Tag: ಟ್ರಾಫಿಕ್ ಸಮಸ್ಯೆ

  • ಟ್ರಾಫಿಕ್‌ ಸಮಸ್ಯೆ ಒಳ್ಳೆಯದು, ಇದು ಬೆಂಗಳೂರಿನ ಪ್ರಗತಿಯ ದಿಕ್ಸೂಚಿ: ಪ್ರಿಯಾಂಕ್‌ ಖರ್ಗೆ ವ್ಯಾಖ್ಯಾನ

    ಟ್ರಾಫಿಕ್‌ ಸಮಸ್ಯೆ ಒಳ್ಳೆಯದು, ಇದು ಬೆಂಗಳೂರಿನ ಪ್ರಗತಿಯ ದಿಕ್ಸೂಚಿ: ಪ್ರಿಯಾಂಕ್‌ ಖರ್ಗೆ ವ್ಯಾಖ್ಯಾನ

    ಬೆಂಗಳೂರು: ಟ್ರಾಫಿಕ್‌ ಸಮಸ್ಯೆ (Traffic Problem) ಒಳ್ಳೆಯದು, ಇದು ಬೆಂಗಳೂರಿನ ಪ್ರಗತಿಯ ದಿಕ್ಸೂಚಿ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಹೊಸ ವ್ಯಾಖ್ಯಾನ ಕೊಟ್ಟಿದ್ದಾರೆ.

    Mobility Symposium 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಜನಸಂಖ್ಯೆಯ ಸುಮಾರು 75.5 ಪ್ರತಿಶತ ಜನರು ಕೆಲಸ ಮಾಡುವ ಜನಸಂಖ್ಯೆಯ ಭಾಗವಾಗಿದ್ದಾರೆ. ನಾವು ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದ್ದೇವೆ. ಹಾಗೆ ನೋಡಿದರೆ ಟ್ರಾಫಿಕ್‌ ಸಮಸ್ಯೆ ಒಂದು ಲೆಕ್ಕದಲ್ಲಿ ಒಳ್ಳೆಯದು. ಇದು ನಾವು ಬೆಳೆಯುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ. ಆದರೂ ಟ್ರಾಫಿಕ್‌ ಸಮಸ್ಯೆಯನ್ನು ನಾವು ಬಗೆ ಹರಿಸಿಕೊಳ್ಳಬೇಕು ಎಂದು ಹೇಳಿದರು.

    ಬೆಂಗಳೂರಿನಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿರುವ ಕಾರಣ ಅತಿ ಹೆಚ್ಚು ಸಂಖ್ಯೆಯ ವಲಸಿಗರನ್ನು ಬರುತ್ತಿದ್ದಾರೆ. ಬೆಂಗಳೂರಿನಲ್ಲಿ ಈಗ ಸುಮಾರು ಸುಮಾರು 82 ಲಕ್ಷ ದ್ವಿಚಕ್ರ ವಾಹನಗಳು ಮತ್ತು 25 ಲಕ್ಷ ನಾಲ್ಕು ಚಕ್ರಗಳ ವಾಹನಗಳು ಸೇರಿ ಒಟ್ಟು 1.2 ಕೋಟಿ ನೋಂದಾಯಿತ ವಾಹನಗಳಿವೆ ಎಂದರು.

    ತನ್ನ ಹೇಳಿಕೆಗೆ ಟೀಕೆ ವ್ಯಕ್ತವಾಗುತ್ತಿದ್ದಂತೆ ಪ್ರಿಯಾಕ್‌ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡಿದ್ದಾರೆ. ನಾವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು, ಮುಂದಿನ ದಶಕದಲ್ಲಿ ನಮ್ಮ ಜಿಡಿಪಿ ವಾರ್ಷಿಕವಾಗಿ 8.5% ಕ್ಕಿಂತ ಹೆಚ್ಚು ಬೆಳೆಯುವ ನಿರೀಕ್ಷೆಯಿದೆ. ಕಳೆದ ವರ್ಷ ಬೆಂಗಳೂರಿನ ರಸ್ತೆಗಳಿಗೆ 7 ಲಕ್ಷಕ್ಕೂ ಹೆಚ್ಚು ಹೊಸ ವಾಹನಗಳು ಇಳಿದಿವೆ. ಆಗಸ್ಟ್ 2025 ರಲ್ಲಿ 58,913 ಹೊಸ ವಾಹನಗಳನ್ನು ನೋಂದಾಯಿಸಲಾಗಿದೆ ಎಂದು ಹೇಳಿದ್ದಾರೆ.

    ಈ ಸಂಖ್ಯೆಗಳು ಬೆಳೆಯುತ್ತಿರುವ ನಗರದ ಪ್ರತಿಬಿಂಬವಾಗಿದ್ದರೂ ಇದು ನಮ್ಮ ರಸ್ತೆಗಳು ಏಕೆ ಬಿರುಕು ಬಿಡುತ್ತಿವೆ ಎಂಬುದರ ಸೂಚನೆಯಾಗಿದೆ. ಸರ್ಕಾರ ತಜ್ಞರು ಮತ್ತು ಕಾರ್ಪೊರೇಟ್‌ಗಳ ಸಹಯೋಗದೊಂದಿಗೆ ಈ ಸವಾಲುಗಳನ್ನು ಪರಿಹರಿಸುತ್ತಿದೆ ಎಂದು ತಿಳಿಸಿದರು.

