Tag: ಟ್ರಾನ್ಸ್ ಫಾರ್ಮರ್

  • ಏ.10ಕ್ಕೆ ಚೈತನ್ಯ ಜೊತೆ ನಿಶ್ಚಿತಾರ್ಥ ನಿಗದಿಯಾಗಿತ್ತು, ಹಣೆಬರಹ ಸರಿ ಇಲ್ಲ ಅನಿಸತ್ತೆ: ಮಧುಮಗ ಕಣ್ಣೀರು

    ಏ.10ಕ್ಕೆ ಚೈತನ್ಯ ಜೊತೆ ನಿಶ್ಚಿತಾರ್ಥ ನಿಗದಿಯಾಗಿತ್ತು, ಹಣೆಬರಹ ಸರಿ ಇಲ್ಲ ಅನಿಸತ್ತೆ: ಮಧುಮಗ ಕಣ್ಣೀರು

    ಬೆಂಗಳೂರು: ಎಲ್ಲ ಸರಿಯಾಗಿದ್ದಿದ್ದರೆ ಮುಂದಿನ ತಿಂಗಳು ನಮ್ಮಿಬ್ಬರ ನಿಶ್ಚಿತಾರ್ಥವಾಗುತ್ತಿತ್ತು. ಆದರೆ ನನ್ನ ಹಣೆಯ ಬರಹ ಏನೂ ಮಾಡಲು ಆಗುವುದಿಲ್ಲ ಎಂದು ಮಧುಮಗ ವೆಂಕಟೇಶ್ ಭಾವುಕರಾಗಿದ್ದಾರೆ.

    ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚೈತನ್ಯ ಇಂದು ಮೃತಪಟ್ಟಿದ್ದಾರೆ. ಚೈತನ್ಯ ಅವರಿಗೆ ಏಪ್ರಿಲ್ 10ರಂದು ವೆಂಕಟೇಶ್ ಜೊತೆ ನಿಶ್ಚಿತಾರ್ಥ ನೆರವೇರಬೇಕಾಗಿತ್ತು. ಆದರೆ ನಿಶಿತಾರ್ಥದ ಸಂಭ್ರಮದಲ್ಲಿದ್ದ ಮಧುಮಗ ವೆಂಕಟೇಶ್‍ಗೆ ಚೈತನ್ಯ ಸಾವು ಬರಸಿಡಿಲು ಬಡಿದಂತಾಗಿದೆ.

    ಘಟನೆ ಕುರಿತಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವೆಂಕಟೇಶ್, ಚೈತನ್ಯ ಅವರು ಅತ್ತೆ ಮಗಳ ಮದುವೆ ಇದ್ದಿದ್ದರಿಂದ ಬಟ್ಟೆ ಖರೀದಿಸಲು ಹೋಗಿದ್ದರು. ಈ ವೇಳೆ ಅವಘಢ ಸಂಭವಿಸಿದೆ. ಇನ್ನೇನು ಮುಂದಿನ ತಿಂಗಳು 10 ರಂದು ನನ್ನ ಹಾಗೂ ಚೈತನ್ಯ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಆದರೆ ಬುಧವಾರ ಟ್ರಾನ್ಸ್ ಫಾರ್ಮರ್ ಬಳಿ ಒಂದು ಸಣ್ಣ ಹಳ್ಳ ಇತ್ತು. ಈ ವೇಳೆ ಬೈಕ್‍ನನ್ನು ಸ್ಲೋ ಮಾಡಿದಾಗ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿ ಇಬ್ಬರು ಗಾಯಗೊಂಡಿದ್ದರು. ಇದನ್ನೂ ಓದಿ: ಟ್ರಾನ್ಸ್ ಫಾರ್ಮರ್ ಸ್ಫೋಟ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಯುವತಿಯೂ ಸಾವು

