Tag: ಟ್ಟಿಟ್ಟರ್

  • ನನಗೆ ಪದವಿ ಮುಖ್ಯ ಅಲ್ಲ, ದೇಶವೇ ಮುಖ್ಯ – ಮತ್ತೆ ಸಿಡಿದ ಸಿಬಲ್‌

    ನನಗೆ ಪದವಿ ಮುಖ್ಯ ಅಲ್ಲ, ದೇಶವೇ ಮುಖ್ಯ – ಮತ್ತೆ ಸಿಡಿದ ಸಿಬಲ್‌

    ನವದೆಹಲಿ: ಪಕ್ಷ ನಿಷ್ಠೆಯ ಬಗ್ಗೆ ಮಾತನಾಡಿದ್ದಕ್ಕೆ ಬಹಿರಂಗವಾಗಿಯೇ ರಾಹುಲ್‌ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಹಿರಿಯ ಮುಖಂಡ, ವಕೀಲ ಕಪಿಲ್‌ ಸಿಬಲ್‌ ಇಂದು ಮತ್ತೊಂದು ಟ್ವೀಟ್‌ ಮಾಡಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

    ನನಗೆ ಪದವಿ ಮುಖ್ಯ ಅಲ್ಲ. ದೇಶ ಮುಖ್ಯ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಯಾರ ಹೆಸರನ್ನು ಮತ್ತು ಯಾವುದೇ ವಿಚಾರವನ್ನು ಸ್ಪಷ್ಟವಾಗಿ ತಿಳಿಸಿಲ್ಲ.

    ಸಭೆ ಏನಾಗಿತ್ತು?
    ಸೋಮವಾರ ನಡೆದ ಸಭೆಯಲ್ಲಿ 23 ನಾಯಕರು ಬರೆದ ಪತ್ರಕ್ಕೆ ರಾಹುಲ್‌ ಗಾಂಧಿ ಸಿಟ್ಟಾಗಿದ್ದರು. ಅಷ್ಟೇ ಅಲ್ಲದೇ ನಾಯಕರು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

    kpail sibal

    ಈ ಆರೋಪಕ್ಕೆ ಸಿಬಲ್‌, ನಾವು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದೇವೆ ಎಂದು ರಾಹುಲ್‌ ಗಾಂಧಿ ಹೇಳುತ್ತಾರೆ. ಆದರೆ ನಾವು ಕಳೆದ 30 ವರ್ಷಗಳಲ್ಲಿ ಯಾವುದೇ ವಿಷಯದ ಬಗ್ಗೆ ಬಿಜೆಪಿ ಪರವಾಗಿ ಹೇಳಿಕೆ ನೀಡಿಲ್ಲ. ರಾಜಸ್ಥಾನ ಹೈಕೋರ್ಟ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಬಿಜೆಪಿ ಸರ್ಕಾರವನ್ನು ಉರುಳಿಸಿ ಮಣಿಪುರದಲ್ಲಿ ಹಾಲಿ ಪಕ್ಷವನ್ನು ತರುವಲ್ಲಿ ನೆರವಾದೆ. ಆದರೂ ನಾವು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದೇವೆ ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದರು.

    ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ರಾಹುಲ್‌ ಗಾಂಧಿ ಕಪಿಲ್‌ ಸಿಬಲ್‌ ಜೊತೆ ಕರೆ ಮಾಡಿ ಮಾತನಾಡಿದ್ದರು. ಬಳಿಕ ಕಪಿಲ್‌ ಸಿಬಲ್‌ ಯೂಟರ್ನ್‌ ಹೊಡೆದಿದ್ದರು. ರಾಹುಲ್‌ ಗಾಂಧಿ ನನಗೆ ಜೊತೆ ಮಾತನಾಡಿ ನಿಮ್ಮನ್ನು ಉದ್ದೇಶಿಸಿ ಹೇಳಿಲ್ಲ ಎಂದು ಹೇಳಿದರು. ಹೀಗಾಗಿ ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಹೇಳಿ ಮೊದಲು ಮಾಡಿದ್ದ ಟ್ವೀಟ್‌ ಡಿಲೀಟ್‌ ಮಾಡಿದ್ದರು.