  • ಇಬ್ಲೂರು ಜಂಕ್ಷನ್ ಟ್ರಾಫಿಕ್ ಸಮಸ್ಯೆ: ಅಜೀಂ ಪ್ರೇಮ್ ಜೀಗೆ ಸಿಎಂ ಪತ್ರ

    ಇಬ್ಲೂರು ಜಂಕ್ಷನ್ ಟ್ರಾಫಿಕ್ ಸಮಸ್ಯೆ: ಅಜೀಂ ಪ್ರೇಮ್ ಜೀಗೆ ಸಿಎಂ ಪತ್ರ

    – ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರ ಅವಕಾಶಕ್ಕೆ ಮನವಿ

    ಬೆಂಗಳೂರು: ಇಬ್ಲೂರು ಜಂಕ್ಷನ್ ಹೊರ ವರ್ತುಲ ರಸ್ತೆ (Outer Ring Road) ಕಾರಿಡಾರ್‌ನಲ್ಲಿ ಟ್ರಾಫಿಕ್ ಸಮಸ್ಯೆಗೆ ವಿಪ್ರೋ ಕ್ಯಾಂಪಸ್ ಮೂಲಕ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ. ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನಗಳ ಸಂಚಾರ ಬಳಕೆಗೆ ಸಂಬಂಧಿಸಿದಂತೆ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜೀಗೆ (Azim Premji) ಸಿಎಂ ಸಿದ್ದರಾಮಯ್ಯ (Siddaramaiah) ಪತ್ರ ಬರೆದಿದ್ದಾರೆ.

    ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಔಟರ್ ರಿಂಗ್ ರೋಡ್ ಟ್ರಾಫಿಕ್ ಸಮಸ್ಯೆ ಒಂದು. ಇಬ್ಲೂರು ಜಂಕ್ಷನ್‌ನಲ್ಲಿರುವ ಹೊರವರ್ತುಲ ರಸ್ತೆ ಕಾರಿಡಾರ್‌ನಲ್ಲಿ ಪೀಕ್ ಅವರ್‌ನಲ್ಲಿ ತೀವ್ರ ಸಂಚಾರ ದಟ್ಟಣೆ ಇದೆ. ಇದು ಚಲನಶೀಲತೆ, ಉತ್ಪಾದಕತೆ, ನಗರ ಜೀವನದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಗಳ ವರದಿಯನ್ನ ಅಧಿಕಾರಿಗಳು ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರ ಮಾಡ್ತಿರೋ ಜಾತಿ ಗಣತಿ ನಾವು ಒಪ್ಪಲ್ಲ: ಸಿ.ಸಿ. ಪಾಟೀಲ್

    ಪರಸ್ಪರ ಒಪ್ಪಿತ ನಿಯಮಗಳು ಮತ್ತು ಅಗತ್ಯ ಭದ್ರತಾ ಪರಿಗಣನೆಗಳಿಗೆ ಒಳಪಟ್ಟು ವಿಪ್ರೋ ಕ್ಯಾಂಪಸ್‌ನಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲು ಸಾಧ್ಯತೆಗಳಿವೆ. ಇದರಿಂದಾಗಿ ವಿಶೇಷವಾಗಿ ಕಚೇರಿಗಳ ಪೀಕ್ ಅವರ್‌ನಲ್ಲಿ, ಸುಮಾರು 30% ರಷ್ಟು ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಉಪನ್ಯಾಸಕರಿಲ್ಲದೇ ಪಾಠ ನಡೆಯುತ್ತಿಲ್ಲ- ಖಾಲಿ ಇರೋ ಹುದ್ದೆ ಶೀಘ್ರ ಭರ್ತಿ ಮಾಡಿ: ಎಬಿವಿಪಿ

    ನಿಮ್ಮ ಸಹಕಾರದಿಂದ ಸಂಚಾರ ಅಡಚಣೆಗಳನ್ನು ನಿವಾರಿಸಬಹುದು. ವಾಸಯೋಗ್ಯ ಬೆಂಗಳೂರಿಗೆ ಕೊಡುಗೆ ನೀಡುವಲ್ಲಿ ಬಹಳ ಸಹಾಯ ಮಾಡುತ್ತದೆ. ನಿಮ್ಮ ತಂಡವು ನಮ್ಮ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಪರಸ್ಪರ ಸ್ವೀಕಾರಾರ್ಹವಾದ ಯೋಜನೆಯನ್ನ ಆದಷ್ಟು ಬೇಗ ರೂಪಿಸಲು ನಾನು ಕೃತಜ್ಞನಾಗಿದ್ದೇನೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಸೆ.19 ಶುಕ್ರವಾರದಂದು ನಡೆದಿದ್ದ ಸಭೆಯಲ್ಲಿ ವಿಪ್ರೋ ಕ್ಯಾಂಪಸ್ ಬಳಕೆಗೆ ಸಂಬಂಧ ಅಧಿಕಾರಿಗಳು ಪ್ರಸ್ತಾಪ ಇಟ್ಟಿದ್ರು ಎನ್ನಲಾಗಿದ್ದು, ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜೀಗೆ ಪತ್ರ ಬರೆಯುವಂತೆ ಸಲಹೆಯೂ ಕೇಳಿಬಂದಿತ್ತು. ಹಾಗಾಗಿ ಸೆ.19ರಂದೇ ಸಿಎಂ ಪತ್ರ ಬರೆದು ಮನವಿ ಮಾಡಿದ್ದಾರೆ.

  • Video Viral | ಗುರುಗ್ರಾಮ್‌ ಟ್ರಾಫಿಕ್‌ಗೆ ಬೇಸತ್ತು ಸ್ಕೂಟರ್‌ನ್ನು ಭುಜದ ಮೇಲೆ ಹೊತ್ತೊಯ್ದ ವ್ಯಕ್ತಿ

    Video Viral | ಗುರುಗ್ರಾಮ್‌ ಟ್ರಾಫಿಕ್‌ಗೆ ಬೇಸತ್ತು ಸ್ಕೂಟರ್‌ನ್ನು ಭುಜದ ಮೇಲೆ ಹೊತ್ತೊಯ್ದ ವ್ಯಕ್ತಿ