    ಕೆಇಬಿ ಅವರು ಸರಿಯಾದ ಸಮಯಕ್ಕೆ ಟ್ರಾನ್ಸ್ ಫಾರ್ಮರ್ ರೆಡಿ ಮಾಡಿರಲಿಲ್ಲ. ಹೀಗಾಗಿ ಇವರು ಬರುವ ವೇಳೆಗೆ ಸರಿಯಾಗಿ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡಿದೆ. ಎಲ್ಲ ಸರಿಯಾಗಿದ್ದಿದ್ದರೆ, ಮುಂದಿನ ತಿಂಗಳು ನಮ್ಮಿಬ್ಬರ ನಿಶ್ಚಿತಾರ್ಥವಾಗುತ್ತಿತ್ತು. ಆದರೆ ನನ್ನ ಹಣೆಯ ಬರಹ ಏನೂ ಮಾಡಲು ಆಗುವುದಿಲ್ಲ ಕಣ್ಣಿರು ಹಾಕಿದ್ದಾರೆ. ಇದನ್ನೂ ಓದಿ: ಟ್ರಾನ್ಸ್ ಫಾರ್ಮರ್ ಸ್ಫೋಟ ತಂದೆ ಸಾವು – ಮಗಳ ಸ್ಥಿತಿ ಗಂಭೀರ

    ಮದುವೆ ಕಾರ್ಯಕ್ರಮವಿದ್ದ ಕಾರಣ ಬಟ್ಟೆ ಖರೀದಿಗೆ ಮಗಳೊಂದಿಗೆ ಉಲ್ಲಾಳ ಉಪನಗರಕ್ಕೆ ಬಂದು ಬಟ್ಟೆ ಖರೀದಿ ಮಾಡಿಕೊಂಡು ಅಪ್ಪ-ಮಗಳು ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಮಂಗನಹಳ್ಳಿ ಬ್ರಿಡ್ಜ್ ಬಳಿ ಸಡನ್ ಆಗಿ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ಭಸ್ಮವಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ತಂದೆ ಶಿವರಾಜು, ಮಗಳು ಚೈತನ್ಯರನ್ನು ಸ್ಥಳೀಯರು ಕೂಡಲೇ ವಿಕ್ಟೋರಿಯಾ ಆಸ್ಪತ್ರೆ ರವಾನಿಸಿದ್ದರು. ಆದರೆ ಶಿವರಾಜು ನಿನ್ನೆಯೇ ಆಸ್ಪತ್ರೆಯಲ್ಲಿ ಮೃತಪಟ್ಟರೆ, ತಡರಾತ್ರಿ 2:15ರ ಸುಮಾರಿಗೆ ಚೈತನ್ಯ(19) ಕೂಡ ಸಾವನ್ನಪ್ಪಿದ್ದಾರೆ.

  • ಟ್ರಾನ್ಸ್ ಫಾರ್ಮರ್ ಸ್ಫೋಟ ಪ್ರಕರಣ –  ಚಿಕಿತ್ಸೆ ಫಲಕಾರಿಯಾಗದೇ ಯುವತಿಯೂ ಸಾವು

    ಟ್ರಾನ್ಸ್ ಫಾರ್ಮರ್ ಸ್ಫೋಟ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಯುವತಿಯೂ ಸಾವು

    ಬೆಂಗಳೂರು: ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಇಂದು ಮೃತಪಟ್ಟಿದ್ದಾರೆ.

    ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದ ಕಾರಣ ಬಟ್ಟೆ ಖರೀದಿಗೆ ಮಗಳೊಂದಿಗೆ ಉಲ್ಲಾಳ ಉಪನಗರಕ್ಕೆ ಬಂದು ಬಟ್ಟೆ ಖರೀದಿ ಮಾಡಿಕೊಂಡು ಅಪ್ಪ-ಮಗಳು ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಮಂಗನಹಳ್ಳಿ ಬ್ರಿಡ್ಜ್ ಬಳಿ ಸಡನ್ ಆಗಿ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ಸ್ಫೋಟದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ಭಸ್ಮವಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ತಂದೆ ಶಿವರಾಜು, ಮಗಳು ಚೈತನ್ಯರನ್ನು ಸ್ಥಳೀಯರು ಕೂಡಲೇ ವಿಕ್ಟೋರಿಯಾ ಆಸ್ಪತ್ರೆ ರವಾನಿಸಿದ್ದರು. ಆದರೆ ತಡರಾತ್ರಿ 2:15ರ ಸುಮಾರಿಗೆ ಚೈತನ್ಯ(19) ಕೂಡ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಟ್ರಾನ್ಸ್ ಫಾರ್ಮರ್ ಸ್ಫೋಟ ತಂದೆ ಸಾವು – ಮಗಳ ಸ್ಥಿತಿ ಗಂಭೀರ

