Tag: ಟ್ರಾಕ್ಟರ್

  • ಟ್ರ್ಯಾಕ್ಟರ್ ಲೈಟ್ ಬೆಳಕಿನಲ್ಲಿ ನಡೆಯಿತು ನವ ಜೋಡಿಯ ನಿಶ್ಚಿತಾರ್ಥ

    ಟ್ರ್ಯಾಕ್ಟರ್ ಲೈಟ್ ಬೆಳಕಿನಲ್ಲಿ ನಡೆಯಿತು ನವ ಜೋಡಿಯ ನಿಶ್ಚಿತಾರ್ಥ

    ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಲೈಟ್ ಬೆಳಕಿನಲ್ಲಿಯೇ ನವ ಜೋಡಿಯ ನಿಶ್ಚಿತಾರ್ಥ ನಡೆದ ಅಪರೂಪದ ಘಟನೆ ನಡೆದಿದೆ.

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿಯಲ್ಲಿ ಈ ಅಪರೂಪದ ನಿಶ್ಚಿತಾರ್ಥ ನಡೆದಿದೆ. ಟ್ರ್ಯಾಕ್ಟರ್ ಲೈಟ್ ಬೆಳಕಿನಲ್ಲಿ ಗ್ರಾಮದ ಅಮರಪ್ಪ, ದುರ್ಗಮ್ಮ ದಂಪತಿಯ ಮಗಳಾದ ಮಾದ್ಯಮ್ಮ ಎಂಬವರ ನಿಶ್ಚಿತಾರ್ಥ ಮಾಡಿಕೊಡಲಾಗಿದೆ.

    ಎಲ್ಲಾ ಸರಿ ಇದ್ದಿದರೆ ಮಾದ್ಯಮ್ಮ ಹಾಗೂ ಸೋಮಣ್ಣ ನಿಶ್ಚಿತಾರ್ಥ ಕಾರ್ಯಕ್ರಮ, ವಿದ್ಯುತ್ ಬೆಳಕು ಇಲ್ಲವೇ ಸೋಲಾರು ಬೆಳಕಿನಲ್ಲಿ ನಡೆಯುತ್ತಿತ್ತು. ಆದರೆ ಕಳೆದ ಆಗಸ್ಟ್ ನಲ್ಲಿ ಬಂದ ಕೃಷ್ಣಾ ನದಿ ಪ್ರವಾಹಕ್ಕೆ ಗಡ್ಡಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ಗಡ್ಡಿ ಜನರು ಕಗ್ಗತ್ತಲಲ್ಲಿಯೇ ವಾಸ ಮಾಡುತ್ತಿದ್ದಾರೆ. ಇದರಿಂದ ನಿಶ್ಚಿತಾರ್ಥಕ್ಕೂ ವಿದ್ಯುತ್ ಬೆಳಕು ಸಿಗದಂತಾಗಿದೆ.

    ಅಲ್ಲದೆ ಗ್ರಾಮದಲ್ಲಿ ತಾತ್ಕಾಲಿಕವಾಗಿ ಸೋಲಾರ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದು ಸಹ ಸಂಪೂರ್ಣ ಹಾಳಾಗಿದೆ, ಹೀಗಾಗಿ ನೀಲಕಂಠರಾಯನಗಡ್ಡಿ ಗ್ರಾಮದ ಜನರು ಮೂರು ತಿಂಗಳಿನಿಂದ ಕತ್ತಲಲ್ಲಿದ್ದಾರೆ. ಜೆಸ್ಕಾಂ ಅಧಿಕಾರಿಗಳು ಪ್ರವಾಹ ತಗ್ಗಿದ ಬಳಿಕ ಕಂಬಗಳ ಅಳವಡಿಸಿ ಈ ಗ್ರಾಮಕ್ಕೆ ಬೆಳಕಿನ ಭಾಗ್ಯ ಕಲ್ಪಿಸಬೇಕಾಗಿತ್ತು. ಆದರೆ ಅಧಿಕಾರಿಗಳು ನಿಷ್ಕಾಳಜಿ ತೋರುತ್ತಿದ್ದು, ನೀಲಕಂಠರಾಯನ ಗಡ್ಡಿ ಗ್ರಾಮಸ್ಥರು ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.

  • ಚಲುವರಾಯಸ್ವಾಮಿ ಸಂಬಂಧಿಕರಿಂದ ಟ್ರ್ಯಾಕ್ಟರ್ ಹತ್ತಿಸಿ ರೈತರ ಹತ್ಯೆಗೆ ಯತ್ನ?

    ಚಲುವರಾಯಸ್ವಾಮಿ ಸಂಬಂಧಿಕರಿಂದ ಟ್ರ್ಯಾಕ್ಟರ್ ಹತ್ತಿಸಿ ರೈತರ ಹತ್ಯೆಗೆ ಯತ್ನ?

    ಮಂಡ್ಯ: ಜಿಲ್ಲೆಯ ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಚಲುವರಾಯಸ್ವಾಮಿ ಅವರ ಸಂಬಂಧಿಕರು ಎನ್ನಲಾದವರಿಂದ ಟ್ರ್ಯಾಕ್ಟರ್ ಹತ್ತಿಸಿ ರೈತರ ಕುಟುಂಬವನ್ನು ಹತ್ಯೆ ಮಾಡಲು ಯತ್ನಿಸಿ ದರ್ಪ ಮೆರೆದಿರುವ ಘಟನೆಯೊಂದು ನಡೆದಿದೆ.

    ಕೋರೆ ನಡೆಸಲು ಜಮೀನು ಕೊಡಲಿಲ್ಲ ಎಂದು ಟ್ರ್ಯಾಕ್ಟರ್ ಹತ್ತಿಸಿ ರೈತ ಕುಟುಂಬವನ್ನು ಕೊಲ್ಲಲು ಮುಂದಾಗಿದ್ದಾರೆ. ಬುಧವಾರ ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಜ್ಜಲಘಟ್ಟ ಗ್ರಾಮದ ರೈತ ಮರಿಗೌಡ ಹಾಗೂ ಅವರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

    ಮರಿಗೌಡ ಅವರ ಜಮೀನಿನ ಪಕ್ಕದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ತೆಗೆದುಕೊಳ್ಳಲಾಗಿತ್ತು. ಹಾಗೆಯೇ ಮರಿಗೌಡರ ಜಮೀನಿನ ಮೇಲೂ ಕಣ್ಣು ಇಟ್ಟಿದ್ದ ಅವರು, ಜಮೀನನ್ನು ಬಿಟ್ಟು ಕೊಡಿ ಎಂದು ಕಿರಿಕ್ ತೆಗೆದಿದ್ದಾರೆ. ಆದರೆ ನಾನು ನನ್ನ ಜಮೀನಿನಲ್ಲಿ ತೆಂಗಿನ ಗಿಡ ನೆಟ್ಟಿದ್ದೇನೆ, ನಾನು ಇದನ್ನು ಬಿಟ್ಟು ಕೊಡಲ್ಲ ಎಂದು ಮರಿಗೌಡರು ನಿರಾಕರಿಸಿದ್ದರು.

    ಇಷ್ಟಕ್ಕೆ ಕೋಪಗೊಂಡ  ಮಾಜಿ ಶಾಸಕರ ಸಂಬಂಧಿಕರು ಎನ್ನಲಾದವರು ತಮ್ಮ ಬೆಂಬಲಿಗರೊಂದಿಗೆ ಜಮೀನಿಗೆ ಬಂದು ಗಲಾಟೆ ಮಾಡಿದ್ದಾರೆ. ಜಮೀನಿನಲ್ಲಿದ್ದ ತೆಂಗಿನ ಗಿಡಗಳು ಮತ್ತು ಡ್ರಿಪ್ ಪೈಪ್‍ಗಳನ್ನು ಕಿತ್ತು ಹಾಕಿ ದರ್ಪ ಮೆರೆದಿದ್ದಾರೆ. ಇದಾದ ಬಳಿಕ ಮರಿಗೌಡರಿಗೆ ಹಾಗೂ ಅವರ ಮಗ, ಮಗಳು, ತಾಯಿ, ಹೆಂಡತಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೆ ಮಾಡಲು ಯತ್ನಿಸಿದ್ದಾರೆ.

    ರೈತ ಕುಟುಂಬದ ಮೇಲೆ ದರ್ಪ ಮೆರೆದಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ಸಂಬಂಧ ರೈತ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ಬಗ್ಗೆ ಮಾಜಿ ಶಾಸಕ ಚಲುವರಾಯ ಸ್ವಾಮಿ ಅವರ ಅಣ್ಣನ ಮಗ  ಉಮೇಶ್ ಪ್ರತಿಕ್ರಿಯಿಸಿ, ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ರಾಜಿ ಪಂಚಾಯ್ತಿ ಮಾಡಲೆಂದು ಸ್ಥಳಕ್ಕೆ ತೆರಳಿದ್ದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಬೆಂಕಿ ಹತ್ತಿದ್ದ ಟ್ರ್ಯಾಕ್ಟರನ್ನು ಕೆರೆಗೆ ಇಳಿಸಿ ಅನಾಹುತ ತಪ್ಪಿಸಿದ ಚಾಲಕ

    ಬೆಂಕಿ ಹತ್ತಿದ್ದ ಟ್ರ್ಯಾಕ್ಟರನ್ನು ಕೆರೆಗೆ ಇಳಿಸಿ ಅನಾಹುತ ತಪ್ಪಿಸಿದ ಚಾಲಕ

    ಬಾಗಲಕೋಟೆ: ಮೇವು ಕೊಂಡೊಯ್ಯುತ್ತಿದ್ದ ಟ್ರ್ಯಾಕ್ಟರ್ ಲೋಡಿಗೆ ಬೆಂಕಿ ತಗುಲಿದ್ದನ್ನು ಅರಿತ ಚಾಲಕ ಟ್ರ್ಯಾಕ್ಟರನ್ನೇ ಕೆರೆಗೆ ಇಳಿಸಿ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಚಾಲಕ ಯಂಕಪ್ಪ ಜಾಣ್ಮೆಯಿಂದ ಟ್ರ್ಯಾಕ್ಟರನ್ನು ಕೆರೆಗೆ ಇಳಿಸುವ ಮೂಲಕ ಆಗಬಹುದಾಗಿದ್ದ ಭಾರೀ ಅನಾಹುತವನ್ನು ತಡೆದಿದ್ದಾರೆ. ಈ ಘಟನೆಯಿಂದಾಗಿ ಸುಮಾರು 30 ಸಾವಿರ ಮೌಲ್ಯದ ಮೇವು ಹಾಗೂ ಟ್ರ್ಯಾಕ್ಟರ್ ಎಂಜಿನಿಗೆ ಹಾನಿಯಾಗಿದೆ. ಬೆಂಕಿ ಅನಾಹುತವನ್ನು ತಪ್ಪಿಸಿದ ಚಾಲಕನಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಟ್ರ್ಯಾಕ್ಟರ್ ಗೆ ಬೆಂಕಿ ತಗುಲಿ, ಕೆರೆಗೆ ಇಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಏನಿದು ಘಟನೆ?
    ಕಳೆದ ಎರಡು ದಿನಗಳ ಹಿಂದೆ ಜಮ್ಮನಕಟ್ಟಿ ಗ್ರಾಮದ ಬಳಿ, ರೈತ ಸಂಜೀವ ಜಲಗೇರಿ ಎಂಬವರಿಗೆ ಸೇರಿದ್ದ ಮೇವಿನ ಲೋಡನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗುತ್ತಿತ್ತು. ಈ ವೇಳೆ ಹುಲ್ಲಿನ ಬಣವೆಯ ಎತ್ತರ ಜಾಸ್ತಿಯಾಗಿದ್ದರಿಂದ, ರಸ್ತೆಯಲ್ಲಿ ಹೋಗುತ್ತಿರುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿತ್ತು. ಬೆಂಕಿಯನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಚಾಲಕ ಯಂಕಪ್ಪನಿಗೆ ತಿಳಿಸಿದ್ದರು.

    ಕೂಡಲೇ ಎಚ್ಚೆತ್ತ ಯಂಕಪ್ಪ ಟ್ರ್ಯಾಕ್ಟರನ್ನು ಗ್ರಾಮಸ್ಥರ ಸೂಚನೆಯಂತೆ ಕೆರೆಯಲ್ಲಿ ಇಳಿಸಲು ಮುಂದಾಗಿದ್ದನು. ಆದರೆ ಎರಡೂ ಕಡೆ ಬಣವೆಗಳಿದ್ದರಿಂದ ಟ್ರ್ಯಾಕ್ಟರನ್ನು ಗ್ರಾಮಸ್ಥರ ಸಹಾಯದಿಂದ ಹೊರಗೆ ತಂದು, ಹತ್ತಿರದ ಕೆರೆಯಲ್ಲಿ ಅರ್ಧದವರೆಗೂ ಇಳಿಸಿದ್ದಾರೆ. ಟ್ರ್ಯಾಕ್ಟರ್ ಕೆರೆಗೆ ಇಳಿಯುತ್ತಿದ್ದಂತೆ ಗ್ರಾಮಸ್ಥರು ನೀರು ಎರಚಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗೇ ಬೆಂಕಿಯಿಟ್ಟ ಅನ್ನದಾತ..!

    ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಗೇ ಬೆಂಕಿಯಿಟ್ಟ ಅನ್ನದಾತ..!

    ಚಿಕ್ಕೋಡಿ: ಜಿಲ್ಲೆಯ ಅಥಣಿ ತಾಲೂಕಿನ ಉಗಾರ ಪಟ್ಟಣದಲ್ಲಿ ಶನಿವಾರ ರೈತರು ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಗೆ ಬೆಂಕಿ ಇಟ್ಟು ಸಕ್ಕರೆ ಕಾರ್ಖಾನೆಗಳ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಥಣಿ ತಾಲೂಕಿನ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣವನ್ನು ರೈತರಿಗೆ ಕೊಡಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ಕಬ್ಬು ಬೆಳೆಗಾರರಿಗೆ ಅಥಣಿಯ 4 ಸಕ್ಕರೆ ಕಾರ್ಖಾನೆಗಳಿಂದ ಬಿಲ್ ಬಾಕಿ ಸಂದಾಯವಾಗಿಲ್ಲ. ಇದರಿಂದ ರೊಚ್ಚಿಗೆದ್ದ ರೈತರು ಕಬ್ಬು ತುಂಬಿದ್ದ ಟ್ರ್ಯಾಕ್ಟರ್‍ಗೆ ಬೆಂಕಿ ಇಟ್ಟಿದ್ದಾರೆ. ಕಾರ್ಖಾನೆ ಮಾಲೀಕರು ಬಾಕಿ ಬಿಲ್ ಹಣವನ್ನು ರೈತರಿಗೆ ಸಂದಾಯ ಮಾಡುವವರೆಗೂ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಕಳಿಸೊಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

    ಅಷ್ಟೇ ಅಲ್ಲದೆ ಶನಿವಾರದಂದು ಕಬ್ಬು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ ನಡೆಸಿ ಟ್ರ್ಯಾಕ್ಟರ್‍ನಲ್ಲಿದ್ದ ಕಬ್ಬಿಗೆ ಬೆಂಕಿ ಇಟ್ಟು, ಟ್ರ್ಯಾಕ್ಟರ್‍ರನ್ನು ಪಲ್ಟಿ ಮಾಡಿದ್ದಾರೆ. ಈ ಘಟನೆ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪುರುಷರಿಗೆ ಸಮನಾಗಿ ಮಾಡ್ತಾರೆ ಕೆಲಸ – ಇದು ಚಿಕ್ಕಬಳ್ಳಾಪುರ ಹೆಣ್ಮಕ್ಕಳ ಸಾಹಸಗಾಥೆ