    ಚಂಡೀಗಢ: ಮಳೆಯಿಂದಾಗಿ ಹೆಚ್ಚಿದ ಗುರುಗ್ರಾಮ್ (Gurugram) ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೋರ್ವ ಹೆಗಲ ಮೇಲೆ ಸ್ಕೂಟರ್ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಉತ್ತರ ಭಾರತದ (North India) ಹಲವೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಒಂದಿಲ್ಲೊಂದು ಸಮಸ್ಯೆ ಉಂಟಾಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಮಳೆಯಬ್ಬರದಿಂದಾಗಿ ಗುರುಗ್ರಾಮ್‌ದಲ್ಲಿ ಟ್ರಾಫಿಕ್ (Gurugram traffic) ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.ಇದನ್ನೂ ಓದಿ: ಅಪಾಯ ಮಟ್ಟ ಮೀರಿದ ಯಮುನಾ ನದಿ – ದೆಹಲಿ ಸಚಿವಾಲಯಕ್ಕೂ ನುಗ್ಗಿದ ಪ್ರವಾಹ ನೀರು

    ವೈರಲ್ ಆದ ವಿಡಿಯೋದಲ್ಲಿ, ಗುರುಗ್ರಾಮ್‌ದ ರಸ್ತೆಯೊಂದರಲ್ಲಿ ಟ್ರಾಫಿಕ್ ಹೆಚ್ಚಾಗಿದ್ದಕ್ಕೆ ವ್ಯಕ್ತಿಯೋರ್ವ ತಮ್ಮ ಸ್ಕೂಟರ್‌ನ್ನು ಹೆಗಲ ಮೇಲೆ ಇಟ್ಟುಕೊಂಡು ಹೋಗುತ್ತಿದ್ದಾರೆ. ಜೊತೆಗೆ ಇನ್ನೋರ್ವ ವ್ಯಕ್ತಿ ಅದಕ್ಕೆ ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋಗೆ ಹಲವು ಕಾಮೆಂಟ್ಸ್‌ಗಳು ಬಂದಿದ್ದು, ಅದರಲ್ಲಿ ಒಬ್ಬರು ಗುರುಗ್ರಾಮ್‌ದ ಟ್ರಾಫಿಕ್‌ಗೆ ಇದೊಂದೇ ಪರಿಹಾರ ಎಂದು ಬರೆದುಕೊಂಡಿದ್ದಾರೆ.

  • ಕೆಲ ಪೊಲೀಸರು ರಿಯಲ್‌ ಎಸ್ಟೇಟ್‌ ಕೆಲಸ ಮಾಡ್ತಿದ್ದಾರೆ – ಸಿದ್ದರಾಮಯ್ಯ ಗರಂ

    ಕೆಲ ಪೊಲೀಸರು ರಿಯಲ್‌ ಎಸ್ಟೇಟ್‌ ಕೆಲಸ ಮಾಡ್ತಿದ್ದಾರೆ – ಸಿದ್ದರಾಮಯ್ಯ ಗರಂ

    – ಹುಬ್ಬಳ್ಳಿಯಲ್ಲಿ ನಡೆದ 2 ಕೊಲೆಗೆ ಪೊಲೀಸರ ವೈಫಲ್ಯವೇ ಕಾರಣ
    – ಪ್ರಧಾನಿಗಳಂತೆ ನಾನು ರೋಡ್‌ ಬ್ಲಾಕ್‌ ಮಾಡಿಸಲ್ಲ ಎಂದ ಸಿಎಂ

    ಬೆಂಗಳೂರು: ಕೆಲ ಪೊಲೀಸರು (Karnataka Police) ರಿಯಲ್‌ ಎಸ್ಟೇಟ್‌ ಕೆಲಸ ಮಾಡ್ತಿದ್ದಾರೆ. ಡ್ರಗ್ಸ್, ರೌಡಿಸಂ, ಮಟ್ಕಾ ದಂಧೆಗಳು ಸ್ಥಳೀಯ ಪೊಲೀಸರಿಗೆ ಗೊತ್ತಿಲ್ಲದೇ ನಡೆಯೋದಿಲ್ಲ. ಹೀಗಾಗಿ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ತೇವೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

    ನಗರದ ನೃಪತುಂಗ ರಸ್ತೆಯಲ್ಲಿರುವ ಡಿಜಿ-ಐಜಿಪಿ ಕಚೇರಿಯಲ್ಲಿಂದು ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳ ಜೊತೆ ವಾರ್ಷಿಕ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್‌ (G Parameshwara), ವಲಯ ಐಜಿಪಿ, ಎಸ್ಪಿ, ಬೆಂಗಳೂರು ಡಿಸಿಪಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಚನ್ನಪಟ್ಟಣ ಮೈತ್ರಿ ಕಗ್ಗಂಟು- ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಸುಳಿವು ನೀಡಿದ ಸಿಪಿವೈ

    ವಿವಿಧ ಕೈಪಿಡಿ, ಆಪ್‌, ಪ್ರಾತ್ಯಕ್ಷಿಕೆ ಬಿಡುಗಡೆ:
    ವಾರ್ಷಿಕ ಸಭೆ ಆರಂಭಿಸುವುದಕ್ಕೂ ಮುನ್ನ ಸಿಎಂ ವಿಧಿ ವಿಜ್ಞಾನ ಇಲಾಖೆಯಿಂದ ʻಸೀನ್ ಆಫ್ ಕ್ರೈಂʼ ಕೈಪಿಡಿ ಬಿಡುಗಡೆಗೊಳಿಸಿದರು. ಬಳಿಕ ಹೊಸ ಕ್ರಿಮಿನಲ್‌ ಕಾನೂನಿಗೆ (New Criminal Law) ಸಂಬಂಧಿಸಿದ ʻಸಂಚಯʼ ಮೊಬೈಲ್ ಆಪ್ ಅನಾವರಣಗೊಳಿಸಿದರು. ಜೊತೆಗೆ ಹೊಯ್ಸಳ ವಾಹನಗಳ ರಿಯಲ್ ಟೈಂ ಟ್ರ್ಯಾಕಿಂಗ್‌ ಪ್ರಾತ್ಯಕ್ಷಿಕೆ, ಆಡಿಯೋ ವಿಡಿಯೋ ಸಂಪರ್ಕ ಮಾಡುವ ಟೆಕ್ನಾಲಜಿಯುಳ್ಳ ʻಸೇಫ್ ಕನೆಕ್ಟ್ ತಂತ್ರಾಂಶʼ, ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ ತನಿಖಾ ಕೈಪಿಡಿ, ಆನ್‌ಲೈನ್‌ ವಂಚನೆ ಪ್ರಕರಣಗಳ ಕುರಿತು ತನಿಖೆ ನಡೆಸುವ ಕೈಪಿಡಿಗಳನ್ನು ಸಿಎಂ ಬಿಡುಗಡೆ ಮಾಡಿದರು. ಇದನ್ನೂ ಓದಿ: ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್‌ಗೆ ತಾತ್ಕಾಲಿಕ ಬ್ರೇಕ್