    ಬುಧವಾರ ಈ ಘಟನೆ ಸಂಬಂಧ ಶಿವರಾಜು ಸಂಬಂಧಿಕರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ಆರೋಪದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋಹಿನಿಯಾಟ್ಟಂ ನೃತ್ಯಕ್ಕೆ ಅರ್ಧದಲ್ಲೇ ತಡೆ – ಕೇರಳ ಜಡ್ಜ್‌ ಪಾಷಾ ವಿರುದ್ಧ ಖ್ಯಾತ ಕಲಾವಿದೆ ಆಕ್ರೋಶ

  • ಟ್ರಾನ್ಸ್ ಫಾರ್ಮರ್ ಸ್ಫೋಟ ತಂದೆ ಸಾವು – ಮಗಳ ಸ್ಥಿತಿ ಗಂಭೀರ

    ಟ್ರಾನ್ಸ್ ಫಾರ್ಮರ್ ಸ್ಫೋಟ ತಂದೆ ಸಾವು – ಮಗಳ ಸ್ಥಿತಿ ಗಂಭೀರ

    ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ಅಮಾಯಕ ಬಡಜೀವ ಬಲಿಯಾಗಿರುವ ದುರ್ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    58 ವರ್ಷದ ಶಿವರಾಜು ಮೃತ ದುರ್ದೈವಿ. ಶಿವರಾಜು ವೃತ್ತಿಯಲ್ಲಿ ಸೆಕ್ಯೂರಿಟಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದ ಕಾರಣ ಬಟ್ಟೆ ಖರೀದಿಗೆ ಮಗಳೊಂದಿಗೆ ಉಲ್ಲಾಳ ಉಪನಗರಕ್ಕೆ ಬಂದು ಬಟ್ಟೆ ಖರೀದಿ ಮಾಡಿಕೊಂಡು ಅಪ್ಪ-ಮಗಳು ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದರು. ಇದನ್ನೂ ಓದಿ: ಆಂಡ್ರಾಯ್ಡ್ ಬಳಕೆದಾರಿಗೆ ಮೋಸ ಮಾಡಿ ಸಿಕ್ಕಿಬಿದ್ದ ಗೂಗಲ್

    ಈ ವೇಳೆ ಅವರಿಬ್ಬರು ಹೋಗುತ್ತಿದ್ದ ಮಂಗನಹಳ್ಳಿ ಬ್ರಿಡ್ಜ್ ಬಳಿ ಸಡನ್ ಆಗಿ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬೈಕ್ ಸಂಪೂರ್ಣ ಭಸ್ಮವಾಗಿದ್ದು, ತಂದೆ ಶಿವರಾಜು, ಮಗಳು ಚೈತನ್ಯ ಗಂಭೀರವಾಗಿ ಸುಟ್ಟು ಹೋಗಿದ್ದಾರೆ. ಕೂಡಲೇ ಸ್ಥಳೀಯರ ಸಹಾಯದಿಂದ ತಂದೆ ಮಗಳನ್ನ ವಿಕ್ಟೋರಿಯಾ ಆಸ್ಪತ್ರೆ ರವಾನಿಸಿದ್ದಾರೆ.