    ಪುರುಷರಿಗೆ ಸಮನಾಗಿ ಮಾಡ್ತಾರೆ ಕೆಲಸ – ಇದು ಚಿಕ್ಕಬಳ್ಳಾಪುರ ಹೆಣ್ಮಕ್ಕಳ ಸಾಹಸಗಾಥೆ

    ಚಿಕ್ಕಬಳ್ಳಾಪುರ: ‘ಹೆಣ್ ಮಕ್ಕಳೆ ಸ್ಟ್ರಾಂಗು ಗುರು’ ಅನ್ನೋ ಯೋಗರಾಜ್ ಭಟ್ಟರ ಸಾಲುಗಳನ್ನು ಅಕ್ಷರಶಃ ನಿಜವಾಗಿಸಿದ್ದಾರೆ. ಹಳ್ಳಿಗಳಲ್ಲಿ ಅಡುಗೆ ಮನೆಗೆ ಮಾತ್ರವೇ ಸೀಮಿತವಾಗುವಂತಹ ಮಹಿಳೆಯರ ನಡುವೆ ನಾವ್ ಯಾರಿಗೇನು ಕಮ್ಮಿ ಇಲ್ಲಾ ಅನ್ನೋ ಹಾಗೆ ಮಹಿಳೆಯರಿಬ್ಬರು ದಿಟ್ಟ ಹೆಜ್ಜೆ ಇಟ್ಟು ಟ್ರ್ಯಾಕ್ಟರ್ ಚಲಾಯಿಸುತ್ತಾ ಭರ್ಜರಿ ಕೃಷಿಕಾಯಕ ಮಾಡಿದ್ದಾರೆ.

    ಟ್ರ್ಯಾಕ್ಟರ್ ನ ಸ್ಟೇರಿಂಗ್ ಹಿಡಿದು ಹೊಲದಲ್ಲಿ ಉಳುಮೆ ಮಾಡುವುದು ಮಾತ್ರವಲ್ಲ, ಪುರುಷರಿಗೆ ಸರಿಸಮಾನಾಗಿ ಸರಾಗವಾಗಿ ಟ್ರಾಕ್ಟರ್ ಚಾಲನೆ ಮಾಡುತ್ತಾ ಎಲ್ಲ ರೀತಿಯ ಕೃಷಿ ಕಾಯಕಗಳನ್ನ ಮಾಡುತ್ತಾರೆ. ಇವರು ಚಿಕ್ಕಬಳ್ಳಾಪುರ ತಾಲೂಕಿನ ಬೀರಗಾನಹಳ್ಳಿ ಗ್ರಾಮದ ಅಪರೂಪದ ಮಹಿಳೆಯರು.

    ಗ್ರಾಮದ ಕೇಶವರೆಡ್ಡಿ ಅವರ ಪತ್ನಿ ಪ್ರಮೀಳಾ ಹಾಗೂ ಕೇಶವರೆಡ್ಡಿ ಸಹೋದರ ಚಂದ್ರಶೇಖರ್ ಅವರ ಪತ್ನಿ ಮಾನಸ ಎಂಬ ನಾದಿನಿಯರು ಕಳೆದ ಆರೇಳು ವರ್ಷಗಳಿಂದಲೂ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡುತ್ತಿದ್ದಾರೆ. ಪುರಷರಷ್ಟೇ ಸರಿಸಮಾನಾಗಿ ಸರಾಗವಾಗಿ ಮಿನಿ ಟ್ರ್ಯಾಕ್ಟರ್ ಚಾಲನೆ ಮಾಡುವ ಈ ಇಬ್ಬರು ಮಹಿಳೆಯರು ಟ್ರ್ಯಾಕ್ಟರ್ ಮೂಲಕ ಹೊಲ ಉಳುವುದು, ಕಳೆ ಕೀಳುವುದು, ದ್ರಾಕ್ಷಿ ತೋಟದಲ್ಲಿ ಔಷಧಿ ಸಿಂಪಡಿಸುವುದು ಸೇರಿದಂತೆ ಪುರುಷರಿಗೆ ಸರಿಸಮಾನಾಗಿ ನಾನಾ ಕೃಷಿಕಾಯಕಗಳನ್ನ ಮಾಡುತ್ತಿದ್ದಾರೆ.

