Tag: ಟೋಕಿಯೊ

  • ಟೋಕಿಯೋ ತೊರೆದ್ರೆ ಪ್ರತಿ ಮಗುವಿಗೂ ಸಿಗುತ್ತೆ ಲಕ್ಷ-ಲಕ್ಷ ಹಣ

    ಟೋಕಿಯೋ ತೊರೆದ್ರೆ ಪ್ರತಿ ಮಗುವಿಗೂ ಸಿಗುತ್ತೆ ಲಕ್ಷ-ಲಕ್ಷ ಹಣ

    ಟೋಕಿಯೋ: ರಾಜಧಾನಿ ಟೋಕಿಯೋ ನಗರದಲ್ಲಿ ಜನಸಂಖ್ಯೆ (Tokyo, Population) ಒತ್ತಡವನ್ನ ಕಡಿಮೆ ಮಾಡಲು ಜಪಾನ್ ಸರ್ಕಾರ ಲಕ್ಷಗಟ್ಟಲೇ ಹಣ ನೀಡುವ ಯೋಜನೆ ಪ್ರಕಟಿಸಿದೆ.

    ಟೋಕಿಯೋದಿಂದ ಯಾರು ಹೊರ ಹೋಗ್ತಾರೋ ಅಂತಹ ಕುಟುಂಬಗಳ ಪ್ರತಿಯೊಂದು ಮಗುವಿಗೆ 10 ಲಕ್ಷ ಯೆನ್ ಅಂದ್ರೆ ಅಂದಾಜು 6.26 ಲಕ್ಷ ರೂಪಾಯಿ ಹಣ ನೀಡುವುದಾಗಿ ಅಲ್ಲಿನ ಸರ್ಕಾರ (Japan Government) ಆಫರ್ ನೀಡಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಕಳೆದ ವರ್ಷ ಮೊದಲಬಾರಿಗೆ ಜಪಾನ್‌ನಲ್ಲಿ (Japan) ಜನಸಂಖ್ಯಾ ಕುಸಿತ ವರದಿಯಾಗಿದ್ದು, ಕೊರೊನಾ ಕಾರಣದಿಂದಾಗಿಯೇ ಜನಸಂಖ್ಯೆ ಕುಸಿದಿರುವುದಾಗಿ ಜನಸಂಖ್ಯಾ ನೀತಿ ನಿರೂಪಕರು ಹೇಳಿದ್ದಾರೆ. ಅದರಲ್ಲೂ ದೇಶದ ಗ್ರಾಮೀಣ ಭಾಗಗಳಲ್ಲಿ ಜನಸಂಖ್ಯಾ ಸಾಂದ್ರತೆ ಕಡಿಮೆಯಾಗಿದ್ದು, ಸೌಲಭ್ಯಗಳು ಉತ್ತಮವಾಗಿರುವ ನಗರ ಪ್ರದೇಶಗಳತ್ತ ಜನರು ವಲಸೆ ಹೋಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಾಕ್‌ ಭಯೋತ್ಪಾದನೆಯನ್ನು ಯಾಕೆ ಯುರೋಪ್‌ ರಾಷ್ಟ್ರಗಳು ಖಂಡಿಸಿಲ್ಲ – ಜೈಶಂಕರ್‌ ಪ್ರಶ್ನೆ

    ಈ ಹಿನ್ನೆಲೆ ಗ್ರಾಮೀಣ ಭಾಗಗಳಿಗೆ ಜನರು ಹಿಂದಿರುಗಲು ಮತ್ತು ನಗರಗಳಿಂದ ವಸತಿ ಬದಲಾಯಿಸುವಂತೆ ಮಾಡಲು ಸರ್ಕಾರ, ನಗರಗಳನ್ನು ತೊರೆಯುವ ಕುಟುಂಬಕ್ಕೆ 1.87 ಲಕ್ಷ ರೂ.ಗಳ ಸಹಾಯಧನ (3 ಲಕ್ಷ ಯೆನ್) ನೀಡಲಾಗ್ತಿತ್ತು. ಆದ್ರೆ, ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಈ ಸೌಲಭ್ಯವನ್ನು ಪರಿಷ್ಕರಿಸಿದ್ದು, ರಾಜಧಾನಿ ತೊರೆಯುವ ಕುಟುಂಬಗಳ ಪ್ರತಿ ಮಗುವಿಗೆ 6.26 ಲಕ್ಷ ರೂ. ನೀಡುವುದಾಗಿ ಹೇಳಿದೆ. ಈ ವರ್ಷದ ಏಪ್ರಿಲ್‌ನಿಂದ ಈ ಯೋಜನೆ ಜಾರಿಗೆ ಬರಲಿದೆ.

    ಪ್ರಸ್ತುತ ಜಪಾನ್ ಜನಸಂಖ್ಯೆ 12.57 ಕೋಟಿಯಿದ್ದು ಟೋಕಿಯೋ ನಗರದಲ್ಲೇ 1.4 ಕೋಟಿ ಜನ ವಾಸಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರವಾಹದಿಂದ ರಕ್ಷಿಸಿಕೊಳ್ಳಲು ತೇಲುವ ಮನೆ ನಿರ್ಮಿಸಿದ ಜಪಾನ್ – ಏನಿದರ ವಿಶೇಷತೆ?

    ಪ್ರವಾಹದಿಂದ ರಕ್ಷಿಸಿಕೊಳ್ಳಲು ತೇಲುವ ಮನೆ ನಿರ್ಮಿಸಿದ ಜಪಾನ್ – ಏನಿದರ ವಿಶೇಷತೆ?

