Tag: ಟೊಮೆಟೋ ದರ

  • ಆಂಧ್ರ, ಕರ್ನಾಟಕ, ಮಹಾರಾಷ್ಟ್ರದಿಂದ ಟೊಮೆಟೋ ಖರೀದಿಗೆ ಕೇಂದ್ರ ಸೂಚನೆ

    ಆಂಧ್ರ, ಕರ್ನಾಟಕ, ಮಹಾರಾಷ್ಟ್ರದಿಂದ ಟೊಮೆಟೋ ಖರೀದಿಗೆ ಕೇಂದ್ರ ಸೂಚನೆ

    ನವದೆಹಲಿ: ದೇಶಾದ್ಯಂತ ಟೊಮೆಟೋ ದರದಲ್ಲಿ ಏರಿಕೆ ಕಂಡುಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬೆಲೆ ಏರಿಕೆಗೆ ಮೂಗುದಾರ ಹಾಕಲು ಮುಂದಾಗಿದೆ.

    ಹೌದು. ಕಳೆದ ಒಂದು ತಿಂಗಳಿಂದ ಟೊಮೆಟೋ ದರ (Tomato Price) ಗಗನಕ್ಕೇರಿದೆ. ಇದೀಗ ದರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ, ಮಹಾರಾಷ್ಟ್ರ, ಆಂಧ್ರದ ಮಂಡಿಗಳಿಂದ ಟೊಮೆಟೋ ಖರೀದಿಸಿ ಸಾರ್ವಜನಿಕ ಬಳಕೆಗೆ ವಿತರಣೆ ಮಾಡುವಂತೆ ಸಹಕಾರಿ ಸಂಸ್ಥೆಗಳಾದ ನಾಫೆಡ್ ಮತ್ತು ಎನ್‍ಸಿಸಿಎಫ್‍ಗೆ ನಿರ್ದೇಶನ ನೀಡಿದೆ. ಟೊಮೆಟೋ ಬೆಲೆ ಹೆಚ್ಚಳವಿರುವ ನಗರಗಳಿಗೆ ಪೂರೈಕೆ ಮಾಡುವಂತೆ ಆದೇಶಿಸಿದೆ.

    ಭಾರೀ ಮಳೆಯಿಂದಾಗಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಟೊಮೆಟೋ ದರ 200 ರೂಪಯಿಯ ಗಡಿ ದಾಟಿದೆ. ಹೀಗಾಗಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ದಕ್ಷಿಣದ ರಾಜ್ಯಗಳಿಂದ ಟೊಮೆಟೋ ಖರೀದಿಸಲಿದೆ. ಇದನ್ನೂ ಓದಿ: ಜೈನಮುನಿ ಹಂತಕನ ಮನೆಯ ಮೂಕಪ್ರಾಣಿಗಳ ಪಾಲನೆ- ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಜುಲೈ-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಸಾಮಾನ್ಯವಾಗಿ ಟೊಮೆಟೋಗಳಿಗೆ ಕಡಿಮೆ ಉತ್ಪಾದನೆಯ ತಿಂಗಳುಗಳಾಗಿವೆ. ಆದರೆ ಇದು ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ದರ ಏರಿಕೆ ಈ ತಿಂಗಳುಗಳಲ್ಲಿ ಸಾಮಾನ್ಯವಾಗಿರುತ್ತದೆ. ಆಗಸ್ಟ್ ಹೊತ್ತಿಗೆ ಟೊಮೆಟೋ ದರ ಇಳಿಯಬಹುದು ಎಂದು ಸಚಿವಾಲಯ ತಿಳಿಸಿದೆ.

