Tag: ಟೊಮೆಟೊ

  • ಬೆಲೆ ಕುಸಿತ- ರಸ್ತೆ ಬದಿ ಟೊಮೆಟೊ ಸುರಿದು ಹೋದ ರೈತರು

    ಬೆಲೆ ಕುಸಿತ- ರಸ್ತೆ ಬದಿ ಟೊಮೆಟೊ ಸುರಿದು ಹೋದ ರೈತರು

    ದಾವಣಗೆರೆ: ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದಾಗಿ ಕಂಗಾಲದ ರೈತರು ರಾಶಿಗಟ್ಟಲೇ  ಟೊಮೆಟೊವನ್ನು ರಸ್ತೆಬದಿ ಸುರಿದು ಹೋಗಿದ್ದಾರೆ.

    ಜಿಲ್ಲೆಯಲ್ಲಿ ಟೊಮೆಟೊ ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿ ಬಂಡವಾಳ ಹೂಡಿ ಬೆಳೆದ ಟೊಮೆಟೊ ಬೆಳೆಯನ್ನು ನಗರದ ತರಕಾರಿ ಮಾರುಕಟ್ಟೆ ಬಳಿ ಬೀದಿಗೆ ಸುರಿದು ಹೋಗಿದ್ದಾರೆ. ಪ್ರತಿ ಬಾರಿ ನಷ್ಟ ಅನುಭವಿಸುತ್ತಿರುವ ರೈತರು ಕಡಿಮೆ ಬೆಲೆಗೆ ಮಾರುವುದಕ್ಕಿಂತ ಬಿಸಾಕುವದೇ ಮೇಲು ಎಂದು ಈ ರೀತಿ ಮಾಡಿದ್ದಾರೆ.

    ಕ್ವಿಂಟಲ್ ಗಟ್ಟಲೇ ಟೊಮೆಟೊ ಬೀದಿ ದನ ಹಾಗೂ ಹಂದಿಗಳ ಪಾಲಾಗಿದೆ. ಬೆಲೆ ಕುಸಿತದಿಂದಾಗಿ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈ ಕೂಡಲೇ ಸರ್ಕಾರ ನಷ್ಟಕ್ಕೆ ಪರಿಹಾರ ಒದಗಿಸಬೇಕಾಗಿದೆ.

  • ರಸ್ತೆಗೆ ಟೊಮೆಟೊ ಚೆಲ್ಲಿ ರೈತರ ಪ್ರತಿಭಟನೆ

    ರಸ್ತೆಗೆ ಟೊಮೆಟೊ ಚೆಲ್ಲಿ ರೈತರ ಪ್ರತಿಭಟನೆ

    ತುಮಕೂರು: ರಾಜ್ಯದಲ್ಲಿ ಮಹದಾಯಿ ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮಧ್ಯೆ ಟೊಮೆಟೊ ಬೆಲೆ ಪಾತಾಳಕ್ಕಿಳಿದಿದ್ದರಿಂದ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ಪಾವಗಡದ ರೈತರು ರಸ್ತೆ ಮೇಲೆ ಟೊಮೆಟೊ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    ಟೊಮೆಟೊ ಬೆಲೆ ಕೆಜಿಗೆ 5-6 ರೂ. ಗೆ ಕುಸಿದಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಮಧ್ಯಪ್ರವೇಶ ಮಾಡಿ ಟೊಮೆಟೊಗೆ 30-40 ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಬೇಕೆ ಬೇಕು ನ್ಯಾಯ ಬೇಕು ಎಂದು ಕೂಗುತ್ತಾ ಪ್ರತಿಭಟನೆ ಮಾಡುತ್ತಿದ್ದಾರೆ.

