Tag: ಟ್ರಾಫಿಕ್ ಫೈನ್

  • ಟ್ರಾಫಿಕ್ ಫೈನ್ ಪಾವತಿಗೆ 50% ಡಿಸ್ಕೌಂಟ್ – 15 ದಿನಕ್ಕೆ 45 ಕೋಟಿ ದಾಟಿದ ದಂಡ ಪಾವತಿಯ ಮೊತ್ತ

    ಟ್ರಾಫಿಕ್ ಫೈನ್ ಪಾವತಿಗೆ 50% ಡಿಸ್ಕೌಂಟ್ – 15 ದಿನಕ್ಕೆ 45 ಕೋಟಿ ದಾಟಿದ ದಂಡ ಪಾವತಿಯ ಮೊತ್ತ

    ಬೆಂಗಳೂರು: ಟ್ರಾಫಿಕ್ ಫೈನ್ (Traffic Fine) ಪಾವತಿಗೆ 50% ಡಿಸ್ಕೌಂಟ್ ನೀಡಿದ್ದಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, 15 ದಿನಕ್ಕೆ ದಂಡದ ಪಾವತಿ ಮೊತ್ತ 45 ಕೋಟಿ ರೂ. ದಾಟಿದೆ.

    ವಾಹನ ಮಾಲೀಕರು 16,21,721 ಬಾಕಿ ಕೇಸ್‌ಗಳಿಗೆ ದಂಡ ಪಾವತಿಸಿದ್ದು, ಇಲ್ಲಿವರೆಗೆ 45.52 ಕೋಟಿ ರೂ. ದಂಡ ಪಾವತಿಯಾಗಿದೆ. ಇದನ್ನೂ ಓದಿ: ಬಂಡೀಪುರ | ಸಫಾರಿ ವಾಹನವನ್ನು ಅಟ್ಟಾಡಿಸಿದ ಕಾಡಾನೆ – ವೀಡಿಯೋ ವೈರಲ್

    ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ವಾಹನ ಸವಾರರಿಗೆ ಆ.23ರಿಂದ ದಂಡ ಪಾವತಿಸಲು ರಿಯಾಯಿತಿ ನೀಡಿದ್ದರು. ಇನ್ನೂ ಸೆ.12ರವರೆಗೆ ದಂಡ ಪಾವತಿ ಮಾಡಲು ಕಾಲಾವಕಾಶವಿದ್ದು, ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 2 ಮಕ್ಕಳ ತಂದೆಯಿಂದ ನಿರಂತರ ಅತ್ಯಾಚಾರ – ಹೆರಿಗೆಯಾದ ಅರ್ಧ ಗಂಟೆಯಲ್ಲೇ ಮಗು ಸಾವು

    ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಆದೇಶ ಹೊರಡಿಸಿ, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ 50% ಮೊತ್ತವನ್ನು ಪಾವತಿಸುವಂತೆ ರಿಯಾಯಿತಿ ಘೋಷಿಸಿದ್ದರು. ಇದನ್ನೂ ಓದಿ: ಇಂದು ವರ್ಷದ ಕೊನೆಯ ಗ್ರಹಣ; ಮಧ್ಯಾಹ್ನವೇ ದೇವಾಲಯಗಳು ಬಂದ್ – ವಿಶೇಷ ಪೂಜೆ, ಪುನಸ್ಕಾರ

  • ಟ್ರಾಫಿಕ್ ಫೈನ್ ಡಿಸ್ಕೌಂಟ್‌ಗೆ ಭರ್ಜರಿ ರೆಸ್ಪಾನ್ಸ್ – 35.72 ಕೋಟಿ ದಂಡ ಪಾವತಿ

    ಟ್ರಾಫಿಕ್ ಫೈನ್ ಡಿಸ್ಕೌಂಟ್‌ಗೆ ಭರ್ಜರಿ ರೆಸ್ಪಾನ್ಸ್ – 35.72 ಕೋಟಿ ದಂಡ ಪಾವತಿ

    ಬೆಂಗಳೂರು: ಟ್ರಾಫಿಕ್ ಫೈನ್ ಕಟ್ಟಲು 50% ರಿಯಾಯಿತಿ ನೀಡಿದ್ದಕ್ಕೆ ಭರ್ಜರಿ ರೆಸ್ಪಾನ್ಸ್ ಬರುತ್ತಿದ್ದು, ಈಗಾಗಲೇ 35.72 ಕೋಟಿ ರೂ. ದಂಡ ಪಾವತಿಯಾಗಿದೆ.

    ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ವಾಹನ ಸವಾರರಿಗೆ ಆ.23ರಿಂದ ದಂಡ ಪಾವತಿಸಲು ರಿಯಾಯಿತಿ ನೀಡಿತ್ತು. ಅದರ ಬೆನ್ನಲ್ಲೇ ಬಾಕಿಯಿದ್ದ 12,70,950 ಕೇಸ್‌ಗಳ ದಂಡ ಪಾವತಿಯಾಗಿದ್ದು. ಈವರೆಗೂ 35.72 ಕೋಟಿ ರೂ. ಸಂಗ್ರಹವಾಗಿದೆ.ಇದನ್ನೂ ಓದಿ: ಸಿನಿಮಾ ಆಯ್ತು ವೈರಲ್ ಆಗಿದ್ದ `ಅಮೃತಾಂಜನ್’ ಶಾರ್ಟ್ ಫಿಲ್ಮ್

    ಇನ್ನೂ ಸೆ.12ರವರೆಗೆ ದಂಡ ಪಾವತಿ ಮಾಡಲು ಕಾಲಾವಕಾಶವಿದ್ದು, ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ.

    ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಆದೇಶ ಹೊರಡಿಸಿ, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ ಶೇ.50ರಷ್ಟನ್ನು ಪಾವತಿಸುವಂತೆ ರಿಯಾಯಿತಿ ಘೋಷಿಸಿದ್ದರು. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಇದೇ ರೀತಿ ರಿಯಾಯಿತಿ ಘೋಷಿಸಿ ಭಾರೀ ಮೊತ್ತದ ದಂಡ ಸಂಗ್ರಹಿಸಿತ್ತು.ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್‌ ಆ್ಯಪ್ ಪ್ರಕರಣ – ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌ಗೆ ಇಡಿ ಸಮನ್ಸ್‌

  • ಬೆಂಗಳೂರಿನಲ್ಲಿ 50% ಟ್ರಾಫಿಕ್ ಫೈನ್ ಡಿಸ್ಕೌಂಟ್ – ಒಂದೇ ವಾರದಲ್ಲಿ 21 ಕೋಟಿ ದಂಡ ಸಂಗ್ರಹ

    ಬೆಂಗಳೂರಿನಲ್ಲಿ 50% ಟ್ರಾಫಿಕ್ ಫೈನ್ ಡಿಸ್ಕೌಂಟ್ – ಒಂದೇ ವಾರದಲ್ಲಿ 21 ಕೋಟಿ ದಂಡ ಸಂಗ್ರಹ

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ (Traffic Rules Break) ಮಾಡಿ ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ವಾಹನ ಸವಾರರಿಗೆ ಸರ್ಕಾರ 50% ಡಿಸ್ಕೌಂಡ್ ನೀಡಿತ್ತು. ಇದೀಗ ಒಂದೇ ವಾರದಲ್ಲಿ 21 ಕೋಟಿ 86 ಸಾವಿರ ರೂ. ದಂಡ ಸಂಗ್ರಹವಾಗಿದೆ.

    ಆ.21ರಂದು ಟ್ರಾಫಿಕ್ ಫೈನ್‌ಗೆ (Traffic Fine) 50% ಡಿಸ್ಕೌಂಟ್ ಆದೇಶ ನೀಡಲಾಗಿತ್ತು. ಆ.23 ರಿಂದ ಸೆ.12 ರ ವರೆಗೆ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ವಾಹನ ಸವಾರರಿಗೆ ಅವಕಾಶ ನೀಡಲಾಗಿದೆ. ಅದರಂತೆ ಕಳೆದ ಆರು ದಿನದಲ್ಲಿ 7,43,160 ಕೇಸ್ ವಿಲೇವಾರಿ ಮಾಡಿ 21 ಕೋಟಿ 86 ಸಾವಿರ ರೂ. ದಂಡ ಸಂಗ್ರಹ ಮಾಡಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ -‌ NIAಗೆ ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಳ್ಳೋಕೆ ಅವಕಾಶ ಇದೆ: ಡಿವಿಎಸ್‌

    ಬೆಂಗಳೂರು (Bengaluru) ವ್ಯಾಪ್ತಿಗೆ ಮಾತ್ರ ಈ ಡಿಸ್ಕೌಂಡ್ ನೀಡಿದ್ದು, ವಾಹನ ಸವಾರರ ರಿಯಾಕ್ಷನ್ ನೋಡಿಕೊಂಡು ಜಿಲ್ಲೆಗಳಿಗೂ ವಿಸ್ತರಣೆ ಮಾಡಬೇಕೇ ಬೇಡವೇ ಅನ್ನೋದು ತೀರ್ಮಾನ ಮಾಡುವ ಸಾಧ್ಯತೆ ಇದೆ. ಇನ್ನೂ ಹತ್ತು ದಿನಗಳ ಕಾಲ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಅವಕಾಶವಿದ್ದು, ಸುಮಾರು 50 ಕೋಟಿಯಷ್ಟು ದಂಡ ಸಂಗ್ರಹವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

