Tag: ಟ್ರಾಫಿಕ್ ಪೊಲೀಸರು

  • ಟ್ರಾಫಿಕ್ ಪೊಲೀಸರಿಗೂ ತಟ್ಟಿತು ಕೊರೋನಾ ವೈರಸ್ ಎಫೆಕ್ಟ್

    ಟ್ರಾಫಿಕ್ ಪೊಲೀಸರಿಗೂ ತಟ್ಟಿತು ಕೊರೋನಾ ವೈರಸ್ ಎಫೆಕ್ಟ್

    ಬೆಂಗಳೂರು: ಕೊರೊನಾ ವೈರಸ್ ಎಫೆಕ್ಟ್ ನಗರದ ಟ್ರಾಫಿಕ್ ಪೊಲೀಸರಿಗೂ ತಟ್ಟಿದೆ. ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಕೊರೊನಾ ವೈರಸ್ ಧೃಡಪಟ್ಟ ಹಿನ್ನೆಲೆಯಲ್ಲಿ ನಗರದ ಟ್ರಾಫಿಕ್ ಪೊಲೀಸರು ಡ್ರಿಂಕ್ & ಡ್ರೈವ್ ಚೆಕ್ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

    ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು, ಈಗಾಗಲೇ ಬೆಂಗಳೂರಿಗೆ ಕೊರೊನಾ ಬಂದಿರುವ ವಿಚಾರ ತಿಳಿದು ನಮ್ಮ ಸಿಬ್ಬಂದಿ ಭಯಗೊಂಡಿದ್ದಾರೆ. ಡ್ರಿಂಕ್ & ಡ್ರೈವ್ ಚೆಕ್ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬಾಯಿ ವಾಸನೆ ಮೂಲಕ ನಾವು ಡ್ರಿಂಕ್ & ಡ್ರೈವ್ ಚೆಕ್ ಮಾಡಬೇಕು. ನಂತರ ಡಿಡಿ ಮಿಷಿನ್‍ನಲ್ಲಿ ಚೆಕ್ ಮಾಡುವುದು. ಹಾಗಾಗಿ ನಮಗೂ ಕೊರೊನಾ ವೈರಸ್ ತಗುಲುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರು ಟೆಕ್ಕಿಗೆ ಕೊರೋನಾ ಬಂದಿದ್ದು ಹೇಗೆ?

    ಈಗಾಗಲೇ ಕೆಲ ವಿದೇಶಗಳಲ್ಲಿ ಹ್ಯಾಂಡ್ ಶೇಕ್ ಮಾಡುವುದು, ಪರಸ್ಪರ ಚುಂಬಿಸುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ನಮ್ಮ ಮೇಲಾಧಿಕಾರಿಗಳ ಗಮನ ಹರಿಸಬೇಕು, ನಮಗೂ ಫ್ಯಾಮಿಲಿಗಳಿವೆ. ಏನಾದರೂ ಹೆಚ್ಚು ಕಮ್ಮಿಯಾದರೆ ಯಾರು ಹೊಣೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಇದನ್ನೂ ಓದಿ: 24 ವರ್ಷದ ಬೆಂಗ್ಳೂರು ಟೆಕ್ಕಿಗೆ ಕೊರೋನಾ ವೈರಸ್

    ಬೆಂಗಳೂರಿನಲ್ಲಿ ಕೆಲಸ ಮಾಡುವ ಹೈದರಾಬಾದ್ ಮೂಲದ ಟೆಕ್ಕಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದು, ಟೆಕ್ಕಿಗೆ ಹೈದರಾಬಾದ್‍ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದರ ಎಫೆಕ್ಟ್ ಈಗ ಪೊಲೀಸರಿಗೂ ತಟ್ಟಿದೆ.

  • 500 ಪೀಕಿಸಲು ಹೋಗಿ ಪೀಕಲಾಟಕ್ಕೆ ಸಿಕ್ಕಿಹಾಕಿಕೊಂಡ ಪೊಲೀಸರು

    500 ಪೀಕಿಸಲು ಹೋಗಿ ಪೀಕಲಾಟಕ್ಕೆ ಸಿಕ್ಕಿಹಾಕಿಕೊಂಡ ಪೊಲೀಸರು

    ಉಡುಪಿ: ಸೀಟು ಬೆಲ್ಟ್ ಹಾಕಿದ್ದರೂ ಹಾಕಿಲ್ಲ ಎಂದು ಮಹಿಳೆಯಿಂದ 500 ರೂ. ಪೀಕಿಸಲು ಹೋಗಿ ಪೊಲೀಸರು ಪೀಕಲಾಟಕ್ಕೆ ಒಳಗಾದ ಘಟನೆ ಉಡುಪಿ ಜಿಲ್ಲೆಯ ಹೆಮ್ಮಾಡಿಯಲ್ಲಿ ನಡೆದಿದೆ.

