Tag: ಟ್ರಾಫಿಕ್ ಸಮಸ್ಯೆ

  • ಟ್ರಾಫಿಕ್ ಸಾರ್ ನಮ್ಕೈಲಿ ಕಾಲೇಜಿಗೆ ಬರಕ್ಕಾಗಲ್ಲ – ದಿಢೀರ್ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

    ಟ್ರಾಫಿಕ್ ಸಾರ್ ನಮ್ಕೈಲಿ ಕಾಲೇಜಿಗೆ ಬರಕ್ಕಾಗಲ್ಲ – ದಿಢೀರ್ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

    ಬೆಂಗಳೂರು: ಟ್ರಾಫಿಕ್ ಸಾರ್ ನಮಗೆ ಕಾಲೇಜ್‍ಗೆ ಬರಕ್ಕಾಗಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಸಿಲಿಕಾನ್ ಸಿಟಿಯ ರಾಜರಾಜೇಶ್ವರಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ನೋಡ ನೋಡುತ್ತಿದ್ದಂತೆ ಇಡೀ ಕಾಲೇಜಿನ ವಿದ್ಯಾರ್ಥಿಗಳೆಲ್ಲ ಧರಣಿಗೆ ಎಂದು ಕ್ಲಾಸ್ ಬಿಟ್ಟು ಬಂದು ಕಾಲೇಜ್ ಮುಂದೆ ಪ್ರತಿಭಟನೆ ಮಾಡಿ ಧಿಕ್ಕಾರ ಕೂಗಿದ್ದಾರೆ.

    ಏನ್ರಪ್ಪ ನಿಮ್ ಪ್ರಾಬ್ಲಂ ಎಂದು ಕಾಲೇಜ್ ಆಡಳಿತ ಮಂಡಳಿ ಕೇಳಿದರೆ, ನೋಡಿ ನೀವು ಎಂಟೂವರೆಗೆ ಕ್ಲಾಸ್ ಶುರುಮಾಡಿದ್ದೀರಾ. ಬೆಂಗಳೂರಿನಲ್ಲಿ ಮೊದಲೇ ಟ್ರಾಫಿಕ್ ಹತ್ತು ನಿಮಿಷ ಅರ್ಧಗಂಟೆ ಆ ಕಡೆ ಈ ಕಡೆ ಆದರೆ ಹಾಜರಿ ಕಡಿತವಾಗುತ್ತದೆ. ನಮ್ ಕೈಯಲ್ಲಿ ಈ ಟ್ರಾಫಿಕ್ ಸಮಸ್ಯೆಯಿಂದ ಎಂಟೂವರೆಗೆ ಕ್ಲಾಸಿಗೆ ಬರಲು ಆಗಲ್ಲ. ಈ ರೂಲ್ಸ್ ತಂದ ಪ್ರಾಂಶುಪಾಲರನ್ನು ಮೊದಲು ತೆಗದುಹಾಕಿ ಎಂದು ಗಲಾಟೆ ಮಾಡಿದ್ದಾರೆ.

    ಜೊತೆಗೆ ಹಾಸ್ಟೆಲ್ ಊಟ ಸರಿಯಾಗಿಲ್ಲ ಎಂದು ಪ್ರತಿಭಟನೆ ನಡೆಸಿದರು. ನಂತರ ಆಡಳಿತ ಮಂಡಳಿ ವಿದ್ಯಾರ್ಥಿಗಳ ಕ್ಲಾಸ್ ಸಮಯ ಬದಲಾವಣೆಯ ಬೇಡಿಕೆಯ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಭರವಸೆ ನೀಡಿದರು. ಈ ವೇಳೆಯೂ ಟ್ರಾಫಿಕ್ ಪ್ರಾಬ್ಲಂ ನಿಮಗೆ ಅರ್ಥವಾಗುವುದಿಲ್ಲ. ಈ ಬೆಂಗಳೂರಿನಲ್ಲಿ ನಾವು ಹೇಗೆ ಇನ್ ಟೈಂಗೆ ಕ್ಲಾಸ್‍ಗೆ ಬರುವುದು ಎಂದು ಪ್ರಶ್ನಿಸಿ ವಿದ್ಯಾರ್ಥಿಗಳು ಗಲಾಟೆ ಮಾಡಿದರು.