    ಪಾವಗಡ ತಾಲೂಕಿನಲ್ಲಿ ನೂರಾರು ರೈತರು ಟೊಮೆಟೊ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಟೊಮೆಟೊಗೆ ನಿಗದಿತ ಬೆಲೆ ಸಿಗದೇ ಅವರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೆಲವರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ರೈತರ ಸಂಕಷ್ಟ ದೂರ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

     

  • ಕ್ಯಾಂಟರ್ ಪಲ್ಟಿಯಾಗಿ 5 ಸಾವಿರ ಕೆ.ಜಿ ಟೊಮೆಟೋ ರಸ್ತೆಪಾಲು- ಟೋಲ್ ಸಿಬ್ಬಂದಿ ವಿರುದ್ಧ ರೈತರ ಆಕ್ರೋಶ

    ಕ್ಯಾಂಟರ್ ಪಲ್ಟಿಯಾಗಿ 5 ಸಾವಿರ ಕೆ.ಜಿ ಟೊಮೆಟೋ ರಸ್ತೆಪಾಲು- ಟೋಲ್ ಸಿಬ್ಬಂದಿ ವಿರುದ್ಧ ರೈತರ ಆಕ್ರೋಶ

    ಮಂಡ್ಯ: ಟೊಮೆಟೋ ತುಂಬಿಕೊಂಡು ಸಾಗಿಸುತ್ತಿದ್ದ ಕ್ಯಾಂಟರ್ ಹೆದ್ದಾರಿಯಲ್ಲಿ ಉರುಳಿ ಬಿದ್ದು ಸುಮಾರು 5 ಸಾವಿರ ಕೆ.ಜಿ ಟೊಮೆಟೋ ರಸ್ತೆ ಪಾಲಾದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ, ಬೆಳ್ಳೂರು ಕ್ರಾಸ್ ಬಳಿ ಸಂಭವಿಸಿದೆ.

     

    ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ. ಚನ್ನರಾಯಪಟ್ಟಣದಿಂದ ಬೆಂಗಳೂರಿಗೆ ಕ್ಯಾಂಟರ್‍ನಲ್ಲಿ ಟೊಮೆಟೋ ಸಾಗಿಸಲಾಗುತ್ತಿತ್ತು. ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಉರುಳಿ ಬಿದ್ದಿದೆ. ಇದರಿಂದ ಸುಮಾರು ಐದು ಸಾವಿರ ಕೆ.ಜಿ ಯಷ್ಟು ಟೊಮೆಟೋ ರಸ್ತೆಯಲ್ಲಿ ಚೆಲ್ಲಿದೆ. ಅಷ್ಟೇ ಅಲ್ಲದೇ ಹೆದ್ದಾರಿಗೆ ಕ್ಯಾಂಟರ್ ಅಡ್ಡಲಾಗಿ ಬಿದ್ದಿರುವ ಪರಿಣಾಮ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ.

     

    ತಡರಾತ್ರಿ ಕ್ಯಾಂಟರ್ ಹೆದ್ದಾರಿಯಲ್ಲಿ ಬಿದ್ದಿದ್ದರೂ ಅದನ್ನು ತೆರವುಗೊಳಿಸಲು ಟೋಲ್ ಸಿಬ್ಬಂದಿ ಯಾವುದೇ ಸಹಾಯ ಮಾಡಲು ಮುಂದಾಗಿಲ್ಲ. ಅಪಘಡದ ವಿಷಯ ತಿಳಿದು ಸ್ಥಳಕ್ಕೆ ಬಂದ ಟೋಲ್ ಸಿಬ್ಬಂದಿ ನಮ್ಮಲ್ಲಿ ಕ್ರೇನ್ ವ್ಯವಸ್ಥೆಯಿಲ್ಲ. ಹೀಗಾಗಿ ನೀವೇ ಕ್ರೇನ್ ತರಿಸಿ ನಿಮ್ಮ ವಾಹನವನ್ನು ಹೆದ್ದಾರಿಯಿಂದ ತೆರವುಗೊಳಿಸಿ ಎಂದು ಕ್ಯಾಂಟರ್ ಮಾಲೀಕರಿಗೆ ತಿಳಿಸಿದ್ದಾರೆ.

