Tag: ಟ್ರಾಫಿಕ್ ದಂಡ

  • ಬೈಕ್ ಬೆಲೆ 25 ಸಾವಿರ – ಗಾಡಿ ಮೇಲಿದೆ 225 ಕೇಸ್!

    ಬೈಕ್ ಬೆಲೆ 25 ಸಾವಿರ – ಗಾಡಿ ಮೇಲಿದೆ 225 ಕೇಸ್!

    ಬೆಂಗಳೂರು: ಆ ದ್ವಿಚಕ್ರ ವಾಹನದ (Two Wheeler) ಬೆಲೆ 35-30 ಸಾವಿರ ಇರಬಹುದು. ಆದರೆ ಆ ವಾಹನದ ಮೇಲೆ ಬರೋಬ್ಬರಿ 225 ಕೇಸ್ ದಾಖಲಾಗಿರುವಂತಹ ಘಟನೆ ನಡೆದಿದೆ.

    ಹೌದು, ಜಯನಗರದ ಏಳುಮಲೈ ಅವರ ಟೂ ವೀಲರ್‌ನ ವಿರುದ್ಧ 225 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಈ ಮೂಲಕ ಕೇವಲ 25 ಸಾವಿರ ರೂ.ಯ ದ್ವಿಚಕ್ರ ವಾಹನಕ್ಕೆ ಬರೋಬ್ಬರಿ 1,34,000 ರೂ. ದಂಡ ಬಿದ್ದಿದೆ.

    ನಗರದಲ್ಲಿ ಅತಿ ಹೆಚ್ಚು ನಿಯಮ ಉಲ್ಲಂಘನೆ ಮಾಡಿರೋ ಪ್ರಕರಣ ಹೆಚ್ಚುತ್ತಾ ಇದ್ದಾಗ ಈ ಟೂ ವೀಲರ್ ಪತ್ತೆಯಾಗಿದೆ. ಬಳಿಕ ಈ ಗಾಡಿಯ ಮಾಲೀಕ ಏಳುಮಲೈ ಅವರಿಗೆ ಪೊಲೀಸರು ದಂಡದ (Traffic Fine)ಮೊತ್ತವನ್ನು ಹೇಳಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ – ತನಿಖೆಗೆ ಹಾಜರಾಗದೇ ಶ್ರೀಕಿ ಕಳ್ಳಾಟ

    ಸದ್ಯ 1,34,000 ರೂ. ಬದಲಾಗಿ 10,000 ರೂ. ದಂಡವನ್ನು ಸ್ಥಳದಲ್ಲಿ ಕಟ್ಟಿಸಿಕೊಂಡು ಬಾಕಿ ದಂಡವನ್ನು ಪಾವತಿಸಲು ಏಳುಮಲೈಗೆ ಜಯನಗರ ಸಂಚಾರಿ ಪೊಲೀಸರು ಸೂಚಿಸಿದ್ದಾರೆ. ಇದನ್ನೂ ಓದಿ: ನಾಯಿ ಕಚ್ಚಿದ ಕೇಸ್‌ – ನಟ ದರ್ಶನ್‌ಗೆ ಕ್ಲೀನ್‌ ಚಿಟ್‌, ಶೀಘ್ರವೇ ಚಾರ್ಜ್‌ಶೀಟ್‌

  • ವಾಹನ ಸವಾರರಿಗೆ ಮತ್ತೆ ಗುಡ್‌ ನ್ಯೂಸ್ – ಟ್ರಾಫಿಕ್ ಫೈನ್ ಡಿಸ್ಕೌಂಟ್ ಅವಧಿ ವಿಸ್ತರಿಸಿದ ಸರ್ಕಾರ

    ವಾಹನ ಸವಾರರಿಗೆ ಮತ್ತೆ ಗುಡ್‌ ನ್ಯೂಸ್ – ಟ್ರಾಫಿಕ್ ಫೈನ್ ಡಿಸ್ಕೌಂಟ್ ಅವಧಿ ವಿಸ್ತರಿಸಿದ ಸರ್ಕಾರ

