Tag: ಟ್ಯಾಟು

  • ನಿಮ್ಮ ಪ್ರೀತಿಯನ್ನ ನೋವಿನ ಮೂಲಕ ತೋರಿಸ್ಬೇಡಿ – ಅಭಿಮಾನಿಗಳಿಗೆ ಸೋನು ಮನವಿ

    ನಿಮ್ಮ ಪ್ರೀತಿಯನ್ನ ನೋವಿನ ಮೂಲಕ ತೋರಿಸ್ಬೇಡಿ – ಅಭಿಮಾನಿಗಳಿಗೆ ಸೋನು ಮನವಿ

    ಮುಂಬೈ: ತನ್ನ ಹೆಸರನ್ನು ಟ್ಯಾಟೂ ಹಾಕಿಕೊಂಡು ಟ್ಟಿಟ್ಟರ್‌ನಲ್ಲಿ ವೀಡಿಯೋ ಹಂಚಿಕೊಂಡ ಅಭಿಮಾನಿ ಪ್ರೀತಿಗೆ, ಟ್ವೀಟ್ ಮಾಡುವ ಮೂಲಕ ಬಾಲಿವುಡ್ ನಟ ಸೋನು ಸೂದ್ ಪ್ರತಿಕ್ರಿಯಿಸಿದ್ದಾರೆ.

    ಸೋನು ಸೂದ್ ಅವರ ಮೇಲಿರುವ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಲು ಅಭಿಮಾನಿಯೊಬ್ಬ ಒಂದು ಉತ್ತಮ ಗಿಫ್ಟ್ ನ್ನು ನೀಡಿದ್ದಾನೆ. ಅಭಿಮಾನಿ ಪ್ರೀತಿಯ ಉಡುಗೊರೆಯನ್ನು ನೋಡಿದ ಸೋನು, ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಸೋನು ಸೂದ್ ಹೆಸರನ್ನು ತನ್ನ ಕೈ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂವನ್ನು ತೋರಿಸುವ ವೀಡಿಯೋ ಇದಾಗಿದೆ. ಈ ವೀಡಿಯೋದಲ್ಲಿ ಜೊತೆಗೆ ತೆಲುಗು ಭಾಷೆಯಲ್ಲಿ ನಮ್ಮ ಹೃದಯದ ಗುಡಿಯಲ್ಲಿ ಇರುವುದು ನೀನೇ ಎಂದು ಬರೆದು ಪೋಸ್ಟ್ ಹಾಕಿದ್ದಾರೆ.

    ಈ ವೀಡಿಯೋವನ್ನು ಶೇರ್ ಮಾಡಿರುವ ನಟ, ಬ್ರದರ್.. ಈ ರೀತಿ ಟ್ಯಾಟೂ ಹಾಕಿಸಿಕೊಳ್ಳಬೇಡ. ನೀವು ನನ್ನನ್ನು ಪ್ರೀತಿಸುತ್ತೀರಿ ಎಂದು ನನಗೆ ಗೊತ್ತಿದೆ. ಆದರೆ ಆ ಪ್ರೀತಿಯನ್ನು ನೋವಿನ ಮೂಲಕ ಈ ರೀತಿಯಾಗಿ ತೋರಿಸಬೇಡ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಸೋನು ಅವರು ಧನ್ಯವಾದವನ್ನು ತಿಳಿಸಿದ್ದಾರೆ.

    ಪ್ರಪಂಚದಾದ್ಯಂತ ಕೊರೊನಾ ಸೋಂಕು ಹರಡಿರುವಾಗ ದೇವರಂತೆ ಬಂದು ಕೈಹಿಡಿದಿದ್ದು ಬಾಲಿವುಡ್ ನಟ ಸೂನು ಸೂದ್. ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಸೋನು ಅವರು ನಿರ್ಗತಿಕರಿಗೆ ಸಹಾಯವನ್ನು ಮಾಡುವ ಮೂಲಕ ರೀಯಲ್ ಹೀರೋ ಆಗಿ ಮಿಂಚಿದ್ದಾರೆ. ಅಂದಿನಿಂದ ಸೋನು ಅವರ ಅಭಿಮಾನಿಗಳ ಬಳಗ ದೊಡ್ಡ ಪ್ರಮಾಣದಲ್ಲಿಯೇ ಬೆಳೆದುಕೊಂಡಿದೆ.

