Tag: ಟ್ರಾಕ್ಟರ್

  • ಬೆಳಗಾವಿಯಲ್ಲಿ ಟ್ರೈಲರ್ ಸಮೇತ ನದಿಗೆ ಬಿದ್ದ ಟ್ರಾಕ್ಟರ್ – ಓರ್ವ ಕಣ್ಮರೆ, 12 ಮಂದಿ ಬಚಾವ್

    ಬೆಳಗಾವಿಯಲ್ಲಿ ಟ್ರೈಲರ್ ಸಮೇತ ನದಿಗೆ ಬಿದ್ದ ಟ್ರಾಕ್ಟರ್ – ಓರ್ವ ಕಣ್ಮರೆ, 12 ಮಂದಿ ಬಚಾವ್

    ಬೆಳಗಾವಿ: ನಿರಂತರ ಮಳೆಯಿಂದ ತುಂಬಿ ಹರಿಯುತ್ತಿದ್ದ ಘಟಪ್ರಭಾ ನದಿಗೆ (Ghataprabha River) 13 ಜನರಿದ್ದ ಟ್ರಾಕ್ಟರ್ (Tractor) ಮಗುಚಿ ಬಿದ್ದ ಪರಿಣಾಮ ಓರ್ವ ನಾಪತ್ತೆ ಆಗಿದ್ದು, 12 ಮಂದಿ ಬಚಾವ್ ಆದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

    ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆ (Rain) ಸುರಿಯುತ್ತಿದ್ದು, ಬ್ರಿಡ್ಜ್ ಕಮ್ ಬ್ಯಾರೇಜ್ ಸಂಪೂರ್ಣ ಜಲಾವೃತವಾಗಿತ್ತು. ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ನಂದಗಾಂವ್ ಬಳಿಯ ಮಧ್ಯೆ ಇರುವ ಬ್ರಿಡ್ಜ್ ಕಮ್ ಬ್ಯಾರೇಜ್ ಜಲಾವೃತವಾಗಿತ್ತು. ನದಿ ದಾಟುವ ಸಂದರ್ಭ 13 ಜನರಿದ್ದ ಟ್ರಾಕ್ಟರ್ ಟ್ರೈಲರ್ ಸಮೇತ ನೀರಿಗೆ ಬಿದ್ದಿದೆ. ಇದನ್ನೂ ಓದಿ: ನಮಗೆ ಫ್ರೀ ಬೇಡ, ಹೆಚ್ಚುವರಿ ಬಸ್ ಓಡಿಸಿ: ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ವಿದ್ಯಾರ್ಥಿನಿ ಕ್ಲಾಸ್

    ಅದೃಷ್ಟವಷಾತ್ 12 ಮಂದಿ ಈಜಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಓರ್ವ ನೀರಿನಲ್ಲಿ ಕಣ್ಮರೆಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಣ್ಮರೆಯಾದವನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಟ್ರಾಕ್ಟರ್‌ನಲ್ಲಿ ಪ್ರಯಾಣ ಮಾಡುತ್ತಿದ್ದವರು ಅವರಾದಿಯಿಂದ ನಂದಗಾಂವ್‌ಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಬ್ರಿಡ್ಜ್ ದಾಟುವಾಗ ಆಯತಪ್ಪಿ ಘಟಪ್ರಭಾ ನದಿಗೆ ಟ್ರಾಕ್ಟರ್ ಬಿದ್ದಿದೆ. ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಇನ್ನು 5 ದಿನ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆ

  • ಮಡಿಕೇರಿ ದಸರಾ ಶೋಭಯಾತ್ರೆ ವೇಳೆ ಅವಘಡ – ಇಬ್ಬರಿಗೆ ಗಾಯ

    ಮಡಿಕೇರಿ ದಸರಾ ಶೋಭಯಾತ್ರೆ ವೇಳೆ ಅವಘಡ – ಇಬ್ಬರಿಗೆ ಗಾಯ

    ಮಡಿಕೇರಿ: ಮಡಿಕೇರಿ ದಸರಾ (Mdikeri Dasara) ದಶಮಂಟಪಗಳ ಶೋಭಯಾತ್ರೆ (Procession) ವೇಳೆ ಮಂಟಪವೊಂದರ ಟ್ರಾಕ್ಟರ್ (Tractor) ಮಗುಚಿ ಬಿದ್ದಿದ್ದು, ಮೂವರು ಗಾಯಗೊಂಡಿದ್ದಾರೆ.