    ಬೆಂಗಳೂರು: ರಾಜ್ಯ ಸರ್ಕಾರದಿಂದ ಮತ್ತೊಮ್ಮೆ ಟ್ರಾಫಿಕ್ ಫೈನ್ ಡಿಸ್ಕೌಂಟ್ (Traffic Fine) ಅವಧಿಯನ್ನ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇ-ಚಲನ್‌ನಲ್ಲಿ ದಾಖಲಾಗಿರೊ ‍ಟ್ರಾಫಿಕ್ ಫೈನ್‌ಗೆ ಮತ್ತೆ 50% ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಸೆ.9 ರವರೆಗೆ ರಿಯಾಯಿತಿ ಅವಧಿ ಇರಲಿದೆ.

    ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮೇಲೆ ಘೋಷಿಸಿದ್ದ 50% ರಿಯಾಯಿತಿ ಸೌಲಭ್ಯದ ಅವಕಾಶವನ್ನು ಸರ್ಕಾರ ವಾಹನ ಸವಾರರಿಗೆ ಮತ್ತೆ ಕಲ್ಪಿಸಿದೆ. ಈ ಹಿಂದೆ ಎರಡು ಬಾರಿ ಟ್ರಾಫಿಕ್ ಫೈನ್ ಡಿಸ್ಕೌಂಟ್ ನೀಡಿದ್ದ ಸರ್ಕಾರಕ್ಕೆ ಬಾಕಿ ಉಳಿದಿದ್ದ ನೂರಾರು ಕೋಟಿ ಫೈನ್ ಬೊಕ್ಕಸ ಸೇರಿತ್ತು. ಇದನ್ನೂ ಓದಿ: Bengaluru Mysuru Expressway- ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧಿಸಿ: ಮರಿತಿಬ್ಬೇಗೌಡ

    ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ರಸ್ತೆ ಸುರಕ್ಷತಾ ಕಮಿಷನರ್ ಜೊತೆ ಸಭೆ ನಡೆಸಿ ಟ್ರಾಫಿಕ್ ಫೈನ್ ಡಿಸ್ಕೌಂಟ್‌ಗೆ ಮತ್ತೊಮ್ಮೆ ಸಮಯ ವಿಸ್ತರಿಸುವಂತೆ ಹೇಳಿದ್ದರು. ಕೆಎಸ್‌ಎಲ್‌ಟಿಎ ಆದೇಶದ ಮೇರೆಗೆ ಸರ್ಕಾರ ಮತ್ತೆ ಡಿಸ್ಕೌಂಟ್ ಅವಧಿ ವಿಸ್ತರಣೆ ಮಾಡಿದೆ. ದಂಡ ಬಾಕಿ ಉಳಿಸಿಕೊಂಡಿರುವ ಸವಾರರು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ತಿಳಿಸಿದೆ.

    ಕಾನೂನು ಸೇವೆಗಳ ಪ್ರಾಧಿಕಾರದ ಪ್ರಸ್ತಾವಕ್ಕೆ ಒಪ್ಪಿದ್ದ ರಾಜ್ಯ ಸರ್ಕಾರ, ರಿಯಾಯಿತಿ ಘೋಷಣೆ ಮಾಡಿತ್ತು. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಿಯಾಯಿತಿ ಸೌಲಭ್ಯದಿಂದಾಗಿ ದಂಡ ಪಾವತಿಸುವವರ ಸಂಖ್ಯೆ ಏರಿಕೆ ಆಗಿತ್ತು. ನೂರಾರು ಕೋಟಿ ಬೊಕ್ಕಸ ಸೇರಿತ್ತು. ಹೀಗಾಗಿ ಮತ್ತೆ ರಿಯಾಯಿತಿ ಸೌಲಭ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ – ಪರಿಷತ್‍ನಲ್ಲಿ ಕಾಂಗ್ರೆಸ್, ಬಿಜೆಪಿ ಜಟಾಪಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ರಾಫಿಕ್ ದಂಡ 50% ರಿಯಾಯ್ತಿ 5 ತಿಂಗಳು ಅವಧಿ ವಿಸ್ತರಣೆ ಮಾಡಿ – ಜೆಡಿಎಸ್ ಸದಸ್ಯ ಮಂಜೇಗೌಡ ಒತ್ತಾಯ