    ಟೋಕಿಯೊ: ಒಂದು ದೇಶ ಅಭಿವೃದ್ಧಿ ಹೊಂದಿರಲಿ, ಹೊಂದದಿರಲಿ, ಪ್ರವಾಹ ಮಾತ್ರ ಯಾವುದೇ ರಿಯಾಯಿತಿ ತೋರಿಸುವುದಿಲ್ಲ. ಒಮ್ಮೆಲೆ ಅಬ್ಬರಿಸಿದರೆ ನೂರಾರು ಜೀವಗಳು ಬಲಿಯಾಗುತ್ತವೆ. ಸಾವಿರಾರು ಮನೆಗಳನ್ನು ಆಹುತಿ ಪಡೆಯುತ್ತದೆ. ವಿಶ್ವದಲ್ಲೇ ಅತಿಹೆಚ್ಚು ಬಾರಿ ಪ್ರವಾಹಕ್ಕೆ ತುತ್ತಾಗಿರುವ ದೇಶ ಜಪಾನ್ ಆಗಿದೆ.

    https://twitter.com/LeeTyler/status/1540145698309431296?ref_src=twsrc%5Etfw%7Ctwcamp%5Etweetembed%7Ctwterm%5E1540145698309431296%7Ctwgr%5E%7Ctwcon%5Es1_&ref_url=https%3A%2F%2Fwww.udayavani.com%2Fnews-section%2Fnational-news%2Fjapanese-company-invents-floating-house-calls-it-flood-proof

    ಜಪಾನ್ ಎಷ್ಟು ಬಾರಿ ಪ್ರವಾಹಕ್ಕೆ ತುತ್ತಾದರೂ ಮತ್ತೆ – ಮತ್ತೆ ಪುಟಿದು ನಿಲ್ಲುತ್ತದೆ. ಇದೀಗ ಪ್ರವಾಹದೊಂದಿಗೇ ಬದುಕಲು ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗು­ವವರಿಗಾಗಿಯೇ ಜಪಾನಿನ ಇಚಿಜೋ ಕೊಮುಟೆನ್ ಹೌಸ್ ಡೆವಲಪರ್ ಕಂಪೆನಿ ತೇಲುವ ಮನೆಯನ್ನು ನಿರ್ಮಿಸಿದೆ. ಇದನ್ನೂ ಓದಿ: ಅಪಾಯವನ್ನು ಲೆಕ್ಕಿಸದೇ ಡೇಂಜರ್ ಟ್ರಾಕ್ಟರ್ ಗೇಮ್

    ಹೌದು.. ಜಪಾನ್ ಕಂಪನಿ ಅಭಿವೃದ್ಧಿಪಡಿಸಿರುವ ಈ ಮನೆ ಪ್ರವಾಹ ಬಂದಾಗ ತೇಲಲು ಆರಂಭಿಸುತ್ತದೆ. ನೀರಿನ ಮಟ್ಟ ಕರಗಿದಾಗ ಮತ್ತೆ ನೆಲಕ್ಕೆ ಬಂದು ನಿಲ್ಲುತ್ತದೆ. ಇದನ್ನು ಒಂದು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮೂಲಕವೂ ಕಂಪನಿ ತೋರಿಸಿದ್ದು, ಜನರನ್ನು ಅಚ್ಚರಿಗೊಳಿಸಿದೆ. ಇದನ್ನೂ ಓದಿ: ಪತಿಯೊಂದಿಗೆ ವಾಸಿಸಲು 30 ಬಾರಿ ಅವಳಿ ಸಹೋದರಿಯ ಪಾಸ್‍ಪೋರ್ಟ್ ಬಳಕೆ

    ಹೇಗೆ ಇರಲಿದೆ?
    ನೀರು ನುಗ್ಗಲು ಶುರುವಾದ ಕೂಡಲೇ ನಿಧಾನವಾಗಿ ಮನೆ ಭೂಸ್ಪರ್ಶದಿಂದ ಮೇಲೆ ಬರಲು ಪ್ರಾರಂಭಿಸುತ್ತದೆ. ಗರಿಷ್ಠ 5 ಮೀಟರ್ ವರೆಗೆ ಮಲೆ ಮೇಲೆದ್ದು ತೇಲುತ್ತದೆ. ಮನೆಯ ಸುತ್ತ ಬಲವಾದ ಕಬ್ಬಿಣದ ಸಲಾಕೆಯಂತಿರುವ ಕಂಬಗಳನ್ನು ಹೊಂದಿರುತ್ತದೆ. ಅವು ಪಿಲ್ಲರ್‌ಗಳಂತೆ ಮನೆಗಳಿಗೆ ಭದ್ರತೆ ಒದಗಿಸುತ್ತವೆ. ಜೊತೆಗೆ ಈ ಕಂಬಗಳಿಗೆ ಬಲವಾದ ವೈರ್‌ಗಳನ್ನು ಬಿಗಿದು ಮನೆಗೆ ಕಟ್ಟಲಾಗಿರುತ್ತದೆ. ಪ್ರವಾಹ ಬಂದಾಗ ಮೇಲೇಳುವ ಮನೆ, ಪ್ರವಾಹ ಹೋದಾಗ ಅದೇ ಸ್ಥಳದಲ್ಲಿ ನೆಲಕ್ಕಿಳಿಯುತ್ತದೆ.

    Live Tv

  • ಹಿಂದಿಯಲ್ಲಿ ಮಾತನಾಡಿದ ಜಪಾನ್ ಬಾಲಕನನ್ನು ನೋಡಿ ಮೋದಿ ರಿಯಾಕ್ಷನ್ ಹೇಗಿತ್ತು?

    ಹಿಂದಿಯಲ್ಲಿ ಮಾತನಾಡಿದ ಜಪಾನ್ ಬಾಲಕನನ್ನು ನೋಡಿ ಮೋದಿ ರಿಯಾಕ್ಷನ್ ಹೇಗಿತ್ತು?

