Tag: ಟ್ರಾಫಿಕ್ ಪೊಲೀಸರು

  • ರಸ್ತೆ ಅಪಘಾತವಾದ್ರೆ ಇನ್ಮುಂದೆ ವೈಜ್ಞಾನಿಕ ತನಿಖೆ

    ರಸ್ತೆ ಅಪಘಾತವಾದ್ರೆ ಇನ್ಮುಂದೆ ವೈಜ್ಞಾನಿಕ ತನಿಖೆ

    ಬೆಂಗಳೂರು: ನಗರದಲ್ಲಿ ರಸ್ತೆ ಅಪಘಾತದಿಂದ ಗಂಭೀರ ಗಾಯ ಅಥವಾ ಪ್ರಾಣ ಹಾನಿ ಸಂಭವಿಸಿದ್ರೆ, ಟ್ರಾಫಿಕ್ ಪೊಲೀಸರ ಜೊತೆಗೆ ಲೋಕೋಪಯೋಗಿ ಅಧಿಕಾರಿಗಳು ಮತ್ತು ಆರ್‌ಟಿಒ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಇನ್ಮುಂದೆ ವೈಜ್ಞಾನಿಕ ತನಿಖೆ ನಡೆಸಲಿದ್ದಾರೆ.

    ಸುಪ್ರೀಂ ಕೋರ್ಟ್ ಕಳೆದ ವರ್ಷ ರಚನೆ ಮಾಡಿದ್ದ ರಸ್ತೆ ಸುರಕ್ಷತಾ ಸಮಿತಿಯಲ್ಲಿ, ಲೋಕೋಪಯೋಗಿ ಮತ್ತು ಸಾರಿಗೆ ಅಧಿಕಾರಿಗಳ ಜೊತೆಗೆ ಸಂಚಾರಿ ಪೊಲೀಸರು ಇದ್ದು, ಅಧ್ಯಯನ ವರದಿಯನ್ನು ಮುಖ್ಯ ಕಾರ್ಯದರ್ಶಿಗಳಿಗೆ ನೀಡಬೇಕು.

    ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ನೇತೃತ್ವದಲ್ಲಿ ಸಭೆ ಸೇರಿದ್ದ ಮೂರು ಇಲಾಖೆಗಳ ಅಧಿಕಾರಿಗಳು, ಕೆಲ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಆಕ್ಸಿಡೆಂಟ್ ಸ್ಥಳಕ್ಕೆ ಭೇಟಿ ನೀಡಿ, ಅಪಘಾತಕ್ಕೆ ನಿಖರ ಕಾರಣಗಳ ಬಗ್ಗೆ ತನಿಖೆ ನಡೆಸಬೇಕು ಹಾಗೂ ರಸ್ತೆಗಳು ನ್ಯೂನತೆಯಿದ್ದರೆ ಅದನ್ನು ಸರಿಪಡಿಸಬೇಕು.

    ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸುವ ಬಗ್ಗೆ ಸಮಿತಿ ತೀರ್ಮಾನ ಮಾಡಿದೆ. ಅಲ್ಲದೆ ರಸ್ತೆ ಸುರಕ್ಷತಾ ಪ್ರಾಧಿಕಾರ ಜಿಲ್ಲಾ ಮತ್ತು ತಾಲೂಕುವಾರು ಜಂಟಿ ಸಮಿತಿಯನ್ನು ರಚನೆ ಮಾಡಿದ್ದು, ಅಪಘಾತಗಳ ನಿಖರ ವರದಿ ನೀಡಲಿದೆ.

  • ಸರಕು ಸಾಗಾಣೆಯ ವಾಹನ ಟಾರ್ಗೆಟ್ – ಟ್ರಾಫಿಕ್ ಪೊಲೀಸರಿಂದ ಹಣ ವಸೂಲಿ

    ಸರಕು ಸಾಗಾಣೆಯ ವಾಹನ ಟಾರ್ಗೆಟ್ – ಟ್ರಾಫಿಕ್ ಪೊಲೀಸರಿಂದ ಹಣ ವಸೂಲಿ

    ಬಳ್ಳಾರಿ: ಬಳ್ಳಾರಿ-ಸಿರಗುಪ್ಪ ಹೈವೇ ರಸ್ತೆಯಲ್ಲಿ ಬಳ್ಳಾರಿ ಟ್ರಾಫಿಕ್ ಪೊಲೀಸರು ಪರಿಶೀಲನೆ ಹೆಸರಲ್ಲಿ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಹೈವೇ ಮಾರ್ಗವಾಗಿ ಸಂಚರಿಸುವ ವಾಹನಗಳ ತಡೆದು ಸರಕು ಹಾಗೂ ವಾಹನ ತಪಾಸಣೆ ಮಾಡುತ್ತಾರೆ. ಎಲ್ಲ ದಾಖಲಾತಿ ಸರಿಯಾಗಿ ಇದ್ದರೂ 3 ರಿಂದ 5 ಸಾವಿರ ರೂ.ವರೆಗೂ ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂದು ಜನ ದೂರುತ್ತಿದ್ದಾರೆ.

