Tag: ಟೈಲ್ಸ್

  • ಕೈದಿಗಳಿಂದ ಮೊಬೈಲ್ ಬಳಕೆ – ಟೈಲ್ಸ್, ಗೋಡೆ ಕೊರೆದು ಬಚ್ಚಿಟ್ಟಿದ್ದ 19 ಫೋನ್ ವಶಕ್ಕೆ

    ಕೈದಿಗಳಿಂದ ಮೊಬೈಲ್ ಬಳಕೆ – ಟೈಲ್ಸ್, ಗೋಡೆ ಕೊರೆದು ಬಚ್ಚಿಟ್ಟಿದ್ದ 19 ಫೋನ್ ವಶಕ್ಕೆ

    ಚಂಡೀಗಢ: ಪಟಿಯಾಲ ಸೆಂಟ್ರಲ್ ಜೈಲು ಸಂಕೀರ್ಣದಿಂದ 19 ಕೀ ಪ್ಯಾಡ್ ಮೊಬೈಲ್ ಫೋನ್‍ಗಳನ್ನು ಭಾನುವಾರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಪಟಿಯಾಲ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ನಡೆಸಿದ ವಿಶೇಷ ಶೋಧ ಕಾರ್ಯಾಚರಣೆಯಲ್ಲಿ ಗೋಡೆ ಮತ್ತು ನೆಲವನ್ನು ಕೊರೆದು ಬಚ್ಚಿಟ್ಟಿದ್ದ 19 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಕೇಂದ್ರ ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿಕಾರ್ಯಕ್ಕೆ ಪಂಜಾಬ್ ಜೈಲು ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಟ್ವೀಟ್ ಮಾಡುವ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಇಲ್ಲ, ಸ್ವಾತಂತ್ರೋತ್ಸವ ಅದ್ದೂರಿಯಾಗಿ ಆಚರಿಸುತ್ತೇವೆ: ಜಮೀರ್ ಅಹ್ಮದ್

    ಹರ್ಜೋತ್ ಸಿಂಗ್ ಬೈನ್ಸ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಖತರ್ನಾಕ್ ಖದೀಮರು ಫೋನ್‍ಗಳನ್ನು ಬಚ್ಚಿಡಲು ನೆಲದ ಟೈಲ್ಸ್ ಜಾಯಿಂಟ್‍ಗಳು ಮತ್ತು ಗೋಡೆಯ ಕೊರೆದಿರುವುದನ್ನು ಕಾಣಬಹುದಾಗಿದೆ. ಮೊಬೈಲ್ ಫೋನ್ ಇಟ್ಟುಕೊಳ್ಳುವುದು ತಪ್ಪು ಎಂದು ತಿಳಿದಿದ್ದರೂ, ಕೈದಿಗಳು ಸುರಕ್ಷಿತವಾಗಿ ಮೊಬೈಲ್ ಫೋನ್ ಅನ್ನು ಜೈಲಿನೊಳಗೆ ಹೇಗೆ ತಂದರು ಎಂಬುವುದು ಇದೀಗ ಯಕ್ಷ ಪ್ರಶ್ನೆಯಾಗಿದೆ. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು?: ಹೆಚ್‌ಡಿಕೆ ವಾಗ್ದಾಳಿ

    ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ ಮೊಬೈಲ್ ಫೋನ್ ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಮೇ 25 ರಂದು, ಕುಖ್ಯಾತ ಸಿಂಥೆಟಿಕ್ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ದೋಷಿ ಎಂದು ವಜಾಗೊಂಡ ಪಂಜಾಬ್ ಡಿಎಸ್‍ಪಿ ಜಗದೀಶ್ ಸಿಂಗ್ ಭೋಲಾ ಅವರಿಂದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿತ್ತು. ಮೇ 31 ರಂದು ಜೈಲು ಅಧಿಕಾರಿಗಳು ಈ ಕೇಂದ್ರ ಕಾರಾಗೃಹದ ಸಂಕೀರ್ಣದಲ್ಲಿ ಹೂತಿಟ್ಟಿದ್ದ ಎಂಟು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಟೈಲ್ಸ್ ಮತ್ತು ಸ್ಯಾನಿಟರಿವೇರ್ ಹೆಸರಲ್ಲಿ ಅಕ್ರಮ – 220 ಕೋಟಿ ಕಪ್ಪು ಹಣ ಪತ್ತೆ