    ಕೆಲವು ದಿನಗಳ ಹಿಂದೆ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪಾಠವನ್ನು ಕೇಳಲು ಸ್ಮಾರ್ಟ್ ಫೋನ್ ನೀಡುವ ಮೂಲಕವಾಗಿ ಸುದ್ದಿಯಾಗಿದ್ದರು. ಯಾರೆ ಕಷ್ಟ ಎಂದರೂ ಅಲ್ಲಿ ಮೊದಲು ಕಾಣಿಸಿಕೊಳ್ಳುತ್ತಿರುವುದೇ ಸೋನು ಸೂದ್ ಅವರಾಗಿದ್ದಾರೆ. ಅಭಿಮಾನಿಗಳು ಸೋನು ಅವರ ಸಹಾಯಕ್ಕೆ ಮೆಚ್ಚಿ ಅವರದ್ದೇ ಆಗಿರುವ ರೀತಿಯಲ್ಲಿ ಪ್ರೀತಿಯನ್ನು ತೋರಿಸುತ್ತಿರುತ್ತಾರೆ. ಸೋನು ಸೂದ್ ಅವರ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಇದೀಗ ಅಭಿಮಾನಿಯೊಬ್ಬ ಟ್ಯಾಟೂ ಹಾಕಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

  • ನಯನತಾರಾಗೆ ಕಾಡಿದ ಟ್ಯಾಟು

    ನಯನತಾರಾಗೆ ಕಾಡಿದ ಟ್ಯಾಟು

    ಚೆನ್ನೈ: ಬಹುಭಾಷಾ ನಟಿ, ಕ್ಯೂಟ್ ಬೆಡಗಿ ನಯನತಾರಾ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಹೆಸರು ವಾಸಿ, ಅದೇ ರೀತಿ ಅವರು ಬೆಳೆದಿದ್ದಾರೆ ಸಹ. ಘಟಾನುಘಟಿ ನಾಯಕರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ದಕ್ಷಿಣ ಸಿನಿ ರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ನಟನೆಯಲ್ಲಿನ ಅವರ ಸಾಧನೆ ಜೊತೆಗೆ ನಿಜ ಜೀವನದಲ್ಲಿ ಅವರ ಸರಣಿ ಪ್ರೇಮ್ ಕಹಾನಿಗಳು ಸಹ ಅಷ್ಟೇ ಚರ್ಚೆಯಾಗಿದ್ದವು. ಇದೆಲ್ಲದರ ನಡುವೆ ಒಂದು ಟ್ಯಾಟು ನಯನತಾರಾ ಅವರನ್ನು ತುಂಬಾ ಚಿಂತೆಗೆ ದೂಡಿತ್ತು.

    ಹೌದು ನಟಿ ನಯನತಾರಾ ಅವರಿಗೆ ಆ ಟ್ಯಾಟು ಸಖತ್ ಹಿಂಸೆ ನೀಡಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಬಣ್ಣದ ಬದುಕಿನ ರೀತಿ ನಿಜ ಜೀವನದಲ್ಲಿಯೂ ಕೆಲವು ಲವ್ ಸ್ಟೋರಿಗಳಿದ್ದು, ಇವೇನು ಗುಟ್ಟಾಗಿ ಉಳಿದಿಲ್ಲ. ಸಿಂಬು, ಪ್ರಭುದೇವ, ವಿಘ್ನೇಶ್ ಶಿವನ್ ಜೊತೆ ನಯನತಾರಾ ಪ್ರೀತಿಯಲ್ಲಿ ಬಿದ್ದ ವಿಚಾರ ತಿಳಿದೇ ಇದೆ. ಹೀಗೆ ಸರಣಿ ಪ್ರೇಮ್‍ಕಹಾನಿಗಳಲ್ಲಿ ಒಂದು ಟ್ಯಾಟು ನಯನತಾರಾಗೆ ಸಿಕ್ಕಾಪಟ್ಟೆ ಕಾಟ ಕೊಟ್ಟಿದೆ. ಇದು ಅವರನ್ನು ದುಃಸ್ವಪ್ನವಾಗಿ ಸಹ ಕಾಡಿದೆ. ಇದನ್ನು ತಗೆಸಲು ಸಹ ಅವರು ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರು.