  • ಅಕ್ರಮ ಮಾಡಿದರೆ ಎಚ್ಚರ: ಬಿಬಿಎಂಪಿ ಮೇಯರ್ ಗೌತಮ್

    ಅಕ್ರಮ ಮಾಡಿದರೆ ಎಚ್ಚರ: ಬಿಬಿಎಂಪಿ ಮೇಯರ್ ಗೌತಮ್

    ಬೆಂಗಳೂರು: ವಿವಿಧ ಕಾಮಗಾರಿಗಳನ್ನು ಬಿಬಿಎಂಪಿ ಮೇಯರ್ ಇಂದು ತಪಾಸಣೆ ನಡೆಸಿದರು.

    ನಗರದ ರಿಚ್ಮಂಡ್ ಸರ್ಕಲ್‍ನ ಜಂಕ್ಷನ್‍ನಲ್ಲಿ ಮೇಯರ್ ಒಂದು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು. ಫುಟ್‍ಪಾತ್, ರೋಡ್ ಕಟಿಂಗ್, ರಸ್ತೆ ಗುಂಡಿ ಸಮಸ್ಯೆ, ಡಾಂಬರೀಕರಣ ಅವ್ಯವಸ್ಥೆ, ರಸ್ತೆ ಹಾಳಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಆಗುತ್ತಿರುವ ಬಗ್ಗೆ ಪರಿಶೀಲನೆ ಮಾಡಲಾಯಿತು.

    ಮೇಯರ್ ತಪಾಸಣೆ ವೇಳೆ ಚರಂಡಿ ನೀರು ರಸ್ತೆಗೆ ಹರಿದು ಹೋಗುತ್ತಿತ್ತು. ಇದೇ ವೇಳೆ ಇಡೀ ರಿಚ್ಮಂಡ್ ಫ್ಲೈಓವರ್ ಓಎಫ್‍ಸಿ(ಆಪ್ಟಿಕಲ್ ಫೈಬರ್ ಕೇಬಲ್) ಎಲ್ಲೆಂದರಲ್ಲಿ ನೇತಾಡುತ್ತಿತ್ತು. ಈ ದೃಶ್ಯ ನೋಡಿದ ಮೇಯರ್ ಅಧಿಕಾರಿಗಳ ವಿರುದ್ಧ ಗರಂ ಆದರು.

    ಬಳಿಕ ಸ್ವತಃ ಮೇಯರ್ ಗೌತಮ್ ಅವರು ರಸ್ತೆ ಮಧ್ಯೆ ಭಾಗಕ್ಕೆ ತೂಗಾಡುತ್ತಿದ್ದ ಓಎಫ್‍ಸಿ ಕೇಬಲ್ ಕಟ್ ಮಾಡಿದರು. ಈ ವೇಳೆ ಸ್ಥಳೀಯ ಜಂಟಿ ಆಯುಕ್ತ ಪಲ್ಲವಿ ಹಾಗೂ ಬಹುತೇಕ ನಾಯಕರು ಹಾಜರಿದ್ದರು.

    ಇದೇ ವೇಳೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಇದು ಎಲ್ಲ ಅಕ್ರಮ ಓಎಫ್‍ಸಿ ಕೇಬಲ್‍ಗೆ ಎಚ್ಚರಿಕೆ. ಕೂಡಲೇ ರೋಡ್ ಚೆಂದವನ್ನು ಕೆಡಿಸುವ ಕೆಲಸ ನಿಲ್ಲಿಸಬೇಕಿದೆ. ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ ಭಾಗಕ್ಕೂ ನಾನು ಪರಿಶೀಲನೆ ಮಾಡುವೆ. ಆಗ ಈ ತಪ್ಪು ಕಂಡು ಬಂದರೆ ನೇರ ಕೇಬಲ್ ಕಟ್ ಮಾಡಲಾಗುತ್ತದೆ ಎಂದರು.