    ಕುಂದಾಪುರದಲ್ಲಿ ಹೈವೇ ಪೆಟ್ರೋಲ್ ಪೊಲೀಸರು ಮಹಿಳೆಯ ಕಾರು ಬರುತ್ತಿದ್ದಂತೆ ದೂರದಲ್ಲೇ ನಿಲ್ಲಿಸುವಂತೆ ಸೂಚನೆ ನೀಡಿದರು. ಬಳಿಕ ಪೊಲೀಸರು ನೀವು ಸೀಟ್ ಬೆಲ್ಟ್ ಹಾಕಿಲ್ಲ 500 ರೂ. ಕೊಡಿ ಎಂದು ಹಣ ಪೀಕಿಸಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಈ ಹಿಂದೆ ಬಹಳಷ್ಟು ಬಾರಿ ಪೊಲೀಸರ ಹಗಲು ದರೋಡೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮಹಿಳೆ ಶಾಂತಿ ಫುಟಾರ್ಡೋ ಪೊಲೀಸರಿಗೆ ರೇಗಾಡಿದ ವಿಡಿಯೋವನ್ನು ತಾನೇ ಚಿತ್ರೀಕರಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ತಾನೇ ಶೇರ್ ಮಾಡಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸರು ಸ್ಪಷ್ಟನೆ ನೀಡಿಲ್ಲ.

  • ಕಡಿಮೆ ರೇಟ್ ಹೆಲ್ಮೆಟ್ ಹಾಕ್ತೀರಾ ಹುಷಾರ್ – ಪೊಲೀಸ್ ಕೈಗೆ ಸಿಕ್ಕಿಬಿದ್ರೆ ಅಲ್ಲೇ ಪೀಸ್ ಪೀಸ್

    ಕಡಿಮೆ ರೇಟ್ ಹೆಲ್ಮೆಟ್ ಹಾಕ್ತೀರಾ ಹುಷಾರ್ – ಪೊಲೀಸ್ ಕೈಗೆ ಸಿಕ್ಕಿಬಿದ್ರೆ ಅಲ್ಲೇ ಪೀಸ್ ಪೀಸ್

    ಹಾಸನ: ಅರ್ಧ ಹೆಲ್ಮೆಟ್ ಹಾಕುವ ಬೈಕ್ ಸವಾರರಿಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದು, ಕಡಿಮೆ ಬೆಲೆಯಲ್ಲಿ ಸಿಗುತ್ತೆ ಎಂದು ಖರೀದಿಸಿದರೆ ಅದು ಪೊಲೀಸರು ಪಾಲಾಗುವುದು ಖಂಡಿತ.

    ಹಾಸನ ನಗರ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಆಪರೇಷನ್ ಪ್ರಾರಂಭಿಸಿದ್ದು, ಸಿಕ್ಕ ಸಿಕ್ಕ ಸವಾರರ ಹಾಫ್ ಹೆಲ್ಮೆಟ್‍ಗಳನ್ನು ಕಸಿದು ಕಸಕ್ಕೆ ಎಸೆಯುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸದೆ ಕೇವಲ ದಂಡ ತಪ್ಪಿಸಿಕೊಳ್ಳಲು ಹಾಕುತ್ತಿದ್ದ ಹೆಲ್ಮೆಟ್ ಗಳು ಇದೀಗ ತಿಪ್ಪೆ ಸೇರುತ್ತಿವೆ.

    ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಖರೀದಿಸುತ್ತೇವೆ. ಆದರೆ ಇಂತಹ ಹೆಲ್ಮೆಟ್‍ಗಳಿಗೆ ಪೊಲೀಸರು ಮುಕ್ತಿ ಕಾಣಿಸುತ್ತಿದ್ದು, ಇನ್ನು ಮುಂದೆ ಕಡ್ಡಾಯವಾಗಿ ಐಎಸ್‍ಐ ಗುರುತಿರುವ ಗುಣಮಟ್ಟದ ಫುಲ್ ಹೆಲ್ಮೆಟ್‍ಗಳನ್ನು ಧರಿಸಬೇಕಿದೆ. ಆಫ್ ಹೆಲ್ಮೆಟ್ ಎಲ್ಲವನ್ನೂ ಪೊಲೀಸರು ಕಿತ್ತುಕೊಂಡು ಒಡೆದು ಹಾಕುತ್ತಿದ್ದು, ಹೊಸ ಹೆಲ್ಮೆಟ್ ಖರೀದಿಸುವಂತೆ ಸೂಚನೆ ನೀಡುತ್ತಿದ್ದಾರೆ.

    ಕಳೆದ ಎರಡು ದಿನಗಳಿಂದ ಈ ಆಪರೇಷನ್ ನಡೆಯುತ್ತಿದ್ದು, ಒಂದು ಸಾವಿರಕ್ಕೂ ಅಧಿಕ ಹಾಫ್ ಹೆಲ್ಮೆಟ್‍ಗಳನ್ನು ಪೊಲೀಸರು ಕಿತ್ತು ಬಿಸಾಡುತ್ತಿದ್ದಾರೆ. ಪ್ರಾಣ ರಕ್ಷಣೆಗೆ ಫುಲ್ ಹಾಗೂ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ತಾಕೀತು ಮಾಡುತ್ತಿದ್ದಾರೆ.

  • ಹಿಂಬದಿ ಸವಾರ ಹೆಲ್ಮೆಟ್ ಹಾಕದಿದ್ದಕ್ಕೆ ಕಾಲರ್ ಹಿಡಿದು ಎಳೆದಾಡಿದ ಟ್ರಾಫಿಕ್ ಪೊಲೀಸ್

    ಹಿಂಬದಿ ಸವಾರ ಹೆಲ್ಮೆಟ್ ಹಾಕದಿದ್ದಕ್ಕೆ ಕಾಲರ್ ಹಿಡಿದು ಎಳೆದಾಡಿದ ಟ್ರಾಫಿಕ್ ಪೊಲೀಸ್

    ಮಂಗಳೂರು: ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದ ಬೈಕ್ ಸವಾರರ ಜೊತೆ ಟ್ರಾಫಿಕ್ ಪೊಲೀಸರು ದುರ್ವರ್ತನೆ ತೋರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

    ಬೈಕಿನಲ್ಲಿ ಹಿಂಬದಿ ಸವಾರರೊಬ್ಬರು ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದರು. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಎಎಸ್‍ಐ ಬಾಲಕೃಷ್ಣ ಬೈಕ್ ಸವಾರರನ್ನು ನಿಲ್ಲಿಸಿದ್ದಾರೆ. ಬಳಿಕ ಯುವಕನ ಶರ್ಟ್ ಕಾಲರ್ ಹಿಡಿದು ತಳ್ಳುತ್ತಾ ಎಳೆದಾಡಿದ್ದಾರೆ.

    ಈ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್ ಪೇಟೆಯಲ್ಲಿ ನಡೆದಿದ್ದು, ಈ ದೃಶ್ಯವನ್ನು ಮತ್ತೊಬ್ಬ ಬೈಕ್ ಸವಾರ ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ಸವಾರ ತನ್ನ ಮೇಲೆ ಕೇಸು ದಾಖಲಿಸಿ ಎಂದು ಗೋಗರೆಯುತ್ತಿದ್ದರೂ, ಟ್ರಾಫಿಕ್ ಪೊಲೀಸ್ ಕಾಲರ್ ಹಿಡಿದು ತಳ್ಳಾಡಿದ್ದಾರೆ. ರೆಕಾರ್ಡ್ ತೋರಿಸುವಂತೆ ದರ್ಪ ತೋರಿದ್ದಾರೆ. ಟ್ರಾಫಿಕ್ ಪೊಲೀಸರ ದುರ್ವರ್ತನೆ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

