ಬೆಂಗಳೂರು: ಮಳೆಯ ಹಿನ್ನೆಲೆ ಶಾರ್ಟ್ ಸರ್ಕ್ಯೂಟ್ ಆಗಿ ಟ್ರಾನ್ಸ್‌ಫಾರ್ಮರ್ (Transformer) ಹೊತ್ತಿ ಉರಿದ ಘಟನೆ ಬೆಂಗಳೂರಿನ (Bengaluru) ಕಮ್ಮನಹಳ್ಳಿಯಲ್ಲಿ ನಡೆದಿದೆ.
ಭಾನುವಾರ ಮಧ್ಯರಾತ್ರಿ 12:20ರ ಸುಮಾರಿಗೆ ಘಟನೆ ನಡೆದಿದೆ. ಹೋಟೆಲ್ ಎಂಪೈರ್ ಬಳಿಯ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಕ್ರಮ ಕೈಗೊಂಡು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಫೆಂಗಲ್ ಚಂಡಮಾರುತ ಎಫೆಕ್ಟ್ – ಬೆಂಗಳೂರಿಗೆ ಇನ್ನೆರಡು ದಿನ ಮಳೆ ಕಾಟ ಫಿಕ್ಸ್!
ಬೆಂಗಳೂರು: ಟ್ರಾನ್ಸ್ ಫಾರ್ಮರ್ ರಿಪೇರಿಗೆಂದು ಲೈಟ್ ಕಂಬ ಹತ್ತಿದ್ದಾಗ ವಿದ್ಯುತ್ ಪ್ರವಹಿಸಿ ಲೈನ್‌ಮ್ಯಾನ್ (Lineman) ಮೃತಪಟ್ಟ ಘಟನೆ ಬೆಂಗಳೂರಿನ (Bengaluru) ರಾಜಾಜಿನಗರದ ಗೋಪಾಲಪುರದಲ್ಲಿ ನಡೆದಿದೆ.
ಗೌತಮ್ ಮೃತ ದುರ್ದೈವಿ. ಕಳೆದ 6 ವರ್ಷಗಳಿಂದ ಗೌತಮ್ ಬೆಸ್ಕಾಂನಲ್ಲಿ ಲೈನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಭಾನುವಾರ ರಾತ್ರಿ ನೈಟ್ ಡ್ಯೂಟ್‌ಗೆ ಎಂದು ಹೋಗಿದ್ದ ಗೌತಮ್ ಸೋಮವಾರ ಬೆಳಗ್ಗೆ ರಾಜಾಜಿನಗರದ ಗೋಪಾಲಪುರದಲ್ಲಿ ಟ್ರಾನ್ಸ್ ಫಾರ್ಮರ್ (Transformer) ರಿಪೇರಿಗೆಂದು ಲೈಟ್ ಕಂಬ ಹತ್ತಿದ್ದಾಗ ವಿದ್ಯುತ್ ಪ್ರವಹಿಸಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾಗಡಿ ಮೂಲದವರಾದ ಗೌತಮ್ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಮದುವೆ ದಿನಾಂಕವನ್ನು ಫಿಕ್ಸ್ ಮಾಡುವುದಿನ್ನು ಬಾಕಿಯಿತ್ತು. ಆದರೆ ಅಷ್ಟರಲ್ಲಿ ಇಂಥ ದುರ್ಘಟನೆ ನಡೆದು ಹೋಗಿದೆ.