    ಸಂಚಾರಿ ಪೊಲೀಸರು ಸರಕು ಸಾಗಾಣೆಯ ವಾಹನಗಳನ್ನೇ ಟಾರ್ಗೆಟ್ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ಈ ಮಾರ್ಗದ ವಾಹನಗಳ ಚಾಲಕರಿಗೆ ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಕೇಳಿದಷ್ಟು ಹಣ ನೀಡದಿದ್ದರೆ ವಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ವಾಹನ ಚಾಲಕರು ಆರೋಪಿಸಿದ್ದಾರೆ.

  • ಹೊಸ ವರ್ಷದ ಗುಂಗಲ್ಲಿ ಕುಡಿದರೆ ಬೀಳುತ್ತೆ ದಂಡ!

    ಹೊಸ ವರ್ಷದ ಗುಂಗಲ್ಲಿ ಕುಡಿದರೆ ಬೀಳುತ್ತೆ ದಂಡ!

    – ಬೆಂಗಳೂರಿನ ಎಲ್ಲಾ ಪ್ರದೇಶಗಳಲ್ಲಿ ನಾಕಾಬಂದಿ
    – ಕುಡಿದ ವಾಹನ ಓಡಿಸಿದ್ರೆ ದಂಡ ಗ್ಯಾರಂಟಿ

    ಬೆಂಗಳೂರು: ಹೊಸ ವರ್ಷದ ಆಚರಣೆ ಗುಂಗಲ್ಲಿ ಕುಡಿದು ಪಾರ್ಟಿ ಮಾಡೋ ಮುನ್ನ ಹುಷಾರಾಗಿರಿ. ರಾಜಧಾನಿಯ ಎಲ್ಲಾ ಏರಿಯಾಗಳಲ್ಲಿ ನಾಕಾಬಂದಿ ಹಾಕಿ ವಾಹನ ಚಾಲಕರ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ಮಾಡಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.

    ಒಂದೆಡೆ ಹೊಸ ವರ್ಷ ಸಂಭ್ರಮಕ್ಕೆ ಪಾರ್ಟಿ ಮಾಡೋಕೆ ಅನುಮತಿ ಕೊಡುವ ಪೊಲೀಸರೇ ಮತ್ತೊಂದೆಡೆ ಕುಡಿದು ವಾಹನ ಚಲಾಯಿಸುವ ಮಂದಿಗೆ ಕಾಯುತ್ತಾ ಕುಳಿತಿರುತ್ತಾರೆ. ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿದವರನ್ನು ಹಿಡಿಯಲು ಪೊಲೀಸರು ಸಜ್ಜಾಗಿದ್ದಾರೆ. ಇಂದು ರಾತ್ರಿ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತದೆ.

    ಬೆಂಗಳೂರಿನ ಎಲ್ಲಾ ಏರಿಯಾಗಳಲ್ಲಿ ನಾಕಾಬಂದಿ ಹಾಕಿ ವಾಹನ ಚಾಲಕರ ತಪಾಸಣೆಯನ್ನು ಟ್ರಾಫಿಕ್ ಪೊಲೀಸರು ಮಾಡಲಿದ್ದಾರೆ. ಪಬ್, ಬಾರ್, ರೆಸ್ಟೋರೆಂಟ್, ಹೊಟೇಲ್‍ಗಳಲ್ಲಿ ಪಾರ್ಟಿ ಮಾಡಿಕೊಂಡು ಕುಡಿದು ವಾಹನದಲ್ಲಿ ರಸ್ತೆಗೆ ಬಂದ್ರೆ ದಂಡ ಗ್ಯಾರೆಂಟಿ. ಪಾರ್ಟಿ ಮಾಡಿ ಹೊರಡುವ ಮುನ್ನ ಒಬ್ಬ ಚಾಲಕ ಅಥವಾ ಖಾಸಗಿ ಕ್ಯಾಬ್ ಬುಕ್ ಮಾಡಿಕೊಂಡರೆ ಉತ್ತಮ. ಇಲ್ಲವಾದರೆ ಫೈನ್ ಕಟ್ಟಲು ತಯಾರಾಗಬೇಕು.

    ಹೊಸ ವರ್ಷದ ಗುಂಗಲ್ಲಿ ಕುಡಿದು ವಾಹನ ಚಲಾಯಿಸಿ ಅಪಘಾತಗಳಾದ ಪ್ರಕರಣಗಳು ಹೆಚ್ಚಾಗಿವೆ. ಆದರಿಂದ ಈ ರೀತಿ ಘಟನೆಗಳನ್ನು ತಡೆಗಟ್ಟಲು ಪೊಲೀಸರು ಈ ನಿರ್ಧಾರವನ್ನು ಮಾಡಿದ್ದಾರೆ.

    ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಆಶೋಕನಗರ ಅಲ್ಲದೆ ನಗರದ ಎಲ್ಲಾ ಕಡೆ ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ತಪಾಸಣೆ ಮಾಡಲಿದ್ದಾರೆ. ಇಂದು ರಾತ್ರಿ 8 ರಿಂದ ಮಂಗಳವಾರ ಬೆಳಗ್ಗೆ 8 ರವರೆಗೆ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv