Tag: ಟ್ಯಾಬ್

  • ಜ್ಞಾನದೀವಿಗೆ ಅಭಿಯಾನಕ್ಕೆ ಸಾರ್ಥಕ ಭಾವ – SSLC ಯಲ್ಲಿ 621 ಅಂಕ ಗಳಿಸಿದ ನಿರಾಶ್ರಿತೆ

    ಜ್ಞಾನದೀವಿಗೆ ಅಭಿಯಾನಕ್ಕೆ ಸಾರ್ಥಕ ಭಾವ – SSLC ಯಲ್ಲಿ 621 ಅಂಕ ಗಳಿಸಿದ ನಿರಾಶ್ರಿತೆ

    ಬೆಂಗಳೂರು: ಕಳೆದ ಎರಡು ವರ್ಷದಿಂದ ಮಹಾಮಾರಿ ಕೊರೊನಾ ಅಬ್ಬರಕ್ಕೆ ಸಿಲುಕದವರೇ ಇಲ್ಲ. ಕೊರೋನಾ ಹೆಮ್ಮಾರಿಗೆ ಹೆದರಿ ಇಡೀ ದೇಶಕ್ಕೆ ಬೀಗ ಹಾಕುವ ಪರಿಸ್ಥಿತಿ ಬಂದಿತ್ತು. ಶಾಲಾ-ಕಾಲೇಜ್ ಗಳು ಆಫ್ ಲೈನ್ ನಿಂದ ಆನ್‍ಲೈನ್ ತರಗತಿಗೆ ಬದಲಾಗಿದ್ದವು. ಆದರೆ ಸರ್ಕಾರಿ ಶಾಲಾ ಮಕ್ಕಳಿಗೆ ಆನ್ ಲೈನ್ ತರಗತಿಗಳನ್ನ ಅಟೆಂಡ್ ಮಾಡೋದಕ್ಕೆ ಅವರ ತಂದೆ-ತಾಯಿಯ ಆರ್ಥಿಕ ಪರಿಸ್ಥಿತಿ ಸಾಧ್ಯವಾಗುತ್ತಿರಲಿಲ್ಲ. ರಾಜ್ಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ನಿಮ್ಮ ಪಬ್ಲಿಕ್ ಟಿವಿ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕ ಟ್ಯಾಬ್ ವಿತರಣೆ ಮಾಡಿತ್ತು. ಈಗ ಅದೇ ಟ್ಯಾಬ್ ನ ಬಳಕೆಯಿಂದ ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ.

    ರೋಟರಿ ಕ್ಲಬ್ ಸಹಯೋಗದಲ್ಲಿ ಪಬ್ಲಿಕ್ ಟಿವಿ ನಡೆಸಿದ್ದ ಜ್ಞಾನದೀವಿಗೆ ಅಭಿಯಾನದಡಿ ಬೆಂಗಳೂರಿನ ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಡಶಾಲೆಗೆ 225 ಟ್ಯಾಬ್ ನೀಡಲಾಗಿತ್ತು. ಈಗ ಅದೇ ಟ್ಯಾಬ್ ಬಳಸಿ ಎಸ್‍ಎಸ್‍ಎಲ್‍ಸಿ ಮಕ್ಕಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ಇದನ್ನೂ ಓದಿ: ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ

    ನಿಂಗಮ್ಮ ಎಂಬ ವಿದ್ಯಾರ್ಥಿನಿ ಪಬ್ಲಿಕ್ ಟ್ಯಾಬ್ ನೆರವು ಪಡೆದು ಪರೀಕ್ಷೆಯಲ್ಲಿ 625 ಕ್ಕೆ 621 ಅಂಕ ಪಡೆದಿದ್ದಾರೆ. 5 ವರ್ಷದ ಹಿಂದೆ ಯಾದಗಿರಿಯ ಪ್ರವಾಹದಲ್ಲಿ ಮನೆ ಮಠ ಕಳೆದುಕೊಂಡ ನಿಂಗಮ್ಮ ಪೋಷಕರು, ಬದುಕು ಅರಸಿ ಬೆಂಗಳೂರಿಗೆ ಬಂದಿದ್ರು. ನಿಂಗಮ್ಮನನ್ನು ಇಲ್ಲಿನ ಸರ್ಕಾರಿ ಆಂಗ್ಲ ಶಾಲೆಗೆ ಸೇರಿಸಿದ್ರು. ಈಗ ನಿಂಗಮ್ಮ ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಿದ್ದಾರೆ. ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.

    ಶಾಲೆಯ 380 ಮಕ್ಕಳ ಪೈಕಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 8 ಮಕ್ಕಳು ಶೇಕಡಾ 90ಕ್ಕಿಂತ ಅಂಕ ಪಡೆದಿದ್ದಾರೆ. ಪಬ್ಲಿಕ್ ಟಿವಿಯ ಟ್ಯಾಬ್ ಈ ಮಕ್ಕಳಿಗೆ ನೆರವಾಗಿದೆ. ಮತ್ತೆ ಮುಂದಿನ ವರ್ಷದ ಮಕ್ಕಳ ಅನುಕೂಲಕ್ಕಾಗಿ ಈ ಟ್ಯಾಬ್ ಬಳಸುತ್ತೇವೆ ಎಂದು ಮುಖ್ಯ ಶಿಕ್ಷಕಿ ರಾಮಾದೇವಿ ತಿಳಿಸಿದ್ದಾರೆ. ಈ ಮೂಲಕ ಪಬ್ಲಿಕ್ ಟಿವಿ ಹಮ್ಮಿಕೊಂಡಿದ್ದ ಜ್ಞಾನದೀವಿಗೆ ಅಭಿಯಾನ ಸಾರ್ಥಕತೆ ಕಂಡಿದೆ.

  • ನಮ್ಮ ಧರ್ಮ, ನಮ್ಮ ಧರ್ಮ ಎನ್ನುವವರು ಪರಧರ್ಮ ಸಹಿಷ್ಣುಗಳಾಗಿ: ಸಿದ್ದರಾಮಯ್ಯ

    ನಮ್ಮ ಧರ್ಮ, ನಮ್ಮ ಧರ್ಮ ಎನ್ನುವವರು ಪರಧರ್ಮ ಸಹಿಷ್ಣುಗಳಾಗಿ: ಸಿದ್ದರಾಮಯ್ಯ

    ಬಾಗಲಕೋಟೆ: ಜಾತಿ ರಹಿತವಾದ ಸಮಾಜ ನಿರ್ಮಾಣ ಮಾಡಬೇಕು ಅನ್ನೋದು ನಮ್ಮ ಆಶಯ. ಬರೀ ನಮ್ಮ ಧರ್ಮ ನಮ್ಮ ಧರ್ಮ ಎನ್ನುತ್ತಾರೆ. ನಮ್ಮ ಧರ್ಮ ಇಟ್ಕೊಳ್ರಪ್ಪ. ಪರಧರ್ಮದ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಿ ಎಂದು ಬಾದಾಮಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

    ಬಾದಾಮಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಕ್ಕಳಿಗೆ ಟ್ಯಾಬ್ ವಿತರಿಸಿ ಮಾತನಾಡಿದ ಅವರು, ನೀವೆಲ್ಲ ಪದವಿ ಶಿಕ್ಷಣ ಪಡೆಯುತ್ತಿದ್ದೀರಿ ಮೊದಲು ಮನುಷ್ಯತ್ವ ಬೆಳೆಸಿಕೊಳ್ಳಿ. ಕೆರೂರನಲ್ಲಿ ಇಲ್ಲಿಯವರೆಗೆ ಪ್ರಥಮ ದರ್ಜೆ ಕಾಲೇಜ್ ಗೆ ಹೊಸ ಕಟ್ಟಡ ಇರಲಿಲ್ಲ. ಜಾಗ ಇಲ್ಲದ ಕಾರಣ ಕಟ್ಟಡ ಇರಲಿಲ್ಲ. ಕೆಐಎಡಿಬಿ ಇಂದ 29 ಎಕರೆ ಜಾಗ ಕೊಡಿಸಿದ್ದೀನಿ. ಅದು ಕೋರ್ಟ್‍ಗೆ ಹೋಗಿತ್ತು, ನಾನು ಹೈ ಕೋರ್ಟ್ ಗೆ ಹೋಗಿ ನಂತರ ಆ ಜಾಗ ಕೆಐಎಡಿಬಿಗೆ ಬಂತು. ನಾನು ಕೆಐಎಡಿಬಿಯಿಂದ ಕಾಲೇಜ್ ಗೆ 29 ಎಕರೆ ಜಾಗ ಕೊಡಿಸಿದ್ದೀನಿ, ದುಡ್ಡು ಕೊಡಿಸಿದ್ದೀನಿ. ನಾಳೆಯಿಂದಲೇ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಕಟ್ಟಡ ಕಾಮಗಾರಿ ಆರಂಭವಾಗುತ್ತೆ ಎಂದರು.

    ಅಧಿಕಾರಿಗಳು ಬಹಳ ಸೋಮಾರಿಗಳಿದ್ದಾರೆ. ಇನ್ನೂ ಕೂಡ ಕಾಮಗಾರಿ ಶುರುನೇ ಮಾಡಿಲ್ಲ. ನಾನು ನಿನ್ನೆ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೆ. ನಾಳೆಯಿಂದ ಶುರುಮಾಡ್ತೀವಿ ಅಂತಾ ಹೇಳಿದ್ದಾರೆ. ಕೆಲ ಸಾರ್ವಜನಿಕರು ಪೀಠೋಪಕರಣ ಕೊಡಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ಸಿಗಬೇಕು. ಜ್ಞಾನ ಬೆಳವಣಿಗೆಯಾಗಬೇಕು. ಪ್ರತಿಯೊಬ್ಬರಿಗೂ ಸಮಾಜದ ಋಣ ಇರುತ್ತೆ. ಸಮಾಜದ ಋಣ ತೀರಿಸಬೇಕು. ಓದಿದವರು ಜಾತಿ ಮಾಡಲು ಹೋಗಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇದನ್ನೂ ಓದಿ: ಯುವತಿ ನೇಣಿಗೆ ಶರಣು, ಯುವಕನ ಮನೆಗೆ ಬೆಂಕಿ – ಪತಿಯನ್ನ ಬಿಟ್ಟು ಇನಿಯನ ಜೊತೆ ಮದ್ವೆ

    ಓದಿಕೊಂಡು ಹೋಗಿ, ಹಳ್ಳಿಗಳಲ್ಲಿ ಜಾತಿ ನೋಡುತ್ತಾರೆ. ಬಸವಣ್ಣನವರ ವಚನದಲ್ಲಿರುವಂತೆ, ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ನಮ್ಮ ಜಾತಿಯವನು ಅಂತಾ ಅಲ್ಲ, ಎಲ್ಲ ಜಾತಿಯವರು ನಮ್ಮವರೇ ಎಂದು ತಿಳಿಯಬೇಕು. ಕೊಳಕು ಬಟ್ಟೆ, ಚಡ್ಡಿ ಹರಿದೋಗಿದೆ ಅಂದ್ರೆ ಅದು ಅವನ ಹಣೆಬರಹ. ಯಾವ ದೇವರು ಇದನ್ನು ಹೇಳಿದ್ಯಾ, ಹಾಗಿದ್ರೆ ಅದು ದೇವರೇ ಅಲ್ಲ. ಎಲ್ಲರಿಗೂ ರಕ್ಷಣೆ ಕೊಡೋಣು ದೇವರು. ಈ ಕಂದಾಚಾರಗಳು ಹೋಗಬೇಕು. ಉಳ್ಳವರು ಶಿವಾಲಯ ಮಾಡವರು, ನಾನೇನು ಮಾಡಲಿ ಬಡವನಯ್ಯ ಎಂದು ಹೇಳಿದ್ದಾರೆ. ದೇವರೆಲ್ಲೂ ಇಲ್ಲ, ದೇವರು ನಮ್ಮಲ್ಲೇ ಇದ್ದಾನೆ ಎಂದು ಬಸವಣ್ಣನವರು ಹೇಳಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ನೀತಿ ಪಾಠ ಹೇಳಿದರು.

    ಟ್ಯಾಬ್ ಸರಿಯಾಗಿ ಉಪಯೋಗಿಸಿಕೊಂಡು ಶಿಕ್ಷಣ ಪಡೆಯಿರಿ. ಬುದ್ದಿವಂತಿಕೆ ಯಾರಪ್ಪನ ಸ್ವತ್ತಲ್ಲ. ನಮ್ಮೂರಲ್ಲಿ ಶಾನಭೋಗ ಅಂತಾ ಇದ್ದ. ವಕೀಲ ವೃತ್ತಿ ಶೂದ್ರರಿಗೆ ಹತ್ತಲ್ಲ, ಮೇಲ್ಜಾತಿಯವರಿಗೆ ಹತ್ತುತ್ತೆ ಎಂದು ನಮ್ಮಪ್ಪನಿಗೆ ಹೇಳಿದ್ದ. ಪ್ರತಿಯೊಬ್ಬರು ಬುದ್ದಿವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಬಾಬಾಸಾಹೇಬ್ ಅಂಬೇಡ್ಕರ್ ಮೇಲ್ಜಾತಿಯಲ್ಲಿ ಹುಟ್ಟಿದ್ರಾ? ರಾಮಾಯಣ ಬರೆದವರು ಮೇಲ್ಜಾತಿಯಲ್ಲಿ ಹುಟ್ಟಿದ್ರಾ? ವಾಲ್ಮೀಕಿ ಯಾವ ಜಾತಿಯಲ್ಲಿ ಹುಟ್ಟಿದ್ರು? ಬುದ್ದಿವಂತಿಕೆ ಜಾತಿಯಿಂದ ಬರಲ್ಲ. ನಮ್ಮ ತಂದೆ ತಾಯಿ, ನಿನಗ್ಯಾಕಪ್ಪ ಕುರಿ ಮೇಯಿಸು, ದನ ಮೇಯಿಸು ಎಂದು ಹೇಳುತ್ತಾರೆ ಆದರೆ ಪ್ರತಿಯೊಬ್ಬರು ವೈಚಾರಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

  • EFD ಸಂಸ್ಥೆಯಿಂದ ಪಬ್ಲಿಕ್ ಟಿವಿ ಜ್ಞಾನದೀವಿಗೆ ಟ್ಯಾಬ್ ವಿತರಣೆ

    EFD ಸಂಸ್ಥೆಯಿಂದ ಪಬ್ಲಿಕ್ ಟಿವಿ ಜ್ಞಾನದೀವಿಗೆ ಟ್ಯಾಬ್ ವಿತರಣೆ

    ಚಿಕ್ಕಬಳ್ಳಾಪುರ: EFD ಸಂಸ್ಥೆಯಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಚಿಕ್ಕಬಳ್ಳಾಪುರದಲ್ಲಿ ಪಬ್ಲಿಕ್ ಟಿವಿ ಜ್ಞಾನದೀವಿಗೆ ಟ್ಯಾಬ್ ವಿತರಣೆ ಮಾಡಲಾಗಿದೆ.
    ಇದನ್ನೂ ಓದಿ:  ಗುಟ್ಟಾಗಿ ಎರಡನೇ ಪುತ್ರನಿಗೆ ನಾಮಕರಣ ಮಾಡಿದ್ರಾ ಸ್ಟಾರ್ ದಂಪತಿ?

    ಪಬ್ಲಿಕ್ ಟಿವಿ ಜ್ಞಾನದೀವಿಗೆ ಕಾರ್ಯ ಮುಂದುವರೆದಿದ್ದು. ಇಂದು ಸಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಹಾಗೂ ನಾರಾಯಣಪುರ ಸೇರಿದಂತೆ ಬೆಂಗಳೂರು ಪೂರ್ವ ತಾಲ್ಲೂಕು ಜ್ಯೋತಿಪುರ ಸರ್ಕಾರಿ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಯಿತು.

    ಟ್ಯಾಬ್‍ಗಳಿಗೆ ಬೇಕಾಗುವ ಹಣವನ್ನು ಭಟ್ಟರಮಾರೇನಹಳ್ಳಿ ಬಳಿಯ (EFD) ಇಂಡಕ್ಷನ್ ಪ್ರವೈಟ್ ಲಿಮಿಟೆಡ್ ಸಂಸ್ಥೆ ತನ್ನ ಸಿಎಸ್‍ಆರ್ ಅನುದಾನದಡಿಯಲ್ಲಿ ನೀಡಿ ಸಹಾಯಹಸ್ತ ಚಾಚಿದೆ. ಜ್ಯೋತಿಪುರ ಶಾಲೆಯಲ್ಲಿ 45 ಟ್ಯಾಬ್‍ಗಳು, ವಿಶ್ವನಾಥಪುರ ಶಾಲೆಯಲ್ಲಿ 37 ಟ್ಯಾಬ್‍ಗಳು ಹಾಗೂ ನಾರಾಯಣಪುರ ಶಾಲೆಯಲ್ಲಿ 14 ಟ್ಯಾಬ್‍ಗಳು ಸೇರಿದಂತೆ ಮೂರು ಶಾಲೆಯ 192 ಮಂದಿ ವಿದ್ಯಾರ್ಥಿಗಳಿಗೆ 96 ಟ್ಯಾಬ್‍ಗಳನ್ನ ವಿತರಣೆ ಮಾಡಲಾಯಿತ್ತು.

    ಈ ಸಂದರ್ಭದಲ್ಲಿ ಸಂಸ್ಥೆಯ ನೌಕರರಾದ ಚಂದ್ರಶೇಖರ್, ಗಣೇಶ್, ಚತುಶ್ ವಿತರಿಸಿದರು. ಪಬ್ಲಿಕ್ ಟಿವಿ ಹಾಗೂ EFD ಸಂಸ್ಥೆಯ ಕಾರ್ಯಕ್ಕೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಧನ್ಯವಾದಗಳನ್ನ ಅರ್ಪಿಸಿದರು.

  • ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್  ಟಿವಿಯಿಂದ ಉಚಿತ ಟ್ಯಾಬ್ ವಿತರಣೆ

    ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿಯಿಂದ ಉಚಿತ ಟ್ಯಾಬ್ ವಿತರಣೆ

    ರಾಯಚೂರು: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿಯ ಜ್ಞಾನದೀವಿಗೆ ಕಾರ್ಯಕ್ರಮದ ಮೂಲಕವಾಗಿ ರಾಯಚೂರಿನಲ್ಲಿ ಉಚಿತ ಟ್ಯಾಬ್ ವಿತರಣೆ ಮಾಡಲಾಯಿತ್ತು. ಇದನ್ನೂ ಓದಿ: ಅಂಬಿ-ಸುಮಲತಾ ಬಗ್ಗೆ ಮಾತಾಡಿದ್ರೆ ಹುಷಾರ್-ಅಂಬಿ ಅಭಿಮಾನಿಗಳಿಂದ ಎಚ್ಚರಿಕೆ

    ಲಿಂಗಸುಗೂರು ತಾಲೂಕಿನ ಚಿಕ್ಕಲೆಕ್ಕಿಹಾಳ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಯಿತು. ರೋಟರಿ ಇಂಟರ್‌ನ್ಯಾಷನಲ್ ಸಹಯೋಗದೊಂದಿಗೆ ಶಾಲೆಯ 19 ವಿದ್ಯಾರ್ಥಿ ವಿದ್ಯಾರ್ಥಿಗಳಿಗೆ 9 ಟ್ಯಾಬ್‍ಗಳನ್ನ ವಿತರಿಸಲಾಯಿತು. ಲಿಂಗಸುಗೂರು ತಾಲೂಕಿನಲ್ಲಿ ಇದುವರೆಗೆ ಒಟ್ಟು 200 ಟ್ಯಾಬ್‍ಗಳನ್ನ ವಿತರಿಸಲಾಗಿದೆ. ಇದನ್ನೂ ಓದಿ: ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ: ಅಭಿಷೇಕ್ ಅಂಬರೀಶ್

    ಹಟ್ಟಿ ಚಿನ್ನದಗಣಿ ನಿಗಮ ನಿಯಮಿತ ಅಧ್ಯಕ್ಷ ಮಾನಪ್ಪ ವಜ್ಜಲ್ ನೀಡಿರುವ ಟ್ಯಾಬ್‍ಗಳನ್ನ ವಿದ್ಯಾರ್ಥಿಗಳಿಗೆ ನೇರವಾಗಿ ವಿತರಿಸಲಾಯಿತು. ಮಾನಪ್ಪ ವಜ್ಜಲ್ ಪುತ್ರ ಈಶ್ವರ ವಜ್ಜಲ್ ಮಕ್ಕಳಿಗೆ ಟ್ಯಾಬ್‍ಗಳನ್ನ ವಿತರಿಸಿದರು. ಕಾರ್ಯಕ್ರಮದಲ್ಲಿ ವೀರನಗೌಡ ಚಿಕ್ಕಲೆಕ್ಕಿಹಾಳ, ಶಾಲೆಯ ಮುಖ್ಯೋಪಾಧ್ಯಾಯ ಚಾರುನಾಯಕ್ ರಾಥೋಡ್ ಎಸ್‍ಡಿಎಂಸಿ ಸದಸ್ಯರು, ಸಹ ಶಿಕ್ಷಕರು ಭಾಗವಹಿಸಿದ್ದರು.

  • ಡಾಕ್ಟರ್ ಆಗುವ ಕನಸು ಹೊತ್ತು, ಲ್ಯಾಪ್‍ಟಾಪ್‍ಗಾಗಿ ತರಕಾರಿ ಮಾರಾಟ- ವಿದ್ಯಾರ್ಥಿನಿಗೆ ಜ್ಞಾನ ದೀವಿಗೆಯ ಟ್ಯಾಬ್

    ಡಾಕ್ಟರ್ ಆಗುವ ಕನಸು ಹೊತ್ತು, ಲ್ಯಾಪ್‍ಟಾಪ್‍ಗಾಗಿ ತರಕಾರಿ ಮಾರಾಟ- ವಿದ್ಯಾರ್ಥಿನಿಗೆ ಜ್ಞಾನ ದೀವಿಗೆಯ ಟ್ಯಾಬ್

    ಮೈಸೂರು: ಡಾಕ್ಟರ್ ಆಗುವ ಕನಸು ಹೊತ್ತು ವಿದ್ಯಾರ್ಥಿನಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ತಯಾರಿಗಾಗಿ ಆನ್‍ಲೈನ್ ಕ್ಲಾಸ್‍ಗೆ ಹಾಜರಾಗಲು ಲ್ಯಾಪ್‍ಟಾಪ್ ಖರೀದಿಗೆ ತರಕಾರಿ ಮಾರಾಟಕ್ಕೆ ಇಳಿದಿದ್ದಾಳೆ. ಇದನ್ನು ಗಮನಿಸಿದ ಪಬ್ಲಿಕ್ ಟಿವಿ, ವಿದ್ಯಾರ್ಥಿನಿಯ ಸಂಕಷ್ಟದ ಕುರಿತು ಸುದ್ದಿ ಬಿತ್ತರ ಮಾಡುವುದರ ಜೊತೆಗೆ ಜ್ಞಾನ ದೀವಿಗೆಯಡಿ ಟ್ಯಾಬ್ ನೀಡುವ ಮೂಲಕ ಸಹಾಯ ಮಾಡಿದೆ.