    ಟೈಲ್ಸ್ ಮತ್ತು ಸ್ಯಾನಿಟರಿವೇರ್ ಹೆಸರಲ್ಲಿ ಅಕ್ರಮ – 220 ಕೋಟಿ ಕಪ್ಪು ಹಣ ಪತ್ತೆ

    ಚೆನ್ನೈ: ಟೈಲ್ಸ್ ಮತ್ತು ಸ್ಯಾನಿಟರಿವೇರ್ ತಯಾರಿಸುತ್ತಿದ್ದ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ 220 ಕೋಟಿ ರೂ ಕಪ್ಪು ಹಣ ಪತ್ತೆಯಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತಿಳಿಸಿದೆ.

    ಫೆಬ್ರವರಿ 26ರಂದು ತಮಿಳುನಾಡು, ಗುಜರಾತ್ ಕೋಲ್ಕತ್ತಾ ಸೇರಿದಂತೆ ಒಟ್ಟು 20 ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಟೈಲ್ಸ್ ಮತ್ತು ಸ್ಯಾನಿಟರಿವೇರ್ ತಯಾರಿಸಿ ವ್ಯಾಪಾರ ಮಾಡುತ್ತಿದ್ದ ಸಂಸ್ಥೆಯ ಮೇಲೆ ದಾಳಿ ನಡೆಸಲಾಗಿದ್ದು, 8.30 ಕೋಟಿ ನಗದು ವಶ ಪಡಿಸಿಕೊಳ್ಳಲಾಗಿದೆ ಎಂದು ಸಿಬಿಡಿಟಿ ಹೇಳಿಕೆ ನೀಡಿದೆ.


    ದಾಳಿ ವೇಳೆ ರಹಸ್ಯ ಕೊಠಡಿಯಲ್ಲಿ ಬಚ್ಚಿಟ್ಟಿದ್ದ ಪುಸ್ತಕದಲ್ಲಿ ಮಾರಾಟ ಮತ್ತು ಖರೀದಿಸಿರುವ ಲೆಕ್ಕದ ಬಗ್ಗೆ ಪರಿಶೀಲನೆ ನಡೆಸಿದ್ದು, ಈ ವೇಳೆ ಶೇ.50 ರಷ್ಟು ಅಕ್ರಮ ವಹಿವಾಟು ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಹಿಂದಿನ ಲೆಕ್ಕಗಳನ್ನು ಪರಿಶೀಲಿಸಿದಾಗ 120 ಕೋಟಿ ರೂ. ಆದಾಯ ತೋರಿಸುತ್ತಿದ್ದು, ಹೊರಗೆ ನಡೆದ ವಹಿವಾಟಿನಲ್ಲಿ ಬಂದ 100 ಕೋಟಿ ಆದಾಯವನ್ನು ಮರೆಮಾಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಒಟ್ಟಾರೆ 220 ಕೋಟಿ ರೂ.ವನ್ನು ಶನಿವಾರ ರಾತ್ರಿ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಲೆಕ್ಕವಿಲ್ಲದೇ ತಮಿಳಿನಾಡಿನಿಂದ ಪುದುಚೇರಿಗೆ ನಡುಯುತ್ತಿದ್ದ ವಹಿವಾಟುಗಳನ್ನು ಪತ್ತೆ ಹಚ್ಚಲು ಕೇಂದ್ರೀಯ ನೇರ ತೆರಿಗೆ ಮಂಡಳಿ ಈಗ ತನಿಖೆ ನಡೆಸಲು ಮುಂದಾಗಿದೆ.

  • ಸ್ವಚ್ಛ ಭಾರತ್ ಶೌಚಾಲಯದ ಟೈಲ್ಸ್ ಮೇಲೆ ಮಹಾತ್ಮ ಗಾಂಧಿ, ಅಶೋಕ ಚಕ್ರ

    ಸ್ವಚ್ಛ ಭಾರತ್ ಶೌಚಾಲಯದ ಟೈಲ್ಸ್ ಮೇಲೆ ಮಹಾತ್ಮ ಗಾಂಧಿ, ಅಶೋಕ ಚಕ್ರ

    ನವದೆಹಲಿ: ಗಾಂಧಿ ಜಯಂತಿಯಂದು ಆರಂಭಗೊಂಡಿದ್ದ ಸ್ವಚ್ಛಭಾರತ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಶೌಚಾಲಯದಲ್ಲಿ ಗಾಂಧೀಜಿ ಮತ್ತು ಅಶೋಕ ಚಕ್ರದ ಚಿತ್ರಗಳುಳ್ಳ ಟೈಲ್ಸ್ ಗಳನ್ನು ಬಳಸಿ ಅವಮಾನ ಮಾಡಲಾಗಿದೆ.

    ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಯೋಜನೆಯ ಅಭಿಯಾನದ ಅಡಿ ನಿರ್ಮಿಸಲಾದ ಶೌಚಾಲಯದ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಪೂಜ್ಯ ಗಾಂಧೀಜಿ ಅವರ ಭಾವಚಿತ್ರವುಳ್ಳ ಟೈಲ್ಸ್ ಗಳನ್ನು ಬಳಸಿ ಶೌಚಾಲಯ ನಿರ್ಮಿಸಿರುವುದು ತಪ್ಪು. ಈ ರೀತಿ ಮಾಡಿ ರಾಷ್ಟ್ರಪಿತ ಹಾಗೂ ಆಶೋಕ ಚಕ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ.

    ಸದ್ಯ ಈ ಶೌಚಾಲಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಈ ಬಗ್ಗೆ ಎಲ್ಲೆಡೆ ಬಾರೀ ವಿರೋಧ ವ್ಯಕ್ತವಾಗುತ್ತಿದೆ.

    ದಿಬಾಯ್ ತಹಸೀಲ್‍ನ ಇಚ್ಚವರಿ ಗ್ರಾಮದಲ್ಲಿ `ಸ್ವಚ್ಛ ಭಾರತ’ ಅಭಿಯಾನದಡಿ ಸುಮಾರು 508 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 13 ಶೌಚಾಲಯಗಳಲ್ಲಿ ಗಾಂಧೀಜಿ ಹಾಗೂ ಅಶೋಕ ಚಕ್ರ ಚಿತ್ರವಿರುವ ಟೈಲ್ಸ್ ಗಳನ್ನು ನಿರ್ಮಾಣಕ್ಕೆ ಬಳಸಲಾಗಿದೆ. ಈಗಾಗಲೇ ಇದಕ್ಕೆ ಕಾರಣರಾದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಗ್ರಾಮದ ಸರಪಂಚ್ ವಿರುದ್ಧವೂ ಕ್ರಮಕೈಗೊಂಡಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಅಧಿಕಾರಿ ಅಮರ್ಜಿತ್ ಸಿಂಗ್ ಹೇಳಿದ್ದಾರೆ.

    ವಾರದ ಹಿಂದೆಯೇ ಶೌಚಾಲಯಗಳನ್ನು ನಿರ್ಮಿಸಲು ಈ ಟೈಲ್ಸ್ ಗಳನ್ನು ಬಳಸಲಾಗಿದೆ. ಹಾಗೆಯೇ ಇದನ್ನು ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸಲಾಗಿತ್ತು. ಆದರೆ ಈ ಬಗ್ಗೆ ನಮಗೆ ತಿಳಿಯುತ್ತಿದ್ದಂತೆ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಏಪ್ರಿಲ್‍ನಲ್ಲಿ ಜಟ್ವಾಡ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ನಿರ್ಮಿಸಲಾಗಿದ್ದ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿತ್ತು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಜನರು ಮತ್ತೆ ಶೌಚಕ್ಕಾಗಿ ಬಯಲುಗಳಿಗೆ ಹೋಗಲು ಶುರುಮಾಡಿದ್ದಾರೆ.

    ಈ ಪ್ರದೇಶಗಳಲ್ಲಿ ವಾಸಿಸುವವರು ದಿನ ಕೂಲಿ ಕಾರ್ಮಿಕರು. ಹೀಗಾಗಿ ಪ್ರತಿನಿತ್ಯ ಈ ಶೌಚಾಲಯಗಳಿಗೆ ಹಣ ನೀಡಿ ಹೋಗಲು ನಮಗೆ ಸಾಧ್ಯವಿಲ್ಲ, ಅದಕ್ಕೆ ಬಯಲುಗಳಿಗೆ ಹೋಗುತ್ತೇವೆ ಎಂದು ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.