ಘಟನೆಯ ವೇಳೆ ಬೆಸ್ಕಾಂ ಇಲಾಖೆಯು ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೇ ಗೌತಮ್‌ನನ್ನು ಲೈಟ್ ಕಂಬದ ಮೇಲೆ ಹತ್ತಿಸಿದ್ದಾರೆ. ಅಷ್ಟೇ ಅಲ್ಲದೇ ಈ ವೇಳೆ ಎರಡರಲ್ಲಿ ಒಂದು ಲೈನ್‌ನ ಕರೆಂಟ್ ಅನ್ನು ಮಾತ್ರ ಆಫ್ ಮಾಡಿದ್ದಾರೆ. ಇದರಿಂದಾಗಿ ಗೌತಮ್ ಸಾವು ಬೆಸ್ಕಾಂನಿಂದ ನಡೆದಿರುವ ಕೊಲೆಯಾಗಿದೆ. ಇದಕ್ಕೆ ಎಇ, ಇಇನೇ ನೇರ ಕಾರಣ ಎಂದು ಮೃತ ಗೌತಮ್ ತಂದೆ ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಬಿ ಟೀಂ ಯಾರು ಅಂತ ಬಹಿರಂಗ ಚರ್ಚೆಗೆ ಸಿದ್ಧ- ಸುರ್ಜೇವಾಲಾಗೆ HDK ಸವಾಲ್
ಪ್ರಕರಣ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಿರ್ಲಕ್ಷತೆ ವಹಿಸಿ ಬೆಂಗಳೂರು, ಟ್ರಾನ್ಸ್‌ಫಾರ್ಮರ್, ಎಫ್‌ಐಆರ್, ಲೈನ್‌ಮ್ಯಾನ್ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಿದೆ. ಅಲ್ಲದೆ ಬೆಸ್ಕಾಂ ನಿಂದ ಕುಟುಂಬಕ್ಕೆ ಸೂಕ್ತ ಪರಿಹಾರ ಬರಬೇಕಿದೆ. ಇದನ್ನೂ ಓದಿ: ಸೈನ್ಸ್ ಓದಲು ಇಷ್ಟವಿಲ್ಲದೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ದುರಸ್ಥಿ ಸ್ಥಿತಿಯಲ್ಲಿರುವ ಟ್ರಾನ್ಸ್ ಫಾರ್ಮರ್ ನಿರ್ವಹಣೆಯನ್ನು ಮುಂದುವರಿಸಿರುವ ಬೆಸ್ಕಾಂ ಕಳೆದ ಎರಡು ತಿಂಗಳಿಂದೀಚೆಗೆ 27,787 ಟ್ರಾನ್ಸ್ ಫಾರ್ಮರ್‌ಗಳನ್ನು ತನ್ನ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಿರ್ವಹಣೆ ಮಾಡಿದೆ.
ಮೇ 5 ರಂದು ರಾಜ್ಯಾದ್ಯಂತ ಚಾಲನೆ ದೊರೆತ ಟ್ರಾನ್ಸ್ ಫಾರ್ಮರ್‌ಗಳ ಅಭಿಯಾನವನ್ನು ಬೆಸ್ಕಾಂ ಮುಂದುವರಿಸಿದ್ದು, ನ್ಯೂನ್ಯತೆ ಹೊಂದಿರುವ ಹಾಗೂ ಅಸಮರ್ಪಕ ಗ್ರೌಂಡಿಂಗ್ ಸಮಸ್ಯೆ ಹೊಂದಿರುವ ಟ್ರಾನ್ಸ್ ಫಾರ್ಮರ್‌ಗಳನ್ನು ನಿರ್ವಹಣೆ ಮಾಡಿದೆ.