    ಟೋಕಿಯೊ: ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಟೋಕಿಯೊದ ಹೋಟೆಲ್‍ನಲ್ಲಿ ಭಾರತೀಯ ವಲಸಿಗರು ಮತ್ತು ಜಪಾನ್ ನಾಗರಿಕರು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ಈ ವೇಳೆ ಅವರ ಜೊತೆಗಿನ ಸಂವಾದದಲ್ಲಿ ಜಪಾನಿನ ಮಕ್ಕಳೊಂದಿಗೆ ಅವರ ಸಂಭಾಷಣೆ ಎಲ್ಲರ ಗಮನ ಸೆಳೆಯಿತು.

    ಅಲ್ಲಿನ ಮಕ್ಕಳೊಂದಿಗಿನ ಮೋದಿಯವರ ಸಂವಾದದ ವೀಡಿಯೋಗಳು ಟ್ವಿಟ್ಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಜಪಾನಿನ ಬಾಲಕನೊಬ್ಬ ಪ್ರಧಾನಿಯವರೊಂದಿಗೆ ಹಿಂದಿಯಲ್ಲಿ ಮಾತನಾಡಿದನು. ಇದನ್ನು ಕೇಳಿ ಅವರು ಆಶ್ಚರ್ಯಚಕಿತರಾಗಿದ್ದು, ಹುಡುಗನಿಗೆ ವಾಹ್! ನೀವು ಹಿಂದಿಯನ್ನು ಎಲ್ಲಿಂದ ಕಲಿತಿದ್ದೀರಿ.? ನೀವು ಅದನ್ನು ಚೆನ್ನಾಗಿ ಮಾತನಾಡುತ್ತೀರಿ ಎಂದು ಬಾಲಕನ ಜೊತೆ ಅಕ್ಕರೆಯಿಂದ ಮಾತನಾಡ ತೊಡಗಿದರು. ಇದನ್ನೂ ಓದಿ: ರಾಜ್ಯದಲ್ಲಿ ಶಾಂತನಾದ ವರುಣ, ತಗ್ಗಿದ ಪ್ರವಾಹ – ಚಿಕ್ಕಬಳ್ಳಾಪುರದ ಡ್ಯಾಮ್‍ನಲ್ಲಿ ಯುವಕನ ಕೋತಿಯಾಟ

    ಪ್ರಧಾನಿಯವರೊಂದಿಗೆ ಸಂವಾದ ನಡೆಸಿದ ಮಕ್ಕಳು ಅವರ ಆಟೋಗ್ರಾಫ್ ಸ್ವೀಕರಿಸಲು ಉತ್ಸುಕರಾಗಿದ್ದರು. ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಭಾರತೀಯ ವಲಸಿಗರು ಭಾರತ್ ಮಾ ಕಾ ಶೇರ್ (ಭಾರತದ ಸಿಂಹ) ಎಂದು ಘೋಷಣೆ ಕೂಗಲಾರಂಭಿಸಿದರು. ಇದನ್ನೂ ಓದಿ: ಮದರಸಾದಲ್ಲಿ ಓದಿದ ಬಳಿಕ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ: ಹಿಮಂತ್ ಬಿಸ್ವಾ ಶರ್ಮಾ

    ಜಪಾನ್ ಅಧ್ಯಕ್ಷ ಫ್ಯೂಮಿಯೋ ಕಿಶಿಡಾ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನ ಜಪಾಸ್ ಪ್ರವಾಸ ಕೈಗೊಂಡಿದ್ದು, ಅವರು ಅಲ್ಲಿ ಕ್ವಾಡ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಭಾನುವಾರ ರಾತ್ರಿ ಭಾರತದಿಂದ ತೆರಳಿರುವ ಪ್ರಧಾನಿ ನಾಳೆ ಸಂಜೆವರೆಗೂ ಜಪಾನ್‍ನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕ್ವಾಡ್ ಶೃಂಗ ಸಭೆಯಲ್ಲಿ ಎರಡು ದೇಶಗಳ ಉಪಕ್ರಮಗಳ ಬಗ್ಗೆ ಚರ್ಚೆಯಾಗಲಿದ್ದು, ಆಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ಇದೆ ಎಂದು ಪ್ರವಾಸಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಇದೇ ವೇಳೆ ಅಮೇರಿಕ ಅಧ್ಯಕ್ಷ ಜೋ ಬೈಡನ್ ಜೊತೆಗೂ ಮೋದಿ ಸಭೆ ನಡೆಸಲಿದ್ದು, ಭಾರತದ ಅಮೇರಿಕದ ನಡುವೆ ದ್ವಿ ಪಕ್ಷೀಯ ಮಾತುಕತೆ ನಡೆಯಲಿದೆ. ಈ ಮಾತುಕತೆಯಲ್ಲಿ ಸಮಕಾಲಿಮ ಜಾಗತಿಕ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಯಲಿದೆ.

  • ರೈಲಿಗೆ ಬೆಂಕಿ, ಗುಂಡಿನ ದಾಳಿ – 8 ಜನರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

    ರೈಲಿಗೆ ಬೆಂಕಿ, ಗುಂಡಿನ ದಾಳಿ – 8 ಜನರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

    ಟೋಕಿಯೋ: ಭಾನುವಾರ ರೈಲಿನಲ್ಲಿ ಚಾಕು ಮತ್ತು ಗುಂಡಿನ ದಾಳಿ ನಡೆದ ಪರಿಣಾಮ 8 ಜನರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾದ ಘಟನೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದಿದೆ.

