Tag: ಟೌನ್ ಹಾಲ್

  • ಫ್ರೀಡಂಪಾರ್ಕ್ ಮಾತ್ರವಲ್ಲದೇ ಟೌನ್‌ಹಾಲ್‌ನಲ್ಲೂ ಪ್ರತಿಭಟನೆಗೆ ಅವಕಾಶ – ಸಿಎಂ ಭರವಸೆ

    ಫ್ರೀಡಂಪಾರ್ಕ್ ಮಾತ್ರವಲ್ಲದೇ ಟೌನ್‌ಹಾಲ್‌ನಲ್ಲೂ ಪ್ರತಿಭಟನೆಗೆ ಅವಕಾಶ – ಸಿಎಂ ಭರವಸೆ

    ಬೆಂಗಳೂರು: ಮೊದಲೆಲ್ಲಾ ಸಿಕ್ಕ ಸಿಕ್ಕ ಕಡೆ ಪ್ರತಿಭಟನೆ (Protest) ಮಾಡುತ್ತಿದ್ದರು. ಆದರೆ ಈಗ ಬೆಂಗಳೂರಿನಲ್ಲಿ (Bengaluru) ಸಿಕ್ಕಸಿಕ್ಕ ಕಡೆ ಪ್ರತಿಭಟನೆ ಮಾಡುವಂತಿಲ್ಲ. ಕೋರ್ಟ್ ಆದೇಶದಂತೆ ಫ್ರೀಡಂಪಾರ್ಕ್ (Freedom Park)  ಹೊರತುಪಡಿಸಿ ಬೇರಡೆ ಪ್ರತಿಭಟನೆಗೆ ಅವಕಾಶ ಇಲ್ಲ. ಆದರೆ ಸರ್ಕಾರ ಈಗ ಈ ನಿರ್ಧಾರವನ್ನು ಬದಲಾಯಿಸಲು ಕಾನೂನಾತ್ಮಕ ಹೆಜ್ಜೆ ಇಡಲು ಸಜ್ಜಾಗಿದೆ.

    ಬೆಂಗಳೂರಿನಲ್ಲಿ ಪ್ರತಿಭಟನೆಗೆ ಫ್ರೀಡಂಪಾರ್ಕ್ ಫಿಕ್ಸ್ ಆಗಿರುವ ಸ್ಥಳ. ಅದನ್ನು ಹೊರತುಪಡಿಸಿ ಬೇರೆ ಕಡೆ ಪ್ರತಿಭಟನೆ ಮಾಡುವಂತಿಲ್ಲ. ಇದು ಹೈಕೋರ್ಟ್ ಆದೇಶ. ಈ ಹಿಂದೆ ಬೆಂಗಳೂರಿನ ಟೌನ್ ಹಾಲ್ ಸೇರಿದಂತೆ ಅನೇಕ ಸ್ಥಳ ಪ್ರತಿಭಟನಾ ಹಾಟ್‌ಸ್ಪಾಟ್ ಆಗಿತ್ತು. ಆದರೆ ಈಗ ಫ್ರೀಡಂಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಯ ಬಗ್ಗೆ ಕಟ್ಟುನಿಟ್ಟಿನ ಆದೇಶವಿದೆ. ಹೀಗಾಗಿ ಬೇರೆ ಕಡೆಯೂ ಪ್ರತಿಭಟನೆಗೆ ಅವಕಾಶ ಕೊಡಬೇಕು ಅನ್ನೋದು ಸರ್ಕಾರದ ಮೇಲೆ ಒತ್ತಡ ಇತ್ತು. ಹೋರಾಟಗಾರರ ನಿರಂತರ ಒತ್ತಡದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಭಾಗ್ಯ: ಮಧು ಬಂಗಾರಪ್ಪ

    ಇನ್ನುಮುಂದೆ ಫ್ರೀಡಂಪಾರ್ಕ್‌ನಲ್ಲಿ ಹೊರತುಪಡಿಸಿ, ಟೌನ್‌ಹಾಲ್‌ನಲ್ಲಿಯೂ ಪ್ರತಿಭಟನೆಗೆ ಅವಕಾಶ ಕೊಡಲು ಸರ್ಕಾರ ಹೆಜ್ಜೆ ಇಟ್ಟಿದೆ. ಈ ಬಗ್ಗೆ ಖುದ್ದು ಸಿಎಂ ಹೋರಾಟಗಾರರಿಗೆ ಭರವಸೆ ನೀಡಿದ್ದಾರೆ. ಅಡ್ವೋಕೇಟ್ ಜನರಲ್ ಜೊತೆ ಮಾತನಾಡಿ ಟೌನ್‌ಹಾಲ್ ಮುಂಭಾಗ ಚಳುವಳಿಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಈ ಸಂದರ್ಭದಲ್ಲಿ ನಾವು ಮೌನವಾಗಿರುತ್ತೇವೆ; ಭಕ್ತರಿಗೆ ಮೌನವೇ ದೊಡ್ಡ ಸಂದೇಶ: ಜೈಲಿಂದ ಬಂದ ಮುರುಘಾ ಶ್ರೀ

    ಬೆಂಗಳೂರಿಲ್ಲಿ ಟ್ರಾಫಿಕ್ ಕಾವು ಕಡಿಮೆ ಮಾಡಲು, ಕೋರ್ಟ್ ಈ ಆದೇಶ ನೀಡಿತ್ತು. ಆದರೆ ಈಗ ಸರ್ಕಾರ ಕಾನೂನಾತ್ಮಕವಾಗಿ ಹೆಜ್ಜೆ ಇಟ್ಟು ಮತ್ತೆ ಟೌನ್ ಹಾಲ್ ಮುಂಭಾಗ ಪ್ರತಿಭಟನೆಗೆ ಅವಕಾಶ ಕೊಡಲು ಮನಸ್ಸು ಮಾಡಿದೆ. ಇದನ್ನೂ ಓದಿ: ನನ್ನ ಪಕ್ಷಾಂತರದ ಎಫೆಕ್ಟ್ ಪಂಚ ರಾಜ್ಯಗಳ ಚುನಾವಣೆಯ ಮೇಲೂ ಬೀರಿದೆ – BJP ವ್ಯವಸ್ಥೆ ಹದಗೆಟ್ಟಿದೆ: ಜಗದೀಶ್ ಶೆಟ್ಟರ್