ಮೇ 5 ರಂದು ಟ್ರಾನ್ಸ್ ಫಾರ್ಮರ್ ಅಭಿಯಾನಕ್ಕೆ, ಇಂಧನ ಸಚಿವ ವಿ.ಸುನಿಲ್ ಕುಮಾರ್ ಚಾಲನೆ ನೀಡಿದ್ದರು. ಸಚಿವರ ಸೂಚನೆ ಮೇರೆಗೆ ಅಭಿಯಾನವನ್ನು ಮುಂದುವರಿಸಲಾಗಿದ್ದು, ರಾಜ್ಯಾದ್ಯಂತ 2 ಲಕ್ಷಕ್ಕೂ ಅಧಿಕ ಟ್ರಾನ್ಸ್ ಫಾರ್ಮರ್‌ಗಳ ನಿರ್ವಹಣೆಯ ಗುರಿಯನ್ನು ಎಲ್ಲ ಎಸ್ಕಾಂಗಳಿಗೆ ನೀಡಲಾಗಿತ್ತು. ಇದನ್ನೂ ಓದಿ: ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ – ಮಳೆ ದೇವನಿಗೆ ಸ್ಥಳೀಯರಿಂದ ವಿಶೇಷ ಪೂಜೆ
ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಹಾಗೂ ಜನನಿಬಿಢ ಪ್ರದೇಶಗಳಲ್ಲಿರುವ ಟ್ರಾನ್ಸ್ ಫಾರ್ಮರ್‌ಗಳ ಸಮಗ್ರ ನಿರ್ವಹಣೆಗೆ ಬೆಸ್ಕಾಂ ಕ್ರಮಕೈಗೊಂಡಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಮೇ 5 ರಿಂದ ಜುಲೈ 12 ವರೆಗೆ ನಿರ್ವಹಣೆ ಮಾಡಿರುವ 27,787 ಟ್ರಾನ್ಸ್ ಫಾರ್ಮರ್‌ಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ 9,524 ಟ್ರಾನ್ಸ್ ಫಾರ್ಮರ್‌ಗಳ ನಿರ್ವಹಣೆಯನ್ನು ಬೆಸ್ಕಾಂ ಮಾಡಿದೆ. ತುಮಕೂರು ಜಿಲ್ಲೆ- 5,232, ದಾವಣಗೆರೆ ಜಿಲ್ಲೆ- 2,906, ಚಿತ್ರದುರ್ಗ- 2,291, ಚಿಕ್ಕಬಳ್ಳಾಪುರ ಜಿಲ್ಲೆ- 2,646, ರಾಮನಗರ ಜಿಲ್ಲೆ- 2,372 ಮತ್ತು ಕೋಲಾರ ಜಿಲ್ಲೆಯಲ್ಲಿ 1,429 ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆಯನ್ನು ಬೆಸ್ಕಾಂ ಪೂರ್ಣಗೊಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ನಿರ್ವಹಣೆ ಮಾಡಿರುವ 9,524 ಟ್ರಾನ್ಸ್ ಫಾರ್ಮರ್‌ಗಳ ಪೈಕಿ ಬೆಸ್ಕಾಂನ ದಕ್ಷಿಣ ವೃತ್ತ- 2,713, ಪಶ್ಚಿಮ ವೃತ್ತ- 2,253, ಪೂರ್ವ ವೃತ್ತ- 1,961 ಮತ್ತು ಉತ್ತರ ವೃತ್ತದಲ್ಲಿ 1,946 ಟ್ರಾನ್ಸ್ ಫಾರ್ಮರ್‌ಗಳ ನಿರ್ವಹಣೆ ಮಾಡಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯಾದ್ಯಂತ ಮೇ 5 ರಿಂದ 20 ರವರೆಗೆ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನ ನಡೆಸಲು ಇಂಧನ ಇಲಾಖೆ ನಿರ್ಧರಿಸಿದೆ.
ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಾನ್ಸ್‌ಫಾರ್ಮರ್ ಸಂಬಂಧಿತ ಅವಘಡ ತಪ್ಪಿಸುವುದಕ್ಕಾಗಿ ರಾಜ್ಯಾದ್ಯಂತ ಮೇ 5 ರಿಂದ 20 ರವರೆಗೆ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನ ನಡೆಸಲು ತೀರ್ಮಾನಿಸಿದೆ. ಕಳೆದ ಒಂದು ತಿಂಗಳಲ್ಲಿ ನಡೆದ ಟ್ರಾನ್ಸ್‌ಫಾರ್ಮರ್ ದುರಂತಗಳ ಹಿನ್ನೆಲೆಯಲ್ಲಿ ಈ ಅಭಿಯಾನ ನಡೆಸಲು ತೀರ್ಮಾನಿಸಲಾಗಿದ್ದು, ಎಲ್ಲ ಹಂತದ ಅಧಿಕಾರಿಗಳಿಗೂ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ನೇಮಕಾತಿಯಲ್ಲಿ 300 ಕೋಟಿಗೂ ಅಕ್ರಮ: ಸಿದ್ದರಾಮಯ್ಯ ಬಾಂಬ್
ರಾಜ್ಯದಲ್ಲಿ ಹದಿನೈದು ವರ್ಷಕ್ಕಿಂತ ಹಳೆಯ ಪರಿವರ್ತಕಗಳು ಸಾಕಷ್ಟು ಪ್ರಮಾಣದಲ್ಲಿ ಇವೆ. ಮಳೆಗಾಲದಲ್ಲಿ ಅವುಗಳು ನಿರ್ವಹಣಾ ಸಮಸ್ಯೆ ಉಂಟಾಗುತ್ತಿವೆ. ಮಳೆಗಾಲದಲ್ಲಿ ಸಿಡಿಲು ಇತ್ಯಾದಿ ಕಾರಣಗಳಿಂದ ಪರಿವರ್ತಕಗಳ ಹಾನಿ ಸಾಧ್ಯತೆ ಇದೆ. ಜೊತೆಗೆ ಅಧಿಕ ಲೋಡ್‌ನಿಂದ ಟ್ರಾನ್ಸ್‌ಫಾರ್ಮರ್ ಹಾನಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಅಭಿಯಾನ ನಡೆಸಲಾಗುತ್ತಿದೆ.
ಅಭಿಯಾನದಲ್ಲಿ ಎಲ್ಲ ಹಂತದ ಅಧಿಕಾರಿಗಳೂ ಭಾಗಿಯಾಗಬೇಕು. ಪ್ರತಿ ದಿನ ಪರಿಶೀಲನೆ ನಡೆಸಿದ ಟ್ರಾನ್ಸ್‌ಫಾರ್ಮರ್‌ಗಳ ವಿವರ, ಅವುಗಳಲ್ಲಿ ಕಂಡುಬಂದ ನ್ಯೂನ್ಯತೆ, ಯಾವ ಕಾರಣಕ್ಕಾಗಿ ತೊಂದರೆ ಕಾಣಿಸಿಕೊಂಡಿದೆ ಎಂಬ ವಿವರವನ್ನು ಕೇಂದ್ರ ಕಚೇರಿಗೆ ಪ್ರತಿ ದಿನ ಕಳುಹಿಸಿಕೊಡುವಂತೆ ಸೂಚನೆ ನೀಡಲಾಗಿದೆ. ಪ್ರತಿ ವರ್ಷವೂ ಈ ರೀತಿ ಅಭಿಯಾನ ನಡೆಸುವುದರಿಂದ ಟ್ರಾನ್ಸ್‌ಫಾರ್ಮರ್‌ಗಳ ಕ್ಷಮತೆ ಹೆಚ್ಚಲಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆಗೆ ಆಗಸ್ಟ್ 15ರೊಳಗೆ ಶಂಕುಸ್ಥಾಪನೆ: ಬೊಮ್ಮಾಯಿ
ಟ್ರಾನ್ಸ್‌ಫಾರ್ಮರ್‌ಗಳ ರಿಪೇರಿಗೆ ಇಂಧನ ಇಲಾಖೆ ಪ್ರತಿವರ್ಷ 150 ಕೋಟಿ ರೂ. ವೆಚ್ಚ ಮಾಡುತ್ತದೆ. ನಿರ್ವಹಣಾ ಕೆಲಸವನ್ನು ಕಾಲ ಕಾಲಕ್ಕೆ ನಡೆಸಿದರೆ ರಿಪೇರಿ ವೆಚ್ಚ ತಗ್ಗಿಸುವುದಕ್ಕೆ ಸಾಧ್ಯವಿದೆ. ಜತೆಗೆ ಎಲ್ಲಿ ಹೊಸ ಟ್ರಾನ್ಸ್ ಫಾರ್ಮರ್‌ಗಳ ತುರ್ತು ಅಗತ್ಯವಿದೆ ಎಂಬುದನ್ನೂ ಈ ಅಭಿಯಾನದ ಮೂಲಕ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹದಿನೈದು ದಿನಗಳ ಕಾಲ ಅಭಿಯಾನ ನಡೆಸಲು ಸೂಚನೆ ನೀಡಲಾಗಿದೆ.