    ಟೋಕಿಯೋದಲ್ಲಿ ವ್ಯಕ್ತಿಯೊಬ್ಬನು ಕೀಯೋ ಲೈನ್ ನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದು, ಈ ವೇಳೆ ರೈಲಿಗೆ ಬೆಂಕಿ ಹಚ್ಚಿದ್ದಾನೆ. ಅದು ಅಲ್ಲದೇ ಆರೋಪಿಯು ರೈಲಿನ ಸುತ್ತ ಲಿಕ್ವಿಡ್ ಅನ್ನು ಹಾಕಿದ್ದನು ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ವೀಡಿಯೋವೊಂದರಲ್ಲಿ ಜನರು ಕೀಯೋ ಲೈನ್ ರೈಲಿನಿಂದ ತಪ್ಪಿಸಿಕೊಳ್ಳಲು ಕಿಟಕಿಗಳನ್ನು ಏರುತ್ತಿರುವ ದೃಶ್ಯ ಸೇರೆಯಾಗಿದೆ. ಇದನ್ನೂ ಓದಿ: ಆನ್‍ಲೈನ್ ವರ್ಕ್ ಹೆಸರಿನಲ್ಲಿ 3 ಲಕ್ಷ ರೂ. ವಂಚನೆ

    ಆರೋಪಿಯು ಚಾಕು ಮತ್ತು ಬಂದೂಕಿನಿಂದ ಜನರ ಮೇಲೆ ದಾಳಿ ಮಾಡಿದ್ದು, 8 ಜನರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಆಕ್ರಮಣ ಮಾಡಿದವನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

    ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮುಕ್ತಾಯವಾದಂತೆಯೇ ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ರೈಲಿನ ಅಧಿಕಾರಿಗಳು ತಕ್ಷಣ ಘಟನಾ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಯುವರತ್ನನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ ಅಮೂಲ್

    ಹಿಂಸಾತ್ಮಕ ಅಪರಾಧಗಳು ಜಪಾನ್‍ನಲ್ಲಿ ಅಪರೂಪ. ಜಪಾನ್ ಕಟ್ಟುನಿಟ್ಟಿನ ಗನ್ ನಿಯಮಗಳನ್ನು ಹೊಂದಿದೆ.

  • ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ

    ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ

    ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್​ನ ಎತ್ತರ ಜಿಗಿತ ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಪದಕ ಮತ್ತು ಶರದ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ.

    ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 10 ಕ್ಕೆ ಏರಿದೆ. ಹೈ ಜಂಪ್ ಟಿ 63 ಈವೆಂಟ್‍ನಲ್ಲಿ ತಂಗವೇಲು ದ್ವಿತೀಯ ಸ್ಥಾನ ಅಲಂಕರಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ರಿಯೋ ಪ್ಯಾರಾಲಿಂಪಿಕ್ಸ್ ಬಳಿಕ ಇದು ತಂಗವೇಲು ಅವರ ಎರಡನೇ ಪದಕ ಎಂಬುದು ವಿಶೇಷವಾಗಿದೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ- ಜಾವೆಲಿನ್ ಎಸೆದು ಚಿನ್ನ ಪಡೆದ ಸುಮಿತ್

    ಮರಿಯಪ್ಪನ್ ಮತ್ತು ಶರದ್ ಇಬ್ಬರೂ ತಮ್ಮ ಮೊದಲ ಪ್ರಯತ್ನದಲ್ಲಿ 1.73 ಮೀ ಮತ್ತು 1.77 ಮೀ ಯಶಸ್ವಿಯಾಗಿ ಜಿಗಿದಿದ್ದರು. ಈ ವೇಳೆ ಶರದ್ ಕುಮಾರ್ ಮುಂಚೂಣಿಯಲ್ಲಿದ್ದರು. ಆದಾಗ್ಯೂ, 1.86 ಮೀ ನಲ್ಲಿ ಮೂರು ಪ್ರಯತ್ನಗಳ ನಂತರವೂ ಶರದ್‍ಗೆ ಯಶಸ್ವಿಯಾಗಿ ಜಂಪ್ ಮಾಡಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಕಂಚಿನ ಪದಕದೊಂದಿಗೆ ಚಿನ್ನದ ರೇಸ್ ನಿಂದ ಹೊರಗುಳಿದರು.

    ನಂತರ, ಅಮೆರಿಕದ ಗ್ರೇವ್ ಸ್ಯಾಮ್ ಮತ್ತು ಮರಿಯಪ್ಪನ್ ಮಾತ್ರ ಸ್ಪರ್ಧೆಯಲ್ಲಿದ್ದರು. ಇಬ್ಬರೂ 1.86 ಅಂಕದಲ್ಲಿ ಯಶಸ್ವಿ ಜಿಗಿತ ಪೂರೈಸಿದ್ದರು. ನಂತರ ನಡೆದ ಮೂರು ಪ್ರಯತ್ನಗಳಲ್ಲಿ ಮರಿಯಪ್ಪನ್ ವಿಫಲರಾದರು. ಮತ್ತೊಂದೆಡೆ, ಗ್ರೇವ್ ಯಶಸ್ವಿ ಜಿಗಿತದೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.

    ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಪದಕಗಳ ಭೇಟೆಯನ್ನು ಮುಂದುವರೆಸಿದೆ. ಈ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ 10 ಪದಕ ಪಡೆದುಕೊಂಡಿದ್ದು, 2 ಚಿನ್ನ, 5 ಬೆಳ್ಳಿ, ಮೂರು ಕಂಚನ್ನು ಭಾರತ ತನ್ನದಾಗಿಸಿಕೊಂಡಿದೆ.

  • ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ- ಜಾವೆಲಿನ್ ಎಸೆದು ಚಿನ್ನ ಪಡೆದ ಸುಮಿತ್

    ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ- ಜಾವೆಲಿನ್ ಎಸೆದು ಚಿನ್ನ ಪಡೆದ ಸುಮಿತ್

    ಟೋಕಿಯೊ: ಪ್ಯಾರಾಲಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆದು ಭಾರತಕ್ಕೆ ಮತ್ತೊಂದು ಚಿನ್ನವನ್ನು ಪಡೆಯುವ ಮೂಲಕವಾಗಿ ಸುಮಿತ್ ದಾಖಲೆ ಬರೆದಿದ್ದಾರೆ.