  • ಬಂಧನಕ್ಕೂ 10 ದಿನ ಮೊದಲೇ ರಶೀದ್‍ಗೆ ನೋಟಿಸ್ ನೀಡ್ಬೇಕು: ದೆಹಲಿ ಕೋರ್ಟ್

    ಬಂಧನಕ್ಕೂ 10 ದಿನ ಮೊದಲೇ ರಶೀದ್‍ಗೆ ನೋಟಿಸ್ ನೀಡ್ಬೇಕು: ದೆಹಲಿ ಕೋರ್ಟ್

    – ದೇಶದ್ರೋಹ ಪ್ರಕರಣದ ಆರೋಪಿ ಶೆಹ್ಲಾ

    ನವದೆಹಲಿ: ಸಾಮಾಜಿಕ ಹೋರಾಟಗಾರ್ತಿ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‍ಯು) ವಿದ್ಯಾರ್ಥಿ ಸಂಘಟನೆಯ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಬಂಧನಕ್ಕೂ 10 ದಿನಗಳ ಮುನ್ನ ನೋಟಿಸ್ ನೀಡಬೇಕು ಎಂದು ದೆಹಲಿ ಕೋರ್ಟ್ ಆದೇಶಿಸಿದೆ.

    ಶೆಹ್ಲಾ ರಶೀದ್ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಸೈನ್ಯವನ್ನು ದೂಷಿಸಿದ್ದರು. ಈ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ದೆಹಲಿ ಕೋರ್ಟ್, ಶೆಹ್ಲಾ ರಶೀದ್ ಅವರನ್ನು ಬಂಧಿಸುವ ಅಗತ್ಯವಿದ್ದಲ್ಲಿ 10 ದಿನಗಳ ಮೊದಲೇ ಬಂಧನ ನೋಟಿಸ್ ನೀಡಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡಿದೆ. ಇದನ್ನೂ ಓದಿ: RSS, ನಿತಿನ್ ಗಡ್ಕರಿ ಸೇರಿ ಮೋದಿ ಹತ್ಯೆಗೆ ಪ್ಲಾನ್ – ಜೆಎನ್‍ಯು ವಿದ್ಯಾರ್ಥಿನಿ ಆರೋಪ

    ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಯಾವುದೇ ಅಧಿಕಾರವಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಅವರನ್ನು ಶಕ್ತಿ ಹೀನರನ್ನಾಗಿ ಮಾಡಲಾಗಿದೆ. ಎಲ್ಲವೂ ಅರೆ ಸೈನಿಕರ ಕೈಯಲ್ಲಿದೆ. ಸಿಆರ್‍ಪಿಎಫ್ ಸಿಬ್ಬಂದಿ ಸೂಚನೆ ಮೇರೆಗೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಸಶಸ್ತ್ರ ಪಡೆಗಳು ರಾತ್ರಿ ಮನೆಗೆ ನುಗ್ಗಿ ದರೋಡೆ ಮಾಡುತ್ತಿವೆ ಎಂದು ಶೆಹ್ಲಾ ರಶೀದ್ ಟ್ವೀಟ್ ಮೂಲಕ ಆರೋಪ ಮಾಡಿದ್ದರು.

    ಈ ಸಂಬಂಧ ಸುಪ್ರೀಂ ಕೋರ್ಟ್ ವಕೀಲ ಅಲೋಕ್ ಶ್ರೀವಾಸ್ತವ್ ಅವರು ದೂರು ನೀಡಿದ್ದರು. ಈ ದೂರಿನ ಅನ್ವಯ ದೆಹಲಿ ಪೊಲೀಸರು ಶೆಹ್ಲಾ ರಶೀದ್ ವಿರುದ್ಧ ಐಪಿಸಿ ಸೆಕ್ಷನ್ 124-ಎ (ದೇಶದ್ರೋಹ), 153 (ದೊಂಬಿ ಎಬ್ಬಿಸುವ ಸಲುವಾಗಿ ಹೊಣೆಗಾರಿಕೆ ಮರೆತು ಪ್ರಚೋದನೆ ಹೇಳಿಕೆ ನೀಡುವುದು), 153-ಎ (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ವೈಷಮ್ಯವನ್ನು ಉತ್ತೇಜಿಸುವುದು) ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಕುರಿತು ಪ್ರತಿಕ್ರಿಯಿಸಿದ್ದ ವಕೀಲ ಅಲೋಕ್ ಶಿವಾಸ್ತವ್, ಭಾರತೀಯ ಸೇನೆಯ ಕುರಿತಾಗಿ ಶೆಹ್ಲಾ ರಶೀದ್ ಮಾಡಿದ ಆರೋಪ ಸಂಪೂರ್ಣ ಸುಳ್ಳು. ಅವರು ತಮ್ಮ ಆರೋಪಕ್ಕೆ ಯಾವುದೇ ಸಾಕ್ಷಿಯನ್ನು ಒದಗಿಸಿಲ್ಲ. ಈ ಮಾಹಿತಿಯನ್ನು ಆಧರಿಸಿ ಅಂತರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಈ ಮೂಲಕ ಭಾರತದ ಹೆಸರಿಗೆ ಕಳಂಕ ತರಲಾಗಿದೆ ಎಂದು ದೂರಿದ್ದರು.

