Tag: ಟ್ರಕ್ಕಿಂಗ್

  • ಟ್ರಕ್ಕಿಂಗ್ ವೇಳೆ ಕಾಡಿನಲ್ಲಿ ನಾಪತ್ತೆಯಾದ ಚಿತ್ರದುರ್ಗದ 10 ಮೆಡಿಕಲ್ ವಿದ್ಯಾರ್ಥಿಗಳು – 6 ಗಂಟೆ ಬಳಿಕ ಪತ್ತೆ

    ಟ್ರಕ್ಕಿಂಗ್ ವೇಳೆ ಕಾಡಿನಲ್ಲಿ ನಾಪತ್ತೆಯಾದ ಚಿತ್ರದುರ್ಗದ 10 ಮೆಡಿಕಲ್ ವಿದ್ಯಾರ್ಥಿಗಳು – 6 ಗಂಟೆ ಬಳಿಕ ಪತ್ತೆ

    ಚಿಕ್ಕಮಗಳೂರು: ಚಾರಣಕ್ಕೆ ಹೊರಟಿದ್ದ 11 ವಿದ್ಯಾರ್ಥಿಗಳು ಕಾಡಿನಲ್ಲಿ ದಾರಿ ತಪ್ಪಿ ಮಧ್ಯರಾತ್ರಿವರೆಗೂ ಪರದಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಮೂಡಿಗೆರೆ (Mudigere) ತಾಲೂಕಿನ ಬಲ್ಲಾಳರಾಯನ ದುರ್ಗ ಪ್ರವಾಸಿ ತಾಣದಲ್ಲಿ ನಡೆದಿದೆ.

    ಚಿತ್ರದುರ್ಗದ (Chitradurga) ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು, 5 ಹುಡುಗಿಯರು ಟ್ರಕ್ಕಿಂಗ್ ಬಂದಿದ್ದು, ಡ್ರೈವರ್ ಸೇರಿ 11 ಜನ ಚಾರಣಕ್ಕೆ ಹೊರಟಿದ್ದರು. ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾದಲ್ಲಿ ಟಿಕೆಟ್ ಬುಕ್ ಮಾಡಿಸಿ ದಾರಿ ತಿಳಿಯದೆ ಮಂಗಳೂರಿನ ಬಂಡಾಜೆ ಮಾರ್ಗವಾಗಿ ಹತ್ತಿದ್ದರು. ಇದನ್ನೂ ಓದಿ: ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು

    ಕಾಡಿನಲ್ಲಿ ದಾರಿ ತಪ್ಪಿ ಇಡೀ ಕಾಡು ಸುತ್ತಿ ವಿದ್ಯಾರ್ಥಿಗಳು ನಿತ್ರಾಣಗೊಂಡಿದ್ದರು. ವಿಷಯ ತಿಳಿದ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸರು ಸಂಜೆಯಿಂದ ಮಧ್ಯರಾತ್ರಿಯ 2 ಗಂಟೆವರೆಗೂ ಕಗ್ಗತ್ತಲಿನ ಕಾಡಿನಲ್ಲಿ ಕಲ್ಲು-ಮುಳ್ಳುಗಳ ದುರ್ಗಮ ಹಾದಿಯಲ್ಲಿ 11 ಜನ ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಕೇಸ್ – ಹೈಕಮಾಂಡ್ ಬುಲಾವ್, ದೆಹಲಿಗೆ ತೆರಳಿದ ಸಿಎಂ, ಡಿಸಿಎಂ

    ಬಾಳೂರು ಪೊಲೀಸರ (Baluru Police) ಜೊತೆ ಮೂಡಿಗೆರೆ ಸ್ಥಳೀಯ ಯುವಕರು ಹುಡುಕಾಟಕ್ಕೆ ಕೈ ಜೋಡಿಸಿದ್ದರು. ನಿರಂತರ 6 ಗಂಟೆಗಳ ಹುಡುಕಾಟದ ಬಳಿಕ ಮಧ್ಯರಾತ್ರಿ 2 ಗಂಟೆಗೆ ಡ್ರೈವರ್ ಸೇರಿ 11 ಜನ ವಿದ್ಯಾರ್ಥಿಗಳು ಸುರಕ್ಷಿತವಾಗಿ ಸಿಕ್ಕಿದ್ದಾರೆ. ಇದನ್ನೂ ಓದಿ: ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿ ದುರಂತ – 6 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