    ಟೋಕಿಯೊ ಪ್ಯಾರಾಲಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಜಾವೆಲಿನ್ ಥ್ರೋ ಸ್ಪರ್ಧೆಯ ಎಫ್ 64 ವಿಭಾಗದಲ್ಲಿ ಭಾರತದ ಸುಮಿತ್ ಅಂಟಿಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

    ಸುಮಿತ್ ಆಂಟಿಲ್ 68.55 ಮೀಟರ್ ಜಾವೆಲಿನ್ ಎಸೆದು ತನ್ನದೇ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದರು. ಇದರಿಂದ ಟೋಕಿಯೊ ಪ್ಯಾರಾಲಂಪಿಕ್ ಗೇಮ್ಸ್ ಭಾರತ 2ನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.

    ಸಹ ಆಟಗಾರ ಸಂದೀಪ್ ಚೌಧರಿ 4ನೇ ಸ್ಥಾನ ಪಡೆದು 62.20 ಮೀಟರ್ ಜಾವೆಲಿನ್ ಎಸದಿದ್ದಾರೆ. ಭಾರತ ಶೂಟರ್ ಅವನಿ ಲೇಖಾರ್ 10 ಮೀಟರ್ ಏರ್ ರೈಪಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇಂದು ಬೆಳಗ್ಗೆ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯ ಎಫ್ 46 ವಿಭಾಗದಲ್ಲಿ ಭಾರತ ದೇವೆಂದ್ರ ಝಾಝರಿಯಾ ಬೆಳ್ಳಿ ಗೆದೆ, ಸುಂದರ್ ಸಿಂಗ್ ಗುಜ್ಜಾರ್ ಕಂಚು ಗೆದುಕೊಂಡಿದ್ದಾರೆ.

  • ಜಪಾನ್ ಪ್ರಧಾನಿ ಶಿಂಜೊ ಅಬೆ ರಾಜೀನಾಮೆ

    ಜಪಾನ್ ಪ್ರಧಾನಿ ಶಿಂಜೊ ಅಬೆ ರಾಜೀನಾಮೆ

    ಟೋಕಿಯೊ: ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಜಪಾನ್ ಪ್ರಧಾನಿ ಶಿಂಬೊ ಅಬೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಜಪಾನಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಯನ್ನು ಶಿಂಬೊ ಅಬೆ ಪಡೆದಿದ್ದಾರೆ.

    ರಾಜೀನಾಮೆ ನಿರ್ಧಾರದ ಕುರಿತು ಮಾತನಾಡಿರುವ 65 ವರ್ಷದ ಅಬೆ, ಜನರಿಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ನಾನು ಪ್ರಧಾನಿಯಾಗಲು ಸಾಧ್ಯವಿಲ್ಲ. ಆದ್ದರಿಂದ ನಾನು ಹುದ್ದೆಯಿಂದ ಕೆಳಗಿಳಿಯಲು ನಿರ್ಧಸಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಶಿಂಜೊ ಅಬೆ ಹಲವು ವರ್ಷಗಳಿಂದ ಅಲ್ಸರೇಟಿವ್ ಕೊಲೈಟಿಸ್ (ದೊಡ್ಡ ಕರಳಿನ ಭಾಗದಲ್ಲಿ ಅಲ್ಸರ್)ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಒಂದು ವಾರದಲ್ಲಿ ಎರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಸರ್ಕಾರಕ್ಕೆ ಸಮಸ್ಯೆ ಆಗುವುದನ್ನು ತಪ್ಪಿಸಲು ಶಿಂಜೊ ಅಬೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಅಬೆ ಅವರ ಆಡಳಿತಾವಧಿ 2021 ಸೆಪ್ಟೆಂಬರ್ ಗೆ ಕೊನೆಯಾಗಲಿತ್ತು.

    ಸದ್ಯ ಶಿಂಜೊ ಅಬೆ ರಾಜೀನಾಮೆಯಿಂದ ಆಡಳಿತ ಪಕ್ಷ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್‍ಡಿಪಿ)ಯಲ್ಲಿ ನಾಯಕತ್ವದ ಸ್ಪರ್ಧೆ ಹೆಚ್ಚಾಗಿದೆ. ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ನಿಯಮಗಳ ಅನ್ವಯ ಸಂಸತ್ತಿನಲ್ಲಿ ಹೊಸ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯ ಆಯ್ಕೆಯಾಗುವ ಹೊಸ ನಾಯಕ ಅಬೆ ಅವರ ಉಳಿದ ಅವಧಿವರೆಗೂ ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ.

    ಅಬೆ ರಾಜೀನಾಮೆ ನೀಡುತ್ತಿದ್ದಂತೆ ಜಪಾನ್ ಷೇರು ಮಾರುಕಟ್ಟೆ ಭಾರೀ ಕುಸಿತಕಂಡಿದೆ. ಷೇರು ಸೂಚಂಕ್ಯ ನಿಕ್ಕಿ ಇಂದು ಆರಂಭಗೊಂಡಾಗ 23,208ರಲ್ಲಿ ಇತ್ತು. ಆದರೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುದ್ದಿ ಪ್ರಕಟವಾದ ಬಳಿಕ 22,735ಕ್ಕೆ ಕುಸಿದು ನಂತರ ಸ್ವಲ್ಪ ಚೇತರಿಕೆ ಕಂಡಿತ್ತು.

