Tag: ಟ್ರಾಫಿಕ್ ಕಂಟ್ರೋಲ್

  • ಡ್ಯಾನ್ಸ್ ಮಾಡುವ ಮೂಲಕ ಟ್ರಾಫಿಕ್ ನಿಯಂತ್ರಿಸ್ತಿರುವ ಪೊಲೀಸ್: ವಿಡಿಯೋ

    ಡ್ಯಾನ್ಸ್ ಮಾಡುವ ಮೂಲಕ ಟ್ರಾಫಿಕ್ ನಿಯಂತ್ರಿಸ್ತಿರುವ ಪೊಲೀಸ್: ವಿಡಿಯೋ

    ರಾಯಪುರ: ಪೊಲೀಸ್ ಅಧಿಕಾರಿಯೊಬ್ಬರು ಡ್ಯಾನ್ಸ್ ಮಾಡುವ ಮೂಲಕ ಟ್ರಾಫಿಕ್ ಕಂಟ್ರೋಲ್ ಮಾಡುತ್ತಿರುವ ದೃಶ್ಯ ಛತ್ತಿಸಗಡದ ರಾಯಪುರದಲ್ಲಿ ಕಂಡು ಬಂದಿದೆ. ಇದೀಗ ಪೊಲೀಸ್ ಅಧಿಕಾರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಮೊಹಮ್ಮದ್ ಮೊಹ್ಸಿನ್ ಶೇಖ್ ಅವರು ತಮ್ಮ ವಿಶಿಷ್ಟ ಶೈಲಿಯೊಂದಿಗೆ ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದಾರೆ. ಮೊಹ್ಸಿನ್ ಡ್ಯಾನ್ಸ್ ಮಾಡುವ ಮೂಲಕ ಟ್ರಾಫಿಕ್ ನಿಯಂತ್ರಿಸುತ್ತಿರುವುದನ್ನು ನೋಡಿದ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೊಹ್ಸಿನ್ ಅವರು, ನಾನು ನನ್ನ ಕೆಲಸವನ್ನು ತುಂಬಾ ಎಂಜಾಯ್ ಮಾಡುತ್ತೇನೆ. ಈ ಮೊದಲು ಮಧ್ಯಪ್ರದೇಶದ ಪೊಲೀಸ್ ಅಧಿಕಾರಿ ರಂಜಿತ್ ಸಿಂಗ್ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನನಗೆ ತುಂಬಾ ಇಷ್ಟವಾಗಿತ್ತು. ವಿಶಿಷ್ಟ ಶೈಲಿಯಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡುವುದು ತುಂಬಾ ಸುಲಭ. ಜನರು ನನ್ನ ಸನ್ನೆಯನ್ನು ತುಂಬಾ ಬೇಗ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

    ಇತ್ತೀಚೆಗೆ ಇಂದೋರ್ ನ ರಸ್ತೆಗಳಲ್ಲಿ ಡ್ಯಾನ್ಸಿಂಗ್ ಟ್ರಾಫಿಕ್ ಗರ್ಲ್ ಕಾಣಿಸಿಕೊಳ್ಳುತ್ತಿದ್ದರು. ಎಂಬಿಎ ವಿದ್ಯಾರ್ಥಿನಿ ಶುಭಿ ಜೈನ್ ತಮ್ಮ ವಿಭಿನ್ನ ಡ್ಯಾನ್ಸ್ ಮೂಲಕ ಟ್ರಾಫಿಕ್ ಕಂಟ್ರೋಲ್ ಮಾಡಿದ್ದರು. ಶುಭಿ ಜೈನ್ ತನ್ನ ವಿಭಿನ್ನ ಶೈಲಿಯೊಂದಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ್ದರು.

  • ಟ್ರಾಫಿಕ್ ಕಂಟ್ರೋಲ್‍ಗೆ ಪೊಲೀಸರಿಂದ ಹೊಸ ಐಡಿಯಾ

    ಟ್ರಾಫಿಕ್ ಕಂಟ್ರೋಲ್‍ಗೆ ಪೊಲೀಸರಿಂದ ಹೊಸ ಐಡಿಯಾ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಎಂದಾಕ್ಷಣ ಎಲ್ಲರಿಗೂ ಇಲ್ಲಿನ ಟ್ರಾಫಿಕ್ ನೆನಪಾಗುತ್ತದೆ. ಇತ್ತೀಚೆಗೆ ಟ್ರಾಫಿಕ್ ಹೆಚ್ಚಾಗಿದ್ದು, ಇದಕ್ಕೆ ಮುಕ್ತಿ ನೀಡಲು ಪೊಲೀಸರು ಹೊಸ ಐಡಿಯಾ ಮಾಡಿದ್ದಾರೆ.

    ನಗರದ ಹುಳಿಮಾವು ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ಬನ್ನೇರುಘಟ್ಟ ರಸ್ತೆಯ, ಗೊಟ್ಟಿಗೆರೆ ಜಂಕ್ಷನ್‍ನಲ್ಲಿ ಮ್ಯಾನಿಕ್ವೀನ್ ನಿಲ್ಲಿಸಲಾಗಿದೆ. ಈ ಟ್ರಾಫಿಕ್ ಪೊಲೀಸ್ ಪ್ರತಿಕೃತಿ ಗೊಂಬೆ ತಯಾರಿಗೆ 8 ಸಾವಿರ ರೂ. ತಗುಲಿದ್ದು, ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

    ಈ ಗೊಂಬೆ ದೂರದಿಂದಲೇ ವಾಹನ ಸವಾರರಿಗೆ ಸಂಚಾರಿ ನಿಯಮಗಳನ್ನು ಪಾಲಿಸಲು ಸಿಗ್ನಲ್ ನೀಡುತ್ತದೆ. ಕೆಲವರು ಪೊಲೀಸರನ್ನು ನೋಡಿದ ತಕ್ಷಣ ಸಂಚಾರಿ ನಿಯಮವನ್ನು ಪಾಲಿಸುತ್ತಾರೆ. ಪೊಲೀಸರು ಇಲ್ಲದಿದ್ದರೆ ಅವರು ನಿಯಮಗಳನ್ನು ಪಾಲಿಸುವುದಿಲ್ಲ. ಹಾಗಾಗಿ ಪೊಲೀಸರು ಈ ಹೊಸ ಐಡಿಯಾ ಮಾಡಿದ್ದಾರೆ.

    ನಗರದ ಎಲ್ಲೆಡೆ ಪ್ರತಿ ಸರ್ಕಲ್‍ನಲ್ಲೂ ಈ ಗೊಂಬೆಗಳನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಒಂದು ಪೊಲೀಸ್ ಸ್ಟೇಷನ್‍ಗೆ 5 ಮ್ಯಾನಿಕ್ವೀನ್ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.