  • ಬೆಳಗಾವಿ- ಸ್ಮಾರ್ಟ್ ಕಾಮಗಾರಿಯಿಂದ ಸಂಚಾರಕ್ಕೆ ನೂರೆಂಟು ವಿಘ್ನ

    ಬೆಳಗಾವಿ- ಸ್ಮಾರ್ಟ್ ಕಾಮಗಾರಿಯಿಂದ ಸಂಚಾರಕ್ಕೆ ನೂರೆಂಟು ವಿಘ್ನ

    ಬೆಳಗಾವಿ: ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ನಗರಾದ್ಯಂತ ಟ್ರಾಫಿಕ್ ಸಿಗ್ನಲ್ ಸ್ಥಗಿತಗೊಂಡಿದ್ದು, ವಾಹನ ಸವಾರರು ನಿಯಯ ಉಲ್ಲಂಘಿಸಿ ಮನಬಂದಂತೆ ವಾಹನ ಚಲಾಯಿಸಿ ಅಪಾಯಕ್ಕೆ ಮೂನ್ಸೂಚನೆ ನೀಡುತ್ತಿವೆ.

    ವೇಗವಾಗಿ ಚಲಾಯಿಸುವವರಿಗೆ ಈ ಕಾಮಗಾರಿ ವಿಘ್ನವಾಗಿ ಪರಿಣಮಿಸುತ್ತಿದೆ. ಸಂಚಾರ ನಿಯಂತ್ರಿಸುವಲ್ಲಿ ಟ್ರಾಫಿಕ್ ಪೋಲಿಸ್ ಕೈತಪ್ಪುತ್ತಿದೆ. ನಗರದ ಪ್ರಮುಖ ರಸ್ತೆಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಟ್ರಾಫಿಕ್ ಸಿಗ್ನಲ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ನೆಪದಲ್ಲಿ ಸವಾರರು ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಚಲಾಯಿಸುತ್ತಿದ್ದು ಇದರಿಂದ ಪಾದಚಾರಿಗಳಿಗೆ ಅಡಕವಾಗುತ್ತಿದೆ. ಟ್ರಾಫಿಕ್ ಪೊಲೀಸ್ ಸ್ಥಿತಿ ಯಾರಿಗೂ ಹೇಳತೀರದ್ದಾಗಿದೆ.

    ಮುಂಜಾನೆ 8ರಿಂದ 12 ರವರೆಗೆ ಅತಿ ಹೆಚ್ಚು ವಾಹನಗಳು ರಸ್ತೆಯಲ್ಲಿರುತ್ತವೆ. ಮತ್ತೆ ಸಂಜೆ 3 ರಿಂದ 8ರವರೆಗೆ ವಾಹನಗಳ ಹೆಚ್ಚು ಸಂಖ್ಯೆ ಹೆಚ್ಚುತ್ತವೆ. ಟ್ರಾಫಿಕ್ ಸಮಸ್ಯೆಯಿಂದಾಗಿ ಅಶೋಕ ವೃತ್ತ ಹಾಗೂ ಕೆಎಲ್ ಇ ಮಾರ್ಗದಲ್ಲಿ ಸಮಸ್ಯೆ ಉಟಾಗುತ್ತಿದೆ. ನಿತ್ಯವೂ ಸಣ್ಣಪುಟ್ಟ ಅಪಘಾತ ಸಂಭವಿಸುತ್ತಿವೆ. ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ನಿರಂತರವಾಗಿ ಟ್ರಾಫಿಕ್ ನಿಯಂತ್ರಿಸುವ ಅನಿರ್ವಾಯವಿದೆ ಎನ್ನುತ್ತಾರೆ ವಾಹನ ಸವಾರರು. ಕೃಷ್ಣ ದೇವರಾಯ ವೃತ್ತದಿಂದ ಇಳಿಜಾರು ಇರುವ ಕಾರಣ ವಾಹನಗಳು ವೇಗವಾಗಿ ಬರುತ್ತವೆ. ಚನ್ನಮ್ಮ ವೃತ್ತದ ರಸ್ತೆ ದಾಟಲು ಪರದಾಡಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ರಸ್ತೆಯಲ್ಲಿ ಹಂಪ್‍ಗಳನ್ನೂ ನಿರ್ಮಿಸಿಲ್ಲ. ಮಕ್ಕಳನ್ನು ಕರೆದುಕೊಂಡು ರಸ್ತೆ ದಾಟಲು ಹೋದರೆ ಹೃದಯ ಕೈಗೆ ಬರುತ್ತದೆ ಎಂದು ಅಶೋಕ್ ಸದಾಶಿವ ನಗರದ ನಿವಾಸಿಯೊಬ್ಬರು ತಿಳಿಸಿದರು.