  • ಡಿಸ್ಕೌಂಟ್ ಸಮಯ ವಿಸ್ತರಣೆಯಾದ್ರೂ, ಟ್ರಾಫಿಕ್ ಫೈನ್ ಕಟ್ಟೋಕೆ ಆಸಕ್ತಿ ತೋರದ ವಾಹನ ಸವಾರರು

    ಡಿಸ್ಕೌಂಟ್ ಸಮಯ ವಿಸ್ತರಣೆಯಾದ್ರೂ, ಟ್ರಾಫಿಕ್ ಫೈನ್ ಕಟ್ಟೋಕೆ ಆಸಕ್ತಿ ತೋರದ ವಾಹನ ಸವಾರರು

    ಬೆಂಗಳೂರು: 50% ರಿಯಾಯಿತಿ ದರದಲ್ಲಿ ಟ್ರಾಫಿಕ್‌ ಫೈನ್‌ ಕಟ್ಟುವುದಕ್ಕೆ ಸರ್ಕಾರ 2ನೇ ಅವಧಿಗೆ ಅವಕಾಶ ನೀಡಿದೆ. ಆದರೆ ದಂಡ ಕಟ್ಟಲು ಈ ಬಾರಿ ವಾಹನ ಸವಾರರು ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ.

    ಟ್ರಾಫಿಕ್ ಫೈನ್ (Traffic Fine) 50% ರಿಯಾಯಿತಿಯ (Discount) ಸಮಯವನ್ನು 2 ಅವಧಿಗೆ ವಿಸ್ತರಿಸಿರುವ ಆದೇಶ ಹೊರಡಿಸಿ ವಾರ ಕಳೆದರೂ, ಈವರೆಗೆ 1 ಲಕ್ಷ 74 ಸಾವಿರ ಕೇಸ್‌ಗಳಲ್ಲಿ ಕೇವಲ 5 ಕೋಟಿ ದಂಡ ಕಟ್ಟಿ ಜನ ನಿರ್ಲಕ್ಷ್ಯ ವಹಿಸಿದ್ದಾರೆ. ಮೊದಲ ಬಾರಿಗೆ ರಿಯಾಯಿತಿ ದರದಲ್ಲಿ ದಂಡಕ್ಕೆ ಸರ್ಕಾರ ಅವಕಾಶ ಕೊಟ್ಟಾಗ 9 ದಿನಗಳಲ್ಲಿ 43 ಲಕ್ಷ ಕೇಸ್‌ಗಳನ್ನು ಕ್ಲೀಯರ್‌ ಮಾಡಿ 126 ಕೋಟಿ ದಂಡ ಕಟ್ಟಿದ್ದರು. ಈ ವೇಳೆ ಪ್ರತಿಬಾರಿ ಉದ್ದುದ್ದ ಕ್ಯೂ ನಿಂತು ದಂಡ ಕಟ್ಟುತ್ತಿದ್ದ ಜನರೀಗ 2ನೇ ಅವಧಿಗೆ ಸರ್ಕಾರ ನೀಡಿರುವ 15 ದಿನದ ಅವಕಾಶಕ್ಕೆ ಡೋಂಟ್‌ಕೇರ್‌ ಎನ್ನುವಂತೆ ವರ್ತಿಸುತ್ತಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಮದುವೆಯಲ್ಲಿ ವಧುವಿಗೆ ಸೀಮೆ ಹಸು, ವರನಿಗೆ ಕೊಳವೆ ಬಾವಿ ಆಫರ್

    2ನೇ ಬಾರಿ 50% ರಿಯಾಯಿತಿ ದರದಲ್ಲಿ ದಂಡ ಕಟ್ಟಲು 8 ದಿನವಷ್ಟೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ವಾಹನ ಸವಾರರು ದಂಡ ಕಟ್ಟಲು ಮುಂದಾಗಬಹುದು ಎನ್ನುವ ನೀರಿಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ. ಇದನ್ನೂ ಓದಿ: ವೋಟಿಗಾಗಿ ಫ್ರೀ ಸ್ಕೀಂಗಳ ಆಮಿಷ- ಉಚಿತ ಸೈಟ್ ನೀಡಲು ಮುಂದಾದ ಬಿಜೆಪಿ ಟಿಕೆಟ್ ಆಕಾಂಕ್ಷಿ

  • 2ನೇ ಬಾರಿಯ ಟ್ರಾಫಿಕ್ ರಿಯಾಯಿತಿ ದಂಡ ಕಟ್ಟಲು ಸವಾರರಿಂದ ನಿರಾಸಕ್ತಿ

    2ನೇ ಬಾರಿಯ ಟ್ರಾಫಿಕ್ ರಿಯಾಯಿತಿ ದಂಡ ಕಟ್ಟಲು ಸವಾರರಿಂದ ನಿರಾಸಕ್ತಿ

    ಬೆಂಗಳೂರು: ಎರಡನೇ ಬಾರಿಯ ರಿಯಾಯಿತಿ ಸಂಚಾರ ದಂಡ (Discount On Traffic Fines) ಕಟ್ಟಲು ವಾಹನ ಸವಾರರಿಂದ ನಿರಾಸಕ್ತಿ ವ್ಯಕ್ತವಾಗಿದೆ. ಮೊದಲ ಅವಧಿಯಲ್ಲಿ ತಾ ಮುಂದು ನಾ ಮುಂದು ಅಂತಾ ಸಾಲಿನಲ್ಲಿ ನಿಂತು ದಂಡ ಪಾವತಿಸಿದ್ದರು. ಆದರೆ ಎರಡನೇ ಅವಧಿಯಲ್ಲಿ ಅಷ್ಟೊಂದು ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ.

    ಶೇ.50 ಡಿಸ್ಕೌಂಟ್ ಪ್ರಕಟಿಸಿದ ಬೆನ್ನಲ್ಲೇ ಸಾಲಿನಲ್ಲಿ ನಿಂತು ಫೈನ್ ಕಟ್ಟಿ ನಿಟ್ಟುಸಿರು ಬಿಟ್ಟಿದ್ದರು. ಕೇವಲ 9 ದಿನಗಳಲ್ಲಿ 150 ಕೋಟಿ ರೂ. ದಂಡ ಕಟ್ಟಿ 50 ಲಕ್ಷ ಕೇಸ್‌ಗಳು ಕ್ಲೀಯರ್‌ ಆಗಿತ್ತು. ಮತ್ತಷ್ಟು ಸಮಯ ವಿಸ್ತರಣೆ ಮಾಡುವಂತೆ ಸವಾರರಿಂದ ಮನವಿಗಳು ಬಂದಿತ್ತು. ಈ ಬಗ್ಗೆ ರಾಜ್ಯ ಕಾನೂನು ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಬಿ ವೀರಪ್ಪ ಸಭೆ ನಡೆಸಿ ದಂಡದ ಅವಧಿ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.  ಇದನ್ನೂ ಓದಿ: ತಾಯಿ, ಇಬ್ಬರು ಮಕ್ಕಳ ಸಜೀವ ದಹನ ಕೇಸ್ – ಅವಘಡಕ್ಕೆ ಎಸಿ ತಾಂತ್ರಿಕ ದೋಷವೇ ಕಾರಣ

    ಇದೀಗ 14 ದಿನಗಳ ಎರಡನೇ ಬಾರಿಯ ರಿಯಾಯಿತಿಯಲ್ಲಿ ದಂಡ ಪಾವತಿಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ಮಾರ್ಚ್ 4 ರಿಂದ ಈವರೆಗೆ ಕೇವಲ 2.68 ಕೋಟಿ ರೂ. ದಂಡ ಪಾವತಿಯಾಗಿದೆ. ನಾಲ್ಕು ದಿನಗಳಲ್ಲಿ 93 ಸಾವಿರ ಟ್ರಾಫಿಕ್ ಕೇಸ್‌ಗಳು ವಿಲೇವಾರಿಯಾಗಿವೆ. ಮಾ.4 ರಂದು 30,141 ಕೇಸ್ ಗಳಿಗೆ 86.46 ಲಕ್ಷ ದಂಡ ವಸೂಲಿಯಾದರೆ, ಮಾ.5 ರಂದು 23,214 ಪ್ರಕರಣಗಳಿಂದ 66.62 ಲಕ್ಷ ರೂ. ದಂಡ ವಸೂಲಿಯಾಗಿದೆ. ಮಾ.6 ರಂದು 30,312 ಕೇಸ್ ಗಳಿಗೆ 86.75 ಲಕ್ಷ ರೂ. ದಂಡವನ್ನು ಸವಾರರು ಪಾವತಿ ಮಾಡಿದ್ದಾರೆ. ಮಾರ್ಚ್ 7 ರಂದು ಮಧ್ಯಾಹ್ನದ ವೇಳೆಗೆ 9,865 ಕೇಸ್‌ಗಳಿಂದ 28.32 ಲಕ್ಷ ರೂ. ದಂಡ ವಸೂಲಿಯಾಗಿದೆ.