    ಅದ್ಯಾವ ಪ್ರೇಮ, ಯಾರ ಜೊತೆಗೆ ಅಂತೀರಾ ಇಲ್ಲಿದೆ ನೋಡಿ ಉತ್ತರ. ಖ್ಯಾತ ಡ್ಯಾನ್ಸರ್ ಪ್ರಭುದೇವ ಜೊತೆ ನಯನತಾರಾ 2010ರಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರು. ಮದುವೆ ಆಗುತ್ತೇವೆ ಎಂಬ ಭರವಸೆ ಇದ್ದಿದ್ದರಿಂದ ಹಚ್ಚೆ ಹಾಕಿಸಿಕೊಂಡಿದ್ದರು. ಆದರೆ ಲವ್ ಶುರುವಾಗಿ ಮೂರೇ ವರ್ಷಕ್ಕೆ ವೈಮನಸ್ಸು ಉಂಟಾಯಿತು. ಪ್ರಭುದೇವ ಮತ್ತು ನಯನತಾರಾ ಬ್ರೇಕಪ್ ಮಾಡಿಕೊಂಡರು.

    ಬಳಿಕ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಯನತಾರಾ ಸಲುಗೆ ಬೆಳೆಸಿಕೊಂಡರು. ಹೀಗೆ ಪ್ರೀತಿ ಸಹ ಬೆಳೆಯಿತು ಆದರೆ ನಯನತಾರಾ ಕೈ ಮೇಲೆ ಇರುವ ಪ್ರಭುದೇವ ಹೆಸರು ವಿಘ್ನೇಶ್ ಶಿವನ್‍ಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಗಾಸಿಪ್‍ಗಳು ಹರಿದಾಡಲಾರಂಭಿಸಿದವು. ಇದು ನಯನತಾರಾ ಅವರಿಗೂ ಇರುಸುಮುರುಸು ಉಂಟು ಮಾಡಿತ್ತು. ಹೀಗಾಗಿ ಟ್ಯಾಟು ತಗೆಸಲೇಬೇಕು ಎಂಬ ನಿರ್ಧಾರವನ್ನು ನಯನತಾರಾ ಮಾಡಿದ್ದರು.

    ಅಂದಹಾಗೆ ನಯನತಾರಾ ಹಾಕಿಸಿಕೊಂಡ ಟ್ಯಾಟು ಏನು ಗೊತ್ತಾ? ಇಲ್ಲಿದೆ ನೋಡಿ, ಇಂಗ್ಲಿಷ್‍ನ ಪಿ ಅಕ್ಷರದ ಮುಂದೆ ತಮಿಳಿನ ಅಕ್ಷರಗಳನ್ನು ಸೇರಿಸಿ, ಪ್ರಭು ಎಂದು ಹಚ್ಚೆ ಹಾಕಿಸಿಕೊಂಡಿದ್ದರು. ಇದು ವಿಘ್ನೇಶ್ ಅವರಿಗೆ ಮಾತ್ರವಲ್ಲ ಸ್ವತಃ ನಯನತಾರಾ ಅವರಿಗೆ ದುಃಸ್ವಪ್ನವಾಗಿ ಕಾಡಲು ಶುರುವಾಯಿತು. ಅದು ಪರ್ಮನೆಂಟ್ ಟ್ಯಾಟು ಆಗಿದ್ದರಿಂದ ಅಳಿಸುವುದು ಸಹ ಅಷ್ಟು ಸುಲಭವಾಗಿರಲಿಲ್ಲ. ಆದರೆ ಇದಕ್ಕೆ ಮುಕ್ತಿ ಕಾಣಿಸಲೇಬೇಕಿತ್ತು. ಹೀಗಾಗಿ ಉಪಾಯ ಮಾಡಿದ ನಯನತಾರಾ, ಪ್ರಭು ಇದ್ದಿದ್ದನ್ನು ಪಾಸಿಟಿವಿಟಿ ಎಂದು ಬದಲಾಯಿಸಿದರು. ನಂತರ ಈ ಹಚ್ಚೆಯನ್ನು ಬೇಕಂತಲೇ ಹೆಚ್ಚು ಕಾಣುವಂತೆ ಪ್ರದರ್ಶನ ಮಾಡುತ್ತಿದ್ದರು.

