ಹೈದರಾಬಾದ್‌ – 15 ಓವರ್‌ಗಳಲ್ಲಿ – ಆರ್‌ಸಿಬಿ ವಿರುದ್ಧ – 2024

    ಪವರ್‌ ಪ್ಲೇನಲ್ಲಿ ದಾಖಲೆ ರನ್‌ ಸಿಡಿಸಿದ ಟಾಪ್‌-5 ತಂಡಗಳು
    ಸನ್‌ ರೈಸರ್ಸ್‌ ಹೈದರಾಬಾದ್‌ – 125 ರನ್‌- 2024ರಲ್ಲಿ
    ಕೋಲ್ಕತ್ತಾ ನೈಟ್‌ರೈಡರ್ಸ್‌ – 105 – 2017ರಲ್ಲಿ
    ಚೆನ್ನೈ ಸೂಪರ್‌ ಕಿಂಗ್ಸ್‌ – 100 ರನ್‌ – 2014ರಲ್ಲಿ
    ಚೆನ್ನೈ ಸೂಪರ್‌ ಕಿಂಗ್ಸ್‌ – 90 ರನ್‌ – 2015ರಲ್ಲಿ
    ಕೊಚ್ಚಿ ಟಸ್ಕರ್ಸ್‌ ಕೇರಳ – 87 ರನ್‌ – 2011ರಲ್ಲಿ

    ತಂಡವೊಂದರ ಗರಿಷ್ಠ ಸ್ಕೋರರ್‌ನಲ್ಲೂ ಸನ್‌ರೈಸರ್ಸ್‌ ಟಾಪ್‌
    ಸನ್ ರೈಸರ್ಸ್ ಹೈದರಾಬಾದ್ – 287 ರನ್
    ಸನ್‌ ರೈಸರ್ಸ್‌ ಹೈದರಾಬಾದ್‌ – 277 ರನ್‌
    ಕೋಲ್ಕತ್ತಾ ನೈಟ್‌ ರೈಡರ್ಸ್‌ – 272 ರನ್‌
    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 263 ರನ್‌
    ಲಕ್ನೋ ಸೂಪರ್‌ ಜೈಂಟ್ಸ್‌ – 257 ರನ್‌

  • IPL 2024: ರನ್ ಹೊಳೆ, ದಾಖಲೆಗಳ ಸುರಿಮಳೆ – ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಸನ್‌ ರೈಸರ್ಸ್‌

    IPL 2024: ರನ್ ಹೊಳೆ, ದಾಖಲೆಗಳ ಸುರಿಮಳೆ – ಐಪಿಎಲ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ಸನ್‌ ರೈಸರ್ಸ್‌

    ನವದೆಹಲಿ: ಪ್ರತಿ ಇನ್ನಿಂಗ್ಸ್‌ನಲ್ಲೂ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುವ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad )ತಂಡವು ಐಪಿಎಲ್‌ನಲ್ಲಿ (IPL 2024) ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದೆ.

    ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಹೈದರಾಬಾದ್‌ ತಂಡದ ಬ್ಯಾಟರ್‌ಗಳು ಆರಂಭದಿಂದಲೇ ಅಬ್ಬರಿದರು. ಸಿಕ್ಸರ್‌, ಬೌಂಡರಿ ಸಿಡಿಸುತ್ತಾ ಡೆಲ್ಲಿ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದ್ದಾರೆ. ಮೊದಲ 6 ಓವರ್‌ಗಳಲ್ಲೇ 125 ರನ್‌ ಬಾರಿಸುವ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಪವರ್‌ ಪ್ಲೇನಲ್ಲಿ ಅತಿಹೆಚ್ಚು ರನ್‌ ಸಿಡಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ಈ ಹಿಂದೆ 6 ಓವರ್‌ಗಳಲ್ಲಿ 105 ರನ್‌ ಸಿಡಿಸಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ಅಗ್ರ ಸ್ಥಾನದಲ್ಲಿತ್ತು.