    ಪೊಲೀಸರು ಅವರನ್ನು ಗುಡ್ಡದಿಂದ ಕೆಳಗಡೆ ಕರೆತಂದು ನಿತ್ರಾಣಗೊಂಡಿದ್ದವರಿಗೆ ಊಟ ಮಾಡಿಸಿ, ವಾಪಸ್ ಚಿತ್ರದುರ್ಗಕ್ಕೆ ಕಳುಹಿಸಿದ್ದಾರೆ. ಬಾಳೂರು ಪಿಎಸ್‌ಐ ದಿಲೀಪ್ ಹಾಗೂ ಯುವಕರಿಗೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

  • ಕಾಫಿನಾಡ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜದಲ್ಲಿ ತಾತ್ಕಾಲಿಕ ಟ್ರಕ್ಕಿಂಗ್ ಬ್ಯಾನ್

    ಕಾಫಿನಾಡ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜದಲ್ಲಿ ತಾತ್ಕಾಲಿಕ ಟ್ರಕ್ಕಿಂಗ್ ಬ್ಯಾನ್

    ಚಿಕ್ಕಮಗಳೂರು: ರಾಜ್ಯದಲ್ಲಿ ಮಳೆ (Rain) ಪ್ರಮಾಣ ಬಹುತೇಕ ಇಳಿಮುಖವಾದರೂ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಬೆಟ್ಟಗುಡ್ಡಗಳು ಕುಸಿಯೋದು, ಮರಗಳು ಮುರಿದು ಬೀಳೋದು ಇನ್ನೂ ನಿಂತಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿಗರ ಹಿತದೃಷ್ಠಿಯಿಂದ ಮೂಡಿಗೆರೆ (Mudigere) ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜ (Ettina Bhuja) ತಾಣಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಿದೆ.

    ಎತ್ತಿನಭುಜ ಪ್ರವಾಸಿ ತಾಣಕ್ಕೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಟ್ರಕ್ಕಿಂಗ್ ತೆರಳಲು ಉತ್ತಮವಾದ ತಾಣವಾಗಿರುವುದರಿಂದ ನಿತ್ಯ ನೂರಾರು ಜನ ಚಾರಣಕ್ಕೆ ಕೂಡ ಹೋಗುತ್ತಾರೆ. ಆದರೆ ಮೂಡಿಗೆರೆ ತಾಲೂಕಿನ ಈ ಭಾಗದಲ್ಲಿ ಕಳೆದ 15 ದಿನಗಳಿಂದ ಅತಿಯಾಗಿ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಬೆಟ್ಟ-ಗುಡ್ಡಗಳು ಕುಸಿಯುತ್ತಿವೆ. ರಸ್ತೆ ಬದಿಯ ವಿದ್ಯುತ್ ಕಂಬಗಳು, ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜೊತೆಗೆ ಕೆಲ ಹುಚ್ಚು ಪ್ರವಾಸಿಗರು ವಿಭಿನ್ನ ಭಂಗಿಯಲ್ಲಿ ಫೋಟೋ ತೆಗೆಯಲು ಹೋದಾಗ ಅಪಾಯಗಳು ಸಂಭವಿಸುವ ಸಾಧ್ಯತೆಯೂ ಇದೆ. ಇದನ್ನೂ ಓದಿ: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು – ಬೆಂಗಳೂರು, ಹೈದರಾಬಾದ್‌ ನಡುವೆ ಸಂಚಾರ