    ಶೋಭಯಾತ್ರೆ ಆರಂಭವಾದ ಬಳಿಕ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿಯ ಮಂಟಪವು ದೇಗುಲದಿಂದ ಮೆರವಣಿಗೆಯಲ್ಲಿ ಹೊರಟಿತ್ತು. ಡಿಸಿಸಿ ಬ್ಯಾಂಕ್ ಸಮೀಪ ಇಳಿಜಾರಿನ ರಸ್ತೆಯಲ್ಲಿ ಮಂಟಪ ಇರಿಸಲಾಗಿದ್ದ ಟ್ರಾಕ್ಟರ್ ಬುಧವಾರ ನಸುಕಿನ ಜಾವ 3:30ರ ವೇಳೆ ಮಗುಚಿದೆ. ಇದರಿಂದ ಮೂವರಿಗೆ ಗಾಯಗಳಾಗಿವೆ. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಅಪಾರ ನೂಕುನುಗ್ಗಲು ಉಂಟಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು ಪರದಾಡಿದರು. ಇದನ್ನೂ ಓದಿ: ಕೋಲಿನಿಂದ ಹೊಡೆದಾಡೋ ಜಾತ್ರೆ- ಮೂವರ ಸ್ಥಿತಿ ಗಂಭೀರ, ನೂರಕ್ಕೂ ಹೆಚ್ಚು ಮಂದಿಗೆ ಗಾಯ

    ಈ ಕುರಿತು ಪ್ರತಿಕ್ರಿಯಿಸಿದ ದೇಗುಲ ಸಮಿತಿಯ ಸದಸ್ಯರೊಬ್ಬರು, ದೇಗುಲದ ಸಮೀಪ ಹಾಗೂ ಮೆರವಣಿಗೆಯಲ್ಲಿ ಒಟ್ಟು ಎರಡು ಪ್ರದರ್ಶನ ನೀಡಿದ್ದೆವು. ನಸುಕಿನ ಜಾವ 4 ಗಂಟೆಗೆ ತೀರ್ಪುಗಾರರ ಮುಂದೆ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಆ ಸ್ಥಳ ತಲುಪುವ ಮುನ್ನ ಟ್ರಾಕ್ಟರ್ ಮಗುಚಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿ ಲಾಕರ್‌ನಲ್ಲಿದ್ದ 1.24 ಕೋಟಿ ಕಳವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಮಗುಚಿ ವ್ಯಕ್ತಿ ಸಾವು

    ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಮಗುಚಿ ವ್ಯಕ್ತಿ ಸಾವು

    ಚಾಮರಾಜನಗರ: ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಮಗುಚಿಕೊಂಡು ವ್ಯಕ್ತಿಯೋರ್ವ ಮೃತಪಟ್ಟಿರುವ ದಾರುಣ ಘಟನೆ ಚಾಮರಾಜನಗರದಲ್ಲಿ  (Chamarajanagara) ನಡೆದಿದೆ.