    ಆರಂಭಿಕರಾಗಿ ಕಣಕ್ಕಿಳಿದಿದ್ದ ಟ್ರಾವಿಸ್‌ ಹೆಡ್‌ (Travis Head) ಹಾಗೂ ಅಭಿಷೇಕ್‌ ಶರ್ಮಾ (Abhishek Sharma) ಜೋಡಿ ಜೊತೆಯಾಗಿ ಅಬ್ಬರಿಸಲು ಶುರು ಮಾಡಿದರು. ಮೊದಲ ಓವರ್‌ನಲ್ಲೇ 19 ರನ್‌ ಸಿಡಿಸಿದ್ದ ಈ ಜೋಡಿ 2,3,4,5,6ನೇ ಓವರ್‌ಗಳಲ್ಲಿ ಕ್ರಮವಾಗಿ 21, 22, 21, 20, 22 ರನ್‌ ಚಚ್ಚಿ ಹೊಸ ದಾಖಲೆ ಬರೆಯಿತು. ಈ ವೇಳೆ ಟ್ರಾವಿಸ್‌ ಹೆಡ್‌ ಕೇವಲ 26 ಎಸೆತಗಳಲ್ಲಿ ಭರ್ಜರಿ 84 ರನ್‌ ಗಳಿಸಿದ್ದರೆ, ಅಭಿಷೇಕ್‌ ಶರ್ಮಾ 10 ಎಸೆತಗಳಲ್ಲಿ ಸ್ಫೋಟಕ 40 ರನ್‌ ಚಚ್ಚಿದ್ದರು. ಮೊದಲ 6 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ನಷ್ಟವಿಲ್ಲದೇ ಈ ಜೋಡಿ 125 ರನ್‌ ಬಾರಿಸುವ ಮೂಲಕ ಮತ್ತೊಂದು ದಾಖಲೆ ತನ್ನ ಹೆಸರಿಗೆ ಸೇರಿಸಿಕೊಂಡಿತು. ಇದರಲ್ಲಿ ಬರೋಬ್ಬರಿ 13 ಬೌಂಡರಿ 11 ಸಿಕ್ಸರ್‌ಗಳು ಸೇರಿದ್ದವು. ನಂತರ ಅಭಿಷೇಕ್‌ ಶರ್ಮಾ 12 ಎಸೆತಗಳಲ್ಲಿ 46 ರನ್‌ ಸಿಡಿಸಿ ಔಟಾದರು.

    ಪವರ್‌ ಪ್ಲೇನಲ್ಲಿ ದಾಖಲೆ ರನ್‌ ಸಿಡಿಸಿದ ಟಾಪ್‌-5 ತಂಡಗಳು
    ಸನ್‌ ರೈಸರ್ಸ್‌ ಹೈದರಾಬಾದ್‌ – 125 ರನ್‌- 2024ರಲ್ಲಿ
    ಕೋಲ್ಕತ್ತಾ ನೈಟ್‌ರೈಡರ್ಸ್‌ – 105 – 2017ರಲ್ಲಿ
    ಚೆನ್ನೈ ಸೂಪರ್‌ ಕಿಂಗ್ಸ್‌ – 100 ರನ್‌ – 2014ರಲ್ಲಿ
    ಚೆನ್ನೈ ಸೂಪರ್‌ ಕಿಂಗ್ಸ್‌ – 90 ರನ್‌ – 2015ರಲ್ಲಿ
    ಕೊಚ್ಚಿ ಟಸ್ಕರ್ಸ್‌ ಕೇರಳ – 87 ರನ್‌ – 2011ರಲ್ಲಿ

    ತಂಡವೊಂದರ ಗರಿಷ್ಠ ಸ್ಕೋರರ್‌ನಲ್ಲೂ ಸನ್‌ರೈಸರ್ಸ್‌ ಟಾಪ್‌
    ಸನ್ ರೈಸರ್ಸ್ ಹೈದರಾಬಾದ್ – 287 ರನ್
    ಸನ್‌ ರೈಸರ್ಸ್‌ ಹೈದರಾಬಾದ್‌ – 277 ರನ್‌
    ಕೋಲ್ಕತ್ತಾ ನೈಟ್‌ ರೈಡರ್ಸ್‌ – 272 ರನ್‌
    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು – 263 ರನ್‌
    ಲಕ್ನೋ ಸೂಪರ್‌ ಜೈಂಟ್ಸ್‌ – 257 ರನ್‌