  • ತಪ್ಪು ಮಾಡದಿದ್ರೂ 200 ರೂ. ದಂಡ – ಮಗನಿಗೆ ಸ್ವೀಟ್ ಕೊಡಿಸಲಿಟ್ಟಿದ್ದ ಹಣ ಕಿತ್ಕೊಂಡ ಪೊಲೀಸ್

    ತಪ್ಪು ಮಾಡದಿದ್ರೂ 200 ರೂ. ದಂಡ – ಮಗನಿಗೆ ಸ್ವೀಟ್ ಕೊಡಿಸಲಿಟ್ಟಿದ್ದ ಹಣ ಕಿತ್ಕೊಂಡ ಪೊಲೀಸ್

    ಬಾಗಲಕೋಟೆ: ರಸ್ತೆ ನಿಯಮವನ್ನು ಪಾಲಿಸಿದ್ದರೂ ಲಂಚಬಾಕ ಪೊಲೀಸ್ ಅಧಿಕಾರಿಯೊಬ್ಬ ಚಾಲಕನಿಗೆ ಕಾಡಿಬೇಡಿ, ಬೈದು 100 ರೂ. ಪಡೆದಿರುವ ವಿಡಿಯೋ ಹಾಗೂ ಆಡಿಯೋ ಬಾಗಲಕೋಟೆ ಜಿಲ್ಲೆಯಲ್ಲಿ ಸದ್ಯ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಜಿಲ್ಲೆಯ ಜಮಖಂಡಿ ಗ್ರಾಮೀಣ ಠಾಣೆ ಎಎಸ್‍ಐ ಮಾರುತಿ ಭಜಂತ್ರಿ ಎಂಬವರೇ ಲಂಚ ಪಡೆದ ಅಧಿಕಾರಿ. ಜಮಖಂಡಿಯಿಂದ ಮಹಾಲಿಂಗಪುರಕ್ಕೆ ಚಾಲಕ ಖಾಲಿ ವಾಹನ ತೆಗೆದುಕೊಂಡು ಹೋಗುವಾಗ ರಸ್ತೆ ನಿಯಮ ಹಾಗೂ ದಾಖಲೆಗಳಿದ್ದರೂ 200 ರೂ. ದಂಡ ಕೊಡು ಎಂದು ಅಧಿಕಾರಿ ಬೈದಿದ್ದಾರೆ.

    ನನ್ನ ಬಳಿ 100 ರೂ. ಬಿಟ್ಟರೆ ಬೇರೆ ಇರಲಿಲ್ಲ. ಕೊನೆಗೆ ಅದನ್ನು ಕೊಟ್ಟು ಬಂದೆ. ನಾನೇನು ತಪ್ಪು ಮಾಡಿರದಿದ್ದರೂ 100 ರೂ. ದಂಡ ಕೊಟ್ಟು ಬಂದಿದ್ದೇನೆ. ಪೊಲೀಸರಿಗೆ ಚಾಲಕರೆಂದರೆ ಕಿಮ್ಮತ್ತೇ ಇಲ್ಲ. ನಮಗೆ ಬಾಯಿಗೆ ಬಂದಂತೆ ಬೈತಾರೆ. ಬೆಳಗ್ಗೆಯಿಂದ ಸಂಜೆವರೆಗೂ ದುಡಿದು ಆ ಪೊಲೀಸರಿಗೆ ಹಣ ಕೊಟ್ಟು ಬರಿಗೈಲಿ ಬಂದೆ. ಒಂದು ವರ್ಷದ ಮಗನಿಗೆ ಸ್ವೀಟ್ ತೆಗೆದುಕೊಂಡು ಹೋಗಲು ಇಟ್ಟುಕೊಂಡಿದ್ದ 100 ರೂ. ಕಿತ್ತುಕೊಂಡರು. ಮಗನಿಗೆ ಸ್ವೀಟ್ ಇಲ್ಲದೆ ಮನೆಗೆ ತೆರಳಿದೆ ಎಂದು ಚಾಲಕ ತನ್ನ ದುಃಖವನ್ನು ತೋಡಿಕೊಂಡಿರುವ ಆಡಿಯೋ ಇದೀಗ ಜಿಲ್ಲೆಯಲ್ಲಿ ಫುಲ್ ವೈರಲ್ ಆಗಿದೆ.

    ಸದ್ಯ ಲಂಚಬಾಕ ಎಎಸ್‍ಐ ವಿರುದ್ಧ ಚಾಲಕ ಕಿಡಿಕಾರಿದ್ದಾನೆ. ತಾನು ಕೆರೂರ ಪಟ್ಟಣದ ವಾಹನ ಚಾಲಕ ಎಂದು ಆಡಿಯೋದಲ್ಲಿ ಹೇಳಿದ್ದಾನೆ. ಜೊತೆಗೆ ಎಎಸ್‍ಐ ನೂರು ರೂ. ಪಡೆದು ಬೈದು ಕಳುಹಿಸಿರುವ ವಿಡಿಯೋ ಸಹ ವೈರಲ್ ಮಾಡಿದ್ದಾನೆ.