    ಅಂದಹಾಗೇ ಶಿಂಜೊ ಅಬೆ ಅವರ ದೊಡ್ಡಪ್ಪ ಐಸಾಕು ಸಾಟೊ ಅವರು 1964 ರಿಂದ 1972ರ ವರೆಗೂ 2798 ದಿನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಈ ದಾಖಲೆಯನ್ನು ಶಿಂಜೊ ಮುರಿದ್ದರು. 2012 ರಿಂದ ಈವರೆಗೂ ಶಿಂಜೊ ಅಧಿಕಾರದಲ್ಲಿದ್ದು, ಸೋಮವಾರಕ್ಕೆ 2,799 ದಿನಗಳನ್ನು ಪೂರೈಸಿದ್ದರು. ಉಳಿದಂತೆ ಮುಂದಿನ ತಿಂಗಳು ಶಿಂಜೊ ಅಬೆ ತಮ್ಮ 66ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

    ಕೊರೊನಾ ನಿರ್ವಹಣೆ ಹಾಗೂ ಪಕ್ಷದ ನಾಯಕರು ನಡೆಸಿದ ಹಗರಣಗಳನ್ನು ಉತ್ತಮವಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ಅವರ ಬೆಂಬಲದ ಸಂಖ್ಯೆ ಸುಮಾರು 8 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿತ್ತು. ಅಬೆ ತಮ್ಮ ಆಡಳಿತ ಅವಧಿಯಲ್ಲಿ ಸಶಸ್ತ್ರ ಪಡೆಗಳ ಖರ್ಚು ಹಾಗೂ ಅವುಗಳ ಪಾತ್ರವನ್ನು ವಿಸ್ತರಿಸಿದ್ದರು. ಅಲ್ಲದೇ ಅವರ ಶಾಂತಿ ಮಂತ್ರದ ಕನಸು ಸಾರ್ವಜನಿಕ ಅಭಿಪ್ರಾಯದಿಂದಾಗಿ ದೂರವಾಗಿತ್ತು ಎನ್ನಲಾಗಿದೆ. 2007 ರಲ್ಲಿ ಸರ್ಕಾರದಲ್ಲಾದ ಹಗರಣ ಹಾಗೂ ಭಾರೀ ಚುನಾವಣಾ ನಷ್ಟವನ್ನುಂಟು ಮಾಡಿದ ಕಾರಣ ಅವರು ಏಕಾಏಕಿ ರಾಜೀನಾಮೆ ನೀಡಿದ್ದರು.

  • ರಾಜೀನಾಮೆಗೆ ಮುಂದಾದ ಜಪಾನ್ ಪ್ರಧಾನಿ ಶಿಂಜೊ ಅಬೆ

    ರಾಜೀನಾಮೆಗೆ ಮುಂದಾದ ಜಪಾನ್ ಪ್ರಧಾನಿ ಶಿಂಜೊ ಅಬೆ

    ಟೋಕಿಯೊ: ಜಪಾನಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದಿರುವ ಶಿಂಜೊ ಅಬೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಜಪಾನ್ ಸಾರ್ವಜನಿಕ ಪ್ರಸಾರ ವಾಹಿನಿ ಎನ್‍ಎಚ್‍ಕೆ ವರದಿ ಮಾಡಿದೆ.

    ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಸರ್ಕಾರಕ್ಕೆ ಸಮಸ್ಯೆ ಆಗುವುದನ್ನು ತಪ್ಪಿಸಲು ಬಯಸಿ ಶಿಂಜೊ ಅಬೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂದಹಾಗೇ ಅಬೆ ಅವರ ಆಡಳಿತಾವಧಿ 2021 ಸೆಪ್ಟೆಂಬರ್ ಗೆ ಕೊನೆಯಾಗಲಿದೆ.

    ಶಿಂಜೊ ಅಬೆ ಹಲವು ವರ್ಷಗಳಿಂದ ಅಲ್ಸರೇಟಿವ್ ಕೊಲೈಟಿಸ್ (ದೊಡ್ಡ ಕರಳಿನ ಭಾಗದಲ್ಲಿ ಅಲ್ಸರ್)ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಒಂದು ವಾರದಲ್ಲಿ ಎರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ಈ ನಡೆ ಅವರು ತಮ್ಮ ಪದವಿಯಲ್ಲಿ ಮುಂದುವರಿಯುವ ಕುರಿತು ಅನುಮಾನಕ್ಕೆ ಕಾರಣವಾಗಿತ್ತು.

    ಇಂದು ಸಂಜೆ ಈ ಕುರಿತು ಇಂದು ಸಂಜೆ 5 ಗಂಟೆಗೆ ಅಧಿಕೃತ ಪತ್ರಿಕಾಗೋಷ್ಠಿ ನಡೆಯುವ ಸಾಧ್ಯತೆ ಇದೆ. ಉಳಿದಂತೆ ಕಳೆದ ಸೋಮವಾರದಂದು ಜಪಾನ್ ಪ್ರಧಾನಿಯಾಗಿ ಶಿಂಜೊ ಅಬೆ ಅವರು ದೀರ್ಘ ಕಾಲ ಸೇವೆ ಸಲ್ಲಿಸಿದ ದಾಖಲೆ ಬರೆದರು. ಈ ಹಿಂದೆ ಶಿಂಜೊ ಅಬೆ ಅವರ ದೊಡ್ಡಪ್ಪ ಐಸಾಕು ಸಾಟೊ ಅವರು 1964 ರಿಂದ 1972ರ ವರೆಗೂ 2798 ದಿನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಈ ದಾಖಲೆಯನ್ನು ಶಿಂಜೊ ಮುರಿದ್ದರು. 2012ರಿಂದ ಈವರೆಗೂ ಶಿಂಜೊ ಅಧಿಕಾರದಲ್ಲಿದ್ದು, ಸೋಮವಾರಕ್ಕೆ 2,799 ದಿನಗಳನ್ನು ಪೂರೈಸಿದ್ದರು. ಉಳಿದಂತೆ ಮುಂದಿನ ತಿಂಗಳು ಶಿಂಜೊ ಅಬೆ ತಮ್ಮ 66ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

