ಬೆಂಗಳೂರು: ಅದ್ಧೂರಿಯಾಗಿ ಸಿದ್ದರಾಮೋತ್ಸವ ಮಾಡುವ ಮೂಲಕ ಮುನಿಸು ಮರೆತು ಒಂದಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇದೀಗ ಮತ್ತೆ ಇಮದು ಪರಸ್ಪರ ಟೋಪಿ ಬದಲಾಯಿಸಿಕೊಳ್ಳುವ ಮೂಲಕ ಒಗ್ಗಟ್ಟು ಮೆರೆದಿದ್ದಾರೆ.
ಹೌದು. ದಿನ ಹೋದಂತೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ದೋಸ್ತಿ ಗಟ್ಟಿಯಾಗುತ್ತಿದೆ. ದಾವಣಗೆರೆ ಬಳಿಕ ಈಗ ಕೆಪಿಸಿಸಿ ಕಚೇರಿಯಲ್ಲೂ ನಾಯಕರ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಆಗಸ್ಟ್ 15ರ ಫ್ರೀಡಂಮಾರ್ಚ್‍ಗೆ ಕಾಂಗ್ರೆಸ್ ಸಿದ್ಧತೆ ವೇಳೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: 75ನೇ ಅಮೃತ ಮಹೋತ್ಸವ – ದೆಹಲಿಯಲ್ಲಿ ಪ್ರಧಾನಿ ಮೋದಿ ಸುರಕ್ಷತೆಗೆ ಭಾರೀ ಭದ್ರತೆ
ಸಿದ್ದರಾಮಯ್ಯ ಹಾಗೂ ಡಿಕೆಶಿ ಇಂದು ಆಗಸ್ಟ್ 15 ರ ಫ್ರೀಡಂ ಮಾರ್ಚ್ ನಲ್ಲಿ ಧರಿಸಲಿರುವ ಟೀ ಶರ್ಟ್ ಹಾಗೂ ಹ್ಯಾಟ್ ಬಿಡುಗಡೆ ಮಾಡಿದರು. ಬಿಡುಗಡೆ ನಂತರ ಯಾರಿಗೆ ಹಾಕೋದು ಅಂತ ಸಿದ್ದರಾಮಯ್ಯ ಕೈಗೆ ಡಿಕೆಶಿ ಟೋಪಿ ಕೊಟ್ಟರು. ಈ ವೇಳೆ ಸಿದ್ದರಾಮಯ್ಯ ಅವರು, ಪಕ್ಕದಲ್ಲಿ ಕುಳಿತಿದ್ದ ಸಲೀಂ ಅಹಮ್ಮದ್ ಬಿಟ್ಟು ಅವರ ಪಕ್ಕದಲ್ಲಿ ಕುಳಿತಿದ್ದ ಕೆ.ಜೆ.ಜಾರ್ಜ್ ಗೆ ಟೋಪಿ ಹಾಕಿದರು.
ಇದೇ ವೇಳೆ ಸಿದ್ದರಾಮಯ್ಯಗೆ ಡಿಕೆಶಿ ಟೋಪಿ ಹಾಕಿದರು. ಡಿಕೆಶಿ ಟೋಪಿ ಹಾಕುತ್ತಿದ್ದಂತೆ ತಾವು ಒಂದು ಟೋಪಿ ತೆಗೆದುಕೊಂಡು ಅದನ್ನು ಡಿಕೆಶಿಗೆ ಹಾಕಿದರು. ಈ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿ ನಮ್ಮ ಲ್ಲಿ ಯಾವುದೇ ಮುನಿಸಿಲ್ಲ ಎಂಬುದನ್ನು ಸಾರಿದರು.
Live Tv
[brid partner=56869869 player=32851 video=960834 autoplay=true]
ಬಾಗಲಕೋಟೆ: ಕಾಲೇಜಿಗೆ ಟೋಪಿ ಹಾಕಿಕೊಂಡು ಬಂದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ ಕಾಲೇಜು ಪ್ರಿನ್ಸಿಪಾಲ್, ಪಿಎಸ್‍ಎ, ಕಾನ್ಸ್‍ಟೇಬಲ್ ಸೇರಿ ಏಳು ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.