    ಬೇಜವಾಬ್ದಾರಿ ಕೆಲಸ ಮಾಡಿದ್ರೆ ಸಹಿಸೋದಿಲ್ಲ:
    ವಾರ್ಷಿಕ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಸಾರ್ವಜನಿಕ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಲು ಹೇಳಿದ್ದೇನೆ. ಸಾರ್ವಜನಿಕರು ನಿರ್ಭಯವಾಗಿ ಬದುಕಬೇಕಾದ ವಾತಾವರಣ ನಿರ್ಮಾಣ ಮಾಡಬೇಕಿದೆ. ಒಳ್ಳೆಯ ಕೆಲಸ ಮಾಡಿದ್ರೆ ನಮ್ಮ ಸರ್ಕಾರ ಬೆನ್ನು ತಟ್ಟುತ್ತೆ. ಬೇಜವಾಬ್ದಾರಿ ಕೆಲಸ ಮಾಡಿದ್ರೆ ಸಹಿಸೋದಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ್ದ 14,000 ಕೋಟಿ ಹಣ ರಾಜ್ಯ ಸರ್ಕಾರದಿಂದ ದುರ್ಬಳಕೆ – ಬೊಮ್ಮಾಯಿ ಆರೋಪ

    ಹುಬ್ಬಳ್ಳಿಯಲ್ಲಿ 2 ಕೊಲೆಗೆ ಪೊಲೀಸರ ವೈಫಲ್ಯ ಕಾರಣ:
    ಮುಂದುವರಿದು ಮಾತನಾಡಿದ ಸಿಎಂ, ಕೆಲ ಪೊಲೀಸರೇ ರಿಯಲ್ ಎಸ್ಟೇಟ್ ಕೆಲಸ ಮಾಡ್ತಿದ್ದಾರೆ. ಹೀಗಾಗಿ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ತೇವೆ. ಎಸ್ಪಿ, ಡಿಸಿಪಿ, ಐಜಿಪಿ, ಪೊಲೀಸ್ ಆಯುಕ್ತರು ಪ್ರತಿದಿನ ಪೊಲೀಸ್ ಠಾಣೆಗೆ ಭೇಟಿ ಕೊಡಬೇಕು. ಡ್ರಗ್ಸ್, ರೌಡಿಸಂ, ಮಟ್ಕಾ ದಂದೆಗಳು ಸ್ಥಳೀಯ ಪೊಲೀಸರಿಗೆ ಗೊತ್ತಿಲ್ಲದೇ ನಡೆಯೋದಿಲ್ಲ. ಕೆಲವು ಕಡೆ ಪೊಲೀಸರು ಇಂತಹವರ ಜೊತೆಯಲ್ಲಿ ಶಾಮೀಲು ಆಗಿಬಿಟ್ಟಿರುತ್ತಾರೆ. ಗುಪ್ತಚರ ಇಲಾಖೆ ಮತ್ತು ಸ್ಥಳೀಯ ಪೊಲೀಸರ ಜೊತೆ ಸರಿಯಾದ ಸಂಬಂಧ ಇಲ್ಲ. ಗುಪ್ತಚರ ಇಲಾಖೆ ಮೊದಲೇ ಎಚ್ಚರಿಕೆ ಕೊಡಬೇಕು. ಹುಬ್ಬಳ್ಳಿಯಲ್ಲಿ ಎರಡು ಕೊಲೆ ಆಗೋದಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎಂದು ಗರಂ ಆಗಿದ್ದಾರೆ.

    ಅಲ್ಲದೇ ಕೆಲ ಪೊಲೀಸರು ಪಕ್ಷಕ್ಕೆ ಸಂಬಂಧಿಸಿದ ಫ್ಲಾಗ್‌ ಹಾಕಿಕೊಳ್ತಾರೆ. ಪೊಲೀಸರು ಯಾವುದೇ ಕೋಮುವಾದದ ಕೆಲಸ ಮಾಡಬಾರದು, ಕಾನೂನು ಸುವ್ಯವಸ್ಥೆ ಚೆನ್ನಾಗಿರೆ ಹೂಡಿಕೆ ಜಾಸ್ತಿ ಆಗುತ್ತೆ. ಉದ್ಯೋಗ ಸೃಷ್ಟಿ ಆಗುತ್ತೆ ಎಂದು ಎಚ್ಚರಿಸಿದ್ದಾರೆ. ಇದರೊಂದಿಗೆ ತ್ತೀಚಿನ ದಿನಗಳಲ್ಲಿ ಸುಳ್ಳುಸುದ್ದಿ ಹಬ್ಬಿಸೋರ ಸಂಖ್ಯೆ ಜಾಸ್ತಿ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸುಳ್ಳು ಸುದ್ದಿಗಳು ಹರಿದುಬರುತ್ತಿವೆ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