    ಒಂದು ಕಡೆ ಟೊಮೆಟೋ ನಾಶವಾದ ಸಂಕಷ್ಟ ಮತ್ತೊಂದೆಡೆ ಟೋಲ್ ಕಟ್ಟಿಸಿಕೊಂಡರೂ ಕೂಡ ಅವಘಡ ಸಂಭವಿಸಿದಾಗ ಕನಿಷ್ಟ ಸೌಲಭ್ಯ ಒದಗಿಸದ ಟೋಲ್ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

  • ಟೈಟ್ ಸೆಕ್ಯೂರಿಟಿಯಲ್ಲಿ ಟೊಮೆಟೊಗಳ ಸಾಗಾಟ

    ಟೈಟ್ ಸೆಕ್ಯೂರಿಟಿಯಲ್ಲಿ ಟೊಮೆಟೊಗಳ ಸಾಗಾಟ

    ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ತರಕಾರಿ ಮಾರುಕಟ್ಟೆಯ ಟೊಮೆಟೋ ವಿಭಾಗದ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.

    ಭಾರತದ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಗಗನಕ್ಕೆ ಏರಿದೆ. ಸದ್ಯ ಮಾರುಕಟ್ಟೆಯಲ್ಲಿ ಅಂತಿಮ ಬಳಕೆದಾರರಿಗೆ ಒಂದು ಕೆಜಿ ಟೊಮೆಟೋ 80 ರಿಂದ 100 ರೂ.ಗೆ ಸಿಗುತ್ತಿದೆ. ಹೀಗಾಗಿ ಭಾರೀ ಬೆಲೆಯುಳ್ಳ ಟೊಮೆಟೋ ರಕ್ಷಣೆಗಾಗಿ ವ್ಯಾಪಾರಿಗಳು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡಿದ್ದಾರೆ.

    ಭದ್ರತೆ ಯಾಕೆ?: ಕೆಲವು ದಿನಗಳ ಹಿಂದೆ ಮುಂಬೈನ ದಾಷಿರ್ ಮಾರುಕಟ್ಟೆ ಆವರಣದಲ್ಲಿ 300 ಕೆಜಿ ತೂಕದ 30 ಕ್ರೇಟ್ ಟೊಮೆಟೋ ಕಳುವಾಗಿದ್ದು ಸುಮಾರು 70 ಸಾವಿರದಷ್ಟು ನಷ್ಟವಾಗಿದೆ ಎಂದು ದೂರು ದಾಖಲಾಗಿತ್ತು. ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಹೊಲದಲ್ಲಿದ್ದ ನೂರಾರು ಕೆಜಿ ಟೊಮೆಟೋ ಕದ್ದ ಖದೀಮರು  

    ಈ ಹಿನ್ನೆಲೆಯಲ್ಲಿ ಇಂದೋರ್ ನಲ್ಲಿ ವ್ಯಾಪಾರಸ್ಥರು ತಮ್ಮ ಟೊಮೆಟೋಗಳ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಮಾರುಕಟ್ಟೆಯ ಸ್ಟೋರ್ ರೂಮ್‍ನ ಸುತ್ತಲೂ ಕಾವಲು ಪಡೆ ನಿಂತಿದ್ದು, ಅವುಗಳನ್ನು ಗ್ರಾಹಕರಿಗೆ ತಲುಪಿಸುವವರೆಗೆ ರಕ್ಷಣೆಯನ್ನು ಒದಗಿಸುತ್ತಿದ್ದಾರೆ.

    ಇತ್ತೀಚಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರೊಬ್ಬರು ಮಾರಾಟಕ್ಕೆಂದು ಟ್ರಾಯ್ ನಲ್ಲಿ ತುಂಬಿಸಿ ತಮ್ಮ ಜಮೀನಿನಲ್ಲಿಟ್ಟ ಸುಮಾರು 70 ಸಾವಿರ ರೂ.ಯ ಮೌಲ್ಯದ ಟೊಮೆಟೋಗಳನ್ನು ಕಳ್ಳತನ ಮಾಡಲಾಗಿತ್ತು.