  • 77 ಬಾರಿ ನಿಯಮ ಉಲ್ಲಂಘಟನೆ- ಬೈಕ್ ಮಾಲೀಕನಿಗೆ ಬಿತ್ತು ಭಾರೀ ದಂಡ

    77 ಬಾರಿ ನಿಯಮ ಉಲ್ಲಂಘಟನೆ- ಬೈಕ್ ಮಾಲೀಕನಿಗೆ ಬಿತ್ತು ಭಾರೀ ದಂಡ

    ಬೆಂಗಳೂರು: 77 ಬಾರಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಅಡಿ ಬೈಕ್ ಮಾಲೀಕನಿಗೆ 42,500 ರೂ. ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಮಡಿವಾಳ ಸಂಚಾರಿ ಪೋಲೀಸರ ಕಾರ್ಯಾಚರಣೆ ವೇಳೆ ಬೈಕ್ ಸವಾರ ಅರುಣ್ ಕುಮಾರ್ ಇಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಪೊಲೀಸ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಮತ್ತು ಪಿಎಸ್‍ಐ ಶಿವರಾಜ್ ಕುಮಾರ್ ಅವರು ಕಾರ್ಯಾಚರಣೆ ನಡೆಸಿದ್ದರು. ಸದ್ಯ ಬೈಕ್ ಸವಾರ ಅರುಣ್ ಕುಮಾರ್ ಗೆ 42,500 ರೂ. ದಂಡ ವಿಧಿಸಿದ್ದಾರೆ. ಮಡಿವಾಳ ಪೊಲೀಸರು ಬೈಕ್ ಸವಾರನಿಗೆ ನೋಟಿಸ್ ನೀಡಿ ಬೈಕ್ ವಶಕ್ಕೆ ಪಡೆದಿದ್ದಾರೆ.

    ಕೊರೊನಾ ಲಾಕ್‍ಡೌನ್ ಬಳಿಕ ಟ್ರಾಫಿಕ್ ನಿಯಮಗಳನ್ನು ಮರೆತು ಸಂಚಾರ ಮಾಡುತ್ತಿದ್ದ ಸವಾರರಿಗೆ ಸದ್ಯ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಅಲ್ಲದೇ ಕಟ್ಟು ನಿಟ್ಟಿನ ಕ್ರಮಕೈಗೊಂಡು ನಿಯಮಗಳನ್ನು ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡುತ್ತಿದ್ದಾರೆ.

    ಕಳೆದ ಎರಡು ತಿಂಗಳ ಹಿಂದೆ ಆಡುಗೊಡಿಯಲ್ಲಿ ಬುಲೆಟ್ ಬೈಕ್ ಮಾಲೀಕನೊಬ್ಬ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡವನ್ನು ಪಾವತಿ ಮಾಡಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡುತ್ತಿದ್ದ ರಾಜೇಶ್ ಬುಲೆಟ್ ಬೈಕ್ ಮೇಲೆ ಬರೋಬ್ಬರಿ 103 ಕೇಸ್ ಇರುವುದನ್ನು ಕಂಡು ಪೊಲೀಸರು, ಸಂಚಾರಿ ನಿಮಯ ಉಲ್ಲಂಘನೆ ಕೇಸ್‍ಗಳು ಸೆಂಚುರಿ ದಾಟಿದ ಪರಿಣಾಮ 58 ಸಾವಿರದ 200 ರೂಪಾಯಿಯನ್ನು ದಂಡ ಹಾಕಿದ್ದರು.

  • 19 ಸಾವಿರ ಟ್ರಾಫಿಕ್ ಫೈನ್ ಕಟ್ಟಿದ ವಾಹನ ಸವಾರ

    19 ಸಾವಿರ ಟ್ರಾಫಿಕ್ ಫೈನ್ ಕಟ್ಟಿದ ವಾಹನ ಸವಾರ

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿ ಓಡಾಡುತ್ತಿದ್ದ ವಾಹನ ಸವಾರನೊಬ್ಬ ಸಂಚಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಬರೋಬ್ಬರಿ 19 ಸಾವಿರ ದಂಡ ಕಟ್ಟಿರೋ ಘಟನೆ ಹಲಸೂರಿನಲ್ಲಿ ನಡೆದಿದೆ.

    ವಿಶ್ವನಾಥ್ ಸ್ಥಳದಲ್ಲೆ 19 ಸಾವಿರ ರೂ. ದಂಡ ಕಟ್ಟಿದ್ದಾನೆ. ವಿಶ್ವನಾಥ್ ಹಲಸೂರಿನವನಾಗಿದ್ದು ನೀರು ಪೂರೈಕೆಯ ವ್ಯಾಪಾರ ಮಾಡಿಕೊಂಡಿದ್ದ. ಕಳೆದ ಮೂರು ವರ್ಷಗಳ ಹಿಂದೆ ಹೊಂಡಾ ಆಕ್ಟಿವ್ ಬೈಕ್ ಖರೀದಿಸಿದ್ದ. ಈ ಬೈಕಿನಲ್ಲಿ ಮೂರು ವರ್ಷಗಳಿಂದ ಸುಮಾರು 85 ಬಾರಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ದಾನೆ. ಆದರೆ ಎಲ್ಲಿಯೂ ಕೂಡ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿರಲಿಲ್ಲ.

    ಶುಕ್ರವಾರ ಹಲಸೂರು ಸಂಚಾರಿ ಪೊಲೀಸರ ವಿಶೇಷ ಕಾರ್ಯಚರಣೆ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಪೊಲೀಸರು ಟ್ರಾಫಿಕ್ ಉಲ್ಲಂಘನೆ ಆಗಿರುವ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಆಗ ಬೈಕ್ ಮೇಲೆ ಇದ್ದ ಕೇಸ್ ಕಂಡು ಒಂದು ಕ್ಷಣ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಹೆಲ್ಮೆಟ್ ಇಲ್ಲದೇ ವಾಹನ ಸವಾರ ಮಾಡಿರೋದು, ಸಿಗ್ನಲ್ ಜಂಪ್ ಸೇರಿ ಬರೋಬ್ಬರಿ 85 ಪ್ರಕರಣಗಳಿದ್ದವು. ಈ ಎಲ್ಲ ಪ್ರಕರಣಗಳು ಸೇರಿ ಸುಮಾರು 19 ಸಾವಿರ ದಂಡ ಸ್ಥಳದಲ್ಲೇ ಕಟ್ಟಿಸಿಕೊಂಡಿದ್ದಾರೆ.

    ವಾಹನ ಸವಾರ ಬೇರೆ ವಿಧಿ ಇಲ್ಲದೇ 19 ಸಾವಿರ ದಂಡ ಕಟ್ಟಿ ಬೈಕ್ ಬಿಡಿಸಿಕೊಂಡು ಹೋಗಿದ್ದಾನೆ. ಹಳೆ ಕೇಸ್‍ಗಳಿಗೆ ಹಳೆ ನಿಯಮದ ಪ್ರಕಾರ ದಂಡ ಹಾಕಿರುವುದರಿಂದ 19 ಸಾವಿರ ಆಗಿದೆ. 85 ಕೇಸ್‍ಗಳಿಗೂ ಹೊಸ ನಿಯಮದ ಅಡಿಯಲ್ಲಿ ಫೈನ್ ಹಾಕಿದ್ದರೆ ಮತ್ತಷ್ಟು ದಂಡ ಮೊತ್ತ ಹೆಚ್ಚು ಆಗುವ ಸಾಧ್ಯತೆ ಇತ್ತು.

  • ತಪ್ಪು ಚಲನ್ ನೀಡಿದ್ದಕ್ಕೆ ಪತ್ನಿ, ಮಕ್ಕಳೊಂದಿಗೆ ರಸ್ತೆಯಲ್ಲಿ ಧರಣಿಗೆ ಕುಳಿತ ಚಾಲಕ

    ತಪ್ಪು ಚಲನ್ ನೀಡಿದ್ದಕ್ಕೆ ಪತ್ನಿ, ಮಕ್ಕಳೊಂದಿಗೆ ರಸ್ತೆಯಲ್ಲಿ ಧರಣಿಗೆ ಕುಳಿತ ಚಾಲಕ

    ನವದೆಹಲಿ: ಪೊಲೀಸರು ನನಗೆ ತಪ್ಪು ಚಲನ್ ನೀಡಿದ್ದಾರೆ ಎಂದು ಆರೋಪಿಸಿ ಚಾಲಕನೋರ್ವ ಕುಟುಂಬ ಸಮೇತನಾಗಿ ರಸ್ತೆಯಲ್ಲಿಯೇ ಪ್ರತಿಭಟನೆ ಕುಳಿತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಹೊಸ ಟ್ರಾಫಿಕ್ ನಿಯಮ ಜಾರಿಯಾಗಿ ಒಂದೂವರೆ ತಿಂಗಳಾಗಿದೆ. ಭಾರೀ ದಂಡಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬರುತ್ತಿವೆ. ದೆಹಲಿಯ ದ್ವಾರಕಾ ಸೆಕ್ಟರ್-1ರಲಿ ಸಿಗ್ನಲ್ ದಾಟಿದ್ದಕ್ಕೆ ಚಾಲಕ ಮನೀಶ್ ನಿಗೆ ಪೊಲೀಸರು ದಂಡದ ರಶೀದಿ ನೀಡಿದ್ದರು. ದಂಡದ ರಶೀದಿ ಪಡೆಯದ ಮನೀಶ್ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರ ಮೇಲೆ ನಾನು ಹಲ್ಲೆ ಮಾಡಿದ್ದೇನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಲ್ಲದೇ ತಪ್ಪು ಚಲನ್ ಸಹ ನೀಡಿದ್ದಾರೆ ಎಂದು ದೂರಿನಲ್ಲಿ ಮನೀಶ್ ಉಲ್ಲೇಖಿಸಿದ್ದನು. ಇದನ್ನೂ ಓದಿ: ಧಾರವಾಡ-ತಪ್ಪು ಚಲನ್ ನೀಡಿದ್ದಕ್ಕೆ ಪತ್ನಿ, ಮಕ್ಕಳೊಂದಿಗೆ ರಸ್ತೆಯಲ್ಲಿ ಧರಣಿಗೆ ಕುಳಿತ ಚಾಲಕ