ಫೆಬ್ರವರಿ 18 ರಂದು ತೇರದಾಳ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ನವೀದ್ ಥರಥರಿ ಮುಸ್ಲಿಂ ಟೋಪಿ ಹಾಕಿಕೊಂಡು ಕಾಲೇಜಿಗೆ ಬಂದಿದ್ದನು. ಈ ಹಿನ್ನೆಲೆ ಅವನ ಮೇಲೆ ಹಲ್ಲೆ ಮಾಡಲಾಗಿತ್ತು. ಇದನ್ನು ಖಂಡಿಸಿ ನವೀದ್ ಥರಥರಿ ನ್ಯಾಯಾಲಯದ ಮೊರೆ ಹೋಗಿದ್ದ. ಪರಿಣಾಮ ಬನಹಟ್ಟಿಯ ಜೆಎಂಎಫ್‍ಸಿ ನ್ಯಾಯಾಲಯದ ಆದೇಶದನ್ವಯ ತೇರದಾಳ ಪೊಲೀಸ್ ಠಾಣೆಯಲ್ಲಿ ಏಳು ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಕೈ ನಾಯಕ ಸಿಧು ಹತ್ಯೆ ಮಾಡಿದ್ದು ನಾವೇ ಎಂದ ಕೆನಡಾದ ಗ್ಯಾಂಗ್‍ಸ್ಟಾರ್
ಫೆಬ್ರವರಿ ತಿಂಗಳಲ್ಲಿ ಹಿಜಬ್ ವಿವಾದ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿತ್ತು. ಇದೇ ಸಮಯಕ್ಕೆ ನವೀದ್ ಥರಥರಿ ಮುಸ್ಲಿಂ ಟೋಪಿ ಹಾಕಿಕೊಂಡು ಕಾಲೇಜಿಗೆ ಬಂದಿದ್ದ. ಈ ವೇಳೆ ನವೀದ್ ಮೇಲೆ ಪ್ರಿನ್ಸಿಪಾಲ್ ಸೇರಿ 7 ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿತ್ತು. ಹಲ್ಲೆ ನಂತರ ನವೀದ್ ಜಮಖಂಡಿ ಆಸ್ಪತ್ರೆಗೆ ದಾಖಲಾಗಿದ್ದ. ಈ ಹಿನ್ನೆಲೆ ನವೀದ್ ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ಮೊರೆ ಹೋಗಿದ್ದ
ನವೀದ್ ಕೋರ್ಟ್ ಆದೇಶದನ್ವಯ ತೇರದಾಳ ಪಿಎಸ್‍ಐ ರಾಜು ಬೀಳಗಿ, ಪೊಲೀಸ್ ಕಾನಸ್ಟೇಬಲ್‍ಗಳಾದ ಗಣಿ ಪಿ.ಹೆಚ್.ಮಲ್ಲಿಕಾರ್ಜುನ್, ಕೆಂಚಣ್ಣವರ, ಎಸ್.ಬಿ.ಕಲಾಟೆ, ಎಸ್.ಸಿ.ಮದನಮಟ್ಟಿ, ಸನ್ನತ್ತಿ, ಪ್ರಿನ್ಸಿಪಾಲ್ ಅಣ್ಣಪ್ಪಯ್ಯ ಪೂಜಾರಿ ಸೇರಿದಂತೆ ಏಳು ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಟೋಪಿಗಳು ಫ್ಯಾಶನ್ ಹುಡುಗಿಯರಿಗೆ ಬಹಳ ಅಚ್ಚು ಮೆಚ್ಚು