    ಟ್ರಾಫಿಕ್ ದಂಡ 50% ರಿಯಾಯ್ತಿ 5 ತಿಂಗಳು ಅವಧಿ ವಿಸ್ತರಣೆ ಮಾಡಿ – ಜೆಡಿಎಸ್ ಸದಸ್ಯ ಮಂಜೇಗೌಡ ಒತ್ತಾಯ

    ಬೆಂಗಳೂರು: ಟ್ರಾಫಿಕ್ ದಂಡ (Traffic Fine) 50% ರಿಯಾಯಿತಿ ನಿಯಮವನ್ನ 5 ತಿಂಗಳು ವಿಸ್ತರಣೆ ಮಾಡಬೇಕು ಎಂದು ಜೆಡಿಎಸ್ (JDS) ಸದಸ್ಯ ಮಂಜೇಗೌಡ (Manjegowda) ಸರ್ಕಾರವನ್ನ ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಮಂಜೇಗೌಡ ವಿಷಯ ಪ್ರಸ್ತಾಪ ಮಾಡಿದರು.

    ವಾಹನ ನಿಯಮ ಉಲ್ಲಂಘನೆ ಪ್ರಕರಣದಲ್ಲಿ 50% ಫೈನ್ ಕಟ್ಟುವ ನಿಯಮವನ್ನ ಸರ್ಕಾರ ಜಾರಿ ಮಾಡಿದೆ. ಈಗಾಗಲೇ 100 ಕೋಟಿಗೂ ಅಧಿಕ ಫೈನ್ ಸಂಗ್ರಹ ಆಗಿದೆ. ಅದರೆ ಇನ್ನು ಸಾವಿರಾರು ಕೇಸ್‌ಗಳು ಬಾಕಿ ಇವೆ. ಈಗ ಕೊಟ್ಟಿರುವ ಸಮಯ ಸಾಕಾಗುವುದಿಲ್ಲ ಎಂದರು. ಇದನ್ನೂ ಓದಿ: 6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶಾಸಕ ಶರತ್ ಬಚ್ಚೇಗೌಡ

    ದಂಡ ಕಟ್ಟಲು ಅನೇಕ ಮಾರ್ಗಗಳನ್ನ ಸರ್ಕಾರ ಕೊಟ್ಟಿದೆ. ಆದರೆ ʼಬೆಂಗಳೂರು ಒನ್‌ʼಗಳಲ್ಲಿ ಹಣ ಕಟ್ಟಲು ಸರ್ವರ್ ಸಮಸ್ಯೆ ಆಗುತ್ತಿದೆ. ಸಿಸ್ಟಮ್ ಸರಿಯಾಗಿ ವರ್ಕ್ ಆಗುತ್ತಿಲ್ಲ. ಹೀಗಾಗಿ 50% ರಿಯಾಯಿತಿ ನಿಯಮವನ್ನ ಕನಿಷ್ಠ 5 ತಿಂಗಳಿ ವಿಸ್ತರಣೆ ಮಾಡಬೇಕು. ಈ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರವನ್ನ ಒತ್ತಾಯ ಮಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎರಡು ದಿನದಲ್ಲಿ 14 ಕೋಟಿ ಟ್ರಾಫಿಕ್ ದಂಡ ಸಂಗ್ರಹ

