Tag: ಟ್ರಾಫಿಕ್ ನಿಯಮ

  • KSRTC ಬಸ್‌ಗಳಿಂದ ಟ್ರಾಫಿಕ್‌ ನಿಯಮ ಉಲ್ಲಂಘನೆ; 2.69 ಲಕ್ಷ ಕೇಸ್‌, 13 ಕೋಟಿ ದಂಡ – ಫೈನ್‌ ಮನ್ನಾಗೆ ಸಾರಿಗೆ ಸಚಿವರ ಪತ್ರ

    KSRTC ಬಸ್‌ಗಳಿಂದ ಟ್ರಾಫಿಕ್‌ ನಿಯಮ ಉಲ್ಲಂಘನೆ; 2.69 ಲಕ್ಷ ಕೇಸ್‌, 13 ಕೋಟಿ ದಂಡ – ಫೈನ್‌ ಮನ್ನಾಗೆ ಸಾರಿಗೆ ಸಚಿವರ ಪತ್ರ

    ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳ (KSRTC Bus) ಮೇಲಿನ ಟ್ರಾಫಿಕ್‌ ಫೈನ್‌ ಮನ್ನಾ ಮಾಡುವಂತೆ ಗೃಹ ಸಚಿವರಿಗೆ ಸಾರಿಗೆ ಸಚಿವರು ಪತ್ರ ಬರೆದಿದ್ದಾರೆ.

    ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ 13 ಕೋಟಿಗೂ ಹೆಚ್ಚು ದಂಡ ವಿಧಿಸಲಾಗಿದೆ. ಬಸ್‌ಗಳ ಮೇಲೆ ಒಟ್ಟು 2,69,198 ಪ್ರಕರಣಗಳಿವೆ. ಶೇ.50 ರಿಯಾಯಿತಿ ದರದಲ್ಲಿ ಕೆಎಸ್‌ಆರ್‌ಟಿಸಿ ಫೈನ್ 6,64,96,400 ರೂ. ಆಗುತ್ತದೆ. ಆದರೆ, ಈ ದಂಡವನ್ನು ಮನ್ನಾ ಮಾಡುವಂತೆ ಗೃಹ ಸಚಿವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದು ಮನವಿ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ರಾಜ್ಯದಲ್ಲಿ ಒಟ್ಟು 24,000 ಬಸ್‌ಗಳಿವೆ. ಕೆಲ ವೇಳೆ ಸಿಸಿಟಿವಿಯಲ್ಲಿ ತಪ್ಪಾಗಿ ರೆಕಾರ್ಡ್ ಆಗಿದೆ. ಒಟ್ಟು ಪ್ರಕರಣಗಳನ್ನು ಪರಿಶೀಲಿಸಿದಾಗ, 1,95,009 ಪ್ರಕರಣಗಳು Lane Discipline Violationಗೆ ಸಂಬಂಧಿಸಿದ್ದು. ವಾಹನಗಳು ಲೇನ್‌ನಲ್ಲಿ ಚಲಿಸುವಾಗ ಲೇನ್‌ ಪಟ್ಟಿಗಳನ್ನು ಸ್ವಲ್ಪ ತಾಗಿದರೂ ಸಹ ಸದರಿ ಸ್ಥಳದಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ಲೇನ್‌ ಉಲ್ಲಂಘನೆ ಎಂದು ದಂಡ ವಿಧಿಸಲಾಗುತ್ತಿದೆ.

    58,499 ಪ್ರಕರಣಗಳು ಸೀಟ್‌ ಬೆಲ್ಟ್‌ ಧರಿಸದೇ ಇರುವ ಬಗ್ಗೆ ದಾಖಲಾಗಿದೆ. ಸೀಲ್ಟ್‌ ಬೆಲ್ಟ್‌ ಹಾಕಿದ್ದರೂ ಪ್ರಕರಣಗಳು ದಾಖಲಾಗುತ್ತಿವೆ. ನಿಯಮದಂತೆ ಒಂದು ಅಪರಾಧಕ್ಕೆ ಸಂಬಂಧಪಟ್ಟಂತೆ 24 ಗಂಟೆಯ ಅವಧಿಯಲ್ಲಿ ಒಂದು ಬಾರಿ ದಂಡ ವಿಧಿಸಿ ರಶೀದಿ ಪಡೆದಿದ್ದಲ್ಲಿ ಬೇರೊಂದು ಕಡೆ ಸದರಿ ರಸೀದಿ ತೋರಿದಲ್ಲಿ ಪುನಃ ವಿಧಿಸಿರುವ ದಂಡದಿಂದ ವಿನಾಯಿತಿ ಇರುತ್ತಿತ್ತು. ಆದರೆ, ಪ್ರಸ್ತುತ ಹೈವೇಯಲ್ಲಿ ಜಿಲ್ಲಾವಾರು ಪ್ರಕರಣಗಳು ದಾಖಲಾಗುತ್ತಿವೆ. ಉದಾಹರಣೆಗೆ, ಒಂದೇ ದಿನದಲ್ಲಿ ರಾಮನಗರ, ಮಂಡ್ಯ, ಮೈಸೂರು ಜಿಲ್ಲಾವಾರು ಒಂದೇ ವಾಹನಕ್ಕೆ ಒಂದೇ ತರಹದ ಉಲ್ಲಂಘನೆಗೆ ದಂಡಗಳನ್ನು ಹಾಕಲಾಗಿದೆ. ಒಟ್ಟು 2,69,198 ಪ್ರಕರಣಗಳ ಪೈಕಿ 2,53,508 ಪ್ರಕರಣಗಳು ಮೇಲಿನ ಎರಡು ವಿಧವಾದ ಪ್ರಕರಣಗಳಿಂದ ಕೂಡಿರುತ್ತದೆ.

    ಪ್ರಮುಖ ವಿಚಾರಗಳನ್ನು ಗೃಹ ಸಚಿವರ ಗಮನಕ್ಕೆ ತಂದು ದಂಡವನ್ನು ಮನ್ನಾ ಮಾಡುವಂತೆ ಸಾರಿಗೆ ಸಚಿವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

  • ಟ್ರಾಫಿಕ್ ರೂಲ್ಸ್ ಪಾಲನೆ ಮಾಡದವರ ಲೈಸೆನ್ಸ್ ರದ್ದು ಮಾಡಿ: ಸಿಎಂ ಸಿದ್ದರಾಮಯ್ಯ

    ಟ್ರಾಫಿಕ್ ರೂಲ್ಸ್ ಪಾಲನೆ ಮಾಡದವರ ಲೈಸೆನ್ಸ್ ರದ್ದು ಮಾಡಿ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಸಂಚಾರ ನಿಯಮ ಪಾಲನೆ ಮಾಡದವರ ಲೈಸೆನ್ಸ್ ರದ್ದು ಮಾಡುವ ನಿಯಮ ರಾಜ್ಯದಲ್ಲೂ ಜಾರಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸಾರಿಗೆ ಇಲಾಖೆಗೆ ಸೂಚನೆ ನೀಡಿದರು.

    ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ ಯೋಜನೆಯಡಿ ನೂತನ 65 ಅಂಬುಲೆನ್ಸ್ ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ, ನಿಯಮ ಪಾಲನೆ ಮಾಡುವಂತೆ ಜನರಿಗೆ ಕರೆ ಕೊಟ್ಟರು. ಹೊಸ 65 ಅಂಬುಲೆನ್ಸ್‌ ಸೇರ್ಪಡೆ ಆಗುತ್ತಿವೆ.‌ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಈ ಅಂಬುಲೆನ್ಸ್ ಕೊಡ್ತಿದ್ದೇವೆ‌.108 ಅಂಬುಲೆನ್ಸ್‌ ಕೆಲಸ ಮಾಡ್ತಿವೆ. ಇದರ ಜೊತೆಗೆ 65 ಅಂಬುಲೆನ್ಸ್‌ ಬರ್ತಿವೆ. 39 ಬೇಸಿಕ್ ಲೈಫ್ ಸಪೋರ್ಟ್, 26 ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಅಂಬುಲೆನ್ಸ್‌ಗಳಾಗಿವೆ. ಅಡ್ವಾನ್ಸ್ಡ್ ಅಂಬುಲೆನ್ಸ್‌ನಲ್ಲಿ ವೆಂಟಿಲೇಟರ್ ಇರುತ್ತದೆ. ಅಪಘಾತಕ್ಕೆ ಈಡಾದವರಿಗೆ ಜೀವ ಉಳಿಸೋ ಕೆಲಸ ಮಾಡ್ತಾವೆ ಎಂದು ತಿಳಿಸಿದರು. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೂ ರಾಜ್ಯಪಾಲರು ರಿಪೋರ್ಟ್ ಕೇಳೋದು ಸರಿಯಲ್ಲ: ಸಿದ್ದರಾಮಯ್ಯ

    ಪ್ರತಿ ವರ್ಷ 40 ಸಾವಿರ ಅಪಘಾತ ಆಗುತ್ತದೆ. ಇದರಲ್ಲಿ 10 ಸಾವಿರ ಜ‌ನ ಪ್ರಾಣ ಕಳೆದುಕೊಳ್ಳುತ್ತಾರೆ‌. ಜಾಸ್ತಿ ಯುವಕರಿಗೆ, ಶಾಲಾ ಮಕ್ಕಳಿಗೆ ಅಪಘಾತ ಆಗ್ತಿದೆ. ಇದರಿಂದ ಅವರಿಂದ ಸಮಾಜಕ್ಕೆ ಆಗೋ ಒಳ್ಳೆ ಕೆಲಸ ಕಳೆದುಕೊಳ್ಳುತ್ತೇವೆ. ಹೀಗಾಗಿ ಸಾವು ತಡೆಯಲು ರಸ್ತೆ ಸುರಕ್ಷತಾ ಪ್ರಾಧಿಕಾರದ ನಿಧಿಯಿಂದ ವರ್ಷಕ್ಕೆ 45 ಕೋಟಿ ಹಣ ಆರೋಗ್ಯ ಇಲಾಖೆಗೆ ಕೊಡ್ತಾರೆ. ಇದರಲ್ಲಿ ಅಂಬುಲೆನ್ಸ್‌ ಖರೀದಿ ಮಾಡಿದ್ದಾರೆ. ಮುಂದಿನ ವರ್ಷದಿಂದ ಮತ್ತಷ್ಟು ಹಣ ಅಂಬುಲೆನ್ಸ್‌ಗೆ ಕೊಡ್ತೀವಿ ಎಂದರು.

    ಅಪಘಾತದಿಂದ ಇಡೀ ಜೀವಮಾನ ನರಳಬೇಕಾಗುತ್ತವೆ. ಆಕ್ಸಿಡೆಂಟ್ ಆದ ಒಂದು ಗಂಟೆ ಬಹಳ ಮುಖ್ಯ. ಒಂದು ಗಂಟೆ ಒಳಗೆ ಚಿಕಿತ್ಸೆ ಸಿಕ್ಕರೆ ಪ್ರಾಣ ಉಳಿಸಬಹುದು. ಗೋಲ್ಡನ್ ಹವರ್ ತುಂಬಾ ಮುಖ್ಯ. ಈ ಸಮಯದಲ್ಲಿ ಜೀವ ಉಳಿಸಬಹುದು ಎಂದು ಸಿಎಂ ತಿಳಿಸಿದರು. ಅಪಘಾತ ಕಡಿಮೆ ಆಗಲು ಕಾರ್, ಸ್ಕೂಟರ್, ವಾಹನಗಳು ಓಡಿಸೋರು ನಿಯಮ ಪಾಲನೆ ಮಾಡಬೇಕು. ಬಳಹ ಜನ ಕುಡಿದು ಓಡಿಸ್ತಾರೆ. ಕುಡಿದು ಗಾಡಿ ಓಡಿಸೋದು ಅಪಾಯ ಅಂತಾ ಬೋರ್ಡ್ ಇದ್ದರೂ, ಅದನ್ನು ನೋಡಿಕೊಂಡೇ ಕುಡೀತಾರೆ. ಮೂತ್ರ ವಿಸರ್ಜನೆ ಮಾಡಬಾರದು ಅಂತಾ ಬೋರ್ಡ್ ಹಾಕಿದ್ರೂ, ಅಲ್ಲೆ ಮೂತ್ರ ವಿಸರ್ಜನೆ ಮಾಡ್ತಾರೆ. ಇದು ನಮ್ಮ ಜನ. ನಮ್ಮ ಜನ ಚಾಪೆ ಕೆಳಗೆ ನುಗ್ಗದೇ ರಂಗೋಲೆ ಕೆಳಗೆ ನುಗ್ಗುತ್ತಾರೆ. ಇನ್ಮುಂದೆ ಎಲ್ಲರೂ ನಿಯಮಗಳನ್ನು ಪಾಲನೆ ಮಾಡಿ ಎಂದು ಕರೆಕೊಟ್ಟರು. ಇದನ್ನೂ ಓದಿ: ಅಪಘಾತಕ್ಕೀಡಾದವರ ರಕ್ಷಣೆಗೆ “ಆಪತ್ಕಾಲಯಾನ”: 65 ನೂತನ ಅಂಬುಲೆನ್ಸ್ ಚಾಲನೆ ನೀಡಿದ ಸಿಎಂ

    ವಿದೇಶಗಳಲ್ಲಿ ನಿಯಮ ಪಾಲನೆ ಮಾಡದೇ ಹೋದ್ರೆ ಲೈಸೆನ್ಸ್ ರದ್ದು ಮಾಡ್ತಾರೆ. ನಮ್ಮಲ್ಲೂ ಲೈಸೆನ್ಸ್ ರದ್ದು ಮಾಡೋ ನಿಯಮ ‌ಮಾಡಬೇಕು ಎಂದು ವೇದಿಕೆ ಮೇಲಿದ್ದ ಸಾರಿಗೆ ಸಚಿವರಿಗೆ ಸಿಎಂ ಸೂಚನೆ ನೀಡಿದರು. ಇನ್ಮುಂದೆ ನಿಯಮ ಪಾಲನೇ ಮಾಡದೇ ಹೋದ್ರೆ ನೋಟಿಸ್ ಕೊಡಬೇಡಿ‌, ಲೈಸೆನ್ಸ್ ಕ್ಯಾನ್ಸಲ್ ಮಾಡಿ. ಬೇಕಾದರೆ ಅವರು ಕೋರ್ಟ್‌ಗೆ ಹೋಗಲಿ. ಕುಡಿದು ವಾಹನ ಓಡಿಸೋದು, ವೇಗವಾಗಿ ಓಡಿಸೋರು ಸೇರಿ ನಿಯಮ ಪಾಲನೆ ಮಾಡದೇ ಹೋದರೆ ಲೈಸೆನ್ಸ್ ರದ್ದು ಮಾಡಿ ಎಂದು ಸಾರಿಗೆ ಇಲಾಖೆಗೆ ಸೂಚನೆ ಕೊಟ್ಟರು. ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, MLC ನಾಗರಾಜ್ ಯಾದವ್ ಸೇರಿ ಹಲವರು ಭಾಗಿಯಾಗಿದ್ದರು.

  • ವಾಹನ ಸವಾರರಿಗೆ ತೆಲಂಗಾಣ ಸರ್ಕಾರ ಬಂಪರ್‌ ಆಫರ್‌; ದಂಡ ಪಾವತಿಗೆ ಶೇ.60-90 ಡಿಸ್ಕೌಂಟ್‌

    ವಾಹನ ಸವಾರರಿಗೆ ತೆಲಂಗಾಣ ಸರ್ಕಾರ ಬಂಪರ್‌ ಆಫರ್‌; ದಂಡ ಪಾವತಿಗೆ ಶೇ.60-90 ಡಿಸ್ಕೌಂಟ್‌

    ಹೈದರಾಬಾದ್: ತೆಲಂಗಾಣ (Telangana) ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತೆ ಕಾಂಗ್ರೆಸ್‌ ಸರ್ಕಾರ ರಾಜ್ಯದ ವಾಹನ ಸವಾರರಿಗೆ ಬಂಪರ್‌ ಆಫರ್‌ ಪ್ರಕಟಿಸಿದೆ. ರಾಜ್ಯ ಸರ್ಕಾರವು ಟ್ರಾಫಿಕ್‌ (Traffic) ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ಪಾವತಿಯಲ್ಲಿ 60-90 % ರಷ್ಟು ರಿಯಾಯಿತಿ ಘೋಷಿಸಿದೆ.

    ಒನ್-ಟೈಮ್ ಪಾವತಿ ಯೋಜನೆಯು ಡಿಸೆಂಬರ್ 26 ರಿಂದ ಜನವರಿ 10 ರವರೆಗೆ ಜಾರಿಯಲ್ಲಿರಲಿದೆ. ಸರ್ಕಾರದ ಆದೇಶದಂತೆ ತಳ್ಳುವ ಗಾಡಿಗಳ ಮಾಲೀಕರಿಗೆ 90% ರಷ್ಟು ರಿಯಾಯಿತಿ ನೀಡಲಾಗುವುದು. ಅವರು ಚಲನ್ ಮೊತ್ತದ ಕೇವಲ 10 % ಮಾತ್ರ ಪಾವತಿಸಬೇಕಾಗುತ್ತದೆ. ಉಳಿದ 90 % ಮನ್ನಾ ಮಾಡಲಾಗುತ್ತದೆ. ಆರ್‌ಟಿಸಿ ಚಾಲಕರಿಗೂ ಅದೇ ರಿಯಾಯಿತಿ ನೀಡಲಾಗುತ್ತದೆ. ಇದನ್ನೂ ಓದಿ: 39 ದಿನಗಳಲ್ಲಿ ಶಬರಿಮಲೆಗೆ 204 ಕೋಟಿ ರೂ. ಆದಾಯ- ಕಳೆದ ವರ್ಷ ಎಷ್ಟಿತ್ತು?

    ಸರ್ಕಾರವು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ದಂಡದ ಮೊತ್ತದಲ್ಲಿ 80 % ಮನ್ನಾ ಮಾಡಿದೆ. ಕಾರುಗಳು ಮತ್ತು ಇತರ ಲಘು ಮೋಟಾರು ವಾಹನಗಳು, ಟ್ರಕ್‌ಗಳು ಮತ್ತು ಇತರ ಭಾರೀ ವಾಹನಗಳಿಗೆ 60 % ರಿಯಾಯಿತಿ ಇದೆ.

    ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ರಿಯಾಯಿತಿ ನೀಡುವ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಲಾಗಿತ್ತು. ವಾಹನ ಮಾಲೀಕರ ಅನುಕೂಲಕ್ಕಾಗಿ ಸರ್ಕಾರ ಇದನ್ನು ಜಾರಿಗೆ ತಂದಿದೆ. ಮೊತ್ತವನ್ನು ಪಾವತಿಸಲು, ವಾಹನ ಮಾಲೀಕರು ತೆಲಂಗಾಣ ಟ್ರಾಫಿಕ್ ಇ-ಚಲನ್ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ವಾಹನಗಳ ವಿರುದ್ಧ ಬಾಕಿ ಉಳಿದಿರುವ ಚಲನ್‌ಗಳನ್ನು ಪರಿಶೀಲಿಸಿ ಮತ್ತು ರಿಯಾಯಿತಿ ಮೊತ್ತವನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಸರ್ಕಾರಿ ಆದೇಶವು ತಿಳಿಸಿದೆ. ಇದನ್ನೂ ಓದಿ: ಜ.14 ರಿಂದ ‘ಭಾರತ ನ್ಯಾಯ ಯಾತ್ರಾ’ – ಮಣಿಪುರದಿಂದ ಮುಂಬೈಗೆ ರಾಹುಲ್‌ ಗಾಂಧಿ ಪಡೆ ಯಾತ್ರೆ

    ರಾಜ್ಯಾದ್ಯಂತ ಸುಮಾರು ಎರಡು ಕೋಟಿ ಟ್ರಾಫಿಕ್ ಚಲನ್‌ಗಳು ಬಾಕಿ ಉಳಿದಿವೆ ಎಂದು ವರದಿಗಳು ಹೇಳುತ್ತಿವೆ. 2022 ರಲ್ಲಿ ದೇಶಾದ್ಯಂತ ಸಂಚಾರ ಉಲ್ಲಂಘನೆಗಾಗಿ 7,563.60 ಕೋಟಿ ರೂ. ಮೌಲ್ಯದ 4.73 ಕೋಟಿ ಚಲನ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರವು ಸಂಸತ್ತಿಗೆ ತಿಳಿಸಿತ್ತು.

    ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 2021 ರಲ್ಲಿ ದೇಶಾದ್ಯಂತ ಸಂಚಾರ ಉಲ್ಲಂಘನೆಗಾಗಿ 5,318.70 ಕೋಟಿ ರೂ. ಮೌಲ್ಯದ 4.21 ಕೋಟಿ ಚಲನ್‌ಗಳನ್ನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಗ್ನಿಪಥ್‌ ಯೋಜನೆ ವಿರುದ್ಧ ರಾಹುಲ್‌ ಗಾಂಧಿ ಕಟು ಟೀಕೆ

    ಸಚಿವರು ನೀಡಿರುವ ಅಂಕಿಅಂಶಗಳ ಪ್ರಕಾರ, ಕರ್ನಾಟಕ (87,48,963) ಗರಿಷ್ಠ ಸಂಖ್ಯೆಯ ನೋಂದಾಯಿತ ವಾಹನಗಳನ್ನು ಹೊಂದಿದೆ. ನಂತರ ಸ್ಥಾನದಲ್ಲಿ ಉತ್ತರ ಪ್ರದೇಶ (74,91,584) ಮತ್ತು ದೆಹಲಿ (57,85,609) ರಾಜ್ಯಗಳಿವೆ.