ಹಾಗೂ ಅವುಗಳು ಬೆಸ್ಟ್ ಫ್ರೆಂಡ್ ಇದ್ದಂತೆ. ಇತ್ತೀಚೆಗೆ ಇನ್‍ಸ್ಟಾಗ್ರಾಮ್‍ನಲ್ಲಿ ನೋಡಿದರೆ ಸೆಲಿಬ್ರೆಟಿಗಳು ಸೇರಿದಂತೆ ಅನೇಕ ಮಂದಿ ಟೋಪಿಗಳನ್ನು ಧರಿಸಿ ಫೋಟೋ ಹಾಗೂ ವೀಡಿಯೋ ಮಾಡಿರುತ್ತಾರೆ. ಸದ್ಯ ಟೋಪಿಗಳು ಒಂದು ರೀತಿ ಹೊಸ ಟ್ರೆಂಡ್ ಸೃಷ್ಟಿಸಿದೆ ಎಂದೇ ಹೆಳಬಹುದು. ಅಷ್ಟೇ ಅಲ್ಲದೇ ಟೋಪಿಗಳನ್ನು ಹವಾಮಾನ ಅನುಸಾರವಾಗಿ ಕೂಡ ಧರಿಸಲಾಗುತ್ತದೆ. ಬಿಸಿಲು, ಗಾಳಿ, ಮಳೆ ಹಾಗೂ ನಿಮ್ಮ ಕೂದಲನ್ನು ಮರೆಮಾಚಲು ನಿಮ್ಮ ತಲೆಯನ್ನು ರಕ್ಷಿಸಿಕೊಳ್ಳಲು ಟೋಪಿಗಳನ್ನು ಧರಿಸಬೇಕಾಗುತ್ತದೆ. ಜೊತೆಗೆ ನಿಮ್ಮ ಬಟ್ಟೆಗೆ ಸೂಟ್ ಆಗುವಂತೆ ಟೋಪಿ ಯಾವುದು ಎಂದು ತಿಳಿದುಕೊಳ್ಳಬೇಕು. ಈ ಕುರಿತು ಕೆಳಗೆ ಒಂದಷ್ಟು ಮಾಹಿತಿ ನೀಡಲಾಗಿದೆ.
ಪೋಮ್ ಪೋಮ್ ಟೋಪಿ
ಕೆನಾಡದಲ್ಲಿ ಟೋಕ್ ಎಂದು ಕರೆಯಲ್ಪಡುವ ಪೋಮ್ ಪೋಮ್ ಟೋಪಿಯನ್ನು ಮಹಿಳೆಯರು ಹೆಚ್ಚಾಗಿ ಚಳಿಗಾಲದಲ್ಲಿ ಧರಿಸುತ್ತಾರೆ. ಇದನ್ನು ಉಲನ್ ನಿಂದ ಹೆಣೆದಿದ್ದು, ಟೋಪಿ ಮೇಲ್ಭಾಗದಲ್ಲಿ ಬಾಬುಲ್ ಒಂದನ್ನು ಇರಿಸಲಾಗಿದೆ. ಈ ಟೋಪಿಗಳು ವಿವಿಧ ಆಕಾರ, ಗಾತ್ರ ಹಾಗೂ ಬಣ್ಣಗಳಲ್ಲಿ ಲಭ್ಯವಾಗುತ್ತದೆ. ಇದನ್ನೂ ಓದಿ:ವೀಕೆಂಡ್ ಕರ್ಫ್ಯೂ – ಕೊಡಗಿನಲ್ಲಿ ಉತ್ತಮ ಸ್ಪಂದನೆ, ಬೀದರ್ ನಲ್ಲಿ ಡೋಂಟ್ ಕೇರ್
ಕ್ಲಾಸಿಕ್ ಫೆಡೋರಾ
ಕ್ಲಾಸಿಕ್ ಫೆಡೋರಾ ಟೋಪಿಯನ್ನು ಹಿಂದೆ ಪುರುಷರು ಮಾತ್ರ ಧರಿಸುತ್ತಿದ್ದರು, ಆದರೆ ಇದೀಗ ಸುಂದರವಾದ ಮಹಿಳೆಯರು ಕೂಡ ಧರಿಸಲು ಆರಂಭಿಸಿದ್ದಾರೆ. ಫ್ಯಾಬ್ರಿಕ್ ಮತ್ತು ಬಣ್ಣವನ್ನು ಲೆಕ್ಕಿಸದೇ ಮಹಿಳೆ ಈ ಟೋಪಿಯನ್ನು ಧರಿಸುತ್ತಿದ್ದಾರೆ. ಈ ಟೋಪಿ ಮೇಲ್ಭಾಗ ಸಣ್ಣ ರಿಮ್ ಮಾದರಿಯಿದ್ದು, ಇದರ ಸುತ್ತಲೂ ಮಡಚಿದಂತೆ ಕಾಣಿಸುತ್ತದೆ.
