Tag: ಟೊಮೆಟೊ ಸೇವ್

  • ಚಹಾದೊಂದಿಗೆ ಸವಿಯಿರಿ ಕುರುಕಲು ಟೊಮೆಟೊ ಸೇವ್

    ಚಹಾದೊಂದಿಗೆ ಸವಿಯಿರಿ ಕುರುಕಲು ಟೊಮೆಟೊ ಸೇವ್

    ಸಂಜೆಯ ವೇಳೆ ಚಹಾದೊಂದಿಗೆ ಸವಿಯಲು ಕುರುಕಲು ತಿಂಡಿ ಎಲ್ಲರಿಗೂ ಬೇಕು. ಚಕ್ಕುಲಿ, ವಡೆ, ಬಿಸ್ಕತ್ತು ಹೀಗೆ ಹಲವು ತಿಂಡಿಗಳು ನಿಮ್ಮ ಚಹಾದ ಸವಿಯನ್ನು ಇನ್ನಷ್ಟು ಮಜವಾಗಿಸುತ್ತದೆ. ನಾವಿಂದು ಇಂತಹುದೇ ಕುರುಕಲಾದ ತಿಂಡಿ ಟೊಮೆಟೊ ಸೇವ್ (Tomato Sev) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಇದನ್ನು ಸುಲಭವಾಗಿ ನೀವು ಮನೆಯಲ್ಲಿಯೇ ಮಾಡಿ ನೋಡಿ. ಇಂತಹ ತಿಂಡಿಗಳನ್ನು ಅಂಗಡಿಗಳಿಂದ ತರುವುದಕ್ಕಿಂತಲೂ ಮನೆಯಲ್ಲಿ ಮಾಡಿದರೆ ಇನ್ನಷ್ಟು ಮಜಾ ಅಲ್ವಾ?

    ಬೇಕಾಗುವ ಪದಾರ್ಥಗಳು:
    ಹೆಚ್ಚಿದ ಟೊಮೆಟೊ – 1
    ಕಡಲೆ ಹಿಟ್ಟು – 2 ಕಪ್
    ಅಕ್ಕಿ ಹಿಟ್ಟು – ಅರ್ಧ ಕಪ್
    ಅರಿಶಿನ – ಅರ್ಧ ಟೀಸ್ಪೂನ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    ಹಿಂಗ್ – ಚಿಟಿಕೆ
    ಉಪ್ಪು – 1 ಟೀಸ್ಪೂನ್
    ಬೆಣ್ಣೆ – 2 ಟೀಸ್ಪೂನ್
    ಓಂಕಾಳು – ಅರ್ಧ ಟೀಸ್ಪೂನ್
    ನೀರು – ಅಗತ್ಯಕ್ಕೆ ತಕ್ಕಷ್ಟು
    ಎಣ್ಣೆ – ಹುರಿಯಲು ಇದನ್ನೂ ಓದಿ: ಗರಿಗರಿಯಾದ ಚಿಕನ್ ಸಮೋಸ ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಟೊಮೆಟೊ ಮಿಕ್ಸರ್ ಜಾರ್‌ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ (ನೀರು ಸೇರಿಸುವುದು ಬೇಡ)
    * ಈಗ ಒಂದು ದೊಡ್ಡ ಬಟ್ಟಲಿನಲ್ಲಿ ಜರಡಿ ಹಿಡಿದು ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ, ಮೆಣಸಿನ ಪುಡಿ, ಹಿಂಗ್ ಮತ್ತು ಉಪ್ಪು ಸೇರಿಸಿ ಉಂಡೆಗಳಿಲ್ಲದಂತೆ ಮಿಶ್ರಣ ಮಾಡಿ.
    * ಈಗ ಮಿಶ್ರಣಕ್ಕೆ ಬೆಣ್ಣೆ ಹಾಗೂ ಓಂಕಾಳು ಸೇರಿಸಿ ಮಿಶ್ರಣ ಮಾಡಿ.
    * ಟೊಮೆಟೊ ಪ್ಯೂರಿಯಲ್ಲಿ ಬೀಜ ಹಾಗೂ ಸಿಪ್ಪೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸೋಸಿ, ಕಡಲೆ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

    * ಈಗ ಅಗತ್ಯಕ್ಕೆ ತಕ್ಕಂತೆ ನೀರನ್ನು ಸೇರಿಸಿ ಚಕ್ಕುಲಿ ಹಿಟ್ಟಿನ ಹದದಂತೆ ಮೃದುವಾದ ಹಿಟ್ಟನ್ನು ತಯಾರಿಸಿ.
    * ಈಗ ಸಣ್ಣ ಸಣ್ಣ ರಂಧ್ರಗಳಿರುವ ಚಕ್ಕುಲಿ ಮೇಕರ್ ತೆಗೆದುಕೊಂಡು, ಒಳ ಭಾಗದಲ್ಲಿ ಸ್ವಲ್ಪ ಎಣ್ಣೆ ಗ್ರೀಸ್ ಮಾಡಿ, ಚೆಂಡಿನ ಗಾತ್ರದ ಮಿಶ್ರಣವನ್ನು ಚಕ್ಕುಲಿ ಮೇಕರ್ ಒಳಗೆ ಹಾಕಿ ತಯಾರಿಸಿಡಿ.
    * ಕಾದ ಎಣ್ಣೆಯಲ್ಲಿ ಸೇವ್ ಅನ್ನು ಒತ್ತಿ, ಒಂದು ಸುತ್ತು ವೃತ್ತವಾಗಿ ಹರಡಿ.
    * ಈಗ ಸೇವ್ ಅನ್ನು ಗರಿಗರಿಯಾಗಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
    * ಬಳಿಕ ಸೇವ್ ಅನ್ನು ಎಣ್ಣೆಯಿಂದ ತೆಗೆದು, ಟಿಶ್ಯೂ ಪೇಪರ್ ಮೇಲೆ ಹಾಕಿ.
    * ಇದೀಗ ಟೊಮೆಟೊ ಸೇವ್ ತಯಾರಾಗಿದ್ದು, ಚಹಾದ ಸಮಯಲ್ಲಿ ಕುರುಕಲು ತಿಂಡಿಯಾಗಿ ಸವಿಯಿರಿ. ಇದನ್ನೂ ಓದಿ: ಬೇಕರಿಯಲ್ಲಿ ಸಿಗುವ ಮಸಾಲಾ ಬಿಸ್ಕತ್ತು ಮನೆಯಲ್ಲೇ ಮಾಡಿ ನೋಡಿ

    Live Tv
    [brid partner=56869869 player=32851 video=960834 autoplay=true]