ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳನ್ನು ಇತ್ಯರ್ಥಕ್ಕೆ 50% ರಿಯಾಯಿತಿಯಡಿ ದಂಡ ಪಾವತಿಸಲು ಸಾರಿಗೆ ಇಲಾಖೆ ನೀಡಿದ್ದ ಅವಕಾಶಕ್ಕೆ ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಆ.23 ರಿಂದ ಸೆ.12 ರ ವರೆಗೆ ಬಾಕಿ ದಂಡ ಕಟ್ಟಲು 50% ಆಫರ್ ನೀಡಲಾಗಿತ್ತು. ಆನ್ಲೈನ್ ಹಾಗೂ ಅಫ್ಲೈನ್ನಲ್ಲಿ ವಾಹನ ಸವಾರರು ಬಾಕಿ ದಂಡ ಪಾವತಿ ಮಾಡಿದ್ದಾರೆ. ಒಟ್ಟು 21 ದಿನಗಳಲ್ಲಿ 106 ಕೋಟಿ ರೂ. ದಂಡ ಸಂಗ್ರಹವಾಗಿದೆ.
ಸೆಪ್ಟೆಂಬರ್ 12 ರ ಕೊನೆಯ ಒಂದೇ ದಿನದಲ್ಲಿ 25 ಕೋಟಿ ದಂಡ ಸಂಗ್ರಹಣೆಯಾಗಿದೆ. 50% ರಿಯಾಯಿತಿಯಲ್ಲಿ ದಂಡ ಪಾವತಿಸಲು ನೀಡಿದ್ದ ಕಾಲಾವಕಾಶ ಶುಕ್ರವಾರಕ್ಕೆ ಮುಗಿದಿದೆ.
ಶಿವಮೊಗ್ಗ: ಅಪ್ರಾಪ್ತನೊಬ್ಬ ದ್ವಿಚಕ್ರ ವಾಹನ ಚಾಲನೆ ಮಾಡಿದ್ದಕ್ಕೆ ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.
ತೀರ್ಥಹಳ್ಳಿ ಟೌನ್ ದೊಡ್ಮನೆ ಕೇರಿ ಬಳಿಕ ಶಿವಮೊಗ್ಗ ಸಂಚಾರ ಪೊಲೀಸರು (Shivamogga Traffic Police) ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದಿದ್ದ 17 ವರ್ಷದ ಅಪ್ರಾಪ್ತನನ್ನು ತಡೆದು ಪರವಾನಗಿ ಪರಿಶೀಲಿಸಿದರು.
ಬೆಂಗಳೂರು: ವ್ಯಕ್ತಿಯೊಬ್ಬರು ಟ್ರಾಫಿಕ್ ನಿಯಮ (Traffic Rule) ಪಾಲಿಸದೆ ಬರೋಬ್ಬರಿ 643 ಬಾರಿ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆ ದಾಖಲೆಯ ಫೈನ್ (Fine) ಬಿದ್ದಿದೆ. ಬರೋಬ್ಬರಿ 3.22 ಲಕ್ಷ ರೂ. ಫೈನ್ ಬಿದ್ದಿರೋ ಸ್ಕೂಟಿ (Scooty) ಮೇಲೆ ಇದೀಗ ಟ್ರಾಫಿಕ್ ಪೊಲೀಸರು ಕ್ಯಾಮೆರಾ ಕಣ್ಣಿಟ್ಟಿದ್ದಾರೆ.