  • ಸಿಐಟಿಯು ಬೆಂಗಳೂರು ಉತ್ತರ-ದಕ್ಷಿಣ-ರಾಮನಗರ ಜಿಲ್ಲಾ ಸಮಿತಿಗಳಿಂದ ಸ್ವಾತಂತ್ರ್ಯೋತ್ಸವದ ಅಹೋರಾತ್ರಿ ಕಾರ್ಯಕ್ರಮ

    ಸಿಐಟಿಯು ಬೆಂಗಳೂರು ಉತ್ತರ-ದಕ್ಷಿಣ-ರಾಮನಗರ ಜಿಲ್ಲಾ ಸಮಿತಿಗಳಿಂದ ಸ್ವಾತಂತ್ರ್ಯೋತ್ಸವದ ಅಹೋರಾತ್ರಿ ಕಾರ್ಯಕ್ರಮ

    ಬೆಂಗಳೂರು: ಸಿಐಟಿಯು ಬೆಂಗಳೂರು ಹಾಗೂ ಉತ್ತರ-ದಕ್ಷಿಣ-ರಾಮನಗರ ಜಿಲ್ಲಾ ಸಮಿತಿಗಳಿಂದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಹೋರಾತ್ರಿ ಕಾರ್ಯಕ್ರಮ ನಡೆಯಿತು. ನಗರದ ಟೌನ್ ಹಾಲ್‌ನ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಭೂಮಿ ತಾಯಿ ಬಳಗದಿಂದ ದೇಶಪ್ರೇಮಿ ಹಾಡುಗಳನ್ನು ಹಾಡಲಾಯಿತು.

    ಹಿರಿಯ ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಅವರಿಂದ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಾರ್ಮಿಕ ಮುಖಂಡ ಹೆಚ್.ಎನ್ ಗೋಪಾಲಗೌಡ ಅವರಿಂದ ಧ್ವಜಾರೋಹಣ ನೆರವೇರಿಸಲಾಯಿತು.

    ಪ್ರಗತಿಪರ ಚಿಂತಕ, ಗಾಂಧಿವಾದಿ ವಿ.ಪಿ ಮೇನನ್, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸಿಐಟಿಯು ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡ ಕೆ.ಎನ್ ಉಮೇಶ್, ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ. ಪ್ರಕಾಶ್ ಕೆ, ಡಿಹೆಚ್‌ಎಸ್‌ನ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಹಳ್ಳಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಅವರು ಕಾರ್ಯಕ್ರಮದಲ್ಲಿ ಸೇರಿದ್ದ ನೂರಾರು ಜನರನ್ನು ಉದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಯೋಧರಿಂದ್ಲೇ ಧ್ವಜಾರೋಹಣ ಮಾಡಿಸಿ ಸಂಭ್ರಮಿಸಿದ ಇಡೀ ಗ್ರಾಮ

     

    ಕಾರ್ಯಕ್ರಮದ ಸ್ವಾಗತವನ್ನು ಸಿಐಟಿಯು ಬೆಂ.ದಕ್ಷಿಣ ಜಿಲ್ಲಾ ಅಧ್ಯಕ್ಷ ಬಿ.ಎನ್ ಮಂಜುನಾಥ್, ನಿರೂಪಣೆಯನ್ನು ಉತ್ತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ, ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜು, ಉತ್ತರ ಜಿಲ್ಲಾ ಕಾರ್ಯದರ್ಶಿ ಪಿ. ಮುನಿರಾಜು ಹಾಗೂ ವಂದನಾರ್ಪಣೆಯನ್ನು ರಾಮನಗರ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಅವರು ಮಾಡಿದರು.

    ಕಾರ್ಯಕ್ರಮದಲ್ಲಿ ಸಿಐಟಿಯು ರಾಜ್ಯ ಮುಖಂಡರಾದ ಕೆ. ಮಹಂತೇಶ್, ಟಿ. ಲೀಲಾವತಿ, ಮಾಲಿನಿ ಮೇಸ್ತಾ, ವಿವಿಧ ಸಂಘಟನೆಗಳ ರಾಜ್ಯ ಮುಖಂಡರಾದ ಜಿ.ಎನ್ ನಾಗರಾಜ್, ನಿತ್ಯಾನಂದಸ್ವಾಮಿ, ಚಂದ್ರಪ್ಪ ಹೋಸ್ಕೆರಾ, ಗೌರಮ್ಮ, ಕೆ.ಎಸ್ ವಿಮಲ, ಟಿ. ಸುರೇಂದ್ರ ರಾವ್ ಹಾಗೂ ಸಿಐಟಿಯು ಜಿಲ್ಲಾ, ವಿವಿಧ ಸಂಘಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಇದನ್ನೂ ಓದಿ: ರಾಷ್ಟ್ರದ ಉನ್ನತಿಯಲ್ಲಿ ಪ್ರಧಾನಿ ಮೋದಿಯವರ ಕೊಡುಗೆ ಅನನ್ಯ: ಬಾಲಚಂದ್ರ ಜಾರಕಿಹೊಳಿ

    Live Tv

    [brid partner=56869869 player=32851 video=960834 autoplay=true]

  • ಹಿಜಬ್ ಹಾಕಿದಂತೆ ಶಾಲೆಗಳಲ್ಲಿ ಕೇಸರಿ ಹಾಕಿಸುತ್ತೇವೆ, ನಮ್ಮ ಅನ್ನ ತಿಂದು ನಮಗೆ ದ್ರೋಹ: ಬಸವರಾಜ್

    ಹಿಜಬ್ ಹಾಕಿದಂತೆ ಶಾಲೆಗಳಲ್ಲಿ ಕೇಸರಿ ಹಾಕಿಸುತ್ತೇವೆ, ನಮ್ಮ ಅನ್ನ ತಿಂದು ನಮಗೆ ದ್ರೋಹ: ಬಸವರಾಜ್

    – ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಪ್ರತಿಭಟನೆ
    – ಸಿದ್ದರಾಮಯ್ಯನವರ ಕೈಯಲ್ಲಿ ಕೇಸರಿ ಧ್ವಜ ಇಡಿಸುತ್ತೆವೆ

    ಬೆಂಗಳೂರು: ನಮ್ಮ ಅನ್ನ ತಿಂದು ನಮಗೆ ದ್ರೋಹ ಮಾಡುತ್ತಿರುವ ನೀವು ಕುನ್ನಿಗಳು. ಶಾಲೆಗಳಲ್ಲಿ ಕೋಮು ತರುತ್ತಿದ್ದೀರಿ. ಹಿಜಬ್ ಹಾಕಿದ ಹಾಗೇ ಕೇಸರಿಯನ್ನು ಹಾಕಿಸುತ್ತೇವೆ ಎಚ್ಚರ ಇರಲಿ ಎಂದು ವಿಹೆಚ್‍ಪಿ ನಾಯಕ ಬಸವರಾಜ್ ಹೇಳಿಕೆ ನೀಡಿದ್ದಾರೆ.