    ಒಂದು ವೇಳೆ ಅಪಾಯ ಸಂಭವಿಸಿದಾಗ ತುರ್ತಾಗಿ ಸಹಾಯಕ್ಕೆ ಘಟನಾ ಸ್ಥಳಕ್ಕೆ ಹೋಗುವುದು ಕೂಡ ಕಷ್ಟ. ಹೀಗಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ರೀತಿಯ ಪ್ರಾಣಹಾನಿ ಮತ್ತು ಅಪಾಯವನ್ನು ತಡೆಗಟ್ಟುವ ದೃಷ್ಟಿಯಿಂದ ಎತ್ತಿನಭುಜಕ್ಕೆ ಚಾರಣ ಹೋಗುವುದಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಎಸ್‍ಇಪಿ ಜಾರಿಗೆ ಸರ್ಕಾರದ ಸಿದ್ಧತೆ – ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಷೇಧಿತ ಪ್ರದೇಶಗಳಲ್ಲಿ ಡೇ-ನೈಟ್ ಟ್ರಕ್ಕಿಂಗ್

    ನಿಷೇಧಿತ ಪ್ರದೇಶಗಳಲ್ಲಿ ಡೇ-ನೈಟ್ ಟ್ರಕ್ಕಿಂಗ್

    ರಾಮನಗರ: ಸಿಲಿಕಾನ್ ಸಿಟಿ ಕೂಗಳತೆ ದೂರದಲ್ಲಿನ ರಾಮನಗರ ಅಂದರೆ ಟೆಕ್ಕಿಗಳಿಗೆ ತುಂಬಾನೆ ಇಷ್ಟ. ವೀಕೆಂಡ್ ಬಂತು ಅಂದರೆ ಸಾಕು ಟ್ರಕ್ಕಿಂಗ್, ವೀಕೆಂಡ್ ಟ್ರಿಪ್ ಅಂತ ಹೋಗುತ್ತಿರುತ್ತಾರೆ. ಆದರೆ ಡೇ ಆ್ಯಂಡ್ ನೈಟ್ ಹಲವೆಡೆ ಅನಧಿಕೃತವಾಗಿ ಟ್ರಕ್ಕಿಂಗ್ ಮಾಡುತ್ತಿದ್ದಾರೆ.

    ಹೌದು. ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಹಲವಾರು ಪ್ರವಾಸಿ ತಾಣಗಳಿವೆ. ಪ್ರವಾಸಿ ತಾಣಗಳ ಜೊತೆಗೆ ಬೆಟ್ಟಗುಡ್ಡಗಳು ಸಹ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಾ ಇದೆ. ಆದರೆ ಇದೀಗ ಈ ಬೆಟ್ಟಗುಡ್ಡಗಳಿಗೆ ಅನುಮತಿಯಿಲ್ಲದೇ ಡೇ ಆ್ಯಂಡ್ ನೈಟ್ ಟ್ರಕ್ಕಿಂಗ್ ಕೂಡಾ ನಡೆಯುತ್ತಿರುವ ಘಟನೆ ಸಾಮಾನ್ಯವಾಗಿ ಹೋಗಿದೆ. ಮಾಗಡಿ ತಾಲೂಕಿನ ಸಾವನದುರ್ಗದಲ್ಲಿ ಟ್ರಕ್ಕಿಂಗ್ ನಿಷೇಧಿಸಿದ್ದರೂ ಕೂಡಾ ಟ್ರಕ್ಕಿಂಗ್‍ನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ.

    ಅಡ್ವೆಂಚರ್ ನೇಷನ್ ಎಂಬ ವೆಬ್‍ಸೈಟ್‍ ನಲ್ಲಿ ಚಾರಣಿಗರು ಅದರಲ್ಲೂ ಟೆಕ್ಕಿಗಳೇ ಹೆಚ್ಚಿನದಾಗಿ ಬುಕ್ಕಿಂಗ್ ಮಾಡಲಾಗುತ್ತಿದೆ. ಅಲ್ಲದೇ ರಾತ್ರಿಯಿಡೀ ಟ್ರಕ್ಕಿಂಗ್, ಬೋನ್‍ಫೈರ್ ಕ್ಯಾಂಪ್ ಜೊತೆಗೆ ಬೆಳಗ್ಗಿನ ವೇಳೆ ರಾಕ್ ಕ್ಲೈಂಬಿಂಗ್ ನಡೆಸುತ್ತಾ ಅರಣ್ಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇನ್ನೂ ಜಲಾಶಯದ ಹಿನ್ನೀರಿನಲ್ಲಿ ಬೋಟಿಂಗ್, ಸ್ವಿಮ್ಮಿಂಗ್ ಸಹ ನಡೆಸುತ್ತಾ ಇದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪರಿಸರ ಪ್ರಿಯ ಕೊತ್ತಿಪುರ ಶಿವಣ್ಣ ಹೇಳಿದ್ದಾರೆ.

