Tag: ಟೈಲರಿಂಗ್

  • ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಒಡತಿಗೆ ಬೆಂಕಿ ಹಚ್ಚಿ, ತಾನೂ ಕೂಡ ಸತ್ತ

    ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಒಡತಿಗೆ ಬೆಂಕಿ ಹಚ್ಚಿ, ತಾನೂ ಕೂಡ ಸತ್ತ

    ಮುಂಬೈ: ಕೆಲಸದಿಂದ ತೆಗೆದು ಹಾಕಿದ 35 ವರ್ಷದ ಮಹಿಳೆಗೆ ವ್ಯಕ್ತಿಯೋರ್ವ ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿ, ನಂತರ ತಾನೂ ಕೂಡ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಪುಣೆಯ ಸೋಮನಾಥ ನಗರದಲ್ಲಿ ಮಹಿಳೆ ಟೈಲರಿಂಗ್ ಅಂಗಡಿಯನ್ನು ಇಟ್ಟುಕೊಂಡಿದ್ದರು. ಮಿಲಿಂದ್ ನಾಥಸಾಗರ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, 32 ವರ್ಷದ ಬಾಲಾ ಜಾನಿಂಗ್ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಎಂಟು ದಿನಗಳ ಹಿಂದೆ ಮಿಲಿಂದ್ ನಾಥಸಾಗರ್‍ನನ್ನು ಬಾಲಾ ಜಾನಿಂಗ್ ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಕೋಪಗೊಂಡ ನಾಥಸಾಗರ್ ರಾತ್ರಿ 11 ಗಂಟೆ ಸುಮಾರಿಗೆ ಅಂಗಡಿಗೆ ತೆರಳಿ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಲೈಟರ್‍ನಿಂದ ಬೆಂಕಿ ಹಚ್ಚಿದ್ದಾನೆ. ಇದೇ ವೇಳೆ ನಾಥಸಾಗರ್‍ಗೆ ಕೂಡ ಬೆಂಕಿ ಹೊತ್ತಿಕೊಂಡಿದ್ದು, ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಪಾರ್ಟಿಗೆ ಬಂದಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಬಾರ್ ಬೌನ್ಸರ್

    CRIME 2

    ಸದ್ಯ ಮಹಿಳೆಗೆ ಶೇ.90 ರಷ್ಟು ಸುಟ್ಟ ಗಾಯಗಳಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಘಟನೆಯಲ್ಲಿ ಸಮೀಪದಲ್ಲಿಯೇ ಮೊಬೈಲ್ ಅಂಗಡಿ ಇಟ್ಟಿದ್ದ ಮತ್ತೊಬ್ಬ ವ್ಯಕ್ತಿ ಮಧ್ಯಪ್ರವೇಶಿಸಲು ಸ್ಥಳಕ್ಕೆ ಧಾವಿಸಿದಾಗ ಆತನಿಗೂ ಬೆಂಕಿ ತಗುಲಿದ್ದು, ಶೇ.35 ರಷ್ಟು ಸುಟ್ಟ ಗಾಯಗಳಾಗಿದೆ. ಇದೀಗ ಈತ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಚಂದನ್ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಸುನೀಲ್ ಜಾಧವ್ ತಿಳಿಸಿದ್ದಾರೆ.

    ಇದೀಗ ಮೃತನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ರು ಸಮನ್ಸ್ ನೀಡಿದ್ದಕ್ಕೆ ಪ್ರಿಯಕರನೊಂದಿಗೆ ಬಾಲಕಿ ಆತ್ಮಹತ್ಯೆ