    ಶಿವಮೊಗ್ಗ ಹರ್ಷ ಹತ್ಯೆ ಖಂಡಿಸಿ ಇಂದು ಸಂಜೆ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ನಡೆದ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಸವರಾಜ್ ಹಿಂದೂ ಸಮಾಜ ಎಚ್ಚರವಾಗಿದೆ. ಹಿಂದೂಗಳ ಬಿಸಿ ರಕ್ತ ಕುದಿಯುತ್ತಿದೆ. ಹಿಂದೂ ಸಮಾಜದ ಮೇಲೆ ಕಣ್ಣು ಹಾಕಿದ್ರೆ ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    ಸಿದ್ದರಾಮಯ್ಯನಿಗೂ ಕೇಸರಿ ಶಾಲು ಹಾಕಿಸುತ್ತೇವೆ. ಸಿದ್ದರಾಮಯ್ಯನವರ ಕೈಯಲ್ಲಿ ಕೇಸರಿ ಧ್ವಜ ಇಡಿಸುತ್ತೆವೆ ಇದು ಸತ್ಯ ಸತ್ಯ ಬಸವರಾಜ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ನಾವು ಹಿಜಬ್ ತೆಗೆಯೋದಿಲ್ಲ ಹೇಳಿಕೆ ಸುಳ್ಳು – ಆಧಾರ್ ಕಾರ್ಡ್‍ನಲ್ಲಿ ಹಿಜಬ್ ಧರಿಸಿಲ್ಲ

    ಇದೇ ಸಂದರ್ಭದಲ್ಲಿ ಮಾತನಾಡಿದ ವಿಹೆಚ್‍ಪಿ ನಾಯಕ ಉಲ್ಲಾಸ್ ರಾಜ್ಯವನ್ನು ಇಸ್ಲಾಮಿಕರಣ ಮಾಡಲು ಅಡ್ಡಿಯಾಗುತ್ತಿರುವುದು ಕೇಸರಿ. ಕೇಸರಿಯನ್ನು ಭೀತಿಗೊಳಿಸುವ ಹುನ್ನಾರ ಪಿಎಫ್‍ಐ ಮಾಡುತ್ತಿದೆ. ಪಿಎಫ್‍ಐ ಇಲ್ಲಿ ವರೆಗೆ ತುಂಬಾ ಹತ್ಯೆಗಳನ್ನು ಮಾಡಿದೆ. ಹೀಗಿದ್ದರೂ ಏನಾದರೂ ಕ್ರಮ ಕೈಗೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

    ಇವರು ಕೊಲೆ ಮಾಡುತ್ತಿಲ್ಲ. ಭಯೋತ್ಪಾದಕ ಕೃತ್ಯ ಮಾಡುತ್ತಾ ಇದ್ದಾರೆ. ಪಿಎಫ್‍ಐ ಹಿಂದೆ ಭಯೋತ್ಪಾದಕ ಶಕ್ತಿಯಿದೆ. ಇದು ರಾಷ್ಟ್ರಕ್ಕೆ ಮಾರಕ. ಪಿಎಫ್‍ಐ ಮುಸಲ್ಮಾನ ಸಮುದಾಯದ ಮಧ್ಯೆ ಗೊಂದಲ ಸೃಷ್ಟಿ ಮಾಡಿ ಸಿಎಎ ಕಾಯ್ದೆ ವಿರುದ್ದ ಹೋರಾಡುವ ಹಾಗೆ ಮಾಡಿದ್ದಾರೆ. ಕೋಮು-ಗಲಭೆ ಸೃಷ್ಟಿ ಮಾಡುವುದೇ ಅವರ ಉದ್ದೇಶ ಎಂದು ಹೇಳಿದರು.

    ಈ ರಾಜ್ಯದಲ್ಲಿ ಬರೀ ಹಿಂದೂಗಳ ಹತ್ಯೆ ನಡೆಯುತ್ತಿಲ್ಲ. ಬೆಂಗಳೂರಿನಲ್ಲಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಕೃತ್ಯ ಗೊತ್ತಿದೆಯಲ್ಲ. ಅದು ಯಾರ ಮೇಲೆ ಮಾಡಿದ್ದು ತಿಳಿದಿದೆಯಲ್ಲ. ಸುರಕ್ಷತಾ ವ್ಯವಸ್ಥೆ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ಶ್ರೀನಗರದಲ್ಲಿ ಹಿಮಪಾತ – ಕೊಡಗು ಮೂಲದ ಯೋಧ ಹುತಾತ್ಮ

    ಹಿಜಬ್ ಪ್ರಕರಣ ಶುರುವಾಗಿದ್ದು ಪಿಎಫ್‍ಐಯಿಂದ. ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿಯೇ ಬರುತ್ತಿದ್ದರು ಎಂದು ಕಾಲೇಜಿನವರೇ ಹೇಳಿದ್ದಾರೆ. 6 ಹೆಣ್ಣುಮಕ್ಕಳ ತಲೆಯಲ್ಲಿ ಮತೀಯತೆ ತುಂಬಿ, ಮುಸ್ಲಿಂ ಹೆಣ್ಣು ಮಕ್ಕಳಲ್ಲಿ ಪ್ರತ್ಯೇಕತಾ ಭಾವನೆ ಮೂಡುವಂತೆ ಮಾಡಿದರು ಎಂದು ಕಿಡಿಕಾರಿದರು.

    ಹರ್ಷ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆ ಬೃಹತ್ ಪ್ರತಿಭಟನೆಗೂ ಮುನ್ನ ಒಂದು ನಿಮಿಷ ಮೌನಾಚರಣೆ ಮೂಲಕ ಹರ್ಷನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಟೌನ್ ಹಾಲ್‍ನಲ್ಲಿ ಭದ್ರತೆಗೆ 250 ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಲಾಗಿತ್ತು. ಬೇರೆ ಬೇರೆ ಭಾಗದಿಂದ ಪ್ರತಿಭಟನಕಾರರು ಆಗಮಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ಟ್ರಾಫಿಕ್ ಪೊಲೀಸ್ ನಿಯೋಜನೆ ಮಾಡಲಾಗಿತ್ತು.