ವೈಡ್ ಬ್ರಮ್ ಫೆಡೋರಾ
ಈ ಟೋಪಿಯನ್ನು ಸಫಾರಿ ಟೋಪಿಯಂತಲೂ ಕರೆಯುತ್ತಾರೆ. ಈ ಟೋಪಿ ಸ್ಟೈಲಿಶ್ ಹುಡುಗಿಯರಿಗೆ ಬೇಗ ಸೂಟ್ ಆಗುತ್ತದೆ. ಈ ಟೋಪಿ ಒಂದು ರೀತಿ ಕಿರೀಟದಂತಿದ್ದು, ವಿಶಾಲವಾದ ಅಂಚುಗಳನ್ನು ಹೊಂದಿದೆ ಹಾಗೂ ಇದನ್ನು ಉಣ್ಣೆ ಬಟ್ಟೆಯಿಂದ ವಿನ್ಯಾಸಗೊಳಿಸಲಾಗಿದೆ. ನೀವು ಹೇರ್ ವಾಶ್ ಮಾಡಿಲ್ಲದಿರುವಾಗ ಈ ಟೋಪಿ ಧರಿಸುವುದರಿಂದ ಇದು ನಿಮ್ಮ ಕೂದಲನ್ನು ಮರೆಮಾಚುತ್ತದೆ. ಇದನ್ನೂ ಓದಿ:ಬೆಕ್ಕಿಗಾಗಿಯೇ ಎಸಿ ರೂಮ್, ಮಿನಿ ಥಿಯೇಟರ್ ನಿರ್ಮಾಣ – ಗುಜರಾತಿನಲ್ಲೊಬ್ಬ ಕ್ಯಾಟ್ ಪ್ರಿಯ
ಸ್ಕೂಲ್ ಬಾಯ್ ಹ್ಯಾಟ್
ಸ್ಕೂಲ್ ಬಾಯ್ ಟೋಪಿ ಎಂದು ಕರೆಯಲ್ಪಡುವ ಈ ಟೋಪಿಯನ್ನು ನ್ಯೂಸ್ ಬಾಯ್ ಟೋಪಿ ಎಂದು ಹೇಳಲಾಗುತ್ತದೆ. ಈ ಟೋಪಿಯನ್ನು ಉಣ್ಣೆಯಿಂದ ಮಾಡಲ್ಪಟ್ಟಿದ್ದು, ಫ್ಯಾಷಶ್ ಪ್ರಿಯರಿಗೆ ಈ ಟೋಪಿ ಇಷ್ಟವಾಗುತ್ತದೆ ಮತ್ತು ಇದರ ಅಂದ ಬಣ್ಣದ ಮೇಲೆ ಅವಲಂಬಿತವಾಗಿರುತ್ತದೆ. ಶಾಲೆಗೆ ತೆರಳುವ ಬಾಲಕಿಯರು ಧರಿಸುವ ಸ್ಕರ್ಟ್‍ಗೆ ಈ ಟೋಪಿ ಬಹಳ ಚೆನ್ನಾಗಿ ಮ್ಯಾಚ್ ಆಗುತ್ತದೆ.