  • 643 ಬಾರಿ ನಿಯಮ ಉಲ್ಲಂಘಿಸಿ ದಾಖಲೆ ಫೈನ್ – ಟ್ರಾಫಿಕ್ ನಿಯಮ ಪಾಲಿಸದ ಸ್ಕೂಟಿ ಮೇಲೆ ಕ್ಯಾಮೆರಾ ಕಣ್ಣು

    643 ಬಾರಿ ನಿಯಮ ಉಲ್ಲಂಘಿಸಿ ದಾಖಲೆ ಫೈನ್ – ಟ್ರಾಫಿಕ್ ನಿಯಮ ಪಾಲಿಸದ ಸ್ಕೂಟಿ ಮೇಲೆ ಕ್ಯಾಮೆರಾ ಕಣ್ಣು

    ಬೆಂಗಳೂರು: ವ್ಯಕ್ತಿಯೊಬ್ಬರು ಟ್ರಾಫಿಕ್ ನಿಯಮ (Traffic Rule) ಪಾಲಿಸದೆ ಬರೋಬ್ಬರಿ 643 ಬಾರಿ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆ ದಾಖಲೆಯ ಫೈನ್ (Fine) ಬಿದ್ದಿದೆ. ಬರೋಬ್ಬರಿ 3.22 ಲಕ್ಷ ರೂ. ಫೈನ್ ಬಿದ್ದಿರೋ ಸ್ಕೂಟಿ (Scooty) ಮೇಲೆ ಇದೀಗ ಟ್ರಾಫಿಕ್ ಪೊಲೀಸರು ಕ್ಯಾಮೆರಾ ಕಣ್ಣಿಟ್ಟಿದ್ದಾರೆ.

    ಮಾಲಾ ಎಂಬುವವರಿಗೆ ಸೇರಿದ ಸ್ಕೂಟಿ ಗಂಗಾನಗರ, ಆರ್‌ಟಿ ನಗರ ಭಾಗದಲ್ಲಿ ಓಡಾಡಿದೆ. ಈ ಸ್ಕೂಟಿಯಲ್ಲಿ ಪ್ರಯಾಣಿಸಿದವರು ಹೆಲ್ಮೆಟ್ ಧರಿಸದೆ, ಸಿಗ್ನಲ್ ಜಂಪ್ ಸೇರಿದಂತೆ ಬರೋಬ್ಬರಿ 643 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದನ್ನೂ ಓದಿ: ಹೆಚ್ಚಾಗ್ತಿದೆ ಕೋವಿಡ್ ಉಪತಳಿ JN.1 ಭೀತಿ – ಕ್ರಿಸ್‌ಮಸ್, ಹೊಸವರ್ಷ ಸಂಭ್ರಮಕ್ಕೆ ಬೀಳುತ್ತಾ ಬ್ರೇಕ್?

    ಈ ಸ್ಕೂಟಿ ಬೆಲೆ 20-30 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಇದಕ್ಕೆ ಬಿದ್ದಿರುವ ದಂಡ ಬರೋಬ್ಬರಿ 3.22 ಲಕ್ಷ ರೂ. ಇದೀಗ ಪೊಲೀಸರ ಕಣ್ತಪ್ಪಿಸಿ ಓಡಾಡಬಹುದು ಎನ್ನುವವರಿಗೆ ಕ್ಯಾಮೆರಾ ಶಾಕ್ ನೀಡಿದೆ. ಇದೀಗ ದಾಖಲೆಯ ನಿಯಮ ಉಲ್ಲಂಘಿಸಿದ ವೆಹಿಕಲ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ವಸತಿ ಶಾಲೆ ಕರ್ಮಕಾಂಡ – ನಾಲ್ವರ ವಿರುದ್ಧ FIR, ಪ್ರಾಂಶುಪಾಲೆ ಸೇರಿ ಇಬ್ಬರು ಅರೆಸ್ಟ್

  • ಫ್ರಾನ್ಸ್‌ ಧಗ ಧಗ – ಭದ್ರತೆಗೆ 45 ಸಾವಿರ ಪೊಲೀಸರ ನಿಯೋಜನೆ, 994 ಮಂದಿ ಅರೆಸ್ಟ್‌

    ಫ್ರಾನ್ಸ್‌ ಧಗ ಧಗ – ಭದ್ರತೆಗೆ 45 ಸಾವಿರ ಪೊಲೀಸರ ನಿಯೋಜನೆ, 994 ಮಂದಿ ಅರೆಸ್ಟ್‌

    ಪ್ಯಾರಿಸ್‌: 17 ವರ್ಷದ ಹುಡುಗನನ್ನು ಗುಂಡಿಟ್ಟು ಹತ್ಯೆ ಮಾಡಿದ ನಂತರ ಫ್ರಾನ್ಸ್‌ನಲ್ಲಿ (France) ಜನಾಕ್ರೋಶ ಭುಗಿಲೆದ್ದಿದೆ. ಟ್ರಾಫಿಕ್‌ ತಪಾಸಣೆ ವೇಳೆ ಹುಡುಗನ ಮೇಲೆ ಪೊಲೀಸರು ಗುಂಡು ಹಾರಿಸಿ ಹತ್ಯೆಗೈದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮಂಗಳವಾರ ರಾತ್ರಿಯಿಂದಲೇ ಪ್ರತಿಭಟನೆ (France Protest) ಭುಗಿಲೆದ್ದಿದೆ.

    ಫ್ರಾನ್ಸ್‌ನ ಪ್ರತಿಭಟನೆ ಶನಿವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಬೀದಿ ಬೀದಿಗಳಲ್ಲಿ ಪೊಲೀಸ್‌ (France Police) ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿ, ಸಿಕ್ಕ ಸಿಕ್ಕ ವಾಹನಗಳಿಗೆ ಹಾಗೂ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 3 ಟ್ರಿಲಿಯನ್‌ ಡಾಲರ್‌ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದ ಆಪಲ್‌

    ಪ್ರತಿಭಟನಾಕಾರರ ಆಕ್ರೋಶಕ್ಕೆ 2,000ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ. 500 ಕಟ್ಟಡಗಳು ಧ್ವಂಸಗೊಂಡಿವೆ. ಹಾಗಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಸುಮಾರು 45 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಈವರೆಗೆ ಸುಮಾರು 994 ಮಂದಿಯನ್ನು ಬಂಧಿಸಲಾಗಿದೆ. ಪ್ಯಾರಿಸ್‌ ಸಹಿತ ಹಲವು ನಗರಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದ್ದರೂ ಗಲಭೆಗಳು ನಿಯಂತ್ರಣಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ 17ರ ಹುಡುಗರನ್ನು ಹತ್ಯೆ ಮಾಡಿದ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನೂ ಬಂಧಿಸಲಾಗಿದ್ದು, ಅವರ ವಿರುದ್ಧ ತನಿಖೆಗೆ ಸರ್ಕಾರ ಆದೇಶಿಸಿದೆ.