    ತೆಲುಗು, ತಮಿಳು ಮತ್ತು ಮಲಯಾಳಂ ಇಂಡಸ್ಟ್ರಿಗಳಲ್ಲಿ ನಯನತಾರಾ ಪ್ರಸಿದ್ಧಿ ಪಡೆದಿದ್ದಾರೆ. ಅಲ್ಲದೆ ‘ಸೂಪರ್’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿಯೂ ನಟಿಸಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ನೀಡಿ 17 ವರ್ಷಗಳಾದರೂ ಅದೇ ಚಾರ್ಮ್ ಉಳಿಸಿಕೊಂಡು ಬಂದಿದ್ದು, ಈಗಲೂ ಸ್ಟಾರ್ ನಟರಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

  • ರೌಡಿಶೀಟರ್ ಕೈನಲ್ಲಿದ್ದ ಟ್ಯಾಟೂ ನೋಡಿ ಎಸ್‍ಪಿ ಗರಂ

    ರೌಡಿಶೀಟರ್ ಕೈನಲ್ಲಿದ್ದ ಟ್ಯಾಟೂ ನೋಡಿ ಎಸ್‍ಪಿ ಗರಂ

    ಮಂಡ್ಯ: ರೌಡಿ ಶೀಟರ್ ಗಳ ಕೈ ಮೇಲಿದ್ದ ಟ್ಯಾಟೂಗಳನ್ನು ನೋಡಿ ಮಂಡ್ಯ ಎಸ್‍ಪಿ ಶಿವಪ್ರಕಾಶ್ ದೇವರಾಜ್ ಗರಂ ಆಗಿದ್ದಾರೆ.

    ಅಸುರಕ್ಷಿತವಾಗಿ ಟ್ಯಾಟೂ ಹಾಕಿಸಿಕೊಂಡರೆ ಏಡ್ಸ್ ಬರುವ ಸಾಧ್ಯತೆ ಇದೆ ಎಂದು ಬುದ್ಧಿವಾದ ಹೇಳಿದ್ದಾರೆ. ಶನಿವಾರ ಮಂಡ್ಯದ ಡಿಆರ್ ಗ್ರೌಂಡ್‍ನಲ್ಲಿ ರೌಡಿಶೀಟರ್ ಗಳ ಪೆರೇಡ್ ಹಮ್ಮಿಕೊಳ್ಳಲಾಗಿತ್ತು. ಮಂಡ್ಯ ಜಿಲ್ಲೆಯ ಎಲ್ಲ ರೌಡಿಶೀಟರ್ ಗಳನ್ನು ಒಂದು ಕಡೆ ಕರೆಸಿ ಯಾವುದೇ ರೀತಿಯ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದೆ ಸನ್ಮಾರ್ಗದಲ್ಲಿ ನಡೆಯುವಂತೆ ಎಚ್ಚರಿಕೆ ನೀಡಲಾಯಿತು.