    ಈ ಮಧ್ಯೆ ರಾಜ್ಯದ ರೈತರಿಗೆ ಟೊಮೆಟೋ ಬೆಳೆ ಕಳ್ಳರ ಪಾಲಾಗೋದನ್ನು ತಡೆಯೋದೆ ದೊಡ್ಡ ಕೆಲಸವಾಗಿದೆ. ದಾವಣಗೆರೆಯ ಮಾಯಕೊಂಡದಲ್ಲಿ ರೈತರು ಟೊಮೆಟೋ ಹೊಲಗಳಲ್ಲಿ ಹಗಲುರಾತ್ರಿ ದೊಣ್ಣೆ ಹಿಡಿದು ನಾಯಿ ಸಮೇತ ಕಾವಲು ಕಾಯ್ತಿದ್ದಾರೆ. ಕೋಲಾರದ ಹುತ್ತೂರಿನಲ್ಲಿ ಸತೀಶ್ ಎನ್ನುವವರ ಹೊಲದಿಂದ ಟೊಮೆಟೋ ಕಳುವಾಗಿದೆ. ಹೀಗಾಗಿ ಸತೀಶ್ ಕುಟುಂಬ ಉಳಿದ ಬೆಳೆ ರಕ್ಷಿಸಿಕೊಳ್ಳಲು ಇಡೀ ರಾತ್ರಿ ನಿದ್ದೆಗೆಟ್ಟಿದೆ. ಚಿಕ್ಕಬಳ್ಳಾಪುರದಲ್ಲಿಯೂ ಇದೇ ಪರಿಸ್ಥಿತಿ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುಬಾರಿಯಾದ ಟೊಮೆಟೋ ದರ- ರೈತರು ಫುಲ್ ಖುಷ್

    ದುಬಾರಿಯಾದ ಟೊಮೆಟೋ ದರ- ರೈತರು ಫುಲ್ ಖುಷ್

    ಚಿಕ್ಕಬಳ್ಳಾಪುರ: ಟೊಮೆಟೋ ದರ (Tomato Price) ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್ ಎದುರಾದರೆ ರೈತರು ಮಾತ್ರ ಫುಲ್ ಖುಷಿಯಾಗಿದ್ದಾರೆ.

    ಚಿಕ್ಕಬಳ್ಳಾಪುರ (Chikkaballapur) ನಗರದ ಮಾರುಕಟ್ಟೆಯಲ್ಲಿ ಟೊಮೆಟೋ ದರ ಕಳೆದ ಒಂದು ವಾರದಿಂದ ಗಗನಕ್ಕೇರಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ 15 ಕೆ.ಜಿ ತೂಕದ ಟೊಮೆಟೋ ಬಾಕ್ಸ್ 1000 ರೂ. ನಿಂದ 1,500 ರೂ. ವರೆಗೆ ಮಾರಾಟವಾಗಿದೆ. ಮೂರು ದಿನಗಳಿಂದಲೂ ನಿರಂತರವಾಗಿ ಬೆಲೆ ಏರಿಕೆಯಾಗಿ ಬುಧವಾರ (ಇಂದು) ಸಹ ಉತ್ತಮ ಗುಣಮಟ್ಟದ ಟೊಮೆಟೋ 1,000 ರೂಪಾಯಿಯವರೆಗೂ ಬಿಕರಿಯಾಗಿದೆ. ಇದು ಸಹಜವಾಗಿ ಟೊಮೆಟೋ ಬೆಳೆದ ರೈತರಿಗೆ ಇದು ಖುಷಿ ತಂದಿದೆ. ಇದನ್ನೂ ಓದಿ: ನೂರರ ಗಡಿ ದಾಟಿದ ಟೊಮೆಟೋ ಬೆಲೆ- ಗೃಹಿಣಿಯರ ಆಕ್ರೋಶ

    ಅಂದಹಾಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಥೇಚ್ಚವಾಗಿ ಟೊಮೆಟೋ ಬೆಳೆಯಲಾಗುತ್ತದೆ. ಚಿಕ್ಕಬಳ್ಳಾಪುರ-ಚಿಂತಾಮಣಿ, ಕೋಲಾರದ ಟೊಮೆಟೋ ಮಾರುಕಟ್ಟೆಯಿಂದ ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಿಗೂ ಟೊಮೆಟೋ ರಫ್ತು ಮಾಡಲಾಗುತ್ತದೆ. ಆದರೆ ಈ ಬಾರಿ ಮಳೆಯ ಕೊರತೆ, ಅತಿಯಾದ ಬಿಸಿಲಿನ ಪರಿಣಾಮ ಟೊಮೆಟೋ ಬೆಳೆಯಲ್ಲಿ ವ್ಯತ್ಯಾಸ ಆಗಿದ್ದು ಇಳುವರಿಯಲ್ಲಿಯೂ ಕುಂಠಿತವಾಗಿದೆ. ಹೀಗಾಗಿ ಟೊಮೆಟೋ ಸಿಗದೆ ರೇಟ್ ಸಹ ಹೆಚ್ಚಳವಾಗುತ್ತಿದೆ ಎಂದು ವರ್ತಕರು ಹೇಳುತ್ತಾರೆ.