  • ಕಣ್ಣು ಕಾಣದಿದ್ದರೂ ಕೈ ಹಿಡಿದಿದೆ ಟೈಲರಿಂಗ್-ಇಳಿವಯಸ್ಸಿನಲ್ಲೂ ಸ್ವಾಭಿಮಾನದ ಬದುಕು

    ಕಣ್ಣು ಕಾಣದಿದ್ದರೂ ಕೈ ಹಿಡಿದಿದೆ ಟೈಲರಿಂಗ್-ಇಳಿವಯಸ್ಸಿನಲ್ಲೂ ಸ್ವಾಭಿಮಾನದ ಬದುಕು

    ಮಡಿಕೇರಿ: ಕೈ ಕಾಲು ಎಲ್ಲವೂ ಸರಿ ಇದ್ದರೂ ದುಡಿದುಕೊಂಡು ತಿನ್ನೋಕೆ ಕೆಲವರು ಸೋಮಾರಿಗಳಾಗಿ ಇರ್ತಾರೆ. ಆದರೆ ದೃಷ್ಟಿ ಇಲ್ಲದಿದ್ರೂ ನಮ್ಮ ಇವತ್ತಿನ ಪಬ್ಲಿಕ್ ಹೀರೋ ರುದ್ರಾಚಾರಿ ಅವರು ಬದುಕು ಸಾಗಿಸುತ್ತಿದ್ದಾರೆ. ವಿಶೇಷ ಅಚ್ಚರಿ ಅಂದ್ರೆ ಇವರು ಟೈಲರಿಂಗ್ ಮಾಡುತ್ತಿದ್ದಾರೆ.

    ಕೊಡಗಿನ ಸೋಮವಾರಪೇಟೆಯ ಹಾನಗಲ್ಲು ಶೆಟ್ಟಳ್ಳಿಯ ರುದ್ರಾಚಾರಿ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. 60 ವರ್ಷದ ಇವರಿಗೆ ಕಣ್ಣು ಕಾಣಲ್ಲ. 21ನೇ ವಯಸ್ಸಿನಲ್ಲೇ ಕಣ್ಣು ಮಂಜಾಗಲು ಆರಂಭಿಸಿ, 33ನೇ ವಯಸ್ಸಿಗೆ ಸಂಪೂರ್ಣ ದೃಷ್ಟಿಯೇ ಹೋಗಿದೆ. ಆದರೂ ಯಾರಿಗೂ ಕಡಿಮೆ ಇಲ್ಲದಂತೆ ಶಾಲಾ ಮಕ್ಕಳ ಯುನಿಫಾರಂ, ಮಹಿಳೆಯರ ಉಡುಪುಗಳನ್ನು ಹೊಲೆಯುತ್ತಾ ತುತ್ತಿನ ಚೀಲ ತುಂಬಿಕೊಳ್ಳುತ್ತಿದಾರೆ. ಕಣ್ಣು ಕಾಣಲ್ಲ ಅಂತಾರೆ, ಮತ್ತೆ ಟೈಲರಿಂಗ್ ಮಾಡ್ತಾರಾ ಎಂದು ಅಚ್ಚರಿಯಾಗುತ್ತದೆ. ಮಂಗಳೂರಿನ ಅತ್ತಾವರದ ವಿಶೇಷ ತರಬೇತಿ ರುದ್ರಾಚಾರಿ ಅವರಿಗೆ ವರವಾಗಿದೆ.

    ಕಳೆದ ವರ್ಷ ಸುರಿದ ಮಳೆಯಿಂದಾಗಿ ಇವರ ಮನೆಯೂ ಕೊಚ್ಚಿ ಹೋಗಿದೆ. ಬ್ಯಾಂಕ್‍ಗಳನ್ನು ಕೇಳಿದ್ರೆ, ಕಣ್ಣು ಕಾಣದಿರುವ ನೀವು ಟೈಲರಿಂಗ್ ಕೆಲಸ ಹೇಗೆ ಮಾಡ್ತೀರಾ. ನಿಮಗೆ ಸಾಲ ತೀರಿಸೋಕೆ ಆಗುತ್ತಾ ಅಂತ ಪ್ರಶ್ನಿಸ್ತಿವೆಯೇ ಹೊರತು ಸಾಲ ಕೊಡುತ್ತಿಲ್ಲ. ರುದ್ರಾಚಾರಿ ಅವರ ಪತ್ನಿ ಹಲವು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ.

    ಬದುಕಿಗೆ ಬೆಳಕಾಗಿದ್ದ ತಾಯಿಯನ್ನು 4 ವರ್ಷದ ಹಿಂದೆ ಕಳೆದುಕೊಂಡಿದ್ದು ಈಗಲೂ ಅಮ್ಮನ ನೆನೆದು ಕಣ್ಣೀರಾಗ್ತಾರೆ. ಇಬ್ಬರು ಮಕ್ಕಳಿದ್ದರೂ ಜೊತೆಗಿಲ್ಲ. ಒಟ್ಟಿನಲ್ಲಿ ಕಣ್ಣು ಕಾಣದಿದ್ದರೂ ಸ್ವಾಭಿಮಾನದಿಂದ ಬದುಕು ನಡೆಸುತ್ತಿರುವ ಇವರಿಗೆ ನಮ್ಮದೊಂದು ಸಲಾಂ.