  • IPL 2024 Auction: ಇನ್‌ಸ್ಟಾದಲ್ಲಿ ವಾರ್ನರ್‌ ಬ್ಲಾಕ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌

    IPL 2024 Auction: ಇನ್‌ಸ್ಟಾದಲ್ಲಿ ವಾರ್ನರ್‌ ಬ್ಲಾಕ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌

    ರಂಭಿಕ ಬ್ಯಾಟರ್ ಡೇವಿಡ್‌ ವಾರ್ನರ್‌‌ (David Warner) ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ಇನ್‌ಸ್ಟಾಗ್ರಾಂ, ಫೇಸ್‌ಬುಕ್‌‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮಾಡಿದೆಯಂತೆ. ಈ ವಿಚಾರವನ್ನು ಸ್ವತಃ ವಾರ್ನರ್‌ ಅವರೇ ಶೇರ್‌ ಮಾಡಿಕೊಂಡಿದ್ದಾರೆ.

    ಟ್ರಾವಿಸ್‌ ಹೆಡ್‌ (Travis Head) ಅವರನ್ನು ಹರಾಜಿನಲ್ಲಿ ಹೈದರಾಬಾದ್ ಇಂದು ಖರೀದಿಸಿದೆ. ದುಬೈನಲ್ಲಿ ನಡೆದ ಐಪಿಎಲ್ 2024 ಹರಾಜಿನಲ್ಲಿ ಟ್ರಾವಿಸ್ ಹೆಡ್‌ ಅವರನ್ನು ಸನ್‌ರೈಸರ್ಸ್‌ 6.80 ಕೋಟಿಗೆ ಖರೀದಿಸಿತು. ಹೀಗಾಗಿ ಟ್ರಾವಿಸ್‌ ಹೆಡ್‌ಗೆ ಡೇವಿಡ್ ವಾರ್ನರ್‌ ಅವರು ಅಭಿನಂದನೆ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ಇನ್‌ ಸ್ಟಾ ಹಾಗೂ ಫೇಸ್‌ಬುಕ್‌ ನಲ್ಲಿ ಬ್ಲಾಕ್ ಆಗಿರೋ ವಿಚಾರ ವಾರ್ನರ್‌ ಗಮನಕ್ಕೆ ಬಂದಿದೆ. ಇದನ್ನೂ ಓದಿ: IPL ಇತಿಹಾಸದಲ್ಲೇ ದಾಖಲೆ – ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದ ಮಿಚೆಲ್‌ ಸ್ಟಾರ್ಕ್‌

    ಡೇವಿಡ್‌ ವಾರ್ನರ್‌ ಸನ್‌ರೈಸರ್ಸ್‌ ಹೈದರಾಬಾದ್ ಪರ ಐಪಿಎಲ್‌ನಲ್ಲಿ (IPL) ಆಡಿದ್ದರು. ಸನ್‌ರೈಸರ್ಸ್ ಹೈದರಾಬಾದ್‌ನ ನಾಯಕನಾಗಿ ಐಪಿಎಲ್ 2016ರ ಪ್ರಶಸ್ತಿಯನ್ನು ವಾರ್ನರ್‌ ಗೆದ್ದಿದ್ದರು. ಆದರೆ ಈಗ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡದಲ್ಲಿ ಆಡುತ್ತಿದ್ದಾರೆ. ಇದನ್ನೂ ಓದಿ: IPL 2024 Auction: ಚೆನ್ನೈ ಪಾಲಾದ ಕನ್ನಡಿಗ ರಚಿನ್‌ – ಕಿವೀಸ್‌ ಫ್ಲೇವರ್‌ ಆಯ್ತು ಸೂಪರ್‌ ಕಿಂಗ್ಸ್‌!