    ಫ್ರಾನ್ಸ್‌ನ ಪಶ್ಚಿಮ ಪ್ಯಾರಿಸ್‌ನ ನಾಂಟೇರ್‌ನಲ್ಲಿ ಟ್ರಾಫಿಕ್‌ ತಪಾಸಣೆ ವೇಳೆ ಪೊಲೀಸರು 17 ವರ್ಷದ ನಹೆಲ್ ಎಂಬ ಹುಡುಗನನ್ನ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿರುವುದರಿಂದ ಶೀಘ್ರವೇ ಶಮನಗೊಳಿಸಲು ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಅಲ್ಲದೇ ಪರಿಸ್ಥಿತಿ ಇನ್ನಷ್ಟು ಭುಗಿಲೇಳುವ ಸಾಧ್ಯತೆಗಳಿರುವುದರಿಂದ ಸರ್ಕಾರ 45 ಸಾವಿರ ಪೊಲೀಸರನ್ನ ನಿಯೋಜನೆ ಮಾಡಿದೆ. ಮತ್ತೆ ರಾಷ್ಟ್ರದಲ್ಲಿ ಶಾಂತಿ ನೆಲೆಸಲು ಅಧ್ಯಕ್ಷ ಇಮಾನ್ಯುಯಲ್‌ ಮ್ಯಾಕ್ರನ್‌ (Emmanuel Macron) ಹರಸಾಹಸ ನಡೆಸುತ್ತಿದ್ದಾರೆ. ಈ ನಡುವೆ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಖ್ಯಾತ ಪಾಕಿಸ್ತಾನಿ ಸ್ನೂಕರ್ ಆಟಗಾರ ಮರ ಕಡಿಯುವ ಯಂತ್ರ ಬಳಸಿ ಆತ್ಮಹತ್ಯೆ

    ಏಕೆ ಇಷ್ಟು ಆಕ್ರೋಶ?
    ಅಲ್ಜೇರಿಯನ್‌ ಮೂಲದ 17 ವರ್ಷದ ಹುಡುಗ ನಹೆಲ್‌ ಎಂಬಾತ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಪೊಲೀಸರು ಹತ್ಯೆ ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ ಆತ ಕಾರ್ ಚಲಾಯಿಸುವ ವೇಳೆ ನಿಯಮ ಉಲ್ಲಂಘಿಸಿದ್ದಾಗ ಕಾರ್‌ನಿಂದ ಹೊರಕ್ಕೆ ಇಳಿಸಲು ಪ್ರಯತ್ನಿಸಿದ್ದರು. ಫ್ರಾನ್ಸ್‌ನಲ್ಲಿ ವಾಹನ ಚಲಾಯಿಸಲು ಪರವಾನಗಿ ಹೊಂದುವಷ್ಟು ಆತನಿಗೆ ವಯಸ್ಸಾಗಿರಲಿಲ್ಲ. ಸಂಚಾರ ದೀಪದ ಅಡಿ ಮರ್ಸಿಡಿಸ್ ಕಾರು ನಿಲ್ಲಿಸಬೇಕಿತ್ತು. ಕಾರು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಬಂದೂಕು ತೋರಿಸಿದರೂ ಚಾಲಕ ಕಾರು ನಿಲ್ಲಿಸಿ ಇಳಿಯಲಿಲ್ಲ. ಇದರಿಂದ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡು ಚಾಲಕನ ಕೈ ಹಾಗೂ ಎದೆಗೆ ಹೊಕ್ಕಿದೆ. ಆತನಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಅದು ಸಫಲವಾಗಿರಲಿಲ್ಲ.

    ಫ್ರಾನ್ಸ್‌ನಲ್ಲಿ 2017ರಲ್ಲಿ ಇಲ್ಲಿನ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತಂದು 5 ಗಂಭೀರ ಬಗೆಯ ಟ್ರಾಫಿಕ್‌ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಪೊಲೀಸರು ವಾಹನ ಸವಾರರ ಮೇಲೆ ಗುಂಡು ಹಾರಿಸುವ ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಜನರ ವಿರೋಧವಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 50% ಆಫರ್ ಪಡೆದು 33 ಲಕ್ಷ ದಂಡ ಪಾವತಿಸಿದ BMTC

    50% ಆಫರ್ ಪಡೆದು 33 ಲಕ್ಷ ದಂಡ ಪಾವತಿಸಿದ BMTC

    ಬೆಂಗಳೂರು: ನಗರದಲ್ಲಿ 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಬಿಎಂಟಿಸಿ (BMTC) ಚಾಲಕರು ನಿಗಮಕ್ಕೆ ಬರೋಬ್ಬರಿ 1 ಕೋಟಿ ರೂ. ನಷ್ಟವುಂಟು ಮಾಡಿದ್ದಾರೆ.

    ನಗರದಲ್ಲಿ ಬಿಎಂಟಿಸಿ ಬಸ್ ಚಾಲಕರ ರ‍್ಯಾಷ್ ಡ್ರೈವಿಂಗ್‌ಗೆ ಹಲವು ಜೀವಗಳು ಬಲಿಯಾಗಿವೆ. ರ‍್ಯಾಷ್ ಡ್ರೈವಿಂಗ್‌ ಜೊತೆ ಟ್ರಾಫಿಕ್ ರೂಲ್ಸ್ (Traffic Rules) ಸಹ ಬ್ರೇಕ್ ಮಾಡಿ ನಿಗಮಕ್ಕೆ ಬರೋಬ್ಬರಿ 1 ಕೋಟಿ ನಷ್ಟವುಂಟುಮಾಡಿದ್ದಾರೆ. ಇದನ್ನೂ ಓದಿ: ನಮ್ಮ ಕಲ್ಲಿದ್ದಲಿನಿಂದ ಭಾರತದ ಲಕ್ಷಾಂತರ ಮಂದಿಗೆ ವಿದ್ಯುತ್‌: ಅದಾನಿ ಪರ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಬ್ಯಾಟಿಂಗ್‌

    12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಕೇಸ್‌ಗಳು ಸೇರಿ ಒಟ್ಟು ದಂಡದ ಮೊತ್ತ 1 ಕೋಟಿ ರೂ.ಗೆ ತಲುಪಿದೆ. ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ ಪಕ್ಕಾ ಕೇಸ್ ಗಳಲ್ಲಿ 66 ಲಕ್ಷ ರೂ. ದಂಡದಲ್ಲಿ, ಟ್ರಾಫಿಕ್ ಪೊಲೀಸರ (Traffic Police) ಶೇ.50 ಆಫರ್ ಮೂಲಕ 33 ಲಕ್ಷ ರೂ. ದಂಡವನ್ನು ಬಿಎಂಟಿಸಿ ಆಡಳಿತ ಮಂಡಳಿ ಪಾವತಿ ಮಾಡಿದೆ.

    ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಚಾಲಕರಿಗೆ, ಅವರ ವೇತನದಲ್ಲೇ ದಂಡದ ಮೊತ್ತ ಪಾವತಿಸಲಾಗುತ್ತಿತ್ತು. ಹಾಗಿದ್ದರೂ ಟ್ರಾಫಿಕ್ ರೂಲ್ಸ್ ಬಗ್ಗೆ ಚಾಲಕರಿಗೆ ಅರಿವು ಬರುತ್ತಿಲ್ಲ. ಹೀಗಾಗಿ ಎಲ್ಲಾ ಬಸ್ ಚಾಲಕರಿಗೂ ಟ್ರಾಫಿಕ್ ರೂಲ್ಸ್, ಸೆಫ್ಟಿ ಡ್ರೈವಿಂಗ್‌ ಕೌಶಲಗಳ ಬಗ್ಗೆ ತರಬೇತಿ ನೀಡಲು ಬಿಎಂಟಿಸಿ ತೀರ್ಮಾನಿಸಿದೆ.

    ಈ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿದ್ದು, ಎಲ್ಲಾ ಡಿಪೋ ವ್ಯವಸ್ಥಾಪಕರ ಜೊತೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಸಭೆ ನಡೆಸಲಾಗಿದೆ. ನಗರದಲ್ಲಿ ಸುರಕ್ಷಿತ ಪ್ರಯಾಣದ ಜೊತೆಗೆ ದಂಡಮುಕ್ತ ಸಂಚಾರ ನಡೆಸಬೇಕೆಂದು ತಾಕೀತು ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೊಬೈಲ್ ಬ್ಲಾಸ್ಟ್ – ಪ್ರಾಣಾಪಾಯದಿಂದ ಯುವಕ ಪಾರು

  • ಹೆಲ್ಮೆಟ್‌ ಇಲ್ಲದೇ ತ್ರಿಬಲ್‌ ರೈಡಿಂಗ್‌ ಬಂದ ಮಹಿಳಾ ಪೊಲೀಸರು – ಹಿಗ್ಗಾಮುಗ್ಗ ಕ್ಲಾಸ್‌ ತೆಗೆದುಕೊಂಡ ಮಹಿಳೆ

    ಹೆಲ್ಮೆಟ್‌ ಇಲ್ಲದೇ ತ್ರಿಬಲ್‌ ರೈಡಿಂಗ್‌ ಬಂದ ಮಹಿಳಾ ಪೊಲೀಸರು – ಹಿಗ್ಗಾಮುಗ್ಗ ಕ್ಲಾಸ್‌ ತೆಗೆದುಕೊಂಡ ಮಹಿಳೆ

    ಬೆಂಗಳೂರು: ಸಾರ್ವಜನಿಕರು ಸಂಚಾರ ನಿಯಮ (Traffic Rules) ಉಲ್ಲಂಘಿಸಿದರೆ ಬುದ್ದಿಮಾತು ಹೇಳಿ ಜಾಗೃತಿ ಮೂಡಿಸಬೇಕಾದ ಪೊಲೀಸ್‌ ಇಲಾಖೆಯವರೇ ತಪ್ಪು ಮಾಡಿ ಟೀಕೆಗೆ ಗುರಿಯಾಗಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಸ್ಕೂಟಿಯಲ್ಲಿ ಹೆಲ್ಮೆಟ್‌ ಕೂಡ ಇಲ್ಲದೇ ತ್ರಿಬಲ್‌ ರೈಡಿಂಗ್‌ ಬಂದ ಮಹಿಳಾ ಪೊಲೀಸ್‌ ಪೇದೆಗಳಿಗೆ ಮಹಿಳೆಯೊಬ್ಬರು ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ಮೂವರು ಮಹಿಳಾ ಪೊಲೀಸ್‌ ಪೇದೆಗಳು ಹೆಲ್ಮೆಟ್‌ ಇಲ್ಲದೇ ಸ್ಕೂಟಿಯಲ್ಲಿ ತ್ರಿಬಲ್‌ ರೈಡಿಂಗ್‌ ಬಂದಿದ್ದಾರೆ. ಮತ್ತೊಂದು ಸ್ಕೂಟಿಯಲ್ಲಿ ಇನ್ನಿಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ. ಇದನ್ನು ಗಮನಿಸಿದ ಮಹಿಳೆಯೊಬ್ಬರು, “ರೂಲ್ಸ್ ಮಾಡೊರೂ ನೀವೇ.. ಬ್ರೇಕ್ ಮಾಡೊರೂ ನೀವೇ..ʼ ಅಂತಾ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ದೃಶ್ಯವನ್ನು ವೀಡಿಯೋ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಗಾಳಿಯಲ್ಲಿ ಗುಂಡುಹಾರಿಸಿ ಹಿಡಿಯಲು ಮುಂದಾದ ಅರಣ್ಯಾಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಗಂಧಚೋರರು

    ಮಹಿಳೆ ರೇಗುತ್ತಿದ್ದಂತೆಯೇ ಹಿಂಬದಿ ಸವಾರರು ಸ್ಕೂಟಿಯಿಂದ ಇಳಿದಿದ್ದಾರೆ. “ತುರ್ತು ಕೆಲಸ ಇತ್ತು. ಅದಕ್ಕಾಗಿ ಹೆಲ್ಮೆಟ್‌ ಇಲ್ಲದೇ ಬಂದಿದ್ದೇವೆ” ಎಂದು ಉಡಾಫೆ ಉತ್ತರ ಕೂಡ ಮಹಿಳಾ ಪೊಲೀಸರು ನೀಡಿದ್ದಾರೆ.

    “ನೀವು ಏನ್ ಏನ್ ರೂಲ್ಸ್ ಬ್ರೇಕ್ ಮಾಡಿದೀರಾ ನೋಡಿಕೊಳ್ಳಿ. ದಯವಿಟ್ಟು ಗಾಡಿಯಿಂದ ಇಳಿಯಿರಿ, ಹೆಲ್ಮೆಟ್ ಹಾಕಿಕೊಳ್ಳಿ. ಇವರೇ ರೂಲ್ಸ್ ಮಾಡ್ತಾರೇ ಅಂತ ಹೇಳಲ್ವಾ ಎಂದು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಮಹಿಳೆ ಈ ವೀಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವೀಡಿಯೋ ವೈರಲ್‌ ಆಗಿದೆ. ಇದನ್ನೂ ಓದಿ: ನಾವು ಯಾವುದೇ ರೌಡಿಗಳನ್ನು ಸೇರಿಸಿಕೊಂಡಿಲ್ಲ, ಪ್ರೋತ್ಸಾಹ ನೀಡಿಲ್ಲ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • ಚಲಿಸುತ್ತಿದ್ದ ಕಾರಿನಲ್ಲೇ ಪತ್ನಿಯೊಂದಿಗೆ ಸೆಕ್ಸ್ – ಸೀಟ್‌ಬೆಲ್ಟ್ ಧರಿಸದಿದ್ದಕ್ಕೆ ಬಿತ್ತು ದಂಡ

    ಚಲಿಸುತ್ತಿದ್ದ ಕಾರಿನಲ್ಲೇ ಪತ್ನಿಯೊಂದಿಗೆ ಸೆಕ್ಸ್ – ಸೀಟ್‌ಬೆಲ್ಟ್ ಧರಿಸದಿದ್ದಕ್ಕೆ ಬಿತ್ತು ದಂಡ

    ಕ್ಯಾನ್ಬೆರಾ: ಚಲಿಸುತ್ತಿದ್ದ ಕಾರಿನಲ್ಲೇ (Car) ಪತ್ನಿಯೊಂದಿಗೆ (Wife) ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯ ಕ್ಯಾಮೆರಾದಲ್ಲಿ (Camera) ಸೆರೆಯಾಗಿದ್ದು, ಸೀಟ್ ಬೆಲ್ಟ್ ಧರಿಸಿಲ್ಲದ ಕಾರಣ ವ್ಯಕ್ತಿಯೊಬ್ಬನಿಗೆ ಪೊಲೀಸರು (Police) ದಂಡದ ಬಿಸಿ ಮುಟ್ಟಿಸಿರುವ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಹೆದ್ದಾರಿಯಲ್ಲಿ (National Highway) ನಡೆದಿದೆ.

