Tag: ಟ್ರಾಫಿಕ್ ರೂಲ್ಸ್

  • ವೈರಲ್ ಫೋಟೋ: ಬೈಕ್ ಮೇಲೆ ಐವರನ್ನು ನೋಡಿ ಕೈ ಮುಗಿದ ಪೊಲೀಸ್

    ವೈರಲ್ ಫೋಟೋ: ಬೈಕ್ ಮೇಲೆ ಐವರನ್ನು ನೋಡಿ ಕೈ ಮುಗಿದ ಪೊಲೀಸ್

    ಹೈದರಾಬಾದ್: ಪೊಲೀಸ್ ಅಧಿಕಾರಿಯೊಬ್ಬರು ಬೈಕ್ ಮೇಲೆ ಐವರನ್ನು ನೋಡಿ ಕೈ ಮುಗಿದಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಗಳವಾರ ಟ್ವಿಟರ್ ನಲ್ಲಿ ಈ ಫೋಟೋ ಅಪ್ಲೋಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬೆಂಗಳೂರು ಪೂರ್ವ ವಿಭಾಗ ಡಿಸಿಪಿ ಅಭಿಷೇಕ್ ಗೋಯಲ್ ಸೋಮವಾರ ಸಂಜೆ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿಕೊಂಡಿದ್ದು, ಇದೂವರೆಗೂ 2,700ಕ್ಕೂ ಹೆಚ್ಚು ಬಾರಿ ಬಾರಿ ರೀ ಟ್ವೀಟ್ ಆಗಿದೆ.

    ಬೈಕ್ ಸವಾರ ತನ್ನ ಜೊತೆಯಲ್ಲಿ ತನ್ನಿಬ್ಬರು ಮಕ್ಕಳನ್ನು ಟ್ಯಾಂಕ್ ಮೇಲೆ ಕೂರಿಸಿದ್ದಾನೆ. ಹಿಂದುಗಡೆ ಪತ್ನಿ ಸೇರಿದಂತೆ ಸಂಬಂಧಿ ಮಹಿಳೆಯೊಬ್ಬರನ್ನು ಕೂರಿಸಿಕೊಂಡು ಬೈಕ್ ಚಲಾಯಿಸುತ್ತಿದ್ದಾನೆ. ಬೈಕ್ ನಲ್ಲಿದ ಐವರು ಹೆಲ್ಮೆಟ್ ಧರಿಸಿಲ್ಲ, ಇವರನ್ನು ನೋಡಿದ ಪೊಲೀಸ್ ಆಶ್ಚರ್ಯಗೊಂಡು ಕೈ ಮುಗಿದಿದ್ದಾರೆ.

    ಆಂಧ್ರ ಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಮಡಕಸಿರಾ ಸರ್ಕಲ್ ಠಾಣೆಯ ಬಿ.ಶುಭಕುಮಾರ್ ಕೈ ಮುಗಿದಿರುವ ಪೊಲೀಸ್ ಅಧಿಕಾರಿ. ಕೆ.ಹನುಮಂತರಾಯ್ಡು ಎಂಬವರು ತಮ್ಮ ಬೈಕ್ ನಲ್ಲಿ ಐವರನ್ನು ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದರು. ಪೊಲೀಸರು ಐವರನ್ನು ಠಾಣೆಗೆ ಕರೆದುಕೊಂಡು ಹೋಗಿ ಸುಮಾರು ಒಂದೂವರೆ ಗಂಟೆ ಟ್ರಾಫಿಕ್ ನಿಯಮದ ಬಗ್ಗೆ ತಿಳಿಸಿ, ಎಚ್ಚರಿಕೆಯನ್ನು ನೀಡಿ ಕಳುಹಿಸಿದ್ದಾರೆ.

    ಐವರನ್ನು ಬೈಕ್ ಮೇಲೆ ನೋಡಿದಾಗ ಒಂದು ಕ್ಷಣ ಚಕಿತನಾದೆ, ಒಂದಿಷ್ಟು ಅಪಾಯದ ಭಯವಿಲ್ಲದ ಸವಾರ ಬೈಕ್ ಚಾಲನೆ ಮಾಡುತ್ತಿದ್ದನು. ಅವರನ್ನು ನೋಡಿ ಅಸಹಾಯಕತೆ ಮತ್ತು ಹತಾಶೆಯಿಂದಾಗಿ ನನ್ನ ಎರಡು ಕೈಗಳನ್ನು ಜೋಡಿಸಿ ನಮಸ್ಕರಿಸಿದೆ. ಸುರಕ್ಷೆಯ ಬಗ್ಗೆ ಸವಾರನಿಗೆ ಕೇಳಿದರೆ ಅವನು ಕೇವಲ ಮುಗಳು ನಕ್ಕು ಏನು ಮಾತನಾಡಲಿಲ್ಲ. ಮಕ್ಕಳು ಟ್ಯಾಂಕ್ ಮೇಲೆ ಕೂರಿಸಿದ್ದರಿಂದ ಅವರು ಕಾಲುಗಳು ಚಕ್ರದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ತಿಳಿ ಹೇಳಿದೆ ಎಂದು ಪೊಲೀಸ್ ಅಧಿಕಾರಿ ಶುಭಕುಮಾರ್ ತಿಳಿಸಿದ್ದಾರೆ.