    ಸುಮಾರು 10 ಎಕರೆ ಕೃಷಿ ಭೂಮಿ ಹೊಂದಿರುವ ನಾವು ನಿತ್ಯ ಬೆಳಗ್ಗೆ ದ್ರಾಕ್ಷಿ, ಹೂಗಳನ್ನು ಮಾರುಕಟ್ಟೆಗೆ ತಲುಪಿಸುವದರಲ್ಲಿ ಬ್ಯುಸಿಯಾಗಿರುತ್ತೇವೆ. ಇತ್ತ ನಮ್ಮ ಪತ್ನಿಯರು ಟ್ರ್ಯಾಕ್ಟರ್ ಮೂಲಕ ಕೃಷಿ ಚಟುವಟಿಕೆ ಮಾಡುತ್ತಾರೆ. ಒಬ್ಬರು ಟ್ರ್ಯಾಕ್ಟರ್ ಏರಿ ಬಿತ್ತನೆ ಕಾರ್ಯ ನಡೆಸಿದರೆ, ಮತ್ತೊಬ್ಬರು ದ್ರಾಕ್ಷಿ ತೋಟದಲ್ಲಿ ಔಷಧಿ ಸಿಂಪಡಿಸುತ್ತಾರೆ. ತಮ್ಮ ಹೆಂಡತಿ ಇಷ್ಟೆಲ್ಲಾ ತಮಗೆ ಸಾಥ್ ಕೊಡುತ್ತಿರುವುದು ನಮಗೆ ಸಖತ್ ಖುಷಿ ತಂದಿದೆ ಅಂತ ಪ್ರಮೀಳಾ ಪತಿ ಕೇಶವರೆಡ್ಡಿ ಮತ್ತು ಮಾನಸ ಅವರ ಪತಿ ಚಂದ್ರಶೇಖರ್ ಹೇಳಿದ್ದಾರೆ.

    ಮನೆಗೆಲಸ ಜೊತೆ ಜೊತೆಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಈ ಮಹಿಳೆಯರ ಕಾರ್ಯ ಇಡೀ ಗ್ರಾಮಸ್ಥರನ್ನ ಹುಬ್ಬೇರಿಸುವಂತೆ ಮಾಡಿದೆ. ಗಂಡಂದಿರಿಗೆ ಹೆಗಲು ಕೊಡುತ್ತಾ ಕೃಷಿ ಕಾಯಕದಲ್ಲೂ ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋ ಹಾಗೆ ತೊಡಗಿಸಿಕೊಂಡಿರುವ ಈ ಹೆಣ್ಮಕ್ಕಳ ಕಾಯಕ ಹಲವು ಮಹಿಳೆಯರಿಗೆ ಸ್ಫೂರ್ತಿಯಾಗಲಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮರಳು ತುಂಬಿದ್ದ ಟ್ರ್ಯಾಕ್ಟರ್, ಬೈಕ್‍ಗೆ ಡಿಕ್ಕಿ- ಗೃಹ ಪ್ರವೇಶದ ಆಮಂತ್ರಣ ಕೊಡಲು ಹೋಗುತ್ತಿದ್ದ ಪೇದೆ ಸಾವು!

    ಮರಳು ತುಂಬಿದ್ದ ಟ್ರ್ಯಾಕ್ಟರ್, ಬೈಕ್‍ಗೆ ಡಿಕ್ಕಿ- ಗೃಹ ಪ್ರವೇಶದ ಆಮಂತ್ರಣ ಕೊಡಲು ಹೋಗುತ್ತಿದ್ದ ಪೇದೆ ಸಾವು!

    ರಾಮನಗರ: ಮರಳು ತುಂಬಿದ್ದ ಟ್ರ್ಯಾಕ್ಟರ್- ಬೈಕ್ ಗೆ ಡಿಕ್ಕಿಯಾಗಿ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿದ್ದ ಘಟನೆ ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿ ಗ್ರಾಮದ ಬಳಿ ನಡೆದಿದೆ.

    ನಾಗರಾಜ್(40) ಮೃತ ಪೇದೆ. ನಾಗರಾಜ್ ಹಾಗೂ ಪುತ್ರಿ ತಮ್ಮ ಮನೆಯ ಗೃಹ ಪ್ರವೇಶದ ಆಮಂತ್ರಣ ಪತ್ರಿಕೆ ಕೊಡಲು ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಘಟನೆಯಲ್ಲಿ ಮೃತ ನಾಗರಾಜು ಪುತ್ರಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಪೇದೆ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಈ ಬಗ್ಗೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟ್ರಾಕ್ಟರ್ ಪಲ್ಟಿ- ಇಂಜಿನ್ ಕೆಳಗೆ ಸಿಲುಕಿ ಚಾಲಕ ಸಾವು