  • ಸಾವರ್ಕರ್‌ರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು: ಬೊಮ್ಮಾಯಿ

    ಸಾವರ್ಕರ್‌ರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅನ್ನೋದು ಬ್ರಿಟಿಷರಿಗೆ ಗೊತ್ತಿತ್ತು: ಬೊಮ್ಮಾಯಿ

    ಬೆಂಗಳೂರು: ವೀರ ಸಾವರ್ಕರ್ ಅವರನ್ನು ಭಾರತದಲ್ಲಿ ಬಿಟ್ಟರೆ ನಾವು ದೇಶ ಬಿಡಬೇಕಾಗುತ್ತೆ ಅಂತಾ ಬ್ರಿಟಷರಿಗೆ ಗೊತ್ತಿತ್ತು. ಸಾವರ್ಕರ್ ಬ್ರಿಟಿಷರ ಪಾಲಿಗೆ ನ್ಯೂಕ್ಲಿಯರ್ ಆಗಿದ್ರು. ಹಾಗಾಗಿ ದೇಶದ ಜನರಿಂದ ಬ್ರಿಟಿಷರು ಅವರನ್ನು ದೂರ ಇಟ್ಟರು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

    ಟೌನ್ ಹಾಲ್ ನಲ್ಲಿ ನಡೆದ ವೀರ ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ವೀರ ಸಾರ್ವಕರ್ ಅವರ ಈ ಪುಸ್ತಕದ ಟೈಟಲ್‍ನಲ್ಲೇ ಇದೊಂದು ಅಪರೂಪದ ಪುಸ್ತಕ ಅನ್ನೋದು ತಿಳಿಯುತ್ತೆ. ಈ ಪುಸ್ತಕ ಬಿಡುಗಡೆಯಲ್ಲಿ ನಾನು ಭಾಗಿಯಾಗಿರೋದು ನನಗೆ ಹೆಮ್ಮೆ. ವೀರ ಸಾರ್ವಕರ್ ಹೆಸರಿನಲ್ಲಿ ಒಂದು ಶಕ್ತಿ ಇದೆ. ನಾವು ಎಲ್ಲರನ್ನೂ ವೀರರು ಎಂದು ಕರೆಯುವುದಿಲ್ಲ. ಆದರೆ ಸಾವರ್ಕರ್ ಇಡೀ ದೇಶದಲ್ಲಿ ವೈಚಾರಿಕತೆ ಕಿಚ್ಚು ಹಚ್ಚಿ ನಾಗರೀಕತೆ ಹಾಗೂ ಸಂಸ್ಕೃತಿಯ ಕಿಡಿ ಹಚ್ಚಿದ್ರು ಎಂದು ಸ್ಮರಿಸಿಕೊಂಡರು. ಇದನ್ನೂ ಓದಿ: ಶಿಕ್ಷಕರು ಅನಕ್ಷರಸ್ಥ ಬಾಳಲ್ಲಿ ಅಕ್ಷರ ಬೆಳಕು ಮೂಡಿಸಿರಿ: ಅಶೋಕ್ ಸಿಂದಗಿ

    ಸಾವರ್ಕರ್ ಅವರನ್ನ ಸಾಕಷ್ಟು ಜನ ದೂರುತ್ತಾರೆ. ಅಂತವರೆಲ್ಲ ದಯಾಮಾಡಿ ಸಾವರ್ಕರ್ ಇದ್ದ ಜೈಲು ಕೋಣೆಗೆ ಹೋಗಿ ಬನ್ನಿ. ಆಗ ಅವರ ಬಗ್ಗೆ ನಿಮಗಿರುವ ಕೊಳಕು ಮನಸ್ಥಿತಿ ಹೋಗುತ್ತದೆ. ಇತಿಹಾಸವನ್ನು ಸರಿಯಾಗಿ ಓದಿದರೆ ಮಾತ್ರ ಭವಿಷ್ಯವನ್ನ ಕಟ್ಟಲು ಸಾಧ್ಯ ಎಂದು ತಿಳಿಸಿದರು.

    ನಾಗರಿಕತೆಯೇ ಸಂಸ್ಕೃತಿ ಅಲ್ಲ, ನಮ್ಮಲ್ಲಿ ಏನು ಇದೆ ಅದು ನಾಗರಿಕತೆ, ನಾವು ಏನಾಗಿದ್ದೀವಿ ಅನ್ನೋದು ಸಂಸ್ಕೃತಿ. ಸಿಂಧೂ ತಟ್ಟದಲ್ಲಿ ಬೆಳೆದುಬಂದ ಮೌಲ್ಯಗಳೇ ಸಂಸ್ಕೃತಿ. ನಮ್ಮ ಸಂಸ್ಕೃತಿ ಮಾತ್ರ ನಮ್ಮ ಅಂತಃಕರಣವನ್ನು ಜಾಗೃತಿಗೊಳಿಸಲು ಸಾಧ್ಯ ಅನ್ನೊದನ್ನು ಹೇಳೋದೆ ವೀರ ಸಾರ್ವಕರ್ ಪುಸ್ತಕವಾಗಿದೆ. ಕೆಲವು ಧರ್ಮಗಳು ಹಿಂಸೆಯ ನೆಲೆಗಟ್ಟಿನಲ್ಲಿ ಸ್ಥಾಪನೆಯಾಗಿವೆ. ನಮ್ಮ ಧರ್ಮ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಸ್ಥಾಪನೆಯಾಗಿದೆ ಎಂದರು.

    ವೈಚಾರಿಕವಾಗಿ ಬಾಬಾ ಸಾಹೇಬರ ಜೊತೆ ಸಾರ್ವಕರ್ ಉತ್ತಮ ಸಂಬಂಧ ಹೊಂದಿದ್ದರು. ಬ್ರಿಟಿಷರು ನಮ್ಮನ್ನ ಒಡೆಯಲಿಕ್ಕೆ ಅಸ್ಪೃಶ್ಯತೆ ಆರಂಭಿಸಿದರು. ಬಳಿಕ ಬಂದ ರಾಜಕಾರಣಿಗಳು ಲಾಭಕ್ಕಾಗಿ ಬಳಸಿಕೊಂಡು ಮುಂದುವರೆಸಿದರು. ಈಗ ಇದೆಲ್ಲ ಬದಲಾಗಬೇಕಿದೆ ಎಂದು ಸಾರಿದರು.