    ಪ್ರಧಾನಿಗಳ ರೀತಿ ರೋಡ್‌ ಬ್ಲಾಕ್‌ ಮಾಡಿಸಲ್ಲ:
    ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ನನಗೆ ಟ್ರಾಫಿಕ್ ಸಮಸ್ಯೆ ಕಾಣೋದಿಲ್ಲ. ನಾನು ಹೋಗೋವಾಗ ಪೊಲೀಸರೇ ಬಿಡಿಸಿಬಿಡ್ತಾರೆ. ನನಗೆ ಝೀರೋ ಟ್ರಾಫಿಕ್ ಬೇಡ ಅಂದಿದ್ದೇನೆ. ಪ್ರಧಾನ ಮಂತ್ರಿಗಳ ರೀತಿ ನಾನು ರೋಡ್ ಬ್ಲಾಕ್ ಮಾಡಿಸೋದಿಲ್ಲ. ಅವರು ಬಂದಾಗ ನೀವು ಯಾರಾದರೂ ಹತ್ತಿರ ಹೋಗೋಕೆ ಸಾಧ್ಯ ಇದ್ಯಾ? ಆದ್ರೆ ನಾನು ಅಷ್ಟೊಂದು ಸವಲತ್ತು ತೆಗೆದುಕೊಳ್ಳೋದಿಲ್ಲ ಎಂದು ಕುಟುಕಿದ್ದಾರೆ.

  • ಸಂಚಾರ ದಟ್ಟಣೆ ನಿವಾರಣೆಗೆ ಪ್ಲಾನ್- ಇದೇ ವರ್ಷ ತಲೆ ಎತ್ತಲಿವೆ 5 ಫ್ಲೈಓವರ್‌ಗಳು!

    ಸಂಚಾರ ದಟ್ಟಣೆ ನಿವಾರಣೆಗೆ ಪ್ಲಾನ್- ಇದೇ ವರ್ಷ ತಲೆ ಎತ್ತಲಿವೆ 5 ಫ್ಲೈಓವರ್‌ಗಳು!

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ (Bengaluru Traffic) ಸಮಸ್ಯೆ. ಸಂಚಾರ ದಟ್ಟಣೆ ಹೆಚ್ಚಾಗಿದೆ. ಸಮಸ್ಯೆ ನಿವಾರಣೆಗೆ ಅಂತಾ ಬಿಬಿಎಂಪಿ ಫ್ಲೈಓವರ್ ಗಳನ್ನ ನಿರ್ಮಾಣ ಮಾಡಿದೆ. ಈಗ ಮತ್ತೆ ಹೊಸದಾಗಿ ನಗರದಲ್ಲಿ ನಾಲ್ಕೈದು ಫ್ಲೈಓವರ್ (Fly Over) ನಿರ್ಮಾಣಕ್ಕೆ ಪ್ಲಾನ್ ಮಾಡಿದೆ.

    ಬೆಂಗಳೂರಿನಂತಹ ಮಹಾನಗರದಲ್ಲಿ ಸಂಚಾರ ದಟ್ಟಣೆ ದಟ್ಟವಾಗಿದೆ. ಪ್ರಪಂಚದಲ್ಲೆ ಸಂಚಾರ ದಟ್ಟಣೆ ವಿಚಾರದಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಇದೆ. ಈ ಕುಖ್ಯಾತಿಯಿಂದ ಹೊರಬರಲು ಸರ್ಕಾರ ಮತ್ತು ಬಿಬಿಎಂಪಿ ಹರಸಾಹಸ ಪಡ್ತಿದೆ.. ನಗರದಲ್ಲಿ ರಸ್ತೆಗಳ ಅಭಿವೃದ್ಧಿ ಮತ್ತು ವಿಸ್ತರಣೆ ಮಾಡಿ ಸಂಚಾರ ದಟ್ಟಣೆ ನಿಯಂತ್ರಣ ಮಾಡ್ತಾ ಇದ್ದಾರೆ. ಬಿಬಿಎಂಪಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಶತ ಪ್ರಯತ್ನ ಮಾಡ್ತಾ ಇದೆ. ಆ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‍ನಲ್ಲಿ ಬಿಬಿಎಂಪಿ ಈ ವರ್ಷ ಹೊಸ ಐದು ಫ್ಲೈಓವರ್‍ಗಳ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಅಂತಾನೇ 200ಕ್ಕೂ ಹೆಚ್ಚು ಕೋಟಿ ಮೀಸಲಿಟ್ಟಿದೆ. ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆ ಒಡೆಯಲು ಸುಮಲತಾ ರಣತಂತ್ರ

    ಬೆಂಗಳೂರಿನ ಪಶ್ಚಿಮ ವಲಯ, ದಾಸರಹಳ್ಳಿ ವಲಯ ಮತ್ತು ಯಲಹಂಕ ವಲಯಗಳಲ್ಲಿ ಹೆಚ್ಚು ಸಂಚಾರ ದಟ್ಟಣೆ ಆಗ್ತಿದೆ. ಭಾಗಗಳನ್ನ ಗುರುತಿಸಿ ಫ್ಲೈ ಓವರ್ ನಿರ್ಮಾಣಕ್ಕೆ ಮುಂದಾಗಿದೆ. ಎಷ್ಟೆಷ್ಟು ವೆಚ್ಚದಲ್ಲಿ ಎಲ್ಲೆಲ್ಲಿ ಫ್ಲೈ ಓವರ್ ನಿರ್ಮಾಣ ಆಗ್ತಿದೆ ಅಂತಾ ನೋಡೋದಾದ್ರೆ..
    > ಮತ್ತಿಕೆರೆ ತಿರುವಿನ ಗೋಕುಲ್ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಾಣ – 40 ಕೋಟಿ ವೆಚ್ಚ
    > ಜಾಲಹಳ್ಳಿ ಬಳಿಯ ಓಆರ್‍ಆರ್ ಪೈಪ್‍ಲೈನ್ ಬಳಿ ಫ್ಲೈ ಓವರ್ – 40 ಕೋಟಿ ವೆಚ್ಚ
    > ಮೇಖ್ರಿ ಸರ್ಕಲ್ ಅಂಡರ್ ಪಾಸ್‍ನಿಂದ ಜಯಮಹಲ್ ರಸ್ತೆವರೆಗೂ ಫ್ಲೈ ಓವರ್ – 65 ಕೋಟಿ
    > ಸದಾಶಿವನಗರ ಪೊಲೀಸ್ ಸ್ಟೇಷನ್ ಸರ್ಕಲ್ ಬಳಿ ಫ್ಲೈ ಓವರ್ – 40 ಕೋಟಿ
    > ಯಲಹಂಕ ರೈತ ಸಂತೆ ಬಳಿ ಅಂಡರ್ ಪಾಸ್