ಫರ್ ಪಿಲ್ ಬಾಕ್ಸ್ ಟೋಪಿ
ವಾತವಾರಣದಲ್ಲಿ ಚಳಿ ಹೆಚ್ಚಾದಾಗ ಈ ಟೋಪಿ ಬೆಚ್ಚಗಿರುತ್ತದೆ. ಮಹಿಳೆಯರಿಗೆ ಬೆಚ್ಚಗಿರಿಸುವುದರ ಜೊತೆ ಸ್ಟೈಲಿಶ್ ಲುಕ್ ನೀಡುವ ಈ ಟೋಪಿಯನ್ನು ಜ್ಹಿವಾಗೋ ಟೋಪಿ ಎಂದು ಕೂಡ ಕರೆಯಲಾಗುತ್ತದೆ. 1965ರಲ್ಲಿ ಜೂಲಿ ಕ್ರಿಸ್ಟಿ ನಟಿಸಿದ ಸಿನಿಮಾದ ನಂತರ ಈ ಮೃದುವಾದ ಟೋಪಿ ಸಖತ್ ಫೇಮಸ್ ಆಗಿತ್ತು. ಈ ಟೋಪಿ ಕ್ಯಾಶುಯಲ್ ವೇರ್ ಜೊತೆಗೆ ಸೊಗಸಾಗಿ ಕಾಣಿಸುತ್ತದೆ.ಇದನ್ನೂ ಓದಿ:ರೈಲ್ವೆ ಹಳಿ ಮೇಲೆ ಜ್ಞಾನತಪ್ಪಿ ಬಿದ್ದಿದ್ದ ವ್ಯಕ್ತಿ – ನಿಮಿಷದಲ್ಲಿ ಸಾವಿನ ಅಂಚಿನಿಂದ ಪಾರು
ಅಬುಧಾಬಿ: ಸಾಮಾನ್ಯವಾಗಿ ಕ್ರೆಕೆಟ್ ನಡೆಯುತ್ತಿರುವ ವೇಳೆ ಎಲ್ಲ ಆಟಗಾರರು ಒಂದೊಂದು ಟೋಪಿ ಧರಿಸಿರುತ್ತಾರೆ. ಆದರೆ ಈ ಬಾರಿ ಐಪಿಎಲ್‍ನಲ್ಲಿ ನಾಯಕರು ಎರಡು ಟೋಪಿಗಳನ್ನು ಧರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಕೊರೊನಾ ಕಾರಣದಿಂದ ಐಪಿಎಲ್-2020 ಆರು ತಿಂಗಳು ತಡವಾಗಿ ಯುಎಇಯಲ್ಲಿ ಆರಂಭವಾಗಿ ಅರ್ಧಕ್ಕಿಂತ ಹೆಚ್ಚಿನ ಪಯಾಣವನ್ನು ಯಶಸ್ವಿಯಾಗಿ ಮುಗಿಸಿದೆ. ಈಗಾಗಲೇ 43 ಪಂದ್ಯಗಳು ಐಪಿಎಲ್‍ನಲ್ಲಿ ಮುಗಿದಿವೆ. ಈ ನಡುವೆ ಪಂದ್ಯದ ವೇಳೆ ನಾಯಕರ ಎರಡು ಟೋಪಿ ಧರಿಸಲು ಕಾರಣವೇನು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದರು.
ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಕೊರೊನಾ ನಡುವೆಯೂ ಬಿಸಿಸಿಐ ಹಲವಾರು ನಿಯಮಗಳನ್ನು ಮಾಡಿಕೊಂಡು ಐಪಿಎಲ್ ಅನ್ನು ಆರಂಭ ಮಾಡಿದೆ. ಅಂತೆಯೇ ಕೊರೊನಾ ನಡುವೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜನೆ ಮಾಡಿದ್ದ ಐಸಿಸಿ ಕೂಡ ಕೆಲ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.ಕೊರೊನಾ ಕಾರಣದಿಂದ ಬಾಲಿಗೆ ಎಂಜಲನ್ನು ಹಚ್ಚಬಾರದು ಎಂಬ ನಿಯಮವನ್ನು ಐಸಿಸಿ ಜಾರಿಗೆ ಮಾಡಿತ್ತು.