  • IPL 2024 Auction: ರಚಿನ್‌ ರವೀಂದ್ರ, ಮಿಚೆಲ್‌ ಸ್ಟಾರ್ಕ್‌ ಸೇರಿ 1,116 ಆಟಗಾರರು ನೋಂದಣಿ

    IPL 2024 Auction: ರಚಿನ್‌ ರವೀಂದ್ರ, ಮಿಚೆಲ್‌ ಸ್ಟಾರ್ಕ್‌ ಸೇರಿ 1,116 ಆಟಗಾರರು ನೋಂದಣಿ

    -830 ಭಾರತೀಯರು, 336 ವಿದೇಶಿ ಆಟಗಾರರು ಹರಾಜಿಗೆ ನೋಂದಣಿ

    ಅಬುಧಾಬಿ: ಮುಂಬರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಆಟಗಾರರ ಮಿನಿ ಹರಾಜು ಡಿಸೆಂಬರ್ 19 ರಂದು ನಡೆಯಲಿದೆ. ನವೆಂಬರ್ 30ರ ವರೆಗೂ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು (Auction Players Registration) ಆಟಗಾರರಿಗೆ ಅವಕಾಶವಿತ್ತು. ಶುಕ್ರವಾರ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಹಂಚಿಕೊಂಡ ಪಟ್ಟಿಯಲ್ಲಿ ಒಟ್ಟು 1,166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

    2023ರ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅನೇಕ ಆಟಗಾರರು ಐಪಿಎಲ್‌ ಹರಾಜಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಬೆಂಗಳೂರು ಮೂಲದ ಕಿವೀಸ್‌ ಆಟಗಾರ ರಚಿನ್‌ ರವೀಂದ್ರ (Rachin Ravindra), ಡೇರಿಲ್‌ ಮಿಚೆಲ್‌, ವಿಶ್ವಕಪ್‌ ವಿಜೇತ ಆಸೀಸ್‌ ತಂಡದಿಂದ ವೇಗಿ ಮಿಚೆಲ್‌ ಸ್ಟಾರ್ಕ್‌ (Mitchell Starc), ಪ್ಯಾಟ್‌ ಕಮ್ಮಿನ್ಸ್‌, ಟ್ರಾವಿಸ್‌ ಹೆಡ್‌ (Travis Head) ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ರಚಿನ್‌ ರವಿಂದ್ರ ಅವರ ಮೂಲ ಬೆಲೆ 50 ಲಕ್ಷ ರೂ.ಗೆ ನಿಗದಿಯಾಗಿದೆ. ಇದನ್ನೂ ಓದಿ: ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ಭಾನುವಾರ ರಾತ್ರಿ 11:45ರ ವರೆಗೂ ಮೆಟ್ರೋ ವಿಸ್ತರಣೆ

    ಆಸೀಸ್‌ ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌ 2015ರಲ್ಲಿ ಐಪಿಎಲ್‌ನಲ್ಲಿ ಆಡಿದ್ದರು. ಆರ್‌ಸಿಬಿ ತಂಡದಲ್ಲಿ ಮಿಂಚಿದ್ದರು. ಆ ನಂತರ ಐಪಿಎಲ್‌ನಿಂದ ದೂರ ಉಳಿದಿದ್ದರು. 2023ರಲ್ಲಿ‌ ಆಶಸ್‌ ಟೂರ್ನಿಯಿಂದಾಗಿ ಐಪಿಎಲ್‌ನಿಂದ ಹೊರಗುಳಿದ್ದರು. ಇನ್ನೂ ಜೋಶ್‌ ಹೇಝಲ್ವುಡ್‌, ಲೀಗ್‌ ಸುತ್ತಿನ ಕೆಲ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನವಿದೆ. ಹೀಗಿದ್ದೂ ಅವರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಇದನ್ನೂ ಓದಿ: 2009ರಿಂದ ಸ್ಟೇಡಿಯಂ ಕರೆಂಟ್‌ ಬಿಲ್‌ ಕಟ್ಟಿಲ್ಲ – ಭಾರತ-ಆಸೀಸ್‌ 4ನೇ T20 ಪಂದ್ಯಕ್ಕೆ ಹೊಸ ತಲೆನೋವು!