    ವ್ಯಕ್ತಿಯು ಚಲಿಸುವ ಕಾರಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯಾವಳಿ ರಸ್ತೆ ಬದಿಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಕಂಡ ಅಧಿಕಾರಿಗಳು ಆತನಿಗೆ 1,087 ಡಾಲರ್ ಅಂದರೆ ಸುಮಾರು 89 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸದ್ಯ ಪತಿ-ಪತ್ನಿ ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಇದನ್ನೂ ಓದಿ: ‘ಗಂಧದ ಗುಡಿ’ ನೋಡಿ ಗರ್ವ ಬಂತು: ಸುಧಾಮೂರ್ತಿ ಫಸ್ಟ್ ರಿಯಾಕ್ಷನ್

    ಇಬ್ಬರೂ ಪೆಸಿಫಿಕ್ ಮೋಟಾರು ಮಾರ್ಗದಲ್ಲಿ ಹಾದು ಹೋಗುತ್ತಿದ್ದಾಗ ಕ್ಯಾಮೆರಾ ಅವರ ಲೈಂಗಿಕ ಕ್ರಿಯೆ ದೃಶ್ಯವನ್ನು ಸೆರೆಹಿಡಿದಿದೆ. ಸಾರಿಗೆ ಮತ್ತು ಮುಖ್ಯ ರಸ್ತೆಗಳ ಇಲಾಖೆಯ ವಕ್ತಾರರು ಘಟನೆಯನ್ನು ದೃಢಪಡಿಸಿದ್ದು, ಇದನ್ನು ಚಾಲಕನ ಅಪಾಯಕಾರಿ ನಡವಳಿಕೆ ಎಂದು ಗುರುತಿಸಿ ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ‘ಗಂಧದ ಗುಡಿ’ ಚಿತ್ರದಲ್ಲಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಇದ್ದಾರೆ

    ದಂಡ ವಿಧಿಸಿದ ಬಳಿಕ ಪ್ರತಿಕ್ರಿಯಿಸಿದ ದಂಪತಿ ನಾವು ಸೀಟ್ ಬೆಲ್ಟ್ ಧರಿಸಿದ್ದೇವೆ. ಆದರೆ ಅದು ಸ್ವಲ್ಪ ಮೇಲ್ಬಾಗಕ್ಕೆ ಬಂದಿದೆ. ಅದು ಕ್ಯಾಮೆರಾದಲ್ಲೂ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಸಮರ್ಥನೆ ನೀಡಲು ಮುಂದಾದರು. ಇದಕ್ಕೆ ಉತ್ತರಿಸಿದ ಪೊಲೀಸ್ ಅಧಿಕಾರಿಗಳು, ಪ್ರಯಾಣಿಕರ ವರ್ತನೆಯಿಂದಾಗಿ ಸೀಟ್‌ಬೆಲ್ಟ್ ಧರಿಸದೇ ಇದ್ದಾಗ ಅಥವಾ ತಪ್ಪಾಗಿ ಧರಿಸಿದಾಗ ಅದು ನಿಯಮ ಉಲ್ಲಂಘನೆಯಾಗುತ್ತದೆ ಎಂಬ ಕಾರಣ ನೀಡಿ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇನ್-ಸ್ಟಂಟ್ ಡೆಲಿವರಿ ಇಲ್ಲ: 1,300 ಫುಡ್ ಡೆಲಿವರಿ ಬಾಯ್‍ಗಳಿಗೆ ದಂಡ

    ಇನ್-ಸ್ಟಂಟ್ ಡೆಲಿವರಿ ಇಲ್ಲ: 1,300 ಫುಡ್ ಡೆಲಿವರಿ ಬಾಯ್‍ಗಳಿಗೆ ದಂಡ

    ಮುಂಬೈ: ಟ್ರಾಫಿಕ್ ನಿಯಮಗಳನ್ನು ನಿರ್ಲಕ್ಷಿಸಿ ಅಪಾಯಕಾರಿಯಾಗಿ ಬೈಕ್ ಓಡಿಸುತ್ತಿರುವುದ್ದಕ್ಕಾಗಿ ಮುಂಬೈ ಪೊಲೀಸರು ಸುಮಾರು ಹದಿನೈದು ದಿನಗಳಲ್ಲಿ 1,300ಕ್ಕೂ ಹೆಚ್ಚು ಡೆಲಿವರಿ ಬಾಯ್‍ಗಳಿಗೆ ದಂಡ ವಿಧಿಸಿದ್ದಾರೆ.

    ಇನ್‍ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಪೊಲೀಸರು, ದಯವಿಟ್ಟು ‘ಇನ್-ಸ್ಟಂಟ್’ ಡೆಲಿವರಿ ಬೇಡ! ಏಪ್ರಿಲ್ 5 ರಿಂದ 18 ರ ನಡುವೆ ಟ್ರಾಫಿಕ್ ನಿಯಮಗಳನ್ನು ನಿರ್ಲಕ್ಷಿಸಿ ಸವಾರಿ ಮಾಡಿದ್ದ 1,366 ಡೆಲಿವರಿ ರೈಡರ್‌ಗಳಿಗೆ ದಂಡ ವಿಧಿಸಲಾಗಿದೆ. ದಯವಿಟ್ಟು ಗಮನಿಸಿ, ಆಹಾರಕ್ಕಾಗಿ ಕಾಯಬಹುದು ಆದರೆ ಜೀವನ ಅದೇ ರೀತಿ ಇರುವುದಿಲ್ಲ ಎಂದು ಸಂದೇಶ ಸಾರಿದ್ದಾರೆ. ಇದನ್ನೂ ಓದಿ: ಸೈನಿಕರಿಗಾಗಿ ವೈದ್ಯಕೀಯ ಸಲಕರಣೆ ರವಾನೆ ಮಾಡಿದ ಇನ್ಫೋಸಿಸ್ ಕಂಪನಿ ಸಹ-ಸಂಸ್ಥಾಪಕ ಕೆ.ದಿನೇಶ್ 

     

    View this post on Instagram

     

    A post shared by Mumbai Police (@mumbaipolice)

    ಪೋಸ್ಟ್ ಜೊತೆಗೆ, ರಾಂಗ್ ಸೈಡ್ ಅಥವಾ ಹೆಲ್ಮೆಟ್ ಇಲ್ಲದೆ ಚಾಲನೆ ಅಪಾಯಕಾರಿ ಎಂದು ಹೇಳುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಹೆಲ್ಮೆಟ್ ಕಂಪನಿಗಳು ಬಳಸುವ ಬಣ್ಣಗಳಾದ ಕೆಂಪು, ಕಿತ್ತಳೆ, ನೀಲಿ ಮತ್ತು ಹಸಿರು ಹೆಲ್ಮೆಟ್ ಫೋಟೋ ಹಾಕಿಕೊಂಡು ಸಂದೇಶ ಕೊಟ್ಟಿದ್ದಾರೆ.