ಟ್ರಾನ್ಸ್ಫಾರ್ಮರ್ ನಲ್ಲಿ ಲೀಡ್ ವಯರ್ ಸುಟ್ಟು ಆಯಿಲ್ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ. ಬೆಳಗ್ಗೆ 11:50ರ ವೇಳೆಗೆ ಟ್ರಾನ್ಸ್‍ಫಾರ್ಮರ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಮಾಹಿತಿ ಕೊಟ್ಟಿದ್ದಾರೆ. ಆದರೆ ಸಿಬ್ಬಂದಿ ಅದರ ಕಡೆ ಗಮನಹರಿಸದೆ ನಿರ್ಲಕ್ಷ್ಯ ಮಾಡಿದ್ದಾರೆ. ಪರಿಣಾಮ ಈ ದುರಂತ ನಡೆದಿದೆ. ಟ್ರಾನ್ಸ್‍ಫಾರ್ಮರ್ ಮಧ್ಯಾಹ್ನ 3:10ಕ್ಕೆ ಸ್ಫೋಟಗೊಂಡಿತು. ದುರದೃಷ್ಟವಶಾತ್ ಅದೇ ದಾರಿಯಲ್ಲಿ ಶಿವರಾಜ್ ಮತ್ತು ಚೈತನ್ಯ ಬರುತ್ತಿದ್ದರು. ಈ ವೇಳೆ ಬೆಂಕಿಗೆ ತಗುಲಿ ತಂದೆ-ಮಗಳು ಮೃತಪಟ್ಟಿದ್ದಾರೆ. ಇದಕ್ಕಾಗಿ ನಾನು ವಿಷಾದಿಸುತ್ತೇನೆ. ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ನಾವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು.
ಬೆಂಗಳೂರು: ನಗರದಲ್ಲಿರುವ ಟ್ರಾನ್ಸ್ ಫಾರ್ಮರ್ ಗಳ ಸಂಪೂರ್ಣ ಆಡಿಟ್ ಮಾಡಲು ಆದೇಶ ಮಾಡಿದ್ದೇನೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ಶೂನ್ಯವೇಳೆ ಬೆಂಗಳೂರಿನ ಮಂಗನಹಳ್ಳಿಯಲ್ಲಿ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿ ತಂದೆ-ಮಗಳು ಮೃತರಾದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಟ್ರಾನ್ಸ್ ಫಾರ್ಮರ್ ಗಳ ಆಡಿಟ್ ಗೆ ಆದೇಶ ಮಾಡಲಾಗಿದೆ ಅಂತ ತಿಳಿಸಿದರು.