  • ಫೋನ್‍ಪೇಯಿಂದ ಹಣ ಕೀಳ್ತಾರೆ – ಪಬ್ಲಿಕ್ ಕ್ಯಾಮೆರಾ ಕಂಡ ಕೂಡ್ಲೇ ಓಡ್ತಾರೆ ಟ್ರಾಫಿಕ್ ಪೊಲೀಸ್ರು

    ಫೋನ್‍ಪೇಯಿಂದ ಹಣ ಕೀಳ್ತಾರೆ – ಪಬ್ಲಿಕ್ ಕ್ಯಾಮೆರಾ ಕಂಡ ಕೂಡ್ಲೇ ಓಡ್ತಾರೆ ಟ್ರಾಫಿಕ್ ಪೊಲೀಸ್ರು

    ಬೆಂಗಳೂರು: ಕೆಲ ಟ್ರಾಫಿಕ್ ಪೊಲೀಸರು ದುಬಾರಿ ದಂಡವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ದಂಡದ ಹೆಸರಲ್ಲಿ ವಾಹನ ಸವಾರರ ಬಳಿ ಹಗಲು ದರೋಡೆಗೆ ಇಳಿದಿದ್ದಾರೆ. ಪ್ರಶ್ನೆ ಮಾಡಿದರೆ ಟ್ರಾಫಿಕ್ ಪಿಎಸ್‍ಐ ಧಮ್ಕಿ ಹಾಕುತ್ತಾರೆ. ಟ್ರಾಫಿಕ್ ಪೊಲೀಸರ ವರ್ತನೆಗೆ ಜನರು ಬಿಲ್ ಇಲ್ಲದೆ ಫೈನ್ ಕಟ್ಟುತ್ತಿದ್ದಾರೆ.

    ಹೌದು. ಬೆಂಗಳೂರಿನಲ್ಲಿ ಕೆಲ ಟ್ರಾಫಿಕ್ ಪೊಲೀಸರು ದುಬಾರಿ ದಂಡವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಸಿಕ್ಕಿದ್ದೇ ಚಾನ್ಸ್ ಎಂಬಂತೆ ವಾಹನ ಸವಾರರ ಬಳಿ ಬಂದಷ್ಟು ದೋಚಿಕೊಳ್ಳಲು ಮುಂದಾಗಿದ್ದಾರೆ. ಮಲ್ಲೇಶ್ವರಂ ಟ್ರಾಫಿಕ್ ಪಿಎಸ್‍ಐ ಹಾಗೂ ಗ್ಯಾಂಗ್ ಹಗಲು ದರೋಡೆ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ದಂಡದ ಮೊತ್ತವನ್ನು ಫೋನ್‍ಪೇ ಮಾಡಿಸಿಕೊಳ್ಳುವ ಕಾನೂನು ಯಾವಾಗ ಬಂತು ಎಂದು ಪ್ರಶ್ನೆ ಮಾಡಿದ್ದೆ ತಡ, ಮಲ್ಲೇಶ್ವರಂ ಟ್ರಾಫಿಕ್ ಪಿಎಸ್‍ಐ ಕೋಪಗೊಂಡಿದ್ದಾರೆ. ಅಲ್ಲದೆ ನಮ್ಮನ್ನೇ ಪ್ರಶ್ನೆ ಮಾಡುತ್ತೀಯಾ ಬಂದ ಕೆಲಸವನ್ನು ಮಾಡಿಕೊಂಡು ಹೋಗಿ, ಇಲ್ಲ ಹೊಯ್ಸಳ ಕರೆಸಿ ಒದ್ದು ಒಳಗಡೆ ತಳ್ಳ ಬೇಕಾಗುತ್ತದೆ ಎಂದು ಧಮ್ಕಿ ಹಾಕಲು ಮುಂದಾಗಿದ್ದಾರೆ. ಅಲ್ಲದೆ ಒಬ್ಬ ವಾಹನ ಸವಾರ ಪ್ರಶ್ನೆ ಮಾಡಿದ ಎನ್ನುವ ಕಾರಣಕ್ಕೆ ಕತ್ತಿನ ಪಟ್ಟಿ ಹಿಡಿದು ಪೊಲೀಸ್ ಠಾಣೆಗೆ ಬಿಟ್ಟು ಬಂದಿದ್ದಾರೆ.