ಈ ಸ್ಕೂಟಿ ಬೆಲೆ 20-30 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಇದಕ್ಕೆ ಬಿದ್ದಿರುವ ದಂಡ ಬರೋಬ್ಬರಿ 3.22 ಲಕ್ಷ ರೂ. ಇದೀಗ ಪೊಲೀಸರ ಕಣ್ತಪ್ಪಿಸಿ ಓಡಾಡಬಹುದು ಎನ್ನುವವರಿಗೆ ಕ್ಯಾಮೆರಾ ಶಾಕ್ ನೀಡಿದೆ. ಇದೀಗ ದಾಖಲೆಯ ನಿಯಮ ಉಲ್ಲಂಘಿಸಿದ ವೆಹಿಕಲ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ವಸತಿ ಶಾಲೆ ಕರ್ಮಕಾಂಡ – ನಾಲ್ವರ ವಿರುದ್ಧ FIR, ಪ್ರಾಂಶುಪಾಲೆ ಸೇರಿ ಇಬ್ಬರು ಅರೆಸ್ಟ್
ಬೆಂಗಳೂರು: ಸಿಗ್ನಲ್ ಜಂಪ್, ಟ್ರಾಫಿಕ್ ನಿಯಮ ಉಲ್ಲಂಘಿಸುವುದರ ಜೊತೆಗೆ ಹೆಲ್ಮೆಟ್ (Helmet) ಧರಿಸದೇ ವಾಹನ ಓಡಿಸೋರೇ ಹೆಚ್ಚು.. ಅಂತಹವರಿಗೆ ಭಾರೀ ದಂಡದ ಬಿಸಿ ಮುಟ್ಟಿಸಲು ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಮುಂದಾಗಿದ್ದಾರೆ.
ಬೆಂಗಳೂರಿನ (Bengaluru) ಎಲ್ಲ ಜಂಕ್ಷನ್ಗಳಲ್ಲೂ ಐಟಿಎಂಎಸ್ ಆಧಾರಿತ ಡಿಜಿಟಲ್ ಕ್ಯಾಮೆರಾ (Digital Camera) ಫಿಕ್ಸ್ ಮಾಡಲಾಗಿದೆ. ಈ ಐಟಿಎಂಎಸ್ನಿಂದಲೇ ಕಳೆದ ಒಂದೂವರೆ ತಿಂಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಕೇಸ್ಗಳು ದಾಖಲಾಗಿವೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಗುಂಡಿನ ದಾಳಿ – 7 ಮಂದಿ ಸಾವು
ಏನಿದು ಇಂಟಲಿಜೆಂಟ್ ಸಿಸ್ಟಂ?
ಹೌದು, ಐಟಿಎಂಎಸ್ ಬೆಂಗಳೂರಲ್ಲಿ ಇತ್ತೀಚೆಗೆ ಜಾರಿಯಾದ ಸಿಸ್ಟಂ. ಐಟಿಎಂಎಸ್ ಅಂದ್ರೇ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ. ಡಿಜಿಟಲ್ ಕ್ಯಾಮರಾ ಮೂಲಕ ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ದಂಡ ಹಾಕೋ ವಿಧಾನ ಇದು. ಬೆಂಗಳೂರಿನ ಎಲ್ಲಾ ಜಂಕ್ಷನ್ ಗಳಲ್ಲೂ ಐಟಿಎಂಎಸ್ ವ್ಯವಸ್ಥೆ ಮಾಡಲಾಗುತ್ತಿದೆ.
ಒಬ್ಬ ರೈಡರ್ ಹೆಲ್ಮೆಟ್ ಹಾಕದೇ ಹತ್ತಾರು ಸಿಗ್ನಲ್ ದಾಟಿದ್ರೆ 10 ಸಾವಿರ ದಂಡ ಸಹ ಬೀಳಬಹುದು. ಐಟಿಎಂಎಸ್ ನಿಂದ ಕಳೆದ ಒಂದೂವರೆ ತಿಂಗಳಲ್ಲಿ ಕೇಸ್ ಸಂಖ್ಯೆ ಸಹ ದುಪ್ಪಟ್ಟಾಗಿದೆ. ಬರೋಬ್ಬರಿ 9 ಲಕ್ಷ ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸ್ ದಾಖಲಿಸಿದೆ.
Live Tv
[brid partner=56869869 player=32851 video=960834 autoplay=true]