  • ಭಾರತವನ್ನು ಟೀಕಿಸಲು ಹೋಗಿ ಮತ್ತೊಮ್ಮೆ ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕ್!

    ಭಾರತವನ್ನು ಟೀಕಿಸಲು ಹೋಗಿ ಮತ್ತೊಮ್ಮೆ ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕ್!

    ನವದೆಹಲಿ: ಭಾರತವನ್ನು ಟೀಕಿಸಲು ತಿರುಚಿದ ಫೋಟೋವನ್ನು ಪ್ರಕಟಿಸುವ ಮೂಲಕ ಪಾಕಿಸ್ತಾನ ಮತ್ತೊಮ್ಮೆ ತನ್ನ ಮಾನವನ್ನು ಕಳೆದುಕೊಂಡು ತೀವ್ರ ಟೀಕೆಗೆ ಗುರಿಯಾಗಿದೆ.

    ಆಗಿದ್ದು ಇಷ್ಟು ಹೆಸರಿನಲ್ಲಿರುವ ಅಧಿಕೃತ ಟ್ಟಿಟ್ಟರ್ ಖಾತೆಯೊಂದು ನವೆಂಬರ್ 16 ರಂದು ಒಂದು ಯುವತಿಯೊಬ್ಬಳು ಪೋಸ್ಟರ್ ಹಿಡಿದುಕೊಂಡಿರುವ ಫೋಟೋ ಇರುವ ಟ್ವೀಟ್ ಪ್ರಕಟಿಸಿತ್ತು. ಯುವತಿಯು “ನಾನು ಭಾರತೀಯಳು, ಆದರೆ ನಾನು ಭಾರತವನ್ನು ವಿರೋಧಿಸುತ್ತೇನೆ ಎನ್ನುವ ಪೋಸ್ಟರ್ ಹಿಡಿದಿದ್ದಳು. ಈ ಟ್ವೀಟ್ ಗೆ ಪಾಕಿಸ್ತಾನ ಡಿಫೆನ್ಸ್,”ಭಾರತ ವಸಾಹತುಶಾಹಿ ದೇಶ ಎನ್ನುವುದು ಕೊನೆಗೂ ಭಾರತೀಯರಿಗೆ ಅರಿವಾಗಿದೆ” ಎಂದು ಶೀರ್ಷಿಕೆಯನ್ನು ಹಾಕಿತ್ತು.

    ಈ ಟ್ವೀಟ್ ಪ್ರಕಟವಾಗಿದ್ದೆ ತಡ ಭಾರತೀಯರು ರೊಚ್ಚಿಗೆದ್ದು, ಪಾಕ್ ಡಿಫೆನ್ಸ್ ಸುಳ್ಳು ಸುದ್ದಿಯನ್ನು ಹರಡಿಸುತ್ತಿದೆ. ಭಾರತೀಯ ಯುವತಿಯ ಪೋಸ್ಟರ್ ತಿರುಚಿ ತನಗೆ ಬೇಕಾದಂತೆ ಎಡಿಟ್ ಮಾಡಿ ಪೋಸ್ಟ್ ಪ್ರಕಟಿಸಿದೆ. ಈ ಮೂಲಕ ಟ್ವಿಟ್ಟರ್ ನಿಯಮವನ್ನು ಉಲ್ಲಂಘಿಸಿದೆ ಎಂದು ಹೇಳಿ ರಿಪೋರ್ಟ್ ಮಾಡಲು ಆರಂಭಿಸಿದ್ದರು.

     

    ಸುದ್ದಿ ವೈರಲ್ ಆಗಿ ರಿಪೋರ್ಟ್ ಜಾಸ್ತಿ ಆಗುತ್ತಿದ್ದಂತೆ ಟ್ವಿಟ್ಟರ್ ಈಗ ಈ ಖಾತೆಯನ್ನು ಅಮಾನತಿನಲ್ಲಿಟ್ಟಿದೆ.

    ಪಾಕ್ ಡಿಫೆನ್ಸ್ ಟ್ವೀಟ್ ಮಾಡಿದ್ದ ಫೋಟೋದಲ್ಲಿದ್ದ ಯುವತಿ ಈ ಹಿಂದೆ ಭಾರತದಲ್ಲಿ ಆಗುತ್ತಿದ್ದ ಕೋಮುಗಲಬೆಯನ್ನು ಖಂಡಿಸಿ ಮಸೀದಿಯೊಂದರ ಮುಂದೆ ಪೋಸ್ಟರ್ ಹಿಡಿದು ನಿಂತಿದ್ದಳು. ಈ ಪೋಸ್ಟರ್ ನಲ್ಲಿ ಭಾರತದ ಸಂವಿಧಾನಕ್ಕೆ ನಾನು ಗೌರವ ನೀಡುತ್ತೇನೆ ಎನ್ನುವ ವಾಕ್ಯವಿತ್ತು.