    ಮಲ್ಲೇಶ್ವರಂ ಟ್ರಾಫಿಕ್ ಪಿಎಸ್‍ಐ ಪಕ್ಕದಲ್ಲಿಯೇ ಇದ್ದುಕೊಂಡು ಮಹಿಳೆಯರು, ಪಿಎಸ್‍ಐ ಪಟಾಲಂ ಕಡೆಯಿಂದ ಫೋನ್‍ಪೇ ಮೂಲಕ ದಂಡದ ಹಣ ವಸೂಲಿ ಮಾಡಿಸುತ್ತಾರೆ. ಇದನ್ನು ಪಬ್ಲಿಕ್ ಟಿವಿ ಚಿತ್ರೀಕರಿಸಲು ಹೋದಾಗ ಫೋನ್‍ಪೇ ಮುಖಾಂತರ ದಂಡದ ಹಣ ಪಾವತಿಸಿಕೊಳ್ಳುತ್ತಿದ್ದ ಮಲ್ಲೇಶ್ವರಂ ಪಿಎಸ್‍ಐ ಗ್ಯಾಂಗ್ ಸದಸ್ಯರು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಗ್ಯಾಂಗ್ ನ ಸದ್ಯಸರು ಎಸ್ಕೇಪ್ ಆಗುತ್ತಿದ್ದಂತೆಯೇ ಮಲ್ಲೇಶ್ವರಂ ಟ್ರಾಫಿಕ್ ಪಿಎಸ್‍ಐ ಕೂಡ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಂಡು ಜಾಗ ಖಾಲಿ ಮಾಡಿದ್ದಾರೆ.

    ಟ್ರಾಫಿಕ್ ಪೊಲೀಸರಿಗೆ ಮರು ಪ್ರಶ್ನೆ ಮಾಡಿದರೆ ರೇಗಾಡಿದ್ದಾರೆ. ಟ್ರಾಫಿಕ್ ಪೊಲೀಸರು ವಾಹನ ಸವಾರರ ಜೊತೆ ಮಾತಿನ ಚಕಮಕಿಗೆ ಇಳಿದರೆ ಸಾಕು ಟೋಯಿಂಗ್ ಹುಡುಗರು ರೌಡಿಗಳ ರೀತಿಯಲ್ಲಿ ವರ್ತಿಸಲು ಶುರು ಮಾಡಿಕೊಳ್ಳುತ್ತಾರೆ. ಅಮಾಯಕ ವಾಹನ ಸವಾರರು ಇವರ ಅವಾಂತರ ಕಂಡು ಕೆಸರಲ್ಲಿ ಕಲ್ಲು ಹಾಕಿದರೆ ನಮ್ಮ ಮೇಲೆ ಸಿಡಿಯೋದು ಎಂದುಕೊಂಡು ಫೋನ್‍ಪೇ, ಗೂಗಲ್‍ಪೇನೋ ಏನೋ ಮಾಡಿ ಹೋಗುತ್ತಿರುತ್ತಾರೆ.

  • ಫೈನ್ ಹಾಕಿದ್ದಕ್ಕೆ ಪೊಲೀಸರ ವಸ್ತುಗಳನ್ನೇ ಕದ್ದ

    ಫೈನ್ ಹಾಕಿದ್ದಕ್ಕೆ ಪೊಲೀಸರ ವಸ್ತುಗಳನ್ನೇ ಕದ್ದ

    ಬೆಂಗಳೂರು: ದಂಡ ವಿಧಿಸಿದ್ದಕ್ಕೆ ವ್ಯಕ್ತಿಯೊಬ್ಬ ಪೊಲೀಸರ ವಸ್ತುಗಳನ್ನೇ ಕದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಅಶೋಕ್ ಗಜರೆ ಪೊಲೀಸರು ವಸ್ತು ಕದ್ದ ಕಳ್ಳ. ಅಶೋಕ್ ಗಜರೆ ನೋ ಪಾರ್ಕಿಂಗ್ ಜಾಗದಲ್ಲಿ ತನ್ನ ವಾಹನವನ್ನು ಪಾರ್ಕ್ ಮಾಡಿದ್ದನು. ಇದನ್ನು ನೋಡಿದ ಪೇದೆ ಮುಲ್ಲ ಮುಸ್ತಫಾ ಆತನಿಗೆ ದಂಡ ವಿಧಿಸಿದ್ದರು.

    ದಂಡ ವಿಧಿಸಿದ್ದರಿಂದ ಕೋಪಗೊಂಡ ಅಶೋಕ್ ವೈಜಿ ಪಾಳ್ಯ ಪೊಲೀಸ್ ಕ್ವಾಟರ್ಸ್‍ವರೆಗೂ ಪೇದೆ ಮುಸ್ತಫಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಬಳಿಕ ಬೈಕಿನಲ್ಲಿದ್ದ ಪೊಲೀಸ್ ರೈನ್ ಕೋಟ್, ಟ್ಯಾಬ್, ಮಾಸ್ಕ್ ಗಳನ್ನು ಕದಿದ್ದಾನೆ.