ಈ ಮೊದಲು ಪಂದ್ಯದಲ್ಲಿ ಬೌಲರ್ ಬೌಲ್ ಮಾಡುವ ಮೊದಲು ಆತನ ಟೋಪಿ, ಗ್ಲಾಸ್ ಮತ್ತು ಸ್ವೆಟ್ಟರ್ ಇನ್ನಿತರ ವಸ್ತುಗಳನ್ನು ಅಂಪೈರ್ ಕೈಗೆ ಕೊಡುತ್ತಿದ್ದರು. ಈಗ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಐಸಿಸಿ ಹೊಸ ನಿಯಮ ಮಾಡಿದ್ದು, ಈ ನಿಯಮದಂತೆ ಯಾವ ಆಟಗಾರನೂ ಕೂಡ ಪಂದ್ಯದ ವೇಳೆ ತನ್ನ ಯಾವುದೇ ವಸ್ತುಗಳನ್ನು ಅಂಪೈರ್ ಗೆ ನೀಡುವಂತಿಲ್ಲ. ಜೊತೆಗೆ ವಸ್ತುಗಳ ಮೂಲಕ ಯಾವುದೇ ಅಂಪೈರ್ ಅನ್ನು ಸಂಪರ್ಕ ಮಾಡುವಂತಿಲ್ಲ.
ಐಸಿಸಿ ಈ ನಿಯಮವನ್ನು ಬಿಸಿಸಿಐ ಐಪಿಎಲ್‍ನಲ್ಲೂ ಕೂಡ ಅವಳವಡಿಸಿದ್ದು, ಯಾವುದೇ ಬೌಲರ್ ಬೌಲ್ ಮಾಡುವಾಗ ತನ್ನ ವಸ್ತುಗಳನ್ನು ಅಂಪೈರ್ ಗೆ ನೀಡುವಂತಿಲ್ಲ. ಜೊತೆಗೆ ಅವರನ್ನು ಸಂಪರ್ಕ ಮಾಡುವಂತಿಲ್ಲ. ಹೀಗಾಗಿ ಯಾವುದೇ ತಂಡದ ಬೌಲರ್ ಬೌಲ್ ಮಾಡುವಾಗ ತನ್ನ ಯಾವುದೇ ವಸ್ತುಗಳನ್ನು ಅಂಪೈರಿಗೆ ನೀಡುವುದಿಲ್ಲ. ಆದ್ದರಿಂದ ಬೌಲರ್ ಬೌಲ್ ಮಾಡುವಾಗ ಆತನ ಟೋಪಿಯನ್ನು ನಾಯಕ ಧರಿಸುವ ಕಾರಣ ಕ್ಯಾಪ್ಟನ್‍ಗಳು ಎರಡು ಟೋಪಿ ತೊಟ್ಟು ಕಾಣಿಸಿಕೊಳ್ಳುತ್ತಿದ್ದಾರೆ.
ಕೊರೊನಾ ಕಾರಣದಿಂದ ಬಹಳ ಮುಂಜಾಗ್ರತೆವಹಿಸಿ ಐಪಿಎಲ್ ಅನ್ನು ನಡೆಸಲಾಗುತ್ತಿದೆ. ಆದರೂ ಐಪಿಎಲ್ ಆರಂಭಕ್ಕೂ ಮುನ್ನವೇ ಕೊರೊನಾ ಕರಿನೆರಳು ಟೂರ್ನಿಯ ಮೇಲೆ ಬಿದ್ದಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ನಂತರ ಅವರು ಸೋಂಕಿನಿಂದ ಗುಣಮುಖರಾಗಿದ್ದು, ಐಪಿಎಲ್ ಆರಂಭವಾಗಿ ತನ್ನ ಅರ್ಧ ಜರ್ನಿಯನ್ನು ಯಾವುದೇ ತೊಂದರೆಯಿಲ್ಲದೆ ಮುಗಿಸಿದೆ.
ಬೆಂಗಳೂರು: ಇನ್ಮುಂದೆ ಪೊಲೀಸ್ ಪೇದೆಗಳ ಟೋಪಿ ಬದಲಾವಣೆಯಾಗುತ್ತಿದ್ದು, ಇನ್ಸ್ಪಕ್ಟರ್ ಗಳಿಗಿದ್ದ ಕ್ಯಾಪ್ ಮಾದರಿಯಲ್ಲಿ ಟೋಪಿ ಕೊಡಲಾಗುತ್ತಿದೆ.