    ಈ ಬಾರಿ ಐಪಿಎಲ್‌ ಮಿನಿ ಹರಾಜಿಗೆ ನೋಂದಣೆ ಮಾಡಿಕೊಂಡಿರುವ ಒಟ್ಟು 1,166 ಆಟಗಾರರ ಪೈಕಿ 830 ಭಾರತೀಯ ಆಟಗಾರರಿದ್ದರೆ, 336 ವಿದೇಶಿ ಆಟಗಾರರು ಇದ್ದಾರೆ. ಈ ಪಟ್ಟಿಯಲ್ಲಿ 212 ಕ್ಯಾಪ್ಡ್, 909 ಅನ್‌ಕ್ಯಾಪ್ಡ್ ಮತ್ತು 45 ಅಸೋಸಿಯೇಟ್ ದೇಶದ ಆಟಗಾರರು ಸೇರಿದ್ದಾರೆ. 830 ಭಾರತೀಯರ ಪೈಕಿ ವರುಣ್ ಆರೋನ್, ಕೆ.ಎಸ್ ಭರತ್, ಕೇದಾರ್ ಜಾಧವ್, ಸಿದ್ಧಾರ್ಥ್ ಕೌಲ್, ಧವಳ್ ಕುಲಕರ್ಣಿ, ಶಿವಂ ಮಾವಿ, ಶಹಬಾಜ್ ನದೀಮ್, ಕರುಣ್ ನಾಯರ್, ಮನೀಶ್ ಪಾಂಡೆ, ಚೇತನ್ ಸಕಾರಿಯ, ಮನ್‌ದೀಪ್ ಸಿಂಗ್, ಬರೀಂದರ್ ಸ್ರಾನ್ ಸೇರಿದಂತೆ 18 ಆಟಗಾರರಿದ್ದಾರೆ. ಇದನ್ನೂ ಓದಿ: ಮಗನ ಆಟ ಕಣ್ತುಂಬಿಕೊಳ್ಳಲು ಪತ್ನಿಯೊಂದಿಗೆ ಮೈಸೂರಿಗೆ ಆಗಮಿಸಿದ ರಾಹುಲ್ ದ್ರಾವಿಡ್

  • ಇಂಡೋ-ಆಸೀಸ್‌ ಕದನಕ್ಕೆ ಮಳೆ ಭೀತಿ – ಸತತ 2ನೇ ಜಯಕ್ಕೆ ಭಾರತ ತವಕ

    ಇಂಡೋ-ಆಸೀಸ್‌ ಕದನಕ್ಕೆ ಮಳೆ ಭೀತಿ – ಸತತ 2ನೇ ಜಯಕ್ಕೆ ಭಾರತ ತವಕ

    – ಭಾರತಕ್ಕೆ ಬೇಕಿದೆ ಬೌಲಿಂಗ್‌ ಬಲ
    – ಇತ್ತಂಡಗಳ ಪ್ಲೇಯಿಂಗ್‌-11ನಲ್ಲಿ ಬದಲಾವಣೆ ಸಾಧ್ಯತೆ

    ತಿರುವನಂತಪುರಂ: ಭಾರತ ಮತ್ತು ಆಸ್ಟ್ರೇಲಿಯಾ (Ind vs Aus) ನಡುವಿನ 5 ಪಂದ್ಯಗಳ ಟಿ20 ಸರಣಿ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲಿ ಭಾರತ ದಾಖಲೆಯ ಜಯ ಸಾಧಿಸಿದೆ. 2ನೇ T20 ಪಂದ್ಯವು (T20 Match) ಇಂದು (ನ.26) ಕೇರಳದ ತಿರುವನಂತಪುರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮಳೆ ಅಡ್ಡಿಯುಂಟುಮಾಡುವ ಆತಂಕ ಎದುರಾಗಿದೆ.

    ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, 55% ಮಳೆ (Rain) ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗರಿಷ್ಠ ತಾಪಮಾನ 32 ಡಿಗ್ರಿ ಸಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಇದನ್ನೂ ಓದಿ: IPL 2024 Auction: ಮತ್ತೆ ಮುಂಬೈ ಸೇರಲಿದ್ದಾರೆ ಪಾಂಡ್ಯ?

    ಮೊದಲ ಪಂದ್ಯದಲ್ಲಿ 209ರನ್‌ ಬಾರಿಸಿ ದಾಖಲೆಯ ಜಯ ಸಾಧಿಸಿರುವ ಭಾರತಕ್ಕೆ ಬೌಲಿಂಗ್‌ (Bowling) ಚಿಂತೆ ಎದುರಾಗಿದೆ. ಮೊದಲ ಪಂದ್ಯದಲ್ಲಿ ಪ್ರಸಿದ್ಧ್‌ ಕೃಷ್ಣ (Prasidh Krishna) 4 ಓವರ್‌ಗಳಲ್ಲಿ 50 ರನ್‌, ರವಿ ಬಿಷ್ಣೋಯಿ (Ravi Bishnoi) 4 ಓವರ್‌ಗಳಲ್ಲಿ 54 ರನ್‌ ಚಚ್ಚಿಸಿಕೊಂಡಿದ್ದರು. ಅಲ್ಲದೇ ಅರ್ಷ್‌ದೀಪ್‌ ಸಿಂಗ್‌ ಸಹ 41 ರನ್‌ ಹೊಡೆಸಿಕೊಂಡಿದ್ದರು. ಬ್ಯಾಟಿಂಗ್‌ನಲ್ಲಿ ನಾಯಕ ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ರಿಂಕು ಸಿಂಗ್‌ ಅವರ ಜವಾಬ್ದಾರಿ ಇನ್ನಿಂಗ್ಸ್‌ನಿಂದ ಗೆಲುವು ಸಾಧ್ಯವಾಗಿತ್ತು.

    2ನೇ ಪಂದ್ಯದಲ್ಲಿ ಭಾರತ ಬೌಲಿಂಗ್‌ ಸುಧಾರಣೆ ಕಂಡುಕೊಳ್ಳಬೇಕಿದೆ. ಹಾಗಾಗಿ ಮೊದಲ ಪಂದ್ಯದಲ್ಲಿ ಪ್ಲೇಯಿಂಗ್‌-11 ನಿಂದ ಹೊರಗುಳಿದಿದ್ದ ವಾಷಿಂಗ್ಟನ್‌ ಸುಂದರ್‌ ಮತ್ತು ಶಿವಂ ದುಬೆಗೆ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಇನ್ನೂ ಆರಂಭಿಕ ಯಶಸ್ವಿ ಜೈಸ್ವಾಲ್‌, ಋತುರಾಜ್‌ ಗಾಯಕ್ವಾಡ್, ಮಧ್ಯಮ ಕ್ರಮಾಂಕದಲ್ಲಿ ತಿಲಕ್‌ ವರ್ಮಾ ಜವಾಬ್ದಾರಿಯನ್ನರಿತು ಆಡಬೇಕಿದೆ. ಇದನ್ನೂ ಓದಿ: T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

    ಮತ್ತೆ ಹೆಡ್ಡೇಕ್‌ ಆಗುತ್ತಾ?
    ಮೊದಲ ಪಂದ್ಯದಲ್ಲಿ ಆಸೀಸ್‌ ತಂಡ ವಿರೋಚಿತ ಸೋಲನುಭವಿಸಿದ ಬಳಿಕ ಆಸೀಸ್‌ ತಂಡ ಬದಲಾವಣೆ ತರಲು ಮುಂದಾಗಿದೆ. ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 137 ರನ್‌ ಸಿಡಿಸಿ ಭಾರತದ ಗೆಲುವಿಗೆ ಅಡ್ಡಗೋಡೆಯಾಗಿದ್ದ ಟ್ರಾವಿಸ್‌ ಹೆಡ್‌ ಪ್ಲೇಯಿಂಗ್‌-11ನಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಜೊತೆಗೆ ಸ್ಪಿನ್‌ ಮಾಂತ್ರಿಕ ಆಡಂ ಝಂಪಾ ಕೂಡ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌ ಮಾತು

    ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌ ಮಾತು

    ಅಹಮದಾಬಾದ್: ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿ ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ ಆಸ್ಟ್ರೇಲಿಯಾ (Australia) ಕ್ರಿಕೆಟಿಗ ಟ್ರಾವಿಸ್‌ ಹೆಡ್‌ (Travis Head), ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಅವರನ್ನು ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ ಎಂದು ಕರೆದಿದ್ದಾರೆ.

    ಟೀಂ ಇಂಡಿಯಾ (Team India) ವಿರುದ್ಧ 241 ರನ್‌ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ಪರ ಟ್ರಾವಿಸ್‌ ಹೆಡ್‌ 95 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್‌ನೊಂದಿಗೆ ಶತಕ ಸಿಡಿಸಿದರು. ಒಟ್ಟು ಈ ಪಂದ್ಯದಲ್ಲಿ 120 ಎಸೆತಗಳನ್ನು ಎದುರಿಸಿದ ಟ್ರಾವಿಸ್‌ ಹೆಡ್‌ 137 ರನ್‌ (4 ಸಿಕ್ಸರ್‌, 15 ಬೌಂಡರಿ) ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಪಂದ್ಯದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಟ್ರಾವಿಸ್‌ ಹೆಡ್‌, ರೋಹಿತ್ ಶರ್ಮಾರನ್ನು ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ ಎಂದು ಕರೆದಿದ್ದಾರೆ.

    ನಿರೀಕ್ಷೆಯೇ ಮಾಡಿರಲಿಲ್ಲ: ಇದೊಂದು ಅನಿರೀಕ್ಷಿತ ದಿನವಾಗಿದೆ, ನಾವ್ಯಾರೂ ಕೂಡ ಕಪ್‌ ಗೆಲ್ಲುತ್ತೇವೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆದ್ರೆ ನಿಜಕ್ಕೂ ಇದೊಂದು ಅಸಾಧಾರಣ ದಿನವಾಗಿದೆ. ಕೆಮ್ಮು ಬಂದು ಮನೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ತಂಡದ ಗೆಲುವಿನಲ್ಲಿ ಕೈಜೋಡಿಸಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ನಾನು ಎದುರಿಸಿದ ಮೊದಲ 20 ಎಸೆತಗಳು ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿತ್ತು. ಅದನ್ನು ಪಂದ್ಯದ ಕೊನೆಯವರೆಗೂ ತೆಗೆದುಕೊಂಡು ಹೋಗಿದ್ದೇನೆ ಅಷ್ಟೇ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: World Cup 2023: ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ – ಟೀಂ ಇಂಡಿಯಾಕ್ಕೆ ಮೋದಿ ಅಭಯ

    ಮಿಚೆಲ್ ಮಾರ್ಷ್ ಅವರು ಬ್ಯಾಟಿಂಗ್‌ಗೆ ಇಳಿದು ತಂಡವನ್ನು ಗೆಲುವಿನ ಹಾದಿಯಲ್ಲಿ ತೆಗೆದುಕೊಂಡು ಹೋಗುವಾಗ ವಿಕೆಟ್ ಪಿಚ್ ಬ್ಯಾಟಿಂಗ್ ನಡೆಸಲು ಸುಲಭವಾಗಿಲ್ಲ ಅನ್ನಿಸಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಕುರಿತು ತಮ್ಮ ಅಭಿಪ್ರಾಯ ಕೇಳಿದಾಗ ಅವರು ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಚ್ ಆಗಿ ಮುಂದುವರಿಯೋ ನಿರ್ಧಾರ ಕೈಗೊಳ್ಳಲು ಸಮಯಬೇಕು: ರಾಹುಲ್ ದ್ರಾವಿಡ್