    ಮುಂಬೈ ಪೊಲೀಸರ ಇನ್‍ಸ್ಟಾಗ್ರಾಮ್ ಪೋಸ್ಟ್‌ ಪ್ರಕಾರ ಏಪ್ರಿಲ್ 5 ಮತ್ತು 18 ರ ನಡುವೆ ಡೆಲಿವರಿ ರೈಡರ್‌ಗಳಿಗೆ ದಂಡವನ್ನು ಹಾಕಲಾಗಿದೆ. ಇವರ ಮಾಹಿತಿ ಪ್ರಕಾರ, ಒಟ್ಟು 1,124 ಸವಾರರು ಸರಿಯಾದ ಸಮಯಕ್ಕೆ ಆಹಾರವನ್ನು ತಲುಪಿಸಲು ತಪ್ಪಾದ ರಸ್ತೆಯಲ್ಲಿ ವಾಹನವನ್ನು ಓಡಿಸುತ್ತಿದ್ದರು. ಮತ್ತೆ ಕೆಲವರು 242 ಜನರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ಬರೆದು ಕೊಂಡಿದ್ದಾರೆ.

    ಈ ಪೋಸ್ಟ್ ನೋಡಿದ ನೆಟ್ಟಿಗರು, ಅನೇಕರು ಪ್ರಯಾಣದ ಸಮಯವನ್ನು ಉಳಿಸಲು ಮತ್ತು ಡೆಲಿವರಿಗೆ ಕೊಟ್ಟಿರುವ ಸಮಯವನ್ನು ಪೂರೈಸಲು ತಪ್ಪು ರಸ್ತೆಗಳಲ್ಲಿ ವಾಹನವನ್ನು ಓಡಿಸುತ್ತಾರೆ. ಇದರಿಂದಾಗಿ ಗ್ರಾಹಕರು ಸಹ ಈ ಕುರಿತು ದೂರು ನೀಡುವುದಿಲ್ಲ. ಇದನ್ನು ತಡೆಯಬೇಕಾದ್ರೆ ಆಯಾಯ ಕಂಪನಿಗಳಿಗೆ ಟ್ರಾಫಿಕ್ ಪೆನಾಲ್ಟಿ ವಿಧಿಸಬೇಕು. ಇದರಿಂದ ಡೆಲಿವರಿ ಬಾಯ್‍ಗಳ ಮೇಲೆ ವಿಧಿಸಿರುವ ಒತ್ತಡಗಳು ಕಡಿಮೆಯಾಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಆಪ್ತರೆನ್ನಲಾದ ಕಾಂಗ್ರೆಸ್ ನಾಯಕರನ್ನ ಬಂಧಿಸಲಾಗಿದೆ: ಆರಗ 

  • ತಪ್ಪು ಮಾಡದಿದ್ರೂ 200 ರೂ. ದಂಡ – ಮಗನಿಗೆ ಸ್ವೀಟ್ ಕೊಡಿಸಲಿಟ್ಟಿದ್ದ ಹಣ ಕಿತ್ಕೊಂಡ ಪೊಲೀಸ್

    ತಪ್ಪು ಮಾಡದಿದ್ರೂ 200 ರೂ. ದಂಡ – ಮಗನಿಗೆ ಸ್ವೀಟ್ ಕೊಡಿಸಲಿಟ್ಟಿದ್ದ ಹಣ ಕಿತ್ಕೊಂಡ ಪೊಲೀಸ್

    ಬಾಗಲಕೋಟೆ: ರಸ್ತೆ ನಿಯಮವನ್ನು ಪಾಲಿಸಿದ್ದರೂ ಲಂಚಬಾಕ ಪೊಲೀಸ್ ಅಧಿಕಾರಿಯೊಬ್ಬ ಚಾಲಕನಿಗೆ ಕಾಡಿಬೇಡಿ, ಬೈದು 100 ರೂ. ಪಡೆದಿರುವ ವಿಡಿಯೋ ಹಾಗೂ ಆಡಿಯೋ ಬಾಗಲಕೋಟೆ ಜಿಲ್ಲೆಯಲ್ಲಿ ಸದ್ಯ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಜಿಲ್ಲೆಯ ಜಮಖಂಡಿ ಗ್ರಾಮೀಣ ಠಾಣೆ ಎಎಸ್‍ಐ ಮಾರುತಿ ಭಜಂತ್ರಿ ಎಂಬವರೇ ಲಂಚ ಪಡೆದ ಅಧಿಕಾರಿ. ಜಮಖಂಡಿಯಿಂದ ಮಹಾಲಿಂಗಪುರಕ್ಕೆ ಚಾಲಕ ಖಾಲಿ ವಾಹನ ತೆಗೆದುಕೊಂಡು ಹೋಗುವಾಗ ರಸ್ತೆ ನಿಯಮ ಹಾಗೂ ದಾಖಲೆಗಳಿದ್ದರೂ 200 ರೂ. ದಂಡ ಕೊಡು ಎಂದು ಅಧಿಕಾರಿ ಬೈದಿದ್ದಾರೆ.

    ನನ್ನ ಬಳಿ 100 ರೂ. ಬಿಟ್ಟರೆ ಬೇರೆ ಇರಲಿಲ್ಲ. ಕೊನೆಗೆ ಅದನ್ನು ಕೊಟ್ಟು ಬಂದೆ. ನಾನೇನು ತಪ್ಪು ಮಾಡಿರದಿದ್ದರೂ 100 ರೂ. ದಂಡ ಕೊಟ್ಟು ಬಂದಿದ್ದೇನೆ. ಪೊಲೀಸರಿಗೆ ಚಾಲಕರೆಂದರೆ ಕಿಮ್ಮತ್ತೇ ಇಲ್ಲ. ನಮಗೆ ಬಾಯಿಗೆ ಬಂದಂತೆ ಬೈತಾರೆ. ಬೆಳಗ್ಗೆಯಿಂದ ಸಂಜೆವರೆಗೂ ದುಡಿದು ಆ ಪೊಲೀಸರಿಗೆ ಹಣ ಕೊಟ್ಟು ಬರಿಗೈಲಿ ಬಂದೆ. ಒಂದು ವರ್ಷದ ಮಗನಿಗೆ ಸ್ವೀಟ್ ತೆಗೆದುಕೊಂಡು ಹೋಗಲು ಇಟ್ಟುಕೊಂಡಿದ್ದ 100 ರೂ. ಕಿತ್ತುಕೊಂಡರು. ಮಗನಿಗೆ ಸ್ವೀಟ್ ಇಲ್ಲದೆ ಮನೆಗೆ ತೆರಳಿದೆ ಎಂದು ಚಾಲಕ ತನ್ನ ದುಃಖವನ್ನು ತೋಡಿಕೊಂಡಿರುವ ಆಡಿಯೋ ಇದೀಗ ಜಿಲ್ಲೆಯಲ್ಲಿ ಫುಲ್ ವೈರಲ್ ಆಗಿದೆ.

    ಸದ್ಯ ಲಂಚಬಾಕ ಎಎಸ್‍ಐ ವಿರುದ್ಧ ಚಾಲಕ ಕಿಡಿಕಾರಿದ್ದಾನೆ. ತಾನು ಕೆರೂರ ಪಟ್ಟಣದ ವಾಹನ ಚಾಲಕ ಎಂದು ಆಡಿಯೋದಲ್ಲಿ ಹೇಳಿದ್ದಾನೆ. ಜೊತೆಗೆ ಎಎಸ್‍ಐ ನೂರು ರೂ. ಪಡೆದು ಬೈದು ಕಳುಹಿಸಿರುವ ವಿಡಿಯೋ ಸಹ ವೈರಲ್ ಮಾಡಿದ್ದಾನೆ.