    ಎರಡು ದಿನದಲ್ಲಿ 14 ಕೋಟಿ ಟ್ರಾಫಿಕ್ ದಂಡ ಸಂಗ್ರಹ

    ಬೆಂಗಳೂರು: ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿವೆ. ಇವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಜೊತೆಗೆ ಕಾನೂನು ಪ್ರಾಧಿಕಾರ ಉತ್ತಮ ಹೆಜ್ಜೆ ಇಟ್ಟಿದೆ. ದಂಡ (Traffic Fine) ಪಾವತಿಸುವವರಿಗೆ 50 ರಿಯಾಯ್ತಿ ನೀಡಿ, ವಾಹನ ಸವಾರರಿಗೆ ಅನುಕೂಲ ಕಲ್ಪಿಸಿದೆ.

    ಎಲ್ಲಾ ಗ್ರಾಹಕರು ಇದರ ಲಾಭ ಪಡೆಯಬೇಕು ಎಂದು ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ (Mustafa Hussain) ಸಲಹೆ ನೀಡಿದ್ದಾರೆ. ಇದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ವಾಹನ ಸವಾರರು ಕೇವಲ ಎರಡೇ ದಿನದಲ್ಲಿ 14 ಕೋಟಿ ದಂಡ ಪಾವತಿಸಿದ್ದಾರೆ. ಇಲ್ಲಿಯವರೆಗೆ 30 ಲಕ್ಷ ಕೇಸ್ ಕ್ಲಿಯರ್ ಮಾಡಿಕೊಂಡಿದ್ದಾರೆ.

    1.70 ಕೋಟಿ ಕೇಸ್ ಕ್ಲಿಯರ್ ಆಗಬೇಕಿದೆ. ಫೆಬ್ರವರಿ 11ರವರೆಗೂ ಟೈಮ್ ಇದೆ. ಬೊಕ್ಕಸಕ್ಕೆ ಭರಪೂರ ಆದಾಯ ನಿರೀಕ್ಷೆ ಮಾಡಲಾಗಿದೆ. ಇದನ್ನೂ ಓದಿ: ಟ್ರಾಫಿಕ್‌ ದಂಡಕ್ಕೆ ಶೇ.50 ಡಿಸ್ಕೌಂಟ್‌ – ಯಾವುದಕ್ಕೆ ಎಷ್ಟು?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಂಡ ಹಾಕಿದ್ದಕ್ಕೆ ಟ್ರಾಫಿಕ್ ಸಿಗ್ನಲ್, ಠಾಣೆಯ ವಿದ್ಯುತ್ ಸಂಪರ್ಕ ಕಟ್ ಮಾಡ್ದ

    ದಂಡ ಹಾಕಿದ್ದಕ್ಕೆ ಟ್ರಾಫಿಕ್ ಸಿಗ್ನಲ್, ಠಾಣೆಯ ವಿದ್ಯುತ್ ಸಂಪರ್ಕ ಕಟ್ ಮಾಡ್ದ

    ಹೈದರಾಬಾದ್: ದಂಡ ಹಾಕಿದ್ದಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಟ್ರಾಫಿಕ್ ಸಿಗ್ನಲ್ ಮತ್ತು ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸಿದ್ದಾನೆ. ಆರೋಪಿ ವಿದ್ಯುತ್ ಇಲಾಖೆಯ ನೌಕರನಾಗಿದ್ದು, ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಎ.ರಮೇಶ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ವ್ಯಕ್ತಿ. ಮಲಕಾಜಗಿರಿಯ ಇಲಾಖೆಯಲ್ಲಿ ಈ ಘಟನೆ ನಡೆದಿದ್ದು, ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರಿಂದ ಪೊಲೀಸರು ದಂಡ ಹಾಕಿದ್ದರು. ಕೆಲ ದಿನಗಳ ಹಿಂದೆ ರಮೇಶ್ ಬೈಕ್ ನ್ನು ಓರ್ವ ಅಪ್ರಾಪ್ತ ಓಡಿಸುತ್ತಿದ್ದನು. ಹಾಗಾಗಿ ಬೈಕ್ ಹಿಡಿದ ಪೊಲೀಸರು ರಮೇಶ್ ಮನವಿ ಮಾಡಿಕೊಂಡರು ನಿಯಮದ ಪ್ರಕಾರ ದಂಡ ವಿಧಿಸಿದ್ದರು.