    ಈ ಕಾರ್ಯಕ್ರಮದಲ್ಲಿ ಆದುಚುಂಚನಗಿರಿ ಮಹಾಂಸ್ಥಾನ ಮಠದ ಡಾ. ನಿರ್ಮಲಾನಂದ ಸ್ವಾಮೀಜಿ, ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಕೃತಿಯ ಲೇಖಕ ಉದಯ ಮಹೂರ್ಕರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಉಪಸ್ಥಿತರಿದ್ದರು. ಇದನ್ನೂ ಓದಿ: ಎರಡು ವರ್ಷಗಳಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ 57 ನೌಕರರ ವಿರುದ್ಧ ಶಿಸ್ತುಕ್ರಮ

    ಪುಸ್ತಕ ಬಿಡುಗಡೆ ವೇಳೆ ಕನ್ನಡ ಪರ ಸಂಘಟನೆಗಳು ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ಹೈಡ್ರಾಮ ಸೃಷ್ಟಿಯಾಗಿತ್ತು. ಈ ವೇಳೆ ಟೌನ್ ಹಾಲ್ ಮುಂಭಾಗ ಹಿಂದೂ ಪರ ಕಾರ್ಯಕರ್ತರು ಮತ್ತು ಕನ್ನಡ ಪರ ಸಂಘಟನೆಗಳ ಪರ ವಿರೋಧ ಕೂಗಾಟ ನಡೆಯುತ್ತಿತ್ತು. ಪರಿಣಾಮ ಪೊಲೀಸರು ಈ ಪ್ರತಿಭಟನಕಾರರನ್ನು ವಶಕ್ಕೆ ಪಡೆದುಕೊಂಡರು. ಸಿಎಂ ಬರುವುದಕ್ಕೂ ಮುನ್ನ ಈ ಪ್ರತಿಭಟನೆ ನಡೆದಿತ್ತು.

  • ಟೌನ್ ಹಾಲ್ ಮುಂದೆ ಪ್ರತಿಭಟನೆಗೆ ನಿರಾಕರಣೆ- ಮೇಯರ್ ಆದೇಶದ ವಿರುದ್ಧ ಪ್ರತಿಭಟನೆ

    ಟೌನ್ ಹಾಲ್ ಮುಂದೆ ಪ್ರತಿಭಟನೆಗೆ ನಿರಾಕರಣೆ- ಮೇಯರ್ ಆದೇಶದ ವಿರುದ್ಧ ಪ್ರತಿಭಟನೆ

    – ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿ ಕರವೇ ಪ್ರತಿಭಟನೆ

    ಬೆಂಗಳೂರು: ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡಬಾರದು ಅಂತ ಮೇಯರ್ ಗೌತಮ್ ಕುಮಾರ್ ಆದೇಶ ಹೊರಡಿಸಿದ್ರು. ಕೌನ್ಸಿಲ್ ನಲ್ಲಿ ಚರ್ಚೆ ಮಾಡಿ ಇದರ ಬಗ್ಗೆ ನಿರ್ಣಯ ಕೂಡ ಆಗಿತ್ತು. ಈಗ ಮೇಯರ್ ಆದೇಶದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ. ಕರವೇ ಅಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆದಿದ್ದು, ಮೇಯರ್ ಆದೇಶವನ್ನು ವಾಪಸ್ ಪಡೆದು ಪ್ರತಿಭಟನೆ ಅವಕಾಶ ಕೊಡಬೇಕು ಅಂತಾ ಒತ್ತಾಯಿಸಿದ್ರು.

    ಈ ಬಗ್ಗೆ ನಾರಾಯಣಗೌಡ ಮಾತನಾಡಿ, ಟೌನ್ ಹಾಲ್ ಬಳಿ ಪ್ರತಿಭಟನೆ ಉದ್ದೇಶವೇ ಸಾರ್ವಜನಿಕರಿಗೆ ಗೊತ್ತಾಗಲಿ ಅಂತ. ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದ್ರೆ ಆಗಿಲ್ಲ. ಟೌನ್ ಹಾಲ್‍ಗೂ ಪ್ರತಿಭಟನೆಗೂ ಒಂದು ಇತಿಹಾಸ ಇದೆ. ಸಾಹಿತಿ, ಪ್ರಗತಿಪರ ಚಿಂತಕರೆಲ್ಲ ಅಲ್ಲಿ ಹೋರಾಟ ಮಾಡಿದ್ದಾರೆ. ಪ್ರತಿಭಟನೆಯಿಂದ ಯಾರಿಗೂ ತೊಂದ್ರೆ ಆಗಲ್ಲ. ರಸ್ತೆಯನ್ನ ಬಂದ್ ಮಾಡಿ ಪ್ರತಿಭಟನೆ ಮಾಡಿದ ಉದಾಹರಣೆಗಳಿಲ್ಲ ಟೌನ್ ಹಾಲ್ ನಲ್ಲಿ ಕಾರ್ಯಕ್ರಮ ಇದ್ದಾಗ ಅದಕ್ಕೆ ಅವಕಾಶ ಕೊಡ್ಬೇಡಿ. ಆದರೆ ಕಾರ್ಯಕ್ರಮ ಇಲ್ಲದಿದ್ದಾಗ ಪ್ರತಿಭಟನೆಗೆ ಅವಕಾಶ ಕೊಡಿ ಕಾರ್ಯಕ್ರಮಗಳ ನಡೆಯುವ ವೇಳೆ ನಾವು ಅದಕ್ಕೆ ಅಡ್ಡಿಪಡಿಸೊಲ್ಲ ಈ ಸಂಬಂಧ ತಕ್ಷಣವೇ ಆದೇಶವನ್ನ ಹಿಂಪಡೆಯಬೇಕು. ಕೌನ್ಸಿಲ್ ನಲ್ಲಿ ಏನೇ ತೀರ್ಮಾನ ಆಗಿದ್ರೂ ಅದನ್ನ ವಾಪಸ್ ಪಡೆಯಬೇಕು. ಆದೇಶ ವಾಪಸ್ ಪಡೆಯದಿದ್ರೆ ನಮ್ಮ ಹೋರಾಟ ಮುಂದುವರಿಯುತ್ತೆ ಅಂತ ಎಚ್ಚರಿಸಿದ್ರು.