    ಕೊರೊನಾ ನಿರ್ವಹಣೆ ಹಾಗೂ ಪಕ್ಷದ ನಾಯಕರು ನಡೆಸಿದ ಹಗರಣಗಳನ್ನು ಉತ್ತಮವಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ಅವರ ಬೆಂಬಲದ ಸಂಖ್ಯೆ ಸುಮಾರು 8 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿತ್ತು. ಅಬೆ ತಮ್ಮ ಆಡಳಿತ ಅವಧಿಯಲ್ಲಿ ಸಶಸ್ತ್ರ ಪಡೆಗಳ ಖರ್ಚು ಹಾಗೂ ಅವುಗಳ ಪಾತ್ರವನ್ನು ವಿಸ್ತರಿಸಿದ್ದರು. ಅಲ್ಲದೇ ಅವರ ಶಾಂತಿ ಮಂತ್ರದ ಕನಸು ಸಾರ್ವಜನಿಕ ಅಭಿಪ್ರಾಯದಿಂದಾಗಿ ದೂರವಾಗಿತ್ತು ಎನ್ನಲಾಗಿದೆ. 2007 ರಲ್ಲಿ ಸರ್ಕಾರದಲ್ಲಾದ ಹಗರಣ ಹಾಗೂ ಭಾರೀ ಚುನಾವಣಾ ನಷ್ಟವನ್ನುಂಟು ಮಾಡಿದ ಕಾರಣ ಅವರು ಏಕಾಏಕಿ ರಾಜೀನಾಮೆ ನೀಡಿದ್ದರು.

  • ಒಂದು ವರ್ಷ ಒಲಿಂಪಿಕ್ಸ್ ಮುಂದೂಡಿಕೆ?

    ಒಂದು ವರ್ಷ ಒಲಿಂಪಿಕ್ಸ್ ಮುಂದೂಡಿಕೆ?

    ಟೋಕಿಯೊ: ಕೊರೊನಾ ವೈರಸ್ ಮರಣ ಮೃದಂಗಕ್ಕೆ ವಿಶ್ವವೇ ತತ್ತರಿಸಿದ್ದು ಅನಿವಾರ್ಯವಾಗಿ ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಒಂದು ವರ್ಷ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

    ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಆತಿಥೇಯ ರಾಷ್ಟ್ರ ಜಪಾನ್ ನಿಗದಿತ ವೇಳಾಪಟ್ಟಿಯಂತೆ ಒಲಿಂಪಿಕ್ಸ್ ನಡೆಸುವುದಾಗಿ ಹೇಳುತ್ತಿದ್ದವು. ಆದರೆ ಈಗ ಒಲಿಂಪಿಕ್ಸ್ ಮುಂದೂಡುವ ನಿಲುವನ್ನು ತೋರಿಸುತ್ತಿವೆ ಎಂದು ವರದಿಯಾಗಿದೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್‍ಗೆ ಸಂಬಂಧಿಸಿದಂತೆ ಕೆನಡಾ ಮತ್ತು ಆಸ್ಟ್ರೇಲಿಯಾ ಪ್ರಮುಖ ನಿರ್ಧಾರ ಕೈಗೊಂಡಿವೆ. ಟೋಕಿಯೊ ಕ್ರೀಡಾಕೂಟಕ್ಕೆ ತಮ್ಮ ಆಟಗಾರರನ್ನು ಕಳುಹಿಸುವುದಿಲ್ಲ ಎಂದು ಉಭಯ ದೇಶಗಳು ಸ್ಪಷ್ಟನೆ ನೀಡಿವೆ. ಇದನ್ನೂ ಓದಿ: ಕೊರೊನಾ ಭೀತಿ ಇದ್ರೂ ಒಲಿಂಪಿಕ್ ಜ್ಯೋತಿ ನೋಡಲು ಅರ್ಧ ಕಿ.ಮೀ. ಕ್ಯೂ

    ಕೆನಡಾ ಒಲಿಂಪಿಕ್ಸ್ ಸಮಿತಿ (ಸಿಒಸಿ) ಮತ್ತು ಕೆನಡಾ ಪ್ಯಾರಾ ಒಲಿಂಪಿಕ್ಸ್ ಸಮಿತಿ (ಸಿಪಿಸಿ) ಕ್ರೀಡಾಪಟುಗಳ ಆಯೋಗವು ರಾಷ್ಟ್ರೀಯ ಕ್ರೀಡಾ ಒಕ್ಕೂಟ ಮತ್ತು ಕೆನಡಾ ಸರ್ಕಾರದೊಂದಿಗೆ ಚರ್ಚಿಸಿದ್ದು, ತಮ್ಮ ಆಟಗಾರರನ್ನು ಟೋಕಿಯೊಗೆ ಕಳುಹಿಸದಿರಲು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಜೊತೆಗೆ ಆಟಗಾರರ ಮತ್ತು ವಿಶ್ವ ಸಮುದಾಯದ ಆರೋಗ್ಯಕ್ಕಿಂತ ಬೇರೆ ಯಾವುದೂ ನಮಗೆ ಮುಖ್ಯವಲ್ಲ ಎಂದು ಅಭಿಪ್ರಾಯಪಟ್ಟಿದೆ.  ಇದನ್ನೂ ಓದಿ: ಕೊರೊನಾ ಎಫೆಕ್ಟ್ – ಮನೆಯಲ್ಲೇ ಏಕಾಂಗಿಯಾಗಿ ಬೀಚ್ ವಾಲಿಬಾಲ್ ಆಡಿದ ರಾಸ್: ವಿಡಿಯೋ