    10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಸಾತಗಳ್ಳಿಯ ಕೀರ್ತನಾಳ ಮೊಬೈಲ್ ಕೆಟ್ಟು ಹೋಗಿರುವ ಹಿನ್ನೆಲೆ ಆನ್‍ಲೈನ್ ಕ್ಲಾಸ್‍ಗೆ ಹಾಜರಾಗಲು ಸಮಸ್ಯೆಯಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಹೊಸ್ತಿಲಲ್ಲಿ ಕ್ಲಾಸ್ ಅಟೆಂಡ್ ಮಾಡಲು ವಿದ್ಯಾರ್ಥಿನಿ ಪರದಾಡುತ್ತಿದ್ದಾಳೆ. ಹೀಗಾಗಿ ಲ್ಯಾಪ್‍ಟಾಪ್ ಅಥವಾ ಟ್ಯಾಬ್ ಖರೀದಿಗಾಗಿ ಸೊಪ್ಪು ಮಾರಾಟ ಮಾಡುತ್ತಿದ್ದಾಳೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯವರಗೆ ಸೊಪ್ಪು, ತರಕಾರಿ ಮಾರಾಟ ಮಾಡುತ್ತಿದ್ದಾಳೆ. ಹೀಗಾಗಿ ಪಬ್ಲಿಕ್ ಟಿವಿಯಿಂದ ಜ್ಞಾನ ದೀವಿಗೆಯಡಿ ಟ್ಯಾಬ್ ವಿತರಣೆ ಮಾಡಲಾಗಿದೆ.

    ವಿದ್ಯಾರ್ಥಿನಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧವಾಗಲು ಸಿದ್ಧ ಪಾಠ ಇರುವ ಟ್ಯಾಬ್‍ನ್ನು ಪಬ್ಲಿಕ್ ಟಿವಿಯ ಜ್ಞಾನ ದೀವಿಗೆ ಅಭಿಯಾನದಡಿ ನೀಡಲಾಯಿತು. ಟ್ಯಾಬ್ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ಕೀರ್ತನಾ, ಲ್ಯಾಪ್‍ಟಾಪ್, ಟ್ಯಾಬ್ ಖರೀದಿಗಾಗಿ ಕೆಲಸ ಮಾಡುತ್ತಿದ್ದೆ. ಇದೀಗ ಚೆನ್ನಾಗಿ ಓದುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ.

    ವಿದ್ಯಾರ್ಥಿನಿ ತಂದೆ ಮಾತನಾಡಿ, ನಾನು ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದೆ. ಇದೀಗ ಲಾಕ್‍ಡೌನ್‍ನಿಂದ ಸಮಸ್ಯೆಯಾಗಿತ್ತು. ಊಟಕ್ಕೇನು ಕೊರತೆ ಇರಲಿಲ್ಲ. ಆದರೆ 4 ತಿಂಗಳಿಂದ ಬಾಡಿಗೆ ಕಟ್ಟಿರಲಿಲ್ಲ. ಇತ್ತ ಮಗಳಿಗೆ ಓದಲು ಸಹ ಸಮಸ್ಯೆಯಾಗುತ್ತಿತ್ತು. ಪಬ್ಲಿಕ್ ಟಿವಿಯಿಂದ ಟ್ಯಾಬ್ ನೀಡಿರುವುದು ನೆರವಾಗಿದೆ. ತುಂಬಾ ಸಂತೋಷವಾಗುತ್ತಿದೆ. ಪಬ್ಲಿಕ್ ಟಿವಿಗೆ ಧನ್ಯವಾದಳು ಎಂದು ಹೇಳಿದ್ದಾರೆ.

    ಬಾಲಕಿಯ ತಾಯಿ ಮಾತನಾಡಿ, ಮಗಳಿಗೆ ಓದುವ ಆಸೆ ತುಂಬಾ ಇದೆ, ಅವರ ಆಸೆಯನ್ನು ನಾವು ಈಡೇರಿಸುತ್ತೇವೆ. ಕಷ್ಟಪಟ್ಟಾದರೂ, ಇನ್ನೊಬ್ಬರ ಮನೆಯಲ್ಲಿ ಕೆಲಸ ಮಾಡಿಯಾದರೂ ಮಕ್ಕಳನ್ನು ಓದಿಸುತ್ತೇವೆ. ಕೀರ್ತನಾಗೆ ಡಾಕ್ಟರ್ ಆಗುವ ಆಸೆ ಇದೆ. ಅದನ್ನು ಪೂರೈಸುತ್ತೇವೆ ಎಂದು ಹೇಳಿದ್ದಾರೆ.

  • ಹೊಸಪೇಟೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣೆ

    ಹೊಸಪೇಟೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣೆ

    ಬಳ್ಳಾರಿ: ಪಬ್ಲಿಕ್ ಟಿವಿ, ರೋಟರಿ ಕ್ಲಬ್ ಸಹಯೋಗದಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂದು ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು.

    ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಟ್ಟು ಮೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಟ್ಯಾಬ್ ಗಳನ್ನು ವಿತರಣೆ ಮಾಡಲಾಯಿತು. ಹೊಸಪೇಟೆ ತಾಲೂಕಿನ, ರಾಮಸಾಗರದ ಸರ್ಕಾರಿ ಪ್ರೌಢ ಶಾಲೆಯ 176 ಮಕ್ಕಳಿಗೆ 88 ಟ್ಯಾಬ್ ಗಳನ್ನು ಹಾಗೂ ಜವುಕು ಸರ್ಕಾರಿ ಪ್ರೌಢ ಶಾಲೆಯ 68 ಮಕ್ಕಳಿಗೆ 34 ಟ್ಯಾಬ್ ಗಳನ್ನು ಹಾಗೂ ದೇವಸಮುದ್ರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 114 ಮಕ್ಕಳಿಗೆ ಒಟ್ಟು 57 ಟ್ಯಾಬ್ ಗಳನ್ನು ಉಚಿತವಾಗಿ ನೀಡಲಾಯಿತು.

    ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಟ್ಯಾಬ್ ಗಳನ್ನು ಮೂರು ಶಾಲೆಯ ಮಕ್ಕಳಿಗೆ ನೀಡಲಾಯಿತು. ಕೊರೊನಾ ಸಮಯದಲ್ಲಿ ಶಾಲೆಗಳು ಇಲ್ಲದೆ ಕಲಿಕೆಯಲ್ಲಿ ನಾವು ಹಿಂದೆ ಬಿದಿದ್ದು, ಇನ್ನು ಈ ಟ್ಯಾಬ್ ಮೂಲಕ ಕಲಿತು ಉತ್ತಮ ಫಲಿತಾಂಶ ಪಡೆಯುತ್ತೇವೆ. ಟ್ಯಾಬ್ ಕೊಟ್ಟ ಪಬ್ಲಿಕ್ ಟಿವಿ ಹಾಗೂ ಸಚಿವರಿಗೆ ಕೀರ್ತಿ ತರುತ್ತವೆ ಎಂದು ಹೇಳಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪಬ್ಲಿಕ್ ಟಿವಿ ನೀಡಿದ ಟ್ಯಾಬ್ ಗಳು ಬಹಳ ಸಹಕಾರಿಯಾಗಲಿವೆ. ಟ್ಯಾಬ್ ನೀಡಿದ ಪಬ್ಲಿಕ್ ಟಿವಿ ಹಾಗೂ ಟ್ಯಾಬ್ ದಾನಿಗಳಾದ ಆನಂದ್ ಸಿಂಗ್ ಅವರಿಗೆ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ.

  • ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣೆ

    ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣೆ

    ವಿಜಯನಗರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಇಂದು ವಿಜಯನಗರದಲ್ಲಿ ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು. ಇದನ್ನೂ ಓದಿ:  ಕೊರೊನಾದಿಂದ ಪತ್ನಿ ಸಾವು- ಮನನೊಂದ ಪತಿ ಮಕ್ಕಳ ಜೊತೆಗೆ ಆತ್ಮಹತ್ಯೆ

    ಹೊಸಪೇಟೆ ತಾಲೂಕಿನ ಒಟ್ಟು ಮೂರು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಟ್ಯಾಬ್‍ಗಳನ್ನು ವಿತರಣೆ ಮಾಡಲಾಯಿತು. ಹೊಸಪೇಟೆ ತಾಲೂಕಿನ, ಬುಕ್ಕಸಾಗರದ ಸರ್ಕಾರಿ ಪ್ರೌಢ ಶಾಲೆಯ 106 ಮಕ್ಕಳಿಗೆ 53 ಟ್ಯಾಬ್‍ಗಳನ್ನು ಹಾಗೂ ಶ್ರೀ ರಾಮರಂಗಾಪುರ ಸರ್ಕಾರಿ ಪ್ರೌಢ ಶಾಲೆಯ 29 ಮಕ್ಕಳಿಗೆ 14 ಟ್ಯಾಬ್‍ಗಳನ್ನು ಹಾಗೂ ದೇವಲಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 100 ಮಕ್ಕಳಿಗೆ ಒಟ್ಟು 50 ಟ್ಯಾಬ್‍ಗಳನ್ನು ಉಚಿತವಾಗಿ ನೀಡಲಾಯಿತು.

    ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಇಂದು ಒಟ್ಟು 117 ಟ್ಯಾಬ್‍ಗಳನ್ನು ಮೂರು ಶಾಲೆಯ ಮಕ್ಕಳಿಗೆ ನೀಡಲಾಯಿತು. ಕೊರೊನಾ ಸಮಯದಲ್ಲಿ ಶಾಲೆಗಳು ಇಲ್ಲದೆ ಕಲಿಕೆಯಲ್ಲಿ ನಾವು ಹಿಂದೆ ಬಿದಿದ್ದು, ಉಳಿದ ದಿನಗಳನ್ನು ಈ ಟ್ಯಾಬ್ ನೋಡಿಕೊಂಡು ಉತ್ತಮ ಫಲಿತಾಂಶ ತರುತ್ತೆವೆ. ಪಬ್ಲಿಕ್ ಟಿವಿ ನೀಡಿದ ಟ್ಯಾಬ್ ಗಳು ನಮ್ಮಗೆ ಬಹಳ ಸಹಕಾರಿಯಾಗಿದೆ. ನಮ್ಮಗೆ ಟ್ಯಾಬ್ ನೀಡಿದ ಪಬ್ಲಿಕ್ ಟಿವಿಗೆ ಹಾಗೂ ಟ್ಯಾಬ್ ದಾನಿಗಳಾದ ಆನಂದ್ ಸಿಂಗ್ ಅವರಿಗೆ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ.

  • ಹೂ ಮಾರುವ ಹುಡ್ಗಿ ಮತ್ತು ಪಬ್ಲಿಕ್ ಟಿವಿ ಬಿಗ್ ಬುಲೆಟಿನ್‍ನ ಆ ಬ್ರೇಕ್..!

    ಹೂ ಮಾರುವ ಹುಡ್ಗಿ ಮತ್ತು ಪಬ್ಲಿಕ್ ಟಿವಿ ಬಿಗ್ ಬುಲೆಟಿನ್‍ನ ಆ ಬ್ರೇಕ್..!

    – ಪವಿತ್ರ ಕಡ್ತಲ
    ನಿನ್ನೆ ಬಿಗ್ ಬುಲೆಟಿನ್‍ನಲ್ಲಿ ಬ್ರೇಕ್ ನಲ್ಲಿದ್ದಾಗ ರಂಗನಾಥ್ ಸರ್ ಕರೆ ಬಂದಿತ್ತು. ಬ್ರೇಕ್‍ನ ಮಧ್ಯೆ ಸರ್ ಕರೆ, ಕೊಂಚ ಅಚ್ಚರಿ ಭಯದಿಂದಲೇ ಹಲೋ ಸರ್ ಅಂದಿದ್ದೆ. ಆ ಹುಡ್ಗಿಗೆ ನಾಳೆ ಟ್ಯಾಬ್ ತಲುಪಿಸಿ ಆಕೆ ಚೆನ್ನಾಗಿ ಓದಲಿ ಅಂದ್ರು. ನನಗಂತೂ ಮಾತು ಹೊರಡಲಿಲ್ಲ. ಥ್ಯಾಂಕ್ಸ್ ಸರ್ ಅಂತಾ ಅಂದುಬಿಟ್ಟೆ ಅಷ್ಟೇ. ನಮ್ಮ ಮೆಟ್ರೋ ಟೀಂನ ನಂದಿನಿಯ ಒಂದು ಸುದ್ದಿ ಹೂಮಾರುವ ಹುಡ್ಗಿ ಮುಖದಲ್ಲಿ ಚಂದದ ನಗು ತರಿಸಿತ್ತು. ಹೂ ಮಾರುವ ಹುಡ್ಗಿಯ ಕಣ್ಣಿನಲ್ಲಿ ಓದುವ ಆಸೆಗೊಂದು ಭರವಸೆ ಕೊಟ್ಟಿತ್ತು. ಸಾಮಾನ್ಯವಾಗಿ ವರದಿಗಾರರು ನಿರಂತರವಾಗಿ ಸುದ್ದಿಗಾಗಿ ಹೋಗುವ ಸರ್ಕಾರಿ ಕಚೇರಿಗಳಲ್ಲಿ ಒಂದಿಷ್ಟು ಸಿಬ್ಬಂದಿಯ ಬಳಿ, ಅಲ್ಲಿನ ಸೆಕ್ಯೂರಿಟಿ ಗಾರ್ಡೋ ಅಥವಾ ಆಯಾ ಕೆಲ್ಸ ಮಾಡೋರ ಬಳಿ ಸಣ್ಣದಾಗಿ ಆತ್ಮೀಯತೆಯ ನಂಟು ಇಟ್ಟುಕೊಂಡಿರ್ತಾರೆ. ಕೆಲವೊಮ್ಮೆ ಇವ್ರೇ ಸುದ್ದಿಯ ಮೂಲವೂ ಆಗಿರ್ತಾರೆ. ಆದ್ರೇ ಬೇರೆ ಸುದ್ದಿಯ ಹುಡುಕಾಟದಲ್ಲಿ ಇರುವಾಗ ಅಚಾನಕ್ ಆಗಿ ಎದುರಿಗೆ ಸಿಗುವವರ ಜೊತೆಗೆ ಮಾತಿಗಿಳಿದಾಗ ಅವ್ರ ಕಷ್ಟಗಳು ಬದುಕಿನ ನೋವನ್ನು ಕೊಂಚ ಕೇಳಿಸಿಕೊಳ್ಳುವ, ಕೆಲವೊಮ್ಮೆ ಅವ್ರಿಗೇನಾದ್ರೂ ಸಹಾಯ ಮಾಡೋಣ ಎನ್ನುವ ಮನಸ್ಥಿತಿ ಇದ್ರೆ, ಖಂಡಿತಾ ಜೀವನಪೂರ್ತಿ ವೃತ್ತಿ ಬದುಕಿನ ಸಾರ್ಥಕತೆಯನ್ನು ಅನುಭವಿಸಬಹುದು. ಅಂದ ಹಾಗೆ ಈ ಹೂ ಹುಡ್ಗಿ ಯಾರು? ನಮ್ಮ ವರದಿಗಾರ್ತಿ ನಂದಿನಿ ಕಣ್ಣಿಗೆ ಬಿದ್ದಿದ್ದು ಹೇಗೆ ಅನ್ನೋದು ಇನ್ನೂ ಇಂಟರೆಸ್ಟಿಂಗ್..!