    ಅಂದಹಾಗೆ ಸಾವನದುರ್ಗ ಮತ್ತು ಮಂಚನಬೆಲೆ ಹಿನ್ನೀರಿನ ಬಳಿ ಪ್ರವೀಣ್ ಕೃಷ್ಣ ಎಂಬವರು 2.5 ಎಕರೆ ವಿಸ್ತೀರ್ಣದಲ್ಲಿ ಅಡ್ವೆಂಚರ್ ನೇಷನ್ ರೆಸಾರ್ಟ್ ನ್ನು ನಿರ್ಮಿಸಿದ್ದಾರೆ. ಈ ರೆಸಾರ್ಟ್ ಗೆ ಆನ್‍ಲೈನ್‍ನಲ್ಲಿ ಟ್ರಕ್ಕಿಂಗ್‍ಗೆ ಬುಕ್ ಮಾಡಿದ ಚಾರಣಿಗರನ್ನ ಸಾವನದುರ್ಗದ ದಬ್ಬಗುಳಿ ತನಕ ಕರೆತರಲಾಗುತ್ತದೆ. ಬಳಿಕ ಈ ರೆಸಾರ್ಟ್ ನಲ್ಲಿ ತಂಗಲು ವ್ಯವಸ್ಥೆ ಮಾಡಿ ರಾತ್ರಿ ವೇಳೆ ಫೈರ್ ಕ್ಯಾಂಪ್ ಅಲ್ಲದೇ ರಾಕ್ ಕ್ಲೈಂಬಿಂಗ್‍ ಗೆ ಚಾರಣಿಗರು ಹೋಗುತ್ತಿದ್ದಾರೆ. ಆನ್‍ಲೈನ್‍ ನಲ್ಲಿ ಟ್ರಕ್ಕಿಂಗ್ ಬುಕ್ಕಿಂಗ್ ಆಗುತ್ತಿದ್ದಂತೆ ಮಾಹಿತಿಗಾಗಿ ಅಡ್ವೆಂಚರ್ ಪ್ರತಿನಿಧಿ ಕರೆ ಮಾಡಿ ಮಾಹಿತಿಯನ್ನ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

    ಸಾವನದುರ್ಗ ಟ್ರಕ್ಕಿಂಗ್‍ಗೆ ದಿನವೊಂದಕ್ಕೆ 1250 ರೂಪಾಯಿಯನ್ನು ಓರ್ವ ಚಾರಣಿಗನಿಗೆ ನಿಗದಿ ಮಾಡಲಾಗಿದೆ. 3 ದಿನ 5 ದಿನದ ಟ್ರಕ್ಕಿಂಗ್ ಕೂಡಾ ನಡೆಸಲಾಗುತ್ತಿದೆ. ಇದಲ್ಲದೇ ಹಂದಿಗುಂದಿ ಅರಣ್ಯಪ್ರದೇಶ ಹಾಗೂ ಶೋಲೆ ಖ್ಯಾತಿಯ ರಾಮದೇವರ ಬೆಟ್ಟದಲ್ಲೂ ಸಹ ರಾಕ್ ಕ್ಲೈಂಬಿಂಗ್, ಟ್ರಕ್ಕಿಂಗ್ ನಡೆಸಲಾಗುತ್ತಿದೆ. ಆದರೂ ಕೂಡಾ ಅರಣ್ಯ ಇಲಾಖೆಗೆ ಸರಿಯಾದ ಮಾಹಿತಿ ಇಲ್ಲವಾಗಿದೆ ಎಂದು ಅಡ್ವೆಂಚರ್ ನೇಷನ್ ರೆಸಾರ್ಟ್ ಮ್ಯಾನೇಜರ್ ಮಹಾದೇವ್ ತಿಳಿಸಿದ್ದಾರೆ.