    ಒಲಿಂಪಿಕ್ಸ್ ಅನ್ನು ಮುಂದೂಡಲು ಒಂದು ಆಯ್ಕೆ ಇದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಹೇಳಿದ್ದಾರೆ. ಆದರೆ ರದ್ದು ಮಾಡುವುದು ನಮ್ಮ ಕಾರ್ಯಸೂಚಿಯಲ್ಲಿಲ್ಲ. ‘ನಾವು ಜಗತ್ತಿನಾದ್ಯಂತÀ ಪರಿಸ್ಥಿತಿ ಮತ್ತು ಒಲಿಂಪಿಕ್ಸ್‍ನ ಪ್ರಭಾವದ ಬಗ್ಗೆ ಪಾಲುದಾರರೊಂದಿಗೆ ಚರ್ಚಿಸಿದ್ದೇವೆ. ಮುಂದಿನ 4 ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಸೋಮವಾರ ಜಪಾನ್ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಶಿಂಜೊ ಅಬೆ, ‘ನಾವು ಕ್ರೀಡಾಕೂಟವನ್ನು ಆಯೋಜಿಸಲು ಬದ್ಧರಾಗಿದ್ದೇವೆ. ಆಟಗಾರರ ಸುರಕ್ಷತೆಗೆ ಧಕ್ಕೆಯುಂಟಾಗುವುದಿಲ್ಲ. ಆದರೆ ಒಲಿಂಪಿಕ್ಸ್ ಅನ್ನು ಸುರಕ್ಷಿತವಾಗಿ ನಡೆಸಲು ಸಾಧ್ಯವಿಲ್ಲ ಎಂದು ಭಾವಿಸಿದರೆ, ನಾವು ಮುಂದೂಡುತ್ತೇವೆ ಎಂದು ಹೇಳಿದ್ದರು.

    ಶೇ.70ರಷ್ಟು ಅಮೆರಿಕದ ಆಟಗಾರರು ಒಲಿಂಪಿಕ್ಸ್ ಅನ್ನು ಮುಂದೂಡಲು ಒಲವು ತೋರಿದ್ದಾರೆ. ಇತ್ತ ಕ್ರೀಡಾಕೂಟವು 2020ರ ಜುಲೈ 24ರಿಂದ ಆಗಸ್ಟ್ 9ರವರೆಗೆ ನಡೆದರೆ ಆಟಗಾರರನ್ನು ಕಳುಹಿಸುತ್ತೇವೆ ಎಂದು ಕೆನಡಾ ಮತ್ತು ಆಸ್ಟ್ರೇಲಿಯಾ ಪಟ್ಟು ಹಿಡಿದಿವೆ.

  • ಒಲಿಪಿಂಕ್ ಟೆಸ್ಟ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಶಿವ, ಪೂಜಾ

    ಒಲಿಪಿಂಕ್ ಟೆಸ್ಟ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಶಿವ, ಪೂಜಾ

    – ಬೆಳ್ಳಿ ಪದಕಕ್ಕೆ ಅಶಿಶ್ ತೃಪ್ತಿ

    ಟೋಕಿಯೊ: ಒಲಿಪಿಂಕ್ ಟೆಸ್ಟ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಶಿವ ಥಾಪಾ ಹಾಗೂ ಪೂಜಾ ರಾಣಿ ಚಿನ್ನದ ಪದಕ್ಕೆ ಮುತ್ತಿಟ್ಟರೆ, ಅಶಿಶ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

    ನಾಲ್ಕು ಬಾರಿಯ ಏಷ್ಯನ್ ಪದಕ ವಿಜೇತ ಶಿವ ಥಾಪಾ 63 ಕೆಜಿ ತೂಕ ವಿಭಾಗದಲ್ಲಿ ಕಜಕಿಸ್ತಾನ ರಾಷ್ಟ್ರೀಯ ಚಾಂಪಿಯನ್ ಮತ್ತು ಏಷ್ಯನ್ ಕಂಚಿನ ಪದಕ ವಿಜೇತ ಸಂತಾಲಿ ಟೋಲ್ಕಾಯೆವ್ ಅವರನ್ನು 5-0 ಅಂಕಗಳಿಂದ ಸೋಲಿಸಿದರು. ಶಿವ ರಾಷ್ಟ್ರೀಯ ಚಾಂಪಿಯನ್ ಹಾಗೂ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದರು.

    ಮತ್ತೊಂದೆಡೆ, ಏಷ್ಯನ್ ಕ್ರೀಡಾಕೂಟದ ಮಾಜಿ ಕಂಚಿನ ಪದಕ ವಿಜೇತೆ ಪೂಜಾ ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ಅವರನ್ನು ಸೋಲಿಸಿದರು. ಈ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಪೂಜಾ ಬೆಳ್ಳಿ ಪದಕವನ್ನು ಗೆದ್ದಿದ್ದರು.

    ಆಶಿಶ್ 69 ಕೆಜಿ ತೂಕ ವಿಭಾಗದಲ್ಲಿ ಜಪಾನ್‍ನ ಸೆವೊನ್ ಒಕಾಜಾವಾ ವಿರುದ್ಧ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಬುಧವಾರ ನಡೆದ ಸೆಮಿಫೈನಲ್ ಶಿವ ಥಾಪಾ ಜಪಾನ್‍ನ ದೈಸುಕಿ ನಾರಿಮತ್ಸು ಎದುರು ಭರ್ಜರಿ ಗೆಲುವು ಸಾಧಿಸಿದ್ದರು. ಪೂಜಾ ರಾಣಿ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಬ್ರೆಜಿಲ್‍ನ ಬೀಟ್‍ರಿಜ್ ಸೋರೆಸ್ ಎದುರು ಜಯದ ನಗೆ ಬೀರಿದ್ದರು.

    ಇದಕ್ಕೂ ಮುನ್ನ ಮಹಿಳೆಯರ 51 ಕೆಜಿ ತೂಕದ ವಿಭಾಗದಲ್ಲಿ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು 60 ಕೆಜಿ ವಿಭಾಗದಲ್ಲಿ ಸಿಮ್ರನ್‍ಜೀತ್ ಕೌರ್ ಸೆಮಿಫೈನಲ್ ನಲ್ಲಿ ನಿರಾಸೆ ಅನುಭವಿಸಿ ಕಂಚಿನ ಪದಕ ಗಳಿಸಿದ್ದಾರೆ. ನಾಲ್ಕರ ಘಟ್ಟದಲ್ಲೇ ಸೋತ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸುಮಿತ್ ಸಂಗ್ವಾನ್ 91 ಕೆಜಿ ವಿಭಾಗದಲ್ಲಿ ಮತ್ತು ವಹಲಿಂಪುಯಾ 75 ಕೆಜಿ ಕೂಡ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.