    ಐದು ಫ್ಲೈ ಓವರ್‍ಗಳ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದು, ಈ ವರ್ಷದಲ್ಲಿ ಕೆಲಸ ಮುಗಿಸೋ ಕಾಮಗಾರಿ ಕಂಪ್ಲೀಟ್ ಮಾಡೋ ಪ್ಲಾನ್ ಮಾಡಿದ್ದಾರೆ. ಈ ವರ್ಷ ಒಳಗೆ ಫ್ಲೈ ಓವರ್ ನಿರ್ಮಾಣ ಮಾಡ್ತಾರಾ ಇಲ್ವಾಕಾದು ನೋಡಬೇಕಿದೆ.

  • ಕಡಿಮೆಯಾಗುತ್ತಿದೆ ಸಿಲಿಕಾನ್‌ ಸಿಟಿಯ ಟ್ರಾಫಿಕ್ ಸಮಸ್ಯೆ

    ಕಡಿಮೆಯಾಗುತ್ತಿದೆ ಸಿಲಿಕಾನ್‌ ಸಿಟಿಯ ಟ್ರಾಫಿಕ್ ಸಮಸ್ಯೆ

    ಬೆಂಗಳೂರು: ಸಿಲಿಕಾನ್‌ ಸಿಟಿಯ ಟ್ರಾಫಿಕ್ ಸಮಸ್ಯೆ(Bengaluru Traffic Problem) ನಿಧನವಾಗಿ ಕಡಿಮೆಯಾಗುತ್ತಿದೆ.

    ಬೆಳಗ್ಗೆ ಮತ್ತು ಸಂಜೆ ವಾಹನದಟ್ಟಣೆ ಇದ್ದರೂ ಹಲವು ಕಡೆ ವಾಹನ ಸವಾರರು ವೀಕೆಂಡ್‌ ಸಂಚಾರದಷ್ಟೇ ಸಲೀಸಾಗಿ ಸಂಚಾರ ಮಾಡುತ್ತಿದ್ದಾರೆ. ಟ್ರಾಫಿಕ್ ಕಿರಿಕಿರಿಗೆ ಸ್ಪೆಷಲ್ ಕಮೀಷನರ್ ಎಂ.ಎ ಸಲೀಂ ಮತ್ತು ಜಂಟೀ ಆಯುಕ್ತ ಅನುಚೇತ್‌ ಕಾರ್ಯಕ್ಷಮತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಏನು ಬದಲಾವಣೆಯಾಗಿದೆ?
    ಒಂದೇ ರಸ್ತೆಯಲ್ಲಿ 2-3 ಸಿಗ್ನಲ್‍ಗಳಿದ್ದರೆ ಒಂದೇ ಬಾರಿಗೆ ಆನ್-ಆಫ್ ಮಾಡಲಾಗುತ್ತಿದೆ. ಇದರಿಂದ ಪ್ರತೀ ಸಿಗ್ನಲ್‍ನಲ್ಲಿ ಸವಾರರು ಕಾಯುವುದು ತಪ್ಪುತ್ತಿದೆ.

    ಬೆಳಗ್ಗೆ 7:30ಕ್ಕೆ ಐಪಿಎಸ್ ಅಧಿಕಾರಿಗಳು ಸೇರಿದಂತೆ ಟ್ರಾಫಿಕ್ ಪೊಲೀಸರು ರಸ್ತೆ ಮೇಲಿರಬೇಕು. ಅರ್ಧ ಗಂಟೆ ಮೊದಲೇ ಎಲ್ಲಾ ಸಿಬ್ಬಂದಿ ಪ್ರಮುಖ ಜಂಕ್ಷನ್‍ಗಳಲ್ಲಿರಬೇಕು ಎಂದು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು

    ಸಣ್ಣ-ಪುಟ್ಟ ತಿರುವುಗಳಲ್ಲೂ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ಫೈನ್ ವಸೂಲಿ ಸಿಬ್ಬಂದಿಯಲ್ಲಿ ಕಡಿತ ಮಾಡಿ ಟ್ರಾಫಿಕ್ ನಿಯಂತ್ರಣಕ್ಕೆ ನಿಯೋಜನೆ ಮಾಡಲಾಗಿದೆ.