    ಒಂದೆಡೆ ರಾಜಾರೋಷವಾಗಿ ಅರಣ್ಯದಲ್ಲಿ ರೆಸಾರ್ಟ್ ನಡೆಯುತ್ತಾ ಇದೆ. ಇನ್ನೊಂದೆಡೆ ಜಿಲ್ಲೆಯ ಹಲವು ಅರಣ್ಯ ಪ್ರದೇಶಗಳಲ್ಲಿ ಡೇ ಆ್ಯಂಡ್ ನೈಟ್ ಟ್ರಕ್ಕಿಂಗ್ ಕೂಡಾ ನಡೆಸಲಾಗುತ್ತಿದೆ. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತು ಟ್ರಕ್ಕಿಂಗ್ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಪರಿಸರ ಪ್ರೇಮಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟ್ರಕ್ಕಿಂಗ್ ಗೆ ಬಂದಿದ್ದ 80 ಪ್ರವಾಸಿಗರನ್ನ ವಶಕ್ಕೆ ಪಡೆದ ಅರಣ್ಯ ಹಾಗು ಪೊಲೀಸ್ ಇಲಾಖೆ ಅಧಿಕಾರಿಗಳು!

    ಟ್ರಕ್ಕಿಂಗ್ ಗೆ ಬಂದಿದ್ದ 80 ಪ್ರವಾಸಿಗರನ್ನ ವಶಕ್ಕೆ ಪಡೆದ ಅರಣ್ಯ ಹಾಗು ಪೊಲೀಸ್ ಇಲಾಖೆ ಅಧಿಕಾರಿಗಳು!

    ಕೋಲಾರ: ಜಿಲ್ಲೆಯಲ್ಲಿ ಬೃಹತ್ ಆನ್ ಲೈನ್‍ಟ್ರಿಪ್ ಚೀಟಿಂಗ್ ಪ್ರಕರಣವೊಂದನ್ನ ಬೇಧಿಸುವಲ್ಲಿ ಅರಣ್ಯ ಇಲಾಖೆ ಹಾಗು ಪೊಲೀಸ್ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಕೋಲಾರ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿ 80 ಮಂದಿ ಅತಿಕ್ರಮ ಪ್ರವೇಶ ಮಾಡಿ ಚಾರಣಕ್ಕಾಗಿ ಬಂದಿದ್ದ ಪ್ರವಾಸಿಗರನ್ನು ಕೋಲಾರ ಗ್ರಾಮಾಂತರ ಪೊಲೀಸರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಬೆಂಗಳೂರು ಮೂಲದ ತಿಲೋಫಿಲಿಯಾ ಎಂಬ ಆನ್‍ಲೈನ್ ಸಂಸ್ಥೆ ಬೆಂಗಳೂರಿಂದ ಪ್ರವಾಸಿಗರನ್ನ ಕರೆತಂದು ಟ್ರಕ್ಕಿಂಗ್ ಅವಕಾಶ ಕೊಡಿಸೋದಾಗಿ ಚೀಟಿಂಗ್ ಮಾಡಿದೆ. ನಂತರ ಅಂತರಗಂತೆ ಬೆಟ್ಟದ ನಿಷೇದಿತ ಅರಣ್ಯ ಪ್ರದೇಶದಲ್ಲಿ ಸಂಚರಿಸಿದ್ದಾರೆ. ಆದ್ದರಿಂದ 80 ಮಂದಿಯನ್ನ ವಶಕ್ಕೆ ಪಡೆದ ಅಧಿಕಾರಿಗಳು ಮುಚ್ಚಳಿಕೆ ಬರೆದುಕೊಂಡು ಬಿಡುಗಡೆಗೊಳಿಸಿದ್ದಾರೆ.