    ಮೇಯರ್ ಗೌತಮ್ ಕುಮಾರ್ ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದ್ರು. ಇದರ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್, ಕೌನ್ಸಿಲ್ ನಲ್ಲಿ ನಿರ್ಣಯ ಆಗಿದೆ, ಬಿಬಿಎಂಪಿ ಆಯುಕ್ತರ ಹತ್ತಿರ ಚರ್ಚೆ ಮಾಡಬೇಕು. ಪೊಲೀಸ್ ಆಯುಕ್ತರ ಹತ್ತಿರನೂ ಚರ್ಚೆ ಮಾಡಿದ ಬಳಿಕ ನಿರ್ಣಯ ಹೇಳುತ್ತೇನೆ. ಈ ಆದೇಶ ಏನು ಸರ್ಕಾರಕ್ಕೆ ಹೋಗಿಲ್ಲ ಹೋಗೋದಿಲ್ಲ. ಸಂಘ ಸಂಸ್ಥೆಗಳು ಅವರ ಭಾವನೆ ತಿಳಿಸಿದ್ದಾರೆ. ಟೌನ್ ಹಾಲ್ ಬಳಿ ಪ್ರತಿಭಟನೆ ಮಾಡೋದು ಎಲ್ಲರ ಹಕ್ಕು. ನಾನು ಈ ಸಂದರ್ಭದಲ್ಲಿ ಏನು ತೀರ್ಮಾನ ತೆಗೆದುಕೊಳ್ಳೋದಕ್ಕೆ ಆಗಲ್ಲ. ಚರ್ಚೆ ಮಾಡಿ ನಂತರ ನಿರ್ಧಾರ ಏನು ಅಂತ ಹೇಳುವುದಾಗಿ ತಿಳಿಸಿದರು.

  • ಇನ್ಮುಂದೆ ಟೌನ್ ಹಾಲ್ ಮುಂದೆ ಧರಣಿ ಮಾಡುವಂತಿಲ್ಲ

    ಇನ್ಮುಂದೆ ಟೌನ್ ಹಾಲ್ ಮುಂದೆ ಧರಣಿ ಮಾಡುವಂತಿಲ್ಲ

    ಬೆಂಗಳೂರು: ಇನ್ಮುಂದೆ ಸಿಲಿಕಾನ್ ಸಿಟಿಯಲ್ಲಿರುವ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ಮಾಡಲು ಅವಕಾಶ ನೀಡಬಾರದೆಂದು ಇಂದು ಬಿಬಿಎಂಪಿ ಮಾಸಿಕ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

    ಟೌನ್‍ಹಾಲ್ ಮೈಸೂರು ರೋಡ್, ಕಾರ್ಪೋರೇಷನ್ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಜಂಕ್ಷನ್ ಆಗಿದೆ. ಈ ಹೋರಾಟಗಳಿಂದ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ಜೊತೆಗೆ ಟೌನ್‍ಹಾಲ್ ಪ್ರತಿಭಟನೆ ಸ್ಥಳವೆಂದು ಕಾರ್ಯಕ್ರಮಗಳಿಗೆ ಬಾಡಿಗೆ ಪಡೆಯುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.

    ಟೌನ್‍ಹಾಲ್ ಬಾಡಿಗೆ ಸದ್ಯ 80 ಸಾವಿರ ಇದೆ. ಹೀಗಿದ್ದರೂ ಜನರು ಪ್ರತಿಭಟನೆ ಜಾಗ, ಟ್ರಾಫಿಕ್ ಜಾಮ್ ಆಗಲಿದೆ ಎಂದು ಯಾರು ಟೌನ್ ಹಾಲ್ ಕಡೆ ತಲೆ ಹಾಕುತ್ತಿಲ್ಲ. ಈ ಎಲ್ಲ ಕಾರಣಗಳಿಗಾಗಿ ಟೌನ್‍ಹಾಲ್ ಮುಂಭಾಗ ಧರಣಿಗೆ ಅನುಮತಿನೀಡಬಾರದೆಂದು ಪೊಲೀಸ್ ಕಮಿಷನರ್ ಗೆ ಪತ್ರ ವ್ಯವಹಾರ ಮಾಡಲು ಇಂದು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

    ಸಿಎಎ, ಎನ್‍ಆರ್‍ಸಿ ಹೋರಾಟ ಹತ್ತಿಕ್ಕಲು ಟೌನ್ ಹಾಲ್ ಧರಣಿ ಬ್ಯಾನ್ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಅಕ್ರೋಶ ವ್ಯಕ್ತಪಡಿಸಿದರು.

  • ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಪ್ರತಿಭಟನೆ

    ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಪ್ರತಿಭಟನೆ

    ಬೆಂಗಳೂರು: ಬೆಂಗಳೂರಿನಲ್ಲಿಂದು ಸಾರಿಗೆ ನೌಕರರ ಪ್ರತಿಭಟನೆಯ ಕೂಗು ಜೋರಾಗಿತ್ತು.

    ನಗರದ ಟೌನ್ ಹಾಲ್ ಮುಂಭಾಗ ಜಮಾಯಿಸಿದ 500ಕ್ಕೂ ಹೆಚ್ಚು ನೌಕರರು, ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ ರದ್ದು ಮಾಡಿ, ಅಂತರ ನಿಗಮ ವರ್ಗಾವಣೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು.

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಗಳ ಒಕ್ಕೂಟದ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ನೌಕರರ ಕುಟುಂಬದವರು ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು ಸುಡು ಬಿಸಿಲನ್ನು ಲೆಕ್ಕಿಸದೇ ಧರಣಿ ನಡೆಸಿದ್ದು, ಎಲ್ಲರ ಮನ ಕಲಕುವಂತಿತ್ತು.

  • ಎದೆ ಸೀಳಿದರೆ ಎರಡಕ್ಷರ ಇಲ್ಲದವರು ಜಾಗೃತಿ ಸಭೆಗೆ ಬಂದಿಲ್ಲ: ತೇಜಸ್ವಿ ಸೂರ್ಯ

    ಎದೆ ಸೀಳಿದರೆ ಎರಡಕ್ಷರ ಇಲ್ಲದವರು ಜಾಗೃತಿ ಸಭೆಗೆ ಬಂದಿಲ್ಲ: ತೇಜಸ್ವಿ ಸೂರ್ಯ

    ಬೆಂಗಳೂರು: ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತವರು ಈ ಕಾರ್ಯಕ್ರಮಕ್ಕೆ ಸೇರಿಲ್ಲ ಎಂದು ಹೇಳುವ ಮೂಲಕ ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಟೌನ್ ಹಾಲ್ ಮುಂಭಾಗ ನಡೆದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಟೀಕೆ ಮಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಜಾಗೃತಿ ಸಭೆಗೆ ಸೇರಿದವರೆಲ್ಲರೂ ಐಟಿ ಕಂಪನಿಗಳ ಉದ್ಯೋಗಿಗಳು, ವೈದ್ಯರು, ವಕೀಲರು, ಆಟೋ ಚಾಲಕರು ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಹಾಗೂ ದೇಶದ ಆರ್ಥಿಕತೆಗೆ ತಮ್ಮದೇಯಾದ ಕೊಡುಗೆ ನೀಡುತ್ತಿರುವ ವಿದ್ಯಾವಂತರು. ನಮ್ಮ ಪ್ರತಿಭಟನೆಯಲ್ಲಿ ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ ಅನಕ್ಷರಸ್ಥರು, ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತಹವರು ಯಾರೂ ಸೇರಿಲ್ಲ ಎಂದು ಕಿಡಿ ಕಾರಿದ್ದಾರೆ.