    ದಂಡ ಹಾಕಿದ್ದಕ್ಕೆ ಕೋಪಗೊಂಡ ರಮೇಶ್ ಮೊದಲಿಗೆ ಟ್ರಾಫಿಕ್ ಸಿಗ್ನಲ್ ಸಂಪರ್ಕ, ಜಿಡಿಮೆಟಲಾ ಸ್ಟೇಶನ್ ಮತ್ತು ಎಲ್ ಆ್ಯಂಡ್ ಓ ಪೊಲೀಸ್ ಸ್ಟೇಶನ್ ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾನೆ. ಇದರಿಂದ ಎರಡು ಗಂಟೆ ಮೂರು ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿತ್ತು. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

  • ಹೆಲ್ಮೆಟ್ ಧರಿಸದ ಟ್ರ್ಯಾಕ್ಟರ್ ಚಾಲಕನಿಗೆ ಬಿತ್ತು ದಂಡ

    ಹೆಲ್ಮೆಟ್ ಧರಿಸದ ಟ್ರ್ಯಾಕ್ಟರ್ ಚಾಲಕನಿಗೆ ಬಿತ್ತು ದಂಡ

    ಲಕ್ನೋ: ಹೆಲ್ಮೆಟ್ ಧರಿಸದ ಟ್ಯ್ರಾಕ್ಟರ್ ಚಾಲಕನಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿ ಪೇಚಿಗೆ ಸಿಲುಕಿದ್ದಾರೆ. ಉತ್ತರ ಪ್ರದೇಶದ ಹಾಪುಡ ಜಿಲ್ಲೆಯ ಗಢಮುತ್ತೇಶ್ವರ ನಿವಾಸಿಗೆ ಪೊಲೀಸರು ದಂಡ ಹಾಕಿದ್ದಾರೆ.

    ಗಢಮುತ್ತೇಶ್ವರ ನಿವಾಸಿ ತನ್ನ ಟ್ರ್ಯಾಕ್ಟರ್ ನಲ್ಲಿ ಹೊರಟ್ಟದ್ದನು. ಡ್ರೈವಿಂಗ್ ಲೈಸನ್ಸ್ ಮತ್ತು ಹೆಲ್ಮೆಟ್ ಇಲ್ಲವೆಂದು ಪೊಲೀಸರು 3 ಸಾವಿರ ರೂ. ಚಲನ್ ಚಾಲಕನಿಗೆ ನೀಡಿದ್ದಾರೆ. ದಂಡದ ರಶೀದಿ ಸಾಮಾಜಿಕ ವೈರಲ್ ಆಗುತ್ತಿದ್ದಂತೆ ನೀಡಿರುವ ಚಲನ್ ನ್ನು ಪೊಲೀಸರು ರದ್ದುಗೊಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ, ಈಗಾಗಲೇ ನೀಡಿರುವ ಚಲನ್ ರದ್ದುಪಡಿಸಲಾಗಿದೆ. ಟ್ರ್ಯಾಕ್ಟರ್ ಬದಲು ದ್ವಿಚಕ್ರ ವಾಹನದ ನಂಬರ್ ರಶೀದಿಯಲ್ಲಿ ದಾಖಲಾಗಿದೆ. ಮೇಲ್ನೋಟಕ್ಕೆ ಟೈಪಿಂಗ್ ತಪ್ಪಾಗಿದೆ ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

    ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ಟ್ರ್ಯಾಕ್ಟರ್ ಚಾಲಕನೋರ್ವ ದಂಡ ಭಯದಿಂದಾಗಿ ಹೆಲ್ಮೆಟ್ ಧರಿಸಿದ್ದನು. ಹುಬ್ಬಳ್ಳಿ ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  • ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳೋಕೆ ಹೆಲ್ಮೆಟ್ ಜೊತೆಗೆ ಮಿರರ್, ವ್ಹೀಲ್‍ಗೂ ಕನ್ನ

    ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳೋಕೆ ಹೆಲ್ಮೆಟ್ ಜೊತೆಗೆ ಮಿರರ್, ವ್ಹೀಲ್‍ಗೂ ಕನ್ನ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿವಿಧ ರೀತಿಯಲ್ಲಿ ಕಳ್ಳತನಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಟ್ರಾಫಿಕ್ ಪೊಲೀಸ್ ದಂಡ ಹೆಚ್ಚಾದ ಮೇಲೆ ಈ ಡಿಫರೆಂಟ್ ಕಳ್ಳತನ ಚುರುಕಾಗಿದೆ.

    ಹೌದು. ಸಾರ್ವಜನಿಕರ ಸರ್ವಿಸ್‍ಗೆ ಸಿಗುವ ಬೈಕ್‍ಗಳನ್ನ ಬಾಡಿಗೆ ಪಡೆಯುವ ಹಲವರಲ್ಲಿ ಕೆಲವರು ಚಿಲ್ಲರೆ ಕಳ್ಳತನ ಶುರು ಮಾಡಿದ್ದಾರೆ. ಅದು ಟ್ರಾಫಿಕ್ ದಂಡ ದುಬಾರಿಯಾದ ಮೇಲೆ ಕಳ್ಳತನ ದುಪ್ಪಾಟಾಗಿದೆ. ಪೊಲೀಸಪ್ಪನಿಗೆ ಹೆದರಿ ದಂಡ ತಪ್ಪಿಸಿಕೊಳ್ಳಲು ಹೆಲ್ಮೆಟ್, ಮಿರರ್ ಹಾಗೂ ಚಕ್ರಗಳನ್ನ ಕದಿಯುತ್ತಿದ್ದಾರೆ. ಕದ್ದ ವಸ್ತುಗಳ ಬಗ್ಗೆ ಕೇಳಿದರೆ ಕೆಲವರು ಮುಖ ಮುಚ್ಚಿಕೊಳ್ಳುತ್ತಾ ಹೋದರೆ ಮತ್ತೆ ಕೆಲವರು ಗಾಡಿ ಸ್ಪೀಡ್ ಆಗಿ ಓಡಿಸುವುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ವೇಳೆ ಬಯಲಾಗಿದೆ.

    ಬೆಂಗಳೂರಿನಲ್ಲಿ ಸುಮಾರು 10 ಸಾವಿರ ಖಾಸಗಿ ದ್ವಿಚಕ್ರ ವಾಹನಗಳು ಬಾಡಿಗೆಗೆ ಸಿಗುತ್ತಿವೆ. ಕಿ.ಮೀಗೆ 4 ರಿಂದ 6 ರೂ. ಗೆ ಈ ವಾಹನಗಳು ಸಿಗುತ್ತಿವೆ. ಇದನ್ನ ಬಳಸಿಕೊಂಡು ಹಾಗೇ ಬೈಕ್ ಬಿಟ್ಟರೆ ಸಮಸ್ಯೆಯಾಗಲ್ಲ. ಆದರೆ ಹಲವರು ಉಂಡು ಹೋದ ಕೊಂಡು ಹೋದ ಎಂಬಂತೆ ಮೊದಲು ಹೆಲ್ಮೆಟ್, ಮಿರರ್, ವ್ಹೀಲ್‍ಗಳನ್ನೂ ಎಗರಿಸ್ತಾರೆ. ಇದನ್ನು ಚಿಲ್ಲರೆಗೆ ಕದ್ದು ಚಿಲ್ಲರೆ ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ.