    ಪ್ರವಾಸಿಗರನ್ನ ಕರೆತಂದಿದ್ದ ನಾಲ್ವರು ಹಾಗೂ ಒಂದು ಬಸ್ ಮತ್ತು ಟೆಂಪೋ ಟ್ರಾವಲರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆಲಸದ ಒತ್ತಡದಿಂದ ಬ್ರೇಕ್ ತಗೊಂಡು ಟ್ರಕ್ಕಿಂಗ್ ಹೋದ ಪೊಲೀಸ್ ಅಧಿಕಾರಿಗಳು

    ಕೆಲಸದ ಒತ್ತಡದಿಂದ ಬ್ರೇಕ್ ತಗೊಂಡು ಟ್ರಕ್ಕಿಂಗ್ ಹೋದ ಪೊಲೀಸ್ ಅಧಿಕಾರಿಗಳು

    ಮಂಡ್ಯ: ದಿನನಿತ್ಯ ಕಾನೂನು ಸುವ್ಯವಸ್ಥೆ ಕಾಪಾಡಲು ಕೆಲಸದ ಒತ್ತಡದಲ್ಲಿರುತ್ತಿದ್ದ ಪೊಲೀಸ್ ಅಧಿಕಾರಿಗಳು ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕರಿಘಟ್ಟ ಬೆಟ್ಟದಲ್ಲಿ ಟ್ರಕ್ಕಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ.

    ಬೆಳ್ಳಂಬೆಳಗ್ಗೆ ಮಂಡ್ಯ ಜಿಲ್ಲಾ ಎಸ್‍ಪಿ ರಾಧಿಕಾ ಅವರ ನೇತೃತ್ವದಲ್ಲಿ ಕರಿಘಟ್ಟದ ಬಳಿ ಆಗಮಿಸಿದ ಅಡಿಷನಲ್ ಎಸ್ಪಿ, ಡಿವೈಎಸ್‍ಪಿ, ಸರ್ಕಲ್ ಇನ್ಸ್‍ಪೆಕ್ಟರ್, ಎಸ್‍ಐ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರು ಖುಷಿಯಿಂದ ಬೆಟ್ಟ ಹತ್ತಲಾರಂಭಿಸಿದ್ದರು. ಬೆಟ್ಟದ ಮೇಲಿರುವ ಗಿಡಮರಗಳ ನಡುವೆ ಕಡಿದಾದ ಪ್ರದೇಶದಲ್ಲಿ ಸಾಗುತ್ತ ಬೆಟ್ಟದ ತುದಿ ತಲುಪಿದರು.

    ನಂತರ ಬೆಟ್ಟದ ತುದಿಯಲ್ಲಿ ಕಲ್ಲು ಬಂಡೆ ಮೇಲೆ ಕುಳಿತು ಜೈಕಾರ ಕೂಗಿ ಖುಷಿ ಪಟ್ರು. ಅಲ್ಲಿಂದ ನೇರವಾಗಿ ಬೆಟ್ಟದ ಮೇಲಿರುವ ಶ್ರೀನಿವಾಸ ದೇವಸ್ಥಾನದ ಮುಂಭಾಗಕ್ಕೆ ತೆರಳಿ ಯೋಗ ಮಾಡಿದರು. ಕೆಲಸದ ಒತ್ತಡದಲ್ಲೇ ದಿನ ಕಳೆಯುವ ಪೊಲೀಸರಿಗೆ ಅಪರೂಪಕ್ಕೆ ಟ್ರಕ್ಕಿಂಗ್, ಯೋಗದ ವ್ಯವಸ್ಥೆ ಮಾಡಿದ್ರೆ ಅವರ ಮಾನಸಿಕ, ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ದೇಹ ಕೂಡ ಸದೃಢವಾಗಿರುತ್ತೆ. ಈ ರೀತಿಯ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ಪೊಲೀಸರಿಗೂ ಮುಂದಿನ ದಿನಗಳಲ್ಲಿ ಆಯೋಜನೆ ಮಾಡೋದಾಗಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಧಿಕಾ ತಿಳಿಸಿದ್ರು.