    ತಪ್ಪಿದ ನಿಯಂತ್ರಣ: ರೈಲ್ವೆ ವ್ಯಾಪ್ತಿಯಲ್ಲಿರುವ ಅದೆಷ್ಟೂ ವಾಹನ ಈ ಪ್ರಮುಖ ಮಾರ್ಗದಲ್ಲಿ ಸಂಚರಿಸುವ ಅಗತ್ಯವಿದೆ. ಇಲ್ಲಿಯೇ ಕಾಮಗಾರಿ ವಿಳಂಬದಿಂದ ರಸ್ತೆ ಉದ್ದಕ್ಕೂ ವಾಹನ ಸವಾರರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಎರಡೆರಡು ವಾಹನ ಒಂದೇ ಮಾರ್ಗ ಸಂಚರಿಸುವುದರಿಂದ ವಾಹನ ನಿಯಂತ್ರಣ ಹಳ್ಳಹಿಡಿಯುತ್ತಿದೆ.

    ಕಾರ್ಯ ನಿರ್ವಹಿಸದ ಪೊಲೀಸ್: ಸಿಗ್ನಲ್ ಬಳಿಯಲ್ಲಿ ನೀಯೊಜಿಸಲಾದ ಟ್ರಾಫಿಕ್ ಪೊಲೀಸ್ ಕಾರ್ಯನಿರ್ವಸುತ್ತಿಲ್ಲ ಎನ್ನುವುದು ಪಾದಚಾರಿಗಳ ದೂರು. ಸಿಗ್ನಲ್ ಸ್ಥಗಿತಕೊಂಡರೆ ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡ ಪಾವತಿಸಬೇಕು. ವೇಗವಾಗಿ ಸಂಚರಿಸುವ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಪೊಲೀಸ್ ಸಿಬ್ಬಂದಿ ಕಣ್ಮರೆಯಾದೊಡನೆ ವಾಹನ ಸವಾರರು ಸಿಗ್ನಲ್ ಉಲ್ಲಂಘಿಸುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಚಿಲ್ಲರೆ ವ್ಯಾಪಾರಿ, ಅವೈಜ್ಞಾನಿಕ ಆಟೋ ನಿಲ್ದಾಣಗಳಿಂದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಮತ್ತಷ್ಟೂ ಬಿಗಡಾಯಿಸುತ್ತಿದೆ. ಇದರಿಂದ ಪಾದಚಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಸಂಪೂರ್ಣವರೆಗೆ ಆಟೋ, ಚಿಲ್ಲರೆ ವ್ಯಾಪಾಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಈ ಹಾವಳಿ ತಲೆದೂರಿದೆ.

    ಇಲ್ಲಿನ ರೈಲ್ವೇ ಮಾರ್ಗ, ಅಶೋಕ ವೃತ್ತ, ಅಂಬೇಡ್ಕರ್ ಮಾರ್ಗ ಕೃಷ್ಣದೇವರಾಯ ವೃತ್ತ, ಕೆಎಲ್‍ಇ ಮಾರ್ಗ, ಸದಾಶಿವ ನಗರ, ರಾಣಿ ಚನ್ನಮ್ಮ ವೃತ್ತ, ಕೇಂದ್ರ ಬಸ್ ನಿಲ್ದಾಣದ ರಸ್ತೆ ಹಾಗೂ ನಗರ ವಿವಿದ ಕಡೆಗೆ ಸಿಗ್ನಲ್ ಸಮಸ್ಯೆ ಎದುರಾಗುತ್ತಿದೆ.

