Tag: ಟೋಲ್‌ ದರ ಏರಿಕೆ

  • ನೆಲಮಂಗಲ ಹಾಸನ ಟೋಲ್‌ನಲ್ಲಿ ವಾಹನ ಸವಾರರಿಗೆ ಬರೆ – ಸೆ.1 ರಿಂದ ದರ ಏರಿಕೆ

    ನೆಲಮಂಗಲ ಹಾಸನ ಟೋಲ್‌ನಲ್ಲಿ ವಾಹನ ಸವಾರರಿಗೆ ಬರೆ – ಸೆ.1 ರಿಂದ ದರ ಏರಿಕೆ

    ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ದರದ ಏರಿಕೆ ಮತ್ತೊಂದು ಶಾಕ್ ಎದುರಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೆಪ್ಟೆಂಬರ್ 1 ರಿಂದ ದರ ಏರಿಕೆ ಮಾಡಿ, ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ನೀಡಿದೆ.

    ಇಂದು ಮಧ್ಯರಾತ್ರಿಯಿಂದ 5 ರೂ. ದರ ಏರಿಕೆಯಾಗಲಿದೆ. ನೆಲಮಂಗಲ ದೇವಿಹಳ್ಳಿ ಎಕ್ಸ್ಪ್ರೆಸ್ ಪ್ರೈವೇಟ್ ಲಿಮಿಟೆಡ್ ಟೋಲ್‌ಗಳಲ್ಲಿ ಏರಿಕೆಯಾಗಿದ್ದು, ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿಯ ಟೋಲ್ ಮೂಲಕ ಸಂಚರಿಸುವ ವಾಹನ ಸವಾರರಿಗೆ ಬರೆ ಬಿದ್ದಿದೆ. ಇದನ್ನೂ ಓದಿ: ಮಹಾರಾಷ್ಟ್ರ | ಮತ್ತೊಬ್ಬಳನ್ನು ಮದುವೆಯಾಗುವ ಆಸೆಗೆ ಪ್ರೇಯಸಿಯನ್ನೇ ಕೊಂದ ಪ್ರಿಯಕರ

    ದೊಡ್ಡಕರೇನಹಳ್ಳಿ ಟೋಲ್ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆಯಾಗಿದೆ. ಏಕಮುಖ ಸಂಚಾರಕ್ಕೆ 5 ರೂ., ದ್ವಿಮುಖ ಸಂಚಾರಕ್ಕೆ 10 ರೂ. ದರ ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಸಿಕ್ಸ್‌ ಮೇಲೆ ಸಿಕ್ಸ್‌, ನೋಟ್‌ಬುಕ್ ಸ್ಟೈಲ್‌ ಸಂಭ್ರಮಾಚರಣೆ – ರಾಥಿಯನ್ನು ಬೆಂಡೆತ್ತಿ ಕಿಚಾಯಿಸಿದ ರಾಣಾ

    ಕಾರು, ಜೀಪು, ವ್ಯಾನ್ ಹಾಗೂ ಲಘು ಮೋಟಾರ್ ವಾಹನಗಳಿಗೆ ಮೊದಲಿದ್ದ ದರವೇ ಇರಲಿದೆ. ಫಾಸ್ಟ್ಟ್ಯಾಗ್ ಇದ್ದರೆ ಏಕಮುಖ ಸಂಚಾರಕ್ಕೆ ಈಗಿನ ದರ 55 ರೂ., 60 ದಿನದ ಸಂಚಾರಕ್ಕೆ 85 ರೂ., ಫಾಸ್ಟ್ಟ್ಯಾಗ್ ರಹಿತ 110 ರೂ. ಇತ್ತು. ಈಗಿನ ದರ 120 ರೂ. ಆಗಿದೆ.

    ಲಘು ವಾಣಿಜ್ಯ ಹಾಗೂ ಸರಕು ವಾಹನಗಳ ಏಕಮುಖ ಸಂಚಾರಕ್ಕೆ 100 ರೂ. ಹಾಗೂ ದಿನದ ಸಂಚಾರಕ್ಕೆ 155 ರೂ. ದರ ಏರಿಕೆ ಮಾಡಲಾಗಿದೆ. ಈ ದರ ಏರಿಕೆಯಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಬಿದ್ದಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

  • ಇಂದಿನಿಂದ ವಾಹನ ಸವಾರರಿಗೆ ಟೋಲ್ ಬಿಸಿ – ಶೇ.5ರಷ್ಟು ದರ ಏರಿಕೆ

    ಇಂದಿನಿಂದ ವಾಹನ ಸವಾರರಿಗೆ ಟೋಲ್ ಬಿಸಿ – ಶೇ.5ರಷ್ಟು ದರ ಏರಿಕೆ

    ರಾಮನಗರ: ರಾಜ್ಯದಲ್ಲಿ ಬೆಲೆ ಏರಿಕೆ ನಡುವೆಯೇ ಇಂದಿನಿಂದ ವಾಹನ ಸವಾರರಿಗೆ ಟೋಲ್ ದರ ಏರಿಕೆ (Toll Rate Hike) ಬಿಸಿ ಕೂಡಾ ತಟ್ಟಲಿದೆ. ಶೇ. 5ರಷ್ಟು ಟೋಲ್ ದರ ಏರಿಕೆಯಾಗಿದೆ.

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ(NHAI) ವಾರ್ಷಿಕ ಟೋಲ್ ದರ ಏರಿಕೆಯು ಇಂದಿನಿಂದ (ಏ.1) ಅನ್ವಯವಾಗಲಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಯಲ್ಲೂ ಪರಿಷ್ಕೃತ ದರ ಜಾರಿ ಆಗಿದೆ. ಬೆಂಗಳೂರಿನಿಂದ ನಿಢಗಟ್ಟದವರೆಗಿನ 56ಕಿ.ಮೀ ಗೆ ಶೇ.5ರಷ್ಟು ಟೋಲ್ ದರ ಏರಿಕೆಯಾಗಿದ್ದು, ಬಿಡದಿ ಸಮೀಪದ ಶೇಷಗಿರಿಹಳ್ಳಿ ಹಾಗೂ ಕಣಮಿಣಕಿ ಟೋಲ್‌ನಲ್ಲೂ ದರ ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಇಂದಿನಿಂದ ಹಾಲಿನ ದರ ಏರಿಕೆ – ಬೆಳಗ್ಗೆ ಸಪ್ಲೈ ಆದ ಹಾಲಿನಲ್ಲಿ ಪರಿಷ್ಕೃತ ದರ ಜಾರಿ ಆಗಿಲ್ಲ

    ಎಕ್ಸ್‌ಪ್ರೆಸ್‌ ಹೈವೆ ಟೋಲ್‌ನ ಹೊಸ ದರ ಹೀಗಿರಲಿದೆ:

    ಕಾರು/ಜೀಪು: ಏಕಮುಖ ಸಂಚಾರದ ಹೊಸ ದರ 180 ರೂ. ಆಗಿದ್ದು, ಹಳೆ ದರ 170 ರೂ. ಇತ್ತು. ಇದೀಗ 10 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹೊಸ ದರ 270 ರೂ. ಆಗಿದ್ದು, ಹಳೆ ದರ 255 ರೂ. ಇತ್ತು. 15 ರೂ. ಹೆಚ್ಚಿಸಲಾಗಿದೆ.