    ಚಿಕಿತ್ಸೆ ಫಲಕಾರಿಯಾಗದೆ ತಂದೆ ಶಿವರಾಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮಗಳು ಚೈತನ್ಯ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಶಿವರಾಜು ಸಂಬಂಧಿಕರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಸ್ಕಾಂ ನಿರ್ಲಕ್ಷ್ಯದ ಆರೋಪದ ಮೇಲೆ ದೂರು ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!

    ಘಟನ ಸ್ಥಳಕ್ಕೆ ಆಗಮಿಸಿದ ಸಚಿವ ಎಸ್.ಟಿ.ಸೋಮಶೇಖರ್ ಘಟನೆಯಲ್ಲಿ ಗಾಯಗೊಂಡಿರುವವರ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ.

  • ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ- ನೋಡ ನೋಡುತ್ತಿದ್ದಂತೆ ಸುಟ್ಟುಹೋಯ್ತು 10 ಎಕ್ರೆ ಬೆಳೆ

    ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ- ನೋಡ ನೋಡುತ್ತಿದ್ದಂತೆ ಸುಟ್ಟುಹೋಯ್ತು 10 ಎಕ್ರೆ ಬೆಳೆ

    ಸಾಂದರ್ಭಿಕ ಚಿತ್ರ

    ಬೆಳಗಾವಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಟಾವಿಗೆ ಬಂದಿದ್ದ ಸುಮಾರು 10 ಕ್ಕೂ ಹೆಚ್ಚು ಎಕರೆ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರಟೇಕ ಗ್ರಾಮದಲ್ಲಿ ನಡೆದಿದೆ.

    ಇಂದು ಮಧ್ಯಾಹ್ನದ ವೇಳೆ ಚಂದೂರಟೇಕ ಗ್ರಾಮದ ಕಬ್ಬಿನ ಗದ್ದೆಯಲ್ಲಿದ್ದ ಟ್ರಾನ್ಸ್‌ಫಾರ್ಮರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತು. ಬಳಿಕ ಸುತ್ತಲಿದ್ದ ಗ್ರಾಮದ ಸುಕುಮಾರ ಚೌಗಲೆ, ಮಹಾವೀರ ಚೌಗಲೆ, ಧನಂಜಯ ಚೌಗಲೆ,ಬಾಳಾಸಾಬ ಚೌಗಲೆ, ರಾಜು ಚೌಗಲೆ, ಸಾಗರ ಚೌಗಲೆ ಸೇರಿದಂತೆ 7 ಕ್ಕಿಂತ ಹೆಚ್ಚು ರೈತರ 10 ಎಕರೆಗೂ ಅಧಿಕ ಕಬ್ಬು ಸುಟ್ಟು ಕರಕಲಾಗಿದೆ.

    ಬೆಂಕಿಯನ್ನು ಕಂಡು ರೈತರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು ಯಾವುದೇ ಪ್ರಯೋಜನವಾಗಿಲ್ಲ. ನೋಡು ನೋಡುತ್ತಲೇ ಬೆಳೆದು ನಿಂತಿದ್ದ ಕಬ್ಬು ಧಗಧಗನೆ ಉರಿದು ಸುಟ್ಟು ಕರಕಲಾಗಿವೆ. ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

    ಇತ್ತೀಚೆಗೆ ಇದೇ ಗ್ರಾಮದಲ್ಲಿ 60 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿತ್ತು. ಘಟನೆ ಸಂಬಂಧ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟ್ರಾನ್ಸ್ ಫಾರ್ಮರ್ ನಲ್ಲಿ ಸಿಲುಕಿದ್ದ ಮರಿಯನ್ನು ರಕ್ಷಿಸಿದ್ವು ಕೋತಿಗಳು!

    ಟ್ರಾನ್ಸ್ ಫಾರ್ಮರ್ ನಲ್ಲಿ ಸಿಲುಕಿದ್ದ ಮರಿಯನ್ನು ರಕ್ಷಿಸಿದ್ವು ಕೋತಿಗಳು!