    ಪೊಲೀಸ್ ಸಿಬ್ಬಂದಿ ಹೈರಾಣ: ಸಿಗ್ನಲ್ ಸ್ಥಗಿತದಿಂದ ಟ್ರಾಫಿಕ್ ಬಳಿಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ದಂಡ ಹಾಕಲು ಪೊಲೀಸ್ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ಕೋಟೆ ಕೆರೆ ಅಶೋಕ ವೃತ್ತ ಬಳಿ ಈ ಸಮಸ್ಯೆ ತಲೆದೂರಿದ್ದು, ನಿಯಮ ಉಲ್ಲಂಘಿಸಿ ವಾಹನ ಸಂಚರಿಸುತ್ತಿದ್ದು ಇದನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸ್ ಹೈರಾಣ ಆಗುತ್ತಿದ್ದಾರೆ.

    ಕಾಮಗಾರಿಯಿಂದ ಸಿಗ್ನಲ್ ಸ್ಥಗಿತಗೊಂಡಿವೆ. ಇದರಿಂದ ವಾಹನ ಸವಾರರು ವೇಗವಾಗಿ ಸಂಚರಿಸುತ್ತಿದ್ದಾರೆ. ಈ ವೇಳೆಯಲ್ಲಿ ಪಾದಚಾರಿಗಳು ಸಂಚಾರಕ್ಕೆ ಅಡಕವಾಗುತ್ತಿದೆ. ಸಣ್ಣಪುಟ್ಟ ಅಪಘಾತ ಸಂಭವಿಸುವ ಮೂನ್ಸೂಚನೆ ಇದೆ ಪೊಲೀಸ್ ಸಿಬ್ಬಂದಿ ಆದಷ್ಟೂ ಟ್ರಾಫಿಕ್ ನಿಯಂತ್ರಸುವ ಕಾರ್ಯ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

  • ಕುಶಾಲನಗರದ ಹೃದಯ ಭಾಗದ ವೃತ್ತದಲ್ಲಿ ಅಡ್ಡಾದಿಡ್ಡಿ ವಾಹನಗಳ ಓಡಾಟ- ನಿತ್ಯವೂ ಟ್ರಾಫಿಕ್ ಕಿರಿಕಿರಿ

    ಕುಶಾಲನಗರದ ಹೃದಯ ಭಾಗದ ವೃತ್ತದಲ್ಲಿ ಅಡ್ಡಾದಿಡ್ಡಿ ವಾಹನಗಳ ಓಡಾಟ- ನಿತ್ಯವೂ ಟ್ರಾಫಿಕ್ ಕಿರಿಕಿರಿ

    ಮಡಿಕೇರಿ: ನೂತನ ಕೇಂದ್ರವಾಗಿ ಸರ್ಕಾರ ಘೋಷಣೆ ಮಾಡಿರುವ ಕುಶಾಲನಗರದಲ್ಲಿ ಕಾನೂನು ಸುವ್ಯವಸ್ಥೆ ಸೇರಿದಂತೆ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಹೆಚ್ಚುವರಿಯಾಗಿ ಗ್ರಾಮಾಂತರ ಹಾಗೂ ಸಂಚಾರ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಕಂಡುಬಂದಿಲ್ಲ.