    ಆದಿಶಕ್ತಿ ದೇವಿಯಂಗಳದಲ್ಲಿದ್ಳು ‘ಬನಶಂಕರಿ’..!: ಆಕೆ ಥೇಟು ದೇವತೆಯಂತೆ ಕಾಣಿಸುವ ಚಂದದ ಹುಡ್ಗಿ..! ಚಟಪಟ ಮಾತು.. ಮುಖದಲ್ಲಿ, ಮಿನುಗುವ ಕಣ್ಣಲ್ಲಿ ಆತ್ಮವಿಶ್ವಾಸದ ಬುಗ್ಗೆ…! ದೇಗುಲದ ಮೂಲೆಯೊಂದರಲ್ಲಿ ಪುಟ್ಟ ಸ್ಟೂಲ್‍ನಲ್ಲಿ ಆಕೆ ಕೈ, ಹೈ ಸ್ಪೀಡ್‍ನಲ್ಲಿ ದಾರದೊಂದಿಗೆ ಹೂವು ಪೋಣಿಸುವ ಕೆಲ್ಸ ಮಾಡುತ್ತಿತ್ತು. ಆದ್ರೆ ಅವಳ ದೃಷ್ಟಿ ಮಾತ್ರ ಮೊಬೈಲ್ ಮೇಲಿತ್ತು. ನೋಡೋರಿಗೆ ಏನೋ ಸಿನಿಮಾ ವೀಕ್ಷಣೆ ಮಾಡಿಕೊಂಡಿದ್ದಾಳೋ ಅಂತಾ ಅನಿಸುತ್ತಿತ್ತು. ಆದ್ರೆ ಆಕೆ ತನ್ನ ಕಣ್ಣು ಮಿಟುಕಿಸದೆ ಮೊಬೈಲ್ ನೋಡುತ್ತಿದ್ದದ್ದು ಎಸ್‍ಎಸ್‍ಎಲ್‍ಸಿ ಎಕ್ಸಾಂನ ಸಿದ್ಧತೆಗಾಗಿ. ಬೆಳಗ್ಗೆಯಿಂದ ಮಧ್ಯಾಹ್ನ ತನಕ ಪರೀಕ್ಷೆಗೆ ತಯಾರಾಗುತ್ತಲೇ ಬೆಂಗಳೂರಿನ ಆದಿಶಕ್ತಿ ದೇವಸ್ಥಾನದ ದೇವಿಯಂಗಳದಲ್ಲಿ ಹೂಮಾರುತ್ತಿದ್ದ ಆ ಹುಡ್ಗಿ ಹೆಸ್ರು ಬನಶಂಕರಿ.! ಆಕೆಯ ಹೆಸ್ರು ನೋಡಿ ಅದೆಷ್ಟು ಚಂದ. ಆದ್ರೆ ಹೂಮಾರುವ ಹುಡ್ಗಿಯ ಬದುಕು ಹೂವಿನ ಹಾಸಿಗೆಯಲ್ಲ. ತಂದೆ ನೇಕಾರ ವೃತ್ತಿ, ತಾಯಿಯದ್ದು ಇದೇ ಹೂವು ಮಾರುವ ಕೆಲ್ಸ. ಲಾಕ್‍ಡೌನ್ ಸಂಕಷ್ಟದ ಮಧ್ಯೆ ಬದುಕಿಗೆ ದುಡಿಮೆ ಇಲ್ಲದೇ ಬನಶಂಕರಿ ಕುಟುಂಬ ಪರದಾಡಿತ್ತು. ಹೀಗಾಗಿ ದುಡಿಮೆಗಾಗಿ ಓದುವ ಮಧ್ಯೆಯೂ ಅಮ್ಮನಿಗೆ ಸಹಾಯ ಮಾಡೋದಕ್ಕಾಗಿ ಹೂವು ಮಾರುವ ಕೆಲ್ಸ ಮಾಡ್ತಾಳೆ ಈ ಬನಶಂಕರಿ.

    ಹೂವು ಮತ್ತು ಅಮ್ಮನ ಕನಸು: ಅಪ್ಪ ಅಮ್ಮ ಇಬ್ಬರೂ ಕೂರಿಸಿಕೊಂಡು ಓದು ಓದು ಅಂತಾ ಮಕ್ಕಳಿಗೆ ಹೇಳಿದ್ರೂ ಕೆಲವೊಮ್ಮೆ ಕೇಳದ ಈ ಕಾಲದಲ್ಲಿ ಹೂವು ಕಟ್ಟುತ್ತಾ ನಿಷ್ಟೆಯಿಂದ ಓದುತ್ತಿದ್ದಾಳೆ ಬನಶಂಕರಿ. ಅಷ್ಟಕ್ಕೂ ಇವಳ ಬಳಿಯಿದ್ದ ಫೋನ್ ಇನ್ನೇನು ಪಾಪ ಗುಜುರಿ ಸೇರುವ ಹಂತದಲ್ಲಿಯೇ ಇತ್ತು ಬಿಡಿ. ಅಚಾನಕ್ ಆಗಿ ಅದ್ಯಾವುದೋ ಸುದ್ದಿಗಾಗಿ ಆದಿಶಕ್ತಿಯ ದೇವಸ್ಥಾನದ ಬಳಿ ರಿಪೋರ್ಟರ್ ನಂದಿನಿ ಹೋಗಿದ್ದಾರೆ. ಏನಮ್ಮಾ ಆಯ್ತಾ ಓದಿ, ಇನ್ನೇನು ಶುರುವಾಯ್ತಲ್ಲ ಎಕ್ಸಾಂ ಅಂತಾ ಅರ್ಚಕರು ಪೂಜೆ ಮುಗಿಸಿ ಹೊರಬರುವಾಗ ಹೂ ಮಾರುತ್ತಿದ್ದ ಹುಡ್ಗಿ ಬನಶಂಕರಿಯನ್ನು ವಿಚಾರಿಸಿದ್ದಾರೆ. ಇದು ನಂದಿನಿ ಜೊತೆಗಿದ್ದ ಡ್ರೈವರ್ ವಿಜಯ್ ಕಿವಿಗೆ ಬಿದ್ದು ನಂದಿನಿಗೆ ಹೇಳಿದ್ದಾರೆ. ಹೌದಾ ಅಂತಾ ಹೇಳಿ ಸುಮ್ಮನಾಗದ ನಂದಿನಿ ಈ ಹೂವು ಮಾರುವ ಹುಡ್ಗಿಯ ಬಳಿ ಮಾತು ಶುರುಹಚ್ಚಿಕೊಂಡಿದ್ದಾರೆ. ಹೂವನ್ನು ಸರಾಗವಾಗಿ ಕಟ್ಟುತ್ತಾ ಅತ್ತ ಆನ್‍ಲೈನ್ ಕ್ಲಾಸನ್ನು ಅಟೆಂಡ್ ಮಾಡುತ್ತಾ ಬನಶಂಕರಿ ಮಾತಿಗಿಳಿದಿದ್ದಾಳೆ. ಹೂಂ ಅಕ್ಕ, ಮನೆಯಲ್ಲಿ ಕಷ್ಟ.. ಓದು ನಂಗಿಷ್ಟ… ಆದ್ರೇ ದುಡಿಮೆನೂ ಬೇಕಲ್ವಾ.. ದುಡ್ಡು ಬೇಕಲ್ವಾ ಅಮ್ಮನ ಜೊತೆ ಸಹಾಯ ಮಾಡ್ತೀನಿ ಹಾಗೂ ಮಧ್ಯಾಹ್ನದ ತನಕ ಕ್ಲಾಸ್ ಅಟೆಂಡ್ ಮಾಡ್ತಾ ನಾನು ಅಮ್ಮನ ಜೊತೆ ಇರ್ತೀನಿ. ಅಕ್ಕಾ ನಾನು ಚೆನ್ನಾಗಿ ಮಾರ್ಕ್ಸ್ ಕೂಡ ತಗೋತಿನಿ ಅಂತಾ ಅದೇ ಕಾನ್ಫಿಡೆನ್ಸ್ ನಲ್ಲಿ ಹೇಳಿದ್ದಾಳೆ.

