Tag: ಟೈಯರ್ ಬ್ಲಾಸ್ಟ್

  • ಟೈಯರ್ ಬ್ಲಾಸ್ಟ್ ಆಗಿ ಕಮಾನಿಗೆ ಕಾರು ಡಿಕ್ಕಿ – ಮೂವರ ದುರ್ಮರಣ

    ಟೈಯರ್ ಬ್ಲಾಸ್ಟ್ ಆಗಿ ಕಮಾನಿಗೆ ಕಾರು ಡಿಕ್ಕಿ – ಮೂವರ ದುರ್ಮರಣ

    ಕಲಬುರಗಿ: ಟೈಯರ್ ಬ್ಲಾಸ್ಟ್ ಆಗಿ ಕಮಾನಿಗೆ ಕಾರು ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮುದಬಾಳ ಕೆ ಕ್ರಾಸ್ ಬಳಿ ನಡೆದಿದೆ.

    ಮೃತರನ್ನು ಅನಿತಾ, ಆಕೆಯ ಪುತ್ರ ಹೇಮಂತ್ ಹಾಗೂ ಚಾಲಕ ರಾಮು ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಯಾದಗಿರಿ ಜಿಲ್ಲೆ ಸುರಪುರ ಪಟ್ಟಣಕ್ಕೆ ಸೇರಿದವರಾಗಿದ್ದಾರೆ.

    ಕಾರು ಸುರಪುರದಿಂದ ಕಲಬುರಗಿ ಕಡೆ ಬರುತ್ತಿದ್ದು, ಬಿಎಸ್‍ಸಿ ಪ್ರವೇಶಕ್ಕೆಂದು ದಾಖಲೆಗಳ ಪರಿಶೀಲನೆಗಾಗಿ ತೆರಳುತ್ತಿದ್ದರು. ಈ ವೇಳೆ ಬಲಬದಿಯ ಟೈಯರ್ ಬ್ಲಾಸ್ಟ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಕಮಾನಿಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.

    ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.