    ಟ್ರಾಕ್ಟರ್ ಪಲ್ಟಿ- ಇಂಜಿನ್ ಕೆಳಗೆ ಸಿಲುಕಿ ಚಾಲಕ ಸಾವು

    ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ಇಂಜಿನ್ ಕೆಳಗೆ ಸಿಲುಕಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನ ಮಂಜುನಾಥ ಕಡೇಮನಿ (18) ಎಂದು ಗುರುತಿಸಲಾಗಿದೆ. ಮೃತ ಮಂಜುನಾಥ ಕಬ್ಬಿನ ಗದ್ದೆಗೆ ಕೂಲಿ ಕಾರ್ಮಿಕರನ್ನ ಬಿಟ್ಟು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

    ಇಂಜಿನ್ ಕೆಳಗೆ ಸಿಕ್ಕಿಹಾಕಿಕೊಂಡಿದ್ದ ಮೃತದೇಹವನ್ನು ಹೊರಕ್ಕೆ ತೆಗೆಯಲು ಸ್ಥಳೀಯರು ಹಾಗೂ ಪೊಲೀಸರು ಕೆಲಕಾಲ ಹರಸಹಾಸ ಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಆಡೂರು ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೂಲಿ ಕೇಳಲು ಹೋದವನ ಮೇಲೆ ಮಾರಣಾಂತಿಕ ಹಲ್ಲೆ- ಸಾವು ಬದುಕಿನ ಮಧ್ಯೆ ಕಾರ್ಮಿಕ ಹೋರಾಟ

    ಕೂಲಿ ಕೇಳಲು ಹೋದವನ ಮೇಲೆ ಮಾರಣಾಂತಿಕ ಹಲ್ಲೆ- ಸಾವು ಬದುಕಿನ ಮಧ್ಯೆ ಕಾರ್ಮಿಕ ಹೋರಾಟ

    ಬೆಂಗಳೂರು: ಟ್ರ್ಯಾಕ್ಟರ್ ಕೆಲಸದ ಕೂಲಿ ಕೇಳಲು ಹೋದ ಕಾರ್ಮಿಕನ ಮೇಲೆ ತೋಟದ ಮಾಲೀಕ ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

    ಗಿರೀಶ್ ಹಲ್ಲೆಗೊಳಗಾದ ವ್ಯಕ್ತಿ. ತೋಟದ ಮನೆಯಲ್ಲಿ ಕೂಡಿ ಹಾಕಿ ಮಾಲೀಕ ರಮ್‍ನಾಯಕ್ ಮತ್ತು ಆತನ ಚೇಲಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

    ಗಿರೀಶ್ ಶನಿವಾರ ಬೆಂಗಳೂರಿನ ಕಗ್ಗಲಿಪುರದ ಬಾದೆಕಟ್ಟೆಯ ತೋಟದ ಮನೆಗೆ ಹೋಗಿದ್ದರು. ಆದರೆ ಶನಿವಾರ ಮತ್ತೆ ಮನೆಗೆ ವಾಪ್ಸಾಗಿರಲಿಲ್ಲ. ಜೊತೆಗೆ ಫೋನ್ ಸ್ವಿಚ್ ಆಫ್ ಆಗಿತ್ತು. ಈ ವೇಳೆ ಸಂಶಯಗೊಂಡ ಕುಟುಂಬಸ್ಥರು ಬಾದೆಕಟ್ಟೆ ಗ್ರಾಮದ ತೋಟದ ಮನೆಗೆ ಹೋಗಿ ನೋಡಿದಾಗ ಗಿರೀಶ್ ಸಾವು ಬದುಕಿನ ನಡುವೆ ನರಳಾಡುತ್ತಿದ್ದರು. ಕೂಡಲೇ ಗಿರೀಶ್ ನನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

    ಈ ಸಂಬಂಧ ಬೆಂಗಳೂರು ಹೊರವಲಯದ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇತ್ತ ಮಾಲೀಕನ ಮತ್ತವನ ಬಂಟರ ವಿರುದ್ಧ ದೂರು ಕೊಟ್ಟರು ಕೇವಲ ಸ್ಟೇಷನ್‍ಗೆ ಕರೆಸಿ ಬಿಟ್ಟು ಕಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಾತ್ರವಲ್ಲದೇ ಆರೋಪಿಗಳನ್ನು ಬಂಧಿಸುವಂತೆ ಗಿರೀಶ್ ಕಡೆಯವರು ಶನಿವಾರ ರಾತ್ರಿ ರಸ್ತೆ ತಡೆದು ಪ್ರತಿಭಟಿಸಿದ್ದರು.