    ಜಾಸ್ತಿ ವಾಹನದಟ್ಟಣೆ ಇರುವ ಸಮಯದಲ್ಲಿ ಗೂಡ್ಸ್ ಗಾಡಿಗಳಿಗೆ ನಗರ ಪ್ರವೇಶ ನಿರ್ಬಂಧ ಹೇರಲಾಗಿದೆ. ಮೆಟ್ರೋ ಕಾಮಗಾರಿ ಇದ್ದರೂ ರಿಂಗ್ ರಸ್ತೆಯಲ್ಲಿ ಸರ್ವಿಸ್ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಬಳಕೆ ಮಾಡಲಾಗಿದ್ದು, ಪಾದಾಚಾರಿಗಳಿಗೆ ಅಂಡರ್ ಪಾಸ್ ಬಳಸುವಂತೆ ಸಿಬ್ಬಂದಿ ಮನವೊಲಿಕೆ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರೀ ಮಳೆ – UP 10 ಜಿಲ್ಲೆಗಳಲ್ಲಿ ಶಾಲೆಗಳು ಬಂದ್

    ಭಾರೀ ಮಳೆ – UP 10 ಜಿಲ್ಲೆಗಳಲ್ಲಿ ಶಾಲೆಗಳು ಬಂದ್

    ಲಕ್ನೋ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರಪ್ರದೇಶದ (Uttar Pradesh) ಸುಮಾರು 10 ಜಿಲ್ಲೆಗಳಲ್ಲಿ ಶಾಲೆಗಳನ್ನು (Schools) ಬಂದ್ ಮಾಡಲಾಗಿದೆ. ಗುರುಗ್ರಾಮದಲ್ಲಿರುವ ಖಾಸಗಿ (Private Company) ಕಂಪನಿಗಳು ಉದ್ಯೋಗಿಗಳಿಗೆ (Employee) ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ.

    ಉತ್ತರಪ್ರದೇಶದ ಕೆಲ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ (Heavy Rain) ಶಾಲೆ ಮುಚ್ಚಲಾಗಿದೆ. ಸಿಡಿಲು ಬಡಿದು ಗೋಡೆ ಕುಸಿದ ಘಟನೆಯಲ್ಲಿ 13 ಜನ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್ ಸರ್ವರ್ ಡೌನ್ – ಫೋಟೋ, ವೀಡಿಯೋ ಅಪ್‍ಲೋಡ್ ಮಾಡಲಾಗದೇ ಜನರ ಪರದಾಟ

    ದೆಹಲಿಯಲ್ಲೂ (NewDelhi) ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ (Rain Floods Delhi Roads). ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ಹೆಚ್ಚಾಗಿದ್ದು, ಟ್ರಾಫಿಕ್ ಸಮಸ್ಯೆ (Traffic Problem) ನಿಯಂತ್ರಿಸುವಂತೆ ಸಹಾಯವಾಣಿಗೆ (HelpLine) ಕರೆಗಳು ಬರಲಾರಂಭಿಸಿವೆ. ರಕ್ಷಣಾತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಅಲ್ಲಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲಾಗುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಮೋದಿ ಕಾರ್ಯಕ್ರಮಕ್ಕೆ ಹೋಗಿಬರುತ್ತಿದ್ದ ಬಸ್ ಅಪಘಾತ – 20 ಮಹಿಳೆಯರಿಗೆ ಗಾಯ

    ಮೋದಿ ಕಾರ್ಯಕ್ರಮಕ್ಕೆ ಹೋಗಿಬರುತ್ತಿದ್ದ ಬಸ್ ಅಪಘಾತ – 20 ಮಹಿಳೆಯರಿಗೆ ಗಾಯ

    ಭೋಪಾಲ್: ಪ್ರಧಾನಿ ಮೋದಿ (PM Narendra Modi) ಭಾಷಣ ಕೇಳಲು ತೆರಳಿದ್ದ ಸ್ವಸಹಾಯ ಸಂಘದ ಮಹಿಳೆಯರಿದ್ದ (Womens Self Help Group) ಬಸ್ (Bus) ಕರೋನಿ ಕಣಿವೆ ಬಳಿ ಅಪಘಾತಕ್ಕೀಡಾಗಿದ್ದು, 20 ಮಹಿಳೆಯರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    Crime-Scene

    20 ಮಹಿಳೆಯರು (Women) ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವಿಮ್ಸ್‌ನಲ್ಲಿ ಸಾವಿನ ಸರಣಿ- ಸುಧಾಕರ್ ಹಠದಿಂದ ನಿರ್ದೇಶಕರ ನೇಮಕ

    ಮಧ್ಯಪ್ರದೇಶದ ಶಿಯೋಪುರದ ಕಾರ್‌ಹಾಲ್‌ನಲ್ಲಿ ನಡೆಯುತ್ತಿದ್ದ ಮಹಿಳಾ ಸ್ವಸಹಾಯ ಸಂಘದ (Womens Self Help Group) ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಷಣ ಕೇಳಲು 25 – 30 ಮಹಿಳೆಯರು ಬಸ್‌ನಲ್ಲಿ ತೆರಳಿದ್ದರು. ಮಾರ್ಗಮಧ್ಯೆ ಟ್ರಾಫಿಕ್ (Traffic) ಸಮಸ್ಯೆ ಎದುರಾಗಿದ್ದರಿಂದ ಸಮಾವೇಶ ತಲುಪಲು ಸಾಧ್ಯವಾಗಲಿಲ್ಲ. ಹಿಂದಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ (Accident) ಸಂಭವಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಟೋಯಿಂಗ್ ಆರಂಭ?

    ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಟೋಯಿಂಗ್ ಆರಂಭ?

    ಬೆಂಗಳೂರು: ಗೊಂದಲದ ಗೂಡಾಗಿ ತಾತ್ಕಾಲಿಕವಾಗಿ ನಿಂತಿರುವ ಟೋಯಿಂಗ್ ಮರು ಜೀವ ನೀಡಲು ಹೊಸ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಚಿಂತನೆಯಲ್ಲಿದ್ದಾರೆ.