    ಇದೆಲ್ಲಾ ಬನಶಂಕರಿ ಹೇಳ್ತಿರಬೇಕಾದರೆ ನಂದಿನಿಯ ಕಣ್ಣು ಆ ನಜ್ಜುಗುಜ್ಜಾದ ಮೊಬೈಲ್ ಮೇಲೆ ಹೋಗಿದೆ. ಜೊತೆಗೆ ಅವಳ ಛಲ ಇಷ್ಟವಾಗಿ ಸ್ಫೂರ್ತಿಯ ಹುಡುಗಿಯಿದು. ಇವಳನ್ನು ಕರುನಾಡಿಗೆ ಪರಿಚಯಿಸೋಣ ಅಂತಾ ಕ್ಯಾಮೆರಾದಲ್ಲಿ ಅವಳ ಓದು ಅವಳ ಆಸಕ್ತಿ, ಹೂವು ಕಟ್ಟುವ ಪರಿ ಎಲ್ಲವನ್ನೂ ಸೆರೆಹಿಡಿದು ಸುದ್ದಿಯೂ ಪ್ರಸಾರವಾಯ್ತು. ಅಷ್ಟೇ, ಹೂವು ಮಾರುವ ಹುಡ್ಗಿ ಅದೆಷ್ಟೋ ಜನ್ರ ಮನಸು ಗೆದ್ಲು…!

    ಸ್ಪಂದಿಸಿದವು ಹಲವು ಮನ..!: ಅಚ್ಚರಿ ಏನ್ ಗೊತ್ತಾ..? ಬನಶಂಕರಿ ಕಥೆ ನನ್ನ ಹಳೆಯ ಕಷ್ಟದ ದಿನವನ್ನು ನೆನಪಿಸಿತ್ತು ಅಂತಾ ಪಬ್ಲಿಕ್ ಟಿವಿಯ ವರದಿಯನ್ನು ನೋಡುತ್ತಿದ್ದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಬಂದು ಬನಶಂಕರಿಯನ್ನು ಭೇಟಿಯಾದ್ರು. ಅವ್ರ ಕಣ್ಣಲ್ಲೂ ಭಾವುಕತೆ ಇತ್ತು. ಕಷ್ಟದ ದಿನಗಳೇ ಸಾಧನೆಗೆ ಸ್ಫೂರ್ತಿಯಾಗುತ್ತೆ ಬಿಡು ಹುಡ್ಗಿ ಅಂತಾ ಕೋಟು ಹಾಕಿಕೊಂಡಿದ್ದ ಅಧಿಕಾರಿ ಮನಸ್ಫೂರ್ತಿ ಹಾರೈಸಿದ್ರು. ಅಷ್ಟೇ ಅಲ್ಲ ನಿಂಗೊಂದು ಲ್ಯಾಪ್‍ಟಾಪ್ ಕೊಡಿಸ್ತೀನಿ ಚೆನ್ನಾಗಿ ಓದು, ನಿನ್ನ ಓದಿಗೆ ನಿನ್ನ ಕಷ್ಟಕ್ಕೆ ನಾನಿರ್ತೀನಿ ಅಂತಾ ಪ್ರೀತಿಯಿಂದ ಮೈದಡವಿದ್ರು. ಪಬ್ಲಿಕ್ ಟಿವಿಯ ಎಲ್ಲ ಬುಲೆಟಿನ್‍ನಲ್ಲಿಯೂ ಈ ಹುಡ್ಗಿಯ ಸುದ್ದಿ ಪ್ರಸಾರವಾಗಿತ್ತು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಟ್ವೀಟ್ ಮಾಡಿ ಶಹಬ್ಬಾಸ್ ಮಗಳೇ ನಿನ್ನ ಜೊತೆಗೆ ನಾವಿದ್ದೀವಿ ಅಂತಾ ಪ್ರೀತಿಯ ಸಂದೇಶ ಕಳಿಸಿದ್ರು. ಗೌರವ್ ಗುಪ್ತಾರ ಜೊತೆಗೆ ಮಾತಾನಾಡಿ ಈ ಹುಡ್ಗಿಯ ವಿವರವನ್ನು ಪಡೆದ್ರು. ಇಷ್ಟಕ್ಕೆ ಮುಗಿದಿಲ್ಲ ಒಂದು ಸುದ್ದಿಯ ಪಾಸಿಟಿವ್ ಸ್ಪಂದನೆಯ ಕಥೆ.

    ನಿಮ್ಮ ಬಿಗ್ ಬುಲೆಟಿನ್..!: ಹೂಮಾರುವ ಹುಡ್ಗಿಯ ಮುಖದಲ್ಲಿ ಮತ್ತಷ್ಟು ಹೂ ನಗೆ ತಂದಿದ್ದು ಬಿಗ್ ಬುಲೆಟಿನ್ ಕಾರ್ಯಕ್ರಮ. ಬಿಗ್ ಬುಲೆಟಿನ್‍ನಲ್ಲಿ ಈ ಹುಡ್ಗಿಯ ಮಾತುಗಳು ಪ್ರಸಾರವಾಗುತ್ತಿದ್ದಂತೆ ರಂಗನಾಥ್ ಸರ್ ಜ್ಞಾನದೀವಿಗೆಯ ಪಾಲು ಇವಳಿಗೂ ಹೋಗಬೇಕು ಎಂದುಕೊಂಡ್ರೋ ಏನೋ.! ರಾಜ್ಯದ ಸಾವಿರಾರು ಬಡಮಕ್ಕಳ ಪಾಲಿಗೆ ಈಗಾಗಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಓದಿಕೊಳ್ಳಲು ಟ್ಯಾಬ್ ವಿತರಣೆ ಮಾಡಿರುವ ಪಬ್ಲಿಕ್ ಟಿವಿಗೆ ಹೂ ಮಾರುವ ಹುಡ್ಗಿ ಹೆಚ್ಚಾದಾಳೇ..? ಆಕೆಯ ಸುದ್ದಿ ಪ್ರಸಾರವಾದ ಮರುದಿನವೇ ಹೂ ಮಾರುವ ಹುಡ್ಗಿಗೆ ಪಬ್ಲಿಕ್ ಟಿವಿ ಓದುವ ಟ್ಯಾಬ್ ಕೈಗಿತ್ತಿತ್ತು. ಪುಟಾಣಿ ಹುಡ್ಗಿಯ ಖುಷಿಗೆ ಅವಳ ಕಣ್ಣಲ್ಲಿ ಆನಂದದ ಕಣ್ಣೀರು ತುಂಬಿತ್ತು. ಆದಿಶಕ್ತಿಯ ದೇಗುಲದೊಳಗೆ ಅರ್ಚಕರು ದೇವಿಗೆ ಗಂಟೆ ಮೊಳಗಿಸುವ ಸದ್ದು ಕೇಳಿಸುತ್ತಿತ್ತು. ಅಂದ ಹಾಗೆ ಈ ಪುಟಾಣಿಯ ಮುಂದಿನ ಶಿಕ್ಷಣಕ್ಕೆ ನೆರವಿನ ಹಸ್ತ ಚಾಚಲು ಕೂಡ ಅನೇಕರು ಮುಂದೆ ಬಂದಿದ್ದಾರೆ. ಹೂ ಮಾರುವ ಹುಡ್ಗಿಯ ಹೂ ನಗು ಹೀಗೆ ಇರಲಿ.. ಆಕೆಗೆ ನಿಮ್ಮ ಕಡೆಯಿಂದಲೂ ಹಾರೈಕೆಯಿರಲಿ..!