ಈ ಹಿಂದೆ ಇದ್ದ ಕ್ಯಾಪ್‍ಗಳು ಆರೋಗ್ಯಕರವಾಗಿರಲಿಲ್ಲ. ಅಷ್ಟೇ ಅಲ್ಲದೇ ಕ್ಯಾಪ್‍ಗಳು ಹೆಚ್ಚಿನ ತೂಕ ಇತ್ತು. ಇದರಿಂದಾಗಿ ಕುತ್ತಿಗೆ ನೋವು, ತಲೆ ನೋವು ಕಾಣಿಸಿಕೊಳ್ಳುತ್ತಿತ್ತು. ಹಾಗಾಗಿ ಗೃಹ ಇಲಾಖೆ ಬದಲಾವಣೆ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಇದನ್ನು ಓದಿ: ಮಹಿಳಾ ಪೊಲೀಸರ ಖಾಕಿ ಸೀರೆ, ಸಲ್ವಾರ್ ಯೂನಿಫಾರ್ಮ್ ಗೆ ಬ್ರೇಕ್!
ಇದಕ್ಕೆ ಸರ್ಕಾರ ಒಪ್ಪಿದರೆ ಎಲ್ಲಾ ಪೊಲೀಸರಿಗೆ ಟೋಪಿ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಹಾಗಾಗಿ ಡಿಜಿ ಐಜಿಪಿ ಕಚೇರಿಯಲ್ಲಿ ಟೋಪಿಯನ್ನು ತೊಟ್ಟು ಬದಲಾವಣೆ ಪ್ರಯೋಗವನ್ನು ನಡೆಸಿದರು. ಇದನ್ನು ಓದಿ:ಡೊಳ್ಳು ಹೊಟ್ಟೆ ಬೆಳೆಸಿಕೊಂಡಿರುವ ಪೊಲೀಸರೇ ಎಚ್ಚರ!
ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಮುಸ್ಲಿಂ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಧಾರ್ಮಿಕ ಟೋಪಿಯನ್ನು ಧರಿಸಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ಫೈರ್ ಬ್ರಾಂಡ್ ಸಿಎಂ ಯೋಗಿ ಅದಿತ್ಯನಾಥ್ ಅವರು ಸಂತ ಕಬೀರ್ ಅವರ ಸ್ಮಾರಕ ಭವನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಮಾರಕದ ಉಸ್ತುವಾರಿ ವಹಿಸಿದ್ದ ಧಾರ್ಮಿಕ ಮುಖಂಡರು ಯೋಗಿ ಅವರಿಗೆ ಟೋಪಿ ಧರಿಸಲು ಮುಂದಾಗಿದ್ದರು. ಆದರೆ ಈ ವೇಳೆ ಯೋಗಿ ಅವರು ಟೋಪಿ ಧರಿಸಲು ನಿರಾಕರಿಸಿ ಬಳಿಕ ಅಲ್ಲಿಂದ ತೆರಳಿದ್ದರು.
ಸದ್ಯ ಸಿಎಂ ಯೋಗಿ ಅದಿತ್ಯನಾಥ್ ಧಾರ್ಮಿಕ ಟೋಪಿ ಧರಿಸಲು ನಿರಾಕರಿಸಿರುವ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂತ ಕಬೀರ್ ಅವರ 500 ನೇ ಪುಣ್ಯಸ್ಮರಣೆ ಪ್ರಯುಕ್ತ ಪ್ರಧಾನಿ ಮೋದಿ ಅವರು ಗುರುವಾರ ಭೇಟಿ ನೀಡಿದ್ದರು. ಪ್ರಧಾನಿ ಆಗಮನ ಹಿನ್ನೆಲೆ ಸಿಎಂ ಯೋಗಿ ಅದಿತ್ಯನಾಥ್ ಬುಧವಾರ ಸಿದ್ಧತೆಗಳ ಪರಿಶೀಲನೆಗೆ ತೆರಳಿದ್ದರು.