    ಕುಶಾಲನಗರವು ಕೊಡಗು ಜಿಲ್ಲೆಯ ಪ್ರಮುಖ ವಾಣಿಜ್ಯ ನಗರವಾಗಿದ್ದು, ಇಲ್ಲಿನ ಹೃದಯಭಾಗದಲ್ಲಿ ಮೈಸೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮತ್ತು ಹಾಸನ, ಕೇರಳ ಕಣ್ಣೂರು ರಾಜ್ಯ ಹೆದ್ದಾರಿ ಹಾದು ಹೋಗಿವೆ. ಇದರೊಂದಿಗೆ ನಗರದ ನಾಲ್ಕು ದಿಕ್ಕುಗಳಿಂದ ಕುಶಾಲನಗರಕ್ಕೆ ಬಂದು ಸೇರುವ ರಸ್ತೆಗಳಲ್ಲಿ ನಿತ್ಯವೂ ಹೆಚ್ಚು ಹೆಚ್ಚು ವಾಹನಗಳ ಸಂಚರಿಸುತ್ತಿರುತ್ತವೆ. ಇದರೊಂದಿಗೆ ಕುಶಾಲನಗರದ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳಾದ ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ದುಬಾರೆ ಆನೆ ಕ್ಯಾಂಪ್, ಕಾವೇರಿ ರಿವರ್ ರ‍್ಯಾಫ್ಟಿಂಗ್, ಬೈಲುಕುಪ್ಪೆ ಗೋಲ್ಡನ್ ಟೆಂಪಲ್‍ಗಳಿಗೆ ಪ್ರವಾಸಿಗರು ಆಗಮಿಸುತ್ತಾರೆ.

    ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ಅಪಘಾತಗಳು ಸಂಭವಿಸಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು, ಹಿರಿಯ ನಾಗರಿಕರು, ಪಾದಚಾರಿಗಳಿಗೆ ಪ್ರಾಣಹಾನಿ ಹಾಗೂ ಗಾಯ, ನೋವು ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಅನೇಕ ಮಾರ್ಪಾಡು ಮಾಡಿದೆ.

    ಪಟ್ಟಣದಲ್ಲಿ ನಿತ್ಯವೂ ವಾಹನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆಯೊಂದಿಗೆ ಸಂಚಾರ ನಿಯಮಗಳನ್ನು ಪಾಲಿಸಲು ಅನುಕೂಲವಾಗುವಂತೆ ಕಳೆದ ಎರಡು ವರ್ಷಗಳ ಹಿಂದೆ ಕೂಡ್ಲೂರು ಕೈಗಾರಿಕಾ ಬಡಾವಣೆ ಬಳಿ ಪ್ರತ್ಯೇಕವಾಗಿ ಸಂಚಾರಿ ಪೊಲೀಸ್ ಠಾಣೆ ತೆರೆಯಲಾಗಿದೆ. ಅದೇ ರೀತಿ ಪಟ್ಟಣದ ಕಾರ್ಯಪ್ಪ ವೃತ್ತದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಟ್ರಾಫಿಕ್ ಸಿಗ್ನಲ್‍ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಪಟ್ಟಣದ ರಥಬೀದಿ, ಕಿತ್ತೂರು ರಾಣಿ ಚೆನ್ನಮ್ಮ (ಕನ್ನಿಕಾ) ರಸ್ತೆಯಲ್ಲಿ ಬೆಳಗ್ಗೆ 8ರಿಂದ ರಾತ್ರಿ 9 ಗಂಟೆಯವರೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೂ ದಿನನಿತ್ಯ ವಾಹನ ದಟ್ಟಣೆಯಿಂದ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಕುಶಾಲನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹಾಗೂ ವಾಹನ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದ್ದು, ಪಟ್ಟಣದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಆಟೋರಿಕ್ಷಾಗಳಿವೆ. ನಿಗದಿತ ಆಟೋ ಸ್ಟ್ಯಾಂಡ್‍ಗಳ ಕೊರತೆ ಕೂಡ ಇದೆ. ಎಲ್ಲೆಂದರಲ್ಲಿ ಆಟೋರಿಕ್ಷಾ ನಿಲ್ಲಿಸಲಾಗುತ್ತಿದೆ. ಇದರಿಂದ ಕೂಡ ಸುಗಮ ಸಂಚಾರ ವ್ಯವಸ್ಥೆಗೆ ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.