     

     

  • ಕೂದಲೆಳೆ ಅಂತರದಲ್ಲಿ ಪಾರಾಯ್ತು ಹಳಿಯಲ್ಲಿದ್ದ ಟ್ರಾಕ್ಟರ್: ವಿಡಿಯೋ ನೋಡಿ

    ಕೂದಲೆಳೆ ಅಂತರದಲ್ಲಿ ಪಾರಾಯ್ತು ಹಳಿಯಲ್ಲಿದ್ದ ಟ್ರಾಕ್ಟರ್: ವಿಡಿಯೋ ನೋಡಿ

    ಲಂಡನ್: ಟ್ರಾಕ್ಟರ್‍ವೊಂದು ಹಳಿ ದಾಟುವಾಗ ರೈಲಿನಿಂದ ಡಿಕ್ಕಿಯಾಗುವುದರಿಂದ ಮಿಂಚಿನಂತೆ ಪಾರಾಗಿರುವ ಆಶ್ಚರ್ಯಕರ ಘಟನೆಯೊಂದು ಲಂಡನ್‍ನಲ್ಲಿ ನಡೆದಿದೆ.

    ಲಂಡನ್‍ನ ಲೀಸೆಸ್ಟರ್ಶೈರ್ (ಸ್ಥಳೀಯ ಪೊಲೀಸ್ ಇಲಾಖೆ) ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋ ರೈಲು ಅತಿ ವೇಗದಿಂದ ಚಲಿಸುತ್ತಿದ್ದು, ರೈಲ್ವೆ ಕ್ರಾಸಿಂಗ್‍ನಲ್ಲಿ ಟ್ರಾಕ್ಟರ್ ಅಪಘಾತದಿಂದ ಕ್ಷಣಾರ್ಧದಲ್ಲಿ ಪಾರಾಗಿರುವ ದೃಶ್ಯಗಳು ಸೆರೆಯಾಗಿವೆ. ಜುಲೈ 27ರಂದು ಈ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.

    ಟ್ರಾಕ್ಟರನ್ನು 26 ವರ್ಷದ ಯುವಕನೊಬ್ಬ ಚಾಲನೆ ಮಾಡುತ್ತಿದ್ದನು. ಚಾಲಕ ಕ್ರಾಸಿಂಗ್ ದಾಟುವ ಮೊದಲು ಟೆಲಿಫೋನ್ ಮಾಹಿತಿ ಪಡೆಯದೇ ಮುನ್ನುಗ್ಗಿದ್ದಾನೆ. ಮಾಡಿದ ತಪ್ಪಿಗಾಗಿ 3000 ಪೌಂಡ್ ಮತ್ತು ರೈಲ್ವೆ ಚಾಲನೆಗೆ ಅಡ್ಡಿಪಡಿಸಿದಕ್ಕೆ 85 ಪೌಂಡ ದಂಡ ವಿಧಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    https://twitter.com/BTPLeics/status/890549147119611906

  • ಟ್ರಾಕ್ಟರ್‍ಗೆ ಬೈಕ್ ಡಿಕ್ಕಿ: ಸ್ಥಳದಲ್ಲಿ ಇಬ್ಬರ ಸಾವು

    ಟ್ರಾಕ್ಟರ್‍ಗೆ ಬೈಕ್ ಡಿಕ್ಕಿ: ಸ್ಥಳದಲ್ಲಿ ಇಬ್ಬರ ಸಾವು

    ಯಾದಗಿರಿ: ಟ್ರಾಕ್ಟರ್‍ಗೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಸಾವನ್ನಪ್ಪಿರುವ ಘಟನೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನಳ್ಳಿ ಗ್ರಾಮದ ಮಡಿವಾಳಪ್ಪ (27), ಗೊಲ್ಲಾಳಪ್ಪ(26) ಮೃತಪಟ್ಟ ವ್ಯಕ್ತಿಗಳು. ಈ ಅಪಘಾತವಾದ ತಕ್ಷಣವೇ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ.

    ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.