    ತಾಲೂಕಿನ ಕೊತ್ತಲವಾಡಿ (Kottalavadi) ಗ್ರಾಮದ ಶಿವಕುಮಾರ್ (30) ಮೃತಪಟ್ಟ ದುರ್ದೈವಿ. ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ತಕ್ಷಣವೇ ಚಿಕಿತ್ಸೆಗಾಗಿ ತೆರಕಣಾಂಬಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಕಿಡ್ನ್ಯಾಪ್‌ ಕಥೆ ಕಟ್ಟಿದ್ಳು – ಬಾಲಕಿ ಮಾಸ್ಟರ್‌ಮೈಂಡ್‌ಗೆ ಪೊಲೀಸರೇ ಶಾಕ್‌

    ತಮ್ಮ ಜಮೀನಿನಲ್ಲಿ ಉಳುಮೆ ಮಾಡುವಾಗ ಹೊಲದ ಏರಿಯಿಂದ ಮತ್ತೊಂದು ಜಮೀನಿಗೆ ಎರಡು ಪಲ್ಟಿ ಹೊಡೆದಿದೆ ಎನ್ನಲಾಗುತ್ತಿದೆ. ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ಶಿವಕುಮಾರ್‌ಗೆ ಆರು ತಿಂಗಳ ಮಗುವೊಂದು ಇದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಾಮರಾಜನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ದಾಂಡಿಯಾ ನೃತ್ಯ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ವ್ಯಕ್ತಿ ಸಾವು

    Live Tv
    [brid partner=56869869 player=32851 video=960834 autoplay=true]

  • ರೈತನ ಮನೆಗೆ ನುಗ್ಗಿದ ಫೈನಾನ್ಸ್ ಕಂಪನಿ ಅಧಿಕಾರಿಗಳು – ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹರಿಸಿದ್ರು

    ರೈತನ ಮನೆಗೆ ನುಗ್ಗಿದ ಫೈನಾನ್ಸ್ ಕಂಪನಿ ಅಧಿಕಾರಿಗಳು – ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹರಿಸಿದ್ರು

    ರಾಂಚಿ: ಟ್ರ್ಯಾಕ್ಟರ್ ಹಿಂಪಡೆಯಲು ರೈತನ ಮನೆಗೆ ನುಗ್ಗಿದ ಫೈನಾನ್ಸ್ ಕಂಪನಿ ಅಧಿಕಾರಿಗಳು ಆತನ ಗರ್ಭಿಣಿ ಮಗಳ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆಗೈದಿದ್ದಾರೆ.

    ಶುಕ್ರವಾರ ಜಾರ್ಖಂಡ್‍ನ ಹಜಾರಿಬಾಗ್‍ನಲ್ಲಿ ಈ ಘಟನೆ ನಡೆದಿದ್ದು, ಜನಪ್ರಿಯ ಫೈನಾನ್ಸ್ ಕಂಪನಿಯ ಅಧಿಕಾರಿಗಳು ರೈತರ ಮನೆಗೆ ತೆರಳಿ ಟ್ರ್ಯಾಕ್ಟರ್ ಹಿಂಪಡೆಯಲು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಅವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ಹಾಗೂ ರೈತನ ಮಗಳ ನಡುವೆ ವಾಗ್ವಾದ ನಡೆದಿದೆ. ನಂತರ ಗರ್ಭಿಣಿ ಮಹಿಳೆ ಟ್ರ್ಯಾಕ್ಟರ್‌ಗೆ ಅಡ್ಡ ಹಾಕಿ ನಿಂತಿದ್ದಾರೆ. ಈ ವೇಳೆ ಅಧಿಕಾರಿಗಳು ಆಕೆಯನ್ನು ಟ್ರಾಕ್ಟರ್‌ನಡಿ ತಳ್ಳಿ ಕೊಂದಿದ್ದಾರೆ. ಬಳಿಕ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಸಂಬಂಧಿಕರು ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: KPTCL ಪರೀಕ್ಷಾ ಅಕ್ರಮ: ಮತ್ತೆ ಮೂವರು ಆರೋಪಿಗಳ ಬಂಧನ – ಬಂಧಿತರ ಸಂಖ್ಯೆ 20ಕ್ಕೆ ಏರಿಕೆ

    ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಹಜಾರಿಬಾಗ್ ಎಸ್‍ಪಿ ಮನೋಜ್ ರತನ್ ಚೋಥೆ ಫೈನಾನ್ಸ್ ಕಂಪನಿಯ ಅಧಿಕಾರಿಗಳು ರೈತನ ಮನೆಗೆ ನುಗ್ಗಿದ ಬಳಿಕ ಟ್ರ್ಯಾಕ್ಟರ್‌ಗಾಗಿ ವಾದ ವಿವಾದ ನಡೆದಿದೆ. ಈ ಮಧ್ಯೆ ರೈತನ ಮಗಳಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ. ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲು ರೈತರ ಮನೆಗೆ ಹೋಗುವ ಮುನ್ನ ಫೈನಾನ್ಸ್ ಕಂಪನಿಯ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗೂ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಬೊಮ್ಮಾಯಿಗೆ ಕಪ್ಪುಪಟ್ಟಿ ಪ್ರದರ್ಶನ

    Live Tv
    [brid partner=56869869 player=32851 video=960834 autoplay=true]

  • 10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

    10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

    ಬೆಂಗಳೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಯಮಲೂರು ಬಳಿ ಕೋಟಿಗಟ್ಟಲೆ ಬೆಲೆಯ ವಿಲ್ಲಾಗಳಿಗೂ ಮಳೆಯ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಯಾಗಿದೆ.

    ಹೌದು ಕೋಟಿಗಟ್ಟಲೇ ಹಣ ಕೊಟ್ಟು ಖರೀದಿಸಿದ ಅತ್ಯಂತ ಪ್ರತಿಷ್ಟಿತ ವಿಲ್ಲಾಗಳಿಗೂ ಮಳೆಯ ನೀರು ನುಗ್ಗಿದ್ದು, ಮನೆಯಿಂದ ಹೊರಬರಲಾಗದೇ ಜನರು ಪರದಾಡುತ್ತಿದ್ದಾರೆ. ಲಕ್ಷಗಟ್ಟಲೇ ಬೆಲೆಯ ಐಷಾರಾಮಿ ಕಾರುಗಳು ನೀರಿಗೆ ಮುಳುಗಡೆಯಾಗಿದೆ. ವಿಲ್ಲಾದ ಜನ ಈಗ ಟ್ರ್ಯಾಕ್ಟರ್ ಮೂಲಕ ಸಂಚಾರ ಮಾಡುತ್ತಿದ್ದಾರೆ. ಐಟಿ ಬಿಟಿ ಕಂಪನಿ ಉದ್ಯೋಗಿಗಳಿಗೆ ಟ್ರಾಕ್ಟರ್‌ಗಳೇ ಆಸರೆಯಾಗಿದೆ. ಎಸಿ ಕಾರು, ಎಸಿ ಬಸ್‍ಗಳಲ್ಲಿ ಓಡಾಡುತ್ತಿದ್ದವರು ಇದೀಗ ಟ್ರಾಕ್ಟರ್‌ನಲ್ಲಿ ಪ್ರಯಾಣಿಸುವ ಸ್ಥಿತಿ ಎದುರಾಗಿದೆ.

    ಹೆಚ್‍ಎಎಲ್‍ಟು ಬೆಳ್ಳಂದೂರು ಸಂಪರ್ಕಿಸುವ ರಸ್ತೆಗಳಲ್ಲಿ ನಾಲ್ಕು ಆಡಿ ನೀರು ತುಂಬಿದ್ದು, ಐದು ನಿಮಿಷಕ್ಕೊಂದಂತೆ ಎರಡು ಕಡೆಗಳಲ್ಲಿ ಹತ್ತಕ್ಕೂ ಹೆಚ್ಚು ಟ್ರಾಕ್ಟರ್‌ಗಳು ಪ್ರಯಾಣಕ್ಕೆ ಸಿದ್ದವಾಗಿವೆ. ಇನ್ನೂ ಬೆಳ್ಳಂದೂರು, ಯಮಲೂರು, ಚಲ್ಲಘಟ್ಟ ಕಡೆಗಳಿಗೆ ಹೋಗುವವರ ಸ್ಥಿತಿ ಕೇಳುವವರೆ ಇಲ್ಲದಂತಾಗಿದೆ. ಇದನ್ನೂ ಓದಿ: ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು

    ಯಮಲೂರು, ಕೆರೆ ನೀರು, ರಾಜಕಾಲುವೆ ನೀರು ಐಟಿ, ಬಿಟಿ ಕಂಪನಿಗಳಿಗೂ ನುಗ್ಗಿದ್ದು ಅವಾಂತರ ಸೃಷ್ಟಿಯಾಗಿದೆ. ಇದೀಗ ಮಳೆ ನೀರನ್ನು ಹೊರ ತೆಗೆಯಲು ಕ್ರೈನ್‍ಗಳು, ಜೆಸಿಬಿಗಳು, ಅಗ್ನಿಶಾಮಕ ಸಿಬ್ಬಂದಿ, ಎನ್‍ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ಕಾಕ್‍ಪಿಟ್‍ನಲ್ಲಿ ಕೇಳಿಸಿತು ಶಿಳ್ಳೆ – ಮಧ್ಯದಲ್ಲಿಯೇ ಹಿಂದಿರುಗಿದ ವಿಸ್ತಾರ ವಿಮಾನ

    Live Tv
    [brid partner=56869869 player=32851 video=960834 autoplay=true]

  • KSRTC ಬಸ್, ಕಾರು, ಟ್ರ್ಯಾಕ್ಟರ್ ಒಂದಕ್ಕೊಂದು ಡಿಕ್ಕಿ – ಭೀಕರ ಅಪಘಾತದಲ್ಲಿ ಡಿಸಿಪಿ ಕುಟುಂಬ ಪಾರು

    KSRTC ಬಸ್, ಕಾರು, ಟ್ರ್ಯಾಕ್ಟರ್ ಒಂದಕ್ಕೊಂದು ಡಿಕ್ಕಿ – ಭೀಕರ ಅಪಘಾತದಲ್ಲಿ ಡಿಸಿಪಿ ಕುಟುಂಬ ಪಾರು

    ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್, ಕಾರು ಹಾಗೂ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.

    ಕೆಎಸ್‌ಆರ್‌ಟಿಸಿ ಬಸ್ ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ದಾಗ ದೇವನಹಳ್ಳಿ ಸಮೀಪದ ಚಿಕ್ಕಸಣ್ಣೆ ಬಳಿ ಕಲ್ಲು ಸಾಗಿಸುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದಿದೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಬಸ್, ಟ್ರ್ಯಾಕ್ಟರ್‌ನಿಂದ ತಪ್ಪಿಸಿಕೊಳ್ಳಲು ಹೋಗಿ ಕಾರಿಗೆ ಡಿಕ್ಕಿ ಹೊಡೆದು, ಟ್ರಾಕ್ಟರ್ ಮೇಲೆ ಹರಿದಿದೆ. ಅಲ್ಲದೇ ಬ್ಯಾರಿಕೇಡ್ ಭೇದಿಸಿಕೊಂಡು ರಸ್ತೆ ಬದಿಗೆ ಬಂದು ನಿಂತಿದೆ. ಘಟನೆಯಲ್ಲಿ ಬಸ್ ಚಾಲಕನಿಗೆ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಮಾಡುವಂತೆ ಸಿಎಂಗೆ ರಮೇಶ್ ಕುಮಾರ್ ಪತ್ರ