    ಈ ವೇಳೆ ಬಹುತೇಕ ರೌಡಿ ಶೀಟರ್‍ಗಳು ಟ್ಯಾಟೂ ಹಾಕಿಸಿಕೊಂಡಿದ್ದನ್ನು ಗಮನಿಸಿದ ಎಸ್‍ಪಿ ಗರಂ ಆಗಿದ್ದಲ್ಲದೇ ಅಸುರಕ್ಷಿತವಾಗಿ ಟ್ಯಾಟೂ ಹಾಕಿಸಿಕೊಂಡರೆ ಏಡ್ಸ್ ಬರುತ್ತೆ ಎಂದು ತಿಳುವಳಿಕೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎದೆ ಮೇಲೆ ನೆಚ್ಚಿನ ರಾಜಕಾರಣಿಯ ಟ್ಯಾಟೂ ಹಾಕಿಸಿದ ಅಭಿಮಾನಿ!

    ಎದೆ ಮೇಲೆ ನೆಚ್ಚಿನ ರಾಜಕಾರಣಿಯ ಟ್ಯಾಟೂ ಹಾಕಿಸಿದ ಅಭಿಮಾನಿ!

    ವಿಜಯಪುರ: ನೆಚ್ಚಿನ ನಾಯಕ ನಟ ಹಾಗೂ ನಟಿಯರ ಟ್ಯಾಟೂ ಹಾಕಿಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಅಭಿಮಾನಿ ತಮ್ಮ ನೆಚ್ಚಿನ ರಾಜಕಾರಣಿಯ ಶಾಶ್ವತ ಹಚ್ಚೆ ಹಾಕಿಕೊಂಡಿದ್ದಾರೆ.

    ವಿಜಯಪುರ ನಗರದ ಗ್ಯಾಂಗಬಾವಡಿ ನಿವಾಸಿ ಪಪ್ಪು ಪವಾರ ಎಂಬಾತ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿಯ ಭಾವಚಿತ್ರವನ್ನು ತನ್ನ ಎದೆಯ ಮೇಲೆ ಹಾಕಿಸಿಕೊಂಡಿದ್ದಾರೆ. ಇನ್ನು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಅಪ್ಪು ಪಟ್ಟಣಶೆಟ್ಟಿಗೆ ಟಿಕೆಟ್ ನೀಡಬೇಕೆಂದು ಅಭಿಮಾನಿ ಪಪ್ಪುನ ಒತ್ತಾಯ.

    ಅಲ್ಲದೇ ಯುವಕರಿಗೆ ಆದರ್ಶವಾಗಿರುವ ಅಪ್ಪು ಪಟ್ಟಣಶೆಟ್ಟಿ ಜನಸಾಮಾನ್ಯರೊಂದಿಗೆ ಬೆರೆಯುವ ಮನಸ್ಸಿನವರು. ಅಲ್ಲದೇ ನೇರ ಸಂಪರ್ಕಕ್ಕೆ ಸುಲಭವಾಗಿ ಸಿಗುತ್ತಾರೆ. ಜನ ಸಾಮಾನ್ಯರೊಂದಿಗೆ ಬೆರೆಯುವ ನಾಯಕರಾದ ಅಪ್ಪು ಪಟ್ಟಣಶೆಟ್ಟಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಬೇಕೆಂದು ಅಭಿಮಾನಿಯ ಆಶಯ ವ್ಯಕ್ತಪಡಿಸಿದ್ದಾರೆ.

    ಇನ್ನು ಪಪ್ಪು ಎಸ್.ಎಸ್.ಎಲ್.ಸಿವರೆಗೆ ಓದಿದ್ದು, ಸದ್ಯ ಪೇಂಟಿಂಗ್ ಕೆಲಸ ಮಾಡುತ್ತಾರೆ. ನಮ್ಮ ಮೆಚ್ಚಿನ ಹೀರೋಗಾಗಿ ಸುಮಾರು 3000 ರೂಪಾಯಿ ಖರ್ಚು ಮಾಡಿ ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆಂದು ಹೇಳಿದ್ದಾರೆ.