    ಬೆಂಗಳೂರು ಪ್ರಪಂಚದಲ್ಲೇ ಪ್ರಸಿದ್ಧಿ ಪಡೆದಿರುವ ನಗರ, ಇಂತಹ ನಗರದಲ್ಲಿ ಹಿಂಸಾಚಾರ ನಡೆಸಿದ್ದಾರೆ. ಆದರೆ ಇಂದು ನಾವು ಶಾಂತಿಯುತವಾಗಿ ಹೋರಾಟ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಹಿಂಸಾತ್ಮಕವಾಗಿ ಪ್ರತಿಭಟನೆ ಮಾಡಿದವರಿಗೆ ಅವರು ಯಾಕೆ ಪ್ರತಿಭಟನೆ ಮಾಡುತ್ತಿದ್ದರು ಎಂಬುದೇ ತಿಳಿದಿರಲಿಲ್ಲ. ಕೆಲವರು ಜಿಎಸ್‍ಟಿ ವಿರೋಧಿಸಿ, ಇನ್ನೂ ಕೆಲವು ಈರುಳ್ಳಿ, ಬೆಳ್ಳುಳ್ಳಿ ಬೆಲೆ ಹೆಚ್ಚಾಗಿದೆ ಹೀಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದಿದ್ದರು ಎಂದು ತಿಳಿಸಿದರು.

    ಅವರಲ್ಲಿ ಬಹುತೇಕರಿಗೆ ಈ ಕಾನೂನಿನ ಉದ್ದೇಶವೇನು, ಇದರ ಉಪಯೋಗವೇನು, ಇದನ್ನು ಯಾಕೆ ಜಾರಿಗೆ ತಂದಿದ್ದಾರೆ, ಇದಾವುದನ್ನೂ ಪ್ರತಿಭಟನಾಕಾರರಿಗೆ ತಿಳಿದಿರಲಿಲ್ಲ. ನಿಮ್ಮನ್ನು ಪಾಕಿಸ್ತಾನಕ್ಕೆ ಓಡಿಸಿ ಬಿಡುತ್ತಾರಂತೆ ಎಂದು ಸುಳ್ಳು ಹೇಳಿ ಕರೆ ತಂದಿದ್ದಾರೆ. ಈ ಮೂಲಕ ಇಡೀ ದೇಶಕ್ಕೆ ಬೆಂಕಿ ಹಚ್ಚುವಂತಹ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಏನೂ ತಿಳಿಯದ ಮುಸ್ಲಿಂ ಯುವಕರಿಗೆ ತಪ್ಪು ಮಾಹಿತಿ ನೀಡಿ ಹಿಂಸಾಚಾರಕ್ಕೆ ತಳ್ಳಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    ಮಂಗಳೂರಿನಲ್ಲಿ ಇಬ್ಬರ ಸಾವಿಗೆ ಮಾಜಿ ಸಚಿವ ಯುಟಿ ಖಾದರೇ ಕಾರಣ. ಯುವಕರ ಜೀವನದ ಜೊತೆ ಚೆಲ್ಲಾಟವಾಡಬೇಡಿ, ಹೊರದೇಶದಿಂದ ಭಾರತಕ್ಕೆ ವಲಸೆ ಬರುವ ಮುಸ್ಲಿಮರನ್ನು ರಾಷ್ಟ್ರದೊಳಗೆ ಬಿಟ್ಟುಕೊಳ್ಳುವುದಿಲ್ಲ ಎಂದರೆ ಇವರಿಗೇನು ಸಮಸ್ಯೆ? ಪಾಕಿಸ್ತಾನದ ಇಮ್ರಾನ್ ಖಾನ್, ಕಾಂಗ್ರೆಸ್ ನ ರಾಹುಲ್ ಗಾಂಧಿ ಒಂದೇ ಭಾಷಣ ಮಾಡುತ್ತಾರೆ. ಈ ಕಾನೂನು, ಭಾರತೀಯ ಹಿಂದೂಗಳು, ಹಿಂದೂ ಮುಸ್ಲಿಮರನ್ನು ಒಂದೇ ರೀತಿಯಾಗಿ ನೋಡುತ್ತದೆ. ನಮ್ಮ ದೇಶ ಭಾರತ, ಮನಸ್ಸೋ ಇಚ್ಚೆ ಇರುವ ಧರ್ಮಕ್ಷೇತ್ರ ಭಾರತವಲ್ಲ ಎಂದು ಕಿಡಿಕಾರಿದರು.

    ಅಲ್ಲದೆ ಕಾಂಗ್ರೆಸ್ಸಿನವರದ್ದು, ಉಸರವಳ್ಳಿ ಮಾತುಗಳು. ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದ ಮುಸ್ಲಿಮೇತರರಿಗೆ ಪೌರತ್ವ ನೀಡುವುದು ತಪ್ಪು ಎಂದಾದರೆ, ಈ ಹಿಂದೆ ಇವರೇ ಹುಡುಕಿ ವೋಟರ್ ಐಡಿ, ಆಧಾರ್ ಮಾಡಿಕೊಟ್ಟಿದ್ದಾರಲ್ಲ. ಇದು ಸೆಕ್ಯೂಲರಾ ಹಾಗಾದರೆ ಎಂದು ಪ್ರಶ್ನಿಸಿದರು.