    ಸದ್ಯ ಕಾರಿನಲ್ಲಿದ್ದವರು ತೆಲಂಗಾಣ ಮೂಲದ ಗುಪ್ತಚರ ಇಲಾಖೆಯ ಡಿಸಿಪಿ ಹಾಗೂ ಅವರ ಕುಟುಂಬದವರು ಎಂದು ತಿಳಿದುಬಂದಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕಾರಿಗೆ ಡ್ಯಾಮೇಜ್ ಆಗಿದ್ದು, ಜೊತೆಗೆ ಬಸ್‍ನಲ್ಲಿದ್ದ ಕೆಲ ಪ್ರಯಾಣಿಕರಿಗೂ ಚಿಕ್ಕಪುಟ್ಟ ಗಾಯಗಳಾಗಿದೆ. ಇದೀಗ ಘಟನಾ ಸ್ಥಳಕ್ಕೆ ದೇವನಹಳ್ಳಿ ಸಂಚಾರಿ  ಪೊಲೀಸರು ಭೇಟಿ ನೀಡಿ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್‍ ಠಾಕ್ರೆ ಆಸ್ಪತ್ರೆಗೆ ದಾಖಲು- ನಾಳೆ ಶಸ್ತ್ರಚಿಕಿತ್ಸೆ

  • ಸ್ಕಿಡ್ ಆಗಿ ಕಮರಿಗೆ ಬಿದ್ದ ಸೈನಿಕರ ವಾಹನ: ಮೃತಪಟ್ಟ 7 ಯೋಧರು

    ಸ್ಕಿಡ್ ಆಗಿ ಕಮರಿಗೆ ಬಿದ್ದ ಸೈನಿಕರ ವಾಹನ: ಮೃತಪಟ್ಟ 7 ಯೋಧರು

    ಲೇಹ್: ತುರ್ತುಕ್ ಸೆಕ್ಟರ್‌ನ ಶ್ಯೋಕ್ ನದಿಗೆ ವಾಹನ ಬಿದ್ದ ಪರಿಣಾಮ 7 ಮಂದಿ ಸೈನಿಕರು ಸಾವನ್ನಪ್ಪಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಶುಕ್ರವಾರ ಲಡಾಖ್‍ನ ತುರ್ತುಕ್ ಸೆಕ್ಟರ್‌ನ ಶ್ಯೋಕ್ ನದಿಯ ಬಳಿ ಸೈನಿಕರು ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರ ವಾಹನ ಸ್ಕಿಡ್ ಆಗಿ ಕಮರಿಗೆ ಉರುಳಿದೆ. ಪರಿಣಾಮ 7 ಯೋಧರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಕಳೆದ ಎಂಟು ವರ್ಷಗಳಿಂದ ಬಡವರಿಗಾಗಿ ಮೋದಿ ಸರ್ಕಾರ ಕೆಲಸ ಮಾಡ್ತಿದೆ: ಪ್ರಹ್ಲಾದ್ ಜೋಶಿ 

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ಕೊಟ್ಟ ಅಧಿಕಾರಿಗಳು, 26 ಸೈನಿಕರ ತಂಡವು ಪರ್ತಾಪುರ್ ಟ್ರಾನ್ಸಿಟ್ ಕ್ಯಾಂಪ್‍ನಿಂದ ತುರ್ತುಕ್‍ನ ಮುಂದಿನ ಪ್ರದೇಶಕ್ಕೆ ಹೋಗುತ್ತಿದ್ದರು. ಈ ವೇಳೆ ಘಟನೆ ನಡೆದಿದೆ. ಗಾಯಗೊಂಡ ಸೈನಿಕರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ನೀಡಲು ಎಲ್ಲ ಪ್ರಯತ್ನ ನಡೆಯುತ್ತಿವೆ ಎಂದು ತಿಳಿಸಿದರು.

    ನಡೆದಿದ್ದೇನು?
    26 ಸೈನಿಕರ ತಂಡವು ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‍ನಿಂದ ಉಪವಲಯದ ಹನೀಫ್‍ಗೆ ತೆರಳುತ್ತಿತ್ತು. ಈ ವೇಳೆ ವಾಹನವು ರಸ್ತೆಯಲ್ಲಿ ಸ್ಕಿಡ್ ಆಗಿ ಶ್ಯೋಕ್ ನದಿಯಲ್ಲಿ ಬಿದ್ದಿದೆ. ಇದರ ಪರಿಣಾಮವಾಗಿ ಎಲ್ಲರಿಗೂ ಗಾಯಗಳಾಗಿವೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಬಸವಣ್ಣನವರ ಅನುಭವ ಮಂಟಪ ಪೀರಭಾಷಾ ಬಂಗ್ಲೆಯಾಗಿದೆ: ಚಂದ್ರಶೇಖರ ಸ್ವಾಮೀಜಿ 