    ಚಿತ್ರದುರ್ಗ: ವಿದ್ಯುತ್ ಪ್ರವಹಿಸುತ್ತಿದ್ದ ಟ್ರಾನ್ಸ್ ಫಾರ್ಮರ್ ಮೇಲೆ ಅನಿರೀಕ್ಷಿತವಾಗಿ ಜಿಗಿದು ಅಪಾಯಕ್ಕೆ ಸಿಲುಕಿದ್ದ ಕೋತಿ ಮರಿಯೊಂದನ್ನು ಕೋತಿಗಳೇ ರಕ್ಷಿಸಿದ ಮಾನವೀಯತೆ ಮೆರೆದ ಘಟನೆ ಚಿತ್ರದುರ್ಗ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಎಸ್ ಜೆಎಂ ಡೆಂಟಲ್ ಕಾಲೇಜು ಆವರಣದಲ್ಲಿ ಕಟ್ಟಡದ ಮೇಲೆ ಮಂಗಗಳ ಹಿಂಡೊಂದು ಕುಳಿತಿತ್ತು. ಅದರಲ್ಲಿ ಕೆಲವು ಮರಿಗಳೂ ಇದ್ದವು. ಇದ್ದಕಿದ್ದಂತೆ ಒಂದು ಕೋತಿಯ ಮರಿ ಜಿಗಿದು ಕಟ್ಟಡದ ಪಕ್ಕದಲ್ಲಿದ್ದ ವಿದ್ಯುತ್ ಪ್ರವಹಿಸುತ್ತಿರುವ ಟ್ರಾನ್ಸ್ ಫಾರ್ಮರ್ ಮೇಲೆ ಜಿಗಿದು ಗಾಯಗೊಂಡು ಕುಳಿತುಬಿಟ್ಟಿತು. ಇನ್ನೇನು ಕೋತಿ ಮರಿ ವಿದ್ಯುತ್ ಶಾಕ್ ನಿಂದ ಅಸುನೀಗಿತು ಎಂದು ಎಲ್ಲರೂ ತಿಳಿದಿದ್ದರು.

    ಈ ದೃಶ್ಯಗಳನ್ನು ಅಲ್ಲಿ ಕುಳಿತಿದ್ದ ಇತರ ಮಂಗಗಳು ನೋಡುತ್ತಿದ್ದವು. ಆದರೆ ಅವುಗಳಲ್ಲಿ ಕೆಲ ಮಂಗಗಳು ಕೋತಿಯ ಮರಿಯನ್ನು ರಕ್ಷಿಸಲು ಮುಂದಾದವು. ಅಕ್ಕ ಪಕ್ಕ ಸಾಕಷ್ಟು ವಿದ್ಯುತ್ ತಂತಿಗಳಿದ್ದವು. ಸ್ವಲ್ಪ ಯಾಮಾರಿದರೂ ಕೋತಿ ಮರಿ ಜೊತೆಗೆ ರಕ್ಷಿಸಲು ಬಂದ ಕೋತಿಗಳು ಪ್ರಾಣಬಿಡುವ ಪ್ರಸಂಗವಿತ್ತು.

    ಆದರೆ ಚಾಣಾಕ್ಷತನದಿಂದ ಆ ಕೋತಿಗಳು ತಮ್ಮ ಪ್ರಾಣದ ಮೇಲಿನ ಹಂಗನ್ನೂ ತೊರೆದು ಆ ಪುಟ್ಟ ಕೋತಿಯನ್ನು ರಕ್ಷಿಸಿದವು. ಮನುಷ್ಯನಿಗೆ ಮಾತ್ರವಲ್ಲ ತಮಗೂ ಮಾನವೀಯತೆ ಇದೆ ಎಂದು ಸಾಬೀತುಪಡಿಸಿದವು. ಅಷ್ಟರಲ್ಲಿ ತಾಯಿಕೋತಿ ತನ್ನ ಮರಿಯನ್ನು ಎತ್ತಿಕೊಂಡು ಅಲ್ಲಿಂದ ಮುನ್ನಡೆಯಿತು.