  • ಟೌನ್ ಹಾಲ್ ಬಳಿ ಪರಿಸ್ಥಿತಿ ಉದ್ವಿಗ್ನ- ಲಘು ಲಾಠಿ ಪ್ರಹಾರ

    ಟೌನ್ ಹಾಲ್ ಬಳಿ ಪರಿಸ್ಥಿತಿ ಉದ್ವಿಗ್ನ- ಲಘು ಲಾಠಿ ಪ್ರಹಾರ

    – ಸಿಕ್ಕ ವಾಹನಗಳಲ್ಲೇ ಪ್ರತಿಭಟನಾಕಾರರನ್ನು ತುಂಬಿದ ಪೊಲೀಸರು
    – ಖಾಸಗಿ ಬಸ್, ಆಟೋ, ಟಿಟಿ ವಾಹನಗಳ ಮೂಲಕ ಸ್ಥಳಾಂತರ

    ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೆಲವು ದಿನಗಳಿಂದ ದೇಶಾದ್ಯಂತ ನಡೆಯುತ್ತಿದ್ದ ಪ್ರತಿಭಟನೆ ಇಂದು ಸಿಲಿಕಾನ್ ಸಿಟಿಗೂ ವ್ಯಾಪಿಸಿದೆ. ನಗರದ ಟೌನ್ ಹಾಲ್ ಬಳಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಅಲ್ಲದೆ ಸಿಕ್ಕ ಸಿಕ್ಕ ವಾಹನಗಳಲ್ಲೇ ಪ್ರತಿಭಟನಾಕಾರರನ್ನು ಪೊಲೀಸರು ತುಂಬಿ ವಶಕ್ಕೆ ಪಡೆಯುತ್ತಿದ್ದಾರೆ.

    ಪ್ರತಿಭಟನೆ ನಡೆಯುವ ಮುನ್ಸೂಚನೆ ಇದ್ದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು 144 ಸೆಕ್ಷನ್ ಜಾರಿ ಮಾಡಿದ್ದರು. ಆದರೂ ಸಹ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದೀಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ, ವಶಕ್ಕೆ ಪಡೆಯುತ್ತಿದ್ದಾರೆ.

    ಪೊಲೀಸ್ ವಾಹನ, ಬಿಎಂಟಿಸಿ ಬಸ್ ಸಾಕಾಗದೆ, ಸಿಕ್ಕ ಸಿಕ್ಕ ಖಾಸಗಿ ವಾಹನಗಳನ್ನೂ ಬಳಸಿ ಪ್ರತಿಭಟನಾಕಾರರನ್ನು ಸಾಗಿಸುತ್ತಿದ್ದು, ಖಾಸಗಿ ಬಸ್, ಆಟೋ, ಟಿಟಿ ವಾಹನಗಳು ಸೇರಿದಂತೆ ಇತೆ ವಾಹನಗಳಲ್ಲಿ ಸಾಗಿಸುತ್ತಿದ್ದಾರೆ.

    ಪ್ರತಿಭಟನಾಕಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ವೇಳೆ ಬಿಎಂಟಿಸಿ ಬಸ್ಸಿಗೆ ಪ್ರತಿಭಟನಾಕಾರರು ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ, ಕರಪತ್ರಗಳನ್ನು ಹಂಚುತ್ತಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸುತ್ತಿದ್ದಾರೆ.

    ಈ ವೇಳೆ ಪ್ರತಿಭಟನಾಕಾರಾಗಿ ಆಗಮಿಸಿದ್ದ ರಾಜೀವ್ ಗೌಡ ಮಾತನಾಡಿ, ಈ ಕುರಿತು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದೇವೆ. ಕಮೀಷನರ್ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇತ್ತ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದಿಂದಲೂ ವಿದ್ಯಾರ್ಥಿಗಳ ಗುಂಪು ಆಗಮಿಸಿದ್ದು, ಈ ವೇಳೆ ಪೊಲೀಸರು ಮನವೊಲಿಸಲು ಯತ್ನಿಸಿದ್ದಾರೆ. ಇದ್ಯಾವುದಕ್ಕೂ ಒಪ್ಪದ ವಿದ್ಯಾರ್ಥಿಗಳು ಧರಣಿ ಮಾಡಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್, ಪ್ರತಿಭಟನೆ ಸ್ಥಳಗಳಾದ ಟೌನ್ ಹಾಲ್, ಮೈಸೂರು ಬ್ಯಾಂಕ್ ವೃತ್ತದ ಬಳಿ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ ಕೇಂದ್ರ ವಿಭಾಗಕ್ಕೆ ಪರ-ವಿರೋಧ ಪ್ರತಿಭಟನೆಗೆ ಸಾಕಷ್ಟು ಅರ್ಜಿ ಬಂದಿತ್ತು. ಇದನ್ನು ಆಧರಿಸಿಯೇ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇದನ್ನು ತಪ್ಪಿ ನಡೆದರೆ ಸೂಕ್ತ ಕ್ರಮಕ್ಕೆ ಪೋಲಿಸರು ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

  • ಪೌರತ್ವ ತಿದ್ದುಪಡಿ ಕಾಯ್ದೆ ಕಿಚ್ಚು- ಬೆಂಗ್ಳೂರಲ್ಲಿ ಅನುಮತಿ ಪಡಯದೆ ಪ್ರತಿಭಟನೆ

    ಪೌರತ್ವ ತಿದ್ದುಪಡಿ ಕಾಯ್ದೆ ಕಿಚ್ಚು- ಬೆಂಗ್ಳೂರಲ್ಲಿ ಅನುಮತಿ ಪಡಯದೆ ಪ್ರತಿಭಟನೆ

    ಬೆಂಗಳೂರು: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ(ರಾಷ್ಟ್ರೀಯ ಪೌರತ್ವ ನೊಂದಣಿ) ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

    ನಗರದ ಟೌನ್ ಹಾಲ್ ಮುಂಭಾಗ ಎಐಡಿಎಸ್ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಹೊಸ ಕಾಯ್ದೆಯ ವಿರುದ್ಧ ಗುಡುಗಿದರು. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹಿಂದೂ ಮುಸ್ಲಿಂಗಳ ನಡುವಿನ ಸಮರ ಅಂತ ಬಿಂಬಿಸಲಾಗ್ತಿದೆ. ಇದು ತಪ್ಪು, ನಾವೆಲ್ಲರು ಒಂದೇ ಅಂತ ಹೇಳಿದರು. ಈ ವೇಳೆ ಅನುಮತಿ ಪಡೆಯದೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಸೇರಿದ್ದರಿಂದ ಪೊಲೀಸರು ಪ್ರತಿಭಟನೆಯನ್ನ ಕೈಬಿಡುವಂತೆ ಮನವಿ ಮಾಡಿದರು.

    ಪೊಲೀಸರ ಮಾತಿಗೆ ಸೊಪ್ಪು ಹಾಕದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದಾಗ ಪೊಲೀಸರು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿ ಪ್ರತಿಭಟನೆಯನ್ನ ಮೊಟಕುಗೊಳಿಸಿದರು.