     

  • 100 ಮಂದಿ SSLC ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆಯಿಂದ ಉಚಿತ ಟ್ಯಾಬ್ ವಿತರಣೆ

    100 ಮಂದಿ SSLC ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆಯಿಂದ ಉಚಿತ ಟ್ಯಾಬ್ ವಿತರಣೆ

    ಬೀದರ್: ಪಬ್ಲಿಕ್ ಟಿವಿ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಗಡಿ ಜಿಲ್ಲೆ ಬೀದರ್‍ನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂದು ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು.

    ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಜಲಸಂಗಿ ಹಾಗೂ ಗಡವಂತಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 100 ಮಂದಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಮಾಡಲಾಯಿತು. ಟ್ಯಾಬ್ ದಾನಿಗಳಾದ ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ್ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆ ಕಾರ್ಯಕ್ರಮದಲ್ಲಿ ಉಚಿತ ಟ್ಯಾಬ್‍ಗಳನ್ನು ವಿತರಣೆ ಮಾಡಿದರು.

    ಕೊರೋನಾ ಸಮಯದಲ್ಲಿ ಶಾಲೆಗಳು ಇಲ್ಲದೇ ಕಲಿಕೆಯಲ್ಲಿ ನಾವು ಹಿಂದೆ ಬಿದಿದ್ದು, ಉಳಿದ ದಿನಗಳನ್ನು ಈ ಟ್ಯಾಬ್ ನೋಡಿಕೊಂಡು ಉತ್ತಮ ಫಲಿತಾಂಶ ತರುತ್ತೇವೆ. ಪಬ್ಲಿಕ್ ಟಿವಿ ನೀಡಿದ ಟ್ಯಾಬ್ ಗಳು ನಮಗೆ ಬಹಳ ಸಹಕಾರಿಯಾಗಿದೆ. ನಮ್ಮಗೆ ಟ್ಯಾಬ್ ನೀಡಿದ ಪಬ್ಲಿಕ್ ಟಿವಿಗೆ ಹಾಗೂ ಟ್ಯಾಬ್ ದಾನಿಗಳಾದ ಶಾಸಕರಿಗೆ ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿದರು.

    ಇಡೀ ರಾಜ್ಯದಲ್ಲೇ ಜ್ಞಾನ ದೀವಿಗೆಯಂತಹ ಒಳ್ಳೆಯ ಕಾರ್ಯಕ್ರಮ ನಡೆಯುತ್ತಿದೆ. ನಾನು ಇದನ್ನು ದೇಣಿಗೆ ಎಂದು ಹೇಳಲ್ಲ, ಕ್ಷೇತ್ರದ ಜನರ ಅಳಿಲು ಸೇವೆ ಮಾಡಲು ನನಗೆ ಪಬ್ಲಿಕ್ ಟಿವಿ ಅವಕಾಶ ಮಾಡಿಕೊಟ್ಟಿದೆ. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಕೆಲಸ ನೀವು ಮಾಡಿದ್ದೀರಿ ಎಂದು ಶಾಸಕರು ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದರು.

    ಈ ವೇಳೆ ಎಂಎಲ್‍ಸಿಗಳಾದ ಚಂದ್ರಶೇಖರ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವ ಬಂಡಪ್ಪ, ಶಿಕ್ಷಕರು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದನ್ನೂ ಓದಿ: ಸಿಇಟಿ ವಿದ್ಯಾರ್ಥಿಗಳಿಗೆ ಕೋವಿಡ್ ರಕ್ಷಕ-ಪರೀಕ್ಷಾ ಪ್ರಾಧಿಕಾರಕ್ಕೆ 2 ಲಕ್ಷ ಸರ್ಜಿಕಲ್ ಮಾಸ್ಕ್ – ಡಿಸಿಎಂಗೆ ಹಸ್ತಾಂತರ

  • ಜ್ಞಾನ ದೀವಿಗೆ – ಹೊಸಪೇಟೆ ತಾಲೂಕಿನ 113 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಜ್ಞಾನ ದೀವಿಗೆ – ಹೊಸಪೇಟೆ ತಾಲೂಕಿನ 113 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಬಳ್ಳಾರಿ: ಪಬ್ಲಿಕ್ ಟಿವಿ ಜ್ಞಾನದೀವಿಗೆ ಕಾರ್ಯ ಮುಂದುವರೆದಿದ್ದು, ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕಬಾಳು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಒಟ್ಟು 113 ಮಕ್ಕಳಿಗೆ ಇಂದು ಉಚಿತವಾಗಿ ಟ್ಯಾಬ್ ವಿತರಣೆ ಮಾಡಲಾಯಿತು.

    ಅದೇ ರೀತಿಯ ಹೊಸಪೇಟೆ ತಾಲೂಕಿನ ಬೈಲುವದ್ದಗೇರಿ ಸರ್ಕಾರಿ ಪ್ರೌಢ ಶಾಲೆಯ 35 ಜನ ಹತ್ತನೇ ತರಗತಿ ಮಕ್ಕಳಿಗೆ ಒಟ್ಟು 17 ಟ್ಯಾಬ್ ಗಳನ್ನು ವಿತರಣೆ ಮಾಡಲಾಯಿತು.

    ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಸಹಕಾರದಿಂದ ಈ ಟ್ಯಾಬ್ ಗಳನ್ನು ವಿತರಣೆ ಮಾಡಲಾಗಿದ್ದು, ಸಚಿವರ ಸಂಬಂಧಿ ಸಂದೀಪ್ ಸಿಂಗ್ ಅವರು, ಇಂದು ಮಕ್ಕಳಿಗೆ ಟ್ಯಾಬ್ ಗಳನ್ನು ವಿತರಣೆ ಮಾಡಿದರು.

    ಕಾಕಬಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ಯಾಬ್ ವಿತರಣೆ ಮಾಡಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ಸಮಯದಲ್ಲಿ ಬಡವರಿಗೆ ಸಹಾಯ ಮಾಡಲು ಅವಕಾಶ ಸಿಕ್ಕಿದ್ದು ಒಳ್ಳೆಯದು, ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದು, ಅವರ ಉಜ್ವಲ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅಲ್ಲದೇ ಕೊರೊನಾ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದಿದ್ದಾರೆ. ಇದನ್ನೂ ಓದಿ: ಮಂಗಳೂರು ವಕೀಲರ ಸಂಘದಿಂದ 500ಕ್ಕೂ ಹೆಚ್ಚು ಮಂದಿಗೆ ವ್ಯಾಕ್ಸಿನ್