  • ರಾಶಿ ಯಂತ್ರದಲ್ಲಿ ಸಿಲುಕಿ ಮಹಿಳೆ ದುರಂತ ಸಾವು

    ರಾಶಿ ಯಂತ್ರದಲ್ಲಿ ಸಿಲುಕಿ ಮಹಿಳೆ ದುರಂತ ಸಾವು

    ಬೀದರ್: ರಾಶಿ ಯಂತ್ರದಲ್ಲಿ ಸಿಲುಕಿ ರುಂಡ, ಮುಂಡ ಬೇರ್ಪಟ್ಟು ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೀದರ್ ತಾಲೂಕಿನ ಕುರನಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಸುವರ್ಣ ಬಾಲಾಜಿ ಚಿಕಲೆ(27) ಎಂದು ಗುರುತಿಸಲಾಗಿದೆ. ಮಹಿಳೆಯ ಸಾವಿಗೆ ಟ್ರಾಕ್ಟರ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಬಿಜೆಪಿ ಅಭ್ಯರ್ಥಿಗೆ ಸುಲಭವಾಗಿ ಸಿಗಲಿದೆ ಜಯ

    ರಾಶಿ ಬಳಿಕ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದಾಗಿ ಒಮ್ಮೆಲೇ ಗಾಡಿ ಮುಂದಕ್ಕೆ ಚಲಿಸಿದ್ದು ಈ ವೇಳೆ ಸುವರ್ಣಗೆ ವಾಹನ ತಗುಲಿ ರಾಶಿ ಯಂತ್ರದ ಪಾಯಿಂಟ್‍ನಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: Bulldozer is Back – ಟ್ರೆಂಡ್‌ ಆಯ್ತು ಬುಲ್ಡೋಜರ್‌, ಬುಲ್ಡೋಜರ್‌ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ

    ಕೂಲಿ ಕೆಲಸಕ್ಕೆ ಬಂದಿದ್ದ ಸುವರ್ಣ ಬಾಲಾಜಿ ಚಿಕಲೆ ಅವರ ಕೂದಲು ಟ್ರ್ಯಾಕ್ಟರ್ ಜಾಯಿಂಟ್‍ಗೆ ಸಿಲುಕಿ ಕುತ್ತಿಗೆಗೆ ಭಾಗಕ್ಕೆ ಗಾಯವಾಗಿ ದೇಹದಿಂದ ರುಂಡ ಬೇರ್ಪಟ್ಟು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದೀಗ ಪತಿ ಬಾಲಾಜಿ ನೀಡಿದ ದೂರಿನ ಮೇಲೆ ಜನವಾಡ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • 10ನೇ ತರಗತಿ ಹಾಲ್ ಟಿಕೆಟ್ ತರಲು ಹೋಗಿದ್ದ ವಿದ್ಯಾರ್ಥಿ ಸಾವು

    10ನೇ ತರಗತಿ ಹಾಲ್ ಟಿಕೆಟ್ ತರಲು ಹೋಗಿದ್ದ ವಿದ್ಯಾರ್ಥಿ ಸಾವು

    ಯಾದಗಿರಿ: ಹಾಲ್ ಟಿಕೆಟ್ ತರಲು ಶಾಲೆಗೆ ತೆರಳುತ್ತಿದ್ದ ಹತ್ತನೇಯ ತರಗತಿ ವಿದ್ಯಾರ್ಥಿ ಅಪಘಾತದಲ್ಲಿ ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

    ಸುರಪುರ ತಾಲೂಕಿನ ಚಿಕ್ಕನಹಳ್ಳಿಯ 10ನೇ ತರಗತಿ ವಿದ್ಯಾರ್ಥಿ ಮಂಜುನಾಥ(16) ಮೃತ ದುದೈವಿ. ಮಂಜುನಾಥ ಅವರ ತಂದೆ ಕನಕಪ್ಪ ಹಳ್ಳಿಯವರ ಟ್ರ್ಯಾಕ್ಟರ್ ಪಲ್ಟಿಯಾಗಿ ಸಾವನ್ನಪ್ಪಿದ್ದಾರೆ.