    ಅಶೋಕ್ ಬೈಕಿನಲ್ಲಿದ್ದ ವಸ್ತುಗಳನ್ನು ಕದಿಯುತ್ತಿದ್ದಾಗ ಶಬ್ದ ಕೇಳಿಸಿದೆ. ಹೊರಗಡೆ ಶಬ್ದ ಬಂದಿದ್ದರಿಂದ ಮುಸ್ತಫಾ ಅವರು ಹೊರಬಂದಿದ್ದಾರೆ. ಈ ವೇಳೆ ಅಶೋಕ್ ನನೆಗೆ ಫೈನ್ ಹಾಕ್ತಿಯಾ? ನಾನ್ಯಾರು ಎಂದು ನಿನಗೆ ತೋರಿಸುತ್ತೇನೆ ಎಂದು ಅವಾಜ್ ಹಾಕಿ ಪರಾರಿಯಾಗಿದ್ದಾನೆ.

    ಮುಸ್ತಫಾ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದು, ಈ ಬಗ್ಗೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉಡುಪಿಯಲ್ಲಿ ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಜನ

    ಉಡುಪಿಯಲ್ಲಿ ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಜನ

    ಉಡುಪಿ: ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯ್ದೆಯ ದಂಡ ವಸೂಲಿ ವಿರುದ್ಧ ಸಾರ್ವಜನಿಕರು ಅಲ್ಲಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಈಗ ಉಡುಪಿಯಲ್ಲೂ ಈ ರೀತಿಯ ಘಟನೆ ನಡೆದಿದೆ.

    ನಗರದ ಪಿಪಿಸಿ ಕಾಲೇಜು ಸಮೀಪ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ನಿಂತಿದ್ದರು. ಸಮೀಪದಲ್ಲಿ ಉಡುಪಿ ನಗರದ ಪಿಪಿಸಿ ಕಾಲೇಜ್ ಬಳಿ ಸಮವಸ್ತ್ರ ಧರಿಸದ, ಮಫ್ತಿಯಲ್ಲಿ ಇರುವ ಪೊಲೀಸರು ದ್ವಿಚಕ್ರ ವಾಹನಗಳನ್ನು ತಡೆದು ದಂಡ ವಸೂಲಿಗೆ ಇಳಿದಿದ್ದರು.

    ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ ಇಲ್ಲದ ಈ ಪೊಲೀಸರು ಕರ್ತವ್ಯ ಪಾಲನೆಯಲ್ಲಿ ಇದ್ದದ್ದು ಸಂಶಯ ಮೂಡಿಸುವಂತಿತ್ತು. ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಮತ್ತು ವಿದ್ಯಾರ್ಥಿಗಳು, ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಅಲ್ಲಿಯೇ ಸ್ವಲ್ಪ ದೂರದಲ್ಲಿ ಇಲಾಖಾ ಜೀಪಿನಲ್ಲಿದ್ದ ಟ್ರಾಫಿಕ್ ಎಸ್‍ಐ ಅವರನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಲಾಖಾ ವಾಹನದಲ್ಲಿದ್ದ ಟ್ರಾಫಿಕ್ ಎಸ್‍ಐ ದೂರದಲ್ಲಿ ವಾಹನದೊಳಗೆ ಕುಳಿತ್ತಿದ್ದರು. ಸಮವಸ್ತ್ರ ಧರಿಸದ ಪೊಲೀಸ್ ಸಿಬ್ಬಂದಿಯನ್ನು ವಾಹನ ತಡೆದು ನಿಲ್ಲಿಸಲು ಇಳಿಸಲಾಗಿತ್ತು. ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದು ಈ ರಾದ್ಧಾಂತಕ್ಕೆ ಕಾರಣವಾಯಿತು. ಜನರಲ್ಲಿ ಸರ್ಕಾರದ ದಂಡದ ಕುರಿತು ಇದ್ದ ಆಕ್ರೋಶ ಈಗ ಪೊಲೀಸರ ಮೇಲೆ ಶಿಫ್ಟಾಗಿದೆ.

  • ದಂಡ ವಿಧಿಸಿದ್ದಕ್ಕೆ ಬೈಕಿಗೆ ಬೆಂಕಿ ಹಚ್ಚಿದ ವ್ಯಕ್ತಿ

    ದಂಡ ವಿಧಿಸಿದ್ದಕ್ಕೆ ಬೈಕಿಗೆ ಬೆಂಕಿ ಹಚ್ಚಿದ ವ್ಯಕ್ತಿ

    ನವದೆಹಲಿ: ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಕ್ಕೆ ವ್ಯಕ್ತಿಯೊಬ್ಬ ಬೈಕಿಗೆ ಬೆಂಕಿ ಹಚ್ಚಿದ ಘಟನೆ ಗುರುವಾರ ನವದೆಹಲಿಯ ಶೇಖ್ ಸರಾಯ್‍ನಲ್ಲಿ ನಡೆದಿದೆ.

