Tag: ಟೊರಾಂಟೋ

  • ಅಮೆರಿಕಾದಲ್ಲಿ ಮುಂದುವರಿದ ಗುಂಡಿನ ದಾಳಿ: ಮಹಿಳೆ ಸಾವು, 14 ಮಂದಿಗೆ ಗಾಯ!

    ಅಮೆರಿಕಾದಲ್ಲಿ ಮುಂದುವರಿದ ಗುಂಡಿನ ದಾಳಿ: ಮಹಿಳೆ ಸಾವು, 14 ಮಂದಿಗೆ ಗಾಯ!

    ವಾಷಿಂಗ್ಟನ್: ಅಮೆರಿಕಾದ ಟೊರಾಂಟೋದಲ್ಲಿ ಮತ್ತೆ ಶೂಟೌಟ್ ದಾಳಿ ಮುಂದುವರಿದಿದ್ದು, ಭಾನುವಾರ ರಾತ್ರಿ ಸುಮಾರು 10ಕ್ಕೆ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಮಹಿಳೆ ಸಾವನ್ನಪ್ಪಿ, 14 ಮಂದಿ ಗಾಯಗೊಂಡಿದ್ದಾರೆ.

    ಟೊರಾಂಟೋದ ಯಾಂಗ್ ಸ್ಟ್ರೀಟ್ ನಲ್ಲಿರುವ ಖ್ಯಾತ ರೆಸ್ಟೋರೆಂಟ್ ವೊಂದರಲ್ಲಿ ಈ ದಾಳಿ ನಡೆದಿದ್ದು, ರಾತ್ರಿ 10 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಯೋರ್ವ ದಿಢೀರ್ ಗುಂಡಿನ ದಾಳಿ ನಡೆಸಿದ್ದಾನೆ. ಸುಮಾರು 20 ಕ್ಕೂ ಹೆಚ್ಚು ಬಾರಿ ದಾಳಿಕೋರ ಗುಂಡು ಹಾರಿಸಿದ್ದು, ಈ ವೇಳೆ ಹಲವರಿಗೆ ಗುಂಡೇಟು ತಗುಲಿದೆ. ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಬಾಲಕಿಯೊಬ್ಬಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

    ಘಟನೆ ಕುರಿತು ಟೊರಾಂಟೋ ಪೊಲೀಸರು ಟ್ವೀಟ್ ಮಾಡಿದ್ದು, `ಗುಂಡಿನ ದಾಳಿಯಿಂದಾಗಿ 14 ಮಂದಿ ಗಾಯಗೊಂಡಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೇ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ದುಷ್ಕರ್ಮಿ ಸ್ವತಃ ಗುಂಡಿಕ್ಕಿ ಹತ್ಯೆ ಮಾಡಿಕೊಂಡಿದ್ದಾನೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಪ್ರಸ್ತುತ ದಾಳಿಗೀಡಾಗಿರುವ ರೆಸ್ಟೋರೆಂಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    ಇದೇ ಜುಲೈ 6 ರಂದು ಅಮೇರಿಕಾದ ಕನ್ಸಾಸ್ ನಗರದಲ್ಲಿ ಗುಂಡಿನ ದಾಳಿಯಿಂದಾಗಿ ಹೈದರಾಬಾದ್ ನ ಟೆಕ್ಕಿ ಶರತ್ ಕೊಪ್ಪು ಎಂಬವರು ಮೃತಪಟ್ಟಿದ್ದರು. ಅಲ್ಲದೇ ಅಮೇರಿಕಾದಲ್ಲಿ ಪದೇ ಪದೇ ಇಂತಹ ಗುಂಡಿನ ದಾಳಿ ನಡೆಯುತ್ತಿರುವುದು ಸಾಮಾನ್ಯವಾಗಿದೆ.