    ಚಿಕ್ಕನಹಳ್ಳಿಯಿಂದ ಬಾಚಿಮಟ್ಟಿ ಗ್ರಾಮದ ಪ್ರೌಢಶಾಲೆಗೆ ಮಂಜುನಾಥ ತನ್ನ ಹಾಲ್ ಟಿಕೆಟ್ ತರಲು ಟ್ರ್ಯಾಕ್ಟರ್ ನಲ್ಲಿ ಹೊರಟಿದ್ದ, ಈ ವೇಳೆ ಮಾರ್ಗ ಮಧ್ಯ ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ವಿದ್ಯಾರ್ಥಿ ಮಂಜುನಾಥ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಮಗನ ಅಗಲಿಕೆ ಹಿನ್ನಲೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದ ಪಿಡಿಓ

  • ನರೇಗಾ ಕಾಮಗಾರಿ ವೇಳೆ ಟ್ರಾಕ್ಟರ್ ಪಲ್ಟಿ – ಚಾಲಕ ಸಾವು

    ನರೇಗಾ ಕಾಮಗಾರಿ ವೇಳೆ ಟ್ರಾಕ್ಟರ್ ಪಲ್ಟಿ – ಚಾಲಕ ಸಾವು

    ತುಮಕೂರು: ನರೇಗಾ ಕಾಮಗಾರಿ ವೇಳೆ ಟ್ರಾಕ್ಟರ್ ಮಗುಚಿ ಚಾಲಕನೋರ್ವ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ದೊಮ್ಮಡಿಗೆರೆಯಲ್ಲಿ ನಡೆದಿದೆ.

    ಸಿದ್ದಪ್ಪ(30) ಮೃತ ಟ್ರಾಕ್ಟರ್ ಚಾಲಕ. ದೊಡ್ಡಾಳ ಕಟ್ಟೆ ಕಾಮಗಾರಿ ವೇಳೆ ಈ ಘಟನೆ ನಡೆದಿದ್ದು, ಮಡಿಕೇಹಳ್ಳಿ ಗ್ರಾಮ ಪಂಚಾಯತಿಯಿಂದ ನರೇಗಾ ಕಾಮಗಾರಿಯನ್ನು ನಿಯಮ ಮೀರಿ ಜೆಸಿಬಿ ಮತ್ತು ಟ್ರಾಕ್ಟರ್ ಬಳಸಿ ನಡೆಸಲಾಗುತ್ತಿತ್ತು. ಈ ವೇಳೆ ಮಣ್ಣು ತುಂಬಿಕೊಂಡು ಸಾಗುತ್ತಿದ್ದ ಟ್ರಾಕ್ಟರ್ ಏಕಾಏಕಿ ಪಲ್ಟಿಯಾಗಿದೆ.  ಇದನ್ನೂ ಓದಿ: ಅಕ್ರಮವಾಗಿ ಸಾಗಿಸ್ತಿದ್ದ ಒಂಟೆಗಳ ರಕ್ಷಣೆ

    ನಿಯಮದ ಪ್ರಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯ ಕಾರ್ಮಿಕರನ್ನು ಬಳಿಸಿಕೊಂಡು ಕಾಮಗಾರಿ ಮಾಡಬೇಕಿತ್ತು. ಆದರೆ ಟ್ರಾಕ್ಟರ್ ಮತ್ತು ಜೆಸಿಬಿ ಬಳಸಿ ಕಾಮಗಾರಿ ನಡೆಸುತ್ತಿದ್ದರಿಂದ ಈ ಅವಘಡ ಸಂಭವಿಸಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.