    ಟೊಮೆಟೋ ಬೆಲೆ ಏರಿಕೆ ಗ್ರಾಹಕರು ಶಾಕ್ ಆಗುವಂತೆ ಮಾಡಿದ್ರೆ ರೈತರು ಖುಷಿಯಾಗುವಂತೆ ಮಾಡಿದೆ. ಕೇವಲ ಟೊಮೆಟೋ ಅಷ್ಟೇ ಅಲ್ಲದೆ ಇತರೆ ತರಕಾರಿಗಳ ಬೆಲೆಯೂ ಏರಿಕೆಯಾಗಿ ಜನರ ಜೇಬಿಗೆ ಕತ್ತರಿ ಬೀಳುತಿದ್ದು, ಜನ ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೂರರ ಗಡಿ ದಾಟಿದ ಟೊಮೆಟೋ ಬೆಲೆ- ಗೃಹಿಣಿಯರ ಆಕ್ರೋಶ

    ನೂರರ ಗಡಿ ದಾಟಿದ ಟೊಮೆಟೋ ಬೆಲೆ- ಗೃಹಿಣಿಯರ ಆಕ್ರೋಶ

    ಬೆಂಗಳೂರು/ನವದೆಹಲಿ: ದಿನನಿತ್ಯ ತಮ್ಮ ಅಡುಗೆಯಲ್ಲಿ ಬಳಸುವ ಟೊಮೆಟೋ ದರ (Tomato Price) ಗಗನಕ್ಕೇರಿದು, ಗೃಹಿಣಿಯರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಹೌದು. ಕಡಿಮೆ ದರದಲ್ಲಿ ಸಿಗುತ್ತಿದ್ದ ಟೊಮೆಟೋಗೆ ಇದೀಗ ಕೆ.ಜಿ ಆಪಲ್ ಬೆಲೆಯಾಗಿದೆ. ಕಳೆದ ಕೆಲ ದಿನಗಳಿಂದ ದೇಶದ ಹಲವು ಭಾಗಗಳಲ್ಲಿ ಟೊಮೆಟೋ ದರ ನೂರರ ಗಡಿ ದಾಟಿದೆ. ಇದನ್ನೂ ಓದಿ: ತರಕಾರಿ, ಹಣ್ಣುಗಳ ಬೆಲೆ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಸೇರಿದಂತೆ ಬೆಂಗಳೂರು ಸುತ್ತಮುತ್ತ ಭಾಗಗಳಲ್ಲಿ ಟೊಮೆಟೋ ಬೆಳೆ ನಾಶವಾಗಿದೆ. ಹೀಗಾಗಿ ದರದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ. ಒಂದು ಕೆ.ಜಿ ಟೊಮೆಟೋಗೆ ಹಾಪ್ ಕಾಮ್ಸ್ ನಲ್ಲಿ 110 ರೂ., ಆನ್ ಲೈನ್ ಶಾಪಿಂಗ್ ನಲ್ಲಿ 120 ರೂ. ಆಗಿದೆ. ಹೀಗಾಗಿ ಟೊಮೆಟೋ ಸಾರು, ರಸಂ, ಗೊಜ್ಜು, ಹುಳಿ ಮಾಡೋಕೆ ಆಗಲ್ಲ ಅಂತಾ ಗೃಹಿಣಿಯರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಉತ್ಪಾದನೆ ಕೊರತೆ, ತೀವ್ರವಾದ ಬಿಸಿಲು ಮತ್ತು ಮುಂಗಾರು ಆಗಮನ ವಿಳಂಬವಾಗಿದ್ದರಿಂದ ಟೊಮೆಟೋ ದರದಲ್ಲಿ ಏರಿಕೆಯಾಗಿದೆ ಎಂದು ರೈತರು ತಿಳಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಹರಿಯಾಣದಂತಹ ನೆರೆಯ ರಾಜ್ಯಗಳಿಂದ ಪೂರೈಕೆ ಕಡಿಮೆಯಾದ ಕಾರಣ ದೆಹಲಿಯಲ್ಲಿ ಕಳೆದೆರಡು ದಿನಗಳಲ್ಲಿ ಟೊಮೆಟೋ ಬೆಲೆ ದ್ವಿಗುಣಗೊಂಡಿದೆ ಎಂಬುದಾಗಿಯೂ ವರದಿಯಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]