ಬೆಂಗಳೂರಿನ ಮಂಗನಹಳ್ಳಿಯಲ್ಲಿ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆದ ಪ್ರಕರಣವನ್ನ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ನ ಮಂಜುನಾಥ್ ಬಂಡಾರಿ ಪ್ರಸ್ತಾಪ ಮಾಡಿದರು. ಮಂಗನಹಳ್ಳಿ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿದೆ ತಂದೆ-ಮಗಳ ಮೃತರಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ಆಗಿದೆ. ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸೂಕ್ತ ಪರಿಹಾರ ನೀಡಬೇಕು ಅಂತ ಮನವಿ ಮಾಡಿದರು.ಇದನ್ನೂ ಓದಿ: ಟ್ರಾನ್ಸ್ ಫಾರ್ಮರ್ ಸ್ಫೋಟ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಯುವತಿಯೂ ಸಾವು
ಇದಕ್ಕೆ ಉತ್ತರ ನೀಡಿದ ಸಚಿವ ಸುನೀಲ್ ಕುಮಾರ್, ನಿನ್ನೆ ಟ್ರಾನ್ಸ್‍ಫಾರ್ಮರ್ ಸ್ಫೋಟಗೊಂಡು ತಂದೆ-ಮಗಳು ಮೃತರಾಗಿದ್ದಾರೆ. 250KW ಟ್ರಾನ್ಸ್ ಫಾರ್ಮರ್ ಇದಾಗಿದೆ. ಸ್ಥಳೀಯರು 12.50ಕ್ಕೆ ಕರೆ ಮಾಡಿ ಅಧಿಕಾರಿಗಳಿಗೆ ಟ್ರಾನ್ಸ್ ಫಾರ್ಮರ್ ದೋಷದ ಬಗ್ಗೆ ಮಾಹಿತಿ ಕೊಟ್ಟಿದ್ದರು. ಆದರೆ ಸೂಕ್ತ ಸಮಯಕ್ಕೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಮಧ್ಯಾಹ್ನ 3.10 ಕ್ಕೆ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿದೆ. ಅಧಿಕಾರಿಗಳ ಬೇಜವಾಬ್ದಾರಿ ಕೂಡಾ ಇದರಲ್ಲಿ ಇದೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಎಂಡಿ ಜೊತೆ ಮಾತಾಡಿ ಕ್ರಮ ತಗೋತೀವಿ ಅಂತ ಭರವಸೆ ನೀಡಿದರು. ಇದನ್ನೂ ಓದಿ: ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಊರೆಲ್ಲಾ ಅರಚಾಡಿ ಹೈ-ಡ್ರಾಮಾ ಮಾಡಿದ ಪತ್ನಿ
ನಮ್ಮ ಇಲಾಖೆಯಲ್ಲಿ ಹೀಗೆ ಮೃತರಾದರೆ 5 ಲಕ್ಷ ಕೊಡಲಾಗುತ್ತದೆ. ವಿಶೇಷ ಪ್ರಕರಣ ಅಂತ ಪರಿಗಣನೆ ಮಾಡಿ ಮೃತರಿಗೆ ತಲಾ 10 ಲಕ್ಷ ಪರಿಹಾರ ಇಲಾಖೆಯಿಂದ ನೀಡಲಾಗುತ್ತದೆ ಅಂತ ತಿಳಿಸಿದರು. ಇನ್ನು ಬೆಂಗಳೂರಿನಲ್ಲಿ ಅಪಾಯದ ಅಂಚಿನಲ್ಲಿರುವ ಟ್ರಾನ್ಸ್ ಫಾರ್ಮರ್ ಗಳ ಆಡಿಟ್ ಮಾಡಿಸಲು ಸೂಚನೆ ನೀಡಲಾಗಿದೆ.15 ವರ್ಷ ಮೇಲ್ಪಟ್ಟ ಟ್ರಾನ್ಸ್ ಫಾರ್ಮರ್ ಗಳನ್ನ ಬದಲಾವಣೆ ಮಾಡುವ ಬಗ್ಗೆ ಕ್ರಮವಹಿಸುತ್ತೇವೆ. ಆಡಿಟ್ ರಿಪೋರ್ಟ್ ಬಂದ ಕೂಡಲೇ ಟ್ರಾನ್ಸ್ ಫಾರ್ಮರ್ ಗಳ ಬಗ್ಗೆ ಕ್ರಮವಹಿಸುತ್ತೇವೆ ಅಂತ ತಿಳಿಸಿದರು.