ಇದೇ ಮೊದಲಲ್ಲ: 2019 ರ ಲೋಕಾಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಆದರೆ ಪ್ರಧಾನಿ ಮೋದಿ ಸೇರಿದಂತೆ, ಸಿಎಂ ಯೋಗಿ ಅದಿತ್ಯನಾಥ್ ಈ ಹಿಂದೆಯೂ ಧಾರ್ಮಿಕ ಟೋಪಿ ಧರಿಸಲು ನಿರಾಕರಿಸಿದ್ದರು. ಸದ್ಯ ಯೋಗಿ ಅದಿತ್ಯನಾಥ್ ಅವರ ನಡೆಯನ್ನು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಮುಖಂಡರು ಟೀಕಿಸಿ ವಾಗ್ದಾಳಿ ನಡೆಸಿದ್ದಾರೆ. ಆದರೆ ಇತ್ತೀಚೆಗೆ ಎಐಸಿಸಿ ರಾಹುಲ್ ಗಾಂಧಿ ಅವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ನೀಡಿದ ಟೋಪಿಯನ್ನು ಧರಿಸಲು ರಾಹುಲ್ ಗಾಂಧಿ ನಿರಾಕರಿಸಿದ್ದರು. ಈ ವೇಳೆ ಬಿಜೆಪಿ ಕೆಲ ನಾಯಕರು ಸಹ ರಾಹುಲ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು.
Sant Kabir Nagar: Prime Minister Narendra Modi offers 'chadar' at Sant Kabir's Mazar in Maghar pic.twitter.com/kKJo4hwNwL
ಕೋಲಾರ: ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ರಾಜ್ಯಕ್ಕೆ ಆಗಮಿಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ, ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ಕೋಲಾರದ ಮುಳಬಾಗಿಲು ನಗರದಲ್ಲಿ ರೋಡ್ ಶೋ ಸಂದರ್ಭದಲ್ಲಿ ಪೊಲೀಸ್ ಪೇದೆಯೊಬ್ಬರಿಗೆ ರಾಹುಲ್ ಗಾಂಧಿ ಟೋಪಿ ತೊಡಿಸಿದ ಘಟನೆ ನಡೆಯಿತು. ರಾಹುಲ್ ರೋಡ್ ಶೋಗೆ ಬಂದೋಬಸ್ತ್ ಮಾಡುತ್ತಿದ್ದ ವೇಳೆ ನೂಕುನುಗ್ಗಲು ಉಂಟಾಗಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಪೇದೆಯೊಬ್ಬರ ಟೋಪಿ ಕೆಳಗೆ ಬೀಳುತ್ತಿತ್ತು. ಟೋಪಿ ಕೆಳಗೆ ಬೀಳುತ್ತಿದ್ದಂತೆಯೇ ರಾಹುಲ್ ಅದನ್ನು ಕ್ಯಾಚ್ ಹಿಡಿದು ಪೊಲೀಸ್ ಪೇದೆಯ ತಲೆಗೆ ಇರಿಸಿದ್ದಾರೆ. ಇದನ್ನೂ ಓದಿ: ದೂರದಿಂದ್ಲೇ ಗುರಿಯಿಟ್ಟು ರಾಹುಲ್ ಕೊರಳಿಗೆ ಹಾರ ಎಸೆದ ಅಭಿಮಾನಿ- ವಿಡಿಯೋ ಫುಲ್ ವೈರಲ್
ಕೋಲಾರ ಜಿಲ್ಲೆಯ 4 ವಿಧಾನ ಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಜನಾರ್ಶೀವಾದ ಯಾತ್ರೆ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಹೆಲಿಕಾಪ್ಟರ್ ಮೂಲಕ ಮುಳಬಾಗಿಲಿಗೆ ಆಗಮಿಸಿದ್ದ ರಾಹುಲ್, ಮುಳಬಾಗಿಲು ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ರೋಡ್ ಶೋ ಆರಂಭಿಸಿದ್ದಾರೆ.
ಮುಳಬಾಗಿಲು, ಕೆಜಿಎಫ್ ಬಂಗಾರಪೇಟೆ, ಕೋಲಾರ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಮಾಡಿದ್ದು, ಕೋಲಾರ ನಗರದಲ್ಲಿ ಮುಖಂಡರೊಂದಿಗೆ ಕಾರ್ನರ್ ಸಭೆ ನಡೆಸಿದ್ದಾರೆ. ಈ ವೇಳೆ ರಾಹುಲ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.