    ಹೀಗೆ ಹೆಲ್ಮೆಟ್ ಕದಿಯೋರಿಗೆ ಶಾಕ್ ಕೊಡಲು ಬೌನ್ಸ್ ಕಂಪನಿ ಸಿಬ್ಬಂದಿ ಫೀಲ್ಡ್ ಗೆ ಇಳಿದಿದ್ದರು. ಕದ್ದ ಮಾಲು ವಾಪಸ್ ಕೊಡಿ. ನಮ್ ಹೆಲ್ಮೆಟ್ ವಾಪಸ್ ಕೊಡಿ ಎಂದು ದಿಢೀರ್ ದಾಳಿ ಮಾಡಿದರು. ಈ ಬಗ್ಗೆ ಬೇರೆ ಬೇರೆ ಕಂಪನಿಗಳು ಕೂಡ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

  • ಅವಾಚ್ಯ ಪದಗಳಿಂದ ನಿಂದಿಸಿದ ಪಿಎಸ್‍ಐಗೆ ಚಾಲಕನಿಂದ ತರಾಟೆ

    ಅವಾಚ್ಯ ಪದಗಳಿಂದ ನಿಂದಿಸಿದ ಪಿಎಸ್‍ಐಗೆ ಚಾಲಕನಿಂದ ತರಾಟೆ

    ಹುಬ್ಬಳ್ಳಿ: ಅವಾಚ್ಯ ಪದಗಳಿಂದ ನಿಂದಿಸಿದ ಪಿಎಸ್‍ಐಯೊಬ್ಬರಿಗೆ ವಾಹನ ಚಾಲಕನೋರ್ವ ನಡು ರಸ್ತೆಯಲ್ಲಿಯೇ ತರಾಟೆಗೆ ತಗೆದುಕೊಂಡಿರುವ ಪ್ರಸಂಗ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

    ಕುಂದಗೋಳ ಠಾಣೆಯ ಪಿಎಸ್‍ಐ ವಿ.ಡಿ.ಪಾಟೀಲ್ ಅವರು ಗೂಡ್ಸ್ ವಾಹನ ತಡೆದು ಪರಿಶೀಲನೆ ನಡೆಸಿದ್ದರು. ಚಾಲಕ ರಾಘವೇಂದ್ರ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಸಮವಸ್ತ್ರ ಇಲ್ಲ ಎಂದು ಪಿಎಸ್‍ಐ 200 ರೂ. ದಂಡ ಹಾಕಿದ್ದಾರೆ. ಇದಕ್ಕೆ ಚಾಲಕ ರಾಘವೇಂದ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕೋಪಗೊಂಡ ವಿ.ಡಿ.ಪಾಟೀಲ್ ಅವರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಸೂಚನೆ ಕೊಟ್ಟರೂ ಹೊಸ ಟ್ರಾಫಿಕ್ ದಂಡವೇ ಪ್ರಯೋಗ!

    ಪಿಎಸ್‍ಐ ಅವರ ವರ್ತನೆಯಿಂದ ರಾಘವೇಂದ್ರ ಕುಪಿತಗೊಂಡು, ನನಗೆ 200 ರೂ. ದಂಡ ಹಾಕಿದಲ್ಲದೇ ಅವಾಚ್ಯ ಪದಗಳಿಂದ ಯಾಕೆ ನಿಂದಿಸಿದ್ದೀರಿ? ಸಾರ್ವಜನಿಕರಿಗೆ ಹೀಗೆ ಬೈಯಲು ನೀವ್ಯಾರು? ಎಂದು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿದಕ್ಕೆ ಕ್ಷಮೆ ಕೇಳುವಂತೆ ಚಾಲಕ ಪಟ್ಟು ಹಿಡಿದ್ದಾರೆ.

    ರಾಘವೇಂದ್ರ ಅವರ ಜೊತೆಗಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಪೊಲೀಸ್ ಸಿಬ್ಬಂದಿ ಕೂಡ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.