    ರಾಕೇಶ್ ಬೈಕಿಗೆ ಬೆಂಕಿ ಹಚ್ಚಿದ ವ್ಯಕ್ತಿ. ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ಕೋಪಗೊಂಡ ರಾಕೇಶ್ ತನ್ನ ಬೈಕಿಗೆ ಬೆಂಕಿ ಹಚ್ಚಿದ್ದಾನೆ. ವರದಿಗಳ ಪ್ರಕಾರ ಪೊಲೀಸರು ಚೆಕ್ಕಿಂಗ್ ನಡೆಸುತ್ತಿದ್ದಾಗ ರಾಕೇಶ್ ಅಲ್ಲಿಗೆ ಬಂದಿದ್ದಾನೆ. ಈ ವೇಳೆ ರಾಕೇಶ್ ಮದ್ಯದ ನಶೆಯಲ್ಲಿ ಇದ್ದನು ಎಂದು ಹೇಳಲಾಗುತ್ತಿದೆ.

    ಪೊಲೀಸರು ಚೆಕ್ಕಿಂಗ್ ನಡೆಸಿದ ನಂತರ ಆತನಿಗೆ ಚಲನ್ ನೀಡಿದ್ದಾರೆ. ಇದರಿಂದ ಕೋಪಗೊಂಡ ಬೈಕ್ ಸವಾರ ತನ್ನ ಬೈಕಿಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಸದ್ಯ ಪೊಲೀಸರು ರಾಕೇಶ್‍ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ರಾಕೇಶ್ ಕುಡಿದಂತೆ ಕಾಣುತ್ತಿದ್ದನು. ಹಾಗಾಗಿ ಆತನಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದೇವೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬೆಂಗ್ಳೂರಿನಲ್ಲಿ ಒಂದೇ ದಿನಕ್ಕೆ ಟ್ರಾಫಿಕ್ ಪೊಲೀಸರಿಂದ ಬರೋಬ್ಬರಿ 30 ಲಕ್ಷ ದಂಡ ವಸೂಲಿ

    ಬೆಂಗ್ಳೂರಿನಲ್ಲಿ ಒಂದೇ ದಿನಕ್ಕೆ ಟ್ರಾಫಿಕ್ ಪೊಲೀಸರಿಂದ ಬರೋಬ್ಬರಿ 30 ಲಕ್ಷ ದಂಡ ವಸೂಲಿ

    ಬೆಂಗಳೂರು: ದೇಶಾದ್ಯಂತ ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು, ನಿಯಮ ಉಲ್ಲಂಘಿಸಿದ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ, ಭಾರೀ ಪ್ರಾಮಾಣದ ದಂಡ ಕಟ್ಟಿ ಸುತ್ತಾಗಿದ್ದಾರೆ.

    ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದವರೆಗೆ ಒಂದೇ ದಿನದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ 2,978 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳಿಂದ ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಭರ್ತಿ 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರ ಬಳಿ ಭಾರೀ ದಂಡ ಕಟ್ಟಿಸಿಕೊಂಡು ಪೊಲೀಸರು ವಾಹನ ಸವಾರರ ಬೆವರಿಳಿಸಿದ್ದಾರೆ.

    ಇದರ ನಡುವೆ, ದುಬಾರಿ ದಂಡ ತಪ್ಪಿಸಿಕೊಳ್ಳಲು ದೇಸೀ ಉಪಾಯಕ್ಕೆ ಪೊಲೀಸರೇ ಬೇಸ್ತು ಬಿದ್ದಿದ್ದಾರೆ. ಗುರುಗ್ರಾಮದಲ್ಲಿ ಬೈಕ್ ಸವಾರರು ಪೊಲೀಸರ ಪರಿಶೀಲನೆ ಕಂಡು ಬೈಕ್‍ಗಳನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ. ಈ ಕುರಿತ ಹಾಸ್ಯಾತ್ಮಕ ವಿಡಿಯೋವೊಂದನ್ನು ಗುರುಗ್ರಾಮದ ಐಪಿಎಸ್ ಅಧಿಕಾರಿ ಪಂಕಜ್ ನೈನ್ ಶೇರ್ ಮಾಡಿಕೊಂಡಿದ್ದಾರೆ.