    ಶೀಘ್ರದಲ್ಲೇ ಟೋಯಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಂಡು ಪುನಃ ಟೋಯಿಂಗ್ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತವೆ. ಟೋಯಿಂಗ್ ಸಮಸ್ಯೆ ಬಗ್ಗೆ ಸರ್ಕಾರದ ಜೊತೆ ಮಾತನಾಡಿ ಶೀಘ್ರದಲ್ಲೇ ಹೊಸ ಮಾರ್ಗಸೂಚಿಯೊಂದಿಗೆ ಪ್ರಾರಂಭ ಮಾಡಲಾಗುವುದೆಂದು ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದನ್ನೂ ಓದಿ: ನಮ್ಮಲ್ಲಿ ಪೆಟ್ರೋಲ್ ಮುಗಿದಿದೆ: ಶ್ರೀಲಂಕಾ

    ನಗರದಲ್ಲಿ ಎಲ್ಲಾ ಚಟುವಟಿಕೆಗಳು ಮಾಮೂಲಿಯಂತೆ ನಡೆಯುತ್ತಿರುವದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ನಗರದಲ್ಲಿ ಆಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಪುನಃ ಟೋಯಿಂಗ್ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಕೆಲಸಗಳು ಮಾಡಲಾಗುತ್ತದೆ ಎಂದರು. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

  • ಸ್ಕೂಲ್ ಬಳಿ ಬಂದು ಸಮಸ್ಯೆ ಕ್ಲೀಯರ್ ಮಾಡಿ- ಠಾಣೆ ಮೆಟ್ಟಿಲೇರಿದ ಪುಟಾಣಿ

    ಸ್ಕೂಲ್ ಬಳಿ ಬಂದು ಸಮಸ್ಯೆ ಕ್ಲೀಯರ್ ಮಾಡಿ- ಠಾಣೆ ಮೆಟ್ಟಿಲೇರಿದ ಪುಟಾಣಿ

    ಅಮರಾವತಿ: ಭಾರತದ ಬಹುತೇಕ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಕೇವಲ ದೊಡ್ಡವರಿಗೆ ಮಾತ್ರವಲ್ಲದೆ ಶಾಲೆಗೆ ಹೋಗುವ ಪುಟ್ಟ ಮಕ್ಕಳು ಕೂಡ ಇದರಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಅಂತೆಯೇ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತ 6 ವರ್ಷದ ಬಾಲಕನೊಬ್ಬ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡದ್ದಲ್ಲದೇ ಮನವಿ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯಲ್ಲಿ ನಡೆದಿದೆ.

    ಸದ್ಯ 6 ವರ್ಷದ ಬಾಲಕ ಪೊಲೀಸ್ ಠಾಣೆಗೆ ತೆರಳಿ ಪೊಲೀಸರನ್ನು ಪ್ರಶ್ನೆ ಮಾಡುತ್ತಿರುವ ವೀಡಿಯೋವನ್ನು ಇತರೆ ಪೊಲೀಸರು ಮಾಡಿಕೊಂಡಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಯುಕೆಜಿ ಓದುತ್ತಿರುವ ಪುಟ್ಟ ಬಾಲಕ ಕಾರ್ತಿಕ್, ಚಿತ್ತೂರ್ ಜಿಲ್ಲೆಯ ಪಾಲಮನೆರ್ ನಲ್ಲಿರುವ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ದೂರಿನಲ್ಲಿ, ತಾನು ಶಾಲೆಗೆ ತೆರಳುವ ರಸ್ತೆಯಲ್ಲಿ ಚರಂಡಿ ರಿಪೇರಿಗೆ ಅಗೆಯಲಾಗಿದೆ. ಅಲ್ಲದೆ ಟ್ರ್ಯಾಕ್ಟರ್ ಅಡ್ಡಾದಿಡ್ಡಿಯಾಗಿ ನಿಂತಿವೆ. ಇದರಿಂದ ನಮಗೆ ಶಾಲೆಗೆ ತೆರಳಲು ಕಿರಿಕಿರಿಯಾಗುತ್ತಿದೆ. ದಯಮಾಡಿ ಸ್ಕೂಲ್ ಹತ್ತಿರ ಬಂದು ಸಮಸ್ಯೆ ಪರಿಹರಿಸಿ ಕೊಡಿ ಎಂದು ಬಾಲಕ ಪಲಮನೇರ್ ಸರ್ಕಲ್ ಇನ್ಸ್ ಪೆಕ್ಟರ್ ಎನ್. ಭಾಸ್ಕರ್ ಅವರ ಬಳಿ ಮನವಿ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ರಾಜಕೀಯ ಪಕ್ಷಗಳು ಜನರ ನಡುವೆ ಒಡಕು ಮೂಡಿಸುತ್ತಿವೆ: ಗುಲಾಂ ನಾಬಿ ಅಜಾದ್

    ಈ ವೇಳರ ಭಾಸ್ಕರ್ ಕೂಡ ಬಾಲಕನ ಮನವಿಗೆ ಸ್ಪಂಧಿಸಿದ್ದಾರೆ. ಶೀಘ್ರವೇ ರಸ್ತೆ ಸಮಸ್ಯೆ ಪರಿಹರಿಸಿ ಕೊಡುವುದಾಗಿ ಭರವಸೆ ನೀಡಿದರು. ಅಲ್ಲದೆ ಬಾಲಕನಿಗೆ ಭಾಸ್ಕರ್ ಅವರು ತಮ್ಮ ಫೋನ್ ನಂಬರ್ ನೀಡಿ ಇನ್ನು ಮುಂದೆ ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.

    ಈ ವೀಡಿಯೋವನ್ನು ಟ್ವಿಟ್ಟರ್ ಬಳಕೆದಾರೆ ಶ್ರೀಲಕ್ಷ್ಮಿ ಎಂಬವರು ಶೇರ್ ಮಾಡಿಕೊಂಡಿದ್ದು, ಇದೀಗ ಈ ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೆ ಬಾಲಕನ ಮುಗ್ಧತೆಗೆ ನೆಟ್ಟಿಗರು ಮಾರು ಹೋಗಿದ್ದಾರೆ. ಇದನ್ನೂ ಓದಿ: ಮೇಕೆದಾಟು ಯೋಜನೆ- ರಾಜ್ಯ ಸರ್ಕಾರ ನಿರ್ಧಾರದ ವಿರುದ್ಧ ತ.ನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