    ಪಾಕಿಸ್ತಾನ ಭಾರತವನ್ನು ಟೀಕಿಸಲು ಹೋಗಿ ತನ್ನ ಮಾನವನ್ನು ಕಳೆದುಕೊಳ್ಳುವುದು ಇದೆ ಮೊದಲೆನಲ್ಲ. ಈ ಹಿಂದೆ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರತಿನಿಧಿ ಮಲೇಹಾ ಲೋಧಿ ಭಾರತದ ಕಾಶ್ಮೀರದಲ್ಲಿ ಹೇಗೆ ಹಿಂಸಾಚಾರ ನಡೆಯುತ್ತಿದೆ ಎನ್ನುವುದನ್ನು ವಿಶ್ವಕ್ಕೆ ತೋರಿಸಲು ಪೆಲೆಟ್ ಗನ್‍ನಿಂದ ಗಾಯಗೊಂಡಿದ್ದ ಯುವತಿ ಫೋಟೋವನ್ನು ಪ್ರದರ್ಶಿಸಿದ್ದರು. ಆದರೆ ಈ ಫೋಟೋ ಗಾಜಾ ಯುದ್ಧ ಸಂದರ್ಭದಲ್ಲಿನ ಫೋಟೋ ಎಂದು ಮಾಧ್ಯಮಗಳು ಪ್ರಕಟಿಸುವ ಮೂಲಕ ಪಾಕ್ ನೈಜ ಬಣ್ಣವನ್ನು ಬಯಲು ಮಾಡಿತ್ತು. ಗಾಜಾ ಯುದ್ಧದ ಸಂದರ್ಭದಲ್ಲಿ ದಾವಿ ಅಬು ಜೊಮ್(17) ಯುವತಿ ಗಾಯಗೊಂಡಿದ್ದಳು. ಈ ಫೋಟೋವನ್ನು ಪಾಕ್ ಅಧಿಕಾರಿ ಪ್ರದರ್ಶಿಸಿದ ಬಳಿಕ ವಿಶ್ವದಾದ್ಯಂತ ಪಾಕ್ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು.

    ಇದಾದ ಬಳಿಕ ಪಾಕಿಸ್ತಾನ ಸರ್ಕಾರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ದೇಶದ ಪಾರಂಪರೆಯ ತಾಣಗಳ ವಿಡಿಯೋದಲ್ಲಿ ಅಫ್ಘಾನಿಸ್ತಾನದ ಮಸೀದಿಯನ್ನು ಪ್ರಕಟಿಸಿ ಎಡವಟ್ಟು ಮಾಡಿಕೊಂಡಿತ್ತು. ಪಾಕ್ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆ ಯಲ್ಲಿ ಒಂದು ವಿಡಿಯೋ ಅಪ್ಲೋಡ್ ಆಗಿತ್ತು. ಈ ಪರಂಪರೆಯ ತಾಣಗಳನ್ನು ವಿವರಿಸುವ ವಿಡಿಯೋ ಗೆ ದೇಶದ ನಾಗರಿಕತೆ, ಪರಂಪರೆ, ಸಂಸ್ಕೃತಿಯನ್ನು ತೋರಿಸುವ ಸುಂದರ ದೃಶ್ಯಗಳು ಎನ್ನುವ ಶೀರ್ಷಿಕೆಯನ್ನು ಹಾಕಿತ್ತು. ಆದರೆ ಈ ವಿಡಿಯೋದಲ್ಲಿ ಅಫ್ಘಾನಿಸ್ತಾನದ ಪ್ರಸಿದ್ಧ ಹಜರ್ ಅಲಿ ಮಸೀದಿಯ ಫೋಟೋವನ್ನು ತೋರಿಸಿತ್ತು. ಈ ಫೋಟೋ ನೋಡಿದ ಜನರು ಪಾಕ್ ಸರ್ಕಾರದ ಎಡವಟ್ಟನ್ನು ತೋರಿಸಿದ ಕೂಡಲೇ ಈ ವಿಡಿಯೋ ಖಾತೆಯಿಂದ ಈಗ ಡಿಲೀಟ್ ಆಗಿತ್ತು.

    https://youtu.be/cYL8Bo_YolA