    ಪೊಲೀಸರು ಮನೀಶ್ ವಾಹನದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರಿಂದ, ಅಕ್ಟೋಬರ್ 2ರಿಂದ ಮನೆಯಲ್ಲಿಯೇ ಇದ್ದನು. ಭಾನುವಾರ ತನ್ನ ಕುಟುಂಬದ ಸಮೇತ ರಸ್ತೆಯಲ್ಲಿ ಬಂದ ಕುಳಿತ ಮನೀಶ್ ನ್ಯಾಯಬೇಕೆಂದು ಘೋಷಣೆ ಕೂಗಲಾರಂಭಿಸಿದ್ದಾನೆ. ರಸ್ತೆ ಮಧ್ಯೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಪ್ರತಿಭಟನೆಗೆ ಕುಳಿತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮನೀಶ್ ಮನವೊಲಿಸುವ ಪ್ರಯತ್ನಿಸಿದ್ದಾರೆ. ಯಾರ ಮಾತು ಕೇಳದಿದ್ದಾಗ ಪೊಲೀಸರು ಮನೀಶ್ ಮತ್ತು ಆತನ ಪತ್ನಿಯನ್ನು ರಸ್ತೆಯ ಬದಿ ಬಲವಂತವಾಗಿ ಎಳೆದು ತಂದು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಏಳು ಸೆಕೆಂಡ್ ಇರುವಾಗಲೇ ಹೋಗಿದ್ದೇನೇಯೇ ಹೊರತು ಸಿಗ್ನಲ್ ಜಂಪ್ ಮಾಡಿಲ್ಲ. ದಂಡವನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರು ಹಲ್ಲೆಯ ಆರೋಪ ಮಾಡುತ್ತಿದ್ದಾರೆ ಎಂದು ಮನೀಶ್ ಆರೋಪಿಸಿದ್ದಾನೆ.

  • ದುಬಾರಿ ಟ್ರಾಫಿಕ್ ದಂಡಕ್ಕೆ ಸರ್ಕಾರ ಬ್ರೇಕ್

    ದುಬಾರಿ ಟ್ರಾಫಿಕ್ ದಂಡಕ್ಕೆ ಸರ್ಕಾರ ಬ್ರೇಕ್

    ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೀಗ ಸರ್ಕಾರ ದುಬಾರಿ ದಂಡಕ್ಕೆ ಬ್ರೇಕ್ ಹಾಕಿದೆ.

    ಇದೇ ತಿಂಗಳ 3 ರಿಂದ ಅಂದರೆ ಕಳೆದ 15 ದಿನಗಳಿಂದ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿಯಾಗಿ, ದೇಶಾದ್ಯಂತ ದುಬಾರಿ ದಂಡ ಹೇರಲಾಗಿತ್ತು. ಈ ದಂಡಕ್ಕೆ ಸವಾರರು ಬೇಸತ್ತು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಈ ಸಂದರ್ಭದಲ್ಲಿ ಸಾರಿಗೆ ಸಚಿವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ದಂಡ ಇಳಿಸುವ ಭರವಸೆ ನೀಡಿದ್ದರು.

    ಗುಜರಾತ್ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ ದಂಡ ಇಳಿಸುವ ಭರವಸೆ ನೀಡಿದರು. ಆದರೆ ಎಷ್ಟು ಪ್ರಮಾಣದಲ್ಲಿ ದಂಡದ ಇಳಿಕೆ ಮಾಡುತ್ತೇವೆ ಎನ್ನುವ ಬಗ್ಗೆ ಅಧಿಕೃತ ಆದೇಶ ನೀಡಿರಲಿಲ್ಲ. ಇಂದು ರಾತ್ರಿ ದುಬಾರಿ ದಂಡ ಇಳಿಕೆಯ ಬಗ್ಗೆ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ.

    ಕುಡಿದು ಮದ್ಯಪಾನ ಮಾಡಿದ್ದಲ್ಲಿ ಈ ಹಿಂದೆ ವಿಧಿಸಲಾಗಿದ್ದ 10 ಸಾವಿರ ರೂ. ದಂಡವನ್ನು ಹಾಗೆಯೇ ಮುಂದುವರಿಸಲಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಿಗೆ ಆಯುಕ್ತ ಶಿವಕುಮಾರ್, ಗುಜರಾತ್ ಮಾದರಿಯಲ್ಲಿ ದಂಡ ಇಳಿಸಿಲ್ಲ. ಮೋಟಾರು ವಾಹನ ಕಾಯ್ದೆಯಲ್ಲಿನ ತಿದ್ದುಪಡಿಯ 24 ಉಲ್ಲಂಘನೆಗಳಲ್ಲಿ 18 ಉಲ್ಲಂಘನೆಗಳ ದಂಡ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು.

  • ಟ್ರಾಫಿಕ್ ಫೈನ್-ಎತ್ತಿನ ಬಂಡಿಗೂ 1 ಸಾವಿರ ದಂಡ

    ಟ್ರಾಫಿಕ್ ಫೈನ್-ಎತ್ತಿನ ಬಂಡಿಗೂ 1 ಸಾವಿರ ದಂಡ

    ಲಕ್ನೋ: ಪೊಲೀಸರು ಎತ್ತಿನ ಬಂಡಿ ಮಾಲೀಕನಿಗೆ ಒಂದು ಸಾವಿರ ರೂ. ದಂಡದ ಬಿಲ್ ನೀಡಿದ್ದಾರೆ.