    ಲಘು ವಾಣಿಜ್ಯ ವಾಹನ: ಏಕಮುಖ ಸಂಚಾರ ಹೊಸ ದರ 290 ರೂ. ಆಗಿದ್ದು, ಹಳೆ ದರ 275 ರೂ. ಇತ್ತು. 15 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹೊಸ ದರ 430 ರೂ. ಆಗಿದ್ದು, ಹಳೆ ದರ 415 ರೂ. ಇತ್ತು. ಇದೀಗ 15 ರೂ. ಹೆಚ್ಚಿಸಲಾಗಿದೆ. ಇದನ್ನೂ ಓದಿ: ಮಾಜಿ ಪತ್ನಿಯರೊಡನೆ ಈದ್ ಹಬ್ಬ ಆಚರಿಸಿದ ಆಮೀರ್ ಖಾನ್

    ಬಸ್/ಟ್ರಕ್: ಏಕಮುಖ ಸಂಚಾರ ಹೊಸ ದರ 605 ರೂ. ಆಗಿದ್ದು, ಹಳೆ ದರ 580 ರೂ. ಇತ್ತು. 25 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹೊಸ ದರ 905 ರೂ. ಆಗಿದ್ದು, ಹಳೆ ದರ 870 ರೂ. ಇತ್ತು. ಇದೀಗ 35 ರೂ. ಹೆಚ್ಚಳವಾಗಿದೆ.

    ಮೂರು ಆಕ್ಸಲ್ ವಾಣಿಜ್ಯ ವಾಹನ: ಏಕಮುಖ ಸಂಚಾರದ ಹೊಸ ದರ 660 ರೂ. ಆಗಿದ್ದು, ಹಳೆ ದರ 635 ರೂ. ಇತ್ತು. ಇದೀಗ 25 ರೂ. ಹೆಚ್ಚಿಸಲಾಗಿದೆ. ದ್ವಿಮುಖ ಸಂಚಾರದ ಹೊಸ ದರ 990 ರೂ. ಆಗಿದ್ದು, ಹಳೆ ದರ 950 ರೂ. ಇತ್ತು. ಇದೀಗ 40 ರೂ. ಹೆಚ್ಚಳವಾಗಿದೆ. ಇದನ್ನೂ ಓದಿ: ಜಾರ್ಖಂಡ್‌ | ಗೂಡ್ಸ್ ರೈಲುಗಳ ನಡುವೆ ಡಿಕ್ಕಿ – ಇಬ್ಬರು ಲೋಕೋ ಪೈಲಟ್‌ ಸೇರಿ 3 ಸಾವು

    ಮಲ್ಟಿ ಆಕ್ಸಲ್ ವೆಹಿಕಲ್ಸ್(4-6 ಆಕ್ಸಲ್): ಏಕಮುಖ ಸಂಚಾರದ ಹೊಸ ದರ 945 ರೂ. ಆಗಿದ್ದು, ಹಳೆ ದರ 910 ರೂ. ಇತ್ತು. ಇದೀಗ 35 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹೊಸ ದರ 1,420 ರೂ. ಆಗಿದ್ದು, ಹಳೆ ದರ 1,365 ಇತ್ತು. ಇದೀಗ 55 ರೂ. ಹೆಚ್ಚಿಸಲಾಗಿದೆ. ಇದನ್ನೂ ಓದಿ: 11 ನಗರಗಳ ಹೆಸರು ಮರುನಾಮಕರಣ – ಉತ್ತರಾಖಂಡ ಸಿಎಂ ಧಾಮಿ ಆದೇಶ

    ಭಾರಿ ವಾಹನಗಳು(7 ಆಕ್ಸೆಲ್ ಅಥವಾ ಅಧಿಕ): ಏಕಮುಖ ಸಂಚಾರದ ಹೊಸ ದರ 1,155 ರೂ. ಆಗಿದ್ದು, ಹಳೆ ದರ 1,110 ಇತ್ತು. 55 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹೊಸ ದರ 1,730 ರೂ. ಆಗಿದ್ದು, ಹಳೆ ದರ 1,660 ರೂ. ಇತ್ತು. ಇದೀಗ 100 ರೂ. ಹೆಚ್ಚಿಸಲಾಗಿದೆ.