    ಹೊಸ ಮೋಟಾರ್  ವಾಹನ ಕಾಯ್ದೆ ಅನ್ವಯವಾದಾಗಿನಿಂದ ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಾರ್ವಜನಿಕರು ಭಾರೀ ಮೊತ್ತದ ದಂಡವನ್ನು ಪಾವತಿಸುತ್ತಿದ್ದಾರೆ. ಉತ್ತರ ಪ್ರದೇಶದ ಬಿಜನೌರ್ ಜಿಲ್ಲೆಯ ಸಾಹಸಪುರ ಗ್ರಾಮದಲ್ಲಿ ಎತ್ತಿನ ಬಂಡಿಗೆ ಪೊಲೀಸರು 1 ಸಾವಿರ ರೂ. ದಂಡ ವಿಧಿಸಿದ್ದಾರೆ.

    ರೈತ ರಿಯಾಜ್ ಹಸನ್ ತಮ್ಮ ಜಮೀನಿನ ಪಕ್ಕದಲ್ಲಿ ಬಂಡಿಯನ್ನು ನಿಲ್ಲಿಸಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಸಬ್‍ಇನ್ ಸ್ಪೆಕ್ಟರ್ ಪಂಕಜ್ ಕುಮಾರ್ ಮತ್ತು ಅವರ ತಂಡ ರಸ್ತೆ ಬದಿ ನಿಲ್ಲಿಸಿದ ಎತ್ತಿನ ಬಂಡಿ ನೋಡಿದ್ದಾರೆ. ಬಂಡಿ ಬಳಿ ಯಾರು ಇಲ್ಲದಿದ್ದನ್ನು ಕಂಡು ಗ್ರಾಮಸ್ಥರಿಗೆ ಕೇಳಿದಾಗ, ಅದು ರಿಯಾಜ್ ಹಸನ್ ಅವರದೆಂದು ತಿಳಿದಿದೆ. ಪೊಲೀಸರು ಎತ್ತಿನ ಬಂಡಿ ತೆಗೆದುಕೊಂಡು ಹಸನ್ ಮನೆಗೆ ಹೋಗಿ ವಿಮೆ ಮಾಡಿಸದ ವಾಹನ ಎಂದು 1 ಸಾವಿರ ರೂ. ದಂಡದ ಬಿಲ್ ನೀಡಿ ಹೋಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ರಿಯಾಜ್ ಹಸನ್, ನನ್ನ ಜಮೀನಿನ ಪಕ್ಕದಲ್ಲಿ ಬಂಡಿ ನಿಲ್ಲಿಸಿದ್ದಕ್ಕೆ ಪೊಲೀಸರು ದಂಡ ಹಾಕಿದ್ದಾರೆ. ಮೋಟಾರ್ ವಾಹನ ಕಾಯ್ದೆಯಡಿ ಹೇಗೆ ದಂಡ ಹಾಕಿದ್ರು ಎಂಬುವುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಶನಿವಾರ ದಂಡ ಹಾಕಿದ್ದ ಪೊಲೀಸರು ಭಾನುವಾರ ರದ್ದು ಮಾಡಿದ್ದಾರೆ.

    ಗಸ್ತು ತಿರುಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ಹಾಕಬೇಕು ಎಂದು ಸೂಚಿಸಲಾಗಿತ್ತು. ಸಾಹಸಪುರ ಠಾಣಾ ವ್ಯಾಪ್ತಿಯಲ್ಲಿ ಎತ್ತಿನ ಬಂಡಿ ಮೂಲಕವೇ ಮರಳು ಸಾಗಾಟ ಮಾಡಲಾಗುತ್ತದೆ. ಹಸನ್ ಸಹ ಬಂಡಿ ಮೂಲಕ ಮರಳು ಸಾಗಿಸುತ್ತಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಪೊಲೀಸರಿಗೆ ಮೋಟಾರ್ ವಾಹನ ಕಾಯ್ದೆ ಮತ್ತು ಬೇರೆ ಅಪರಾಧಕ್ಕೆ ವಿಧಿಸುವ ದಂಡದ ಬಗ್ಗೆ ಮಾಹಿತಿ ಇರಲಿಲ್ಲ. ಹಾಗಾಗಿ ಮೋಟರ ವಾಹನ ಕಾಯ್ದೆಯಡಿಯಲ್ಲಿ ದಂಡ ವಿಧಿಸಿದ್ದಾರೆ ಎಂದು ಸಾಹಸಪುರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಪಿ.ಡಿ.ಭಟ್ಟ ಸ್ಪಷ್ಟನೆ ನೀಡಿದ್ದಾರೆ.